Connect with us

Kodagu

ಹಳ್ಳಿಕಾರ್ ತಳಿ ವೃದ್ದಿಗೆ ರೈತರು ಮುಂದಾಗಬೇಕಿದೆ : ವರ್ತೂರು ಸಂತೋಷ್

Published

on

ಕುಶಾಲನಗರ: ಹಳ್ಳಿಕಾರ್ ತಳಿ ವೃದ್ದಿಗೆ ರೈತರು ಮುಂದಾಗಬೇಕಿದೆ ಎಂದು ಪ್ರಗತಿಪರ ರೈತ ಬಿಗ್ ಬಾಸ್ ಖ್ಯಾತಿಯ ಹಳ್ಳಿಕಾರ್ ವರ್ತೂರು ಸಂತೋಷ್ ಹೇಳಿದರು.
ಕುಶಾಲನಗರ ತಾಲೂಕಿನ ತೊರೆನೂರಿನ ಸೂರ್ಯೋದಯ ಪುರುಷರ ಸ್ವಸಹಾಯ ಸಂಘದ 20ನೇ ವಾರ್ಷಿಕೋತ್ಸವ ಅಂಗವಾಗಿ ಗ್ರಾಮದ ಶ್ರೀ ಕಾವೇರಿ ಮಾತಾ ರೈತ ಕೂಟ, ಗ್ರಾಮ ಪಂಚಾಯತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ದೇವಾಲಯ ಸಮಿತಿ, ಗ್ರಾಮದ ವಿವಿಧ ಸಂಘಸಂಸ್ಥೆಗಳು, ಮಹಿಳಾ ಮತ್ತು ಪುರುಷರ ಸ್ವಸಹಾಯ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ, ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರೈತರ ಕನ್ನಡ ಸಿರಿ ಸಂಕ್ರಾಂತಿ ಸುಗ್ಗಿ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಜೀವನದಲ್ಲಿ ಯಶಸ್ಸು ಗಳಿಸುವ ವಿಷಯಗಳತ್ತ ಮಾತ್ರ ನಮ್ಮ ಗಮನವಿರಬೇಕಿದೆ. ಇತರರನ್ನು ತೆಗೆಳುವುದು, ಪರರ ಜೀವನದ‌ ಬಗ್ಗೆ ಟೀಕೆ ಮಾಡುವುದರಲ್ಲಿಸಾಮಾಜಿಕ ಜಾಲತಾಣಗಳಲ್ಲಿ ವಿನಾಕಾರಣ‌ ಕಾಲಹರಣ‌ ಮಾಡದೆ ಯಶಸ್ಸಿಗೆ ಶ್ರಮಿಸಬೇಕಿದೆ ಎಂದು ಕರೆ ನೀಡಿದರು.

