Connect with us

State

ವಿದ್ಯುತ್ ತಂತಿ ಸ್ಪರ್ಶಗೊಂಡು ರಿಕ್ಷಾ ಚಾಲಕರಿಬ್ಬರ ದಾರುಣ ಸಾವು

Published

on

ಮಂಗಳೂರು: ವಿದ್ಯುತ್ ತಂತಿ ಸ್ಪರ್ಶಗೊಂಡು ರಿಕ್ಷಾ ಚಾಲಕರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಗರದ ರೊಸಾರಿಯೊ ಶಾಲೆಯ ಬಳಿ ನಡೆದಿದೆ.

ರಾಜು ಮತ್ತು ದೇವರಾಜು ಮೃತಪಟ್ಟ ರಿಕ್ಷಾ ಚಾಲಕರು . ಇವರಲ್ಲಿ ಒಬ್ಬರು ಪುತ್ತೂರು ಹಾಗೂ ಇನ್ನೊಬ್ಬರು ಸಕಲೇಶಪುರದವರು ಎಂದು ತಿಳಿದು ಬಂದಿದೆ. ಇಬ್ಬರೂ ಪಾಂಡೇಶ್ವರದ ರೊಸಾರಿಯೋ ಚರ್ಚ್ ಹಿಂಬದಿಯ ಬಾಡಿಗೆಕೊಠಡಿಯಲ್ಲಿ ವಾಸವಾಗಿದ್ದರು.

ಜೂನ್ 27ರಂದು ಬೆಳಗ್ಗೆ 4.30ರ ಸುಮಾರಿಗೆ ರಿಕ್ಷಾ ಸ್ವಚ್ಚಗೊಳಿಸಲೆಂದು ಹೊರಬಂದಾಗ ರಿಕ್ಷಾ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್‌ ಆಘಾತಕ್ಕೆ ಒಳಗಾಗಿದ್ದರು. ಒಬ್ಬನಿಗೆ ವಿದ್ಯುತ್ ತಂತಿ ಸ್ಪರ್ಶಿಸಿರಬಹುದು. ಮತ್ತೋರ್ವನು ಗೋಣಿ ಚೀಲ ಹಿಡಿದು ರಕ್ಷಣೆಗೆ ಮುಂದಾಗಿದ್ದು, ಆತನೂ ವಿದ್ಯುತ್ ಅಘಾತಕ್ಕೆ ಒಳಗಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಎರಡೂ ಮೃತದೇಹಗಳನ್ನು ವೆನ್‌ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.

Continue Reading
Click to comment

Leave a Reply

Your email address will not be published. Required fields are marked *

Special

ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್: 25 ಲಕ್ಷ ರೂ.ವರೆಗೆ ಸುಲಭ ಸಾಲ

Published

on

ವೈಯಕ್ತಿಕ ಅಗತ್ಯಗಳಿಗೆ ತಕ್ಷಣ ಹಣದ ಅವಶ್ಯಕತೆ ಇರುವವರಿಗೆ ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ ಉತ್ತಮ ಆಯ್ಕೆಯಾಗಿ ಪರಿಣಮಿಸಿದೆ. ಕಡಿಮೆ ಬಡ್ಡಿ, ಸರಳ ದಾಖಲೆಗಳು ಹಾಗೂ ವೇಗವಾದ ಅನುಮೋದನೆಯೊಂದಿಗೆ ಈ ಸಾಲವನ್ನು ಪ್ರತಿಯೊಬ್ಬರು ಸುಲಭವಾಗಿ ಪಡೆಯಬಹುದು.

ಯೋಜನೆಯ ಪ್ರಮುಖ ವೈಶಿಷ್ಟ್ಯಗಳು
•25 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು.
•ಕಡಿಮೆ ಬಡ್ಡಿದರ
•ಕಡಿಮೆ ದಾಖಲೆಗಳ ಪರಿಶೀಲನೆಯ ನಂತರ ಬೇಗನೆ ಸಾಲ ಬಿಡುಗಡೆಯಾಗುತ್ತದೆ.
•ನಿಮ್ಮ ಮಾಸಿಕ ಆದಾಯದ ಮೇಲೆ ಆಧರಿಸಿ ಪಾವತಿ ಅವಧಿಯನ್ನು ಆರಿಸಿಕೊಳ್ಳಲು ಅವಕಾಶವಿದೆ.

