Kodagu
ಇನ್ಮುಂದೆ ಸುಂಟಿಕೊಪ್ಪ ಹೈವೇಯಲ್ಲಿ ಸಾಗುವ ವಾಹನಗಳು ANPR ಕ್ಯಾಮರಾದ ಕಣ್ಗಾವಲಿನಲ್ಲಿ
ಮಡಿಕೇರಿ: ಇನ್ಮುಂದೆ ಸುಂಟಿಕೊಪ್ಪ ಪಟ್ಟಣದಲ್ಲಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡುವುದು, ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸುವುದು, ಓವರ್ ಸ್ಪೀಡ್, ತ್ರಿಬ್ಬಲ್ ರೈಡಿಂಗ್, Rash ಡ್ರೈವಿಂಗ್, ಯರ್ರಾಬಿರ್ರಿ ಪಾರ್ಕಿಂಗ್ ಇತ್ಯಾದಿ ರೀತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಕಾದಿದೆ ಶಾಸ್ತಿ. ಯಾಕೆಂದರೆ ಇದೀಗ ಸುಂಟಿಕೊಪ್ಪ ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಮೇಲೆ ANPR ಕ್ಯಾಮರಾ ಕಣ್ಗಾವಲಿಡಲಿದೆ.

ಸುಂಟಿಕೊಪ್ಪ ನಗರದ ಹೃದಯ ಭಾಗವಾಗಿರುವ ಕನ್ನಡ ವೃತ್ತದ ಸಮೀಪದಲ್ಲಿ ಅಂದಾಜು ರೂ. 1.80 ಲಕ್ಷ ವೆಚ್ಚದಲ್ಲಿ ANPR ಕ್ಯಾಮರಾವನ್ನು ಅಳವಡಿಸಲಾಗಿದ್ದು, ಇದು ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ನಿಗಾ ಇಡಲಿದೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವುದು ANPR ಕ್ಯಾಮರಾದಲ್ಲಿ ಸೆರೆ ಆದಲ್ಲಿ ಅಟೋಮ್ಯಾಟಿಕ್ ಆಗಿ ಜುಲ್ಮಾನೆಯ ಚನಲ್ ವಾಹನದ ಮಾಲೀಕರಿಗೆ ರವಾನೆ ಆಗಲಿದೆ. ಹೀಗಾಗಿ ಕಡ್ಡಾಯವಾಗಿ ವಾಹನ ಸವಾರರು ಸಂಚಾರ ನಿಯಮವನ್ನು ಪಾಲಿಸುವಂತೆ ಸುಂಟಿಕೊಪ್ಪ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

ಈ ಕ್ಯಾಮರಾ ಅಳವಡಿಸುವ ಸಂದರ್ಭ ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಮೇಲ್ವಿಚಾರಣೆ ನಡೆಸಿದರು. ಇದಕ್ಕೆ ಪೊಲೀಸ್ ಸಿಬ್ಬಂದಿಗಳು ಸಹಕಾರ ನೀಡಿದರು.
Kodagu
ನಾಳೆ ಕಂಡಕರೆಯಲ್ಲಿ ಮಜ್ಲಿಸುನ್ನೂರು ಕಾರ್ಯಕ್ರಮ
ಚೆಟ್ಟಳ್ಳಿ: ಸಮೀಪದ ಕಂಡಕರೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ಯೂನಿಟ್ ವತಿಯಿಂದ ಮೂರನೇ ವರ್ಷದ ಮಜ್ಲಿಸುನ್ನೂರು ವಾರ್ಷಿಕೋತ್ಸವ ನಾಳೆ ಮದರಸ ಮೈದಾನದಲ್ಲಿ ನಡೆಯಲಿದೆ ಎಂದು ಎಸ್.ಕೆ.ಎಸ್.ಎಸ್.ಎಫ್ ಯೂನಿಟ್ ಕಾರ್ಯದರ್ಶಿ ಸಿ.ಕೆ ಶಂಸುದ್ದೀನ್ ತಿಳಿಸಿದ್ದಾರೆ.

