Hassan
ಹೇಮವತಿಯಿಂದ ಜಿಲ್ಲೆಗೆ ನೀರು ಹರಿಸುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷದಿಂದ ಜಿಲ್ಲಾಡಳಿತಕ್ಕೆ ಮನವಿ
ಹಾಸನ: ಹೇಮಾವತಿ ಜಲಾಶಯದಿಂದ ಏಕಾಏಕಿ ಎಡದಂಡೆ ನಾಲೆ ಮೂಲಕ ನೀರು ಹರಿಸುತ್ತಿದ್ದು, ತುಮಕೂರಿಗೆ ನೀರು ಹರಿಸುವಂತೆ ನಮ್ಮ ಹಾಸನ ಜಿಲ್ಲೆಗೂ ತಕ್ಷಣ ನೀರು ಬಿಡಬೇಕೆಂದು ಆಗ್ರಹಿಸಿ ಜೆಡಿಎಸ್ ಪಕ್ಷದಿಂದ ಅಪರ ಜಿಲ್ಲಾಧಿಕಾರಿ ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಕೆ.ಎನ್. ಲಿಂಗೇಶ್ ಮತ್ತು ಹೆಚ್.ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಮಾಧ್ಯಮದೊಂದಿಗೆ ಮಾತನಾಡಿ, ಜಾತ್ಯಾತೀತ ಜನತಾ ದಳ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ನೀರಿನ ಸಮಸ್ಯೆ ಬಗ್ಗೆ ಅರಿವು ಮೂಡಿಸುವ ಮನವಿಯನ್ನು ಕೊಡಲಾಗಿದೆ. ಪ್ರಸ್ತೂತ ಬರಗಾಲ ನೀರಿಲ್ಲ. ದನ ಕರುಗಳಿಗೆ ಕುಡಿಯಲು ನೀರಿಲ್ಲದೇ ಬರದ ಪರಿಸ್ಥಿತಿಯಲ್ಲಿ ಹಾಸನ ಜಿಲ್ಲೆ ಹಾಗೂ ಹಳ್ಳಿಗಳಲ್ಲಿ ಕುಡಿಯುವ ನೀರು ಬಹಳಷ್ಟು ಸಮಸ್ಯೆ ಎದುರಾಗಿದೆ. ಕಳೆದ ವರ್ಷ ಮತ್ತು ಈ ವರ್ಷ ಮಳೆಯ ಅಭಾವದಿಂದ ಹಾಸನ ಜಿಲ್ಲೆಯಲ್ಲೂ ಬರ ಪರಿಸ್ಥಿತಿ ತಲೆ ದೋರಿದ್ದು, ಈಗಾಗಲೇ ರಾಜ್ಯ ಸರ್ಕಾರ ಜಿಲ್ಲೆಯ ಎಂಟೂ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಣೆ ಮಾಡಿದೆ. ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ ನೀರು ಸಂಗ್ರಹ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ತುಂಬಾ ಕಡಿಮೆ ಇದೆ. ಕಳೆದ ವರ್ಷ ಇದೇ ದಿನ ೨೦.೬೩೫ ಟಿಎಂಸಿ ನೀರಿತ್ತು. ಈ ವರ್ಷ ೧೨.೬೫೨ ಟಿಎಂಸಿ ನೀರಿದೆ. ಇದರಲ್ಲಿ ಬಳಕೆ ಮಾಡಬಹುದಾದ ನೀರು ಕೇವಲ ೮.