Connect with us

Cinema

ಶೀಘ್ರವೇ ಫ್ಯಾನ್‌ ಮೀಟ್‌: ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ಜೂ. ಎನ್‌ಟಿಆರ್‌

Published

on

ಟಾಲಿವುಡ್‌ ಅಂಗಳದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ನಟ ಅಲ್ಲು ಅರ್ಜುನ್‌ ಅವರ ಪುಷ್ಪ-2 ಸಿನಿಮಾ ರಿಲೀಸ್‌ ವೇಳೆ ಉಂಟಾದ ಅವಘಡದ ಹಿನ್ನೆಲೆಯಲ್ಲಿ ಮತ್ತೊಬ್ಬ ಸೂಪರ್‌ಸ್ಟಾರ್‌ ಟಾಲಿವುಡ್‌ನ ಜೂ. ಎನ್‌ಟಿಆರ್‌ ಅವರು ಅಭಿಮಾನಿಗಳೊಂದಿಗೆ ಸಂವಾದ ನಡೆಸಲು ಸಜ್ಜಾಗಿದ್ದಾರೆ.

ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಎನ್‌ಟಿಆರ್‌ ಅಭಿಮಾನಿಗಳು ಅವರಿಗೆ ತೋರಿಸುತ್ತಿರುವ ಅಪಾರ ಪ್ರೀತಿ ಮತ್ತು ಗೌರವಕ್ಕಾಗಿ ಆಳವಾದ ಕೃತಜ್ಞರಾಗಿರಬೇಕು.

https://x.com/Fukkard/status/1886761589061108183

ಅವರನ್ನು ಭೇಟಿಯಾಗಲು ಅವರ ಉತ್ಸುಕತೆಯನ್ನು ಅರ್ಥಮಾಡಿಕೊಂಡ ಅವರು, ಶೀಘ್ರದಲ್ಲೇ ತಮ್ಮ ಅಭಿಮಾನಿಗಳೊಂದಿಗೆ ಸುಸಂಘಟಿತ ಕೂಟವೊಂದರಲ್ಲಿ ವೈಯಕ್ತಿಕವಾಗಿ ಸಂವಾದ ನಡೆಸಲು ನಿರ್ಧರಿಸಿದ್ದಾರೆ.

ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಅಥವಾ ವ್ಯವಸ್ಥಾಪನಾ ಸವಾಲುಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಮತ್ತು ಇತರ ಸಂಬಂಧಿತ ಅಧಿಕಾರಿಗಳಿಂದ ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಈ ಈವೆಂಟ್ ಅನ್ನು ನಿಖರವಾಗಿ ಯೋಜಿಸಲಾಗುವುದು. ಅಂತಹ ಕಾರ್ಯಕ್ರಮವನ್ನು ಆಯೋಜಿಸಲು ಸಮಯ ತೆಗೆದುಕೊಳ್ಳುವುದರಿಂದ, ಇದನ್ನು ತಡೆರಹಿತ ಮತ್ತು ಸ್ಮರಣೀಯ ಅನುಭವವನ್ನಾಗಿ ಮಾಡಲು ಅಗತ್ಯ ವ್ಯವಸ್ಥೆಗಳ ಮೂಲಕ ನಾವು ಕೆಲಸ ಮಾಡುವಾಗ ತಾಳ್ಮೆಯಿಂದಿರಲು ನಾವು ಅಭಿಮಾನಿಗಳಿಗೆ ವಿನಂತಿಸುತ್ತೇವೆ.

ಈ ಹಿನ್ನೆಲೆಯಲ್ಲಿ, ಪಾದ ಯಾತ್ರೆಯಂತಹ ದೈಹಿಕವಾಗಿ ಶ್ರಮದಾಯಕ ಪ್ರಯತ್ನಗಳನ್ನು ತೆಗೆದುಕೊಳ್ಳಬೇಡಿ ಎಂದು ಎನ್‌ಟಿಆರ್ ತಮ್ಮ ಅಭಿಮಾನಿಗಳನ್ನು ಕೋರಿದ್ದಾರೆ. ಅವರ ಪ್ರೀತಿಯೇ ನನಗೆ ಜಗತ್ತು ಎಂದು ಅವರು ಭಾವಿಸಿದ್ದಾರೆ. ಅಭಿಮಾನಿಗಳ ಆರೋಗ್ಯ ಮತ್ತು ಯೋಗಕ್ಷೇಮವೇ ತನ್ನ ಪ್ರಮುಖ ಆದ್ಯತೆ ಎಂದು ಅವರು ಪುನರುಚ್ಚರಿಸುತ್ತಾರೆ ಎಂದು ಎನ್‌ಟಿಆರ್‌ ಕಚೇರಿಯಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗಿದೆ.

