Kodagu
ಕಾವೇರಿ ವಿದ್ಯಾ ಸಂಸ್ಥೆಯ ಹೆಸರಿಗೆ ಮಾಲೀಕತ್ವ ವರ್ಗಾವಣೆ
ವೀರಾಜಪೇಟೆ: ಶಾಸಕರ ಕಛೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ವಿದ್ಯಾ ಸಂಸ್ಥೆಯ ಗೇಣಿ ಮತ್ತು ಪಹಣಿ ಪತ್ರವನ್ನು ಶಾಸಕ ಎ. ಎಸ್ ಪೊನ್ನಣ್ಣ ಕಾವೇರಿ ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.
1980 ರಲ್ಲಿ ಆರಂಭವಾದ ಕಾವೇರಿ ಕಾಲೇಜ್ ವಿರಾಜಪೇಟೆಯ ಜಾಗದ ಮೂಲ ಗೇಣಿ ಹಾಗೂ ಪಹಣಿ ಪತ್ರಿಕೆಯು ಸ್ಥಳದ ಮೂಲ ಮಾಲೀಕರಾದ ಕೀತಿಯಂಡ ಅಪ್ಪಾಜಿಯವರ ಹೆಸರಿನಲ್ಲಿಯೇ ಇತ್ತು. 40 ದಶಕಗಳಿಂದ ವಿದ್ಯಾಸಂಸ್ಥೆಯವರು ಎಷ್ಟು ಪ್ರಯತ್ನ ಪಟ್ಟರು ಸ್ಥಳದ ಮಾಲೀಕತ್ವವನ್ನು ವಿದ್ಯಾ ಸಂಸ್ಥೆಯ ಹೆಸರಿಗೆ ಬದಲಾಯಿಸಲು ಸಾಧ್ಯವಾಗಲಿಲ್ಲ.

ಈ ವಿಚಾರದ ಬಗ್ಗೆ ತಿಳಿದಂತಹ ವಿರಾಜಪೇಟೆ ಪಟ್ಟಣ ಪಂಚಾಯಿತಿಯ ಸದಸ್ಯೆ ದೇಚಮ್ಮ ಕಾಳಪ್ಪ ಈ ವಿಚಾರವನ್ನು ವಿರಾಜಪೇಟೆ ಶಾಸಕರಾದ ಎ. ಎಸ್. ಪೊನ್ನಣ್ಣ ಗಮನಕ್ಕೆ ತಂದರು. ಶಾಸಕರು ಈ ವಿಚಾರದ ಬಗ್ಗೆ ಮುತುವರ್ಜಿ ವಹಿಸಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಕೀತಿಯಂಡ ಅಪ್ಪಾಜಿಯವರ ಹೆಸರಿನಲ್ಲಿದ್ದ ಗೇಣಿ ಹಾಗೂ ಪಹಣಿ ಪತ್ರಿಕೆಯನ್ನು ಕಾವೇರಿ ವಿದ್ಯಾಸಂಸ್ಥೆ ಗೋಣಿಕೊಪ್ಪದ ಹೆಸರಿಗೆ ಬದಲಾಯಿಸಿ ಮಂಗಳವಾರ ತಮ್ಮ ಕಚೇರಿಯಲ್ಲಿ ಗೇಣಿ ಹಾಗೂ ಪಹಣಿ ಪತ್ರವನ್ನು ಕಾವೇರಿ ವಿದ್ಯಾ ಸಂಸ್ಥೆಗೆ ಹಸ್ತಾಂತರಿಸಿದರು.
![]()
ಈ ಸಂದರ್ಭ ಆಡಳಿತ ಮಂಡಳಿಯ ಪರವಾಗಿ ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಆರ್ ಸಲ್ದಾನ ಹಾಗೂ ಉಪನ್ಯಾಸಕ ವರ್ಗದವರು ಹಾಜರಿದ್ದರು.
ಗೇಣಿ ಮತ್ತು ಪಹಣಿ ಪತ್ರವನ್ನು ಹಸ್ತಾಂತರಿಸಿ ಮಾತನಾಡಿದ ಶಾಸಕರು, ಕಾವೇರಿ ವಿದ್ಯಾ ಸಂಸ್ಥೆ 40 ದಶಕಗಳಿಂದ ಉತ್ತಮ ರೀತಿಯ ವಿದ್ಯಾಭ್ಯಾಸವನ್ನು ನೀಡುತ್ತಿದ್ದು. ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತಹ ವಿದ್ಯಾರ್ಥಿಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಇದೇ ರೀತಿ ಸಮಾಜಕ್ಕೆ ಅವರ ಸೇವೆ ಮುಂದುವರೆಯಲಿ ಎಂದರು.