ಯಾರು ಅರ್ಹರು?
•ನಿಯಮಿತ ಆದಾಯವಿರುವ ನಾಗರಿಕರು
•ಉದ್ಯೋಗಸ್ತರು, ಸ್ವಯಂ ಉದ್ಯೋಗಿಗಳು ಹಾಗೂ ವ್ಯವಹಾರಿಗಳು
•ಮಾನ್ಯ ಗುರುತಿನ ದಾಖಲೆ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ ನೀಡಬಲ್ಲವರು

ಅರ್ಜಿ ಪ್ರಕ್ರಿಯೆ:
•ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ.
•ಅಗತ್ಯ KYC ದಾಖಲೆಗಳನ್ನು ಅಪ್‌ಲೋಡ್ ಮಾಡಿ.
•ಬ್ಯಾಂಕ್ 24–48 ಗಂಟೆಗಳಲ್ಲಿ ಪರಿಶೀಲನೆ ಮಾಡುತ್ತದೆ.ಬೇಕಾದರೆ ಹತ್ತಿರದ ಶಾಖೆಗೆ ದಾಖಲೆ ದೃಢೀಕರಣಕ್ಕೆ ಭೇಟಿ ಮಾಡಬಹುದು.
•ದಾಖಲೆಗಳು ಸರಿಯಾಗಿದ್ದರೆ ಸಾಲ ಮಂಜೂರಾತಿ. ಮಂಜೂರಾದ ನಂತರ ಸಾಲ ಮೊತ್ತ ಖಾತೆಗೆ ಜಮಾ

ಅಗತ್ಯ ದಾಖಲೆಗಳು
•ಆಧಾರ್ / ಪಾನ್ ಕಾರ್ಡ್
•ಆದಾಯ ಪ್ರಮಾಣ
•6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
•ಪಾಸ್‌ಪೋರ್ಟ್ ಗಾತ್ರದ ಫೋಟೋ
•ಪೂರ್ಣಗೊಂಡ ಸಾಲ ಅರ್ಜಿ ನಮೂನೆ

ಅಧಿಕೃತ ವೆಬ್‌ಸೈಟ್‌: Karnataka Bank https://share.google/Sdx236NRFLScWpmGm

ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ ಕಡಿಮೆ ಷರತ್ತುಗಳು, ಬೇಗ ಅನುಮೋದನೆ ಮತ್ತು ಸುಲಭ ಪಾವತಿ ವ್ಯವಸ್ಥೆಯಿಂದ ಸಾಮಾನ್ಯ ಜನರಿಗೆ ತುಂಬಾ ಅನುಕೂಲಕರ. ದೊಡ್ಡ ಮೊತ್ತದ ಸಾಲವನ್ನು ತೊಂದರೆ ಇಲ್ಲದೆ, ಕಡಿಮೆ ಸಮಯದಲ್ಲಿ ಪಡೆಯಲು ಇದು ವಿಶ್ವಾಸಾರ್ಹ ಆಯ್ಕೆ.

