Mandya
ಮೈಕ್ರೋ ಫೈನಾನ್ಸ್ ಗಳಿಗೆ ಕಡಿವಾಣ ಹಾಕಿ: ಮಹಿಳೆಯರ ಪ್ರತಿಭಟನೆ

ಮಂಡ್ಯ : ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಗಳಿಗೆ ರಿಸರ್ವ್ ಬ್ಯಾಂಕ್ ನಿಯಮಾವಳಿಯಂತೆ ನಿರ್ಬಂಧ ವಿಧಿಸಬೇಕು ಹಾಗೂ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳಿಗೆ ಪರಿಹಾರದ ಜೊತೆಗೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿ ಮನವಿ ಸಲ್ಲಿಸಿದ ಕಾರ್ಯಕರ್ತೆಯರು,
ಮೈಕ್ರೋ ಫೈನಾನ್ಸ್ ಗಳ ಸಾಲದ ಸುಳಿಗೆ ಸಿಲುಕಿ ರಾಜ್ಯದಲ್ಲಿ ಮಹಿಳೆಯರು ಮತ್ತು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೆಚ್ಚಿನ ಬಡ್ಡಿ ಸುಲಿಗೆ, ಅಶ್ಲೀಲ ಪದ ಬಳಕೆ, ಹಣ ವಸೂಲಾತಿಗಾಗಿ ರೌಡಿಗಳ ಬಲ ಪ್ರಯೋಗದಂತಹ ಕ್ರೌರ್ಯಗಳು ಹೆಚ್ಚಾಗಿವೆ. ಮೈಕ್ರೋ ಫೈನಾನ್ಸ್ ಹಾವಳಿಯನ್ನು ತಪ್ಪಿಸಲು ರಾಜ್ಯ ಸರ್ಕಾರ ಸುಗ್ರಿವಾಜ್ಞೆಯನ್ನು ಹೊರಡಿಸಿ ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಎಲ್ಲಾ ಜಿಲೆ ಕೇಂದ್ರಗಳಲ್ಲೂ ಸಹಾಯವಾಣಿ ಗಳನ್ನು ತೆರೆಯುವಂತೆ ಸೂಚಿಸಲಾಗಿದೆ. ಜನ ಸಾಮಾನ್ಯರನ್ನು ವಂಚಿಸುತ್ತಿರುವುದು ಬರಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮಾತ್ರವಲ್ಲದೆ ರಾಜ್ಯದ ಪ್ರತಿಷ್ಠಿತ ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಕಂಪನಿಗಳು ಅನಿಯಂತ್ರಿತ ಠೇವಣಿಗಳ ಯೋಜನೆಯಡಿ ಅಧಿಕ ಬಡ್ಡಿಯ ಅಸೆ ತೋರಿಸಿ ಜನರಿಂದ ಹಣ ದೋಚಿ ವಂಚಿಸಿರುವ ಘಟನೆಗಳು ಕೂಡಾ ಬೆಳಕಿಗೆ ಬಂದಿವೆ. ಈ ಪ್ರಕರಣಗಳ ವಿರುದ್ಧವು ಕೂಡಾ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಮೋಸ ಹೋದ ಜನರಿಗೆ ಯಾವುದೆ ಪರಿಹಾರ ದೊರೆತಿಲ್ಲ. ಇದರ ಜೊತೆಗೆ ಮೀಟರ್ ಬಡ್ಡಿ ದಂದೆಗಳು ಜನಸಾಮಾನ್ಯರನ್ನು ರಕ್ತ ಹೀರುವ ಜಿಗಣೆಗಳಂತೆ ಬಾಧಿಸುತ್ತಿವೆ. ಸಾಲದ ಸುಳಿಯಿಂದ ಪಾರು ಮಾಡಲು ಸುಗ್ರಿವಾಜ್ಞೆ ಹೊರಡಿಸಿದರೆ ಪ್ರಯೋಜನವಿಲ್ಲ. ಅಷ್ಟೇ ಅಲ್ಲದೆ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಮತ್ತು ಔದ್ಯೋಗಿಕವಾಗಿ ಸಬಲರನ್ನಾಗಿ ಮಾಡದೆ ನೂರಾರು