Chikmagalur
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ
ಚಿಕ್ಕಮಗಳೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಗರದ ವಿವಿಧೆಡೆ ೧೫ ಭಿಕ್ಷುಕರನ್ನು ಪತ್ತೆ ಹಚ್ಚಿ ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಕಳೆದ ರಾತ್ರಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿದ್ದ ಭಿಕ್ಷುಕರನ್ನು ಮನವೊಲಿಸಿ ಭಿಕ್ಷುಕರ ನಿಷೇಧ ಕಾಯ್ದೆ ೧೯೭೫ ರ ಪ್ರಕಾರ ರಕ್ಷಿಸಿ ಸ್ಥಳಾಂತರಿಸಲಾಯಿತು.
ಈ ವೇಳೆ ಎಸ್ಪಿ ಡಾ.ವಿಕ್ರಮ ಅಮಟೆ ಮಾತನಾಡಿ, ಇತ್ತಿಚೆಗೆ ಭಿಕ್ಷುಕರು ಅಲ್ಲಲ್ಲಿ ಬಿದ್ದು ಗಾಯ ಮಾಡಿಕೊಂಡಿರುವುದು, ಕುಡಿದು ಬಿದ್ದು ಸಾವಪ್ಪಿರುವುದು, ಇತ್ತೇಚೆಗೆ ಓರ್ವ ಭಿಕ್ಷುಕಿ ಕೊಲೆ ಆಗಿರುವುದನ್ನು ಗಮನಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಗರಸಭೆ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಜೊತೆ ಸೇರಿ ಭಿಕ್ಷುಕರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಶಿವಮೊಗ್ಗದ ನಿರಾಶ್ರಿತರ ಪರಿಹಾರ ಕೇಂದ್ರ ಹಾಗೂ ಮಹಿಳಾ ಮತ್ತು ನಗರದಲ್ಲಿ ಮಕ್ಕಳ ಕಲ್ಯಾಣ ಇಲಾಖೆಯ ಸ್ವಾಧಾರ ಕೇಂದ್ರಕ್ಕೆ ಭಿಕ್ಷುಕರನ್ನು ಸ್ಥಳಾಂತರ ಮಾಡುತ್ತೇವೆ. ಈ ಕಾರ್ಯಾಚರನೆ ಇಲ್ಲಿಗೆ ನಿಲ್ಲುವುದಿಲ್ಲ. ಮುಂದುವರಿಯುತ್ತದೆ. ಭಿಕ್ಷುಕರಿಗೆ ಸಂಬಂಧಿಸಿದಂತೆ ಮಾಹಿತಿಗಳಿದ್ದಲ್ಲಿ ಸಾರ್ವಜನಿಕರು ನಗರಸಭೆ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಮನಕ್ಕೆ ತಂದರೆ ತಕ್ಷಣ ಅವರನ್ನು ಸ್ಥಳಾಂತರಿಸುವ ಕೆಲಸ ಆಗುತ್ತದೆ ಎಂದರು.

ಕರ್ನಾಟಕ ಭಿಕ್ಷುಕರ ನಿಷೇಧ ಕಾನೂನಿದೆ. ಆ ಪ್ರಕಾರ ಇವರನ್ನು ಸ್ಥಳಾಂತರಿಸಲು ಅವಕಾಶವಿದೆ. ಕೆಲವರು ಅದಕ್ಕೆ ಒಪ್ಪುತ್ತಿಲ್ಲ. ಅವರನ್ನು ಮನವೊಲಿಸಿ ಕಳಿಸಿಕೊಡಲಾಗುತ್ತಿದೆ. ಮೂಡಿಗೆರೆಯಲ್ಲೂ ೩ ಮಂದಿ ಭಿಕ್ಷುಕರನ್ನು ಸ್ಥಳಾಂತರಿಸಲಾಗುತ್ತಿದೆ ಎಂದರು.
