Tech
ಅತ್ಯಂತ ಶಕ್ತಿಶಾಲಿ ಕ್ಯಾಮೆರಾ ಹೊಂದಿರುವ ಮಧ್ಯಮ ಬೆಲೆಯ ವಿವೋ ಕಂಪನಿಯ Vivo V50 ಹೊಸ ಫೋನ್ ಬಿಡುಗಡೆ : ಬೆಲೆ ಎಷ್ಟು?

Vivo V50 Mobile detail’s : ಮೊಬೈಲಗಳಲ್ಲಿ ಉತ್ತಮ ಕ್ಯಾಮೆರಾವನ್ನು ಗ್ರಾಹಕರಿಗೆ ನೀಡುವಲ್ಲಿ ಯಶಸ್ವಿಯಾಗಿರುವ ವಿವೋ ಕಂಪನಿಯು ಇದೀಗ ಮತ್ತೊಂದು V ಸರಣಿಯ “Vivo V50” ಎಂಬ ಹೆಸರಿನಲ್ಲಿ ಹೊಸ ಮೊಬೈಲ್ ಒಂದನ್ನು ಭಾರತದಲ್ಲಿ ಶೀಘ್ರವೇ ಬಿಡುಗಡೆ ಮಾಡಲಿದೆ.
ಇದೆ ಫೆಬ್ರವರಿ 17 ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಮುನ್ನ ಈ ಫೋನ್ ಖರೀದಿಸಲು ಗ್ರಾಹಕರಿಗೆ ಪೂರ್ವ ಬುಕ್ಕಿಂಗ್ ನ ವಿಶೇಷ ಆಫರ್ ಘೋಷಿಸಿದ್ದು, ಫೆಬ್ರವರಿ 16ನೇ ತಾರೀಕಿನವರೆಗೆ ಇದಕ್ಕೆ ಅವಕಾಶವಿದೆ.
ಪೂರ್ವ ಬುಕ್ಕಿಂಗ್ ನಲ್ಲಿ ಘೋಷಿಸಿದ ಆಫರ್ ಗಳು :
• 1 ವರ್ಷದ ವಿಸ್ತೃತ ಖಾತರಿಯನ್ನು (Extended warranty) ಉಚಿತವಾಗಿ ಘೋಷಿಸಿದೆ.
• ಅದರ ಜೊತೆಗೆ 1 ವರ್ಷದ ಸ್ಕ್ರೀನ್ ಡ್ಯಾಮೇಜ್ ಪ್ರೊಟೆಕ್ಷನ್ ಪ್ಲಾನ್ ಅನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ಘೋಷಿಸಿದೆ.
ವಿವೋ ವಿ50 ಮೊಬೈಲ್ ನ ಬೆಲೆ ಎಷ್ಟಿರಲಿದೆ?
ಈ ಹೊಸ ಸರಣಿಯ ಹಿಂದಿನ ಸರಣಿ ವಿವೋ ವಿ40 ಮೊಬೈಲ್ ನ ಬೆಲೆಯೂ 34,999ರೂ. ಇತ್ತು. ಇದೆ ಬೆಲೆಯ ವ್ಯಾಪ್ತಿಯಲ್ಲಿ ವಿವೋ ವಿ50 ಮೊಬೈಲ್ ಅನ್ನು ಬಿಡುಗಡೆ ಮಾಡುವ ಸಂಪೂರ್ಣ ಸಾಧ್ಯತೆಗಳಿದ್ದು, ಇದರ ಬೆಲೆಯೂ 40,000ರೂ. ನ ಆಸು ಪಾಸಿನಲ್ಲಿರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್ ವಿಶೇಷತೆಗಳು :
ಇದು 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದ್ದು, 90w ನ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.
ಯಾವ ಬಣ್ಣದಲ್ಲಿ ಲಭ್ಯವಿದೆ?
