Chikmagalur
ವೈದ್ಯಕೀಯ ವಿಭಾಗದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್‌ಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
ವರದಿ : ಎಂ.ಪಿ.ಪ್ರದೀಪ್ ಹೆಬ್ಬಾರ್, ಜಯಪುರ
ಜಯಪುರ : ಸದಾ ಸಮಾಜಕ್ಕೆ ದೇಶದ ಒಳಿತಿನ ಮಾರ್ಗದರ್ಶನ ಮಾಡುವ ಬಸರೀಕಟ್ಟೆಯ ದಂಪತಿಗಳಾದ ಡಾ.ಅರುಣ್ ಕುಮಾರ್ ಮತ್ತು ಕ್ಷಮಾ ಅರುಣ್ ರವರು ತಮ್ಮ ಒಬ್ಬನೇ ಮಗ ಡಾ. ಸಾತ್ವಿಕ್ ರವರನ್ನು ವೈದ್ಯರಾಗಿ ಓದಿಸಿ ತಾಯಿ ಭಾರತಿಯ ಅತ್ಯುನ್ನತ ಸೇವೆಯಾದ ಸೇನೆಯಲ್ಲಿ ಸೇವೆ ಸಲ್ಲಿಸಲು ಕಳುಹಿಸಿರುವ ನಿರ್ಧಾರ ದೇಶವಾಸಿಗಳಿಗೆ ಪ್ರೇರಣಾದಾಯಕವಾಗಿದೆ . ನಮ್ಮ ಊರಿಗೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಅವರ ಈ ಹೃದಯ ವೈಶಾಲ್ಯಕ್ಕೆ ಹಾಗೂ ರಾಷ್ಟ್ರಭಕ್ತಿಗೆ ಹೃದಯಪೂರ್ವಕ ನಮನಗಳು ಎಂದು ಕೇಂದ್ರ ಸರ್ಕಾರದ ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ಹೇಳಿದರು .

ವೈದ್ಯಕೀಯ ವಿಭಾಗದಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಲು ಆಯ್ಕೆಯಾದ ಡಾ.ಸಾತ್ವಿಕ್ ರವರನ್ನು ಬಸರೀಕಟ್ಟೆ ಗ್ರಾಮಸ್ಥರ ಪರವಾಗಿ ಅಭಿನಂದಿಸಿದ ಸಂದರ್ಭದಲ್ಲಿ ಮಾತನಾಡುತ್ತಾ ವೈದ್ಯರಾಗಿ ಜೀವನದಲ್ಲಿ ಅನೇಕ ಐಷಾರಾಮಿ ಅವಕಾಶಗಳಿದ್ದರು ಕೂಡ ನಮ್ಮ ಊರಿನ ಹೆಮ್ಮೆಯ ಯುವ ವೈದ್ಯ, ಸೇನೆಯನ್ನು ಆಯ್ಕೆ ಮಾಡಿಕೊಂಡಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಸೇನೆಯಲ್ಲಿ ವೈದ್ಯಕೀಯ ವಿಭಾಗದಲ್ಲಿ ಕ್ಯಾಪ್ಟನ್ ಆಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಸ್ವಗ್ರಾಮ ಬಸರಿಕಟ್ಟೆಗೆ ಬಂದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್ ರವರನ್ನು ಗ್ರಾಮಸ್ಥರು ಅವರ ಮನೆಗೆ ತೆರಳಿ ಗೌರವಿಸಿದರು.

