Chamarajanagar
ಗುಂಬಳ್ಳಿಯ ನೀರಿನ ಟ್ಯಾಂಗ್ ಸ್ವಚ್ಛಗೊಳಿಸಿದ ಗ್ರಾಮ ಪಂಚಾಯಿತಿ
ಯಳಂದೂರು ಮಾರ್ಚ್ 27
ತಾಲೂಕಿನ ಗುಂಬಳ್ಳಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಇದ್ದ ನೀರಿನ ಟ್ಯಾಂಕನ್ನು ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆಗೊಳಿಸಲಾಯಿತು.
ಕಳೆದ ಕೆಲವು ದಿನಗಳಿಂದ ಕುಡುಕರ ಹಾವಳಿ ಮಿತಿಮೀರಿ ಮಧ್ಯದ ಪಾಕೆಟ್ ಗಳು ಸೇರಿದಂತೆ ನೀರಿನ ತೊಂಬೆ ಸುತ್ತಮುತ್ತ ಅಶುಚಿತ್ವ ತಾಂಡವ ಆಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಕೂಡಲೇ ಪೌರಕಾರ್ಮಿಕರ ಜೊತೆಗೆ ಶುಚಿತ್ವಕ್ಕೆ ಮುಂದಾದರು. ಇದರಿಂದ ಮುಂಬರುವ ರೋಗ ರುಜಿನಗಳಿಗೆ ಸ್ವಚ್ಛ ಮಾಡಿದ ಕ್ಷಣದಿಂದಲೇ ಅಂತ್ಯ ಹಾಡಲಾಯಿತು.
ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಕೃಷ್ಣನಾಯಕ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ನೀರಿನ ತೊಂಬೆಗಳನ್ನು ಸ್ವಚ್ಛತೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಮುಂಭಾಗ ಇದ್ದ ನೀರಿನ ತೊಂಬೆ ಬಳಿ ಕುಡುಕರು ಮಧ್ಯ ಕುಡಿದು ಪಾಕೆಟ್ ಗಳನ್ನು ನೀರಿನ ತೊಂಬೆ ಸುತ್ತಮುತ್ತ ಎಸೆಯುತ್ತಿದ್ದರು. ಇಂದು ಎಲ್ಲವನ್ನು ಸ್ವಚ್ಛಗೊಳಿಸಲಾಗಿದೆ ಮುಂಬರುವ ದಿನಗಳಲ್ಲಿ ಇಂಥವರ ಮೇಲೆ ಕಠಿಣ ಕ್ರಮವನ್ನು ಪಂಚಾಯಿತಿ ವತಿಯಿಂದ ಜರುಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರು ಸೇರಿದಂತೆ ಗುಂಬಳ್ಳಿ ಗ್ರಾಮಸ್ಥರು ಮತ್ತು ಇತರರು ಹಾಜರಿದ್ದರು
Chamarajanagar
ನಾಳೆ ರಂಗವಾಹಿನಿ ಜಾನಪದ ಕಾಲೇಜು ಉದ್ಘಾಟನೆ ಕಾರ್ಯಕ್ರಮ
ಚಾಮರಾಜನಗರ: ರಂಗವಾಹಿನಿ ಸಂಸ್ಥೆಯು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಮಾನ್ಯತೆ ಯೊಂದಿಗೆ ರಂಗವಾಹಿನಿ ಜಾನಪದ ಕಾಲೇಜು ಉದ್ಘಾಟನೆ, ರಂಗವಾಹಿನಿ ಪ್ರಶಸ್ತಿ ಪ್ರದಾನ, ಸಂವಿಧಾನ ಅಮೃತಗಾನ ಗೀತ ಗಾಯನ ಹಾಗೂ ಪ್ರೇಮಮಯಿ ಹಿಡಿಂಬೆ ನಾಟಕ ಪ್ರದರ್ಶನ ಕಾರ್ಯಕ್ರಮಗಳನ್ನು ನಾಳೆ (ಡಿ.18) ಸಂಜೆ 6 ಗಂಟೆಗೆ ಡಾ.ರಾಜಕುಮಾರ್‌ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಹು ಭಾಷಾ ಖ್ಯಾತ ಚಲನಚಿತ್ರ ನಟ ಶರತ್ ಲೋಹಿತಾಶ್ವ ಕಾರ್ಯ ಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.ಡಾ.ಬಿ. ಟಿ.ಕವಿತಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎನ್.ಮುನಿರಾಜು, ಆಂಧ್ರಪ್ರದೇಶ ಕುಪ್ಪಂ ದ್ರಾವಿಡ ವಿವಿಜಾನಪದ ವಿದ್ವಾಂಸ ಡಾ. ಟಿ.