ಸದ್ಯಕ್ಕೆ ಇದು ರೋಸ್ ರೆಡ್, ಸ್ಟಾರಿ ನೈಟ್ ಹಾಗೂ ಟೈಟಾನಿಯಂ ಗ್ರೇ ಬಣ್ಣದಲ್ಲಿ ಲಭ್ಯವಿದೆ.
Tech
ಓಲಾ ಎಲೆಕ್ಟ್ರಿಕ್ ಸ್ಕೂಟಿಯ ಬೆಲೆ ಭರ್ಜರಿ 26 ಸಾವಿರ ರೂ. ಇಳಿಕೆ.. ಈ ರಿಯಾಯಿತಿ ಇನ್ನೂ ಕೆಲವೇ ದಿನ ಮಾತ್ರ

Discount on Ola Electric Scooty : ವಿದ್ಯುತ್ ಚಾಲಿತ ವಾಹನ ಮಾರಾಟದಲ್ಲಿ ಪ್ರಸಿದ್ಧವಾಗಿರುವ ಓಲಾ ಕಂಪನಿಯು ಹೆಸರುವಾಸಿಯಾಗಿದ್ದು, ಇದು ಸದ್ಯಕ್ಕೆ ಹೋಳಿ ಹಬ್ಬದ ಪ್ರಯುಕ್ತವಾಗಿ ವಿದ್ಯುತ್ ಚಾಲಿತ ಸ್ಕೂಟರ್ ನ ಬೆಲೆಯನ್ನು ಭರ್ಜರಿ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ನೀಡುತ್ತಿದೆ.
ಈ ಆಫರ್ ಕೇವಲ ಇನ್ನೂ ಕೆಲವೇ ದಿನಗಳವರೆಗೆ ಮಾತ್ರ ಇದ್ದುದ್ದು, ನಾವು ಎಲೆಕ್ಟ್ರಿಕ್ ಸ್ಕೂಟಿ ಖರೀದಿಸಬೇಕು ಎಂಬ ಆಸೆ ಇಟ್ಟುಕೊಂಡಿರುವವರಿಗೆ ಇದು ಸುವರ್ಣ ಅವಕಾಶವಾಗಿದೆ.
ಅಂತಿಮ ದರ ಎಷ್ಟು?
ಹೋಳಿ ಹಬ್ಬದ ಪ್ರಯುಕ್ತವಾಗಿ ಓಲಾ ಕಂಪನಿಯ ಎಸ್ 1 ಏರ್ ಸ್ಕೂಟರ್ ನ ಬೆಲೆಯಲ್ಲಿ ಭರ್ಜರಿ ₹26,750 ರೂಪಾಯಿ ರಿಯಾಯಿತಿ ನೀಡಿದ್ದು ಸದ್ಯಕ್ಕೆ ಇದು ಗ್ರಾಹಕರಿಗೆ ಕೇವಲ 89,999 ರೂ. ಗೆ ದೊರೆಯುತ್ತಿದೆ.
ಅದರಲ್ಲಿಯೇ ಮತ್ತೊಂದು ಮಾದರಿಯ ಸ್ಕೂಟರ್, ಎಸ್ 1 ಎಕ್ಸ್ ಪ್ಲಸ್ (Gen 2) ಸ್ಕೂಟಿಯ ಬೆಲೆಯಲ್ಲಿ 22 ಸಾವಿರ ರೂ. ರಿಯಾಯಿತಿ ಘೋಷಿಸಿದ್ದು, ಇದು ಮಾರುಕಟ್ಟೆಯಲ್ಲಿ 82,999ರೂ. ಗೆ ಲಭ್ಯವಿದೆ.
ಅದೇ ರೀತಿ ಎಸ್ 1 ಸರಣಿ ಮತ್ತು ಇತ್ತೀಚಿಗೆ ಹೊಸದಾಗಿ ಬಿಡುಗಡೆಯಾಗಿರುವಂತಹ ಎಸ್ 1 ಜೆನ್ 3 ಸರಣಿಯ ಸ್ಕೂಟಿ ದರದಲ್ಲಿ 25,000 ರೂ. ವರೆಗೆ ರಿಯಾಯಿತಿ ಪ್ರಕಟಿಸಲಾಗಿದ್ದು ಗ್ರಾಹಕರಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.
