Connect with us

Chamarajanagar

ಗಾಯಗೊಂಡಿದ್ದ ಹಾವಿಗೆ ಚಿಕಿತ್ಸೆ

Published

on

ಚಾಮರಾಜನಗರ: ತಾಲ್ಲೂಕಿನ ಕೆಲ್ಲಂಬಳ್ಳಿ ಗ್ರಾಮದಲ್ಲಿ ಮನೆ ನಿರ್ಮಾಣ ಸಂದರ್ಭದಲ್ಲಿ ಅಡಿಪಾಯ ತೆಗೆಯುವಾಗ ಕೆರೆ ಹಾವಿಗೆ ಕಬ್ಬಿಣ ಸರಳಿನಿಂದ ಏಟು ಬಿದ್ದು, ತೀವ್ರ ಗಾಯಗೊಂಡಿದ್ದ ಹಾವಿಗೆ ಚಿಕಿತ್ಸೆ ನೀಡಿ ರಕ್ಷಿಸಲಾಗಿದೆ.

ಉತ್ತುವಳ್ಳಿ ಗ್ರಾಮದ ಸ್ನೇಕ್ ಸುರೇಶ್ ರವರು ಕೆರೆ ಹಾವನ್ನು ಚಾಮರಾಜನಗರದ ಜಿಲ್ಲಾ ಪಶುಪಾಲನ ಪಾಲಿ ಕ್ಲಿನಿಕ್ ಗೆ ಕೊಂಡು ಹೋಗಿ ಪಶು ಪಾಲನ ಸಹಾಯಕ ನಿರ್ದೇಶಕ ಡಾ. ಎಂ ಮೂರ್ತಿ ಅವರು ಮತ್ತು ಸಿಬ್ಬಂದಿ ವರ್ಗದವರು ಹಾವಿಗೆ ಸೂಕ್ತ ಚಿಕಿತ್ಸೆ ನೀಡಿ ಚೇತರಿಸಿಕೊಂಡ ಬಳಿಕ ಕಾಡಿಗೆ ಬಿಟ್ಟಿರುತ್ತಾರೆ.

Continue Reading

Chamarajanagar

ರಾಮಾಪುರದಲ್ಲಿ ಪಶು ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಶಾಸಕ ಮಂಜುನಾಥ್‌ ಚಾಲನೆ

Published

on

ಹನೂರು: ತಾಲೂಕಿನ ರಾಮಾಪುರ ಗ್ರಾಮದಲ್ಲಿ ನೂತನ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್.ಮಂಜುನಾಥ್ ಭೂಮಿ ಪೂಜೆ ನೆರವೇರಿಸಿದರು

ಬಳಿಕ ಅವರು ಮಾತನಾಡಿ ತಾಲೂಕಿನಲ್ಲಿ ಒಟ್ಟು 12 ಪಶು ಆಸ್ಪತ್ರೆಗಳಿದ್ದು ಈ ಪೈಕಿ ಇದ್ದ 10 ಆಸ್ಪತ್ರೆಗಳಿಗೆ ಸ್ವಂತ ಕಟ್ಟಡಗಳಿದ್ದು ಉಳಿದ ರಾಮಾಪುರ ಮಹದೇಶ್ವರಬೆಟ್ಟ ಆಸ್ಪತ್ರೆ ಗಳಿಗೆ ಸ್ವಂತ ಕಟ್ಟಡವಿಲ್ಲದೆ ನಿತ್ಯ ಸಮಸ್ಯೆಯಾಗುತ್ತಿದ್ದನ್ನು ಇದ್ದನ್ನು ಮನಗಂಡು ರಾಮಾಪುರದಲ್ಲಿ ನೂತನ ಆಸ್ಪತ್ರೆಯ ನಿರ್ಮಾಣ ಮಾಡಲು ಸುಮಾರು 50 ರೂ ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ನಿರ್ವಹಣೆ ಹೊತ್ತವರು ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುವುದರ ಜೊತೆಗೆ ನಿಗದಿತ ಅವಧಿ ಒಳಗೆ ಪೂರ್ಣಗೊಳಿಸಬೇಕು ಎಂದು ಮಾಹಿತಿಯನ್ನು ನೀಡಿದರು.

