Connect with us

Mysore

ಮತದಾನ ಬಹಿಷ್ಕರಿಸಿದ್ದವರ ಸಮಸ್ಯೆ ಬಗೆಹರಿಸಿದ ತಹಶೀಲ್ದಾರ್ ಮತ್ತು ತಾಲೂಕು ಪಂಚಾಯತಿ ಇಒ

Published

on

ಕುಡಿಯುವ ನೀರಿನ ಸಮಸ್ಯೆ ಸಂಬಂಧ ಮತದಾನ ಬಹಿಷ್ಕರಿಸಿದ್ದ ಪಿರಿಯಾಪಟ್ಟಣ ತಾಲೂಕಿನ ಬೂದಿತಿಟ್ಟು ಗ್ರಾಮದ ತಮಿಳರ ಕಾಲೋನಿಗೆ ತಹಶೀಲ್ದಾರ್ ಸುರೇಂದ್ರ ಮೂರ್ತಿ ಹಾಗು ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕಾಧಿಕಾರಿ ಡಿ.ಬಿ ಸುನಿಲ್ ಕುಮಾರ್ ಅಧಿಕಾರಿಗಳೊಂದಿಗೆ ಭೇಟಿ

ಮತದಾನ ಬಹಿಷ್ಕರಿಸಿದ್ದ ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ ಸ್ಥಳದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತಿ ಇಒ

ಜಲ್ ಜೀವನ್ ಮಿಷನ್ ಕಾಮಗಾರಿಯ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಇತ್ಯರ್ಥ ಹೆಚ್ಚುವರಿಯಾಗಿ ಮತ್ತೊಂದು ಬೋರ್ ವೆಲ್ ಕೊರೆಸಲು ಸ್ಥಳದಲ್ಲಿಯೇ ಆದೇಶ

ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತಿ ಇಒ ಅವರ ಕಾರ್ಯಕ್ಕೆ ಸ್ಥಳೀಯರ ಶ್ಲಾಘನೆ ಮತದಾನದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ

Continue Reading
Click to comment

Leave a Reply

Your email address will not be published. Required fields are marked *

Mysore

ಅವರೆಕಾಳು ಮುದ್ದೆ ಊಟದ ಅನ್ನ ದಾಸೋಹ

Published

on

ಮೈಸೂರು: ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಶನಿವಾರ ಶ್ರಾವಣ ಮಾಸದ ಪ್ರಯುಕ್ತ ಸುಮಾರು 12 ಸಾವಿರ ಭಕ್ತರಿಗೆ ‘ಅವರೆಕಾಳು ಮುದ್ದೆ ಊಟ’ದ ಅನ್ನದಾಸೋಹ ಕಾರ್ಯವನ್ನು ಆಯೋಜಿಸಲಾಗಿತ್ತು.
ಮಂಡ್ಯ ಜಿಲ್ಲೆಯ ನಿವಾಸಿಗಳು, ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಮತ್ತು ಪುಣ್ಯಕೋಟಿ ಸೇವಾ ಟ್ರಸ್ಟ್ ವತಿಯಿಂದ ಈ ದಾಸೋಹವನ್ನು ಹಮ್ಮಿಕೊಳ್ಳಲಾಗಿತ್ತು.


ಯೋಗಾನರಸಿಂಹ ಸ್ವಾಮಿ ದೇವಾಲಯದ ಸಂಸ್ಥಾಪಕರು ಹಾಗೂ ನಾಡೋಜ ಶ್ರೀ ಭಾಷ್ಯಂ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಈ ದಾಸೋಹ ನಡೆಸಲಾಗಿದ್ದು,ದೇವಾಲಯದ ಅಡಳಿತಾಧಿಕಾರಿ ಎನ್.ಶ್ರೀನಿವಾಸನ್ ಅವರು ಭಕ್ತಾದಿಗಳಿಗೆ ಊಟ ಬಡಿಸುವ ಮೂಲಕ ದಾಸೋಹಕ್ಕೆ ಚಾಲನೆ ನೀಡಿದರು.
ಮುದ್ದೆ, ಅವರೆಕಾಳು ಸಾಂಬಾರು ಮತ್ತಿ ಸಿಹಿ‌ ಪಾಯಸ ದಾಸೋಹದ ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಅಧ್ಯಕ್ಷರಾದ ರಾಜೇಶ್, ಮಾಜಿ ಅಧ್ಯಕ್ಷ ವೆಂಕಟೇಶ್, ಪುಣ್ಯಕೋಟಿ ಟ್ರಸ್ಟ್ ಅಧ್ಯಕ್ಷ ಹನುಮಂತೇಶ, ಕಾರ್ಯದರ್ಶಿ ಸುಂದರ್ ರಾಜ್, ಪ್ರಭಾಕರ್ ಉಪಸ್ಥಿತರಿದ್ದರು.