ಈ ರಿಯಾಯಿತಿ ಎಲ್ಲಿಯವರೆಗೆ ಇರಲಿದೆ?
ಈ ರಿಯಾಯಿತಿಯನ್ನು ಕೇವಲ ಹೋಳಿ ಹಬ್ಬದ ಪ್ರಯುಕ್ತವಾಗಿ ನೀಡಿದ್ದು ಇದು ಕೇವಲ ಮಾರ್ಚ್ 17ರ ವರೆಗೆ ಗ್ರಾಹಕರಿಗೆ ಲಭ್ಯವಿರಲಿದೆ ಎಂದು ಕಂಪನಿಯು ಪ್ರಕಟಿಸಿದೆ.
Tech
ಸುಲಭವಾಗಿ ಮೊಬೈಲ್ ನಲ್ಲಿ ಸಾಲ ಸಿಗುತ್ತದೆ ಎಂದು ಮೋಸ ಹೋಗದಿರಿ : ಆನ್ಲೈನ್ ಲೋನ್ ಪಡೆಯುವಾಗ ಈ ವಿಷಯಗಳು ನೆನಪಿರಲಿ

Things to keep in mind before taking Online Loans : ತಂತ್ರಜ್ಞಾನ ಹೆಚ್ಚಾದಂತೆ ಮಾನವನಿಗೆ ಪ್ರತಿಯೊಂದು ಕೂಡ ಸುಲಭವಾಗಿ ಸಿಗುತ್ತಿದೆ. ನಿಮಗೆ ಗೊತ್ತಿರುವ ಹಾಗೆ ಈಗಿನ ದಿನಗಳಲ್ಲಿ ಕೇವಲ ನಿಮ್ಮ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಮುಖಾಂತರ ನೀವು ನಿಮ್ಮ ಮೊಬೈಲ್ ನಲ್ಲಿಯೇ ಕೆಲವೇ ಕ್ಷಣಗಳಲ್ಲಿ ಲೋನ್ ಪಡೆಯುವ ಅವಕಾಶವಿದೆ.
ತುರ್ತು ಸಂದರ್ಭದಲ್ಲಿ ಹಣಕಾಸಿನ ಅಗತ್ಯತೆ ಹಲವು ಜನರಿಗೆ ಇರುವುದನ್ನು ಆಧಾರವಿಟ್ಟುಕೊಂಡು ಲೋನ್ ಕೊಡುವ ಸೋಗಿನಲ್ಲಿ ಜನಸಾಮಾನ್ಯರಿಗೆ ಸೈಬರ್ ವಂಚಕರು ವಂಚನೆ ಮಾಡುತ್ತಿದ್ದಾರೆ. ಆದ್ದರಿಂದ ನಾವು ಮೊಬೈಲ್ನಲ್ಲಿ ಆನ್ಲೈನ್ ಮುಖಾಂತರ ಯಾವುದೇ ರೀತಿಯ ಲೋನ್ ಗೆ ಅಪ್ಲೈ ಮಾಡುವ ಸಮಯದಲ್ಲಿ ಹಾಗೂ ಲೋನ್ ಪಡೆದ ನಂತರ ಕೆಲವೊಂದಿಷ್ಟು ಸಣ್ಣ ಸಣ್ಣ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕ.
ಇಂತಹ ಮಾತುಗಳಿಗೆ ಬಲಿಯಾಗದಿರಿ?
