Connect with us

Special

ಕೊನೆಗೂ ಬಂತು ಯುಪಿಎಸ್‌ಸಿ ನೇಮಕಾತಿ: 933 ಹುದ್ದೆಗಳಿಗೆ ಇಂದಿನಿಂದಲೇ ಅರ್ಜಿ ಸಲ್ಲಿಸುವಿಕೆ ಆರಂಭ!

Published

on

ದೇಶದ ಅತ್ಯುನ್ನತ ಆಡಳಿತಾತ್ಮಕ ಸೇವೆಗಳಾದ ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS), ಭಾರತೀಯ ವಿದೇಶಾಂಗ ಸೇವೆ (IFS), ಭಾರತೀಯ ಆದಾಯ ಸೇವೆ (IRS) ಸೇರಿದಂತೆ ವಿವಿಧ Civil Services ಹುದ್ದೆಗಳ ನೇಮಕಾತಿಗಾಗಿ ಕೇಂದ್ರ ಲೋಕಸೇವಾ ಆಯೋಗ (UPSC) ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಬಾರಿ ಒಟ್ಟು 933 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Any Degree) ಪಡೆದ ಅಭ್ಯರ್ಥಿಗಳು ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:
24-02-2026 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಪುರುಷ ಅಭ್ಯರ್ಥಿಗಳಿಗೆ ಮಾತ್ರ 100 ರೂಪಾಯಿಯ ಶುಲ್ಕವಿರುತ್ತದೆ.

ಅಧಿಕೃತ ಅರ್ಜಿ ವೆಬ್‌ಸೈಟ್: https://upsconline.nic.in/

ಈ ವರ್ಷದ ಅರ್ಜಿ ಪ್ರಕ್ರಿಯೆಯಲ್ಲಿ ಬದಲಾವಣೆಗಳು:

* ಅರ್ಜಿ ಸಲ್ಲಿಸುವ ಮೊದಲು ನೊಂದಣಿ ಮಾಡಿ ನೋಂದಣಿ ಸಂಖ್ಯೆ ಪಡೆಯುವುದು ಅಗತ್ಯ, ಈ ಸಂಖ್ಯೆ ಎಲ್ಲಾ ಯುಪಿಎಸ್ಸಿ ಪರೀಕ್ಷೆಗಳಿಗೆ ಒಂದೇ ಆಗಿರುತ್ತದೆ.

* ಅರ್ಜಿ ಸಲ್ಲಿಸಿದ ನಂತರ ಪ್ರತಿ ವರ್ಷವೂ ತಿದ್ದುಪಡಿಗೆ ಅವಕಾಶ ಕೊಟ್ಟಂತೆ, ಈ ವರ್ಷ ತಿದ್ದುಪಡಿ ಮಾಡಲು ಅವಕಾಶವಿಲ್ಲ.

* ಪ್ರೀಲಿಮ್ಸ್ ಪರೀಕ್ಷೆ ಮೊದಲೇ ನಿಗದಿಯಾದ ದಿನವಾದ ಮೇ. 24 ರಂದೇ ನಡೆಯುತ್ತದೆ.

ವಯೋಮಿತಿ, ವರ್ಗಾವಾರು ಮೀಸಲಾತಿ, ಪರೀಕ್ಷಾ ಮಾದರಿ, Prelims ಮತ್ತು Mains ಪಠ್ಯಕ್ರಮ, ಅರ್ಜಿ ಶುಲ್ಕ ಹಾಗೂ ಇತರೆ ಸಂಪೂರ್ಣ ಮಾಹಿತಿಗಾಗಿ UPSC ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯ ಪಿಡಿಎಫ್ ನಲ್ಲಿ ಪಡೆಯಬಹುದು.

ರಾಷ್ಟ್ರ ಸೇವೆ ಮಾಡಬೇಕೆಂಬ ಕನಸು ಹೊಂದಿರುವ ಯುವ ಅಭ್ಯರ್ಥಿಗಳಿಗೆ ಇದು ಒಂದು ಮಹತ್ವದ ಅವಕಾಶವಾಗಿದ್ದು, ಯುವಕರು ಈ ಮೂಲಕ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ಪಡೆಯುವತ್ತ ಹೆಜ್ಜೆ ಇಡಬೇಕು.

