Connect with us

Kodagu

ಮಾಲ್ದಾರೆ ಬಳಿ ಹುಲಿ ದಾಳಿಗೆ ಹಸು ಬಲಿ

Published

on

ಸಿದ್ದಾಪುರ: ಮನೆಯ ಸಮೀಪವೇ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹಾಡಹಗಲಿನಲ್ಲೇ ಹುಲಿಯೊಂದು ದಾಳಿ ಮಾಡಿ ಬಲಿ ತೆಗೆದುಕೊಂಡ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ಆಸ್ಥಾನ ಹಾಡಿಯಲ್ಲಿ ನಡೆದಿದೆ.
ಹಸುವನ್ನು ಮೇಯಲು ಬಿಟ್ಟು ಮನೆಗೆ ಊಟಕ್ಕೆ ತೆರಳಿದ ಸಂದರ್ಭ ಸ್ಥಳೀಯರ ಕಣ್ಣೆದುರಲ್ಲೇ ಹುಲಿ ದಾಳಿ ಮಾಡಿ ಹಸುವನ್ನು ಬಲಿ ತೆಗೆದುಕೊಂಡಿದೆ. ಸಮೀಪದಲ್ಲಿದ್ದವರ ಕಿರುಚಾಟದಿಂದ ಹುಲಿ ಸಮೀಪದ ಅರಣ್ಯಕ್ಕೆ ತೆರಳಿದ್ದು
ಸ್ಥಳೀಯರು ಭಯಬೀತರಾಗಿದ್ದಾರೆ.
ಸ್ವಾಮಿ ಎಂಬವರಿಗೆ ಸೇರಿದ ಅಂದಾಜು 2 ವರ್ಷ ಪ್ರಾಯದ ಹಸು ಹುಲಿ ದಾಳಿಗೆ ಬಲಿಯಾಗಿದ್ದು 40 ಸಾವಿರ ನಷ್ಟ ಉಂಟಾಗಿದ್ದು ಪರಿಹಾರ ನೀಡಬೇಕೆಂದು ಸ್ವಾಮಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಈ ಹಿಂದೆಯೂ ಸ್ವಾಮಿ ಎಂಬವರಿಗೆ ಸೇರಿದ ಹಸುವೊಂದನ್ನ ಹುಲಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿತ್ತು. ಇದೀಗ ಮತ್ತೊಂದು ಹಸುವನ್ನ ಹುಲಿ ಬಲಿ ತೆಗೆದುಕೊಂಡಿದ್ದು ಹಾಡಹಗಲಿನಲ್ಲೂ ಸಾರ್ವಜನಿಕವಾಗಿ ಹುಲಿ ಕಾಣಿಸಿಕೊಳ್ಳುತ್ತಿದ್ದು,‌ ಶಾಲಾ ವಿದ್ಯಾರ್ಥಿಗಳು, ಕಾರ್ಮಿಕರು, ಭಯಬೀತರಾಗಿದ್ದಾರೆ. ಕಾಡು ಪ್ರಾಣಿಗಳ ಭಯದ ನಡುವೆ ಜೀವನ ನಡೆಸುತ್ತಿರುವ ಸುತ್ತಮುತ್ತಲಿನ ನಿವಾಸಿಗಳು
ಮನೆಯಿಂದ ಹೊರ ಬರಲು ಸಾದ್ಯವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು, ಕೂಡಲೇ ಹುಲಿ ಸೆರೆ ಹಿಡಿಯಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಶರಣ್ ಕುಮಾರ್ ವಿಭೂತಿ, ಅರಣ್ಯ ರಕ್ಷಕ ಮಣಿಕಂಠ,
ಸಿಬ್ಬಂದಿಗಳಾದ ಕೃಷ್ಣಪ್ಪ,ಶಶಿ, ಗ್ರಾ.ಪಂ ಉಪಾಧ್ಯಕ್ಷ ಕುಂಞಣ್ಣ ಸೇರಿದಂತೆ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Kodagu

ಕೊಡಗಿನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ  ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್

Published

on

ಮಡಿಕೇರಿ: ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ನಾಲ್ವರನ್ನು ಹತ್ಯೆಗೈದಿದ್ದ ಆರೋಪಿಗೆ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ.

ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನ ಹತ್ಯೆಗೈದಿದ್ದ ಆರೋಪಿಗೆ ವಿರಾಜಪೇಟೆ ಸೆಷನ್ಸ್‌ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.

ಕೇರಳ ಮೂಲದ ಆರೋಪಿ ಗಿರೀಶ್ ಎಂಬಾತನಿಗೆ ಈ ಮರಣದಂಡನೆ ವಿಧಿಸಿದೆ. 2024 ರಲ್ಲಿ ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಕೊಳತೋಡು ಎಂಬಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೇರಳ ಮೂಲದ ಗಿರೀಶ್ (37) ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದ.

