Connect with us

Chamarajanagar

ಇಂಡಿಗನತ್ತದಲ್ಲಿ ಶಾಂತಿಯುತ ಮರು ಮತದಾನ

Published

on

ಹನೂರು : ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಲೋಕ ಸಭಾ ಚುನಾವಣೆಯ ಮರು ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.

ಇಂಡಿಗನತ್ತ ಗ್ರಾಮದ ಮತಗಟ್ಟೆ ಸಂಖ್ಯೆ 146 ರಲ್ಲಿ ಮರು ಮತದಾನ ನಡೆಯುತ್ತಿದ್ದು, ಇಲ್ಲಿ ಒಟ್ಟು 528 ಮತದಾರರಿದ್ದಾರೆ. ಇವರಲ್ಲಿ ಪುರುಷರು 279, ಮಹಿಳೆಯರು 249 ಇದ್ದಾರೆ. ಇಂದು ಬೆಳಿಗ್ಗೆ 7 ಕ್ಕೆ ಮತದಾನ ಆರಂಭವಾಯಿತು. ಮಧ್ಯಾಹ್ನ 2 ಗಂಟೆ ವೇಳೆಗೆ 67 ಮಂದಿ ಮತ ಚಲಾಯಿಸಿದ್ದರು. ಇದು‌ ವರೆಗೆ ಮೆಂದಾರೆಯ 58 ಮಂದಿ ಹಾಗೂ ಇಂಡಿಗನತ್ತ ಗ್ರಾಮದ 9 ಮಂದಿ ಮತ ಚಲಾಯಿಸಿದ್ದಾರೆ.

ಏ.26ರಂದು ನಡೆದ ಸಾರ್ವತ್ರಿಕ ಚುನಾವಣೆ ಮತದಾನದ ಸಂದರ್ಭದಲ್ಲಿ ಇಂಡಿಗನ ಗ್ರಾಮಸ್ಥರು‌ ಮತದಾನ ಬಹಿಷ್ಕಾರ ಮಾಡಿದ್ದರು. ಈ ಸಂದರ್ಭದಲ್ಲಿ ಮೆಂದಾರೆ ಗ್ರಾಮದ ಕೆಲವರು ಮತದಾನ ಮಾಡಲು ಹೋದಾಗ, ಇಂಡಿಗನತ್ತ ಗ್ರಾಮಸ್ಥರು ಪ್ರತಿರೋಧ ತೋರಿದ್ದರು. ಈ ವೇಳೆ ಘರ್ಷಣೆ, ಕಲ್ಲು ತೂರಾಟ ನಡೆದು, ಮತಗಟ್ಟೆ ಸಿಬ್ಬಂದಿ ಸೇರಿ ಕೆಲವರಿಗೆ ಗಾಯಗಳಾಗಿತ್ತು. ಮತಯಂತ್ರಗಳನ್ನು ಒಡೆದು ಹಾಕಲಾಗಿತ್ತು. ಮತಗಟ್ಟೆಯನ್ನೂ ಧ್ವಂಸ ಮಾಡಲಾಗಿತ್ತು. ಈ ಸಂಬಂಧ 30 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಾರಣ, ಇಂದು ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. ಇಂದಿನ ಮತದಾನಕ್ಕೆ ಇಂಡಿಗನತ್ತ ಗ್ರಾಮಸ್ಥರು ವಿರಳ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ಎಎಸ್ಪಿ ಉದೇಶ್, ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ, ಡಿವೈಎಸ್ಪಿ ಧರ್ಮೇಂದ್ರ, ಪಿಎಸೈಗಳಾದ ಶಶಿಕುಮಾರ್, ಮನೋಜ್ ಕುಮಾರ್, ಜಗದೀಶ್, ಹಾಜರಿದ್ದು, ಗ್ರಾಮದಲ್ಲಿ ಟಾಂಟಾಂ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗಿದ್ದು ಮತದಾನ ಮಾಡಲು ಜನರಿಗೆ ಧೈರ್ಯ ತುಂಬಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಬೇಗೂರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ರೈತ ಸಂಘಟನೆಯಿಂದ ಪ್ರತಿಭಟನೆ

Published

on

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿಂದ ರೈತರಿಗೆ ಸಾಲ ವಸೂಲಿಗೆ ಬಗ್ಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ಮುಂಭಾಗ ರೈತ ಸಂಘ ಗಳಿಂದ ಪ್ರತಿಭಟನೆ

ಬೇಗೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಸಾಲ ಪಡೆದ ರೈತರಿಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿ ಗಳು ಬೇಗೂರಿನ ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಿದರು. ಬೇಗೂರಿನ ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ಮುಂದೆ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ರೈತರಿಗೆ ಹಣ ಕಟ್ಟುವಂತೆ ನೋಟಿಸ್ ನೀಡಿ ಕಿರುಕುಳ