Continue Reading

Special

BSNL Recruitment 2026: ಬಿಎಸ್‌ಎನ್‌ಎಲ್‌ನಲ್ಲಿ ಭರ್ಜರಿ ನೇಮಕಾತಿ;ತಿಂಗಳಿಗೆ ₹90,000 ವರೆಗೆ ವೇತನ

Published

on

ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಇಂಜಿನಿಯರಿಂಗ್ ಮತ್ತು ಫೈನಾನ್ಸ್ ಹಿನ್ನೆಲೆಯ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) 2026ನೇ ಸಾಲಿನ Senior Executive Trainee (SET) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.

ಹುದ್ದೆಗಳ ವಿವರ:

ಟೆಲಿಕಾಂ ವಿಭಾಗ
•ಹುದ್ದೆಗಳ ಸಂಖ್ಯೆ: 95
•ಅರ್ಹತೆ: ಇಂಜಿನಿಯರಿಂಗ್ ಹಿನ್ನೆಲೆ ಹೊಂದಿದ ಅಭ್ಯರ್ಥಿಗಳು

ಫೈನಾನ್ಸ್ ವಿಭಾಗ :
•ಹುದ್ದೆಗಳ ಸಂಖ್ಯೆ: 25
•ಅರ್ಹತೆ: ಲೆಕ್ಕಪತ್ರ ಮತ್ತು ವಾಣಿಜ್ಯ ಕ್ಷೇತ್ರದ ಅಭ್ಯರ್ಥಿಗಳು

ಶೈಕ್ಷಣಿಕ ಅರ್ಹತೆ:
ಟೆಲಿಕಾಂ ವಿಭಾಗ: 60% ಅಂಕಗಳೊಂದಿಗೆ BE / B.Tech ಪದವಿ ಹೊಂದಿರಬೇಕು.

ಫೈನಾನ್ಸ್ ವಿಭಾಗ: ಕಾಲ್ ಅಥವಾ CMA (ಕಾಸ್ಟ್ & ಮ್ಯಾನೇಜ್‌ಮೆಂಟ್ ಅಕೌಂಟೆಂಟ್) ಪದವಿ ಪೂರ್ಣಗೊಳಿಸಿರುವವರು

ವಯೋಮಿತಿ: 21-30 ವರ್ಷ
ಮೀಸಲಾತಿಗೆ ಅನುಗುಣವಾಗಿ ವಯೋಸಡಿಲಿಕೆ ಇರುತ್ತದೆ

ವೇತನ ವಿವರ:
•ಮೂಲ ವೇತನ: ₹24,900 – ₹50,500
•HRA, DA, TA, ವೈದ್ಯಕೀಯ ಹಾಗೂ ಇತರೆ ಭತ್ಯೆಗಳು ಸೇರಿ
ಒಟ್ಟು ಮಾಸಿಕ ವೇತನ: ಸುಮಾರು ₹80,000 ರಿಂದ ₹90,000

ಆಯ್ಕೆ ಪ್ರಕ್ರಿಯೆ ಹಂತಗಳು:
•ಕಂಪ್ಯೂಟರ್ ಆಧಾರಿತ ಪರೀಕ್ಷೆ
•ದಾಖಲೆಗಳ ಪರಿಶೀಲನೆ

ಅರ್ಜಿ ಸಲ್ಲಿಸುವ ವಿಧಾನ:
* ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ನೀಡುವುದರ ಮೂಲಕ ಅರ್ಜಿ ಪೂರ್ಣಗೊಳಿಸಬೇಕು

ಅಧಿಕೃತ ವೆಬ್ಸೈಟ್ : https://bsnl.co.in

ಅರ್ಜಿ ಶುಲ್ಕ:
•General / OBC / EWS: ₹2,500
•SC / ST / PwBD: ₹1,250

ಪ್ರಮುಖ ದಿನಾಂಕಗಳು:
•ಅರ್ಜಿ ಪ್ರಾರಂಭ: 05 ಫೆಬ್ರವರಿ 2026
•ಅರ್ಜಿ ಕೊನೆಯ ದಿನ: 07 ಮಾರ್ಚ್ 2026
•ಅರ್ಜಿ ತಿದ್ದುಪಡಿ ಅವಧಿ: 08 ರಿಂದ 15 ಮಾರ್ಚ್ 2026
•ಪರೀಕ್ಷೆ (ತಾತ್ಕಾಲಿಕ): 29 ಮಾರ್ಚ್ 2026

