State
ವರಮಹಲಕ್ಷ್ಮಿ ಹಬ್ಬಕ್ಕೆ ಹೆಂಗಸರಿಗೆ ಗುಡ್ ನ್ಯೂಸ್..! ಈ ದಾಖಲೆ ಇದ್ರೆ ಬರುತ್ತೆ ನಿಮ್ಮ ಖಾತೆಗೆ ಹಣ ! ಇಂದೇ ಅರ್ಜಿ ಸಲ್ಲಿಸಿ

ವರಮಹಲಕ್ಷ್ಮಿ ಹಬ್ಬಕ್ಕೆ ಹೆಂಗಸರಿಗೆ ಗುಡ್ ನ್ಯೂಸ್..! ಈ ದಾಖಲೆ ಇದ್ರೆ ಬರುತ್ತೆ ನಿಮ್ಮ ಖಾತೆಗೆ ಹಣ ! ಇಂದೇ ಅರ್ಜಿ ಸಲ್ಲಿಸಿ
ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರದಿಂದ ಹೆಣ್ಣು ಮಕ್ಕಳಿಗೆ ಗುಡ್ ನ್ಯೂಸ್ ಸಿಗಲಿದೆ ಅಂದರೆ ನಿಮ್ಮ ಹತ್ತಿರ ಈ ಸರ್ಟಿಫಿಕೇಟ್ ಇದ್ದರೆ ನಿಮ್ಮ ಖಾತೆಗೆ ಬರಲಿ ವರಮಹಲಕ್ಷ್ಮಿ ಹಬ್ಬದ ಪ್ರಯುಕ್ತ ಎಲ್ಲ ಮನೆಯ ಒಡತಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ ಏನೆಂದರೆ ಈ ಯೋಜನೆಯ ಲಾಭ ಪಡೆಯಲು ನೀವು ಏನು ಮಾಡಬೇಕು ಏಕೆ ಈ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಲು ಮಾಡಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ
varamahalakshmi special offer gruhalakshmi
ಗೃಹಲಕ್ಷ್ಮಿ ಯೋಜನೆ ಬಗ್ಗೆ ನಿಮಗೆ ಗೊತ್ತು ಆದರೆ ಗೃಹಲಕ್ಷ್ಮಿ ಯೋಜನೆ ಹಣ ಯಾವಾಗ ಬರುತ್ತದೆ ಎಂಬ ಕಾತುರ ಎಲ್ಲಾ ಗೃಹಿಣಿಯರಿಗೆ ಇದೆ ಹಾಗೂ ವರಲಕ್ಷ್ಮಿ ಹಬ್ಬದ ಪ್ರಯುಕ್ತ ಬಂದೇಬಿಡ್ತು ನೋಡಿ ಈ ಸಂದರ್ಭದಲ್ಲಿ ಹಣ ಖರ್ಚು ಆಗುತ್ತದೆ ಅನ್ನುವವರಿಗೆ ವರಲಕ್ಷ್ಮಿ ಹಬ್ಬದ ಪ್ರಯುಕ್ತ ಗೃಹಲಕ್ಷ್ಮಿ ಹಣ ಸಿಗಲಿದೆ ಅನ್ನಭಾಗ್ಯ ಯೋಜನೆಯ ಹಣ ಅನೇಕರಿಗೆ ಈಗಾಗಲೇ ಬೀಳಲಿದೆ ಮತ್ತು ಗೃಹಲಕ್ಷ್ಮಿಯ ಹಣ ಸಹ ಹಬ್ಬದ ಖರ್ಚು ವೆಚ್ಚ ನೋಡಿಕೊಳ್ಳಲು ರಾಜ್ಯ ಸರ್ಕಾರ ನೀಡಲಿದೆ ಎಂದು ಸುದ್ದಿ ಬಂದಿದೆ.
ಸರ್ಕಾರದಿಂದ ಪ್ರತಿ ಮನೆನ ಒಬ್ಬ ಸದಸ್ಯನಿಗೆ 5 ಕೆಜಿ ಅಕ್ಕಿ 170 ಹಾಗೂ ಸಾವಿರ ರೂಪಾಯಿ ಆಗಸ್ಟ್ 27ರ ನಂತರ ಅವರ ಬ್ಯಾಂಕ್ ಖಾತೆಗೆ ಬರಲಿದೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ವರಮಹಾಲಕ್ಷ್ಮಿ ಹಬ್ಬದ ದಿನ ಬರುವ ಸಾಧ್ಯತೆ ಇದೆ ಹಾಗೂ ಏಕಕಾಲದಲ್ಲಿ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಬಂದಿಲ್ಲವಾದರೆ ಒಂದೇ ಬಾರಿ ಬರುವ ನಿರೀಕ್ಷೆ ಇದೆ ಹಾಗೂ ಗೃಹಲಕ್ಷ್ಮಿ ಯೋಜನೆ ಬಗ್ಗೆ ನೀವು ಅರ್ಜಿಯನ್ನು ಈಗಾಗಲೇ ಸಲ್ಲಿಸಿದ್ದೀರಿ ಮತ್ತು ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಿದ ನಂತರ ನಿಮಗೆ ಒಂದು ಆರ್ಡರ್ ಕಾಪಿ ನೀಡಿರುತ್ತಾರೆ ಅದನ್ನು ನೀವು ಇಟ್ಟುಕೊಂಡಿರಬೇಕು ಒಂದು ವೇಳೆ ಹಣ ಬರೆದಿದ್ದಲ್ಲಿ ಅದರ ಮೂಲಕ ಚೆಕ್ ಮಾಡಬಹುದಾಗಿದೆ ಹಾಗಾಗಿ 100% ನಿಮಗೆ ಹಣ ಬಂದೇ ಬರುತ್ತದೆ ಸರ್ಕಾರದ ಗ್ಯಾರಂಟಿ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ತಿಳಿಸಿದ್ದಾರೆ
ಎರಡನೇ ತಿಂಗಳ ಹಣವು ಸಹ ಆಗಸ್ಟ್ 25ರ ಆಗಲಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿರುತ್ತಾರೆ ಹಾಗೂ ಎಂದಿನಂತೆ ತಾವು ನುಡಿದಂತೆ ನಡೆಯುತ್ತವೆ ನುಡಿದಂತೆ ನಡೆಯುವ ಸರ್ಕಾರ ನಮ್ಮದು ನಮ್ಮ ಪಕ್ಷ ನೀಡಿದ ಎಲ್ಲಾ ಗ್ಯಾರೆಂಟಿ ಯೋಜನೆಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತಿದೆ ಹಾಗೂ ತಮ್ಮ ಮಾತು ಹುಸಿ ಆಗುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿರುತ್ತಾರೆ. ನೀವು ಸಹ ಈ ಒಂದು ಯೋಜನೆಯನ್ನು ಪಡೆಯಬೇಕಾದರೆ ನೀವು ಇನ್ನೂ ಕೆಲವು ದಿನಗಳು ಕಾಯಬೇಕು ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಗೃಹಲಕ್ಷ್ಮಿ ಅರ್ಜಿ ನಮೂನೆಯ ಆರ್ಡರ್ ಕಾಪಿ ಇಟ್ಟುಕೊಂಡಿರಬೇಕು ಒಂದುವೇಳೆ ಹಣ ಬಂದಿಲ್ಲವೆಂದರೆ ಅದರ ಸಹಾಯದಿಂದ ನೀವು ಯೋಜನೆಯ ಲಾಭ ಪಡೆಯಲು ಸಾಧ್ಯ.