ಈ ಪ್ರತಿಭಟನೆ ವೇಳೆ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ವೀರನಪುರ ನಾಗಪ್ಪ, ಬೇಗೂರು ಸಮೀಪದ ಬೆಳಚಲವಾಡಿ ಗ್ರಾಮದ ನಂಜುಂಡಸ್ವಾಮಿ ಎಂಬ ರೈತ ಬೇಗೂರು ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಬೆಳೆ ಸಾಲ ಪಡೆದಿದ್ದಾರೆ. ಇವರಿಗೆ ಹೆಚ್ಚು ಪ್ರಮಾಣದಲ್ಲಿ ಬಡ್ಡಿ ವಿಧಿಸಿ ಹಣ ಕಟ್ಟುವಂತೆ ನೋಟಿಸ್ ನೀಡಿದ್ದಾರೆ. ಸಕಾಲಕ್ಕೆ ಮಳೆ ಬೀಳದೆ ರೈತರು ಬೆಳೆದ ಬೆಳೆಗಳು ಹಾನಿಗೊಳಗಾಗಿದೆ. ಜೊತೆಗೆ ಇದೆ ಸಮಯಕ್ಕೆ ಈ ಬ್ಯಾಂಕಿನವರು ಸಾಲ ವಸೂಲಿಗೆ ನೋಟಿಸ್ ನೀಡಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಬೆಳೆದ ಬೆಳೆಗೆ ಬೆಲೆ ಸಿಗದೆ ರೈತ ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ನವರು ನೋಟಿಸ್ ನೀಡುವ ಮೂಲಕ ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಸಮಾಧಾನ ವ್ಯಕ್ತಪಡಿಸಿದರು.

ನಂತರ ಬೇಗೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕ್.ವ್ಯವಸ್ಥಾಪಕರು ಈ ವಿಚಾರವಾಗಿ ಮುಖ್ಯ ಕಚೇರಿಯ ಗಮನಕ್ಕೆ ತಂದು ಬಡ್ಡಿ ಕಡಿಮೆ ಮಾಡಿಸಲು ಪ್ರಯತ್ನ ಪಡಲಾಗುವುದು ಎಂದು ಭರವಸೆ ನೀಡಿದರು.

ರೈತರ ನೆರವಿಗೆ ನಿಲ್ಲದ ಸರ್ಕಾರಗಳು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈ ಕಟ್ಟಿ ಕುಳಿತು ಅಧಿಕಾರಿಗಳ ಮೂಲಕ ಸಾಲ ವಸೂಲಿಗೆ ಕುಮ್ಮಕ್ಕು ನೀಡುತ್ತಿವೆ. ಆದ್ದರಿಂದ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ನೊಂದ ರೈತರ ನೆರವಿಗೆ ನಿಲ್ಲಬೇಕು ಹಾಗೂ ಸಾಲದ ಬಡ್ಡಿ ಮನ್ನಾ ಮಾಡಿ ಕೇವಲ ಸಾಲದ ಹಣವನ್ನು ಮಾತ್ರ ಕಟ್ಟಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರ ಮನ ವಲಿಸಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಸುರೇಖಾ

ಈ ಸಮಸ್ಯೆ ಬಗ್ಗೆ ಮುಖ್ಯ ಕಚೇರಿಗೆ ಗಮನಕ್ಕೆ ತಂದು ಬಡ್ಡಿಕಡಿಮೆ ಮಾಡಲುಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನ ಮಾಡುತಿದ್ದ ರೈತರು ಪ್ರತಿಭಟನೆ ಯನ್ನು ಕೈಬಿಟ್ಟರು.

ಈ ಸಂದರ್ಭದಲ್ಲಿ ,ಸಂಘದ ಜಿಲ್ಲಾ ಉಪಾಧ್ಯಕ್ಷ ಮಲಯ್ಯನಪುರ ಪುಟ್ಟೇಗೌಡ, ಹಸಿರು ಸೇನೆ ಅಧ್ಯಕ್ಷ ಕಮರಹಳ್ಳಿ ಪ್ರಸಾದ್, ಕಾರ್ಯದರ್ಶಿ ಯತವನ ಹಳ್ಳಿ ಸಿದ್ದರಾಜು, ಸೋಮಹಳ್ಳಿ ನವೀನ್, ಶಿವಕುಮಾರ್, ಹಕ್ಕಲಪುರ ಸ್ವಾಮಿ, ಪಡಗೂರು ಮಹದೇವ ಸ್ವಾಮಿ ಸೇರಿದಂತೆ ಹಲವು ಮಂದಿ ರೈತರು ಹಾಜರಿದ್ದರು

Continue Reading

Chamarajanagar

ಎಸ್ಎಸ್ಎಲ್ ಸಿ ಪತ್ರಿಕೆ-2 ಫಲಿತಾಂಶದಲ್ಲಿ ಕಬ್ಬಹಳ್ಳಿ ಸರ್ಕಾರಿ ಬಾಲಕರ ಪ್ರೌಢಶಾಲೆ ತಾಲೂಕಿಗೆ ಪ್ರಥಮ ಸ್ಥಾನ

Published

on

ಗುಂಡ್ಲುಪೇಟೆ: ಎಸ್ಎಸ್ಎಲ್ ಸಿ ಪತ್ರಿಕೆ-2 ಫಲಿತಾಂಶದಲ್ಲಿ ಸರ್ಕಾರಿ ಪ್ರೌಢಶಾಲೆಗಳ ಪೈಕಿ ಕಬ್ಬಹಳ್ಳಿ ಸರ್ಕಾರಿ ಬಾಲಕರ ಪ್ರೌಢಶಾಲೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದೆ.

