Connect with us

Hassan

ಭಾಷೆಯ ಮೂಲಕ ಇಡೀ ಬದುಕನ್ನು ಕಟ್ಟಿಕೊಳ್ಳಬಹುದು ಮಕ್ಕಳಿಂದಲೇ ಸಂಸ್ಕಾರ ಕಲಿಸಿ- ಟಿ.ಎಸ್. ನಾಗಾಭರಣ

Published

on

ಹಾಸನ: ಬಹಳ ಮುಖ್ಯವಾದ ಮನುಷ್ಯ ಧರ್ಮ ಯಾವುದೆಂದರೇ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವುದು. ಪ್ರಸ್ತೂತದಲ್ಲಿ ಕನ್ನಡವನ್ನು ಶೇಕಡ ೩೦ ರಿಂದ ೩೫ ಪರ್ಸೇಂಟ್ ಮಾತ್ರ ಬಳಸಲಾಗುತ್ತಿದೆ. ಮಕ್ಕಳಿಗೆ ಪಾಠದ ಜೊತೆ ಸಂಸ್ಕೃತಿಯನ್ನು ಬೆಳೆಸಬೇಕೆಂದು ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು ಟಿ.ಎಸ್. ನಾಗಾಭರಣ ತಿಳಿಸಿದರು.

