Connect with us

Mysore

ಬಾಣಂತಿ ಅಮ್ಮನವರ ಉರುಸ್ ಉತ್ಸವ.

Published

on

ಸಾಲಿಗ್ರಾಮ : ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ವಿದ್ಯುತ್ ಅಲಂಕಾರ ಗಳೊಂದಿಗೆ ಬಾಣಂತಿ ಅಮ್ಮನವರ ಉರುಸ್ ಉತ್ಸವ   ಅದ್ದೂರಿಯಾಗಿ ಆಚರಣೆ ಮಾಡಿದರು.

ಸಾಲಿಗ್ರಾಮದ  ಜಾಮಿಯಾ ಮಸೀದಿಯಿಂದ ಬಾಣಂತಿ ಅಮ್ಮನವರ ಉರುಸ್ ಉತ್ಸವ ಪ್ರಾರಂಭವಾಗಿ ಡೋಲು ಕಲಾತಂಡಗಳೊಂದಿಗೆ ಬಾಣಂತಿ ಅಮ್ಮ ರವರ  ಕಳಸವನ್ನು ನಗರದ ಪ್ರಮುಖರಸ್ತೆಗಳಲ್ಲಿ ಹಾಗೂ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ   ಮೆರವಣಿಗೆ ನಡೆಸಿದರು. ನಂತರ ಬಾಣಂತಿ ಅಮ್ಮ ನವರ ಉತ್ಸವಕ್ಕೆ   ಗಂಧದ ಅಭಿಷೇಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ   ಶಾಸಕ ಡಿ ರವಿಶಂಕರ್ ಅವರು  ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬಜೆಟ್ ಮಂಡನೆ ಮಾಡಿ ಜನಗಳಿಗೆ ನೀಡಿದ ಭರವಸೆಯಂತೆ  ನುಡಿದಂತೆ ನಡೆದಿದ್ದಾರೆ. ಮುಂದಿನ ದಿನಗಳಲ್ಲಿ ಕೆ ಆರ್ ನಗರ  ಮತ್ತು ಸಾಲಿಗ್ರಾಮ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಲಾಗುವುದು, ಈಗಾಗಲೇ ಹರದನಹಳ್ಳಿ ಮುಖ್ಯ ರಸ್ತೆಯಿಂದ ಕಾಳಮ್ಮನ ಕೊಪ್ಪಲು,ಮಲುಗನಹಳ್ಳಿ ಶೀಗವಾಳು ರಸ್ತೆಗೆ ಅನುದಾನ ಸಿದ್ಧವಿದ್ದು ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು. ಜೊತೆಗೆ ಬಾಣಂತಮ್ಮನವರ ದೇವಾಲಯದ ಸುತ್ತ ಕಾಂಪೌಂಡ್ ನಿರ್ಮಾಣದ  ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪೂರ್ಣ ರಾತ್ರಿ ನಡೆದ ಉತ್ಸವದಲ್ಲಿ ಮಹಿಳೆಯರು, ಮಕ್ಕಳು  ಪಾಲ್ಗೊಂಡು ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು ಬೇಡಿಕೊಂಡರು.

ಮುಸ್ಲಿಂ ಬಾಂಧವರಾದ ಮುನ್ನ, ಶಬೀರ್,  ನಜಿರ್,  ಅಸ್ಲಾಂ,  ಮುತ್ತಾರ್ ಪಾಶ,  ಜಿಯಾ,  ಕಲಿಲ್,  ಅಬ್ರಾ ರ್ ,  ಸರ್ದಾರ್,   ಲೋಮಾನ್ ,  ಸೌಕತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಠಿ ಕುಮಾರ್,  ದ ಸಂ ಸ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಇದ್ದಾರೆ.

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ

Continue Reading
Click to comment

Leave a Reply

Your email address will not be published. Required fields are marked *

Mysore

ಎಚ್‌.ಎನ್‌. ವಿಜಯ್ ರವರ 51 ನೇ ವರ್ಷದ ಹುಟ್ಟುಹಬ್ಬ ಸಂತಸ ತಂದಿದೆ: ಲಕ್ಕಿಕುಪ್ಪೆ ಸುಬ್ಬೇಗೌಡ

Published

on

ವರದಿ: ಎಸ್. ಬಿ.ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ: ಹರದನಹಳ್ಳಿ  ಎನ್. ವಿಜಯ್ ರವರ 51 ನೇ ವರ್ಷದ ಹುಟ್ಟು ಹಬ್ಬ, ಈ ಭಾಗದ ಜನತೆಗೆ ಸಂತಸ ತಂದಿದೆ ಎಂದು ಲಕ್ಕಿಕುಪ್ಪೆ ಸುಬ್ಬೇಗೌಡ ತಿಳಿಸಿದ್ದಾರೆ.