ಒಂದು ವೇಳೆ ನೀವು ಇನ್ನೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂದರೆ ಈ ಕಡೆ ಅರ್ಜಿಯನ್ನು ಸಲ್ಲಿಸಿ ಎಂದರೆ ಸಹಕಾರವು ಕೊನೆಯ ದಿನಾಂಕವನ್ನು ಇನ್ನು ನಿಗದಿಪಡಿಸಿಲ್ಲ ಯಾವಾಗಲಾದರೂ ವನ್ಯ ದಿನಾಂಕವನ್ನು ಹಾಕುವ ಸಾಧ್ಯತೆ ಇರುತ್ತದೆ ನಿಮ್ಮ ಹತ್ತಿರದ ಕರ್ನಾಟಕ ವನ್ ಹಾಗೂ ಗ್ರಾಮವನ್ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜುನ್ ಸಲ್ಲಿಸಲು ನಿಮ್ಮ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಮತ್ತು ರೇಷನ್ ಕಾರ್ಡ್ ಅನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಮನೆಯಲ್ಲಿರುವ ಯಾವುದೇ ಸದಸ್ಯ ಹೋಗಿ ಅರಿಯನ್ನು ಸಲ್ಲಿಸಬಹುದು ಮನೆಯ ಒಳಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಕಾಯುವ ಅವಶ್ಯಕತೆ ಇಲ್ಲ ಅಗತ್ಯ ದಾಖಲೆಗಳೊಂದಿಗೆ ಯಾರಾದರೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Kodagu
ಬೆಂಗಳೂರು ಕೊಡವ ಸಮಾಜಕ್ಕೆ ಏಳು ಏಕರೆ ಜಾಗ: ಎಪ್ಪತ್ತು ವರ್ಷಗಳ ಬಳಿಕ ಮರುಕಳಿಸಿದ ಇತಿಹಾಸ

ಬರಹ : ತೆನ್ನೀರ ಮೈನಾ, ಕಾಂಗ್ರೆಸ್ ಮುಖಂಡರು
ಬೆಂಗಳೂರು: ಕೊಡವ ಸಮಾಜ, ಕರ್ನಾಟಕದ ರಾಜ್ಯಧಾನಿ ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಸಂಸ್ಥೆ. ವಿಶ್ವದಲ್ಲಿಯೇ ಅಪರೂಪದ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಕೊಡವ ಜನಾಂಗದ ಆಚರಣೆಗಳನ್ನು ನಗರೀಕರಣದ ನಡುವೆಯೂ ನಾಶವಾಗದ ಹಾಗೆ ಕಾಪಾಡಿಕೊಂಡು ಬರುತ್ತಿರುವ ಸಂಸ್ಥೆಯಾಗಿದೆ.
1911 ರಲ್ಲಿ ಕೂರ್ಗ್ ಅಸೋಸಿಯೇಷನ್ ಎಂಬ ಹೆಸರಿನಲ್ಲಿ ಕೇವಲ 30 ಸದಸ್ಯರಿಂದ ಸ್ಥಾಪಿತವಾಗಿ ನಂತರ ಬೆಂಗಳೂರು ಕೊಡವ ಸಮಾಜ ಎಂದು ನಾಮಕರಣಗೊಂಡು ಕೊಡವ ಸಾಹಿತ್ಯ, ಸಂಸ್ಕೃತಿ,ಭಾಷೆ,ಉಡುಗೆ ತೊಡುಗೆ ,ಪದ್ದತಿ ಪರಂಪರೆಯ ಬೆಳವಣಿಗೆಗೆ ತನ್ನದೇ ಆದ ಅಪರಿಮಿತ ಕೊಡುಗೆ ನೀಡುವ ಮೂಲಕ ಬೃಹತ್ತಾಗಿ ಬೆಳೆದಿದೆ. ಸ್ಥಾಪಕ ಅಧ್ಯಕ್ಷ ಕುಪ್ಪಂಡ ಮುದ್ದಪ್ಪರವರಿಂದ ಪ್ರಸ್ತುತ ಅಧ್ಯಕ್ಷ ಕರೋಟಿರ ಪೆಮ್ಮಯ್ಯನವರ ವರೆಗೆ ಸೇವೆ ಸಲ್ಲಿಸಿದ ಎಲ್ಲಾ ಅಧ್ಯಕ್ಷರು ಮತ್ತು ಅವರ ಪಧಾಧಿಕಾರಿಗಳ ಪರಿಶ್ರಮದಿಂದ ಉಚ್ಛ್ರಾಯ ಸ್ಥಿತಿಯಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.20 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು ಬೆಂಗಳೂರಿನಲ್ಲಿರುವ ಸುಮಾರು 40 ಸಾವಿರದಷ್ಟಿರುವ ಕೊಡವರಿಗೆ ಬೆಂಗಳೂರು ಕೊಡವ ಸಮಾಜ ಗುರುಮನೆಯಂತಿದೆ.