ಯಾವುದೇ ಸೈಬರ್ ವಂಚಕರು ಗ್ರಾಹಕರಿಗೆ ಮೊದಲು ಅಸೆ ಹುಟ್ಟಿಸುತ್ತಾರೆ. ಅದು ಹೇಗೆಂದರೆ ಹಲವಾರು ಜನರ ವೀಕ್ನೆಸ್ ಗಳಾದ, ಕಡಿಮೆ ಸಿಬಿಲ್ ಸ್ಕೋರ್, ಯಾವುದೇ ದಾಖಲೆಗಳಿಲ್ಲದೆ ಸಾಲ ಎಂಬ ಇತ್ಯಾದಿ ಮಾತುಗಳಿಂದ ನಿಮ್ಮ ಆಕರ್ಷಸಿ ಸಾಲ ತೆಗೆದುಕೊಳ್ಳುವ ಹಾಗೆ ಮಾಡುತ್ತಾರೆ ಅಥವಾ ಅವರ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಹಾಗೆ ನಿಮ್ಮಲ್ಲಿ ಆಸೆ ಹುಟ್ಟಿಸುತ್ತಾರೆ.
ಅವರ ಆಪ್ ಗಳು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಆದ ಬಳಿಕ ಅವರ ಅಸಲಿ ಆಟ ಶುರು ಆಗುತ್ತದೆ. ಏಕೆಂದರೆ ಆ ಆಪ್ ಗಳು ಸಾಮಾಜಿಕ ಜಾಲತಾಣದ ಮುಖಾಂತರ ಹರಿದಾಡಿರುವ APK ಫೈಲಗಳಾಗಿರುತ್ತವೆ. ಇದರಿಂದ ಅವರು ಸುಲಭವಾಗಿ ನಿಮ್ಮ ಮೊಬೈಲ್ ಹ್ಯಾಕ್ ಮಾಡಬಹುದು ಹಾಗೂ ನಿಮ್ಮ ಹಲವಾರು ಗೌಪ್ಯತೆಯ ಮಾಹಿತಿಗಳನ್ನು ಪಡೆದುಕೊಳ್ಳಬಹುದು.
ಆದ್ದರಿಂದ ಯಾವುದೇ ರೀತಿಯ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಮೊದಲು ಬಹುಜಾಗೃತರಾಗಿರಿ. ವಿಪರ್ಯಾಸ ಏನೆಂದರೆ ಈ ಲೋನ್ ಅಪ್ ಗಳು ಆಪ್ ನ ಮೇಲೆ ನಂಬಿಕೆ ಬರಲಿ ಎಂಬ ಉದ್ದೇಶದಿಂದ ಮೊದಲು ಸಣ್ಣ ಪುಟ್ಟ ಮೊತ್ತದ ಸಾಲ ನೀಡಿ ಬಿಡುತ್ತವೆ. ನಂತರದಲ್ಲಿ ಜನಸಾಮಾನ್ಯರು ನಂಬಿಕಸ್ತ ಸಾಲ ಕೊಡುವ ಕಂಪನಿ ಎಂದು ನಂಬಿ ಮೋಸ ಹೋಗುತ್ತಾರೆ.
ಇವರು ಹೇಗೆ ನಿಮಗೆ ಮೋಸ ಮಾಡುತ್ತಾರೆ ಎಂದರೆ, ಸಣ್ಣ ಪುಟ್ಟ ಸಾಲ ನೀಡಿದ ನಂತರ ನಿಮಗೆ ಸ್ವಲ್ಪ್ ದೊಡ್ಡ ಮೊತ್ತದ ಸಾಲ ನೀಡುತ್ತಾರೆ. ಮೊದಲಿಗೆ ನಿಮಗೆ ಹೇಳುವ ಬಡ್ಡಿ ದರವೆ ಬೇರೆ, ಮರುಪಾವತಿ ಸಮಯದಲ್ಲಿ ನಿಮ್ಮ ಸಾಲದ ಮೇಲೆ ವಿಧಿಸುವ ಬಡ್ಡಿದರವೆ ಬೇರೆ. ನಂತರ ಈ ಬಡ್ಡಿ ಹಾಗೂ ಅಸಲಿನ ಮರುಪಾವತಿಗಾಗಿ ನಿಮ್ಮನ್ನು ಬೆನ್ನತ್ತುತ್ತಾರೆ.