ಭಾನುವಾರ ಮಗ್ರಿಬ್ ನಮಾಝಿನ ಬಳಿಕ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಎಂ.ಎಂ ಅಬ್ದುಲ್ಲಾ ಫೈಝಿ ಮಾಡಲಿದ್ದು,ಪ್ರಭಾಷಣ ಮತ್ತು ದುಆ ನೇತೃತ್ವವನ್ನು ಸಯ್ಯಿದ್ ಹಾಫಿಳ್ ಅಬ್ದುಲ್ ಖಾದರ್ ಫೈಝಿ ಪಟ್ಟಾಂಬಿ ಮಾಡಲಿದ್ದಾರೆ ಎಂದು ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷರದಾ ಸಿಕೆ ಸಂಶುದ್ದೀನ್ ತಿಳಿಸಿದ್ದಾರೆ.
Kodagu
ಮೈಸೂರು ಮತ್ತು ಕೊಡಗಿನ ಪ್ರವಾಸೋದ್ಯಮ ಹಾಗೂ ಪರಂಪರೆ ಅಭಿವೃದ್ಧಿಗೆ ಮಹತ್ವದ ಪ್ರಸ್ತಾವನೆ ಸಲ್ಲಿಸಿದ ಸಂಸದ ಯದುವೀರ್ ಒಡೆಯರ್
ಮಡಿಕೇರಿ: ಕರ್ನಾಟಕದ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಮೂಲಸೌಕರ್ಯಗಳ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿ, ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರ ಮೈಸೂರು ಭೇಟಿಯ ಸಂದರ್ಭದಲ್ಲಿ ಮೈಸೂರು ಹಾಗೂ ಕೊಡಗಿನ ಪ್ರಮುಖ ಪ್ರವಾಸೋದ್ಯಮ ಮತ್ತು ಪರಂಪರೆ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಎರಡು ಪ್ರಮುಖ ಮನವಿಗಳನ್ನು ಸಲ್ಲಿಸಿದರು.
ಅರ್ಜುನ ವೃತ್ತ ಅಭಿವೃದ್ಧಿಗೆ ತಾಂತ್ರಿಕ ಅನುಮೋದನೆ ಕೋರಿಕೆ
ಮೊದಲ ಮನವಿಯಲ್ಲಿ, ಮೈಸೂರಿನ ಅರ್ಜುನ ವೃತ್ತ (ಎಲ್‌ಐಸಿ ಜಂಕ್ಷನ್) ಅಭಿವೃದ್ಧಿ ಯೋಜನೆಗೆ ತಾಂತ್ರಿಕ ಅನುಮೋದನೆ ದೊರಕುವ ಉದ್ದೇಶದಿಂದ ಯೋಜನಾ ನಿರ್ವಹಣಾ ಸಲಹೆಗಾರರನ್ನು (PMC) ನೇಮಕ ಮಾಡುವಂತೆ ಸಚಿವರನ್ನು ಕೋರಿದರು.

ಈ ಯೋಜನೆಗೆ ಈಗಾಗಲೇ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ₹20 ಕೋಟಿ ಅನುದಾನ ಮಂಜೂರಾಗಿದ್ದು, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ದಂತಕಥೆಯ ಆನೆ ಅರ್ಜುನನ ಸ್ಮರಣಾರ್ಥ ಭವ್ಯ ಸ್ಮಾರಕ ನಿರ್ಮಿಸುವ ಉದ್ದೇಶ ಹೊಂದಿದೆ.
2012ರಿಂದ 2019ರವರೆಗೆ ದಸರಾ ಜಂಬೂಸವಾರಿಯಲ್ಲಿ ಮುಂಚೂಣಿ ಆನೆಯಾಗಿ ಭಾಗವಹಿಸಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅರ್ಜುನ ಆನೆ, ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರ ಭಾವನಾತ್ಮಕ ನೆನಪಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದೆ ಎಂದು ಶ್ರೀ ಯದುವೀರ್ ಒಡೆಯರ್ ತಿಳಿಸಿದರು.