ಕಾನೂನು ಜಾರಿಮಾಡಿದರು ಪ್ರಯೋಜನವಿಲ್ಲ. ಇದನ್ನು ಅರಿತು ರಾಜ್ಯ ಮತ್ತು ಕೇಂದ್ರ ಸರ್ಕಾರ ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪೂರ್ಣಿಮಾ, ಸಿದ್ದರಾಜು, ಕಮಲ, ಶಿಲ್ಪ ಬಿ ಎಸ್, ಲತಾ ಶಂಕರ್, ಪ್ರಿಯ ರಮೇಶ್, ಗಿರಿಜಾ, ಸುಮಾ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Mandya
ಅಮಾಯಕರನ್ನು ವಂಚಿಸುತ್ತಿರುವವರ ವಿರುದ್ದ ಕ್ರಮಕ್ಕೆ ಮ.ರ.ವೇ ಒತ್ತಾಯ

ಶ್ರೀರಂಗಪಟ್ಟಣ :ಅನಕ್ಷರಸ್ಥ ವ್ಯಕ್ತಿಯೊಬ್ಬರ ಖಾತೆಯಿಂದ ಹಣ ಪಡೆದು ವಂಚಿಸಿದ್ದ ಬ್ಯಾಂಕ್ ಆಫ್ ಬರೋಡ ಬ್ಯಾಂಕ್‌ನ ಬಿಸಿನೆಸ್ ಕರೆಸ್‌ಪಾಂಡೆAಟ್ (ಬಿಸಿ) ಯೋಗಾನಂದ ನನ್ನು ಅಮಾನತು ಗೊಳಿಸುವಂತೆ ಒತ್ತಾಯಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಮಾಡಿದರು.
ವೇದಿಕೆ ಅಧ್ಯಕ್ಷ ಶಂಕರ್‌ಬಾಬು ನೇತೃತ್ವದಲ್ಲಿ ಪದಾಧಿಕಾರಿಗಳು ಬಾಬುರಾಯನಕೊಪ್ಪಲಿನ ಬ್ಯಾಂಕ್ ಆಫ್ ಬರೋಡ ಶಾಖೆಗೆ ತೆರಳಿ ಶಾಖಾ ವ್ಯವಸ್ಥಾಪಕ ವೆಂಕಟೇಶ್‌ಬಾಬು ಅವರನ್ನ ಭೇಟಿ ಮಾಡಿ, ಸರ್ಕಾರ ವೃದ್ಧರು, ವಿಕಲಚೇತನರು ಹಾಗೂ ವಿಧವಾವೇತನ ಸೇರಿದಂತೆ ಇತರೆ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಮಾಶಾಸನ ನೀಡುತ್ತಿದೆ. ಆದರೆ ಬ್ಯಾಂಕಿನ ಏಜೆಂಟರುಗಳು ಅನಕ್ಷರಸ್ಥರನ್ನು ಗುರಿಯಾಗಿಸಿಕೊಂಡು ತಾಲೂಕಿನಾಂದ್ಯಂತ ವಂಚಸುತ್ತಿದ್ದಾರೆ. ತಾಲೂಕಿನ ಚಂದಗಾಲು ಗ್ರಾಮದ ೭೬ವರ್ಷ ವಯಸ್ಸಿನ ವೃದ್ಧ ಅನಕ್ಷರಸ್ಥ ರಂಗಣ್ಣ ಅವರಿಗೆ ಮೇಳಾಪುರ ಗ್ರಾಮದ ಬ್ಯಾಂಕ್ ಬರೋಡ ಬ್ಯಾಂಕ್‌ನ ಬಿಸಿನೆಸ್ ಕರೆಸ್‌ಪಾಂಡೆಂಟ್ ಯೋಗಾನಂದ ಎಂಬ ವ್ಯಕ್ತಿ ೨೪೦೦-೦೦ ಹಣ ಡ್ರಾ ಮಾಡಿ, ಕೇವಲ ೧೨೦೦-೦೦ ರು. ಹಣ ನೀಡಿ ವಂಚಿಸಿರುವುದು ಸಾಕ್ಷ್ತ ಸಮೇತ ಸಾಬೀತಾಗಿದೆ ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ವೇಳ ವ್ಯವಸ್ಥಾಪಕ ವೆಂಕಟೇಶ್‌ಬಾಬು ನೋಡೋಣ, ಕಾಲಾವಕಾಶ ಕೊಡಿ, ಕ್ರಮ ವಹಿಸೋಣ ಎಂಬ ಹಾರಿಕೆ ಉತ್ತರ ನೀಡಲು ಮುಂದಾಗುತ್ತಿದ್ದಂತೆ ಸಿಟ್ಟಿಗೆದ್ದ ಸಂಘಟನೆ ಮುಖಂಡರು, ನೆಲದ ಮೇಲೆ ಕುಳಿತು ವ್ಯವಸ್ಥಾಪಕರ ವಿರುದ್ದ ಅಸಮಧಾನ ಹೊರಹಾಕಿದರು. ವಂಚಿಸಿರುವ ವ್ಯಕ್ತಿಯೇ ತಪ್ಪಾಗಿರುವುದಾಗಿ ಒಪ್ಪಿಕೊಂಡಿದ್ದರೂ ಸಹ ವ್ಯವಸ್ಥಾಪಕರಿಂದ ಈ ರೀತಿಯ ಉಡಾಫೆ ಉತ್ತರ ಕೇಳಿಬರುತ್ತಿದೆ ಹೊರತಾಗಿ, ನ್ಯಾಯಯುತವಾಗಿ ಬಡವರ ಪರವಾದ ಒಂದೇ ಒಂದು ಮಾತು ಹೇಳದಿರುವುದು ಮಂಡ್ಯ ರಕ್ಷಣಾ ವೇದಿಕೆ ಖಂಡಿಸುತ್ತದೆ.