ಗಳೇಒಂದು ವೇಳೆ ನೀವು ಅವರಿಗೆ ಮರುಪಾವತಿ ಮಾಡದೇ ಇದ್ದಲ್ಲಿ, ನಿಮ್ಮ ಡೇಟಾ ಕಳ್ಳತನ. ಅದು ಹೇಗೆಂದರೆ ಅವರ ಅಪ್ ಡೌನ್ಲೋಡ್ ಮಾಡಿಕೊಂಡಾಗ ನಿಮ್ಮ ಎಲ್ಲಾ ಮಾಹಿತಿಯನ್ನು ಉಪಯೋಗಿಕೊಳ್ಳಲು ನೀಮಗೆ ಗೊತ್ತಿಲ್ಲದೇ ನೀವೆ ಅವರಿಗೆ ಅನುಮತಿ ನೀಡಿರುತ್ತಿರಿ. ನಿಮ್ಮ ಗೌಪ್ಯತೆಯ ಫೋಟೋ ಹಾಗೂ ಇತ್ಯಾದಿ ವೈಯಕ್ತಿಕ ಮಾಹಿತಿಯನ್ನು ಇಟ್ಟುಕೊಂಡು ನಿಮಗೆ ಆಟ ಆಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ನೀವು ಮಾಧ್ಯಮಗಳಲ್ಲಿ ನೋಡುತ್ತಿರಬಹುದು, ಹಲವಾರು ಯುವಕ ಯುವತಿಯರು ಇಂತಹ ಬಲೆಗಳಿಗೆ ಬಿದ್ದು ತಮ್ಮ ಜೀವ ಮತ್ತು ಜೀವನವನ್ನೇ ಕಳೆದುಕೊಂಡಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.
ಹಾಗಿದ್ದರೆ ಇಂತಹ ಸೈಬರ್ ವಂಚನೆಗಳಿಂದ ಸುರಕ್ಷವಾಗಿರುವುದು ಹೇಗೆ?
ನೀವು ಯಾವುದೇ ರೀತಿಯ ತುರ್ತು ಸಮಯದಲ್ಲಿ ಹಣಕಾಸಿನ ಅಗತ್ಯ ಇದ್ದಲ್ಲಿ ಆನ್ಲೈನ್ ಲೋನ್ ಪಡೆಯುವುದರ ಬದಲಾಗಿ ನಿಮ್ಮ ಆಪ್ತರಿಂದ ಸಹಾಯ ಪಡೆಯಲು ಮೊದಲನೇ ಆದ್ಯತೆ ನೀಡಿ. ಆನ್ಲೈನ್ ಲೋನ್ ಪಡೆಯಲೇ ಬೇಕು ಎಂಬ ಸಂಧರ್ಭದಲ್ಲಿ ನಿಮಗೆ ಲೋನ್ ನೀಡುವ ಮೈಕ್ರೋ ಫೈನಾನ್ಸ್ ಅಪ್ ಗಳು RBI ನಿಂದ ಮಾನ್ಯತೆ ಪಡೆದಿದೆಯೋ ಇಲ್ಲವೋ ಎಂಬುದನ್ನು ಖಚಿತಪಡೆಸಿಕೊಳ್ಳಿ. ಒಂದು ವೇಳೆ ನೀವು ಪ್ಲೇ ಸ್ಟೋರಗಳಲ್ಲಿ ಆಪ್ ಡೌನ್ಲೋಡ್ ಮಾಡಿಕೊಳ್ಳುವಾಗ ರಿವ್ಯೂಗಳನ್ನು ಒಂದು ಸಲ ಓದಿರಿ.