ಕಬ್ಬಹಳ್ಳಿ ಶಾಲೆಯಲ್ಲಿ ಒಟ್ಟು 40 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 35 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.6 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದು,
ರಜತ್ 587 ಅಂಕಗಳನ್ನು ಗಳಿಸಿ ಶಾಲೆಗೆ ಮೊದಲ ಸ್ಥಾನ ಗಳಿಸಿದ್ದಾನೆ

ಒಟ್ಟು 87%ಫಲಿತಾಂಶ ಈ ಶಾಲೆಗೆ ಬಂದಿದ್ದು, ಈ ಫಲಿತಾಂಶ ಉತ್ತಮವಾಗಿ ಮೂಡಿ ಬರಲು ಶಿಕ್ಷಕರ ಕಾರ್ಯ ಹೆಚ್ಚಿನದ್ದಾಗಿದೆ. ಪ್ರತಿ ದಿನ ಸಂಜೆ ತರಗತಿಗಳನ್ನು ತೆಗೆದುಕೊಂಡು ಉತ್ತಮ ರೀತಿಯ ಬೋಧನೆ ಮಾಡಿ ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಶ್ರಮ ಬಹುಮುಖ್ಯವಾಗಿದೆ. ಶಾಲೆಯ ಮುಖ್ಯ ಶಿಕ್ಷಕರಾದ ಉಮೇಶ್ ಸಹ ಶಿಕ್ಷಕರಾದ ಪ್ರಶಾಂತ್, ವಿಜಯ್ ಕುಮಾರ್, ನಾಗೇಶ್, ಚೈತನ್ಯ, ಕವಿತಾ, ಶೃತಿ ಈ ಎಲ್ಲಾ ಶಿಕ್ಷಕರ ಶ್ರಮ ಸಾರ್ಥಕವಾಗಿದೆ. ಗ್ರಾಮಸ್ಥರು ಮತ್ತು ಪೋಷಕರ ಸಹಕಾರವೂ ಕಾರಣವಾಗಿದೆ.

ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಕಬ್ಬಹಳ್ಳಿಯಲ್ಲಿನ ವಿಧ್ಯಾರ್ಥಿಗಳ ಫಲಿತಾಂಶದಲ್ಲಿ 87%. ಸಮಾಜ ಕಲ್ಯಾಣ ಇಲಾಖೆಯ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಕ್ಕೆ 87% ಲಭಿಸಿದೆ.15 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು .3 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರನ್ನು ಇಲಾಖೆಯ ಸಹಾಯಕ ನಿರ್ದೇಶಕರಾದ ಮೋಹನ್ ಕುಮಾರ್, ಮೇಲ್ವಿಚಾರಕರಾದ ಪೃಥ್ವಿರಾಜ್‌ ಎಚ್ ಎಮ್.ಹಾಗೂ ಸಿಬ್ಬಂದಿ ಮತ್ತು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

Continue Reading

Chamarajanagar

ಎಸ್‌ಡಿವಿಎಸ್‌  ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಆಚರಣೆ

Published

on

ಯಳಂದೂರು: ತಾಲೂಕು ಕಾನೂನುಗಳ ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನ ಸೊಸೈಟಿ ಚಾಮರಾಜನಗರ ವತಿಯಿಂದ ಪಟ್ಟಣದ ಎಸ್ ಡಿ ವಿ ಎಸ್ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಯಳಂದೂರಿನ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಸುಜಾತಾ ರವರು ಉದ್ಘಾಟಿಸಿ ಮಾತನಾಡಿದರು.

ಮಹೇಶ್ ರವರು ಯೋಜನಾ ನಿರ್ದೇಶಕರು ಬಾಲಕಾರ್ಮಿಕ ಯೋಜನಾ ಸೊಸೈಟಿ ಚಾಮರಾಜನಗರ, ಹಿರಿಯ ಕಾರ್ಮಿಕ ನಿರೀಕ್ಷಕ ಪ್ರಸಾದ್ , ಸಿದ್ದಶೆಟ್ಟಿ ಮಕ್ಕಳ ರಕ್ಷಣಾ ಘಟಕ ಚಾಮರಾಜನಗರ, ಮುಖ್ಯ ಶಿಕ್ಷಕ ವೀರಭದ್ರ ಸ್ವಾಮಿ, ಶಿಕ್ಷಕರಾದ ಶಿವಮೂರ್ತಿ ಗುಂಬಳ್ಳಿ ಬಸವರಾಜು ಮಹದೇವ ಸೇರಿದಂತೆ ಇತರರು ಇದ್ದರು.

Continue Reading

Trending

error: Content is protected !!