ಸದ್ಯ WAR-2 ಚಿತ್ರದಲ್ಲಿ ನಟಿಸುತ್ತಿರುವ ಎನ್‌ಟಿಆರ್‌, ಬಾಲಿವುಡ್‌ ನಟ ರಿತಿಕ್‌ ರೋಷನ್‌ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.

Continue Reading

Cinema

ಬೆಟ್ಟಿಂಗ್‌ ಆಪ್‌ ಪ್ರಚಾರ: 25 ಸೆಲೆಬ್ರಿಟಿಸ್‌ ವಿರುದ್ಧ ದೂರು ದಾಖಲು; ಯಾರ್ಯಾರು ಗೊತ್ತಾ?

Published

on

ತೆಲಂಗಾಣ: ಬೆಟ್ಟಿಂಗ್‌ ಆಪ್‌ ಪರ ಪ್ರಚಾರ ಮಾಡಿದ ಆರೋಪದ ಮೇಲೆ ಪಂಚಭಾಷಾ ತಾರಾನಟ ಪ್ರಕಾಶ್‌ ರಾಜ್‌, ತೆಲುಗಿನ ಖ್ಯಾತ ನಟರಾದ ವಿಜಯ್‌ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿದಂತೆ ಒಟ್ಟು 25 ಮಂದಿ ವಿರುದ್ಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಫಣೀಂದ್ರ ಶರ್ಮಾ ಎಂಬ 32 ವರ್ಷದ ಉದ್ಯಮಿಯೊಬ್ಬರು ನೀಡಿದ ಆಧಾರದಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಪ್ರಕಾಶ್‌ ರಾಜ್‌ ಹಾಗೂ ರಾಣಾ ದಗ್ಗುಬಾಟಿ ಅವರು ಜಂಗ್ಲಿ ರಮ್ಮಿ ಆಪ್‌, ವಿಜಯ್‌ ದೇವರಕೊಂಡ A23 ಆಪ್‌, ಪ್ರಣೀತಾ ರೈ ಫೈರ್‌ ಪ್ಲೇ ಆಪ್‌, ನಿಧಿ ಅಗರ್ವಾಲ್‌ ಜೀತ್‌ ವಿನ್‌ ಆಪ್‌, ಮಂಚು ಲಕ್ಷ್ಮೀ ಯೊಲೊ247 ಬೆಟ್ಟಿಂಗ್‌ ಆಪ್‌ಗಳನ್ನು ಪ್ರಚಾರ ಮಾಡಿದ್ದಾರೆ. ಇನ್ನು ಹಲವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡುವ ಮೂಲಕ ಬೆಟ್ಟಿಂಗ್‌ ಆಪ್‌ ಪರ ಪ್ರಚಾರ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

ನಟ ನಟಿಯರಲ್ಲದೇ ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್‌ಗಳಾದ ಶ್ರೀಮುಖಿ, ವರ್ಷಿಣಿ, ಸನ್ನಿ ಯಾದವ್‌, ಅನನ್ಯಾ ಸೇರಿದಂತೆ ಹಲವರ ವಿರುದ್ಧವೂ ದೂರು ದಾಖಲಿಸಲಾಗಿದೆ.

Continue Reading

Cinema

‘ಅಪ್ಪು ಅಭಿಮಾನಿ’ಯಾಗಿ ಬರುತ್ತಿದ್ದಾರೆ ತಾರಕಾಸುರ ಖ್ಯಾತಿಯ ರವಿಕಿರಣ್‍

Published

on

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ನರಸಿಂಹಲು ಅವರ ಮಗ ರವಿಕಿರಣ್‍ ಈ ಹಿಂದೆ ‘ತಾರಕಾಸುರ’ ಎಂಬ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಈಗ ‘ಅಪ್ಪು ಅಭಿಮಾನಿ’ಯಾಗಿ ಅವರು ಹೊಸ ಚಿತ್ರವೊಂದರ ಮೂಲಕ ಬರುತ್ತಿದ್ದಾರೆ.