ಅರ್ಜುನನಿಗೆ ಸಮರ್ಪಿತವಾದ ಸ್ಮಾರಕ ನಿರ್ಮಾಣವು ಅತ್ಯಂತ ಸೂಕ್ತವಾಗಿದ್ದು, ಈ ವೃತ್ತವು ಮೈಸೂರಿನ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಒಂದಾಗಿರುವುದರ ಜೊತೆಗೆ ಐತಿಹಾಸಿಕ ದಸರಾ ಮೆರವಣಿಗೆಯ ಅಂತಿಮ ತಾಣವಾಗಿರುವುದರಿಂದ ವಿಶೇಷ ಮಹತ್ವ ಪಡೆದುಕೊಂಡಿದೆ ಎಂದು ಅವರು ಹೇಳಿದರು.
ಯೋಜನೆಯಡಿ ವಿಶ್ವಮಟ್ಟದ ವಿನ್ಯಾಸ, ವಾಸ್ತುಶಿಲ್ಪ, ಸಂಚಾರ ನಿರ್ವಹಣೆ, ಭೂದೃಶ್ಯ ಅಭಿವೃದ್ಧಿ ಹಾಗೂ ಸಮಯೋಚಿತ ಅನುಷ್ಠಾನಕ್ಕೆ ಅಗತ್ಯವಿರುವ ಸಮಗ್ರ ವರದಿಯನ್ನು ಸಿದ್ಧಪಡಿಸಲಾಗಿದ್ದು, ಶೀಘ್ರ ಅನುಮೋದನೆಗಾಗಿ ಮನವಿ ಸಲ್ಲಿಸಲಾಗಿದೆ.

ಮಡಿಕೇರಿ ಕೋಟೆಯ ಸಮಗ್ರ ಅಭಿವೃದ್ಧಿಗೆ ಮನವಿ
ಇನ್ನೊಂದು ಮನವಿಯಲ್ಲಿ, ಕೊಡಗಿನ ಐತಿಹಾಸಿಕ ಮಡಿಕೇರಿ ಕೋಟೆಯ ಸಮಗ್ರ ನವೀಕರಣ, ಸಂರಕ್ಷಣೆ ಹಾಗೂ ತಾಂತ್ರಿಕ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರದ ನೆರವು ಕೋರಿದರು.
ಕೊಡಗಿನ ಇತಿಹಾಸ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪದ ವೈಭವದ ಪ್ರತೀಕವಾಗಿರುವ ಈ ಕೋಟೆ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಪ್ರವಾಸಿ ತಾಣವಾಗಿದೆ.
ಪ್ರಸ್ತಾವಿತ ಯೋಜನೆಯ ಪ್ರಮುಖ ಅಂಶಗಳು:
* ಐತಿಹಾಸಿಕ ಕಟ್ಟಡಗಳ ವೈಜ್ಞಾನಿಕ ರಕ್ಷಣೆ ಮತ್ತು ಪುನಶ್ಚೇತನ
* ಆಧುನಿಕ ಪರಂಪರೆ ವಸ್ತುಸಂಗ್ರಹಾಲಯದ ಸ್ಥಾಪನೆ
* ಡಿಜಿಟಲ್ ಮಾಹಿತಿ ವ್ಯವಸ್ಥೆಗಳು ಮತ್ತು ಬಹುಭಾಷಾ ಆಡಿಯೋ ಮಾರ್ಗದರ್ಶಿಗಳ ಅಳವಡಿಕೆ
* ಸೌಂಡ್ ಅಂಡ್ ಲೈಟ್ ಶೋ (Sound & Light Show) ಆರಂಭ
* ಪರಿಸರ ಸ್ನೇಹಿ ಪಾದಚಾರಿ ಮಾರ್ಗಗಳು ಮತ್ತು ಸುಂದರೀಕರಣ
* ವಾಹನ ನಿಲುಗಡೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿ
ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಗೆ ಉತ್ತೇಜನ
ಈ ಎರಡೂ ಯೋಜನೆಗಳು ಅಮೂಲ್ಯ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದರ ಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸಿ, ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಮೈಸೂರು ಹಾಗೂ ಕೊಡಗಿನ ಸ್ಥಳೀಯ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡಲಿವೆ ಎಂದು ಶ್ರೀ ಯದುವೀರ್ ವಾಡಿಯಾರ್ ಅಭಿಪ್ರಾಯಪಟ್ಟರು.
ಪ್ರವಾಸೋದ್ಯಮ ಮತ್ತು ಪರಂಪರೆ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಅಗತ್ಯ ಸಮೀಕ್ಷೆಗಳನ್ನು ಕೈಗೊಂಡು ಸೂಕ್ತ ಆರ್ಥಿಕ ನೆರವು ನೀಡುವಂತೆ ಅವರು ಸಚಿವಾಲಯವನ್ನು ಮನವಿ ಮಾಡಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಾದ್ಯಂತ ಪರಂಪರೆ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಮೂಲಸೌಕರ್ಯ ವೃದ್ಧಿಗೆ ತಾವು ನಿರಂತರವಾಗಿ ಬದ್ಧರಾಗಿರುವುದಾಗಿ ಪುನರುಚ್ಚರಿಸಿದ ಅವರು, ಈ ಭಾಗದ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೂ ಉಳಿಸಿ ಬೆಳೆಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
Kodagu
ಕಾವೇರಿ ಕಾಲೇಜಿನಲ್ಲಿ ಪರಿಸರ ದಿನಾಚರಣೆ
ವಿರಾಜಪೇಟೆ : ವಿರಾಜಪೇಟೆ ಪದವಿ ಪೂರ್ವ ಕಾವೇರಿ ಕಾಲೇಜಿನಲ್ಲಿ ಪರಿಸರ ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಘಟಕದ ವತಿಯಿಂದ ಆಚರಿಸಲಾಯಿತು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪದ್ಮ ಎಂ. ಕೆ ರವರು ಗಿಡವನ್ನು ನೆಟ್ಟು ಇದು ಕೇವಲ ಈ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಪ್ರತಿನಿತ್ಯ ನಮ್ಮ ಸುತ್ತಮುತ್ತಲು ಹಚ್ಚ ಹಸಿರಿನಿಂದ ಕೂಡಿರುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಜವಾಬ್ದಾರಿ.
ಪರಿಸರವು ಮಾನವನ ಜೀವನದ ಆಧಾರವಾಗಿದೆ. ಗಾಳಿ, ನೀರು, ಮಣ್ಣು, ಮರಗಳು, ಪ್ರಾಣಿಗಳು ಮತ್ತು ಪ್ರಕೃತಿಯ ಇತರ ಅಂಶಗಳು ಸೇರಿ ಪರಿಸರವನ್ನು ರೂಪಿಸುತ್ತವೆ. ಪರಿಸರವಿಲ್ಲದೆ ಜೀವಿಗಳ ಅಸ್ತಿತ್ವ ಸಾಧ್ಯವಿಲ್ಲ. ಪರಿಸರದ ಮಹತ್ವವನ್ನು ಅರಿಯುವ ಹಾಗೂ ಅದರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ ಎಂದರು.