Continue Reading

State

ರಾಹುಲ್‌, ಖರ್ಗೆ ಕಾಂಗ್ರೆಸ್ಸಿನ ಹೈಕಮಾಂಡೇ ಅಥವಾ ಯತೀಂದ್ರ ಹೈಕಮಾಂಡೇ: ಬಿ.ವೈ.ವಿಜಯೇಂದ್ರ

Published

on

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು  ಐದು ವರ್ಷ ಕಾಲ ಅವರ ತಂದೆ ಸಿದ್ದರಾಮಯ್ಯ ಅವರೇ ಸಿಎಂ ಎಂದಿದ್ದಾರೆ. ಹಾಗಾದರೆ ಲೋಕಸಭೆ ವಿಪಕ್ಷ ನಾಯಕ ರಾಹುಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಕಾಂಗ್ರೆಸ್ಸಿನ ಹೈಕಮಾಂಡೇ ಅಥವಾ ಯತೀಂದ್ರ  ಅವರೇ ಹೈಕಮಾಂಡ್ ಆಗಿದ್ದಾರಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಈ ಕುರಿತು ಇಂದು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಎಂ ಕುರ್ಚಿಗೆ ಪೈಪೋಟಿ ನಡೆಯುತ್ತಿದೆ. ಸದ್ಯದಲ್ಲಿ ಈ ಸಮಸ್ಯೆ ಬಗೆಹರಿಯುವುದಿಲ್ಲ. ಯಾವ ಪುರುಷಾರ್ಥಕ್ಕೆ ಅಧಿವೇಶನ ಮಾಡುತ್ತೀರಿ? ಸಾಧ್ಯವಾದರೆ ಇದನ್ನು ಮುಂದೂಡಿ ಎಂದು ತಿಳಿಸಿದ್ದೆ. ಅಲ್ಲದೇ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ನಾಡಿನ ಕೃಷಿಕರು, ರೈತರ, ಬಡವರ, ನೇಕಾರರ ಸಮಸ್ಯೆ ಸೇರಿ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕೆಂದು ಸಿಎಂ ಸಿದ್ದರಾಮಯ್ಯನವರಿಗೆ ಅಧಿವೇಶನ ಪ್ರಾರಂಭಕ್ಕೂ ಮೊದಲೇ ಗಮನ ಸೆಳೆದಿದ್ದೆ ಎಂದು ತಿಳಿಸಿದ್ದಾರೆ.

ರಾಜ್ಯದ ಸಿಎಂ ವಿಚಾರದಲ್ಲಿ  ಪೈಪೋಟಿ ಹೆಚ್ಚಾಗಿದೆ. ಸಿದ್ದರಾಮಯ್ಯ ಅವರು ಹೈಕಮಾಂಡ್ ಹೇಳಿದಂತೆ ಕೇಳುವುದಾಗಿ ಹೇಳುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿಗೆ ಬಂದಾಗ ಒಂದು ರೀತಿ ನಿಸ್ಸಹಾಯಕರಾಗಿ ಮಾತನಾಡಿದ್ದಾಗಿ ಗಮನ ಸೆಳೆದರು. ಇವರ ಗೊಂದಲದಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದುಬಿದ್ದಿದೆ ಎಂದು ಹೇಳಿದ್ದಾರೆ.

ನಾಯಕತ್ವ ಸಮಸ್ಯೆ ಪರಿಹರಿಸಿಕೊಂಡ ಬಳಿಕವೇ ಅಧಿವೇಶನ ನಡೆಸಿ. ಆಗ ಮಾತ್ರ ರೈತರ ಸಮಸ್ಯೆ, ಎಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದೆಂದು ಹೇಳಿದ್ದೆವು. ಆದರೆ ಆಡಳಿತ ಪಕ್ಷ ಮತ್ತು ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸುವ ಮತ್ತು ಸಮಸ್ಯೆಗೆ ಸ್ಪಂದಿಸಬೇಕೆಂಬ ವ್ಯವಧಾನವೂ ಇಲ್ಲದೇ ಇರುವುದು ನಿಜವಾಗಲೂ ದುರ್ದೈವ ಎಂದು ವ್ಯಂಗ್ಯ ಮಾಡಿದ್ದಾರೆ.

ರಾಜ್ಯದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಮೆಕ್ಕೆಜೋಳ ಬೆಳೆಗಾರರು ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರ 2,400 ರೂ. ಬೆಂಬಲ ಬೆಲೆ ನಿಗದಿಪಡಿಸಿದರೂ ಸೂಕ್ತ ಸಮಯದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ರೈತರು ಮೆಕ್ಕೆಜೋಳವನ್ನು 1,700- 1,600 ರೂ.ಗೆ ದಲ್ಲಾಳಿಗಳಿಗೆ, ಮಧ್ಯವರ್ತಿಗಳಿಗೆ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ಬೆಳೆ ಪರಿಹಾರವನ್ನು ಘೋಷಿಸಿ 3 ತಿಂಗಳಾದರೂ ಸಮರ್ಪಕವಾಗಿ ಕೊಟ್ಟಿಲ್ಲ. ಭೀಕರ ಮಳೆಯಿಂದ ರಾಜ್ಯದಲ್ಲಿ ರಸ್ತೆಗಳು ಗುಂಡಿಗಳಿಂದ ತುಂಬಿಕೊಂಡಿವೆ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ, ಭ್ರಷ್ಟಾಚಾರ ಮಿತಿ ಮೀರಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಎರಡು ವರ್ಷಗಳಿಂದ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದ ಸಿಎಂ  ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಒಬ್ಬರಿಗೆ ಒಬ್ಬರು ಕತ್ತಿ ಮಸೆಯುತ್ತಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದ ಮೇಲೆ ಆಗುತ್ತಿದೆ. ಮುಖ್ಯಮಂತ್ರಿಗಳ ವಿಚಾರ ಕಾಂಗ್ರೆಸ್ಸಿನ ಆಂತರಿಕ ವಿಚಾರವಲ್ಲ, ಅವರು ರಾಜ್ಯಕ್ಕೆ ಮುಖ್ಯಮಂತ್ರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Continue Reading