ಈ ಸಂದರ್ಭದಲ್ಲಿ ಡಾ ಸಾತ್ವಿಕ್ ಅರುಣ್ಅವರ ತಂಗಿ ಸಮ್ಯಕ, ಗ್ರಾಮಸ್ಥರಾದ ಸುಧೀಂದ್ರ, ಶೇಷಗಿರಿ, ಚೇತನ್, ಶರಣ್ ಡಿ ಕುನ಼, ಸಮರ್ಥ ರಾಯ್ಕರ್, ಅಶ್ವಿನಿ, ರೇಖಾ, ಅನ್ನಲಕ್ಷ್ಮಿ, ಉಮೇಶ್ ಶೆಟ್ಟಿ, ಕಂದಸ್ವಾಮಿ, ಪುಟ್ಟ, ರಾಕೇಶ್, ಪ್ರಮೋದ್, ಶರತ್, ಪ್ರಕಾಶ್ ಶೆಟ್ಟಿ, ರವಿ ಆಲ್ವಿನ್, ಮನೋಜ್, ಆದಿತ್ಯ ಹಾಗೂ ಗ್ರಾಮಸ್ಥರು ಇದ್ದರು.
Chikmagalur
ಡಿ.ಸಿ.ಸಿ ಬ್ಯಾಂಕ್‌ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂ.ಎಸ್ ನಿರಂಜನ್‌ರನ್ನು 9 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ : ದೇವರಾಜ್
ಚಿಕ್ಕಮಗಳೂರು: ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಇತ್ತೀಚೆಗೆ ನಡೆದ ಡಿ.ಸಿ.ಸಿ ಬ್ಯಾಂಕ್‌ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂ.ಎಸ್ ನಿರಂಜನ್‌ರನ್ನು 9 ವರ್ಷಗಳ ಕಾಲ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ತಿಳಿಸಿದ್ದಾರೆ.
ಬಿಜೆಪಿ ಜಿ.ಪಂಗೆ ಬಿಜೆಪಿ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಡಿ.ಸಿಸಿ ನಿರ್ದೇಶಕರನ್ನಾಗಿ ಪಕ್ಷವು ಮಾಡಿದ್ದರೂ 2021 ರ ವಿಧಾನ ಪರಿಷತ್ ಚುನಾವಣೆಯ ಸಂಧರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ರವರ ವಿರುದ್ಧ ಕಾಂಗ್ರೆಸ್‌ನವರ ಪರವಾಗಿ ಮತಯಾಚನೆ ಮಾಡಿರುವುದು.2021 ರ ಡಿಸೆಂಬರ್‌ನಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ಕುಪ್ಪೇನಹಳ್ಳಿ ವಿರುದ್ಧ ಕಾಂಗ್ರೆಸ್‌ನ ಪರವಾಗಿ ಕೆಸ ಮಾಡಿದ್ದರೂ 2024ರಲ್ಲಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು.

ಡಿ.ಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದು,ಈ ಎಲ್ಲಾ ಕಾರಣದಿಂದ ಮುಂದಿನ 9 ವರ್ಷಗಳ ಕಾಲ ಭಾರತೀಯ ಜನತಾ ಪಕ್ಷದಿಂದ ನಿರಂಜನ್ ರವರನ್ನು ಉಚ್ಛಾಟಿಸಲಾಗಿದೆ ಎಂದಿದ್ದಾರೆ.
Chikmagalur
ಕೊಲೆ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಕೊಲೆ ಆರೋಪಿಯನ್ನು ಬಂಧಿಸಿದ : ಬೀರೂರು ಪೋಲೀಸರು
ಚಿಕ್ಕಮಗಳೂರು: ಕೊಲೆ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬೀರೂರು ಪೋಲೀಸರು ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫೆ.04 ರಂದು 10.30 ರ ವೇಳೆಯಲ್ಲಿ ಬೀರೂರಿನಲ್ಲಿ ರಂಗನಾಥಎಂಬವನು ಪತ್ನಿ ಮಮತಾಳ ಶೀಲಾ ಶಂಕಿಸಿ ಬೇರೆಯವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದಾಗಿ ಅನುಮಾನಪಟ್ಟು ಜೋರಾಗಿ ಜಗಳವಾಡಿ ಕೈಗಳಿಂದ ಹೊಡೆದು ವೇಲ್ ನಿಂದ ಹೆಂಡತಿಯ ಕುತ್ತಿಗೆಗೆ ಬಿಗಿಯಾಗಿ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಬಗ್ಗೆ ರತ್ನಮ್ಮ ಎಂಬವರು ದೂರು ನೀಡಿದ್ದರು.

