Connect with us

Mysore

ಸ್ವತಂತ್ರ ಹೋರಾಟಗಾರರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿತು: ನಂಜುಂಡ ನಂಜೇಗೌಡ

Published

on

ವರದಿ: ರವಿಚಂದ್ರ ಬೂದಿ ತಿಟ್ಟು

ಪಿರಿಯಾಪಟ್ಟಣ : ಭಾರತೀಯರು ಸ್ವಾತಂತ್ರ್ಯ ಪಡೆಯಲು ಕೇವಲ ಯುದ್ಧದಿಂದ ಸಾಧ್ಯವಿಲ್ಲ ಪ್ರತಿಯಾಗಿ ಅಹಿಂಸ ತತ್ವಗಳಿಂದ ಸ್ವಾತಂತ್ರ್ಯ ಪಡೆಯಬಹುದೆಂದು ಮಹಾತ್ಮ ಗಾಂಧೀಜಿ ಅವರು ದೇಶಾದ್ಯಂತ ಉಪವಾಸ ಸತ್ಯಾಗ್ರಹ ಚಳುವಳಿಗಳನ್ನು ಪ್ರಾರಂಭಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜುಂಡ ನಂಜೇಗೌಡರವರು ತಿಳಿಸಿದರು.

ಶ್ರೀ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚೌತಿ ಯಲ್ಲಿ ಆಯೋಜಿಸಿದ್ದ 79 ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ಶ್ವೇಚಾಚಾರ ಹಾಗೂ ಸಾಮಾಜಿಕ ಮೌಡ್ಯಗಳು ತಾಂಡವಾಡುತ್ತಿದೆ. ಇವುಗಳನ್ನು ಹೋಗಲಾಡಿಸಲು ಯುವಶಕ್ತಿಯಿಂದ ಸಾಧ್ಯ ಆದರಿಂದ ಯುವಜನತೆ ಎಚ್ಚೆತ್ತುಕೊಂಡು ತಮ್ಮ ಜೀವನದಲ್ಲಿ ದೇಶ ಪ್ರೇಮ, ಶಿಸ್ತು, ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡರೆ ದೇಶದಲ್ಲಿರುವ ಶ್ವೇಚಾಚಾರ ಹಾಗೂ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮುತ್ತುರಾಜ್. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷ ಗೌರಮ್ಮ, ಮುಖ್ಯ ಶಿಕ್ಷಕರಾದ ಆನಂದ್, ಲಕ್ಕಣ್ಣ, ಮೋಹನ್, ವೆಂಕಟೇಶ್ ಮುಖಂಡ ದೇವರಾಜ್, ಸಿ.ಸಿ.ನಾಗೇಶ್ ,  ಅಣ್ಣಪ್ಪ ಚೌತಿ, ವೈರ್ಮುಡಿ ಗೌಡ,  ಮಹೇಶ್, ಸ್ವಾಮಿ, ತಮ್ಮಯ್ಯ, ಮಲ್ಲೇಶ್, ಉಪನ್ಯಾಸಕ ದರ್ಶನ್, ಲಕ್ಷ್ಮಣ್, ಮಾದನ್‌ ನಾಯ್ಕ್‌, ಮೋಹನ್ ಪಿಡಿಒ,  ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೌರಮ್ಮ, ರವಿಚಂದ್ರ, ಸ್ವಾಮಿ, ಶೃತಿ, ಪ್ರಕಾಶ್, ರವಿಕುಮಾರ್, ಬಸಪ್ಪ, ಗುರುಮೂರ್ತಿ ಸೇರಿದಂತೆ ಮಕ್ಕಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

Continue Reading

Mysore

ಪ್ರಶ್ನೆಪತ್ರಿಕೆ ಸೋರಿಕೆ ನೋವಿನ ಸಂಗತಿ, ತಪ್ಪಿತಸ್ಥರನ್ನು ಮೋದಿ ಜೈಲಿಗಟ್ಟಲಿದ್ದಾರೆ: ಮಾಜಿ ಸಂಸದ ಪ್ರತಾಪ್ ಸಿಂಹ