ಇದೇ ವೇಳೆ ಪಶು ವೈದ್ಯಾಧಿಕಾರಿ ಸಿದ್ದರಾಜು, ಗ್ರಾಮ ಪಂಚಾಯತಿ ಸದಸ್ಯ ರವಿ, ಗುತ್ತಿಗೆದಾರ ಹಾಗೂ ಮುಖಂಡರು, ಸಾರ್ವಜನಿಕರು ಹಾಜರಿದ್ದರು.

Continue Reading

Chamarajanagar

ಇಂದಿನಿಂದ ಪಟ್ಟಣದ ಅಧಿದೇವತೆ ಬೆಟ್ಟಳ್ಳಿ ಮಾರಮ್ಮನವರ ಜಾತ್ರಾ ಮಹೋತ್ಸವ

Published

on

ವರದಿ : ಗೋವಿಂದ ಕೆ ಗೌಡ ಹನೂರು

ಹನೂರು: ಪಟ್ಟಣದ ಅಧಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಮಾ 24 ರಿಂದ ನಾಲ್ಕು ದಿನಗಳ ಕಾಲ ನಡೆಯಲಿದ್ದು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಜಾತ್ರಾ ಮಹೋತ್ಸವ ಪ್ರಯುಕ್ತ ಮಾ.24 ಜಾಗರಣೆ ಸಮರ್ಪಣೆ, 25ರಂದು ರಥೋತ್ಸವ, ತಂಪು ಜ್ಯೋತಿ, 25ರಂದು ದೊಡ್ಡಬಾಯಿ ಬೀಗ, 27ರಂದು ಬೆಳಿಗ್ಗೆ ಅಗ್ನಿಕುಂಡ ದರ್ಶನ ನಡೆಯಲಿದೆ..

ಬೆಟ್ಟಳ್ಳಿ ಮಾರಮ್ಮ ದೇವಸ್ಥಾನಕ್ಕೆ 600 ವರ್ಷ ಗಳ ಇತಿಹಾಸವಿದ್ದು, ಪಟ್ಟಣದ ಜನತೆ ಗ್ರಾಮ ದೇವತೆಯಾಗಿ ಪೂಜಿಸುತ್ತಿದ್ದಾರೆ. ಈ ಜಾತ್ರೆ ಕೋಮುಸೌಹಾರ್ದತೆಯ ಸಾಮರಸ್ಯದ ಸಂಕೇತವಾಗಿದೆ. ಹಾಗೂ ಈಗಾಗಲೇ ಪಟ್ಟಣದಲ್ಲಿ ಕಳೆದ ಮಂಗಳವಾರದಿಂದಲೇ ಮಾಂಸ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಸಾಂಬಾರ ಪದಾರ್ಥಗಳ ಒಗ್ಗರಣೆ, ಗೋಬಿಮಂಚೂರಿ ಹಾಗೂ ಮಾಂಸಾಹಾರಿ ಹೋಟೆಲ್‌ಗಳು ಮುಚ್ಚಿವೆ. ಪಟ್ಟಣದಲ್ಲಿ ವಾಸವಿರುವ ಮುಸ್ಲಿಂ ಸಮುದಾಯದವರು ಸಹ ಮಾಂಸಾಹಾರವನ್ನು ತ್ಯಜಿಸಿದ್ದು ಜಾತ್ರಾ ಮಹೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ.

ಮೊದಲ ದಿನವಾದ ಮಾರ್ಚ್ 24ರಂದು ತಡರಾತ್ರಿ ಜಾಗರ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಜಾಗರ ಸಮರ್ಪಣೆಗೆ ಜನರು ಒಂದು ವಾರದ ಮುಂಚೆ ಅವರೆ, ಜೋಳ ಸೇರಿದಂತೆ ಇನ್ನಿತರ ದವಸ ಧಾನ್ಯಗಳನ್ನು ಮೊಳಕೆ ಬರಿಸಿ ಪ್ರತಿನಿತ್ಯ ಎದುರು ಪೂಜೆ ಸಲ್ಲಿಸುವುದರ ಮೂಲಕ ಬೆಳೆಸಿದ ಧಾನ್ಯಗಳ ಪೈರುಗಳನ್ನು (ಜಾಗರ) ವನ್ನು ಮಕ್ಕಳು, ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಮಧ್ಯರಾತ್ರಿ ದೇವಸ್ಥಾನಕ್ಕೆ ಆಗಮಿಸಿ, ಜಾಗರವನ್ನು ದಾವಿಗೆ ಸಮರ್ಪಣೆ ಮಾಡುತ್ತಾರೆ.