ಉತ್ತಮ ವೇತನ, ಕೇಂದ್ರ ಸರ್ಕಾರದ ಉದ್ಯೋಗ ಭದ್ರತೆ ಹಾಗೂ ವೃತ್ತಿ ಬೆಳವಣಿಗೆಯ ಅವಕಾಶಗಳನ್ನು ಬಯಸುವ ಅಭ್ಯರ್ಥಿಗಳಿಗೆ ಒಂದು ಅತ್ಯುತ್ತಮ ಅವಕಾಶವಾಗಿದೆ. ನೀವು ಅರ್ಹರಾಗಿದ್ದರೆ ಕೊನೆಯ ದಿನಾಂಕದವರೆಗೆ ಕಾಯದೆ ಈಗಲೇ ಅರ್ಜಿ ಸಲ್ಲಿಸುವುದು ಉತ್ತಮ.

Continue Reading

Special

Kisan Tractor Yojana : ಸರ್ಕಾರದಿಂದ ರೈತರಿಗೆ ಅರ್ಧ ಬೆಲೆಗೆ ಹೊಸ ಟ್ರಾಕ್ಟರ್

Published

on

ರೈತರ ಕೃಷಿ ಕೆಲಸವನ್ನು ಸುಲಭಗೊಳಿಸುವ ಹಾಗೂ ಯಾಂತ್ರೀಕರಣವನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರವು Kisan Tractor Yojana ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಅರ್ಹ ರೈತರಿಗೆ ಹೊಸ ಟ್ರಾಕ್ಟರ್ ಖರೀದಿಗೆ ಶೇಕಡಾ 50ರಷ್ಟು ಸಹಾಯಧನ (ಸಬ್ಸಿಡಿ) ನೀಡಲಾಗುತ್ತದೆ. ಇದರಿಂದ ಕಡಿಮೆ ಆದಾಯ ಹೊಂದಿರುವ ಸಣ್ಣ ಹಾಗೂ ಅಲ್ಪಭೂಧರ ರೈತರು ಕೂಡ ಆಧುನಿಕ ಟ್ರಾಕ್ಟರ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.

ಯೋಜನೆಯ ಉದ್ದೇಶ:
ಈ ಯೋಜನೆಯ ಮುಖ್ಯ ಉದ್ದೇಶ ಕೃಷಿಯಲ್ಲಿ ಮಾನವ ಶ್ರಮದ ಅವಲಂಬನೆಯನ್ನು ಕಡಿಮೆ ಮಾಡಿ, ಉತ್ಪಾದಕತೆಯನ್ನು ಹೆಚ್ಚಿಸುವುದಾಗಿದೆ. ಟ್ರಾಕ್ಟರ್ ಬಳಕೆಯಿಂದ ಬಿತ್ತನೆ, ಹೊಲ ಉಳುವುದು,ಸಾಗಣೆ ಮುಂತಾದ ಕೆಲಸಗಳು ವೇಗವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಮುಗಿಯುತ್ತವೆ. ಇದರಿಂದ ರೈತರ ಸಮಯವೂ ಉಳಿಯುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:
1. ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು.
2. ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
3. ಒಂದು ಕುಟುಂಬಕ್ಕೆ ಒಂದೇ ಸಬ್ಸಿಡಿ.
4. ಈ ಹಿಂದೆ ಯಾವುದೇ ಟ್ರ್ಯಾಕ್ಟರ್‌ನ ಸಬ್ಸಿಡಿ ಪಡೆದಿರಬಾರದು.
5. ಅರ್ಜಿದಾರರು ಮೂಲ ಭೂ ದಾಖಲೆಗಳನ್ನು ಹೊಂದಿರಬೇಕು.