ಗ್ರಾಮದಲ್ಲಿನ ಬ್ಯಾಂಕ್ ರೈತರು, ಬಡವರು ಹಾಗೂ ವಿದ್ಯಾರ್ಥಿಗಳ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಸಾಲ ಸೌಲಭ್ಯಗಳನ್ನ ನೀಡಿಲ್ಲ. ಈ ವರೆವಿಗೆ ಮುದ್ರ ಲೋನ್, ರೈತರಿಗೆ ನೀಡಿರುವ ಸಾಲದ ಬಗ್ಗೆ ಮಾಹಿತಿ ಕೇಳಿದರೆ ಇವರ ಬಳಿ ಯಾವುದೇ ಉತ್ತರಿವಿಲ್ಲ. ಈ ಬ್ಯಾಂಕ್ ಉಳ್ಳವರ ಪರವಾಗಿದೇ ವಿನಃ ಬಡವರ ಪರವಾಗಿಲ್ಲ. ಹಾಗಾಗಿ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಮುಂದೆ ಇದೇ ರೀತಿ ಏಜಂಟರ್‌ಗಳಿಂದ ವಂಚನೆಗಳಂತಹ ಪ್ರಕರಣಗಳು ಮರುಕಳಿಸಿದ್ದಲ್ಲಿ, ಬ್ಯಾಂಕ್‌ನ ಸಿಬ್ಬಂದಿಗಳನ್ನೇ ನೇರ ಹೊಣೆ ಮಾಡಿ, ಬ್ಯಾಂಕ್‌ಗೆ ಮುತ್ತಿಗೆ ಹಾಕಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
Mandya
ಎಂ.ಕೆ.ಸೋಮಶೇಖರ್‌ಗೆ ರಾಜ್ಯಮಟ್ಟದ ಛಾಯಗ್ರಾಹಕ ಹಾಗೂ ಕಲಾವಿದ ಪ್ರಶಸ್ತಿ ಪ್ರಧಾನ

ಬೆಂಗಳೂರು ಕನ್ನಡ ಫಿಲಂ ಚೇಂಬರ್ ಸಂಸ್ಥೆ ವತಿಯಂದ ದಿಪುನಿತ್ ರಾಜಕುಮಾರ್ ಜನ್ಮದಿನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿತ್ತು . ಈ ಸಮಾರಂಭದಲ್ಲಿ ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಮಾಕವಳ್ಳಿ ಗ್ರಾಮದ ಯುವ ಛಾಯಗ್ರಾಹಕ ಹಾಗೂ ಕಲಾವಿದರು ಆಗಿರುವಂತಹ ಸೋಮಶೇಖರ್ ಎಂ.ಕೆ. ರವರಿಗೆ ಯವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಸಿ.ಕೆ. ಸಂಧ್ಯಾ ಜಿಲ್ಲಾ ಸಮಾದೇಷ್ಟರು, ಜಿಲ್ಲಾ ಗೃಹರಕ್ಷಕ ದಳ ಇಲಾಖೆ ಚಿತ್ರದುರ್ಗ, ಶಶಿಕುಮಾರ್ ಬಿ.ಹೆಚ್. ಸಹಾಯಕ ನಿರ್ಧೇಶಕರು ಪ್ರವಾಸೋದ್ಯಮ ಎಲಾಖೆ. ಜಿ.ರೇಖಾ ಅಲ್ಪಸಂಖ್ಯಾತರ ಸಮಾಜ ಕಲ್ಯಣ ಎಲಾಖೆ, ಹಾಗೂ ನಟರು ಮೈಕೋ ನಾಗರಾಜ್, ಶಂಖನಾದ ಅಂಜನಪ್ಪ, ಮಹಾಲಕ್ಷ್ಮೀ ಟಿ. ಆರ್. ಚಲನ ಚಿತ್ರ ನಟಿ ಭಾವನಾ ನಾಗೇಂದ್ರಸ್ವಾಮಿ ನಟಿ ಇನ್ನು ಅನೇಕ ಗಣ್ಯರುಗಳು ಇದ್ದರು..
