Connect with us

Sports

WPL Champions| ಸತತ 2ನೇ ಆರ್‌ಸಿಬಿಗೆ ಚಾಂಪಿಯನ್‌ ಕಿರೀಟ: RCB ಹ್ಯಾಟ್ರಿಕ್‌ ಸಾಧನೆ!

Published

on

ವಡೋದರಾ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ  ಡಬ್ಲ್ಯೂಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. WPL-2024ನೇ ಆವೃತ್ತಿಯಲ್ಲಿ  ಮಹಿಳಾ ಆರ್‌ಸಿಬಿ ತಂಡ  ಟ್ರೋಫಿ ಗೆದ್ದು ಮಾದರಿಯಾಗಿತ್ತು. ಇದೀಗ 2ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿರುವ ಮಹಿಳಾ ಆರ್‌ಸಿಬಿ ತಂಡ ಹೆಣ್ಮಕ್ಕಳೇ ಸ್ಟ್ರಾಂಗು ಗುರು ಎಂಬ ಮಾತನ್ನು ಇನ್ನೊಮ್ಮೆ ಸಾಬೀತು ಮಾಡಿದೆ.

ವಡೋದರಾ ಕೊಟಂಬಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್‌ ಸೋತ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 203 ರನ್‌ ಬಾರಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ 19.4 ಓವರ್‌ಗಳಲ್ಲೇ 45 ವಿಕೆಟ್‌ ನಷ್ಟಕ್ಕೆ 204 ರನ್‌ ಬಾರಿಸಿ ಗೆಲುವು ಸಾಧಿಸಿದೆ.

ಈ ಮೂಲಕ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಸತತ 2ನೇ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್‌ ತಂಡದ ಸಾಧನೆಯನ್ನು ಸರಿಗಟ್ಟಿದೆ.

ಪುರುಷರ ತಂಡವನ್ನು ಪ್ರೋತ್ಸಾಹಿಸುತ್ತಾ ಬರುತ್ತಿದ್ದ ಅಭಿಮಾನಿಗಳೂ ಮಹಿಳಾ ತಂಡದ ಗೆಲುವನ್ನು ಹೆಮ್ಮೆಯಿಂದ ಕೊಂಡಾಡಿದರು. ಕೊನೆಯ ರನ್‌ ಸಿಡಿಸುತ್ತಿದ್ದಂತೆ ಅಭಿಮಾನಿಗಳು ಮಹಿಳಾ ಮಣಿಗಳು ಮೈದಾನದಲ್ಲೇ ಕುಣಿದು ಕುಪ್ಪಳಿಸಿದರು. ಆರ್‌ಸಿಬಿ ಪರ ಹರ್ಷೋದ್ಘಾರ ಕೂಗುತ್ತಾ ಗೆಲುವಿನ ಕೇಕೆ ಹಾಕಿದರು. ಆದರೆ ಕಳೆದ ಮೂರು ಆವೃತ್ತಿಗಳಲ್ಲೂ ಫೈನಲ್‌ನಲ್ಲಿ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಸತತ 4ನೇ ಬಾರಿಯೂ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

 

ಇಂಡಿಯನ್‌ ಪ್ರೀಮಿಯರ್‌ಲೀಗ್‌ನಲ್ಲಿ 17 ವರ್ಷಗಳ ಕಾಲ ಟ್ರೋಫಿಗಾಗಿ ಸೆಣಸಾಡಿದ್ದ ಆರ್‌ಸಿಬಿ ಪುರುಷರ ತಂಡ ಕಳೆದ ವರ್ಷ ತನ್ನ 18ನೇ ಆವೃತ್ತಿಯಲ್ಲಿ ಟ್ರೋಫಿಗೆ ಮುತ್ತಿಟ್ಟಿತ್ತು. ಅದರ ಹಿಂದಿನ ವರ್ಷವೇ ಆರ್‌ಸಿಬಿ ಮಹಿಳಾ ತಂಡ ತನ್ನ 2ನೇ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ಮಾದರಿಯಾಗಿತ್ತು. ಅಂತೆಯೇ ಈ ಬಾರಿ  ಮಹಿಳಾ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಆರ್‌ಸಿಬಿ ಫ್ರಾಂಚೈಸಿ ಸತತ ಮೂರು ವರ್ಷ ಟ್ರೋಫಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದೆ.