ಆರಂಭದಲ್ಲಿ ಬೆಂಗಳೂರು ಕೊಡವ ಸಮಾಜಕ್ಕೆ ಸ್ವಂತ ಕಟ್ಟಡವಾಗಲಿ ನಿವೇಶನವಾಗಲಿ ಇರಲಿಲ್ಲ. ಬಸವನಗುಡಿ ಬಳಿಯ ಖಾಸಗಿ ಜಾಗದಲ್ಲಿ ತಮ್ಮ ಕಾರ್ಯಕ್ರಮಗಳನ್ನು( ಪುತ್ತರಿ ನಮ್ಮೆ,ಕೈಲ್ ಪೊಳ್ದ್ ನಮ್ಮೆ,ಊರೊರ್ಮೆ ಮುಂತಾದವು) ನಡೆಸುತ್ತಿದ್ದರು. ಭಾರತದ ಮಹಾನ್ ಸೇನಾ ದಂಡನಾಯಕರಾಗಿ ಸೇವೆ ಸಲ್ಲಿಸಿದ್ದ,ಶಿಸ್ತು ಮತ್ತು ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡಿದ್ದ ಜನರಲ್ ಕೊಡಂದೇರ.ಎಂ.ಕಾರ್ಯಪ್ಪ ( ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ) ನವರು ಭಾರತೀಯ ಸೈನ್ಯಕ್ಕೆ ಹಾಗೂ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸ್ವತಂತ್ರ ಭಾರತದ ಅಂದಿನ ವಿಶಾಲ ಮೈಸೂರು ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ಬೆಂಗಳೂರಿನ ಹೃದಯ ಭಾಗದಲ್ಲಿರುವ ವಸಂತ ನಗರದಲ್ಲಿ ಒಂದು ಏಕರೆ ಜಾಗವನ್ನು ಉಡುಗೊರೆಯಾಗಿ ನೀಡಿದ್ದರು.ಆ ಜಾಗವನ್ನು 1956 ರಲ್ಲಿ ಬೆಂಗಳೂರು ಕೊಡವ ಸಮಾಜಕ್ಕೆ ದಾನವಾಗಿ ನೀಡಿದರು.ನಂತರದಲ್ಲಿ ಬೆಂಗಳೂರು ಕೊಡವ ಸಮಾಜ ಆ ಜಾಗದಲ್ಲಿ ಬೃಹತ್ ಬಹುಮಹಡಿ ಕಟ್ಟಡಗಳನ್ನು ಹಂತ ಹಂತವಾಗಿ ಕಟ್ಟಿ ದೊಡ್ಡ ಸಂಸ್ಥೆಯಾಗಿ ಬೆಳೆಸಿತು.ಸಂಸ್ಕೃತಿಯ ಬೆಳವಣಿಗೆಗಳ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮತ್ತಷ್ಟು ಮೇಲ್ಪಂಕ್ತಿಯನ್ನು ಸಂಸ್ಥೆ ತಲುಪಿತು.
ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು ಮಾಡಿದ ಕಾರ್ಯ ಇತಿಹಾಸ ನಿರ್ಮಿಸಿದರೆ ಆ ರೀತಿಯ ಇತಿಹಾಸ ಮತ್ತೊಮ್ಮೆ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ.ಎಸ್.ಪೊನ್ನಣ್ಣ ನವರಿಂದ ಮತ್ತೊಮ್ಮೆ ಮರುಕಳಿಸಿದೆ.ಅದಕ್ಕೆ ಕಾರಣ ಬೆಂಗಳೂರು ಕೊಡವ ಸಮಾಜದ ಹೆಸರಿಗೆ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಹೊಸಹಳ್ಳಿ ಯ ಸರ್ವೆ ನಂ 21 ರಲ್ಲಿ ವರ್ಗಾವಣೆಗೊಂಡ ಏಳು ಏಕರೆ ಅತ್ಯಮೂಲ್ಯ ಜಾಗ.
2011 ರಲ್ಲಿ ಬೆಂಗಳೂರು ಕೊಡವ ಸಮಾಜದ ಶತಮಾನೋತ್ಸವ ಕಾರ್ಯಕ್ರಮದ ಸಂಧರ್ಭದಲ್ಲಿ ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡರು ಅಂದಿನ ಕರ್ನಾಟಕ ರಾಜ್ಯ ವಿಧಾನ ಸಭಾ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ರವರಿಗೆ ಸಮಾಜದ ಪ್ರಮುಖರು ಏಳು ಏಕರೆ ಜಾಗದ ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ. ಸದಾನಂದ ಗೌಡರು ಒಪ್ಪಿಗೆ ಸೂಚಿಸುತ್ತಾರೆ. ನಂತರ ಆಡಳಿತಾತ್ಮಕ ಪ್ರಕ್ರಿಯೆ ಗಳು ನಡೆದು ದಿನಾಂಕ 8-3-2023 ರಂದು ಸರ್ಕಾರ ಸದರಿ ಜಾಗವನ್ನು ಕೃಷಿಯೇತರ ಜಮೀನಿನ ಪ್ರಸ್ತುತ ಮಾರುಕಟ್ಟೆ ದರ ಪಾವತಿಸಲು ಒಪ್ಪಿಗೆ ನೀಡುತ್ತದೆ. ಕೊಡವ ಸಮಾಜದ ಪಾಲಿಗೆ ಇದೊಂದು ನಿಲುಕದ ದ್ರಾಕ್ಷಿ. ಮಾರುಕಟ್ಟೆ ದರ ವೆಂದರೆ 40 ಕೋಟಿಯಿಂದ 50 ಕೋಟಿ ವೆಚ್ಚವಾಗುತ್ತದೆ.ಇದು ಆ ಸಂಸ್ಥೆಗೆ ಅಸಾಧ್ಯವಾದ ಕಾರ್ಯ. ಆದರೂ ಬೆಂಗಳೂರು ಕೊಡವ ಸಮಾಜ ಸುಮ್ಮನಾಗುವುದಿಲ್ಲ. ಭಗೀರಥ ಪ್ರಯತ್ನ ಮುಂದುವರಿಸುತ್ತದೆ.