ಗೇಣಿ ಹಾಗೂ ಪಹಣಿ ಪತ್ರಿಕೆಯನ್ನು ಸ್ವೀಕರಿಸಿ ಮಾತನಾಡಿದ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನಡಿಕ್ಟ್ ಆರ್ ಸಲ್ದಾನ 1980 ರಲ್ಲಿ ಶ್ರೀ ಪಾಂಡAಡ ನಂಜಪ್ಪ, ಪ್ಲಾಂಟರ್ ನಾಕೂರು ಎಸ್ಟೇಟ್ ಶುಂಠಿಕೊಪ್ಪ ಇವರು ತಮ್ಮ ಪತ್ನಿ ಶ್ರೀಮತಿ ಪಾಂಡAಡ ಸುಬ್ಬಮ್ಮ ನಂಜಪ್ಪನವರ ಜ್ಞಾಪಕರ್ತವಾಗಿ ವಿದ್ಯಾ ಸಂಸ್ಥೆಗೆ ಮೂರು ಲಕ್ಷ ರೂಪಾಯಿ ನೀಡಿದ್ದರು .ಈ ಹಣದಿಂದ ಕೀತಿಯಂಡ ಅಪ್ಪಾಜಿಯವರ ಸ್ವಾಧೀನದಲ್ಲಿದ್ದ ಈ ಸ್ಥಳವನ್ನು ಖರೀದಿ ಮಾಡಲಾಗಿತ್ತು. ಖರೀದಿ ಮಾಡಿ ನಲವತ್ತು ವರ್ಷಗಳು ಕಳೆದರು ಸ್ಥಳದ ಗೇಣಿ ಹಾಗೂ ಪಹಣಿ ಪತ್ರಿಕೆಯು ಜಾಗದ ಮೊದಲ ಮಾಲೀಕರಾದ ಕೀತಿಯಂಡ ಅಪ್ಪಾಜಿಯವರ ಹೆಸರಿನಲ್ಲಿಯೇ ಇತ್ತು. ಸಂಸ್ಥೆ ಎಷ್ಟು ಪ್ರಯತ್ನಿಸಿದರು ಬದಲಾಯಿಸಲಾಗಲಿಲ್ಲ.

ಈಗ ಶ್ರೀಮತಿ ದೇಚಮ್ಮ ಕಾಳಪ್ಪನವರ ಕಾಳಜಿ ಹಾಗೂ ಶಾಸಕ ಎ ಎಸ್ ಪೊನ್ನಣ್ಣ ಮುತುವರ್ಜಿಯಿಂದ ಗೇಣಿ ಹಾಗೂ ಪಹಣಿ ಪತ್ರಿಕೆಯು ಕಾವೇರಿ ವಿದ್ಯಾಸಂಸ್ಥೆಯ ಹೆಸರಿಗೆ ಬದಲಾಗಿದೆ. ಶಾಸಕರು ನಮ್ಮ ವಿದ್ಯಾಸಂಸ್ಥೆಗೆ ಮಾಡಿದ ಸೇವೆಗೆ ಆಡಳಿತ ಮಂಡಳಿ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್. ಎಂ. ನಾಣಯ್ಯ, ಐ .ಕ್ಯೂ .ಎ .ಸಿ ಸಂಚಾಲಕಿ ಡಾ.ಕೆ.ಜಿ.ವೀಣಾ , ಅಧೀಕ್ಷಕರಾದ ಜಗದೀಶ್ ಬಿ. ಎಸ್, ಸೋಮನಾಥ್, ಉಪನ್ಯಾಸಕರ ರಾಘವೇಂದ್ರ ಎಲ್.ಆರ್ , ಅಕ್ಷಿತಾ ನಾಯ್ಕ್.ಟಿ, ಸುನಿಲ್ ಕುಮಾರ್ ಬಿ.ಬಿ. ಹಾಜರಿದ್ದರು.
Kodagu
ಕೊಡಗು ನೂತನ ಜಿಲ್ಲಾಧಿಕಾರಿಯಾಗಿ ಎಸ್.ಜೆ ಸೋಮಶೇಖರ್ ನೇಮಕ
ಮಡಿಕೇರಿ: ಕೊಡಗು ಜಿಲ್ಲಾಧಿಕಾರಿಯಾಗಿದ್ದಾಗ ವೆಂಕಟರಾಜ್ ರವರು ಬೆಂಗಳೂರಿನ ಸರ್ವೆ ಸೆಟಲ್ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಕಮಿಷನರ್ ಆಗಿ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ನೂತನ ಡಿಸಿಯಾಗಿ ಎಸ್.ಜೆ. ಸೋಮಶೇಖರ್ ನೇಮಕಗೊಂಡಿದ್ದಾರೆ.