ಎರಡನೇ ದಿನವಾದ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ರಥೋತ್ಸವ ಜರುಗಲಿದ್ದು ಇದೇ ದಿನ ತಂಪು ಜ್ಯೋತಿಯನ್ನು ಸಮರ್ಪಿಸುತ್ತಾರೆ. ಜಾತ್ರಾ ಮಹೋತ್ಸವದ ಮೂರನೇ ದಿನವಾದ ಬುಧವಾರ ಬಾಯಿ ಬೀಗಕಾರ್ಯಕ್ರಮ ನಡೆಯಲಿದ್ದು ಹಲವಾರು ಮಂದಿ ಬಾಯಿ ಬೀಗ ಹಾಕಿಸಿಕೊಂಡು ಹರಕೆ ತೀರಿಸಲಿದ್ದಾರೆ.

ಜಾತ್ರೆಯ ಕೊನೆಯ ದಿನ ಗುರುವಾರ ಬೆಳಗ್ಗೆ ಮುಂಜಾನೆಯಿಂದಲೇ ಶ್ರೀ ಬೆಟ್ಟಳ್ಳಿ ವಿಶೇಷ ಪೂಜೆಯನ್ನು ಸಲ್ಲಿಸಿ ಅಗ್ನಿಕುಂಡವನ್ನು ಎತ್ತಿ ಈ ವರ್ಷದ ಮಳೆಯ ಬೆಳೆಯ ಮೂಲಕ ಮಾಹಿತಿ ನೀಡಿದ ನಂತರ ಜಾತ್ರೆಗೆ ತೆರೆ ಬೀಳಲಿದೆ.

ಪಟ್ಟಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟ‌ರ್ ಆನಂದ್ ಮೂರ್ತಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Continue Reading

Chamarajanagar

ಬಿಜೆಪಿ ಶಾಸಕರ ಅಮಾನತು ಖಂಡಿಸಿ ನಗರದಲ್ಲಿ ಪ್ರತಿಭಟನೆ

Published

on

ವಿಧಾನಸಭೆಯಲ್ಲಿ ಬಿಜೆಪಿ ಪಕ್ಷದ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿರುವ ವಿಧಾನಸಭೆ ಸಭಾಧ್ಯಕ್ಷರ ನಡೆಯನ್ನು ಖಂಡಿಸಿ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಮೂಲಕ ಸಾಗಿ ಶ್ರೀ ಭುವನೇಶ್ವರಿ ವೃತ್ತಕ್ಕೆದಲ್ಲಿ ಕೆಲಕಾಲ ವಾಹನ ತಡೆದು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಬರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ವಿಧಾನಸಭೆಯಲ್ಲಿ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು
ಮಾಡಿರುವುದು ಖಂಡನೀಯ. ನ್ಯಾಯಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಶಾಸಕರನ್ನು ಅಮಾನತಿನಲ್ಲಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೃಷಬೇಂದ್ರಪ್ಪ, ಮೂಡಾಕೂಡು ಪ್ರಕಾಶ್, ಮುಖಂಡರಾದ ನಿಜಗುಣರಾಜು, ಶಿವರಾಜ್, ಮೂರ್ತಿ, ಸುರೇಶ್, ಕೂಸಪ್ಪ, ಶಿವಣ್ಣ, ಸುಂದ್ರಪ್ಪ, ಚಂದ್ರಶೇಖರ್, ಪರಮೇಶ್ವರಪ್ಪ, ರಾಜು, ಕಾಡಳ್ಳಿ ಕುಮಾರ್, ಮಹದೇವಪ್ರಸಾದ್,

Continue Reading

Trending

error: Content is protected !!