ಬೆಂಗಳೂರು ಕೊಡವ ಸಮಾಜದ ಪ್ರಸ್ತುತ ಅಧ್ಯಕ್ಷರಾದ ಕರೋಟಿರ ಪೆಮ್ಮಯ್ಯ ನವರ ನೇತೃತ್ವದಲ್ಲಿ ಮತ್ತೊಂದು ಸಾಹಸಕ್ಕೆ ಮುನ್ನುಡಿ ಹಾಕುತ್ತಾರೆ.ಸರ್ಕಾರ ಬದಲಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರಾಗಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಅಪಾರ ಅನುಭವ ಹೊಂದಿರುವ ಎ.ಎಸ್.ಪೊನ್ನಣ್ಣ ನವರು ಆಯ್ಕೆಯಾಗುತ್ತಾರೆ.
ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಗಳ ಕಾನೂನು ಸಲಹೆಗಾರರಾಗಿ ಸಂಪುಟ ದರ್ಜೆ ಸ್ಥಾನದೊಂದಿಗೆ ನೇಮಕಗೊಳ್ಳುತ್ತಾರೆ
ಸ್ವತಃ ವಕೀಲರಾದ ಕರೋಟಿರ ಪೆಮ್ಮಯ್ಯ ಮತ್ತು ಅವರ ತಂಡ ಪೊನ್ನಣ್ಣ ನವರಿಗೆ ಮನವಿ ಸಲ್ಲಿಸುತ್ತಾರೆ. ಹಲವು ಸುತ್ತಿನ ಮಾತುಕತೆಗಳು ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತದೆ.ದಿನಾಂಕ 4-3-2024 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಎ.ಎಸ್.ಪೊನ್ನಣ್ಣ ನವರಿಂದ ನಡಾವಳಿ ಪತ್ರ ಸಲ್ಲಿಕೆಯಾಗುತ್ತದೆ. ಮಾನ್ಯ ಮುಖ್ಯಮಂತ್ರಿ ಗಳು ಸಂಪುಟ ಸಭೆಯಲ್ಲಿ ಪ್ರಸ್ತಾವನೆಯನ್ನು ಚರ್ಚೆಗೆ ತರುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮತ್ತು ಬೆಂಗಳೂರು ಉಸ್ತುವಾರಿ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಪೊನ್ನಣ್ಣ ನವರ ಕೋರಿಕೆಯನ್ನು ಒಪ್ಪುತ್ತಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರ ಸಹಮತದೊಂದಿಗೆ ಸಚಿವ ಸಂಪುಟವೇ ಪೊನ್ನಣ್ಣನವರ ನಡಾವಳಿಗೆ ಮನ್ನಣೆ ನೀಡುತ್ತದೆ.ವಿಶೇಷ ವಿನಾಯತಿಯಡಿ ಜಮೀನು ನೀಡಲು ( ಮಾರುಕಟ್ಟೆ ದರಕ್ಕಿಂತ ಶೇ 90 ರಷ್ಟು ರಿಯಾಯಿತಿ) ಒಪ್ಪಿಗೆ ನೀಡುತ್ತದೆ.ಭೂ ಮಂಜೂರಾತಿ ನಿಯಮಗಳು 1969 ರ ನಿಯಮ 22-ಎ(1)(i)(2) ರನ್ವಯ ಆದೇಶ ಸಂಖ್ಯೆ ನಂ.ಎಲ್.ಎನ್.ಡಿ (ಎನ್.ಎ)/203/2009-10 ದಿನಾಂಕ 2-6-2025 ರಂದು ಆದೇಶ ಹೊರಡಿಸುತ್ತದೆ. ಕೇವಲ ಒಂದು ಕೋಟಿ 7 ಲಕ್ಷ ರೂ.ಗಳನ್ನು ಪಾವತಿಸಿ ಕೊಡವ ಸಮಾಜ ಜಾಗವನ್ನು ಪಡೆಯುತ್ತದೆ.ದಶಕಗಳ ಕೊಡವ ಸಮಾಜದ ಕನಸು ನನಸಾಗುತ್ತದೆ.
ಈ ಭಾನುವಾರ ಅಂದರೆ ದಿನಾಂಕ 15-6-2025 ರಂದು ಬೆಂಗಳೂರು ಕೊಡವ ಸಮಾಜದವತಿಯಿಂದ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾನಯ್ಯನವರು, ಸನ್ಮಾನ್ಯ ಡಿ.ಸಿ.ಎಂ.ಡಿ.ಕೆ ಶಿವಕುಮಾರ್, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಮುಖ ರುವಾರಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಸೇರಿದಂತೆ ಸಚಿವ ಸಂಪುಟದ ಸದಸ್ಯರಿಗೆ ಅಭಿನಂದನೆಗಳು ಮತ್ತು ಕೃತಜ್ಞತೆ ಸಮಾರಂಭ ಏರ್ಪಡಿಸಿದ್ದು ಬೆಂಗಳೂರು ಕೊಡವ ಸಮಾಜದ ಪಾಲಿಗೆ ಐತಿಹಾಸಿಕ ಕಾರ್ಯಕ್ರಮವಾಗಿದೆ.
State
ಹಾಸನ ಏರ್‌ಪೋರ್ಟ್ 2026ಕ್ಕೆ ಪೂರ್ಣ: ಚಿಕ್ಕಮಗಳೂರು-ಮಡಿಕೇರಿಯಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ವರದಿ ಸಿದ್ಧ

ಬೆಂಗಳೂರು: ರಾಜ್ಯ 2 ಜಿಲ್ಲೆಗಳಲ್ಲಿ ಶೀಘ್ರದಲ್ಲಿಯೇ ವಿಮಾನ ನಿಲ್ದಾಣ ಆರಂಭಿಸಲು ಸರ್ಕಾರ ಮುಂದಾಗಿದೆ. ಸದ್ಯ ನಿರ್ಮಾಣ ಹಂತದಲ್ಲಿರುವ ವಿಜಯಪುರ, ಹಾಸನ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದ್ದು, ಶೀಘ್ರ ಉದ್ಘಾಟನೆಗೆ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ.
