State
ವಿಶ್ವಕರ್ಮ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
ಸಂವಿಧಾನಕ್ಕೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ
ಬೆಂಗಳೂರು, ಡಿಸೆಂಬರ್ 01: ವಿಶ್ವಕರ್ಮ ಸಮುದಾಯದ ಮೂಲಪುರುಷ ವಿಶ್ವಕರ್ಮ ಅವರ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಸಂವಿಧಾನಕ್ಕೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಅವರು ಇಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ಹಾಗೂ ಜಕಣಾಚಾರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇತಿಹಾಸ ಎಲ್ಲರಿಗೂ ತಿಳಿಯಬೇಕು. ಇತಿಹಾಸ ತಿಳಿಯದವರು ಇತಿಹಾಸ ರಚಿಸಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರತಿಯೊಬ್ಬ ಚರಿತ್ರಾರ್ಹ ವ್ಯಕ್ತಿಗಳ ಅಧ್ಯಯನ ವಾಗಬೇಕು ಎಂದರು.

ರಾಜ್ಯಮಟ್ಟದ ಜಯಂತಿಗಳನ್ನು ಬೆಂಗಳೂರಿನಲ್ಲಿಯೇ ಆಚರಿಸಬೇಕು
ಅಮರಾಶಿಲ್ಪಿ ಜಕಣಾಚಾರಿ ಸಂಸ್ಮರಣೆ 2019 ರಲ್ಲಿ ಪ್ರಾರಂಭವಾದರೂ ಕೋವಿಡ್ ಇದ್ದುದರಿಂದ ಆಚರಿಸಲಾಗಲಿಲ್ಲ. ಕಳೆದ ವರ್ಷ ವಿಜಯನಗರ ಜಿಲ್ಲೆಯಲ್ಲಿ ಆಚರಿಸಲಾಗಿತ್ತು ಎಂದರು.
ರಾಜ್ಯಮಟ್ಟದ ಜಯಂತಿಗಳನ್ನು ಬೆಂಗಳೂರಿನಲ್ಲಿಯೇ ಆಚರಿಸಬೇಕೆಂದು ಸೂಚಿಸಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಆಚರಿಸಲಾಗುತ್ತದೆ ಎಂದರು.
ಕಾಲ್ಪನಿಕ ವ್ಯಕ್ತಿ ಎನ್ನುವುದು ಸುಳ್ಳು
ಜಕಣಾಚಾರಿ ಇಡೀ ರಾಜ್ಯಕ್ಕೆ ಗೊತ್ತಿರುವವರು. ಅವರ ಕಾಲ್ಪನಿಕ ವ್ಯಕ್ತಿ ಎನ್ನುವುದು ಸುಳ್ಳು. ಜಕಣಾಚಾರಿ ವಿಶ್ವಕರ್ಮ ಸಮಾಜದಲ್ಲಿ ಹುಟ್ಟಿದವರು. ಅವರು ಬೆಳೆದ ಎತ್ತರ ಜನರಿಗೆ ತಿಳಿಯಬಾರದೆಂದು ಇತಿಹಾಸ ತಿರುಚುವ ಪ್ರಯತ್ನ ಮಾಡಲಾಗಿದೆ.
ಪಟ್ಟಭದ್ರ ಹಿತಾಸಕ್ತಿಗಳು ಈ ಕೆಲಸ ಮಾಡಿದ್ದರೂ ಮಾಡಿರಬಹುದು. ಅಮರ ಶಿಲ್ಪಿ ಜಕಣಾಚಾರಿ ಇತಿಹಾಸ ನಮ್ಮ ಮುಂದಿದೆ ಎಂದರು.