Continue Reading

Mysore

ನಾಲೆಗೆ ಬಿದ್ದು ಮಹಿಳೆ ಆತ್ಮಹತ್ಯೆ

Published

on

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ : ನಾಲೆಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ

ಸಾಲಿಗ್ರಾಮ ಪಟ್ಟಣದ  ಕಾಲುವೆಯಮ್ಮ  ದೇವಾಲಯದ ಹತ್ತಿರ ಚಾಮರಾಜ ಎಡದಂಡೆ ನಾಲೆಯ ಕಾಲುವೆ ಬಳಿ ಲಕ್ಷ್ಮಿ (36 ವರ್ಷ ) ಈ ಮಹಿಳೆಯ ಶವ ಸಿಕ್ಕಿದೆ.

ಎಂದಿನಂತೆ ತವರೂರು ಹಾಡ್ಯ ಗ್ರಾಮದಿಂದ ಸಾಲಿಗ್ರಾಮದ ಆನಂದ್ ಟೆಕ್ಸ್ ಟೆಲ್ಸ್ ಬಟ್ಟೆ ಅಂಗಡಿಯಲ್ಲಿ ಕಳೆದ ಆರು ತಿಂಗಳಿಂದ ಕೆಲಸ ಮಾಡುತ್ತಿದ್ದು, ಅದರಂತೆ ಶನಿವಾರ ದಿವಸ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿ ರುತ್ತಾರೆ. ಇವರಿಗೆ ಸಾಲಿಗ್ರಾಮದ ಸೋದರ ಮಾವನ ಮಗನ ಜೊತೆ ಮದುವೆ ಯಾಗಿದ್ದು, ಇಬ್ಬರು ಮಕ್ಕಳಿದ್ದು, ಇವರು ಅನಾರೋಗ್ಯ ದಿಂದ ಇದ್ದು,ಸಾಂಸಾರಿಕ ವಿಚಾರದಲ್ಲಿ ಆಗಾಗ್ಗೆ ಮಾನಸಿಕ ವಾಗಿ ಗಲಾಟೆ ಮಾಡಿಕೊಳ್ಳುತ್ತಿದ್ದು ಗಂಡ ತಿಳಿವಳಿಕೆ ಹೇಳಿ ಸಮಾಧಾನ ಮಾಡಿದ್ದರು. ಅನಾರೋಗ್ಯ ಕಾರಣದಿಂದ ಜೀವನದಲ್ಲಿ ಬೇಸತ್ತು ಮಾನಸಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಸಹೋದರ  ಲೋಕೇಶ್ ಸಾಲಿಗ್ರಾಮ ಠಾಣೆಯಲ್ಲಿ ದೂರು ನೀಡಿದ್ದು ಇದರ ಅನ್ವಯ ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿರುತ್ತಾರೆ.

Continue Reading

Mysore

ಎಚ್ ಡಿ ಕೋಟೆಯಲ್ಲಿಂದು ಬ್ರಹ್ಮಾಕುಮಾರಿಸ್ ಪ್ರಕಾಶ ಭವನ ಲೋಕಾರ್ಪಣೆ

Published

on

ಎಚ್ ಡಿ ಕೋಟೆ  ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪ್ರಕಾಶಭವನವನ್ನು ಸಾರ್ವಜನಿಕರ ಸೇವೆಗಾಗಿ ಮೌಂಟ್ ಅಬು ಶಿಕ್ಷಣ ಸೇವಾ ವಿಭಾಗದ ಅಂತರಾಷ್ಟ್ರೀಯ ಅಧ್ಯಕ್ಷರಾದ ರಾಜ ಯೋಗಿ ಬ್ರಹ್ಮಕುಮಾರ ಮೃತ್ಯುಂಜಯ ಜೀರವರು ಇಂದು ಬೆಳಗ್ಗೆ 10 ಗಂಟೆಗೆ ದಿನಾಂಕ 11.08.2024 ಭಾನುವಾರ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಕಲ್ಪನಾಜೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸೇವಾ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ಹಾಗೂ 39ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ಮೈಸೂರು ಉಪವಲಯ ಈಶ್ವರೀಯ ವಿಶ್ವವಿದ್ಯಾಲಯಗಳ ಮುಖ್ಯ ಸಂಚಾಲಕರಾದ ರಾಜಾ ಯೋಗಿನಿಬ್ರಹ್ಮಾಕುಮಾರಿ ಲಕ್ಷ್ಮೀಜಿಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾನ್ಯ ಶಾಸಕರಾದ ಅನಿಲ್ ಚಿಕ್ಕಮಾದುರವರು ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ತಹಸಿಲ್ದಾರವರಾದ ಶ್ರೀನಿವಾಸ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ ಸುರೇಶ, ಆರಕ್ಷಕ ವೃತ್ತ ನಿರೀಕ್ಷಕರಾದ ಸಬೀರ್ ಹುಸೇನ್, ಗೀತಾ ಗಿರಿ ಗೌಡ ಗೋವಿಂದ ಗೌಡರು ಶ್ರೀನಿವಾಸ್ ಹಾಗೂ ಬಿಕೆ ನಾಗರಾಜ್ ಬಾಯಿರವರು ಭಾಗವಹಿಸಲಿದ್ದಾರೆ. ಬೆಳಗ್ಗೆ 9:30ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಶಾಂತಿ ಶೋಭಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ

Continue Reading

Trending

error: Content is protected !!