ರಾಜ್ಯ ಸರಕಾರವು ಕರ್ನಾಟಕದ ಎಲ್ಲ ದಿಕ್ಕುಗಳಲ್ಲೂ ವಿಮಾನ ನಿಲ್ದಾಣ ನಿರ್ಮಿಸಲು ಆದ್ಯತೆ ನೀಡಿದೆ. ಇದರಿಂದ ಪ್ರವಾಸೋದ್ಯಮ, ಶೈಕ್ಷಣಿಕ ಚಟುವಟಿಕೆಗಳು, ವಾಣಿಜ್ಯ ವಹಿವಾಟು, ಕೃಷಿ ಉತ್ಪನ್ನಗಳ ಸಾಗಾಟ ಇವೆಲ್ಲವೂ ಸುಗಮವಾಗಲಿದೆ.
ಅಂತಿಮವಾಗಿ ಈ ಉಪಕ್ರಮವು ರಾಜ್ಯದ ಆರ್ಥಿಕತೆಗೆ ಬಲ ತುಂಬಲಿದೆ. ಕೆಎಸ್‌ಐಐಡಿಸಿ ಮೂಲಕವೇ ರಾಜ್ಯದ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ಮಾಡುವ ಚಾರಿತ್ರಿಕ ನಿರ್ಧಾರ ದೊಂದಿಗೆ ಬೊಕ್ಕಸಕ್ಕೆ ಹೊಸ ಸಂಪನ್ಮೂಲ ಸೃಷ್ಟಿಸುವ ಉದ್ದೇಶವನ್ನೂ ಇರಿಸಿಕೊಳ್ಳಲಾಗಿದೆ.
ಹೊಸ ವಿಮಾನ ನಿಲ್ದಾಣ ಆರಂಭದ ಬಗ್ಗೆ ಬೃಹತ್ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.
ವಿಜಯಪುರ ನಿಲ್ದಾಣ ಯಾವಾಗ:
ವಿಜಯಪುರದಲ್ಲಿ ಒಟ್ಟು 727 ಎಕರೆ ವಿಸ್ತೀರ್ಣದಲ್ಲಿ 347.92 ಕೋಟಿ ರೂ. ವೆಚ್ಚದಲ್ಲಿ ಏರ್‌ಪೋರ್ಟ್ ನಿರ್ಮಾಣವಾಗುತ್ತಿದ್ದು, ಏರ್‌ಬಸ್ – 320 ಮಾದರಿಯ ವಿಮಾನ ನಿಲ್ದಾಣದಲ್ಲಿ ಖುದ್ದು ಮುತುವರ್ಜಿಯಿಂದಾಗಿ ರಾತ್ರಿ ವೇಳೆ ವಿಮಾನಗಳ ಲ್ಯಾಂಡಿಂಗ್ ಸೌಲಭ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಾರ್ಯಾಚರಣೆಗೆ ಕೇಂದ್ರ ಪರಿಸರ ಇಲಾಖೆ ಸೇರಿದಂತೆ ಅಗತ್ಯವಿರುವ ಪರವಾನಗಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ವರ್ಷಾಂತ್ಯದಲ್ಲಿ ಉದ್ಘಾಟನೆ ಮಾಡಲು ಸಿದ್ಧತೆ ನಡೆಸಲಾಗಿದೆ.
ಹಾಸನ ವಿಮಾನ ನಿಲ್ದಾಣ ಮುಂದಿನ ವರ್ಷ:
ಎಟಿಆರ್ – 72 ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ, ಜಿಲ್ಲಾ ಕೇಂದ್ರದಿಂದ 6 ಕಿ.ಮೀ. ದೂರದಲ್ಲಿರುವ ಬೂವನಹಳ್ಳಿಯಲ್ಲಿ ನಿರ್ಮಾಣವಾಗಲಿರುವ 193.65 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಇಲ್ಲಿಯವರೆಗೆ 164.70 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪ್ಯಾಕೇಜ್ – 1 ರಲ್ಲಿ 117.67 ಕೋಟಿ ರೂ. ಹಾಗೂ ಪ್ಯಾಕೇಜ್-2 ರಲ್ಲಿ 67.77 ಕೋಟಿ ರೂ. ಮೊತ್ತದ ಕಾಮಗಾರಿಗಳು ನಡೆಯುತ್ತಿದ್ದು, 2026ರಲ್ಲಿ ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ.
2 ನಿಲ್ದಾಣ ಮೇಲ್ದರ್ಜೆಗೆ: ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಮೇಲ್ದರ್ಜೆಗೇರಿಸುವ ಉದ್ದೇಶ ಇದೆ. ಇದಕ್ಕೆ ಕೇಂದ್ರಕ್ಕೆ ಸದ್ಯದಲ್ಲೇ ಪತ್ರ ಬರೆಯಲು ನಿರ್ಧರಿಸಲಾಗಿದೆ. ರಾಯಚೂರು ವಿಮಾನ ನಿಲ್ದಾಣ ಕಾಮಗಾರಿಗೆ ವೇಗ ಪಡೆದುಕೊಂಡಿದೆ. ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿ ನಿರ್ಮಾಣವಾಗಲಿರುವ 219 ಕೋಟಿ ರೂ.ವೆಚ್ಚದ ಯೋಜನೆ ಇದಾಗಿದೆ. ಇಲ್ಲಿಯವರೆಗೆ 164.70 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕಾರವಾರ ಸಿವಿಲ್ ಎನ್ಕ್ಲೇವ್: ಭಾರತೀಯ ನೌಕಾಪಡೆಯ ಸೀಬರ್ಡ್ ಯೋಜನೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ರಕ್ಷಣಾ ವಿಮಾನ ನಿಲ್ದಾಣವನ್ನು ನಾಗರಿಕ ವಾಯುಯಾನಕ್ಕೂ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಸರ್ಕಾರದ ಕ್ರಮ ಕೈಗೊಂಡಿದೆ.
ನೌಕಾಪಡೆ ಸಹಯೋಗದಲ್ಲಿ ಸಿವಿಲ್ ಎನ್ಕ್ಲೇವ್ ನಿರ್ಮಿಸಲು ಅಂಕೋಲಾ ದಿಂದ 5 ಕಿ.ಮೀ ದೂರದಲ್ಲಿ 27.84 ಕೋಟಿ ವೆಚ್ಚದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿ 2025-26ನೇ ಸಾಲಿನಲ್ಲಿ ಮುಗಿಯುವ ನಿರೀಕ್ಷೆ ಇದೆ. ಇದಕ್ಕೆ ಬೇಕಾಗುವ 82 ಕೋಟಿ ಹಣವನ್ನು ರಾಜ್ಯವೇ ಭರಿಸಲಿದೆ.