ಸ್ವಯಂ ಸೇವಕರಿಂದ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಪ್ರಜ್ಞೆಯನ್ನು ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿ ಅನುಪಮ ತಿಮ್ಮಯ್ಯ, ರಾಷ್ಟ್ರೀಯ ಸೇವಾ ಯೋಜನಾಘಟಕದ ಸದಸ್ಯೆ ಪಿ. ಬಿ. ದೇಚಮ್ಮ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೃಂದದವರು, ಬೋಧಕಕೇತರ ಸಿಬ್ಬಂದಿ ಗಳು,ಎನ್.ಎಸ್.ಎಸ್. ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
-
Politics22 hours agoನಾಳೆ UG CET ಫಲಿತಾಂಶ ಪ್ರಕಟ
-
Chamarajanagar21 hours agoನಗರಸಭೆ ಕಚೇರಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀರೂಪ
-
Politics23 hours agoಖಾತೆ ಹಂಚಿಕೆ ಅಸಮಾಧಾನ ಮಧ್ಯೆ ಕಾಂಗ್ರೆಸ್ ಸರ್ಕಾರದ ಒಳಜಗಳ: ಆರ್. ಅಶೋಕ್ ವ್ಯಂಗ್ಯ ಟೀಕೆ
-
Kodagu21 hours agoಕುಟ್ಟ, ನಾಗರಹೊಳೆ ಸೇರಿದಂತೆ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ
-
Chikmagalur4 hours agoಅಡಿಕೆ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ, ₹5.7 ಲಕ್ಷ ಮೌಲ್ಯದ ಸ್ವತ್ತು ವಶ
-
Kodagu24 hours agoಕೊಡಗು ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ
-
Kodagu8 hours agoಜೂ.06 ರಂದು ವಿದ್ಯುತ್ ವ್ಯತ್ಯಯ
-
National2 hours agoಭಾರತ ಟಿ-20 ತಂಡ ಪ್ರಕಟ: ಶ್ರೇಯಸ್ ಅಯ್ಯರ್ಗೆ ನಾಯಕತ್ವ, ಸೂರ್ಯಕುಮಾರ್ ಔಟ್