ವಿಶ್ವಕರ್ಮ ಅಭಿವೃದ್ಧಿ ನಿಗಮ, ವಿಶ್ವಕರ್ಮ ಜಯಂತಿಯನ್ನು ಆಚರಿಸುವ ತೀರ್ಮಾನ ನಮ್ಮ ಸರ್ಕಾರವೇ ಹಿಂದೆ ಮಾಡಿತ್ತು ಎಂದು ಸ್ಮರಿಸಿದರು.
ಜಾತ್ಯಾತೀತ ಸಮಸಮಾಜ ನಿರ್ಮಾಣ
ನಮ್ಮ ಸಂವಿಧಾನ ಜಾತಿ ರಹಿತ, ವರ್ಗರಹಿತ, ಜಾತ್ಯಾತೀತ ಸಮಸಮಾಜ ನಿರ್ಮಾಣ ಮಾಡಬೇಕೆಂದು ಹೇಳಿದೆ. ಸ್ವಾರ್ಥಕ್ಕಾಗಿ ಸಮಾಜದಲ್ಲಿ ಅಸಮಾನತೆ ಉಂಟಾಗಿದೆ. ಶತಶತಮಾನಗಳಿಂದ ಶೂದ್ರರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಅಸಮಾನತೆಗೆ ಬಲಿಯಾಗಿರುವ ವರ್ಗದ ಜನರಿಗೆ ಆರ್ಥಿಕ ಶಕ್ತಿ ತುಂಬಿ ಅವರು ಮುಖ್ಯವಾಹಿನಿಗೆ ಸೇರುವಂತಾಗಬೇಕು. ಎಲ್ಲರಿಗೂ ಅವಕಾಶ ಒದಗಿಸುವುದು ಸರ್ಕಾರದ ಜವಾಬ್ದಾರಿ ಹಾಗೂ ಕರ್ತವ್ಯ ಎಂದರು.
ಸಂವಿಧಾನಕ್ಕೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸಬೇಕು
ಚಲನಶೀಲತೆ ಇಲ್ಲದ ಸಮಾಜದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿಯೇ ಸಂವಿಧಾನದ ಪೀಠಿಕೆವನ್ನು ಓದಿ ಅರ್ಥಮಾಡಿಕೊಂಡು ಅದರಂತೆ ನಡೆಯಬೇಕು. ಸಂವಿಧಾನದ ವಿರೋಧಿಗಳು ಸಮಾಜದಲ್ಲಿ ಬದಲಾವಣೆ ಬಯಸುವುದಿಲ್ಲ. ಸಂವಿಧಾನದ ಆಶಯಗಳನ್ನು ಈಡೇರಿಸಬೇಕು. ಇದಕ್ಕೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ನಾಲ್ಕು ಶಿಲ್ಪಿಗಳಿಗೆ ಜಕಣಾಚಾರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಾಸನದ ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠಾಧಿಪತಿ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಇಲಾಖೆ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಸೇರಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
Education
ಅಂಚೆ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ : ಆಕರ್ಷಕ ಸಂಬಳ
IPPB Recruitment 2025 : ಕೇಂದ್ರ ಸರ್ಕಾರಿ ಉದ್ಯೋಗಗಳಿಗಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಈ ನೇಮಕಾತಿಗೆ ಸಂಬಂದಿಸಿದ ಹುದ್ದೆಗಳ ವಿವರ, ಅರ್ಹತೆಗಳ ವಿವರ, ಸಂಬಳದ ವಿವರ, ವಯೋಮಿತಿ ವಿವರ, ಅರ್ಜಿ ಶುಲ್ಕ ಸೇರಿದಂತೆ ಇತ್ಯಾದಿ ಮಾಹಿತಿ ಇಲ್ಲಿದೆ.
ಹುದ್ದೆಗಳ ವಿವರ :
• ಡೆಪ್ಯೂಟಿ ಜನರಲ್ ಮ್ಯಾನೇಜರ್ – 01 ಹುದ್ದೆ
• ಚೀಪ್ ಆಪರೇಟಿಂಗ್ ಆಫೀಸರ್ – 01 ಹುದ್ದೆ
• ಚೀಪ್ HR ಆಫೀಸರ್ – 01 ಹುದ್ದೆ
• ಜನರಲ್ ಮ್ಯಾನೇಜರ್ – 01 ಹುದ್ದೆ
• ಚೀಫ್ ಕಾಂಪ್ಲೆಯನ್ಸ್ ಆಫೀಸರ್ – 01 ಹುದ್ದೆ