3 ಹೆಲಿಪೋರ್ಟ್ ನಿರ್ಮಾಣ
ಚಿಕ್ಕಮಗಳೂರು, ಮಡಿಕೇರಿ ಮತ್ತು ಹಂಪಿಯಲ್ಲಿ ಹೆಲಿಪೋರ್ಟ್ ನಿರ್ಮಾಣ ಸಂಬಂಧ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಕಾರ್ಯಸಾಧ್ಯತಾ ವರದಿ ಮತ್ತು ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಭೂಮಿ ಗುರುತಿಸಲಾಗಿದೆ. ಇಲ್ಲಿ ಭೂಸ್ವಾಧೀನಕ್ಕಾಗಿ ಹಣ ಬಿಡುಗಡೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಕರ್ನಾಟಕ ವೈಮಾನಿಕ ವಲಯದಲ್ಲಿ ಈಗ ದಕ್ಷಿಣ ಏಷ್ಯಾದ ಎಂ.ಆರ್.ಒ. ರಾಜಧಾನಿಯಾಗಿದೆ. ಇದಕ್ಕೆ ತಕ್ಕಂತೆ ಏರ್ ಇಂಡಿಯಾ, ಇಂಡಿಗೋ ಮತ್ತು ಲಾಕಿನ್ ಮಾರ್ಟಿನ್ ಕಂಪನಿಗಳು ರಾಜ್ಯದಲ್ಲಿ ತಮ್ಮ ಎಂಆರ್‌ಒ ಘಟಕಗಳನ್ನು ಸ್ಥಾಪಿಸುತ್ತಿವೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ.
State
16ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಜ್ಞಾಪನಾ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಲು ಒತ್ತಾಯಿಸಿದೆ: ಸಿಎಂ ಸಿದ್ದರಾಮಯ್ಯ
ನವದೆಹಲಿ: ಹದಿನಾರನೇಯ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಮನವಿಯನ್ನು ಸಲ್ಲಿಸುವುದರ ಜೊತೆಗೆ ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಿ ಹೇಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶುಕ್ರವಾರ 16 ನೇ ಹಣಕಾಸಿನ ಆಯೋಗದ ಸಭೆಯಲ್ಲಿ ಭಾಗವಹಿಸಿದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
16 ನೇ ಹಣಕಾಸಿನ ಆಯೋಗದ ಅಧ್ಯಕ್ಷ ಅರವಿಂದ ಪರಗಾರಿಯಾ ಮತ್ತು ಸದಸ್ಯರನ್ನು ಭೇಟಿಯಾಗಿ ಹೆಚ್ಚುವರಿ ಜ್ಞಾಪನಾ ಪತ್ರವನ್ನು ಆಯೋಗಕ್ಕೆ ಸಲ್ಲಿಸಲಾಗಿದೆ ಎಂದರು.
ಯಾರಿಗೂ ಅನ್ಯಾಯವಾಗಬಾರದು
2011-2012 ರಲ್ಲಿ ಕರ್ನಾಟಕ ರಾಜ್ಯವು ಜಿಡಿಪಿಗೆ ಶೇ 7ರಷ್ಟು ಕೊಡುಗೆ ನೀಡಿದ್ದರೆ, 2024-25 ರಲ್ಲಿ ರಾಜ್ಯವು ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ.8.7ರಷ್ಟುಕೊಡುಗೆ ನೀಡುತ್ತಿದೆ. ಜಿಎಸ್ ಟಿ ಸಂಗ್ರಹಣೆಯಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ 2 ನೇ ಸ್ಥಾನದಲ್ಲಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ 5 ರಷ್ಟಿದ್ದೇವೆ. 5 ವಷರ್ಗಳಿಗೊಮ್ಮೆ ಹಣಕಾಸಿನ ಆಯೋಗ ರಚನೆಯಾಗುತ್ತದೆ. ಸಂವಿಧಾನದ ಅನುಚ್ಛೇದ 180 ಪ್ರಕಾರ ತೆರಿಗೆ ಹಂಚಿಕೆಯಾಗಬೇಕೆಂದು ಹೇಳಲಾಗಿದ್ದು ಯಾರಿಗೂ ಅನ್ಯಾಯವಾಗಬಾರದೆಂದು ಸ್ಪಷ್ಟಪಡಿಸಿದೆ ಎಂದರು.
5 ವರ್ಷಗಳಲ್ಲಿ ರಾಜ್ಯದ ಪಾಲು ಒಟ್ಟು 68,275 ಕೋಟಿ ರೂ.ಗಳು ಕಡಿಮೆಯಾಗಿದೆ
ಕರ್ನಾಟಕ ರಾಜ್ಯ ಪ್ರತಿ ವರ್ಷ 4.5 ಲಕ್ಷ ಕೋಟಿ ತೆರಿಗೆ ನೀಡುತ್ತದೆ. ಒಂದು ರೂ.ಗಳು ನೀಡಿದರೆ 15 ಪೈಸೆ ನಮಗೆ ವಾಪಸ್ಸು ಬರುತ್ತದೆ. ಈ ಅನ್ಯಾಯ 16 ನೇ ಹಣಕಾಸು ಆಯೋಗದಲ್ಲಿ ಆಗಬಾರದು. 14 ನೇ ಹಣಕಾಸು ಆಯೋಗದಲ್ಲಿ ನಮ್ಮ ತೆರಿಗೆ ಪಾಲು 4.713% ಕ್ಕೆ ಮತ್ತು 15 ನೇ ಹಣಕಾಸು ಆಯೋಗದಲ್ಲಿ ತೆರಿಗೆ ಪಾಲು 3.647% ಕ್ಕೆಇಳಿಕೆ ಮಾಡಿದ್ದರಿಂದ ತೆರಿಗೆ ಹಂಚಿಕೆಯಲ್ಲಿ ನಮ್ಮ ಪಾಲನ್ನು ಒಟ್ಟಾರೆ 23% ರಷ್ಟು ಇಳಿಕೆ ಮಾಡಲಾಗಿದೆ. 5 ವರ್ಷಗಳಲ್ಲಿ ಒಟ್ಟು 68,275 ಕೋಟಿ ರೂ.ಗಳು ಕಡಿಮೆಯಾಗಿದೆ ಎಂದರು.