ದಿವ್ಯ ಸಾನಿಧ್ಯ ವಹಿಸಿ‌ದ್ದ ವಿರಾಜಪೇಟೆ ಅರಮೇರಿ ಕಳಂಚೇರಿ ‌ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ‌ ಸ್ವಾಮೀಜಿ ಮಾತನಾಡಿ, ಕೃಷಿಯ ಬಗ್ಗೆ ಒಲವು ಅಗತ್ಯ. ಇರುವ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದಕ್ಕೆ‌ ಪ್ರಮುಖ ಆದ್ಯತೆ ನೀಡಬೇಕು. ಕೃಷಿ ಪ್ರಧಾನ ಪ್ರಾಂತ್ಯಗಳಲ್ಲಿ ಹಳ್ಳಿಗಾಡಿನ ಸೊಗಡು ವೃದ್ದಿಸುವ ಚಟುವಟಿಕೆಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುವ ಮೂಲಕ‌ ನಮ್ಮ ಮುಂದಿನ ಪೀಳಿಗೆಗೆ ಕೃಷಿಯ ಮಹತ್ವದ ಬಗ್ಗೆ ಅರಿವು ಮೂಡಿಸುವಂತಾಗಬೇಕಿದೆ ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಸ್ವಸಹಾಯ ಸಂಘಗಳ ಮೂಲಕ ಲಕ್ಷಾಂತರ ಮಂದಿ ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಆರ್ಥಿಕ ಮಟ್ಟವನ್ನು ವೃದ್ದಿಸಿ ಬದುಕು ಕಟ್ಟಿಕೊಳ್ಳುವಲ್ಲಿ ಸಹಕಾರ ಸಂಘಗಳ‌ ಪಾತ್ರ ಬಹುಮುಖ್ಯವಾಗಿದೆ ಎಂದರು.
ಗ್ರಾಮೀಣ ಸೊಗಡು ನಶಿಸಿ ಹೋಗದಂತೆ ಉಳಿಸಿ ಬೆಳೆಸಲು, ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದರು. ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ಕೊಡಗು ವಿವಿ ಕುಲಪತಿ ಪ್ರೊ.ಅಶೋಕ್ ಸಂ.ಆಲೂರು, ಉರಗ ರಕ್ಷಕ ಸ್ನೇಕ್ ಶ್ಯಾಂ, ಜಿಪಂ ಮಾಜಿ ಸದಸ್ಯ ಬಿ.ಬಿ.ಭಾರತೀಶ್,ಕಸಾಪ ನಿಕಟ ಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿದರು. ಸೂರ್ಯೋದಯ ಪುರುಷರ ಸ್ವಸಹಾಯ ಸಂಘದ ಪ್ರಥಮ‌ ಪ್ರತಿನಿಧಿ ಟಿ.ಬಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ಕೊಡಗು ವಿವಿ ಕುಲಪತಿ ಪ್ರೊ.ಅಶೋಕ್ ಎಸ್.ಆಲೂರು,
ಮೈಸೂರು ನಗರಪಾಲಿಕೆ‌ ಮಾಜಿ ಸದಸ್ಯ ಹಾಗೂ ಹಾವುಗಳ ಸಂರಕ್ಷಕ ಸ್ನೇಕ್ ಶ್ಯಾಂ, ಜಿಪಂ ಮಾಜಿ ಸದಸ್ಯ ಬಿ.ಬಿ.ಭಾರತೀಶ್, ಕುಶಾಲನಗರ ಕನ್ನಡ‌ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ತೊರೆನೂರು ಗ್ರಾಪಂ ಅಧ್ಯಕ್ಷೆ ಶೋಭಾ ಪ್ರಕಾಶ್, ಉಪಾಧ್ಯಕ್ಷೆ ರೂಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಗೌರಮಣಿ, ಸೂರ್ಯೋದಯ ಸಹಕಾರ ಸಂಘದ ಪ್ರಮುಖರಾದ ಕೆ.ಎಸ್.ಕೃಷ್ಣೇಗೌಡ, ಎಚ್.ಬಿ.ಚಂದ್ರಪ್ಪ, ಟಿ.ಕೆ.ಪಾಂಡುರಂಗ, ಉದ್ಯಮಿ ನಟೇಶ್ ಗೌಡ ಸೇರಿದಂತೆ ಕಾರ್ಯಕ್ರಮದ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ಇದ್ದರು.


ಇದಕ್ಕೂ ಮುನ್ನ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪೂರ್ಣಕುಂಭ ಮೆರವಣಿಗೆಗೆ ಚಾಲನೆ‌ ನೀಡಲಾಯಿತು. ‌60 ಕ್ಕೂ ಹೆಚ್ಚು ಅಲಂಕೃತ ರಾಸುಗಳ ಸಮ್ಮುಖದಲ್ಲಿ ಎತ್ತಿನ ಬಂಡಿಯಲ್ಲಿ ವಾದ್ಯಗೋಷ್ಠಿಗಳ ಸಮ್ಮುಖದಲ್ಲಿ ಗಣ್ಯರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ವರದಿ.ಟಿ.ಆರ್.ಪ್ರಭುದೇವ್
ಕುಶಾಲನಗರ