Published

on

 ಮೈಸೂರು: ದೆಹಲಿಯಲ್ಲಿ ನಡೆಯುತ್ತಿರುವ ನೀಟ್‌ (NEET) ಪರೀಕ್ಷೆಯ ಪ್ರತಿಭಟನೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೋಷಾರೋಪಣೆ ಇಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಖಚಿತ:

ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಎಲ್ಲರಿಗೂ ತೀವ್ರ ನೋವು ತಂದಿರುವ ವಿಚಾರ. ಈ ವಿಷಯದಲ್ಲಿ ನಾವು ಯಾರ ಮೇಲೆಯೂ ಪರಸ್ಪರ ದೋಷಾರೋಪಣೆ ಮಾಡುವುದಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂತಹ ಪ್ರಕರಣ ನಡೆದಿದ್ದರೆ ಯಾರೂ ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ. ಏಕೆಂದರೆ ಅವರ ಆಡಳಿತದಲ್ಲಿ ಸಾಲು ಸಾಲು ಹಗರಣಗಳು ನಡೆದಿರುವುದು ಇಡೀ ದೇಶಕ್ಕೇ ಗೊತ್ತಿರುವ ಸತ್ಯ. ಆದರೆ, ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೀಗಾಗಿರುವುದು ನಮಗೆಲ್ಲರಿಗೂ ವೈಯಕ್ತಿಕವಾಗಿ ನೋವುಂಟುಮಾಡಿದೆ. ಈ ಅಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಪತ್ತೆ ಮಾಡಿ ಜೈಲಿಗೆ ಕಳುಹಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮೆಡಿಕಲ್ ಮಾಫಿಯಾ ಧ್ವಂಸ ಮತ್ತು ಸುಧಾರಣೆ:

ವೈದ್ಯಕೀಯ ಶಿಕ್ಷಣ ಕ್ಷೇತ್ರದ ಅಂಕಿ-ಅಂಶಗಳನ್ನು ಹಂಚಿಕೊಂಡ ಪ್ರತಾಪ್ ಸಿಂಹ:

  • 2014 ಕ್ಕಿಂತ ಮೊದಲು: ದೇಶದಲ್ಲಿದ್ದದ್ದು ಕೇವಲ 51,000 ಮೆಡಿಕಲ್ ಸೀಟುಗಳು ಹಾಗೂ 320 ಮೆಡಿಕಲ್ ಕಾಲೇಜುಗಳು ಮಾತ್ರ. ಆಗ ವೈದ್ಯಕೀಯ ಸೀಟುಗಳು ಖಾಸಗಿಯವರ ಕಪಿಮುಷ್ಠಿಯಲ್ಲಿದ್ದವು.

  • ಮೋದಿ ಆಡಳಿತದ ನಂತರ: ಪ್ರಧಾನಿಯಾದ ನಂತರ ನರೇಂದ್ರ ಮೋದಿಯವರು ಈ ಮೆಡಿಕಲ್ ಮಾಫಿಯಾವನ್ನು ಸಂಪೂರ್ಣವಾಗಿ ಒಡೆದು ಹಾಕಿದರು.

  • ಪ್ರಸ್ತುತ ಸ್ಥಿತಿ: 2016 ರಲ್ಲಿ ‘ನೀಟ್‌’ ಪರೀಕ್ಷೆಯನ್ನು ಜಾರಿಗೆ ತಂದು ದೇಶಾದ್ಯಂತ ಏಕರೂಪದ ವ್ಯವಸ್ಥೆ ತರಲಾಯಿತು. ಇದರ ಪರಿಣಾಮವಾಗಿ ಇಂದು ದೇಶದಲ್ಲಿ ಮೆಡಿಕಲ್ ಕಾಲೇಜುಗಳ ಸಂಖ್ಯೆ 825 ಕ್ಕೆ ಹಾಗೂ ಮೆಡಿಕಲ್ ಸೀಟುಗಳ ಸಂಖ್ಯೆ 1,36,000 ಕ್ಕೆ ಏರಿಕೆಯಾಗಿದೆ.