ಸೆಸ್ ಮತ್ತು ಸರ್ಚಾಜ್ ಶೇ. 5ರಷ್ಟನ್ನು ಮೀರಬಾರದು
ಇದರೊಂದಿಗೆ ಕೇಂದ್ರ ಸರ್ಕಾರ ಸೆಸ್ ಮತ್ತು ಸರ್ಜಾರ್ಜ್ ನಲ್ಲಿ ನಮಗೆ ಮಾತ್ರವಲ್ಲ ಯಾವ ರಾಜ್ಯಕ್ಕೂ ಪಾಲು ಕೊಡುವುದಿಲ್ಲ. ಕರ್ನಾಟಕದಿಂದ 2024-25ರಲ್ಲಿ ಒಟ್ಟು 5,41,709 ಕೋಟಿ ಸಂಗ್ರಹವಾಗಿದೆ. 8,084 ಕೋಟಿ ರೂ.ಗಳು ಕರ್ನಾಟಕ್ಕೆ ನಷ್ಟವಾಗಿದೆ. ಸೆಸ್ ಮತ್ತು ಸರ್ಚಾಜ್ ಶೇ 5ರಷ್ಟನ್ನು ಮೀರಬಾರದು, ಒಂದು ವೇಳೆ 5% ಮೀರಿದರೆ ರಾಜ್ಯಗಳ ತೆರಿಗೆ ಹಂಚಿಕೆಯ ಪಾಲಿನಲ್ಲಿ ಶೇ 50 ರಷ್ಟು ಹೆಚ್ಚಳ ಮಾಡಬೇಕು, ಎಂದು ಮನವಿ ಮಾಡಲಾಗಿದೆ ಎಂದರು.
ತೆರಿಗೆ ನ್ಯಾಯಯುತವಾಗಿ ಹಂಚಿಕೆಯಾಗಬೇಕು
ಕರ್ನಾಟಕ ಆರ್ಥಿಕವಾಗಿ ಬೆಳವಣಿಗೆಯಾದರೆ ಕೇಂದ್ರ ಸರ್ಕಾರದ ಬೆಳವಣಿಗೆಯೂ ಆಗುತ್ತದೆ. ಹಾಗಾಗಿ ನ್ಯಾಯಯುತವಾಗಿ ಹಂಚಿಕೆಯಾಗಬೇಕು ಎಂದು ಕೋರಲಾಗಿದೆ ಎಂದರು.
ರಾಜಸ್ವ ಕೊರತೆ ಅನುದಾನ ರಾಜ್ಯಕ್ಕಿಲ್ಲ
ರಾಜ್ಯದ ತಲಾದಾಯವು ಆರು ಜಿಲ್ಲೆಗಳನ್ನು ಹೊರತುಪಡೆಸಿ ಕಡಿಮೆಯಿದೆ. ಕಲ್ಯಾಣ ಕರ್ನಾಟಕದಲ್ಲಿ ಇನ್ನೂ ಕಡಿಮೆಯಿದ್ದು, ಇದು ರಾಜಸ್ಥಾನ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಲದ ಸರಿಸಮಾನವಾಗಿದೆ. ರಾಜಸ್ವ ಕೊರತೆ ಇರುವ ರಾಜ್ಯಗಳಿಗೆ ಈ ಕೊರತೆಯನ್ನು ತುಂಬಲು ಅನುದಾನವನ್ನು ನೀಡಲಾಗುತ್ತದೆ. ಆದರೆ ತೆರಿಗೆ ಹಂಚಿಕೆಯಲ್ಲಿ ನಮ್ಮಷ್ಟೇ ನಷ್ಟವಾಗಿರುವ ಕೇರಳಕ್ಕೆ ಕಳೆದ ವರ್ಷ 38000 ಕೋಟಿಗಳನ್ನು ರಾಜಸ್ವ ಕೊರತೆ ತುಂಬಲು ಒದಗಿಸಲಾಗಿದೆ. ಕರ್ನಾಟಕಕ್ಕೆ ಯಾವುದೇ ರಾಜಸ್ವ ಕೊರತೆ ಅನುದಾನ ಬಂದಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ವಿಶೇಷ ಅನುದಾನವನ್ನು ಒದಗಿಸಲು ನಿರಾಕರಿಸಿತು
15 ನೇ ಹಣಕಾಸಿನ ಆಯೋಗವು ರಾಜ್ಯಕ್ಕೆ 5495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಕರ್ನಾಟಕ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಿಗೆ ಒದಗಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ಅನುದಾನವನ್ನು ಒದಗಿಸಲು ನಿರಾಕರಿಸಿತು. ಇದಲ್ಲದೇ ಪೆರಿಫೆರಲ್ ರಿಂಗ್ ರಸ್ತೆ ಗೆ 3000 ಕೋಟಿ ಹಾಗೂ ಕೆರೆಗಳ ಅಭಿವೃದ್ಧಿಗೆ 3000 ಕೋಟಿ ನೀಡಬೇಕೆಂದು ಶಿಫಾರಸ್ಸು ಮಾಡಿತ್ತು. ಎರಡೂ ಸೇರಿ 11495 ಕೋಟಿ ರೂ.ಗಳನ್ನು ಒದಗಿಸಬೇಕೆಂದು 15 ನೇ ಹಣಕಾಸಿನ ಆಯೋಗವು ಶಿಫಾರಸ್ಸು ಮಾಡಿತ್ತು ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಬೆಂಗಳೂರು ಅಭಿವೃದ್ಧಿಗೆ 1.ಲಕ್ಷ 15 ಸಾವಿರ ಕೋಟಿ ಒದಗಿಸಲು ಮನವಿ
ಬೆಂಗಳೂರು ನಗರ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ನಮ್ಮ ಮನವಿಯಲ್ಲಿ ಕೋರಿರುವಂತೆ ಅನುದಾನವನ್ನು ಒದಗಿಸದೇ ಹೋದರೆ ಬೆಂಗಳೂರು ಅಭಿವೃದ್ಧಿಗೆ 1.ಲಕ್ಷ 15 ಸಾವಿರ ಕೋಟಿಗಳನ್ನು ಒದಗಿಸಬೇಕು ಎಂದು ಕೋರಿದೆ ಎಂದರು.