ಭಿಕ್ಷೆ ಬೇಡುವುದು ಕಾನೂನು ಪ್ರಕಾರ ತಪ್ಪಾಗುತ್ತದೆ. ಕೆಲವರು ಮಾನಸಿಕವಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೆಲವರು ಮನೆಯಲ್ಲಿ ಸಣ್ಣ ಪುಟ್ಟ ತೊಂದರೆಯಿಂದಾಗಿ ಭಿಕ್ಷೆ ಬೇಡುತ್ತಿದ್ದಾರೆ. ಅವರ ಮನೆಯವರು ಇದ್ದರೆ ವಾಪಾಸ್ ಕಳಿಸಿಕೊಡುವ ಪ್ರಯತ್ನ ಮಾಡುತ್ತೇವೆ. ಇಲ್ಲವಾದಲ್ಲಿ ಸರ್ಕಾರದಿಂದಲೇ ಸ್ವಾಧಾರ ಕೇಂದ್ರ, ನಿರಾಶ್ರೀತರ ಕೇಂದ್ರಗಳಿವೆ ಅಲ್ಲಿಗೆ ಕಳಿಸಿಕೊಡಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಇಲ್ಲಿರುವ ಭಿಕ್ಷುಕರನ್ನು ಎಲ್ಲ ರೀತಿಯ ವ್ಯವಸ್ಥೆ ಇರುವ ನಿರಾಶ್ರಿತ ಕೇಂದ್ರ, ಸ್ವಾಧಾರ ಕೇಂದ್ರಕ್ಕೆ ಕಳಿಸಿಕೊಡಲಾಗುತ್ತಿದೆ. ಊಟ, ಉಪಹಾರ, ಸ್ನಾನ, ಮಲಗಲು ಎಲ್ಲಾ ವ್ಯವಸ್ಥೆ ಇದೆ. ಅವರು ಅಲ್ಲಿ ನೆಮ್ಮದಿಯಾಗಿರಬಹುದು ಎಂದರು.
ಒಂದು ವರ್ಷ ಅವರು ನಿರಾಶ್ರಿತ ಕೇಂದ್ರದಲ್ಲಿ ಇರುತ್ತಾರೆ. ಆರೋಗ್ಯ ಸಮಸ್ಯೆ ಇದ್ದರೆ ಚಿಕಿತ್ಸೆಯನ್ನೂ ಕೊಡಿಸುತ್ತಾರೆ. ಚಿಕ್ಕಮಗಳೂರು ನಗರದಲ್ಲಿ ೧ ಕೋಟಿ ರೂ. ವೆಚ್ಚದ ನಿರಾಶ್ರಿತರ ಕೇಂದ್ರ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಮಾತನಾಡಿ, ನಿರಾಶ್ರಿತರ ಕೇಂದ್ರದಲ್ಲಿರುವ ಒಂದು ವರ್ಷದ ಅವಧಿಯಲ್ಲಿ ಅವರಿಗೆ ಸ್ವಯಂ ಉದ್ಯೋಗದ ತರಬೇತಿಯನ್ನೂ ಕೊಡಿಸಿ ಸ್ವಾವಲಂಭಿಗಳನ್ನಾಗಿ ಮಾಡಿ ಅಲ್ಲಿಂದ ಕಳಿಸಿಕೊಡುವ ಕೆಲಸ ಮಾಡುತ್ತೇವೆ ಎಂದರು.
ಸ್ವಯಂ ಸೇವಕ ಸಂಘಗಳ ರೂಬಿನ್ ಮೋಸೆಸ್, ಕೃಷ್ಣ ಮೂರ್ತಿ, ಶಿವಮೊಗ್ಗ ನಿರಾಶ್ರಿತರ ಪರಿಹಾರ ಕೇಂದ್ರದ ಅನಿಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಇದ್ದರು.
Chikmagalur
ಅಸ್ಸಾಂನಿಂದ ಬಂದಿರುವ ಕಾರ್ಮಿಕನಿಂದ ಕಾಫಿ ತೋಟದಲ್ಲಿ ಗೋ ಹತ್ಯೆ
ಚಿಕ್ಕಮಗಳೂರು : ಕಾಫಿ ತೋಟದಲ್ಲಿ ಗೋ ಹತ್ಯೆ ಮಾಡಿದ ಘಟನೆ ನಡೆದಿದ್ದು, ಅಸ್ಸಾಂನಿಂದ ಕೂಲಿ ಕೆಲಸಕ್ಕೆ ಬಂದಿರುವ ಕಾರ್ಮಿಕರಿಂದ ಕೃತ್ಯ ನಡೆದಿದೆ.
