Connect with us

Kodagu

ಕುಡಿತದ ಅಮಲಿನಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

Published

on

ವಿರಾಜಪೇಟೆ : ಮದ್ಯದ ಅಮಲಿನಲ್ಲಿ ಯುವಕನೋರ್ವ ರಾತ್ರಿಯ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ರಾಮನಗರ ಗ್ರಾಮದಲ್ಲಿ ನಡೆದಿದೆ.

ವಿರಾಜಪೇಟೆ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಾನಗರ ಹೆಗ್ಗಳ ಗ್ರಾಮದ ನಿವಾಸಿ ಪ್ರದೀಶ್ (31) ವರ್ಷ ನೇಣಿಗೆ ಶರಣಾದ ಯುವಕ.

ರಾಮನಗರ ಗ್ರಾಮದ ನಿವಾಸದಲ್ಲಿ ತನ್ನ ತಾಯಿ ರಾಧ ಅವರೊಂದಿಗೆ ವಾಸವಾಗಿದ್ದ ಮೃತ ಯುವಕ, ಕೂಲಿ ಕಾರ್ಮಿಕನಾಗಿ ದುಡಿಯುತಿದ್ದ. ಅ.20 ರಂದು ರಾತ್ರಿ ಮದ್ಯಪಾನ ಮಾಡಿ ಮನೆಗೆ ಆಗಮಿಸಿ ತಾಯಿಯೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ಎಂದಿನAತೆ ತಾಯಿ ರಾತ್ರಿಯ ಊಟ ಮುಗಿಸಿ ನಿದ್ರೆಗೆ ಜಾರಿದ್ದಾರೆ. ಈ ವೇಳೆಯಲ್ಲಿ ಮದ್ಯದ ಅಮಲಿನಲ್ಲಿದ್ದ ಮೃತ ಯುವಕ ಪ್ರದೀಶ್ ತಾಯಿಯ ಸೀರೆಯನ್ನು ಬಳಸಿ ಕೋಣೆಯೊಂದರ ಮೇಲ್ಚಾವಣಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿರಾಜಪೇಟೆ ನಗರ ಠಾಣೆಯಲ್ಲಿ ಮೃತನ ತಾಯಿ ರಾಧ ನೀಡಿರುವ ದೂರಿನ ಅನ್ವಯ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Kodagu

ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯ ಮೇಲೆ ದಾಳಿ ಮಾಡಲು ಮುಂದಾದ ಕಾಡಾನೆ*

Published

on

ಮಡಿಕೇರಿ : ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವನ ಮೇಲೆ ಕಾಡಾನೆ ದಾಳಿ ಮಾಡಲು ಯತ್ನಿಸಿರುವ ಘಟನೆ ಗುರುವಾರ ಬೆಳಗ್ಗೆ 7.20ರ ಸಮಯದಲ್ಲಿ

ವಿರಾಜಪೇಟೆ ತಾಲೂಕು, ಚಂಬೆಬೆಳ್ಳೂರು ಗ್ರಾಮದ ಪುದುಕೋಟೆ ಭದ್ರಕಾಳಿ ದೇವಾಲಯದ ಕೆಳಗಿನ ಸಿಮೆಂಟ್ ರಸ್ತೆಯಲ್ಲಿ ನಡೆದಿದೆ.


ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಜಿ.ಟಿ. ಚಂಗಪ್ಪ ಎಂಬುವವರು ಕಾಲೇಜಿಗೆ ತೆರಳಲು ಬಸ್ ಗಾಗಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ದಿಢೀರ್ ಎದುರಾದ ಕಾಡನೆ ಆತನನ್ನು ಬೆನ್ನಟ್ಟಿದೆ. ಚಂಗಪ್ಪ ಓಡಿ ಕಾಡಾನೆಯ ಹಿಡಿತದಿಂದ ತಪ್ಪಿಸಿಕೊಂಡಿದ್ದಾನೆ. ಆದರೆ ಓಡುವ ಸಂದರ್ಭ ಸಿಮೆಂಟ್ ರಸ್ತೆಗೆ ಬಿದ್ದು ಗಾಯಗಳು ಉಂಟಾಗಿವೆ ಅಲ್ಲದೇ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದೆ. ವಿಷಯ ಅರಿತು ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಆತನನ್ನು ವಿರಾಜಪೇಟೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ.


ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ. ಮರಿ ಆನೆಗಳೊಂದಿಗೆ ಮೂರಕ್ಕೂ ಹೆಚ್ಚು ಆನೆಗಳು ಈ ಭಾಗದಲ್ಲಿ ಸಂಚರಿಸುತ್ತಾ ಜನರಿಗೆ ಭೀತಿಯನ್ನು ಹುಟ್ಟಿಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೇ ಇಲ್ಲಿರುವ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಆಗಬೇಕೆಂದು ಗ್ರಾಮಸ್ಥರು ಸಂಬಂಧಿಸಿದವರನ್ನು ಒತ್ತಾಯಿಸಿದ್ದಾರೆ.
ಎಸಿಎಫ್ ನೆಹರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕರ ತೆರಳಿ ಘಟನೆ ಕುರಿತು ಮಾಹಿತಿ ಪಡೆದು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

Continue Reading

Kodagu

ನಾಲ್ ನಾಡ್ ಹಾಕಿ ಪಂದ್ಯಾವಳಿ ಮುಂದೂಡಿಕೆ

Published

on

ನಾಪೋಕ್ಲು: ನಾಲ್ ನಾಡ್ ಹಾಕಿ ಕ್ಲಬ್ ವತಿಯಿಂದ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಮೆ 22 ರಿಂದ ನಾಪೋಕ್ಲು ಬಳಿಯ ಬಲ್ಲಮಾವಟಿ ನೇತಾಜಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ನಾಲ್ ನಾಡ್ ವ್ಯಾಪ್ತಿಯ ಅಂತರಗ್ರಾಮ ಹಾಕಿ ಪಂದ್ಯಾಟ ಮತ್ತು ಮಹಿಳೆಯರ ಹಗ್ಗಜಗ್ಗಾಟವನ್ನು ಮಳೆಯ ಕಾರಣದಿಂದ ಮುಂದೂಡಲಾಗಿದೆ.


ಪಂದ್ಯಾಟಗಳನ್ನು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕ್ರೀಡಾಭಿಮಾನಿಗಳು ಮತ್ತು ನೋಂದಾಯಿತ ತಂಡಗಳು ಬದಲಿಸಲಾದ ದಿನಾಂಕವನ್ನು ಗಮನಿಸಿ ಸಹಕರಿಸುವಂತೆ ನಾಲ್’ನಾಡ್ ಹಾಕಿ ಕ್ಲಬ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Kodagu

ಕೊಡಗಿನಲ್ಲಿ ಬೃಹತ್ ಗಾತ್ರದ ಕಾಡುಕೋಣ(ಕಾಟಿ) ಭೇಟೆ

Published

on

ಕೊಡಗಿನಲ್ಲಿ ಬೃಹತ್ ಗಾತ್ರದ ಕಾಡುಕೋಣ(ಕಾಟಿ) ಭೇಟೆ

539 ಕೆ.ಜಿ ಕಾಡುಕೋಣ ಮಾಂಸ ಸೇರಿ ಓರ್ವನ ಬಂಧನ.

ಎಮ್ಮೆಮಾಡು ನಿವಾಸಿ ಹ್ಯಾರಿಸ್(42) ಬಂಧಿತ ಆರೋಪಿ

ಬೆನ್ನಟ್ಟುವ ಸಂಧರ್ಭ ಜೊತೆಗಿದ್ದ ಮತ್ತೊಬ್ಬ ಆರೋಪಿ ಮೂಸ ಪರಾರಿ.

ಕೊಡಗು ಜಿಲ್ಲೆ ಮಾದಪುರ ಸಮೀಪದ ನಂದಿಮೊಟ್ಟೆಯಲ್ಲಿ ನಡೆದ ಘಟನೆ‌.

ಮಡಿಕೇರಿ ವಲಯ ಅರಣ್ಯ ಅಧಿಕಾರಿಗಳಿಂದ ನಡೆದ ಕಾರ್ಯಚರಣೆ.

ತಡರಾತ್ರಿ ಅಪ್ಪಂಗಳದಲ್ಲಿ ವಾಹನವನ್ನ ಬೆನ್ನಟಿ ಹಿಡಿದ ಅರಣ್ಯ ಅಧಿಕಾರಿಗಳು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು .

ಬಂಧಿತರಿಂದ ಎರಡು ಕತ್ತಿ ಹಾಗೂ ಪಿಕಪ್ ವಾಹನ ವಶಕ್ಕೆ.

Continue Reading

Trending

error: Content is protected !!