ಮೈಸೂರು ಮುಡಾ ಮಾಜಿ ಅಧ್ಯಕ್ಷ ಎಚ್‌.ಎನ್‌. ವಿಜಯ್ ಅವರು ಹಾಂಗ್ ಕಾಂಗ್ ನಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಕೃಷಿಕ ಪ್ರಶಸ್ತಿಗೆ ಭಾಜನ ರಾಗಿರುವುದು ಹೆಮ್ಮೆಯ ವಿಷಯವಾಗಿದೆ. 500 ಕ್ಕೂ ಅಧಿಕ ನಿರುದ್ಯೋಗ ಯುವಕ, ಯುವತಿಯರಿಗೆ ಕೆಲಸ ನೀಡಿ, ಅವರ ಕುಟುಂಬ ನಿರ್ವಹಣೆಗೆ ದಾರಿ ದೀಪವಾಗಿದ್ದಾರೆ ಎಂದು ಹೇಳಿದರು.

ಬಡ ಜನತೆಗೆ ಹಣ ಸಹಾಯ ಮಾಡಿ ಬಡವರ ಬಂದು ಆಗಿರುವ ಎಚ್.ಎನ್. ವಿಜಯ್ ಅವರು ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆ ಮಾಡಿ ಈ ಊರಿನ ಕೀರ್ತಿಯನ್ನು ರಾಜ್ಯವೇ ಮೆಚ್ಚುವಂತೆ ಮಾಡಲಿ ಎಂದರು.

ಜುಲೈ .16 ರಂದು ನಡೆಯಲಿರುವ ಅವರ ಜನ್ಮ ದಿನದ ಪ್ರಯುಕ್ತ ಹರದನಹಳ್ಳಿ ಗ್ರಾಮದಲ್ಲಿ ಸೀಮಂತ ಕಾರ್ಯಕ್ರಮ ಪ್ರತಿಭಾ ಪುರಸ್ಕಾರ ಅನ್ನ ಸಂತರ್ಪಣೆ, ಆರೋಗ್ಯ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿರುವುದು ವಿಶೇಷ ವಾಗಿದೆ ಎಂದು ತಿಳಿಸಿದರು.

Continue Reading

Mysore

ಎಚ್‌.ಎನ್‌.ವಿಜಯ್‌ ಹುಟ್ಟು ಹಬ್ಬ: ಹೊಸದುರ್ಗ ಶ್ರೀ ಭಗೀರಥ ಪೀಠದ ಡಾ. ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಪರಿಶೀಲನೆ

Published

on

ವರದಿ: ಎಸ್. ಬಿ. ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ: ಮೈಸೂರುನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್ ಅವರ 51ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಿದ್ಧತೆಯನ್ನು ಹೊಸದುರ್ಗ ಶ್ರೀ ಭಗೀರಥ ಪೀಠದ ಡಾ.ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ಅವರು ಶನಿವಾರ ಪರಿಶೀಲಿಸಿದರು.

ವಿಜಯ್ ಅವರ ಹುಟ್ಟೂರು ತಾಲ್ಲೂಕಿನ ಹರದನಹಳ್ಳಿಯಲ್ಲಿ ನಡೆಯುತ್ತಿರುವ ಜನ್ಮದಿನೋತ್ಸವ ಕಾರ್ಯಕ್ರಮದ ಪೆಂಡಾಲ್, ಪಾರ್ಕಿಂಗ್, ಊಟದ ಸ್ಥಳ, ವೇದಿಕೆ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ಸಮಾರಂಭದಲ್ಲಿ ಸುಮಾರು ಇಪ್ಪತ್ತು ಸಾವಿರ ಜನರು ಸೇರುವ ನಿರೀಕ್ಷೆಯಿದ್ದು, ಬರುವಂತಹ ಎಲ್ಲರಿಗೂ ಯಾವುದೇ ರೀತಿಯ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಮೂಡ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್, ಮುಖಂಡರಾದ ಮಿರ್ಲೆ ರಾಜೀವ್, ಎಲ್ಐಸಿ ನಿಂಗಪ್ಪ, ವೆಂಕಟೇಶ್, ಕೆ.ಟಿ.ಮೋಹನ್ ಕುಮಾರ್, ಹೆಚ್.ಜೆ.ಗೋಪಾಲ್, ಪೊಲೀಸ್ ಬಸವೇಗೌಡ, ತಿಮ್ಮೇಗೌಡ, ಡಾಲ್ಪಿ, ಎಸ್. ಆರ್.ರವಿಕುಮಾರ, ಲಕ್ಷ್ಮೀಶ ಸೇರಿದಂತೆ ಹಲವರು ಇದ್ದರು.