ಹೋರಾಟಗಾರರ ವಿರುದ್ಧ ಕಿಡಿ:

ಕೇಂದ್ರ ಸರ್ಕಾರ ವೈದ್ಯಕೀಯ ಕ್ಷೇತ್ರದಲ್ಲಿ ತಂದಿರುವ ಇಂತಹ ಬೃಹತ್ ಸುಧಾರಣೆಗಳನ್ನು ಮರೆತು, ಕೆಲವು ಎಡಬಿಡಂಗಿಗಳು ಸೇರಿಕೊಂಡು ಹೋರಾಟದ ಹೆಸರಿನಲ್ಲಿ ದಾರಿ ತಪ್ಪಿಸುತ್ತಿದ್ದಾರೆ. ಮೋದಿ ಅವರನ್ನು ಕೊಲೆ ಮಾಡಬೇಕು ಎನ್ನುವ ಪ್ರಚೋದನಾಕಾರಿ ರೀತಿಯಲ್ಲಿ ವರ್ತಿಸುತ್ತಾ, ಕರ್ತವ್ಯ ನಿರತ ಪೊಲೀಸರ ಮೇಲೆಯೇ ಹಲ್ಲೆ ನಡೆಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದರು.

Continue Reading

Mysore

ಕಾಲುವೆ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕೊ*ಲೆ ಶಂಕೆ

Published

on

ಮೈಸೂರು:  ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಕೆಂಪಯ್ಯನಹುಂಡಿ–ತುಂಬಲ ಗ್ರಾಮದ ಸಮೀಪದ ಕಾಲುವೆ ಬಳಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ದುಷ್ಕರ್ಮಿಗಳು ತಲೆಯ ಮೇಲೆ ಬಲವಾಗಿ ಹೊಡೆದು ಕೊಲೆ ಮಾಡಿ ಬಳಿಕ ಶವವನ್ನು ಕಾಲುವೆ ಬಳಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯ ಹೆಸರು ಹಾಗೂ ವಿಳಾಸ ಇನ್ನೂ ಪತ್ತೆಯಾಗಿಲ್ಲ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಟಿ. ನರಸೀಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತನ ಗುರುತು ಪತ್ತೆ ಹಾಗೂ ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿಸಿದ್ದಾರೆ.

Continue Reading

Mysore

ಶ್ರೀಕಂಠೇಶ್ವರ ದೇವಾಲಯದ ಹುಂಡಿಯಲ್ಲಿ ₹1.91 ಕೋಟಿ ಕಾಣಿಕೆ

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು: ದಕ್ಷಿಣ ಕಾಶಿ ಎಂದು ಹೆಸರುವಾಸಿಯಾಗಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ಬುಧುವಾರ ನಡೆದ ಹುಂಡಿ ಏಣಿಕೆ ಕಾರ್ಯದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆ ರೂಪದಲ್ಲಿ ₹1,91,73,747 ನಗದು, 62 ಗ್ರಾಂ ಚಿನ್ನ, 2 ಕೆಜಿ 200 ಗ್ರಾಂ ಬೆಳ್ಳಿ ಹಾಗೂ ವಿದೇಶಿ ಕರೆನ್ಸಿಗಳು ದೊರೆತಿವೆ.

ದೇವಾಲಯದ ಆಡಳಿತದ ವತಿಯಿಂದ ನಡೆದ ಹುಂಡಿ ಏಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಅವರ ನೇತೃತ್ವದಲ್ಲಿ ಸಿಬ್ಬಂದಿ, ಮಹಿಳಾ ಸಂಘದ ಸದಸ್ಯರು ಹಾಗೂ ಬ್ಯಾಂಕ್ ಸಿಬ್ಬಂದಿ ಭಾಗವಹಿಸಿ ಹಣ ಮತ್ತು ಅಮೂಲ್ಯ ವಸ್ತುಗಳ ಎಣಿಕೆ ಕಾರ್ಯವನ್ನು ಪೂರ್ಣಗೊಳಿಸಿದರು.


ಭಕ್ತರು ಅಪಾರ ಭಕ್ತಿಭಾವದಿಂದ ಸಲ್ಲಿಸಿರುವ ಕಾಣಿಕೆಗಳು ದೇವಾಲಯದ ಮೇಲಿನ ಅವರ ನಂಬಿಕೆ ಮತ್ತು ಭಕ್ತಿಗೆ ಸಾಕ್ಷಿಯಾಗಿವೆ ಎಂದು ದೇವಾಲಯದ ಆಡಳಿತ ತಿಳಿಸಿದೆ.

Continue Reading

Trending

error: Content is protected !!