‘ಅಪ್ಪು ಅಭಿಮಾನಿ’ ಎಂಬ ಹೆಸರೇ ಹೇಳುವಂತೆ, ಈ ಚಿತ್ರದಲ್ಲಿ ರವಿಕಿರಣ್, ಪುನೀತ್‍ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಅಪ್ಪು ಅಭಿಮಾನಿಯೊಬ್ಬ ಜೀವನದಲ್ಲಿ ಏನೆಲ್ಲಾ ಸಾಧಿಸುತ್ತಾನೆ ಎಂದು ಸಾರುವ ಈ ಚಿತ್ರದಲ್ಲಿ ರವಿಕಿರಣ್‍ ‍ಜೊತೆಗೆ ರಾಘವೇಂದ್ರ ರಾಜಕುಮಾರ್, ಶರತ್‌ ಲೋಹಿತಾಶ್ವ, ಸುಮನ್, ಚಿದಾನಂದ್, ಥ್ರಿಲ್ಲರ್‌ ಮಂಜು, ಶಿವಪ್ಪ ಕುಡ್ಲೂರು ಮುಂತಾದವರು ನಟಿಸುತ್ತಿದ್ದಾರೆ.

ಬಿಡುಗಡೆಗೆ ಸಿದ್ಧವಾಗುತ್ತಿರುವ ಈ ಚಿತ್ರದ ಪ್ರಚಾರದ ಮೊದಲ ಹಂತವಾಗಿ ಇತ್ತೀಚೆಗೆ ಚಿತ್ರತಂಡವು ನರ್ತಕಿ ಚಿತ್ರಮಂದಿರದ ಎದುರು ಪುನೀತ್‍ ಅವರ 50 ಅಡಿ ಕಟೌಟ್‍ ನಿಲ್ಲಿಸಿದೆ. ಪುನೀತ್‍ ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ‘ಅಪ್ಪು’ ಇತ್ತೀಚೆಗೆ ಮರುಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ‘ಅಪ್ಪು ಅಭಿಮಾನಿ’ ಚಿತ್ರತಂಡದ ವತಿಯಿಂದ ‘ಅಪ್ಪು ಅಭಿಮಾನಿ’ ಚಿತ್ರದ 50 ಅಡಿ ಕಟೌಟ್‍ ನಿಲ್ಲಿಸಲಾಗಿದೆ. ಚಿತ್ರದಲ್ಲಿ ನಾಯಕ ರವಿ ಕಿರಣ್, ಪುನೀತ್‌ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವುದರಿಂದ ಕಟ್‌ಔಟ್‌ನಲ್ಲಿ ಅಪ್ಪು ನಂತರ ನಾಯಕನ ಚಿತ್ರವೂ ಇದೆ.

ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ರಾಘವೇಂದ್ರ ರಾಜಕುಮಾರ್, ಸಾ.ರಾ. ಗೋವಿಂದು, ಎಂ.ಎನ್. ಸುರೇಶ್ ಮುಂತಾದವರು ಹಾಜರಿದ್ದರು.

ಅಕ್ಷಯ ಮೂವಿ ಫ್ಯಾಕ್ಟರಿ ಸಂಸ್ಥೆ ನಿರ್ಮಿಸಿರುವ ಈ ಚಿತ್ರವನ್ನು ಡಾ. ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಶೇಖ್ ಮುನೀರ್ ಪಾಷಾ ಕಥೆ, ಮಣಿಕಾಂತ್ ಕದ್ರಿ ಸಂಗೀತ ಈ ಚಿತ್ರಕ್ಕಿದೆ.

Continue Reading

Cinema

ಏಪ್ರಿಲ್‍.10ಕ್ಕೆ ತೆರೆ ಕಾಣಲಿದೆ ಧನ್ವೀರ್‌ ನಟನೆಯ‘ವಾಮನ’

Published

on

ಧನ್ವೀರ್ ಗೌಡ ಅಭಿನಯದ ‘ವಾಮನ’ ಚಿತ್ರವು 2023ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುತ್ತದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಅಂದುಕೊಂಡಂತೆ ಚಿತ್ರ ಬಿಡುಗಡೆಯಾಗಲೇ ಇಲ್ಲ. ಅದಾದ ಮೇಲೆ ಧನ್ವೀರ್‍ ಅಭಿನಯದ ‘ಕೈವ’ ಚಿತ್ರ ಬಿಡುಗಡೆಯಾದರೂ ‘ವಾಮನ’ ಮಾತ್ರ ಬರಲಿಲ್ಲ. ನಾಯಕ ಮತ್ತು ನಿರ್ಮಾಪಕರ ನಡುವಿನ ಮುನಿಸಿನಿಂದ ಚಿತ್ರ ಬಿಡುಗಡೆಯಾಗುವುದೇ ಸಂಶಯ ಎಂಬ ಮಾತುಗಳು ಕೇಳಿ ಬಂದಿದ್ದವು.