Continue Reading
Click to comment

Leave a Reply

Your email address will not be published. Required fields are marked *

Kodagu

ಶಾಲಾ ವಾಹನ ಅಪಘಾತ

Published

on

ವಿರಾಜಪೇಟೆ ಗಾಂಧಿನಗರದ ಕೃಷಿ ಇಲಾಖೆಯ ಮುಂಭಾಗ ತ್ರಿವೇಣಿ ಶಾಲೆಯ ವಾಹನ ಅಪಘಾತಕ್ಕೀಡಾಗಿ 20ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾರೆ. ಬಸ್ ಚಾಲಕ ಅನಾರೋಗ್ಯದಿಂದ ದಿಡೀರನೆ ಕುಸಿದು ಬಿದ್ದ ಪರಿಣಾಮ ನೇರವಾಗಿ ಟ್ರ್ಯಾಕ್ಟರ್ ಹಾಗೂ ಎರ್ಟಿಗಾ ಕಾರಿಗೆ ಡಿಕ್ಕಿ ಹೊಡೆದು ಕಾರನ್ನು 80 ಮೀಟರ್ ದೂರ

ಎಳೆದುಕೊಂಡು ಹೋಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ರವಾನಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲು ಆಂಬುಲೆನ್ಸ್ ಗೆ ಬೇಡಿಕೆ ಇಟ್ಟಾಗ ವಿರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿ ಒಂದೇ ಒಂದು ಆಂಬುಲೆನ್ಸ್ ಇಲ್ಲದಿರುವುದು ಗೋಚರಿಸಿದೆ. ಆಸ್ಪತ್ರೆಯಲ್ಲಿ ಎರಡು ಆಂಬುಲೆನ್ಸ್ ಇದ್ದು ಕಳೆದ ಎರಡು ತಿಂಗಳ

ಹಿಂದೆ ಬಿಟ್ಟಂಗಾಲದಲ್ಲಿ ನಡೆದ ಅಪಘಾತದಲ್ಲಿ ಆಂಬುಲೆನ್ಸ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅದನ್ನು ಇಲ್ಲಿ ತನಕ ತಾಲೂಕು ಆಸ್ಪತ್ರೆ ತನ್ನ ವಶಕ್ಕೆ ಪಡೆದುಕೊಂಡಿಲ್ಲ. ಮತ್ತೊಂದು ಆಂಬುಲೆನ್ಸ್ ಅನ್ನು ದುರಸ್ತಿಗಾಗಿ ಶೋರೂಮ್ ಗೆ ಬಿಟ್ಟು ಕೆಲವು ತಿಂಗಳುಗಳೇ ಕಳೆದರೂ ಇನ್ನು ದುರಸ್ತಿ ಪಡಿಸಿ ಪಡೆದುಕೊಂಡಿಲ್ಲ. ಈ ಬಗ್ಗೆ ಖುದ್ದು ಮಾಹಿತಿ ಪಡೆದುಕೊಂಡ ತಾಲೂಕು ಜೆಡಿಎಸ್

ಅಧ್ಯಕ್ಷರಾದ ಪಿ.ಎ ಮಂಜುನಾಥ್ ಅವರು ತಾಲೂಕು ಆಸ್ಪತ್ರೆಯ ಅವ್ಯವಸ್ಥೆಯ ಬಗೆ ಖಂಡಿಸಿ ಹೇಳಿಕೆ ನೀಡಿದ್ದಾರೆ. ಕೂಡಲೇ ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ಆಂಬುಲೆನ್ಸ್ ಸೌಕರ್ಯವನ್ನು ಕಲ್ಪಿಸುವಂತೆ ಅವರು ಒತ್ತಾಯಿಸಿದ್ದಾರೆ.