ಯಾವುದೇ ಅಪ್ ಗಳನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ನಿಮ್ಮ ಗೌಪ್ಯತೆಗೆ ಸಂಬಂದಿಸಿದ ಯಾವುದೇ ರೀತಿಯ ಅನಗತ್ಯ ಅನುಮತಿ ನೀಡಲೆಬೇಡಿ. ನಿಮಗೆ ಇಂತಹ ಯಾವುದೇ ಅನುಮಾನ ಬಂದಲ್ಲಿ ತಕ್ಷಣವೇ ಸೈಬರ್ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ.
Tech
ಹ್ಯುಂಡೈ ಕಂಪನಿಯ ಎರಡು ಹೊಸ ವೆರಿಯಂಟ್ ಬಿಡುಗಡೆ ಮಾಡಿದ್ದು, ಕಾರು ಪ್ರಿಯರಿಗೆ ಭರ್ಜರಿ ಗಿಫ್ಟ್ ನೀಡಿದೆ!

Hyundai Creta New Variants Released : ಭಾರತದಲ್ಲಿ ಕಾರು ಪ್ರಿಯರ ಭರವಸೆಯ ಕಂಪನಿಯಾದ ಹ್ಯುಂಡೈ, ಎರಡು ಹೊಚ್ಚ ಹೊಸ ವೆರಿಯಂಟ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಹಲವು ವೈಶಿಷ್ಟಗಳನ್ನು ಹೊಂದಿವೆ. ಇದರ ಬೆಲೆ ಎಷ್ಟು? ಇದರ ವಿಶೇಷತೆಗಳೇನು ಎಂಬ ಮಾಹಿತಿ ಇಲ್ಲಿದೆ..
ಹ್ಯುಂಡೈ ಕ್ರೆಟಾ ಕಾರ್ ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಗ್ರಾಹಕರ ಮನಗೆದ್ದಿದೆ. ಇದನ್ನು ಅರಿತ ಕಂಪನಿಯು 2 ಹೊಸ ವೆರಿಯಂಟ್ ಗಳನ್ನು ಬಿಡುಗಡೆ ಮಾಡಿದೆ.
ಬಿಡುಗಡೆಯಾದ ಹೊಸ ವೆರಿಯಂಟ್ ಗಳ ಹೆಸರು :
1. ಹ್ಯುಂಡೈ ಕ್ರೆಟಾ ಎಸ್‌ಯುವಿಯ ‘ಇಎಕ್ಸ್ (ಓ) – Hyundai Creta SUV EX (O)
2. ಹ್ಯುಂಡೈ ಕ್ರೆಟಾ ಎಸ್‌ಯುವಿಯ ‘ಎಸ್ (ಓ) – Hyundai Creta SUV S(O)
ಹ್ಯುಂಡೈ ಕ್ರೆಟಾ ಎಸ್‌ಯುವಿಯ ‘ಇಎಕ್ಸ್ (ಓ) ನ ವಿವರಗಳು :
ಹ್ಯುಂಡೈನ ಕ್ರೆಟಾ (Hyundai Creta) ಎಸ್‌ಯುವಿಯ ಹೊಸ ‘ಇಎಕ್ಸ್ (ಒ)’ ರೂಪಾಂತರದ ಎಕ್ಸ್ ಶೋರೂಮ್ ಬೆಲೆಯು 12.97 ಲಕ್ಷ ಇದ್ದು, ಇದು ಹಲವು ಆಕರ್ಷಕ ವೈಶಿಷ್ಟಗಳನ್ನು ಹೊಂದಿದೆ. ಪ್ರಮುಖವಾದ ವಿಶೇಷತೆ ಏನೆಂದರೆ ಇದು ಪನೋರಮಿಕ್ ಸನ್‌ರೂಫ್ ಹೊಂದಿದ್ದು, ಎಲ್ಇಡಿ ರೀಡಿಂಗ್ ಲ್ಯಾಂಪ್‌ಗಳನ್ನು ಒಳಗೊಂಡಿದೆ.
