Kodagu
ಎರಡು ಗಬ್ಬದ ಹಸುಗಳ ಮೇಲೆ ಹುಲಿ ದಾಳಿ
ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕು ದೇವನೂರು- ಸುಳುಗೋಡು ಗ್ರಾಮದಲ್ಲಿ ಎರಡು ಗಬ್ಬದ ಹಸುಗಳ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಶನಿವಾರ ರಾತ್ರಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದು ಗ್ರಾಮದ ರೈತ ಮುದ್ದಿಯಡ ದಿನು ಅವರಿಗೆ ಸೇರಿದ ಎರಡು ಹಸುಗಳನ್ನು ಹುಲಿ ಕೊಂದು ಭಾಗಶ ತಿಂದಿದೆ.
ಸ್ಥಳಕ್ಕೆ ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿದರು. ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರು ಮತ್ತು ಶಾಸಕ ಎ. ಎಸ್. ಪೊನ್ನಣ್ಣ ಅವರೊಂದಿಗೆ ಮಾತನಾಡಿದ ಅವರು ಕೂಡಲೇ ಹುಲಿ ಸೆರೆ ಹಿಡಿಯಲು ಕಾರ್ಯಚರಣೆ ಕೈಗೊಳ್ಳುವಂತೆ ಹಾಗೂ ಗಬ್ಬದ ಹಸು ಆಗಿರುವುದರಿಂದ ವಿಶೇಷ ಪ್ರಕರಣದಲ್ಲಿ ಕೂಡಲೇ ಪರಿಹಾರವನ್ನು ನೀಡಬೇಕೆಂದು ನಿರ್ದೇಶನ ನೀಡಿದರು ಎಂದು ಸಂಕೇತ್ ಪೂವಯ್ಯ ಅವರು ತಿಳಿಸಿದರು.
ಇದಲ್ಲದೆ ಸಾಕಾನೆಗಳನ್ನು ಬಳಸಿ ಕಾಫಿ ಫಸಲಿಗೆ ನಷ್ಟವಾಗದಂತೆ ರಸ್ತೆಯ ಬದಿಯಲ್ಲಿ ಹುಲಿ ಸೆರೆಗೆ ಅರವಳಿಕೆ ನೀಡಿ ಕಾರ್ಯಚರಣೆ ಕೈಗೊಳ್ಳಲಾಗುವುದು. ಹಾಗೂ ಹುಲಿಯನ್ನು ಸಮೀಪದಲ್ಲಿ ಅರಣ್ಯ ಇರುವುದರಿಂದ ಅರಣ್ಯಕ್ಕೆ ಹುಲಿಯನ್ನು ಅಟ್ಟಲು ಕಾರ್ಯಚರಣೆಯನ್ನು ಸಹ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ, ತಿತಿಮತಿ ಆರ್. ಎಫ್. ಓ. ದೇವರಾಜ್ ಹಾಗು ಸಿಬ್ಬಂದಿಗಳು ಹಾಜರಿದ್ದರು.
Kodagu
ನಾಪೋಕ್ಲು: 20ಲಕ್ಷ ರೂ. ವೆಚ್ಚದಲ್ಲಿ ಕೊಡವಸಮಾಜ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪೊನ್ನಣ್ಣ ಚಾಲನೆ
ನಾಪೋಕ್ಲು: ನಾಪೋಕ್ಲು ಪಟ್ಟಣದಿಂದ ಕೊಡವ ಸಮಾಜಕ್ಕಾಗಿ ಹಾದು ಹೋಗುವ ರಸ್ತೆಯ ಅಭಿವೃದ್ಧಿಗೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸಿದರು.
ನಾಪೋಕ್ಲು ಪಟ್ಟಣಕ್ಕಾಗಿ ಹಾದು ಹೋಗಿ ಅತ್ಯಂತ ಜನಸಂದಣಿ ಹಾಗೂ ವಾಹನ ಸಂಚಾರವಿರುವ ಈ ರಸ್ತೆ ಹದಗೆಟ್ಟಿರುವುದನ್ನು ಮನಗಂಡ ಶಾಸಕರು, ಸುಮಾರು 20 ಲಕ್ಷ ರೂಗಳ ಅನುದಾನದಲ್ಲಿ ಈ ರಸ್ತೆಯ ಉನ್ನತೀಕರಣ ಮಾಡಲು ಅನುದಾನ ಒದಗಿಸಿದ್ದರು.