ಗೋವುಗಳನ್ನು ಕದ್ದು ತೋಟದಲ್ಲಿ ಹತ್ಯೆ ಮಾಡಲಾಗಿದೆ.ಖಚಿತ ಮಾಹಿತಿ ಮೇರೆಗೆ ಪೊಲೀಸರಿಂದ ದಾಳಿ ನಡೆದಿದ್ದು ಆರೋಪಿಗಳು-ಗೋಮಾಂಸ ಪಕ್ಷಕ್ಕೆ ಪಡೆಯಲಾಗಿದೆ.
ಕೊಪ್ಪ ತಾಲೂಕಿನ ಜಯಪುರ ಸಮೀಪದ ಹೇರೂರಿನ ಕಾಫಿ ಎಸ್ಟೇಟ್ ನಲ್ಲಿ ಘಟನೆ ನಡೆದಿದ್ದು,ಎರಡು ದನಗಳನ್ನು ಹತ್ಯೆ ಮಾಡಿ, ಮಾಂಸ ಹಂಚಿಕೆ ವೇಳೆಯಲ್ಲಿ ದಾಳಿ ಆಗಿದೆ.

ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.ಪಿ.ಎಸ್.ಐ. ರವೀಶ್ ನೇತೃತ್ವದಲ್ಲಿ ದಾಳಿ ನಡೆಸಿಆರೋಪಿಗಳಾದ ಅನ್ಸರ್, ಮಜೀದ್, ಮುಜಾಮಿಲ್ ನನ್ನು ಬಂಧಿಸಿದ್ದಾರೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
Chikmagalur
ಬೆಂಗಳೂರಿನಲ್ಲಿ ಅಪಘಾತ: ಚಂದ್ರೇಗೌಡ ಸಹಿತ ಮೂವರು ಸ್ಥಳದಲ್ಲೇ ಸಾ*ವು
ಚಿಕ್ಕಮಗಳೂರು: ಬೆಂಗಳೂರಿನಲ್ಲಿ ಇಂದು ನಡೆದ ರಸ್ತೆ ಅಪಘಾತದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಿ.ಎಸ್.ಚಂದ್ರೇಗೌಡ ಸೇರಿದಂತೆ ಮೂವರು ಸ್ಥಳದಲ್ಲೇ ಸಾವಪ್ಪಿದ್ದಾರೆ.
ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿರುವಾಗ ನಾಗಮಂಗಲದ ಸಮೀಪದ ನಾಗತಿಹಳ್ಳಿಯಲ್ಲಿ ಚಾಲನಕ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಅಪ್ಪಳಿಸಿ ಉರುಳಿಬಿದ್ದಿದ್ದು, ವಾಹನ ಚಾಲನೆ ಮಾಡುತ್ತಿದ್ದ ಚಂದ್ರೇಗೌಡ (60) ಅವರ ಪತ್ನಿ ಸರೋಜಮ್ಮ (55) ಜಯಮ್ಮ (70) ಅವರುಗಳು ಅಸುನೀಗಿದ್ದಾರೆ ಹೇಳಲಾಗಿದೆ.

ಕೆಲವು ದಿನಗಳ ಹಿಂದೆ ಹಾಂಕಾಂಗ್ ಪ್ರವಾಸ ಕೈಗೊಂಡಿದ್ದರು. ನಿನ್ನೆ ಬೆಂಗಳೂರಿನಲ್ಲಿರುವ ಅಳಿಯನ ಮನೆಯಲ್ಲಿ ಉಳಿದುಕೊಂಡಿದ್ದರು. ಭಾನುವಾರ ಬೆಳಿಗ್ಗೆ ಚಿಕ್ಕಮಗಳೂರು ನಗರಕ್ಕೆ ಆಗಮಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸಂಬಂಧಿಕರಿಗೆ ವಿಷಯ ತಿಳಿಯುತ್ತಿದ್ದಂತೆ ಮೃತ ದೇಹಗಳನ್ನು ತರಲು ಬೆಂಗಳೂರಿಗೆ ತೆರಳಿದ್ದಾರೆ.