೨೮೦ ಟಿಎಂಸಿ ಮಾತ್ರ. ನೀರಿನ ಪ್ರಮಾಣ ಕಡಿಮೆ ಇದ್ದರೂ ಕೂಡ ಕಳೆದ ಹತ್ತು ದಿನಗಳಿಂದಲೂ ಎಡದಂಡೆ ಮೂಲಕ ಹೇಮಾವತಿ ಜಲಾಶಯದಿಂದ ಏಕಾಏಕಿ ನೀರು ಹರಿಸಲಾಗುತ್ತಿದೆ. ಇದು ನಮಗೆ ಆತಂಕ ತರಿಸಿದೆ ಎಂದರು. ಪ್ರಸ್ತುತ ಜಿಲ್ಲೆಯಲ್ಲೂ ತೀವ್ರ ಬರಗಾಲ ಪರಿಸ್ಥಿತಿ ಇದೆ. ಅಂತರ್ಜಲ ಕೊರತೆಯಿಂದಾಗಿ ಅನೇಕ ಕಡೆಗಳಲ್ಲಿ ಕುಡಿಯವ ನೀರಿನ ಸಮಸ್ಯೆ ತಲೆದೋರಿದೆ. ಮಳೆ ಒಂದು ತಿಂಗಳಲ್ಲಿ ಬರುವುದೋ, ಎರಡು ತಿಂಗಳಲ್ಲಿ ಬರುವುದೋ ಗೊತ್ತಿಲ್ಲ. ಹೀಗಿದ್ದರೂ ಹೇಮಾವತಿ ಜಲಾಶಯದಿಂದ ನೀರು ಹರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹಾಸನ ನಗರ ಸೇರಿದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇರುವುದರಿಂದ ನಮಗೆ ಸಮಸ್ಯೆಯಾಗಲಿದೆ ಎಂದು ಆತಂಕವ್ಯಕ್ತಪಡಿಸಿದರು. ಹಾಲಿ ಹರಿಯುತ್ತಿರುವ ನೀರನ್ನು ನಮ್ಮ ಜಿಲ್ಲೆ ವ್ಯಾಪ್ತಿಯಲ್ಲಿ ಕೆರೆ-ಕಟ್ಟೆ ತುಂಬಲು ಅವಕಾಶ ಮಾಡಿಕೊಡಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ. ಹೇಮಾವತಿ ಜಲಾಶಯದಲ್ಲಿ ನೀರು ಸಂಗ್ರಹ ಪ್ರಮಾಣ ಕಡಿಮೆ ಇದ್ದ ಕಾರಣ ಕಳೆದ ಸಾಲಿನಲ್ಲಿ ಅಚ್ಚುಕಟ್ಟು ಭಾಗದಲ್ಲಿ ಯಾವುದೇ ನೀರಾವರಿ ಬೆಳೆಗೆ ನೀರು ನೀಡಲಿಲ್ಲ ಎಂದು ಹೇಳಿದರು.
ಇದರಿಂದ ಲಕ್ಷಾಂತರ ರೈತರು ಬೆಳೆ ಕಳೆದುಕೊಳ್ಳಬೇಕಾಯಿತು. ನೀರಿಲ್ಲದೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರವನ್ನೂ ನೀಡಲಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈವರೆಗೂ ರೈತರ ಹಿತ ಕಾಯದ ಸರ್ಕಾರ, ಇದೀಗ ಕುಡಿಯುವ ನೀರಿಗೂ ಸಮಸ್ಯೆ ತಂದೊಡ್ಡಲು ಮುಂದಾಗಿದೆ. ಮಳೆಗಾಲ ಆರಂಭವಾಗುವವರೆಗೂ ಹೇಮಾವತಿ ಜಲಾಶಯದಲ್ಲಿ ನೀರನ್ನು ಉಳಿಸಬೇಕು ಎಂದು ಈ ಮೂಲಕ ಸಮಸ್ತ ಹಾಸನ ಜಿಲ್ಲೆಯ ಜನರ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ. ಇನ್ನು ಎರಡು ದಿನಗಳ ಒಳಗೆ ಮಳೆ ಬರುತ್ತದೆ ಎಂದು ಜಿಲ್ಲಾಡಳಿತಕ್ಕೆ ಕನಸ್ಸು ಬಿದ್ದಿದೆ. ಅವರ ಕನಸ್ಸು ನನಸಾಗಲಿ. ಆದರೇ ತುಮಕೂರಿಗೆ ನೀರು ಕೊಡುವಂತೆ ನಮಗೂ ನೀರು ಕೊಡಲಿ. ಸರ್ವಾಧಿಕಾರಿ ದೋರಣೆ ವಿರುದ್ಧ ಜೆಡಿಎಸ್ ಇಡೀ ಜಿಲ್ಲೆಯ ರೈತರ ಪರವಾಗಿ ಸರಕಾರಕ್ಕೆ ಆಗ್ರಹಿಸಿ ತತ್ ಕ್ಷಣ ಬೇರೆ ಜಿಲ್ಲೆಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಕುಡಿಯುವ ನೀರಿಗೆ ಸಮಸ್ಯೆ ಆಗಲ್ಲ ಎಂದು ಡಿಸಿ ಅವರಿಗೆ ಕನಸ್ಸು ಬಿದ್ದಿದ್ದರೇ ನಮಗೂ ಕೂಡ ನೀರು ಕೊಡಿ ಎಂಬುದು ಒತ್ತಾಯಿಸಿ ರಾಜ್ಯಸರಕಾರಕ್ಕೆ ಜಿಲ್ಲಾಡಳಿತ ಮೂಲಕ ಮನವಿ ಸಲ್ಲಿಸಲಾಗಿದೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೇ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ
ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜಿಲ್ಲಾ ಮಾಧ್ಯಮ ವಕ್ತಾರ ಹೊಂಗೆರೆ ರಘು, ಜೆಡಿಎಸ್ ಪಕ್ಷದ ಮುಖಂಡರಾದ ಕಮಲ್ ಕುಮಾರ್, ಲಕ್ಷ್ಮಣ್, ಸಯ್ಯಾದ್ ಅಕ್ಬರ್, ಸಯ್ಯಾದ್ ಅನ್ಸರ್, ಅಕ್ಮಲ್, ನಿರ್ಮಲಾ ಇತರರು ಉಪಸ್ಥಿತರಿದ್ದರು.
Hassan
ಅರೇಹಳ್ಳಿಯಲ್ಲಿ ಮರುಕಳಿಸಿದ ಕಾಫಿ ಕಳ್ಳತನ!
ಅರೆಹಳ್ಳಿ: ಭಾನುವಾರ ಮಧ್ಯರಾತ್ರಿ ಸುಮಾರು 3ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಖದೀಮರ* ಗುಂಪು ಸುಮಾರು 2* ಲಕ್ಷ ಮೌಲ್ಯದ ಕಾಫಿಯನ್ನು ಕಳುವು ಮಾಡಿದ್ದರು ಈ ಬಗ್ಗೆ ಸ್ಥಳೀಯ ಕಾಫಿ ಬೆಳೆಗಾರ ಸಂಘದ ಸಹಕಾರದೊಂದಿಗೆ ಪೊಲೀಸ್ ಠಾಣೆಗೆ ಮಾಲೀಕರು ತೆರಳಿ ದೂರು ಸಲ್ಲಿಸಿ ತ್ವರಿತವಾಗಿ ಖದೀಮರನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದರು.

ಇದಾದ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ರಾತ್ರಿ ಸಮಯದಲ್ಲಿ ಗಸ್ತು ಚುರುಕುಗೊಳಿಸಿದ್ದರು* ಇವುಗಳ ನಡುವೆ ಇಂದು ಮುಂಜಾನೆ ಸುಮಾರು 4.30ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಅದೇ? ಖದೀಮರ ಗುಂಪು ಪುನಃ ಕಾಫಿ ದೋಚಲು ಯತ್ನಿಸಿದ್ದು ಆ ವೇಳೆಗಾಗಲೇ ಎಚ್ಚೆತ್ತ ಕಾಫಿ ಬೆಳೆಗಾರ ಜಗನ್ನಾಥ್ ಶೆಟ್ಟಿ ಎಂಬುವವರು ಕಾರಿನಿಂದ ಹೊರಗೆ ಇಳಿದು ಬರಲು ಯತ್ನಿಸಿದ್ದಾರೆ ಆಗ ಅಲ್ಲಿದ್ದ ಗುಂಪು ಮಚ್ಚಿನಿಂದ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಅಲ್ಲಿಂದ ಸುಮಾರು100* ಕೆಜಿ ಗಳಷ್ಟು ಕಾಫಿಯನ್ನು ದೋಚಿ ಪರಾರಿಯಾಗಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ!

ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ, ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಮಾಜಿ ಉಪಾಧ್ಯಕ್ಷ ಬಿ.ಪಿ ಬಸವರಾಜ್ , ಗ್ರಾಮದ ಮುಖಂಡ ಅಮಿತ್ ಶೆಟ್ಟಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೋಲೀಸ್ ಇಲಾಖೆ ತಪ್ಪಿತಸ್ಥರನ್ನು ಅದಷ್ಟು ಬೇಗ ಪತ್ತೆ ಹಚ್ಚಿ ಅಂತವರ ವಿರುದ್ಧ ಕಠಿಣ ಶಿಕ್ಷೆ ಜರುಗಿಸುವ ಮೂಲಕ ಇಂತಹ ಪ್ರಕರಣಗಳು ನಮ್ಮ ಬಾಗದಲ್ಲಿ ಮತ್ತೆಂದಿಗೂ ಮರುಕಳಿಸಬಾರದು, ಮೂರ್ನಾಲ್ಕು ದಿನಗಳ ಹಿಂದೆ ಅದೇ ಸ್ಥಳದಲ್ಲಿ ಕಾಫಿ ಕಳವು ನಡೆದು ಪೊಲೀಸರಿಗೆ ಮಾಹಿತಿ ನೀಡಿ ಪ್ರಕರ*ಣ ದಾಖಲಿಸಿ? ಮತ್ತೆ ಅದಕ್ಕಿಂತಲೂ ಕ್ರೌರ್ಯ ಮನಸ್ಸಿನಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಿದೆ ಎಂದರೆ ಅದು ಯಾರ ವೈಫಲ್ಯ? ಎಂದು ಪ್ರಶ್ನಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಬೇಟಿ ನೀಡಿ ಅಧಿಕಾರಿಗಳೊಂದಿಗೆ ಪ್ರಕರಣ ಕುರಿತ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.ಹಾಗು ಶ್ವಾನ ದಳ ವಿಶೇಷ ತನಿಖಾ ತಂಡದಿಂದ ತನಿಖೆ ಮುಂದುವರೆದಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ
Hassan
ಸುತ್ತೂರು ಜಾತ್ರಾ ಮಹೋತ್ಸವ
ಹಾಸನ: ಜ15-20ರ ವರೆಗೂ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಸಂಚರಿಸುತ್ತಿರುವ ಪ್ರಚಾರದ ರಥ ಇಂದು ನಗರಕ್ಕೆ ಆಗಮಿಸಿದಾಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಸ್ವಾಗತಿಸಿ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು.
ಮೊದಲು ತಣ್ಣೀರುಹಳ್ಳ ಮಠ, ಶ್ರೀ ಬಸವೇಶ್ವವರ ಕಲ್ಯಾಣ ಮಂಟಪ ಹಾಗೂ ಶ್ರೀ ಜವೇನಹಳ್ಳಿ ಮಠಕ್ಕೆ ಸುತ್ತೂರು ಜಾತ್ರಾ ಮಹೋತ್ಸವದ ರಥ ಬಂದಾಗ ಆಡಳಿತ ಮಂಡಳಿಯವರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಠದ ಭಕ್ತರು ಪೂಜೆ ಸಲ್ಲಿಸಿ ಸ್ವಾಗತಿಸಿದರು.

ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ರಾಜ್ಯದ ಹಲವು ಜಿಲ್ಲೆಯಲ್ಲಿ ಪ್ರಚಾರ ರಥಯಾತ್ರೆ ಸಂಚರಿಸಿ ಜಾತ್ರೋತ್ಸವ ಹಾಗೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಗುತ್ತಿದೆ.

ಈ ವೇಳೆ ಲಿಂಗಾಯತ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಬಿ.ಪಿ. ಐಸಾಮಿಗೌಡ, ಉಪಾಧ್ಯಕ್ಷ ಬಿ.ಎಂ. ಭುವನಾಕ್ಷ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಕಿರಣ್ ಕುಮಾರ್ ಹೊಸಮನಿ, ತಣ್ಣೀರು ಹಳ್ಳ ಮಠದ ಮ್ಯಾನೇಜರ್ ಶಂಕರ್ ಜಗದೀಶ್, ಬಾಳ ನಾಗೇಶ್, ಶೋಭನ್ ಬಾಬು, ಯು.ಎಸ್. ಬಸವರಾಜ್, ಸೋಮಶೇಖರ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ್, ಪಾಲಾಕ್ಷ, ಧನಲಕ್ಷ್ಮಿ, ಇಂದ್ರಮ್ಮ, ಸಾವಿತ್ರಮ್ಮ, ಇಂಜಿನಿಯರ್ ಉಪಸ್ಥಿತರಿದ್ದರು.