ಹೀಗಿರುವಾಗಲೇ, ಒಂದೂವರೆ ವರ್ಷಗಳ ನಂತರ ಕೊನೆಗೂ ‘ವಾಮನ’ ಬಿಡುಗಡೆಯಾವುದಕ್ಕೆ ಸಿದ್ಧನಾಗಿದ್ದಾನೆ. ಚಿತ್ರವನ್ನು ಏಪ್ರಿಲ್‍.10ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಪ್ರಚಾರದ ಮೊದಲ ಹಂತವಾಗಿ ಚಿತ್ರದ ತಾಯಿ ಸೆಂಟಿಮೆಂಟ್‍ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ.

ಈ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿರುವ ‘ಕಂದ ಕನಸ ರೂಪ …’ ಎಂಬ ತಾಯಿ – ಮಗನ ಬಾಂಧವ್ಯದ ಕುರಿತಾದ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ‘ಕಾಂತಾರ’ ಖ್ಯಾತಿಯ ವೆಂಕಟೇಶ್ ಡಿ.ಸಿ ಈ ಹಾಡನ್ನು ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಈ ಹಾಡು A2 music ಚಾನಲ್‍ನಲ್ಲಿ ಬಿಡುಗಡೆಯಾಗಿದೆ.

ಈ ಹಾಡನ್ನು ವಿಶ್ವದ ಎಲ್ಲಾ ತಾಯಂದಿರಿಗೆ ಅರ್ಪಿಸುತ್ತೇನೆ ಎಂದು ಮಾತನಾಡಿದ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶಂಕರ್ ರಾಮನ್, ‘ನನಗೆ ‘ಕೈ ತುತ್ತು ಕೊಟ್ಟವಳೆ …’ ಹಾಗೂ ‘ಬೇಡುವೆನು ವರವನು …’ ಹಾಡುಗಳು ತುಂಬಾ ಇಷ್ಟ. ಅಂತಹುದೇ ಹಾಡು ನಮ್ಮ ಚಿತ್ರಕ್ಕೆ ಬೇಕು ಎಂದು ಕೇಳಿದಾಗ ಪ್ರಮೋದ್ ಮರವಂತೆ ಈ ಹಾಡನ್ನು ಬರೆದುಕೊಟ್ಟಿದ್ದಾರೆ. ತಾಯಿ ತನ್ನ ಬವಣೆಗಳನ್ನು ಮಗನ ಮುಂದೆ ಹೇಳಿಕೊಳ್ಳುವ ಈ ಹಾಡು ಎಲ್ಲರಿಗೂ ಇಷ್ಟವಾಗಲಿದೆ’ ಎಂದರು.

ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾದರೂ, ಮುನಿಸು ಮರೆಯಾದಂತೆ ಕಾಣಲಿಲ್ಲ. ಸಮಾರಂಭದಲ್ಲಿ ಹಾಜರಿದ್ದರೂ ನಿರ್ಮಾಪಕ ಚೇತನ್‍ ಗೌಡ ಮತ್ತು ನಾಯಕ ಧನ್ವೀರ್‍ ಗೌಡ ಜೊತೆಯಾಗಿ ಕಾಣಿಸಿಕೊಳ್ಳಲಿಲ್ಲ. ಇಷ್ಟಕ್ಕೂ ಚಿತ್ರದ ಬಿಡುಗಡೆ ತಡವಾಗಿದ್ದೇಕೆ ಎಂಬ ಮಾಧ್ಯಮದವರ ಪ್ರಶ್ನೆಗೆ, ‘ವ್ಯಾಪಾರದ ವಿಷಯವಾಗಿ ಚಿತ್ರ ಸ್ವಲ್ಪ ತಡವಾಯಿತು’ ಎಂದು ನಿರ್ಮಾಪಕರು ಹೇಳಿದ್ದಾರೆ.

‘ವಾಮನ’ ಚಿತ್ರದಲ್ಲಿ ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಜೊತೆಗೆ ತಾರಾ, ಶಿವರಾಜ್ ಕೆ.ಆರ್.ಪೇಟೆ, ಕಾಕ್ರೋಚ್‍ ಸುಧಿ ಮುಂತಾದವರು ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.

Continue Reading

Trending

error: Content is protected !!