ಶೈಕ್ಷಣಿಕ ವಿದ್ಯಾರ್ಹತೆಗಳ ವಿವರ :
• ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ ಹುದ್ದೆಗೆ ಸಿಎ ಮುಗಿಸಿರಬೇಕು.
• ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಯಾವುದಾದರೂ ಒಂದು ಪದವಿ ಮುಗಿಸಿರಬೇಕು.
• ಚೀಫ್ ಕಾಂಪ್ಲೆಯನ್ಸ್ ಆಫೀಸರ್ ಹುದ್ದೆಗೆ ಸಿಎ/ MBA, ಅಥವಾ ಸ್ನಾತಕೋತ್ತರ ಪದವಿ ಮುಗಿಸಿರಬೇಕು.
• ಚೀಪ್ HR ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು HR ವಿಭಾಗದಲ್ಲಿ MBA ಮುಗಿಸಿರಬೇಕು.
• ಚೀಪ್ ಆಪರೇಟಿಂಗ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದಾದರೂ ಒಂದು ಪದವಿ ಮುಗಿಸಿರಬೇಕು.
ಸಂಬಳ ಎಷ್ಟು ಸಿಗಲಿದೆ?
ವಿವಿಧ ಹುದ್ದೆಗಳಿಗೆ ಅನುಗುಣವಾಗಿ ವಾರ್ಷಿಕ ವೇತನ ಪ್ಯಾಕೇಜ್ ರೂ. 3,16,627 ರಿಂದ ರೂ. 4,36,271 ರವರೆಗೆ ಸಿಗಲಿದೆ.

ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ :
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ – 150ರೂ.
• ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – 750ರೂ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 22 ಆಗಸ್ಟ್ 2025
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ – https://ibpsonline.ibps.in/ippbljul25/
State
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ದೂರುದಾರನ ಹಿಂದಿರುವ ವ್ಯಕ್ತಿಗಳಿಗೆ ನೋಟಿಸ್ ನೀಡಲು SIT ಸಿದ್ಧತೆ
ಬೆಂಗಳೂರು: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನ ಹಿಂದಿರುವ ವ್ಯಕ್ತಿಗಳಿಗೆ ವಿಶೇಷ ತನಿಖಾ ತಂಡ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ತನಿಖೆ ನಡೆಸಿತ್ತು. 15 ದಿನಗಳ ಕಾಲ ಭಾರೀ ಮಳೆಯ ಮಧ್ಯೆಯೂ 17 ಪಾಯಿಂಟ್‌ಗಳಲ್ಲಿ ಉತ್ಖನನ ನಡೆಸಿದರೂ ದೂರುದಾರ ಮಾಸ್ಕ್ ಮ್ಯಾನ್ ಹೇಳಿದ್ದ ಪಾಯಿಂಟ್ 6 ಬಿಟ್ಟು ಬೇರೆ ಕಡೆ ಮೂಳೆಗಳು ಹೂತಿದ್ದ ಮೂಳೆಗಳು ದೊರೆತಿಲ್ಲ.

ಮೂಳೆಗಳು ಸಿಗದ ಕಾರಣ ಉತ್ಖನನ ಕಾರ್ಯವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿದೆ. ದೂರುದಾರ ವ್ಯಕ್ತಿ ಇನ್ನೂ 13 ಪಾಯಿಂಟ್ ತೋರಿಸುತ್ತೇನೆ. ಅಲ್ಲೂ ಉತ್ಖನನ ಮಾಡಿ ಎಂದು ಒತ್ತಾಯಿಸಿದರೂ ಅಧಿಕಾರಿಗಳು ಆತನನ್ನೇ ಎಸ್‌ಐಟಿ ಕಚೇರಿಯಲ್ಲಿ ಕೂರಿಸಿ 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಎಸ್‌ಐಟಿ ಅಧಿಕಾರಿಗಳು, ಬುರುಡೆ ಕಥೆ ಹೇಳಿರುವ ದೂರುದಾರನ ಬಾಯಿ ಬಿಡಿಸುವ ಪ್ರಯತ್ನ ನಡೆಸಿದ್ದಾರೆ. ಆತ ನೀಡಿರುವ ದೂರು ಸುಳ್ಳು ಅನ್ನೋ ನಿರ್ಧಾರಕ್ಕೆ ಬಂದ ಎಸ್‌ಐಟಿ ಅಧಿಕಾರಿಗಳು ಆತನನ್ನೇ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪ್ಲಾನ್ ಮಾಡಿದ್ದಾರೆ. ಆತನ ಹಿಂದೆ ಯಾರೋ ಇದ್ದು ಇದನ್ನೆಲ್ಲ ಮಾಡಿಸಿದ್ದಾರೆ ಎಂಬ ಶಂಕೆ ಮೂಡಿದ್ದು, ಅನೇಕ ವ್ಯಕ್ತಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದಾರೆ.