ನಗರದ ಹೊರವಲಯದಲ್ಲಿರುವ ನಂದಗೋಕುಲ ಕನ್ವೆನ್ಸನ್ ಹಾಲ್ ನಲ್ಲಿ ರೋಟರಿಯ ಜೋನ್ ೯ಎ ಜಿಲ್ಲಾ ಗವರ್ನರ್ ರೋಟೇರಿಯನ್ ಬಿ.ಸಿ. ಗೀತ ರವರ ನೇತೃತ್ವದಲ್ಲಿ ಭಾನುವಾರದಂದು ನಡೆದ ರೋಟರಿ ಜಿಲ್ಲಾ ೩೧೮೨ ಜಿಲ್ಲಾ ಕಾರ್ಯಕ್ರಮವಾದ “ಮಾನಿನಿ” ಎಂಬ ಸಮಾವೇಶದಲ್ಲಿ ಪ್ರಸಕ್ತ ದೃಶ್ಯ ಮಾದ್ಯಮ-ಮಹಿಳೆ, ಪರಿಸರ ಸಂರಕ್ಷಣೆ, ಭಾರತೀಯ ಚಿಂತನೆಯಲ್ಲಿ ಮಹಿಳೆಯ ಪಾತ್ರ, ಮಾನವೀಯ ಮೌಲ್ಯವನ್ನು ಸಶಕ್ತ ಗೊಳಿಸುವಲ್ಲಿ ನಾಯಕತ್ವ ಗುಣಗಳು ಕುರಿತು ಉದ್ದೇಶಿಸಿ ಮಾತನಾಡಿದ ಅವರು, ಗಂಡು ಹೆಣ್ಣು ಸೇರಿ ಸಹಬಾಳ್ವೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಭಾರತೀಯ ಪರಂಪರೆ. ಕುಟುಂಬ ಪರಂಪರೆ ಎಂಬುದು ಇತ್ತಿಚಿಗೆ ಶುರುವಾದುದಲ್ಲ. ಸಹಸ್ರಾರು ವರ್ಷಗಳ ಇತಿಹಾಸ ಹಾಗೂ ಪಯಾಣವಿದೆ. ಹೊಸ ಹೊಸ ಸತ್ಯಗಳನ್ನು ಹುಡುಕುತ್ತಾ ಒಂದು ಕುಟುಂಬ ವ್ಯವಸ್ಥೆಯನ್ನು ತಮ್ಮಾಗಿಸಿಕೊಂಡಿದ್ದೇವೆ. ಪ್ರತಿಯೊಬ್ಬರನ್ನು ಗೌರವಿಸಬೇಕು. ಯಾರಾದರೂ ಮನೆಗೆ ಬಂದಾಗ ನಮುಸ್ಕಾರ ಮಾಡಲು ಪುಟ್ಟ ಮಗುವಿನಲ್ಲಿ ಬೆಳೆಸುವ ಮೂಲಕ ಅಲ್ಲಿಂದ ಸಂಸ್ಕಾರ ಬೆಳೆಯುತ್ತ ಹೋಗುತ್ತದೆ ಎಂದರು. ನಾವು ನಮ್ಮ ಸ್ಕಿಲನ್ನು ಬೆಳೆಸಿಕೊಳ್ಳಬೇಕು. ಹಿಂದಿನಿಂದ ಒಂದೊಂದು ರೀತಿ ನಡೆದು ಬಂದ ಮಾಧ್ಯಮ ಪ್ರಸ್ತೂತದಲ್ಲಿ ಕೈಲಿ ಇರುವ ಮೊಬೈಲ್ ನಲ್ಲಿ ಮಾಧ್ಯಮ ಇದೆ. ಹಿಂದಿನ ಕಾಲದಲ್ಲಿ ದೊಡ್ಡ ದೊಡ್ಡ ಕ್ಯಾಮರ ಬಳಸಲಾಗುತ್ತಿತ್ತು. ಇಂದು ಮೊಬೈಲ್ ಮೂಲಕ ಛಾಯಾಗ್ರಹಣ ಮಾಡಲಾಗುತ್ತಿದ್ದು, ತಂತ್ರಜ್ಞಾನ ಬೆಳೆದಂತೆ ನಮ್ಮ ಮಾಧ್ಯಮಗಳು ಬೆಳೆಯುತ್ತಾ ಹೋಯಿತು ಎಂದು ಕಿವಿಮಾತು ಹೇಳಿದರು. ನಮ್ಮ ಭಾಷೆಯಲ್ಲಿ ಸಂಸ್ಕೃತಿ ಕಲಿಯಬೇಕು. ನಮ್ಮ ಭಾಷೆಯಲ್ಲಿ ಸಂವಾದ ಆದಾಗ ಮಾತ್ರ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಇಡೀ ಸಮುದಾಯ ತನ್ನನ್ನು ತಾನು ಗುರುತಿಸಿಕೊಳ್ಳುತ್ತದೆ. ಕರ್ನಾಟಕ ಎಂದ ಕೂಡಲೇ ಅಲ್ಲಿನ ಕನ್ನಡ ಭಾಷೆಯನ್ನು ಮೊದಲು ಗುರುತಿಸುತ್ತದೆ ಮತ್ತು ಕನ್ನಡದ ಜನರನ್ನು, ಸಂಪ್ರದಾಯವನ್ನು ಗುರುತಿಸುತ್ತದೆ ಹಾಗೂ ಹಿಂದಿರುವ ಎಲ್ಲಾ ಸಂಸ್ಕಾರವನ್ನು ಗುರುತಿಸಿಕೊಡುತ್ತದೆ ಎಂದು ಸಲಹೆ ನೀಡಿದರು. ಸಂವನ ಮಾಧ್ಯಮದಲ್ಲಿ ನಾವು ಎಷ್ಟರ ಮಟ್ಟಿಗೆ ಕನ್ನಡವನ್ನು ಬಳಸುತ್ತಿದ್ದೇವೆ? ಪ್ರಸ್ತುತದಲ್ಲಿ ಬಹಳಷ್ಟು ಜನ ಹೆಚ್ಚು ಎಂದರೇ ೩೦ ರಿಂದ ೩೫ ಪರ್ಸೇಂಟ್ ಬಳಸಲಾಗುತ್ತಿದೆ. ಬೆಂಗಳೂರಲ್ಲಿ ಕನ್ನಡ ಅಷ್ಟೊಂದು ಬಳಕೆ ಆಗುತ್ತಿಲ್ಲ. ಇಲ್ಲ ಎಂದು ಹೇಳಲಾಗುತ್ತಿರುವುದು ನಿಜ ಆದ್ರೆ ಈಗ ಪ್ರತಿಯೊಂದು ಜಿಲ್ಲೆಗೆ, ಹಳ್ಳಿಗೆ ಕಾಲಿಟ್ಟಿದೆ ಎಂದು ಬೇಸರವ್ಯಕ್ತಪಡಿಸಿದರು. ಯಾವ ಭಾಷೆಯ ಮೂಲಕ ನಮ್ಮತನವನ್ನಿಟ್ಟುಕೊಂಡಿರುತ್ತೇವೆಯೂ ಆ ಭಾಷೆಯ ಮೂಲಕ ಇಡೀ ಬದುಕನ್ನು ಕಟ್ಟಿಕೊಡಬೇಕಾಗುತ್ತದೆಯೊ ಅಂತಹ ಬದುಕು ಕಟ್ಟಿಕೊಡುವ ಜಾಗದಲ್ಲಿ ಪರವಲಂಬಿಯಾಗಿ ಸುಲಭವಾಗಿ ಇನ್ನೊಬ್ಬರಿಗೆ ಬಿಟ್ಟುಕೊಟ್ಟಿದ್ದೇವೆ. ಅಲ್ಲಿಯೂ ಕೂಡ ನಾವು ನಮ್ಮತನವನ್ನು ಕಾಪಾಡಿಕೊಳ್ಳುವ ಹೆಜ್ಜೆಗಳನ್ನು ಹಾಕಬೇಕಾಗಿದೆ. ಇದರಲ್ಲಿ ತಂದೆ ತಾಯಿ ಇಬ್ಬರದು ತಪ್ಪು ಇದೆ. ಕೆಲ ಶಾಲೆಯಲ್ಲಿ ಅವರ ಶಿಲಭಸ್ ಪ್ರಕಾರ ಕನ್ನಡ ಮಾಧ್ಯಮ ಭಾಷೆಯೇ ಅಲ್ಲ. ಬರೀ ಇಂಗ್ಲೀಷ್ ಭಾಷೆಯಾಗಿದೆ ಎಂದು ಹೇಳಿದರು. ಬಹು ಮೆಚ್ಚಿನ ಮನುಷ್ಯ ಧರ್ಮ ಯಾವುದೆಂದರೆ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಬೇಕು ಎಂದು ಕೆಲ ಸಮಯ ಹಿತಾವಚನ ನುಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ರೋಟೇರಿಯನ್ ಬಿ.ಸಿ. ಗೀತಾ, ರೋಟರಿ ಕ್ಲಬ್ ಅಸಿಸ್ಟೆಂಟ್ ಗೌರ‍್ನರ್ ಜೋನ್ ೯ಎ ಡಾ. ಬಿ.ಕೆ. ಸೌಮ್ಯಮಣಿ, ಜಿಲ್ಲಾ ಮಾಜಿ ಗೌರ‍್ನರ್ ಅಭಿನಂದನ್ ಶೆಟ್ಟಿ, ಡಿ.ಎಸ್. ರವಿ, ದೇವಾನಂದ್, ಕೆ. ಪಾಲಾಕ್ಷ, ಬಿ.ಎಂ. ಭಟ್, ಸ್ಪೂರ್ತಿ ವಿಶ್ವಾಸ್, ನಮಿತೊ ಕಾಮ್ದರ್, ವಾಗೀಶ್ ಭಟ್, ರೋಟರಿಯನ್ ಡಾ. ವಾಣಿ ನಾಗೇಶ್, ಡಾ. ಮಮತಾ, ಬೆಂಗಳೂರು ಮಮತಾ ನಟೇಶ್, ಬೊಮ್ಮೇಗೌಡ, ವಿಕ್ರಂ, ನಾಗೇಶ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಬೈರಾಪುರ-ಚನ್ನಪುರ- ಮಗ್ಗೆ ರಸ್ತೆ ತಾತ್ಕಾಲಿಕ ಬಂದ್: ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸೂಚನೆ

Published

on

ಆಲೂರು: ಪ್ರಸಕ್ತ ಸಾಲಿನಲ್ಲಿ ಸುರಿದ ಭಾರಿ ಮಳೆಗೆ ತಾಲೂಕಿನ ಬೇಲೂರು, ಕೊಡ್ಲಿಪೇಟೆ ರಾಜ್ಯ ಹೆದ್ದಾರಿ ಚನ್ನಾಪುರದ ಬಳಿ ತಡೆಗೋಡೆ ಕುಸಿದಿದ್ದು, ಕಾಮಗಾರಿ ನಡೆಯುತ್ತಿರುವುದರಿಂದ ಬೈರಾಪುರ-ಚನ್ನಪುರ- ಮಗ್ಗೆ ಸಂಪರ್ಕಿಸಿ ರಸ್ತೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮುರುಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೇಲೂರು ಕೊಡ್ಲಿಪೇಟೆ 49.2 km ಉದ್ದದ ರಾಜ್ಯ ಹೆದ್ದಾರಿಯು ಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಪುರದ ಬಳಿ ತಡೆಗೋಡೆ ಕುಸಿತ ಉಂಟಾಗಿತ್ತು. SDMF/NDRF ಅಡಿಯಲ್ಲಿ ₹ 33 ಲಕ್ಷ ವೆಚ್ಚದಲ್ಲಿ ನೂತನ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಸದರಿ ಪ್ರದೇಶ ಶೀತವಾಗಿದ್ದು, ಕಾಮಗಾರಿ ನಡೆಸುವ ವೇಳೆ ರಸ್ತೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದ್ದು,  ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ 75 ರ ಪಾಳ್ಯ ಬಳಿಯ ಕಣದಹಳ್ಳಿ ವೃತ್ತ  ಬಲ್ಲೂರು, ಬೆಟ್ಟಳ್ಳಿ ಕ್ರಾಸ್ ಮಾರ್ಗದ ಮೂಲಕ ಮಗ್ಗೆ ಗ್ರಾಮವನ್ನು ತಲುಪುವಂತೆ ಸೂಚಿಸಲಾಗಿದೆ.

Continue Reading

Hassan

ಸಕಲೇಶಪುರದಲ್ಲಿ ಗೋವಾ ಮದ್ಯ ಸಾಗಣೆ ಪತ್ತೆ: 5.24 ಲಕ್ಷ ರೂ. ಮೌಲ್ಯದ ಮದ್ಯ–ವಾಹನ ಜಪ್ತಿ

Published

on

ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು  ಹಾಗೂ ಹಾಸನ ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ, ಸಕಲೇಶಪುರ ಉಪವಿಭಾಗದ ಅಬಕಾರಿ ಉಪ ಅಧೀಕ್ಷರ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ 12.15 ಗಂಟೆಯ ವೇಳೆಗೆ ರಸ್ತೆಗಾವಲು ನಡೆಸಲಾಯಿತು. ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಹೊಂಗಡಹಳ್ಳಿ ಗ್ರಾಮದ ರಸ್ತೆಯಲ್ಲಿ KA-18-N-5253 ಸಂಖ್ಯೆಯ ಟಾಟಾ ಸಫಾರಿ ವಾಹನವನ್ನು ಶೋಧಿಸಿದಾಗ “FOR SALE IN GOA ONLY” ಎಂದು ನಮೂದಿರುವ ಮದ್ಯ ಪತ್ತೆಯಾಗಿದೆ.