ಎಸ್. ನರಸಿಂಹ ಪ್ರಸಾದ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗವಾಹಿನಿ ಜಾನಪದ ಕಾಲೇಜು ಪ್ರಾಶುಪಾಲಪ್ರೊ.ಎ.ಎಂ.ಶಿವಸ್ವಾಮಿ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ರಂಗವಾಹಿನಿ ಪ್ರಶಸ್ತಿ ಪುರಸ್ಕೃತರು: ಡಾ. ಲಕ್ಷ್ಮಿ ನಾರಾಯಣ (ಚಿತ್ರಕಲೆ), ಮಾಲೂರು ವಿಜಿ (ರಂಗಭೂಮಿ), ಶಾ.ಮುರುಳಿ (ಕನ್ನಡ ಸೇವೆ), ಆರ್. ನಂಜುಂಡಯ್ಯ ( ಶಿಕ್ಷಣ ಸೇವೆ), ಮಧುಸೂದನ್ (ಚಿತ್ರಕಲೆ), ಶ್ರೀನಿಧಿ ಕುದರ್ (ಸಮಾಜಸೇವೆ) ಮನೋ ಗಂಗವಾಡಿ (ಸಾಂಸ್ಕೃತಿಕ ಸಂಘಟನೆ), ಜೆ. ನಂದೀಶ್ (ಯುವ ವಿಜ್ಞಾನಿ), ಸಂವಿಧಾನ ಅಮೃತಗಾನ ಗೀತ ಗಾಯನ ಕಾರ್ಯಕ್ರಮದಲ್ಲಿ ಗಾಯಕರಾದ ಬಿ. ಬಸವರಾಜು, ಲತಾ ಪುಟ್ಟಸ್ವಾಮಿ, ಡಾ. ಸುಗಂಧರಾಜು,ವಿ.ಮಯೂರ್, ಅರುಣ್ ಕುಮಾರ್, ಮಂಜುನಾಥ್ ರಾಮಸಮುದ್ರ, ಜೆ.ಬಿ. ಮಹೇಶ್, ಕಲೆ ನಟರಾಜ್, ಉಮ್ಮತ್ತೂರು ಚಂದ್ರು ರಾಜಣ್ಯ ಹರದನಹಳ್ಳಿನಟರಾಜ್, ರಾಜಪ್ಪರಾಮಸಮುದ್ರ, ಪುಟ್ಟಸ್ವಾಮಿ, ಎಚ್.ಎಂ. ಶಿವಣ್ಣ ಮಂಗಲ ಹೊಸೂರು, ನಾಗೇಂದ್ರ ಯಳಂದೂರು, ಶಾಂತರಾಜು, ಆಲೂರು ದೊರೆರಾಜು, ಶಿವಮೂರ್ತಿ, ನಾಗಮಹದೇವ ಮುತ್ತು ಭಾಗವಹಿಸಲಿದ್ದಾರೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಬೆಂಗಳೂರು ರಂಗ ವಿಜಯ ನೇತೃತ್ವದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ನಟಗೀತಾ ರಾಘವೇಂದ್ರ ಅಭಿನಯಿಸುವ ಪ್ರೇಮಮಯಿ ಹಿಡಿಂಬೆ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.
Chamarajanagar
ಮ.ಮ.ಬೆಟ್ಟದಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಹುಲಿರಾಯನ ದರ್ಶನ
ಹನೂರು : ತಾಲೂಕಿನ ಮಿಣ್ಯಂ ಗ್ರಾಮದಿಂದ ಹನೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಮಲೆ ಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಹುಲಿರಾಯ ದರ್ಶನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹನೂರು ತಾಲೂಕಿನ ಮಿಣ್ಯಂ ಗ್ರಾಮದಿಂದ ಖಾಸಗಿ ಬಸ್ ಮೂಲಕ ಹನೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಹುಲಿ ದರ್ಶನ ನೀಡಿದೆ.

ಬಸ್ಸಿನ ಚಾಲಕ ಹುಲಿಯನ್ನು ಕಂಡು ಕೆಲವು ಸಮಯ ರಸ್ತೆಯಲ್ಲಿ ನಿಲ್ಲಿಸಿದ್ದಾನೆ. ಈ ವೇಳೆ ಹುಲಿಯು ಒಂದು ಕಡೆಯಿಂದ ಮತ್ತೊಂದು ಕಡೆಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಪ್ರಯಾಣಿಕರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ಅರಣ್ಯ ವ್ಯಾಪ್ತಿಯಲ್ಲಿಯೇ ಮತ್ತಷ್ಟು ಹುಲಿಗಳಿರುವುದು ವನ್ಯ ಪ್ರಿಯರಿಗೆ ಸಂತಸವನ್ನುಂಟು ಮಾಡಿದೆ.