ವಿಶೇಷ ಅನುದಾನ ಒದಗಿಸಿ
ಕಲ್ಯಾಣ ಕರ್ನಾಟಕದಲ್ಲಿ ಏಳು ಜಿಲ್ಲೆಗಳನ್ನು ಒಳಗೊಂಡಿದ್ದು 5 ಜಿಲ್ಲೆಗಳ ವಾರ್ಷಿಕ ವರಮಾನವು ರಾಜಸ್ಥಾನ,ಬಿಹಾರ, ಉತ್ತರ ಪ್ರದೇಶ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಲದ ಸರಿಸಮಾನವಿದೆ. ಮಲೆನಾಡು ಪ್ರದೇಶಗಳಲ್ಲಿ ನಮಗೆ ಪ್ರವಾಹ, ಭೂ ಕುಸಿತದಂತಹ ಸಮಸ್ಯೆಗಳು ತಲೆದೋರುತ್ತವೆ. ಅದ್ದರಿಂದ ವಿಶೇಷ ಅನುದಾನ ಒದಗಿಸಬೇಕು ಎಂದು ಕೋರಿದೆ.
ವಿವೇಚನಾ ಅನುದಾನವು 0.3% ಗಿಂತ ಹೆಚ್ಚಾಗಬಾರದು
ಕೇಂದ್ರ ಸರ್ಕಾರದ ವಿವೇಚನಾ ಅನುದಾನವು 0.3% ಗಿಂತ ಹೆಚ್ಚಾಗಬಾರದು ಎಂದು ಮನವಿ ಮಾಡಲಾಗಿದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮೂರು ಮಾನದಂಡಗಳ ಪ್ರಕಾರ ನಡೆದುಕೊಂಡಿರುವ ಕರ್ನಾಟಕ ರಾಜ್ಯ . ಹಾಗಾಗಿ ಆರ್ಥಿಕವಾಗಿ ರಾಜ್ಯ ಸದೃಢವಾಗಿದೆ ಎಂದು ಆಯೋಗದ ಗಮನಕ್ಕೆ ತರಲಾಗಿದೆ. ಹೆಚ್ಚುವರಿ ಮನವಿಯಲ್ಲಿಯೂ ಹೇಳಲಾಗಿದೆ. ಇದೊಂದು ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸುವ ಕೆಲಸವಾಗಬೇಕು. ಕರ್ನಾಟಕಕ್ಕೆ ಅನ್ಯಾಯವಾಗಬಾರದು ಎಂದು ಕೋರಲಾಗಿದೆ ಎಂದರು.
ತೆರಿಗೆ ಹಂಚಿಕೆ ವೈಜ್ಞಾನಿಕವಾಗಿ ಆಗಬೇಕು
ಕೇರಳ, ತಮಿಳುನಾಡಿಗೂ ನಮ್ಮಷ್ಟೇ ನಷ್ಟವಾಗಿದ್ದರೂ, ಅವರಿಗೆ ರಾಜಸ್ವ ಕೊರತೆ ಅನುದಾನವನ್ನು ನೀಡಲಾಗಿದೆ. ನಮಗೇಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಲಾಗಿದೆ. ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಬಾರದು ಎಂದು ನಾವು ಹೇಳುವುದಿಲ್ಲ. ಆದರೆ ತೆರಿಗೆ ಹಂಚಿಕೆ ವೈಜ್ಞಾನಿಕವಾಗಿ ಮಾಡಬೇಕು ಎಂದು ಕೋರಲಾಗಿದೆ ಎಂದರು.
ಈ ಬಗ್ಗೆ ಇತರೆ ರಾಜ್ಯಗಳು ಧ್ವನಿ ಎತ್ತಿವೆ ಎಂದೂ ಮುಖ್ಯಮಂತ್ರಿಗಳು ತಿಳಿಸಿದರು. ಸಭೆಯು ಒಂದೂ ಕಾಲ ಗಂಟೆಗಳ ಕಾಲ ಸೌಹಾರ್ದಯುತವಾಗಿ ನಡೆದಿದ್ದು, ಆಯೋಗದ ಅಧ್ಯಕ್ಷರು ನಮ್ಮ ಸಲಹೆಗಳನ್ನು ಸ್ವೀಕರಿಸಿದ್ದಾರೆ ಎಂದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ , ಮುಖ್ಯಮಂತ್ರಿಗಳ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ತಿಳಿಸಿದರು.
-
Mandya23 hours ago
ನೇಣು ಬಿಗಿದ ಸ್ಥಿತಿಯಲ್ಲಿ ಪುರುಷ ಹಾಗೂ ಮಹಿಳೆಯ ಕೊಳೆತ ಶ*ವಗಳು ಪತ್ತೆ
-
State19 hours ago
ಹಾಸನ ಏರ್‌ಪೋರ್ಟ್ 2026ಕ್ಕೆ ಪೂರ್ಣ: ಚಿಕ್ಕಮಗಳೂರು-ಮಡಿಕೇರಿಯಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ವರದಿ ಸಿದ್ಧ
-
Mandya24 hours ago
ಜೂ. 26ಕ್ಕೆ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಕಾರ್ಯಕ್ರಮ: ಡಾ. ಕುಮಾರ
-
Kodagu23 hours ago
ಗೃಹಲಕ್ಷ್ಮಿ ಯೋಜನೆ ಇ-ಕೆವೈಸಿ ಫೆಲ್ಯೂರ್: ಹತ್ತಿರದ ಸಿಡಿಪಿಓ ಕಚೇರಿ ತೆರಳಿ Status ಪರಿಶೀಲನೆ ಮಾಡಿಸಿ
-
Hassan23 hours ago
ಬೆಳೆ ವಿಮೆ ಪ್ರಚಾರದ ವಾಹನಗಳಿಗೆ ಡಿಸಿ ಸಿ. ಸತ್ಯಭಾಮ ಚಾಲನೆ
-
Hassan20 hours ago
ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
-
Mandya24 hours ago
ಗೌರವ ಡಾಕ್ಟರೇಟ್ ಸ್ವೀಕರಿಸಲು ಪ್ರೊ.ಜಯಪ್ರಕಾಶ್ ಗೌಡ ಅವರಿಗೆ ಅಧಿಕೃತ ಆಹ್ವಾನ
-
State20 hours ago
16ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಜ್ಞಾಪನಾ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