ಶೋಧನೆಯಲ್ಲಿ 750 ಮಿಲಿ ಮ್ಯಾನ್‌ಷನ್ ಹೌಸ್ ಫ್ರೆಂಚ್ ಬ್ರಾಂಡಿ 179 ಬಾಟಲ್, 2 ಲೀಟರ್ ಸಾಮರ್ಥ್ಯದ 5 ಪ್ಲಾಸ್ಟಿಕ್ ಬಾಟಲ್ ಹಾಗೂ 750 ಮಿಲಿ ಇಂಪೀರಿಯಲ್ ಬ್ಲ್ಯೂ ಹ್ಯಾಂಡ್ ಪಿಕ್ ಗ್ರೀನ್ ವಿಸ್ಕಿ 180 ಬಾಟಲ್ ಸೇರಿ ಒಟ್ಟು 279.250 ಲೀಟರ್ (364 ಬಾಟಲ್) ಮದ್ಯ ಜಪ್ತುಪಡಿಸಲಾಗಿದೆ.

ಮದ್ಯದ ಮೌಲ್ಯ ರೂ.1,24,395 ಮತ್ತು ವಾಹನ ಮೌಲ್ಯ ರೂ.4 ಲಕ್ಷ ಸೇರಿ ಒಟ್ಟು ಅಂದಾಜು ಮೌಲ್ಯ ರೂ.5,24,395 ಆಗಿದೆ. ಈ ಸಂಬಂಧ ಅಬಕಾರಿ ನಿರೀಕ್ಷಕ ವಿ.ಜಿ. ಜಯಕುಮಾರ ಅವರು ಅಬಕಾರಿ ನಿಯಮಾನುಸಾರ ಪ್ರಕರಣ ದಾಖಲಿಸಿದ್ದಾರೆ.

Continue Reading

Hassan

ನಾಳೆ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಅವರಿಂದ ಸದ್ಯೋಧನ ಪಾದಯಾತ್ರೆ

Published

on

ವರದಿ: ಸತೀಶ್ ಚಿಕ್ಕಕಣಗಾಲು

ಆಲೂರು: ಶ್ರೀಮದ್ ರಂಭಾಪುರಿ ವೀರಾ ಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ (ನಾಳೆ) ಡಿ.14ರಂದು ಸದ್ಯೋಧನ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ ಎಂದು ಶ್ರೀಮಠದಿಂದ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.

ಡಿ.14ರ ಭಾನುವಾರ ಬೆಳಿಗ್ಗೆ 09.30 ಗಂಟೆಗೆ ಕಾರ್ಜುವಳ್ಳಿ ಕುಡಿಗೆಯಲ್ಲಿ ಪಂಚಾಚಾರ್ಯ ಧ್ವಜಾರೋಹಣ ನೆರವೇರಿಸಿ ನಂತರ ಶಿವಾಚಾರ್ಯರ ಪಾದಯಾತ್ರೆ ಪ್ರಾರಂಭಿಸಲಾಗುವುದು. ಪಾದಯಾತ್ರೆಯ ಮಾರ್ಗಮಧ್ಯೆ ಭಕ್ತರಿಗೆ ರುದ್ರಾಕ್ಷ, ವಿಭೂತಿ ಧಾರಣೆ, ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ವಿತರಣೆ ಮಾಡಲಾಗುವುದು.

ನಂತರ 11.00 ಗಂಟೆಗೆ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂದೆ ಪಾದಯಾತ್ರೆ ಮಂಗಲವಾಗುವುದು. ಆನಂತರ ಶ್ರೀವೀರಭದ್ರ ಸ್ವಾಮಿ ದೇವಸ್ಥಾನದ ಬಳಿ ಪ್ರಸಾದ ವಿನಿಯೋಗವಿರುತ್ತದೆ. ಶ್ರೀ ಮಠವನ್ನು ತಲುಪಲು ಸಹಾಯಕ್ಕಾಗಿ ಗೂಗಲ್ ಮ್ಯಾಪ್ ಅನ್ನು ಹಾಗೂ ಲೊಕೇಶನ್‌ ಸಹ ಕಳುಹಿಸಲಾಗಿದೆ. ಶ್ರೀ‌ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ನೆರವೇರಿಸಿ ಕೊಡುವುದರ ಜೊತೆಗೆ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಲಾಗಿದೆ.

Continue Reading

Trending

error: Content is protected !!