ಮೃತ ಡಿ.ಎಸ್.ಚಂದ್ರೇಗೌಡ ಜಿಲ್ಲಾಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದರು. ಸಿಡಿಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಎರಡು ಬಾರಿಗೆ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದು, ತಾಲೂಕು ಕನಕ ಸಂಘದ ತಾಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
Chikmagalur
ಕಾಫಿನಾಡಲ್ಲಿ ನಿಲ್ಲದ ಕಾಡಾನೆ ದಾಳಿ: ಕಾರ್ಮಿಕ ಗಣಪತಿ ಪ್ರಾಣಾಪಾಯದಿಂದ ಪಾರು
ಚಿಕ್ಕಮಗಳೂರು : ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಮತ್ತೊಂದು ಕಾಡಾನೆ ದಾಳಿ ಪ್ರಕರಣ ದಾಖಲಾಗಿದ್ದು, ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿದೆ. ಆದರೆ ಕಾರ್ಮಿಕ ಗಣಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಸಮೀಪದ ಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಾರ್ಮಿಕ ಗಣಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಮಿಕ ಶಿವಮೊಗ್ಗ ಜಿಲ್ಲೆ ಸೊರಬ ಮೂಲದ ಗಣಪತಿ ಎಂದು ಗುರುತಿಸಲಾಗಿದೆ.

ತೋಟದಲ್ಲೇ ಮೂರು ಕಾಡಾನೆಗಳು ಬೀಡು ಬಿಟ್ಟಿವೆ. ಆನೆ ದಾಳಿಯಿಂದ ಪ್ರಜ್ಞೆ ತಪ್ಪಿರೋ ಕೂಲಿ ಕಾರ್ಮಿಕ, ಬದುಕಿರುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಈ ಘಟನೆಯಿಂದ ಕಾರ್ಮಿಕನ ಎಡಗೈ ನಡುಗುತ್ತಿದ್ದು ಪ್ರಜ್ಞಾಹೀನನಾಗಿದ್ದಾರೆ.
ಕಾರ್ಮಿಕ ಗಣಪತಿಯನ್ನು ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ಇನ್ನೂ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
Mandya16 hours agoಡಿ.17ಕ್ಕೆ ಮಳವಳ್ಳಿಗೆ ರಾಷ್ಟ್ರಪತಿ ಆಗಮನ : ಜಿಲ್ಲಾಧಿಕಾರಿಗಳಿಂದ ಸ್ಧಳ ಪರಿಶೀಲನೆ
-
Mysore14 hours agoಮೈಸೂರು ದಸರಾ: ಮಹಿಳಾ ಉದ್ಯಮಿ ಉಪಸಮಿತಿಗೆ ಎಸ್. ರಂಗನಾಥ ಸಂಚಾಲಕರಾಗಿ ನೇಮಕ
-
Mandya23 hours agoಡಿ 10 ಶ್ರೀರಂಗಪಟ್ಟಣ ಸೇರಿದಂತೆ ವಿವಿದೆಡೆ ವಿದ್ಯುತ್ ಕಡಿತ
-
Hassan19 hours agoಜಿಲ್ಲಾ ಮಟ್ಟದ ಅಂತರಶಾಲಾ ಚೆಸ್ ಸ್ಪರ್ಧೆ ಯಶಸ್ವಿ
-
Hassan18 hours agoಎಂಸಿಇ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸ್ಪೋರ್ಟ್ಸ್ ವಿಜೇತರಿಗೆ ಸನ್ಮಾನ
-
Kodagu20 hours agoಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ : ಗಾಯತ್ರಿ ನರಸಿಂಹ
-
Hassan22 minutes agoವಾಲಿಬಾಲ್ ಪಂದ್ಯಾವಳಿಯಲ್ಲಿ ಜಗ್ಗಿಬಾಯ್ಸ್ ಪ್ರಥಮ ಸ್ಥಾನ
-
Kodagu18 hours agoಶನಿವಾರಸಂತೆ – ಡಿ.10ಕ್ಕೆ ವಿದ್ಯುತ್ ವ್ಯತ್ಯಯ