ಹ್ಯುಂಡೈ ಕ್ರೆಟಾ ಎಸ್‌ಯುವಿಯ ‘ಎಸ್ (ಓ) ನ ವಿವರಗಳು :
ಹ್ಯುಂಡೈ ಕ್ರೆಟಾದ ಮತ್ತೊಂದು ವೆರಿಯಂಟ್ ನ ಎಕ್ಸ್ ಶೋರೂಂ ಬೆಲೆಯು 16.18 ಲಕ್ಷ ರೂ. ಇದ್ದು, ವೆಂಟಿಲೇಟೆಡ್ ಫ್ರೆಂಟ್ ಸೀಟ್ ಗಳನ್ನು ಹೊಂದಿದೆ. ಹೊಂದಾಣಿಕೆ ಮಾಡಿಕೊಳ್ಳಬಹುದಾದ 8-ವೇ ಪವರ್ ಡ್ರೈವಿಂಗ್ ಸೀಟ್, ಪ್ರಯಾಣಿಕರಿಗೆ ಆಕರ್ಷಕಗೊಳ್ಳುವ ಸೌಂಡ್ ಸಿಸ್ಟಮ್ ಇದು ಹೊಂದಿದೆ.
ಮೈಲೇಜ್ ಎಷ್ಟು? ಯಾವ ಯಾವ ಬಣ್ಣಗಳ ಆಯ್ಕೆಗಳಿವೆ?
ಈ ಮಾದರಿಯ ಕಾರ್ ಗಳು ಸಾಮಾನ್ಯವಾಗಿ 17.4 ರಿಂದ 21.8 km ವರೆಗೆ ಮೈಲೇಜ್ ನೀಡುತ್ತದೆ. ಇವುಗಳು ಟೈಟಾನ್ ಗ್ರೇ, ರೇಂಜರ್ ಖಾಕಿ, ಅಬಿಸ್ ಬ್ಲಾಕ್ ಹಾಗೂ ಅಟ್ಲಾಸ್ ವೈಟ್ ಬಣ್ಣಗಳೊಂದಿಗೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಿವೆ.
ಇತರೆ ವಿಶೇಷತೆಗಳು : ಇವು 5 ಜನರ ಸಾಮರ್ಥ್ಯದ ಕಾರ್ ಗಳಾಗಿದ್ದು, ದೂರದ ಪ್ರಯಾಣಕ್ಕೆ ಅವಶ್ಯಕತೆ ಇರುವ ಹೆಚ್ಚಿನ ಬ್ಯಾಗ್, ಲಗೇಜ್ ತೆಗೆದುಕೊಂಡು ಹೋಗಲು ಹೆಚ್ಚು ಸಾಮರ್ಥ್ಯದ ಭೂಟ್ ಸ್ಪೇಸ್ ಹೊಂದಿವೆ. ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳನ್ನು ಹೊಂದಿದೆ.
ಒಟ್ಟಾರೆಯಾಗಿ ಸುರಕ್ಷತೆ ಹಾಗೂ ಗ್ರಾಹಕರಿಗೆ ಆಕರ್ಷಕರ ಕಾರ್ ಇದಾಗಿದ್ದು, ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
-
Mandya7 hours ago
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ
-
Hassan15 hours ago
ಹಾಸನದಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
-
Mandya11 hours ago
ಜೆಎಸ್ಎಸ್ ಕಾಲೇಜಿನಲ್ಲಿ ಪತ್ರಿಕಾ ಬರಹ ಕುರಿತು ಕಾರ್ಯಾಗಾರ
-
Kodagu12 hours ago
ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
-
Mandya9 hours ago
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ
-
Kodagu7 hours ago
ಮಡಿಕೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರ
-
Hassan14 hours ago
ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಎಲ್ಲಾರೂ ಕೈಜೋಡಿಸಿ: ಡಿಸಿ ಸಿ. ಸತ್ಯಭಾಮ
-
Kodagu10 hours ago
ನಿವೃತ್ತ ಶಿಕ್ಷಕಿಯಿಂದ ಕಕ್ಕಬ್ಬೆ ಯುವಕಪಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಾರಣ ಭಾಗ್ಯ