State
ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಇನ್ನಿಲ್ಲ*
ಬೆಂಗಳೂರು : ಆಗಸ್ಟ್ 14ರಂದು ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಯಾಗಿದ್ದ ಡಾ.ಶರಣಬಸವಪ್ಪ ಅಪ್ಪಾಜಿಯವರು ಇಹಲೋಕ ತ್ಯಜಿಸಿದ್ದರು. ಇದೀಗ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿಗಳು ಕೂಡ ಇದೀಗ ಇಹಲೋಕ ತ್ಯಜಿಸಿದ್ದಾರೆ. ನಿನ್ನೆ ತಾನೆ ಉಪಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಅವರು ಕಲ್ಬುರ್ಗಿಯಲ್ಲಿ ಶರಣಬಸವಪ್ಪ ಅಪ್ಪಾಜಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತೆರಳಿದ್ದರು.

ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಇದೀಗ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಈಗ ಅವರು ಇಂದು ಇಹಲೋಕಾ ತ್ಯಜಿಸಿದ್ದಾರೆ. ವಕ್ಸ್ ಬೋರ್ಡ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ, “ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ನಿರಾಕರಿಸುವ ಕಾನೂನು ತರಬೇಕು” ಎಂದು ಹೇಳಿದ್ದರು. ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇಬ್ಬರೂ ಇರುವ ವೇದಿಕೆಯಲ್ಲಿ, “ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಡಿ ಕೆ ಶಿವಕುಮಾರ್ ಅವರು ಸಿಎಂ ಆಗ್ತಾರೆ. ಸಿಎಂ ಕುರ್ಚಿ ಬಿಟ್ಟುಕೊಡಬೇಕು” ಎಂಬ ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ್ದರು.
-
Hassan23 hours agoಹಾಸನ : ರಸ್ತೆ ವಿಭಜಕಕ್ಕೆ ಸ್ವಿಫ್ಟ್ ಕಾರು ಡಿಕ್ಕಿ :ಇಬ್ಬರು ಯುವಕರ ಧಾರುಣ ಸಾ*ವು
-
Education13 hours agoಅಂಚೆ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ : ಆಕರ್ಷಕ ಸಂಬಳ
-
Mandya15 hours agoಮಹಿಳೆಯರಿಗೆ ಬಾಗಿನ ನೀಡುವುದು ಹಿಂದೂ ಸಂಪ್ರದಾಯದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ : ಮಾಜಿ ಸಚಿವ ಶ್ರೀರಾಮುಲು
-
Hassan17 hours agoಧರ್ಮಸ್ಥಳ ಪ್ರಕರಣ| ಸರ್ಕಾರ ಎಚ್ಚೆತ್ತುಕೊಳ್ಳಬೇಕು: ಬಿ.ವೈ.ವಿಜಯೇಂದ್ರ
-
Mysore19 hours agoಖಾಸಗಿ ಇವಿ ಚಾರ್ಜಿಂಗ್ ಸ್ಟೇಷನ್ ಉದ್ಘಾಟಿಸಿದ ಸೆಸ್ಕ್ ಎಂಡಿ
-
Kodagu22 hours agoಆಟೋ ರಿಕ್ಷಾದಲ್ಲಿ ಮಗುವಿಗೆ ಜನ್ಮವಿತ್ತ ಮಹಿಳೆ : ತಾಯಿ ಮಗು ಸುರಕ್ಷಿತ
-
Hassan22 hours agoಹುಡಾ ಗೆ ಭೂಮಿ ಕೊಟ್ಟ ಗ್ರಾಮಸ್ಥರಿಗೆ ಶೀಘ್ರ ನಿವೇಶನ : ಗೇಕರವಳ್ಳಿ ಗ್ರಾಮದಲ್ಲಿ ಶಾಸಕ ಸ್ವರೂಪ್ ಪ್ರಕಾಶ್
-
State15 hours agoಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ದೂರುದಾರನ ಹಿಂದಿರುವ ವ್ಯಕ್ತಿಗಳಿಗೆ ನೋಟಿಸ್ ನೀಡಲು SIT ಸಿದ್ಧತೆ