Chamarajanagar
ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ವಿಶೇಷ ಪೂಜೆ
ಹನೂರು: ಧನುರ್ಮಾಸ ಪೂಜೆಯ ಹಿನ್ನೆಲೆ ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ದೇವರ ಮೂರ್ತಿಗೆ ಫಲ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಗಿನ ಜಾವ 5 ಗಂಟೆಗೆ ಪನ್ನೀರು, ಎಳನೀರು, ಅರಿಶಿಣ, ಕುಂಕುಮ, ಜೇನುತುಪ್ಪ, ಹಾಲು, ಮೊಸರು ಹಾಗೂ ಗಂಧದ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ದೇವಿ ಮೂರ್ತಿಗೆ ಬಗೆ ಬಗೆಯ ಪುಷ್ಪಾಲಂಕಾರಗಳಿಂದ ಸಿಂಗರಿಸಲಾಯಿತು. ಪಂಚಾಮೃತ ಅಭಿಷೇಕ ಅರ್ಪಿಸಿ ಧೂಪದಾರತಿ, ಕೊಬ್ಬರಿ, ಬೆಲ್ಲ, ನಿಂಬೆಹಣ್ಣಿನ ಆರತಿ ಹಾಗೂ ಮಹಾಮಂಗಳಾರತಿ ನೆರವೇರಿಸಿ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.
ಪಟ್ಟಣ ಸೇರಿದಂತೆ ಭೈರನತ್ತ ಉದ್ದನೂರು, ಚಿಕ್ಕಮಾಲಾಪುರ, ಅಜ್ಜೀಪುರ, ಚಿಂಚಳ್ಳಿ, ಮಣಗಳ್ಳಿ, ಮಂಗಲ ಹಾಗೂ ಈ ಭಾಗದ ಇನ್ನಿತರ ಕಡೆಗಳಿಂದ ಆಗಮಿಸಿದ್ದ ಭಕ್ತರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗದಲ್ಲಿ ಉಪ್ಪು ಸುರಿದು ಭಕ್ತಿ ಮೆರೆದರು.
-
Chikmagalur20 hours agoಬೆಳ್ಳಿ ಪದಕ ಪಡೆದ ಹೆಡ್ ಕಾನ್ಸ್ ಟೇಬಲ್ ಗಿರೀಶ್ ಟಿ ಎಸ್ ರವರಿಗೆ ಅಭಿನಂದನೆ ಸಲ್ಲಿಸಿದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್
-
Chamarajanagar13 hours agoನಾಳೆ ರಂಗವಾಹಿನಿ ಜಾನಪದ ಕಾಲೇಜು ಉದ್ಘಾಟನೆ ಕಾರ್ಯಕ್ರಮ
-
State15 hours agoರಾಜ್ಯ ಸರ್ಕಾರದಿಂದ 15 ವರ್ಷ ಮೀರಿದ ವಾಹನಗಳ ಸ್ಕ್ರ್ಯಾಪ್ ಅನುಮೋದನೆ: ರಾಮಲಿಂಗಾರೆಡ್ಡಿ
-
Chikmagalur12 hours agoಡಿ.20 ರಿಂದ ಜ.6ರವರೆಗೆ ಜಿಲ್ಲೆಯಲ್ಲಿ ಹೆಲಿಟೂರಿಸಂ ಚಟುವಟಿಕೆ
-
Mandya11 hours agoSSLC ಪರೀಕ್ಷಾ ಫಲಿತಾಂಶ ಹೆಚ್ಚಿಸಲು ಕಾರ್ಯೋನ್ಮುಖರಾಗಲು ಸೂಚಿಸಿದ ಕೆ.ಆರ್.ನಂದಿನಿ
-
Hassan19 hours agoಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಬ್ರೈನ್ ಡೆಡ್ : ಅಂಗಾಂಗಗಳನ್ನು ದಾನ ಮಾಡಿದ ಪೋಷಕರು
-
State11 hours agoಗೃಹಲಕ್ಷ್ಮೀ ಯೋಜನೆಯಲ್ಲಿ ಮೋಸ: ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿ.ಟಿ.ರವಿ
-
Hassan9 hours agoಪೊಲೀಸರ ಭರ್ಜರಿ ಕಾರ್ಯಚರಣೆ: ಮಟ್ಕಾ ಆಡುತ್ತಿದ್ದ 17 ಮಂದಿ ಬಂಧನ