ಬೀರೂರು ಪಟ್ಟಣದ ರತ್ನಮ್ಮಎಂಬವರ ಮಗಳಾದ ಮಮತ 33 ವರ್ಷ, ಈಕೆಯನ್ನು 09 ವರ್ಷಗಳ ಹಿಂದೆ ಬುರುಡೆಕಟ್ಟೆ ವಾಸಿ ರಂಗನಾಥ್ ಎಂಬವರ ಮದುವೆ ಮಾಡಿಕೊಟ್ಟಿದ್ದು ಮುಂಚೆ ಸಾಂಸಾರಿಕವಾಗಿ ಅನ್ಯೋನ್ಯವಾಗಿ ಅವರಿಗೆ 8 ವರ್ಷದ ಗಂಡು ಮಗು ಮತ್ತು 3 ವರ್ಷದ ಹೆಣ್ಣು ಮಗಳಿದ್ದಳು.
ಬೀರೂರಿನ ಮಾರ್ಗದ ಕ್ಯಾಂಪ್ ಚೌಡಮ್ಮನ ಬೀದಿಯ ಪುಟ್ಟಣ್ಣ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿರುತ್ತಾರೆ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಹಾಗೂ ಕೊಲೆ ಆರೋಪಿತನಾದ ರಂಗನಾಥನನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸಿದ್ದಾರೆ.
Chikmagalur
ತಾಪಂ-ಜಿಪಂ-ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರ : ಸಚಿವ ಪರಮೇಶ್ವರ್
ಚಿಕ್ಕಮಗಳೂರು : ಚಿಕ್ಕಮಗಳೂರಿನ ಗೃಹ ಸಚಿವರಾದ ಪರಮೇಶ್ವರ್ ರವರು, ತಾಪಂ-ಜಿಪಂ-ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರವಾಗಿ , ನಿನ್ನೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿದ್ದೇವೆ, ಎಂದರು.
ಈ ಚುನಾವಣೆಗೆ ಬ್ಯಾಲೆಡ್ ಪೇಪರ್ ಇಂಟ್ರಡ್ಯೂಸ್ ಮಾಡ್ಬೇಕು ಅಂತ ತೀರ್ಮಾನ ಮಾಡಿದ್ದೇವೆ, ತಾಪಂ-ಗ್ರಾಪಂಗೆ ಮಾಡ್ಬೇಕು ಅಂತ ತೀರ್ಮಾನ ಆಗಿದೆ.

ಬಹುಶಃ, ಜಿಬಿಎಗೂ ಅದನ್ನೇ ಅಪ್ಲೈ ಮಾಡುತ್ತಾರೆ.ಎಂದು ಚಿಕ್ಕಮಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿದರು.
-
National - International21 hours agoನಾಳೆಯಿಂದ T-20 World Cup| 20 ತಂಡಗಳು, 55 ಪಂದ್ಯಗಳು, 1 ಟ್ರೋಫಿ: ವೇಳಾಪಟ್ಟಿ ಏನು?
-
National20 hours agoU-19 World Cup| ವೈಭವ್ನ ಶತಕ: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ
-
Chamarajanagar3 hours agoಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ: ಹನೂರಿನ ಶಾಲೆಗಳಲ್ಲಿ ಅರಿವು ಮೂಡಿಸಿದ ರೈತ ದಂಪತಿ
-
Mysore23 hours agoವಿಶ್ವಕರ್ಮ ಯೋಜನೆಯಡಿ ವಸ್ತು ಪ್ರದರ್ಶನ
-
State22 hours agoಬಿಗ್ ಬಾಸ್-12 ವಿನ್ನರ್ ಗಿಲ್ಲಿನಟ ವಿರುದ್ದ ಫಿಲ್ಮ್ ಚೇಂಬರ್ಗೆ ದೂರು
-
State37 seconds agoಉಳಿತಾಯದ ಹೂಡಿಕೆಗಳು MSIL ಸಂಸ್ಥೆಯಲ್ಲಿ ಸುಭದ್ರ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ
-
Special7 hours agoಪಿ ಎಂ ಆವಾಸ್ ಯೋಜನೆಯಿಂದ ಮನೆಕಟ್ಟಲು ಸಬ್ಸಿಡಿ!
-
Hassan4 hours agoಸದನದಲ್ಲಿ ನಾನು ಆವೇಶಭರಿತನಾಗಿ ಮಾತನಾಡುವುದಕ್ಕೆ ಬಿಜೆಪಿಯವರ ಪ್ರಚೋದನೆಯೇ ಕಾರಣ : ಕೆ.ಎಂ. ಶಿವಲಿಂಗೇಗೌಡ