 

 

Continue Reading

Sports

IPL-2026ರ ಪಂದ್ಯಗಳು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫಿಕ್ಸ್‌: KSCA ಅಧಿಕೃತ ಘೋಷಣೆ

Published

on

ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ  ಐಪಿಎಲ್- 2026 ಪಂದ್ಯಗಳು ನಡೆಯಲಿವೆ ಎಂದು ಕೆಎಸ್‌ಸಿಎ ಅಧಿಕೃತವಾಗಿ ಘೋಷಣೆ ಮಾಡಿದೆ.

ಬೆಂಗಳೂರಿನಲ್ಲಿ ಇಂದುನಡೆದ ಸುದ್ದಿಗೋಷ್ಠಿಯಲ್ಲಿ ಕೆಎಸ್‍ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಜಿಬಿಎ, ಬೆಸ್ಕಾಂ, ಜಲಮಂಡಳಿಗೂ ಮನವಿ ಮಾಡಿದ್ದೇವೆ. ಕೆಎಸ್‍ಸಿಎ ಸುರಕ್ಷತೆಗೆ ಅಧಿಕ ಆದ್ಯತೆ ನೀಡಲಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಇತ್ತೀಚೆಗೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್, ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿತ್ತು.

Continue Reading

National

ವಿರಾಟ್‌ ಕೊಹ್ಲಿ ಈಗ ವಿಶ್ವದ ನಂ.1 ಬ್ಯಾಟ್ಸ್‌ಮನ್‌

Published

on

ಮುಂಬೈ: ರನ್‌ ಮಿಷಿನ್‌ ವಿರಾಟ್‌ ಕೊಹ್ಲಿ ತಮ್ಮ 37ನೇ ವಯಸ್ಸಿನಲ್ಲಿ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಬ್ಯಾಟರ್‌ ಆಗಿ ಹೊರಹೊಮ್ಮಿದ್ದಾರೆ.

ಇಂದು ಬಿಡುಗಡೆಯಾದ ನೂತನ ಐಸಿಸಿ  ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ  785 ಅಂಕ ಪಡೆಯುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ.

2013ರಲ್ಲಿ ಮೊಟ್ಟ ಮೊದಲ ಬಾರಿಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದಿದ್ದ ಕೊಹ್ಲಿ, 2018ರಲ್ಲಿ ಇಂಗ್ಲೆಂಡ್‌ ವಿರುದ್ಧ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪುನಃ ಅಗ್ರಸ್ಥಾನಕ್ಕೆ ಜಿಗಿದಿದ್ದರು. ಆ ನಂತರ ಟಾಪ್‌ 11 ರಲ್ಲಿ ಅನೇಕ ಸ್ಥಾನಗಳಲ್ಲಿದ್ದ ಕೊಹ್ಲಿ 5 ವರ್ಷಗಳ ಬಳಿಕ ಮತ್ತೆ ನಂ.1 ಪಟ್ಟಕ್ಕೇರಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಮೊದಲ ಎರಡೂ ಪಂದ್ಯಗಳಲ್ಲಿ ಕೊಹ್ಲಿ ಡಕೌಟ್‌ ಆಗಿದ್ದರು. ಮೂರನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು. ಇನ್ನೂ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 2 ಶತಕ, 1 ಅರ್ಧಶತಕ ಗಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಕಿವೀಸ್‌ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 91 ಎಸೆತಗಳಲ್ಲಿ 93 ರನ್‌ ಗಳಿಸಿದ್ದರು. ಈ ಮೂಲಕ 785 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಮೊದಲು ಐದು ಸ್ಥಾನಗಳಲ್ಲಿರುವ ಆಟಗಾರರು ಯಾರು?

ಹೊಸದಾಗಿ ಬಿಡುಗಡೆಯಾದ ಐಸಿಸಿ ಏಕದಿನ ರ‍್ಯಾಂಕಿಗ್‌ನಲ್ಲಿ 785 ಅಂಕಗಳೊಂದಿಗೆ ಕಿಂಗ್‌ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ಡೇರಿಲ್‌ ಮಿಚೆಲ್‌ 784, ರೋಹಿತ್‌ ಶರ್ಮಾ 775, ಇಬ್ರಾಹಿಂ ಜದ್ರಾನ್ 764, ಶುಭಮನ್‌ ಗಿಲ್‌ 725 ಅಂಕ ಅಂಕಗಳೊಂದಿಗೆ ಮೊದಲ 5 ಸ್ಥಾನಗಳಲ್ಲಿದ್ದಾರೆ.