Hassan
ದಾಖಲೆ ತಿರುಚಿ ಪೌತಿ ಖಾತೆ ಕುರಿತು ಕ್ರಮ ಕೈಗೊಳ್ಳಬೇಕು-ದಲಿತ ಸಂಘರ್ಷ ಸಮಿತಿ ಆಗ್ರಹ
ಹಾಸನ: ಹಿರಿಯ ನಾಗರಿಕರಾದ ಮಲ್ಲಮ್ಮ ಕೋಂ ಸಣ್ಣಯ್ಯ ಅವರ ಆಸ್ತಿಯ ದಾಖಲೆಯನ್ನು ತಿರುಚಿ, ಕುಟುಂಬದ ಪ್ರಾಮಾಣಿಕ ವಾರಸುದಾರರನ್ನು ಬಿಟ್ಟು ತಪ್ಪು ಮಾಹಿತಿಯ ಆಧಾರದ ಮೇಲೆ ಪೌತಿ ಖಾತೆ ಮಾಡಿಸಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಡಾ. ಬಿ.ಆರ್. ಅಂಬೇಡ್ಕರ್ ವಿಚಾರ ವೇದಿಕೆ)ಯ ಜಿಲ್ಲಾ ಸಂಚಾಲಕ ಅರೇಹಳ್ಳಿ ನಿಗರಾಜು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಆಲೂರು ಪಟ್ಟಣ ಪಂಚಾಯಿತಿ ತಪ್ಪು ದಾಖಲೆಗಳನ್ನು ಆಧರಿಸಿ ಆಸ್ತಿಯನ್ನು ಮೂರನೇ ವ್ಯಕ್ತಿಗೆ ಕ್ರಯ ಮಾಡಿದ ಕ್ರಮವನ್ನು ತಡೆಯಬೇಕು ಎಂದು ಸಮಿತಿ ಒತ್ತಾಯಿಸಿದರು.
ಅರಸೀಕೆರೆ ತಾಲ್ಲೂಕಿನ ದೇವರಹಳ್ಳಿಯ ಡಿ.ಎಂ. ಸಣ್ಣಪ್ಪರ ಕುಟುಂಬಕ್ಕೆ ಸೇರಿದ ಮಲ್ಲಮ್ಮ ಅವರು 1987ರ ನವೆಂಬರ್ 10ರಂದು ಜಿ. ಅಬ್ದುಲ್ ಸುಬಾನ್ ಅವರ ಪುತ್ರಿ ಯಾಸ್ಮಿನ್ ಮೊಹುದ್ದೀನ್ ಅವರಿಂದ ನಿವೇಶನವನ್ನು ಸಬ್‌ರಿಜಿಸ್ಟರ್ ಕಚೇರಿಯ ನಂ.229, ದಿನಾಂಕ 25/11/1987ರ ಪತ್ರದ ಮೂಲಕ ಕ್ರಯ ಮಾಡಿಕೊಳ್ಳಲಾಗಿತ್ತು.
ಆ ಆಸ್ತಿಗೆ ಅದೇ ಸಮಯದಲ್ಲಿ ಮಲ್ಲಮ್ಮ ಅವರ ಹೆಸರಲ್ಲಿ ಅಧಿಕೃತ ಖಾತೆಯೂ ತೆರೆದಿತ್ತು. ಮಲ್ಲಮ್ಮ ಜೀವಿತಾವಸ್ಥೆಯಲ್ಲಿಯೇ ತಮ್ಮ ಮೂವರು ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಹಕ್ಕು ಇರುವಂತೆ ದಾಖಲೆಗಳಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ.

ಮಲ್ಲಮ್ಮ ಅವರ ಮರಣದ ನಂತರ ಕುಟುಂಬದಲ್ಲಿ ವಾರಸುದಾರರ ವಿವರದಲ್ಲಿ ಗೊಂದಲ ಸೃಷ್ಟಿಸಲಾಯಿತು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮಲ್ಲಮ್ಮ ಅವರ ಹಿರಿಯ ಮಗ ಶಿವಶಂಕರ್ ಅವರು ಈಗಾಗಲೇ ಮರಣ ಹೊಂದಿದ್ದು, ಅವರಿಗೆ ಎರಡು ಪತ್ನಿಯರು — ಹಿರಿಯ ಪತ್ನಿ ವಿಮಲ ಹಾಗೂ ಎರಡನೇ ಪತ್ನಿ ರಾಧ ಇದ್ದಾರೆ.