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
Mandya
ಜಿಲ್ಲಾಧಿಕಾರಿಗಳಿಂದ ಮೇಲುಕೋಟೆ ವೈರಮುಡಿ ಉತ್ಸವದ ಸಿದ್ದತೆ ಪರಿಶೀಲನೆ

ಮಂಡ್ಯ : ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮೇಲುಕೋಟೆಯಲ್ಲಿ ನಡೆಯಲಿರುವ ವೈರಮುಡಿ ಉತ್ಸವದ ಸಿದ್ಧತೆ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿದರು.
ಸಂಚಾರ ವ್ಯವಸ್ಥೆ ಪಾರ್ಕಿಂಗ್, ಭಕ್ತಾಧಿಗಳಿಗೆ ಮಾಡಿಕೊಂಡಿರುವ ಸಿದ್ಧತೆ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮುಜರಾಯಿ ತಹಶೀಲ್ದಾರ್ ತಮ್ಮೇಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು
-
Kodagu21 hours ago
ಬೇಳೂರು ಬಾಣೆಯಲ್ಲಿ ಸ್ಟೇರಿಂಗ್ ಲಾಕ್ : ಕಾರು ಪಲ್ಟಿ
-
Kodagu18 hours ago
ಕೊಡಗಿನ ಭರವಸೆಯ ಪ್ರತಿಭೆ ವರ್ತ ಕಾಳಿ ಕಿರುಚಿತ್ರದ ನಿರ್ದೇಶಕ: ಕೃತಾರ್ಥ ಮಂಡೆಕುಟ್ಟಂಡ
-
State14 hours ago
ಬಿಜೆಪಿ ಶೋಕಾಸ್ ನೋಟಿಸ್ ಕುರಿತು ಶಾಸಕ ಎಸ್ಟಿಎಸ್ ಫಸ್ಟ್ ರಿಯಾಕ್ಷನ್
-
Mysore17 hours ago
ಎಲ್ಲಾ ಪಕ್ಷದವರ ಮೇಲೂ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ: ಯತೀಂದ್ರ ಸಿದ್ದರಾಮಯ್ಯ
-
Mandya12 hours ago
ಎಂ.ಕೆ.ಸೋಮಶೇಖರ್‌ಗೆ ರಾಜ್ಯಮಟ್ಟದ ಛಾಯಗ್ರಾಹಕ ಹಾಗೂ ಕಲಾವಿದ ಪ್ರಶಸ್ತಿ ಪ್ರಧಾನ
-
Mandya16 hours ago
ಭೂ ದಾಖಲೆ ಹೊಂದಿರುವವರನ್ನು ಓಕ್ಕಲೆಬ್ಬಿಸಬೇಡಿ : ಎನ್ ಚೆಲುವರಾಯಸ್ವಾಮಿ
-
State11 hours ago
ಬಿಜೆಪಿಯಿಂದ ಆರು ವರ್ಷಗಳ ಕಾಲ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ
-
Hassan15 hours ago
1 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನರೆವೇರಿಸಿದ ಸ್ವರೂಪ್ ಪ್ರಕಾಶ್