Continue Reading

Sports

ಐಸಿಸಿ ಅಂಡರ್-19 ವಿಶ್ವಕಪ್: ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದ BCCI

Published

on

ಮುಂಬೈ:  2026 ರಂದು ನಡೆಯಲಿರುವ ಟಿ-20 ವಿಶ್ವಕಪ್‌ಗೆ ಬಿಸಿಸಿಐ (BCCI) ಕೆಲವೇ ದಿನಗಳ ಹಿಂದೆ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವನ್ನು ಪ್ರಕಟಿಸಿತ್ತು. ಆದರೆ ಅದಕ್ಕೂ ಮೊದಲು ಐಸಿಸಿ ಅಂಡರ್-19 ವಿಶ್ವಕಪ್  ನಡೆಯಲಿದ್ದು, ಈ ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಯುವ ತಂಡವನ್ನು ಇದೀಗ ಪ್ರಕಟಿಸಲಾಗಿದೆ.

 

ಬಿಸಿಸಿಐ ಇಂದು ಈ ಟೂರ್ನಮೆಂಟ್‌ಗಾಗಿ 15 ಸದಸ್ಯರ ಭಾರತೀಯ ತಂಡವನ್ನು ಘೋಷಿಸಿದೆ. ಇದರಲ್ಲಿ 14 ವರ್ಷದ ಸ್ಟಾರ್ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಸೇರಿದ್ದು, ಎಂದಿನಂತೆ ಆಯುಷ್ ಮ್ಹಾತ್ರೆ ಅವರಿಗೆ ಇನ್ನೊಮ್ಮೆ ತಂಡದ ನಾಯಕತ್ವ ನೀಡಲಾಗಿದೆ. ಜನವರಿ. 15 ರಂದು ಯುನೈಟೆಡ್ ಸ್ಟೇಟ್ಸ್ ವಿರುದ್ಧದ ಗುಂಪು ಪಂದ್ಯದೊಂದಿಗೆ ಟೀಂ ಇಂಡಿಯಾ ತನ್ನ ವಿಶ್ವಕಪ್ ಅನ್ನು ಆಡಲಿದೆ.

ಬಿ ಗುಂಪಿನಲ್ಲಿ ಟೀಂ ಇಂಡಿಯಾ ತಂಡ

ಅಂಡರ್-19 ವಿಶ್ವಕಪ್ ಜ. 15 ರಿಂದ ಫೆ. 6 ರವರೆಗೆ ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ನಡೆಯಲಿದೆ. 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಐದು ಬಾರಿ ಅಂಡರ್-19 ವಿಶ್ವಕಪ್ ವಿಜೇತ ಭಾರತವನ್ನು ನ್ಯೂಜಿಲೆಂಡ್, ಯುನೈಟೆಡ್ ಸ್ಟೇಟ್ಸ್ ಮತ್ತು ಬಾಂಗ್ಲಾದೇಶದೊಂದಿಗೆ ಗ್ರೂಪ್ ಬಿಯಲ್ಲಿ ಇರಿಸಲಾಗಿದೆ.

ಟೀಂ ಇಂಡಿಯಾ ಜ. 15 ರಂದು ಅಮೆರಿಕ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಬಳಿಕ ತಂಡವು ಜ. 17 ರಂದು ಬಾಂಗ್ಲಾದೇಶ ಹಾಗೂ ಜ. 24 ರಂದು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಟೂರ್ನಿಯ ಫೈನಲ್ ಪಂದ್ಯ ಹರಾರೆಯಲ್ಲಿ ನಡೆಯಲಿದೆ.

ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ), ವೈಭವ್ ಸೂರ್ಯವಂಶಿ, ಆರನ್ ಜಾರ್ಜ್, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂಡು, ಹರ್ವಂಶ್ ಸಿಂಗ್, ಆರ್‌ಎಸ್ ಅಂಬರೀಶ್, ಕಾನಿಷ್ಕ್ ಚೌಹಾಣ್, ಖಿಲಾನ್ ಪಟೇಲ್, ಮೊಹಮ್ಮದ್ ಎನಾನ್, ಹೆನಿಲ್ ಪಟೇಲ್, ಡಿ.ದೀಪೇಶ್, ಕಿಶನ್ ಕುಮಾರ್ ಸಿಂಗ್, ಉದ್ಧವ್ ಮೋಹನ್ ಅವರು ಟೀಂ  ಇಂಡಿಯಾ ಪರ ಆಡಲಿದ್ದಾರೆ.
Continue Reading

Trending

error: Content is protected !!