ಕೊಡಗು ಜಿಲ್ಲೆಗೆ ಬೆಂಗಳೂರಿನ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಸ್.ಜೆ ಸೋಮಶೇಖರ್ ರವರನ್ನು ಕೊಡಗು ಜಿಲ್ಲಾಧಿಕಾರಿಗಳನ್ನಾಗಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಆದೇಶ ನಾಳೆಯಿಂದಲೇ ಜಾರಿಗೆ ಬರುತ್ತದೆ. ರಾಜ್ಯದಲ್ಲಿ ಐಎಎಸ್ ಮತ್ತು ಐಪಿಎಸ್ ವರ್ಗಾವಣೆ ಪ್ರಕ್ರಿಯೆಗಳು ನಡೆದಿದ್ದು, ಅನೇಕರನ್ನು ಬೇರೆ ಬೇರೆ ಜಿಲ್ಲೆಗೆ ವರ್ಗಾವಣೆಗೊಳಿಸಲಾಗಿದೆ.
Kodagu
ಕೊಡಗು ಎಸ್‌ಪಿ ರಾಮರಾಜನ್ ವರ್ಗಾವಣೆ: ನೂತನ SPಯಾಗಿ ಬಿಂದುಮಣಿ ನೇಮಕ
ಮಡಿಕೇರಿ: ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿನ್ನೆಲೆ ನೂತನ ಎಸ್‌ಪಿಯಾಗಿ ಬಿಂದುಮಣಿ ಅವರನ್ನು ನೇಮಕ ಮಾಡಲಾಗಿದೆ.

ಬಿಂದುಮಣಿ ಅವರು, ಮೈಸೂರು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
Kodagu
ಜನಶಕ್ತಿಯ ಮೂಲಕ ಧನಶಕ್ತಿ ಕೊನೆಗಾಣಿಸಲು ನಮ್ಮ ಹೋರಾಟ : ಡಾ.ಇ.ಆರ್. ದುರ್ಗಾಪ್ರಸಾದ್
ವಿರಾಜಪೇಟೆ: ತಾಲೂಕು ಕಚೇರಿಗಳಲ್ಲಿ ಸಾದರಣ ವ್ಯಕ್ತಿಗಳ ಕೆಲಸ ವಿಳಂಬ ಅದರೇ ಮಧ್ಯವರ್ತಿಗಳ ಕೆಲಸ ಹಣದೊಂದಿಗೆ ಕಾರ್ಯ ಪೂರ್ಣ ಸಕಲಾದಲ್ಲಿ ನಡೆಯುತ್ತದೆ. ಇದಕ್ಕೆ ಅಧಿಕಾರಿಗಳ ಕುಮ್ಮಕ್ಕು ಇದೆ ಎಂದು ಮಾರ್ಮಿಕವಾಗಿ ನಾಗರಿಕ ಸಮಿತಿ ವಿರಾಜಪೇಟೆ ಸಂಚಾಲಕರಾದ ಡಾ.ಇ.ಆರ್. ದುರ್ಗಾಪ್ರಸಾದ್ ಅವರು ಗುಡುಗಿದರು.
ನಾಗರಿಕ ಸಮಿತಿ ವಿರಾಜಪೇಟೆ ಮತ್ತು ಸಾರ್ವಜನಿಕ ಕಾರ್ಯಕರ್ತರ ಸಂಯುಕ್ತ ಸಮಿತಿ ವಿರಾಜಪೇಟೆ ಸಂಯುಕ್ತ ಆಶ್ರಯದಲ್ಲಿ ತಾಲೂಕು ಆಡಳಿತ ಕಛೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ವಿರುದ್ದ ತಾಲೂಕು ಕಚೇರಿ ಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ನಾಗರಿಕ ಸಮಿತಿ ಸಂಚಾಲಕರಾದ ಡಾ. ಇ.ಆರ್. ದುರ್ಗಾಪ್ರಸಾದ್ ಅವರು. ಭ್ರಷ್ಟಾಚಾರ ಸರ್ವವ್ಯಾಪಿಯಾಗಿದೆ. ತಾಲೂಕು ಕಚೇರಿ ಜನಸಾಮಾನ್ಯರ, ಬೆಳೆಗಾರರಾ,ರೈತಾಪಿ ವರ್ಗ,ಕಾರ್ಮಿಕ ಸಮುದಾಯದ ಗಳ ಕೆಲಸ ಕಾರ್ಯಗಳು ವಿಳಂಬವಾಗುತಿದ್ದು ಎಲ್ಲಾದಕ್ಕು ಹಣ ನೀಡಿದಲ್ಲಿ ಮಾತ್ರ ಕೆಲಸಕ್ಕೆ ಚಾಲನೆ ನೀಡುತ್ತಾ ಬಂದಿದ್ದಾರೆ.ದಲ್ಲಾಳಿ, ಮಧ್ಯವರ್ತಿಗಳು ಸಕಾಲದಲ್ಲಿ ಕೆಲಸ ಮುಗಿಸಿ ಇಂತಿಷ್ಟು ಹಣ ಪಾವತಿ ಮಾಡಿ ಸುಲಭದಲ್ಲಿ ಕಾರ್ಯ ಮುಗಿಸಿ ಹಿಂದುರುಗುತಿದ್ದಾರೆ.