State

ನಾಳೆ ದೆಹಲಿಯಲ್ಲಿ ವೋಟ್ ಚೋರಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ: ರಾಜ್ಯದ ಸಿಎಂ ಡಿಸಿಎಂ ಭಾಗಿ

Published

on

ಬೆಂಗಳೂರು: ನಾಳೆ ದೆಹಲಿಯಲ್ಲಿ ವೋಟ್ ಚೋರಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ನಡೆಸಲಿದ್ದು, ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಭಾಗವಹಿಸಲಿದ್ದಾರೆ.

ಡಿನ್ನರ್, ಬ್ರೇಕ್​ಫಾಸ್ಟ್ ನಂತರ ಸಿಎಂ ಸಿದ್ದರಾಮಯ್ಯ  ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯತ್ತ ಮುಖಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಈಗಾಗಲೇ ದೆಹಲಿಗೆ ಹಾರಿದ್ದು, ನಾಳೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಅಲ್ಲದೇ ನಾಳೆ ವೋಟ್ ಚೋರಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ನೆಪದಲ್ಲಿ ಇಬ್ಬರು ನಾಯಕರನ್ನು ದೆಹಲಿ ಕರೆಸಿಕೊಂಡರಾ ಎಂಬ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ.

ದೇಶದ ಅನೇಕ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ವೋಟ್ ಚೋರಿ ನಡೆದಿದೆ ಅಂತಾ ಕಾಂಗ್ರೆಸ್ ಸಮರ ಸಾರಿದೆ. ಇದೀಗ ಎರಡನೇ ಹಂತದ ವೋಟ್ ಚೋರಿ ಅಭಿಯಾನಕ್ಕೆ ಸಿದ್ಧತೆ ಮಾಡಿಕೊಂಡಿದೆ. ನಾಳೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಅಭಿಯಾನ ನಡೆಯಲಿದೆ. ಹೀಗಾಗಿ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್  ಪಾಲ್ಗೊಳ್ಳಲಿದ್ದಾರೆ.

ಈ ವೇಳೆ ಮಂಡ್ಯ ನಾಯಕರ ಟೀಂ ದಿಲ್ಲಿ ಯಾತ್ರೆ ಕೈಗೊಂಡಿದೆ.  ಸಚಿವ ಎನ್‌. ಚಲುವರಾಯಸ್ವಾಮಿ ನೇತೃತ್ವದಲ್ಲಿ ತಂಡ ದೆಹಲಿಗೆ ತೆರಳುವ ಯೋಜನೆ ಇತ್ತು. ಆದರೆ ಅನಾರೋಗ್ಯದ ಕಾರಣ ಚಲುವರಾಯಸ್ವಾಮಿ ದೆಹಲಿಗೆ ಹೋಗುತ್ತಿಲ್ಲ. ಉಳಿದಂತೆ ಶಾಸಕರುಗಳಾದ ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗ ದೆಹಲಿಗೆ ತೆರಳಿದ್ದಾರೆ.

ಮಂಡ್ಯ ಶಾಸಕ ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್​​, ನನ್ನ ಜೊತೆ ಯಾರೂ ದೆಹಲಿಗೆ ಬರುತ್ತಿಲ್ಲ. ಅವರವರ ಕ್ಷೇತ್ರದವರ ಜೊತೆ ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ವೋಟ್ ಚೋರಿ ಬಗ್ಗೆ ಕಿಡಿಕಾರಿದ ಎಂಎಲ್​ಸಿ ಸಲೀಂ ಅಹ್ಮದ್, ಇದು ವೋಟ್ ಚೋರಿ ಅಲ್ಲ, ಬಿಜೆಪಿ ಹಾಗೂ ಎಲೆಕ್ಷನ್​ ಕಮಿಷನ್​ನಿಂದ ಡಕಾಯಿತಿ ಅಂದಿದ್ದಾರೆ.

 

Continue Reading

Trending

error: Content is protected !!