ಇಂದು ಈ ಕಾಮಗಾರಿ ಆರಂಭಿಸಲು ಭೂಮಿಪೂಜೆ ನೆರವೇರಿಸಿ ಶುಭಕೋರಿದ ಮಾನ್ಯ ಶಾಸಕರು,ಅತ್ಯಂತ ಶೀಘ್ರದಲ್ಲಿ ಹಾಗೂ ಗುಣಮಟ್ಟ ಕಾಯ್ದುಕೊಂಡು ಈ ರಸ್ತೆ ಜನರ ಬಳಕೆಗೆಉಪಯೋಗವಾಗುವಂತಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಮಡಿಕೇರಿ ತಾಲೂಕಿಗೆ ನೀಡಲಾದ ಮಲತ್ಯಾಜ್ಯ ನಿರ್ವಹಣಾ ಸಂಚಾರಿ ಘಟಕವನ್ನು ಶಾಸಕರು ಹಸ್ತಾಂತರ ಮಾಡಿದರು.
ಈ ಸಂದರ್ಭ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ವಲಯ ಅಧ್ಯಕ್ಷರಾದ ಕುಶಾಲಪ್ಪ, ನಾಪೋಕ್ಲು ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ,ಸದಸ್ಯರಾದ ಅರುಣ್ ಬೇಬ, ಹೇಮಾವತಿ ಅರುಣ್ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯರು, ತಾಲೂಕು ಗ್ಯಾರಂಟಿ ಅನುಷ್ಠಾನ ಸದಸ್ಯರು, ನಾಪೋಕ್ಲು ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷರು, ಸದಸ್ಯರು, ಪಕ್ಷದ ಪ್ರಮುಖರು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Kodagu
ನಾಪೋಕ್ಲು: ಇಂದಿರಾನಗರದಲ್ಲಿ ನೂತನವಾಗಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಪೊನ್ನಣ್ಣ
ನಾಪೋಕ್ಲು : ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರ ಬಡಾವಣೆಯಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಕಾಂಕ್ರೆಟ್ ರಸ್ತೆಯನ್ನು ಲೋಕಾರ್ಪಣೆ ಗೊಳಿಸಿದರು.
ಈ ಹಿಂದೆ ಈ ಭಾಗಕ್ಕೆ ಶಾಸಕರು ಭೇಟಿ ನೀಡಿದ ಸಂದರ್ಭ ಸಾರ್ವಜನಿಕರು ಸದರಿ ರಸ್ತೆಯ ಅಭಿವೃದ್ಧಿಗಾಗಿ ಮನವಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಜನರ ಮನವಿಯನ್ನು ಪುರಸ್ಕರಿಸಿದ ಮಾನ್ಯ ಶಾಸಕರು ಅದಕ್ಕಾಗಿ 25 ಲಕ್ಷಗಳ ಅನುದಾನ ಒದಗಿಸಿದ್ದರು. ಈಗ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣಗೊಂಡಿದ್ದು ಮಾನ್ಯ ಶಾಸಕರು ಇದರನ್ನು ಸಾರ್ವಜನಿಕರ ಬಳಕೆಗೆ ಉದ್ಘಾಟಿಸಿ ಲೋಕಾಪಣೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಲಯ ಅಧ್ಯಕ್ಷರಾದ ಕುಶಾಲಪ್ಪ, ನಾಪೋಕ್ಲು ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ, ಅರುಣ್ ಬೇಬ, ಹೇಮಾವತಿ ಅರುಣ್, ಸಾಬ ತಿಮ್ಮಯ್ಯ, ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯರು, ತಾಲೂಕು ಗ್ಯಾರಂಟಿ ಅನುಷ್ಠಾನ ಸದಸ್ಯರು, ನಾಪೋಕ್ಲು ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷರು, ಸದಸ್ಯರು, ಪಕ್ಷದ ಪ್ರಮುಖರು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Kodagu