ವಿಮಲ ಅವರಿಗೆ ನಂದಕುಮಾರ್ ಎಂಬ ಮಗನಿದ್ದು, ರಾಧ ಅವರಿಗೆ ಮಾನಸ ಎಂಬ ಮಗಳಿದ್ದಾರೆ. ಶಿವಶಂಕರ್ ಅವರ ಮರಣದ ನಂತರ ದಾಖಲೆಯಲ್ಲಿ ‘ವಂಶವೃಕ್ಷ’ ಬರೆದಾಗ ಹಿರಿಯ ಪತ್ನಿ ವಿಮಲರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಲಾಗಿದೆ.
ಈ ತಪ್ಪು ಮಾಹಿತಿಯ ಆಧಾರದ ಮೇಲೆ ಪೌತಿ ಖಾತೆ ಮಾಡಿಸಿಕೊಂಡು, ವಿಮಲ ಅವರಿಗೆ ಯಾವುದೇ ಮಾಹಿತಿ ನೀಡದೇ ಆಸ್ತಿಯನ್ನು ಮಾರಾಟ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಸಮಿತಿ ಆರೋಪಿಸಿದೆ.
ಸಮಿತಿ ಹೇಳುವಂತೆ, ತಪ್ಪು ಮಾಹಿತಿ ನೀಡಿ ಖಾತೆ ಮಾಡಿಸುವುದು ಕಾನೂನುಬಾಹಿರ. ಆಸ್ತಿ ಕ್ರಯ ಮಾಡಿದವರಿಗೆ ಯಾವುದೇ ಪರಿಸ್ಥಿತಿಯಲ್ಲೂ ಹೊಸ ಖಾತೆ ಮಾಡಬಾರದು, ದಾಖಲೆಗಳ ಸಂಪೂರ್ಣ ಪರಿಶೀಲನೆ ಮಾಡಿ ನಿಜಸ್ಥಿತಿಯನ್ನು ಬಹಿರಂಗಪಡಿಸಬೇಕು.
ತಪ್ಪು ದಾಖಲೆ ಸಲ್ಲಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ನಿಂಗರಾಜು ಅರೇಹಳ್ಳಿ, ವೆಂಕಟೇಶ್ ಬ್ಯಾಕ್ರವಳ್ಳಿ, ಲಕ್ಷ್ಮೀ, ವಸಂತ್ ಕುಮಾರ್, ವಿಮಲಾ, ದ್ರಾಕ್ಷಾಹಿಣಿ ಹಾಗೂ ಇತರರು ಉಪಸ್ಥಿತರಿದ್ದರು.
-
Kodagu23 hours agoಆಮೆಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿ: ಎಸ್ಟಿ ಮೋರ್ಚಾ ಅಸಮಾಧಾನ
-
Kodagu15 hours agoಜಿಲ್ಲೆಯಾದ್ಯಂತ ಡಿ.21 ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ
-
Mysore13 hours agoಬಿಸಿಯೂಟ ಅನುದಾನ ದುರುಪಯೋಗ
-
Chamarajanagar15 hours agoಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
-
Kodagu15 hours agoಪ್ರಧಾನಿ ಕುರಿತು ಅವಹೇಳನ – ನಾಲ್ವರ ಬಂಧನ
-
Mandya17 hours agoಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1066 ನೇ ಜಯಂತಿ ಮಹೋತ್ಸವದ ಪೂರ್ವ ಸಿದ್ದತೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು
-
Mysore16 hours agoನಂಜನಗೂಡು ಪತ್ರ ಬರಹಗಾರ ಸಂಘದಿಂದ ಡಿ. 15 ಮತ್ತು 16 ರಂದು ಪ್ರತಿಭಟನೆ
-
Mysore16 hours agoವರುಣ ಹೋಬಳಿಯ ಮೇಗಳಾಪುರ ಗ್ರಾಮದಲ್ಲಿ ಇ-ಪೌತಿ ಆಂದೋಲನ: ಹೆಚ್ಚುವರಿ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