ಮಧ್ಯವರ್ತಿಗಳಿಗೆ ಅಧಿಕಾರಿ ವರ್ಗದ ಕುಮ್ಮಕ್ಕು ಇದೆ. ಹಲವು ಭಾರಿ ಸಮಸ್ಯೆ ಹೇಳಿಕೊಂಡು ಮನವಿ ಸಲ್ಲಿಸಿದರು ಯಾವುದೇ ಉಪಯೋಗ ಕಾಣದಾಗಿದೆ. ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಮಧ್ಯವರ್ತಿಗಳ ಹಾವಳಿ ತಡೆದು ಸರ್ವರಿಗೂ ವಿಳಂಬ ಮಾಡದೆ ಬಂದಿರುವ ಅರ್ಜಿ ಪರಾಂಬರಿಸಿ. ವಿಳೆವಾರಿ ಮಾಡಬೇಕು. ನಮ್ಮ ಹೋರಾಟ ಮಧ್ಯವರ್ತಿಗಳ ವಿರುದ್ದ ಇದು ಇಂದು ಚಾಲನೆ ನೀಡಲಾಗಿದೆ. ಮುಂದೆ ಇದು ಗ್ರಾಮದ ಜನರನ್ನು ಒಂದುಗೂಡಿಸಿ ಸಂಘ ಸಂಸ್ಥೆಗಳೊಂದಿಗೆ. ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾರ್ವಜನಿಕ ಕಾರ್ಯಕರ್ತರ ಸಂಯುಕ್ತ ಸಮಿತಿ ಸಂಚಾಲಕ ಮಾಳೇಟಿರ ಕಾಳಯ್ಯ ಅವರು ಮಾತನಾಡಿ, ಜನ ಸಮಾನ್ಯರ ಕಷ್ಟ ನೆನಪಿಗೆ ಬಾರದಾಗಿದೆ ಅಧಿಕಾರಿ ವರ್ಗದವರಿಗೆ. ದೂರದ ಊರುಗಳಿಂದ ಬರುವ ಜನತೆಗೆ ಲಂಚದ ನೆಪ ಒಡ್ಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
Manglore18 hours agoಧರ್ಮಸ್ಥಳ ಉಚಿತ ಸಾಮೂಹಿಕ ವಿವಾಹ 2026: ಸಂಪೂರ್ಣ ಮಾಹಿತಿ
-
Hassan11 hours agoಹಾಸನ ಜಿಲ್ಲೆಯ ನೂತನ ಎಸ್‌ಪಿಯಾಗಿ ಶುಭನ್ವಿತಾ ನೇಮಕ
-
Hassan10 hours agoಹುಲ್ಲು ಸಾಗಿಸುತ್ತಿದ್ದ ಲಾರಿಗೆ ತಗುಲಿದ ಬೆಂಕಿ
-
National12 hours agoಕದನ ವಿರಾಮ ತೀರ್ಮಾನದಲ್ಲಿ 3ನೇ ವ್ಯಕ್ತಿ ಭಾಗಿಯಾಗಿಲ್ಲ: ಚೀನಾಗೆ ಭಾರತ ತಿರುಗೇಟು
-
Chamarajanagar9 hours agoಗ್ಯಾರಂಟಿ ಯೋಜನೆಗಳ ಅನುಷ್ಠಾನ ರಾಷ್ಟ್ರಮಟ್ಟದಲ್ಲಿಯೇ ವಿಶೇಷವಾದ ಕಾರ್ಯಕ್ರಮ : ಶಾಸಕ ಕೃಷ್ಣಮೂರ್ತಿ
-
Chikmagalur9 hours agoಚಿಕ್ಕಮಗಳೂರು ಜಿಲ್ಲೆಯ ನೂತನ SPಯಾಗಿ ಜಿತೇಂದ್ರ ಕುಮಾರ್ ನೇಮಕ
-
Hassan11 hours agoಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಮಗು ಸಾ*ವು
-
Hassan10 hours agoಸ್ಥಗಿತಗೊಂಡಿರುವ ಗಂಜಿಗೆರೆ ಏತ ನೀರಾವರಿ ಯೋಜನೆ ಶೀಘ್ರವೇ ಚಾಲನೆ: ಶಾಸಕ ಸಿಮೆಂಟ್ ಮಂಜು