Continue Reading

Mysore

ಜು.14ಕ್ಕೆ ದೃಷ್ಟಿ ಹೀನರಿಗಾಗಿ ವಿಶೇಷ ಉಪಕರಣ ಅಳವಡಿಸಿರುವ 200 ನೂತನ ಬಸ್‌ ಲೋಕಾರ್ಪಣೆ: ಡಾ.ಪುಷ್ಪಾ ಅಮರನಾಥ್‌

Published

on

ಮೈಸೂರು: ನಮ್ಮ ಸರ್ಕಾರದ ಶಕ್ತಿ ಯೋಜನೆ ಅಡಿಯಲ್ಲಿ ಇದುವರೆಗೂ 500 ಕೋಟಿ ಮಹಿಳೆಯರು ಓಡಾಡಿದ್ದಾರೆ. ಇದೊಂದು ದೊಡ್ಡ ಮೈಲಿಗಲ್ಲಾಗಿದ್ದು, ಈ ಮೂಲಕ ನಮ್ಮ ಸರ್ಕಾರ ಇಡೀ ದೇಶದಲ್ಲೇ ದೊಡ್ಡ ದಾಖಲೆ ಬರೆದಿದೆ. ಇದರ ಬೆನ್ನಲ್ಲೇ ಜು.14 ರಂದು ದೃಷ್ಟಿ ಹೀನರಿಗಾಗಿ ವಿಶೇಷ ಉಪಕರಣ ಅಳವಡಿಸಿರುವ 200 ನೂತನ ಬಸ್‌ ಅನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ನಮ್ಮ ಶಕ್ತಿ ಯೋಜನೆಯಲ್ಲಿ 500 ಕೋಟಿ ಮಹಿಳೆಯರು ಓಡಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ಸರ್ಕಾರ ಜಿಲ್ಲಾ ತಾಲೂಕು ಮಟ್ಟದಲ್ಲಿ 5 ಶತಕ ಮಹಿಳಾ ಸಂಭ್ರಮ ಆಚರಿಸುತ್ತಿದೆ. ನಮ್ಮದು ಮೊದಲೇ ಬಡವರ ಪರ ಮಹಿಳೆಯರ ಪರವಾದ ಸರ್ಕಾರ. ಮಹಿಳೆಯರಿಗೆ ಶಕ್ತಿ ತುಂಬುವ ಮೂಲಕ ನಮ್ಮ ಸರ್ಕಾರ ಇಡೀ ದೇಶದಲ್ಲೇ ದೊಡ್ಡ ದಾಖಲೆ ಬರೆದಿದೆ. ನಮ್ಮ ರಾಜ್ಯದಲ್ಲಿ ಮಹಿಳೆಯರು ಸಾರಿಗೆ ಸ್ವಾತಂತ್ರ್ಯ ಅನುಭವಿಸುವ ಅವಕಾಶವನ್ನು ನಮ್ಮ ಸರ್ಕಾರ ನೀಡಿದೆ. ಹಾಗಾಗಿ ಇದೇ ಸೋಮವಾರ(ಜು.14) ದಂದು ಈ ಯಶಸ್ಸನ್ನು ಸಿಹಿ ಹಂಚಿ ಮಹಿಳೆಯರೊಂದಿಗೆ ಪ್ರಯಾಣಿಸಿ ಸಂಭ್ರಮಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಮೈಸೂರಲ್ಲಿ ಶಕ್ತಿ ಯೋಜನೆಗೆ 776.8 ಕೋಟಿ ರೂ. ಹಣ ವ್ಯವವಾಗಿದೆ. ರಾಜ್ಯದಲ್ಲಿ 12000,733.80 ಕೋಟಿ ರೂ. ಹಣ ವ್ಯಯವಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಇಡೀ ದೇಶದಲ್ಲೇ ಯಾವ ಸರ್ಕಾರವೂ ನೀಡಿಲ್ಲ. ಈ ಸಂಭ್ರಮದ ಹಿನ್ನೆಲೆಯಲ್ಲಿ ಜುಲೈ. 14 ರಂದು ದೃಷ್ಟಿ ಹೀನರಿಗಾಗಿ ವಿಶೇಷ ಉಪಕರಣ ಅಳವಡಿಸಿರುವ ನೂತನ ಸಾರಿಗೆ ಬಸ್‌ಗಳನ್ನು ಸಚಿವ ರಾಮಲಿಂಗ ರೆಡ್ಡಿ ಅವರು ಮೈಸೂರಿನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಕಾರ್ಯಕ್ರಮ ನಗರ ಬಸ್ ನಿಲ್ದಾಣದಲ್ಲಿ ಮೊದಲ ಹಂತದಲ್ಲಿ 200 ಬಸ್ ಲೋಕಾರ್ಪಣೆ ಆಗಲಿದೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

Continue Reading

Trending

error: Content is protected !!