ಶ್ರೀ ವೃಕ್ಷೋದ್ಭವ ಶಕ್ತಿ ಗಣಪತಿ ದೇವಾಲಯ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಮಂಜುನಾಥ್, ಪ್ರ.ಕಾರ್ಯದರ್ಶಿಯಾಗಿ ಯಶೋಧರ ಆಯ್ಕೆ
ಸುಂಟಿಕೊಪ್ಪ: ಮಾದಾಪುರ ರಸ್ತೆಯಲ್ಲಿರುವ ಶ್ರೀ ವೃಕ್ಷೋದ್ಭವ ಶಕ್ತಿ ಗಣಪತಿ ದೇವಾಲಯದ ವಾರ್ಷಿಕ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಎಂ. ಮಂಜುನಾಥ್ ಅವರು ಪುನರಾಯ್ಕೆಗೊಂಡಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಬಿ.ಬಿ. ಯಶೋಧರ, ಉಪಾಧ್ಯಕ್ಷರಾಗಿ ಪುಳಂಜನ ಕುಶಾಲಪ್ಪ, ದಿವಾಕರ್ ರೈ, ದಿವಾಕರ್ ಪೂಜಾರಿ, ಸಹ ಕಾರ್ಯದರ್ಶಿಯಾಗಿ ಶಿವರಾಮನ್, ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್, ಖಜಾಂಚಿಯಾಗಿ ಮನು ಅಚ್ಚಮಯ್ಯ, ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಎ. ಶ್ರೀಧರ್ ಕುಮಾರ್, ಬಿ.ಎಸ್. ರಮೇಶ್, ಸುರೇಶ್ ಗೋಪಿ, ಲೋಕೇಶ್ (ಲೋಕಿ), ಮಣಿಕಂಠ (ಮುನಿಯ), ಹೊನ್ನಂಪಾಡಿ ಸುರೇಶ್, ಅಣ್ಣು ಶೇಖರ್, ಪಿ. ಕಿಶೋರ್, ಅರುಣ, ಕೆ.ಎನ್. ಪವಿ, ಶ್ರೀಧರ್, ಮಹೇಶ್ ರೈ, ಇವರುಗಳನ್ನು ಇತ್ತೀಚೆಗೆ ನಡೆದ ದೇವಸ್ಥಾನದ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ಪ್ರಕಟಣೆ ತಿಳಿಸಿದೆ.
-
Kodagu18 hours agoಶಾಸಕ ಎ.ಎಸ್.ಪೊನ್ನಣ್ಣರಿಂದ ಬಸ್ಗಳ ಉದ್ಘಾಟನೆ
-
Kodagu13 hours agoನಾಪೋಕ್ಲು: ಇಂದಿರಾನಗರದಲ್ಲಿ ನೂತನವಾಗಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಪೊನ್ನಣ್ಣ
-
Hassan20 hours agoಧರ್ಮಸ್ಥಳ ಬುರುಡೆ ರಹಸ್ಯ ಪುರಾಣ ಭಕ್ತರ ಭಾವನೆಗೆ ಧಕ್ಕೆ: ಮದನ್ ಗೌಡ
-
Mysore12 hours agoಸಾಲಿಗ್ರಾಮ: 79ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮ ದಲ್ಲಿ ಪತ್ನಿಗೆ ಅಧಿಕಾರ, ಪತಿಗೆ ಸರ್ವಾಧಿಕಾರ
-
Hassan14 hours agoಎಚ್ಡಿಸಿಸಿ ಬ್ಯಾಂಕ್ ಆಡಳಿತ ಪುನಃ ಜೆಡಿಎಸ್ ತೆಕ್ಕೆಗೆ
-
Hassan13 hours agoನೂತನ ಮೇಯರ್ ಆಗಿ ಹೇಮಲತಾ ಕಮಲ್ ಕುಮಾರ್ ಅಧಿಕಾರ ಸ್ವೀಕಾರ
-
Kodagu16 hours agoಸಾವಿರ ಕೋಟಿ ತಂದರೂ ಅಭಿವೃದ್ಧಿ ನಡೆಯುತ್ತಿಲ್ಲ: ಕೆ.ಜಿ.ಜಾಶಿರ್ ಟೀಕೆ
-
Mysore17 hours agoಸ್ವತಂತ್ರ ಹೋರಾಟಗಾರರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿತು: ನಂಜುಂಡ ನಂಜೇಗೌಡ