Continue Reading

Kodagu

ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು

Published

on

ಗೋಣಿಕೊಪ್ಪಲು : ಮಂಗಳವಾರ ಗೋಣಿಕೊಪ್ಪಲು ಪೊನ್ನಂಪೇಟೆ ರಸ್ತೆಯಲ್ಲಿ ರಾತ್ರಿ ನಡೆದ ಅಪಘಾತದಲ್ಲಿ ಸ್ಕೂಟರಿನ ಹಿಂಬದಿ ಕುಳಿತಿದ್ದ ಗೋಣಿಕೊಪ್ಪಲು ಸಂತ ಥಾಮಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನು ಇಂದು ಬೆಳಗ್ಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈಕೆ


ಬೈಪಾಸ್ ರಸ್ತೆಯಲ್ಲಿ ಯುನೈಟೆಡ್ ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಶ್ರೀಜಾ ಎಂಬುವರ ಪುತ್ರಿಯಾಗಿದ್ದಾಳೆ. ಮೃತಪಟ್ಟ ಗ್ರಾಮ ಪಂಚಾಯಿತಿ ಸದಸ್ಯೆ ಪ್ರಭಾವತಿ ರವರ ಮನೆಯಲ್ಲಿ ತಂಗಿ ಟ್ಯೂಷನ್ ಪಡೆಯುತ್ತಿದ್ದ ಅನು ನಿನ್ನೆ ಸ್ಕೂಟರ್ನಲ್ಲಿ ಪ್ರಭಾವತಿಯೊಂದಿಗೆ ಪೊನ್ನಂಪೇಟೆಗೆ ತೆರಳಿ ಹಿಂದಿರುಗುವ ವೇಳೆ ಅವಘಡ ನಡೆದಿದೆ.


ಮಂಗಳವಾರ ಗೋಣಿಕೊಪ್ಪ ಸಮೀಪದ ಅರುವತೊಕ್ಲು ಗ್ರಾಮ ಪಂಚಾಯಿತಿ ಸಮೀಪ ಬೊಲೆರೋ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಪ್ರಭಾವತಿಯೊಂದಿಗೆ ಮೃತಪಟ್ಟಿದ್ದರು. ಅನು ಎಂಬುವಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಕೆಯನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿತ್ತು. ಬೊಲೆರೋ ಜೀಪ್ ಸಂಖ್ಯೆ KA 03 AA 1394

ಗುರುತಿಸಲಾಗಿದ್ದು ಚಾಲಕನನ್ನು ಬಂಧಿಸಲಾಗಿದೆ. ಗೋಣಿಕೊಪ್ಪಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Continue Reading

Kodagu

ತೆರೆದ ಬಾವಿಗೆ ಬಿದ್ದು ಕಾಡಾನೆ ಸಾವು

Published

on

ವೀರಾಜಪೇಟೆ : ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದಲ್ಲಿ ಕಳೆದ ರಾತ್ರಿ 11 ಗಂಟೆ ಸಮಯದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತೆರೆದ ಬಾವಿಯನ್ನು ನಿರ್ಮಾಣ ಮಾಡುವ ಹಂತದಲ್ಲಿ ಇದ್ದ ಬಾವಿಗೆ ಕಾಡಾನೆಯೊಂದು ಬಿದ್ದು ಮೃತ ಪಟ್ಟಿದೆ.

ಪಾಲೇಂಗಡ ಬಿದ್ದಪ್ಪ ಶಂಬು ಆವರ ಮನೆ ಮುಂದೆ ಈ ಘಟನೆ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಆನೆಯನ್ನು ಮೇಲೆತ್ತಲು ಕ್ರಮ ಕೈಗೊಂಡಿದ್ದಾರೆ.

ಸ್ಥಳದಲ್ಲಿ ವಿರಾಜಪೇಟೆ ಡಿ ಆರ್ ಎಫ್ ಜಗನಾಥ್, ಎ ಸಿ ಎಫ್ ನೆಹರು, ವಲಯ ಅರಣ್ಯ ಅಧಿಕಾರಿ ದೇವಯ್ಯ, ಡಾ. ಚಿಟ್ಟಿಯಪ್ಪ, ಈಟಿಎಫ್ ಮತ್ತು ಆರ್ ಆರ್ ಟಿ ತಂಡ ವಿರಾಜಪೇಟೆ ಮತ್ತು ಕ್ಯಾಂಪ್ ಸಿಬ್ಬಂದಿಗಳು ಹಾಜರಿದ್ದರು.

Continue Reading

Trending

error: Content is protected !!