ಅಗತ್ಯ ದಾಖಲೆಗಳು:
1. ಆಧಾರ್ ಕಾರ್ಡ್
2. ಭೂಮಿ ದಾಖಲೆ (RTC / ಪಹಣಿ)
3. ಬ್ಯಾಂಕ್ ಪಾಸ್‌ಬುಕ್
ಪಾಸ್‌ಪೋರ್ಟ್ ಗಾತ್ರದ ಫೋಟೋ

ಅರ್ಜಿಸುವ ವಿಧಾನ:
ರೈತರು ಈ ಅರ್ಜಿಯನ್ನು ಆನ್‌ಲೈನ್‌ ಅಥವಾ ಆಫ್ ಲೈನ್ ಮೂಲಕ ಸಲ್ಲಿಸಬಹುದು. ಮೊದಲು,ಕೃಷಿ ಯಾಂತ್ರಿಕರಣ ಪೋರ್ಟಲ್ agrimachinery.nic.in ಗೆ ಭೇಟಿ ನೀಡಿ, ಅಗತ್ಯ ಮಾಹಿತಿಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಿ.
ಆಫ್ ಲೈನ್ ನಲ್ಲಿ, ಸಮೀಪದ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Kisan Tractor Yojana ರೈತರ ಬದುಕಿಗೆ ಬದಲಾವಣೆ ತರುವಂತಹ ಮಹತ್ವದ ಯೋಜನೆಯಾಗಿದ್ದು, ಹೆಚ್ಚಿನ ವೆಚ್ಚದ ಟ್ರ್ಯಾಕ್ಟರ್ ಖರೀದಿಸಲು ಹಿಂಜರಿಯುತ್ತಿದ್ದ ರೈತರಿಗೆ ಇದೊಂದು ಸದವಕಾಶವಾಗಿದೆ. ರೈತರು ಇದರ ಸದುಪಯೋಗ ಪಡೆಯಬೇಕು.

Continue Reading

Special

ಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಶ್ರೀಮಂತ ದೇಶ ಭಾರತ: ನ್ಯಾ.ಗೋಪಾಲಗೌಡ

Published

on

ಬೆಂಗಳೂರು: ಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಇಡೀ ಪ್ರಪಂಚದಲ್ಲಿಯೇ ಭಾರತ ದೇಶ ಶ್ರೀಮಂತವಾದದ್ದು ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಗೋಪಾಲಗೌಡ ಅವರು ಹೇಳಿದ್ದಾರೆ.

ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಏರ್ಪಡಿಸಿದ್ದ ವಕೀಲ ಆರ್.ಮಹೇಶ್ ಮತ್ತು ಆಶಾ ದಂಪತಿಗಳ ಸುಪುತ್ರಿ ಶ್ರೇಯಾ ಮಹೇಶ್ ಅವರ ರಂಗ ಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಹಲವು ವಿಭಾಗದಲ್ಲಿ ದೇಶದ ಶ್ರೀಮಂತಿಕೆ ಇಲ್ಲದೆ ಇರಬಹುದು. ಆದರೆ,ಕೆಲೆ ಮತ್ತು ಸಂಸ್ಕೃತಿಕತೆಯಲ್ಲಿ ನಮ್ಮ ದೇಶ ಎಂದೂ ಹಿಂದೆ ಬಿದ್ದಿಲ್ಲ. ಇದು ನಮ್ಮ ಹೆಗ್ಗಳಿಕೆ ಎಂದರು.

ಭರತ ನಾಟ್ಯ ಎನ್ನುವುದು ನಮ್ಮ ನೆಲದಲ್ಲಿಯೇ ಬೆಳೆದು ಅರಳಿದ ಕಲೆ. ಕು.ಶ್ರೇಯ ಅವರು ಅಮೋಘವಾಗಿ ನಾಟ್ಯ ಪ್ರದರ್ಶನ ಮಾಡಿದ್ದಾರೆ. ಒತ್ತಡ, ದುಗುಡವನ್ನು ಹೊರತಾದ ಪರಿಸ್ಥಿತಿಯಲ್ಲಿ ಮನಸ್ಸಿಗೆ ಇಂಪಾದ ವಾತಾವರಣವನ್ನು ಕಲಾ ಪ್ರದರ್ಶನ ನೀಡುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತೆ ಕು.ಶ್ರೇಯ ಅವರನ್ನು ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಅಡ್ವಕೇಟ್ ಕಿರಣ್ ವಿ ರಾವ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ, ಯೋಗಮಿತ್ರ ಡಾ.ಎ.ಸುಬ್ರಹ್ಮಣ್ಯನ್, ಧರಣಿ ಕಶ್ಯಪ್, ಡಾ.ಸುಪರ್ಣವೆಂಕಟೇಶ್, ವಕೀಲ ಎ.ಪಿ. ರಂಗನಾಥ್, ಗೀತಾರಾಜ್ ಹಾಜರಿದ್ದರು.

Continue Reading

Trending

error: Content is protected !!