ಮೃತಪಟ್ಟವರನ್ನು ನಾಗಿ (35), ಆಕೆಯ ಮಗಳು ಕಾವೇರಿ (7) ಹಾಗೂ ನಾಗಿಯ ಅಜ್ಜ-ಅಜ್ಜಿ ಕರಿಯ (75) ಮತ್ತು ಗೌರಿ (70) ಎಂದು ಗುರುತಿಸಲಾಗಿತ್ತು.

ಆರೋಪಿ ಗಿರೀಶ್ ಕತ್ತಿಯಿಂದ ನಾಲ್ವರನ್ನೂ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದ. ಪ್ರಕರಣದ ಭೀಕರತೆ ಮತ್ತು ಗಂಭೀರತೆಯನ್ನು ಮನಗಂಡ ಪೊನ್ನಂಪೇಟೆ ಠಾಣೆ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಆರೋಪಿ ಗಿರೀಶ್‌ನನ್ನು ಬಂಧಿಸಿದ್ದರು.

ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಮಹತ್ವದ ಪ್ರಕರಣದಲ್ಲಿ ಹಿರಿಯ ವಕೀಲರಾದ ಯಾಸೀನ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಎಲ್ಲಾ ಸಾಕ್ಷ್ಯ ಮತ್ತು ವಾದ-ಪ್ರತಿವಾದ ಪರಿಶೀಲಿಸಿದ ಬಳಿಕ ವಿರಾಜಪೇಟೆ ಸೆಷನ್ಸ್ ನ್ಯಾಯಾಲಯವು, ಆರೋಪಿ ಗಿರೀಶ್‌ನ ಅಪರಾಧವು ಗಂಭೀರ ಸ್ವರೂಪದ್ದು ಎಂದು ಪರಿಗಣಿಸಿ, ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಈ ಮೂಲಕ ಕೊಡಗಿನ ನ್ಯಾಯಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ ಮರಣದಂಡನೆಯ ತೀರ್ಪು ಪ್ರಕಟವಾಗಿದೆ.

Continue Reading

Kodagu

ಪ್ರಧಾನಿ ಬಗ್ಗೆ ಅವಹೇಳನ – ಮಡಿಕೇರಿಯ ಮೂವರ ಬಂಧನ

Published

on

ಮಡಿಕೇರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ವಿಡಿಯೋದಲ್ಲಿ ಅವಹೇಳನ ಮಾಡಿರುವ ಮಡಿಕೇರಿಯ ಮೂವರನ್ನು ಬಂಧಿಸಲಾಗಿದೆ.

ಪ್ರಧಾನಿ ಮೋದಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಮಡಿಕೇರಿ ನಗರದ ರಾಣಿಪೇಟೆಯ ಫಹಾದ್ (32), ತ್ಯಾಗರಾಜ ಕಾಲೋನಿಯ ಬಾಸಿಲ್ (29) , ಸಮೀರ್ (31) ಎಂಬವವರನ್ನು ಬಂಧಿಸಲಾಗಿದೆ.

ತಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಜಿಲ್ಲಾ ಬಿಜೆಪಿ ಆಗ್ರಹಿಸಿದ್ದು, ಡಿ. 11 ರಂದು ಪ್ರತಿಭಟನೆಗೆ ಕರೆ ನೀಡಿದೆ.

Continue Reading

Kodagu

ಪರಸ್ಪರ ಹೊಡೆದಾಟ ಕಾಲಿಗೆ ಗುಂಡು, ಕತ್ತಿಯಿಂದ ಹಲ್ಲೆ: ಇಬ್ಬರು ಆಸ್ಪತ್ರೆಗೆ ದಾಖಲು

Published

on

ವಿರಾಜಪೇಟೆ : ಇಂದು ಬೆಳಗ್ಗೆ ವಿರಾಜಪೇಟೆ ಹೊರವಲಯದ ಕಾವಾಡಿ ಗ್ರಾಮದಲ್ಲಿ ಕಾಫಿ ಕೊಯ್ಯಲು ತೆರಳಿದ್ದ ವೇಳೆ ತಮ್ಮದೇ ಕುಟುಂಬದ ಸದಸ್ಯರ ನಡುವೆ ತೋಟದ ವಿಷಯ ದಲ್ಲಿ ಜಗಳ ಮಾಡಿಕೊಂಡು, ಕಾಲಿಗೆ ಗುಂಡು ಹಾರಿಸಿದ ಪರಿಣಾಮ ಹಾಗೂ ಕತ್ತಿಯಿಂದ ಕಡಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ. ಹಾಗಾಗಿ ಗಾಯಗಳು ಇಬ್ಬರನ್ನು  ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಾಚಿಮಂಡ ಅಪ್ಪಚ್ಚು , ಅವರ ಪುತ್ರ ಅಮ್ರತ್ , ಮಾಚಿಮಂಡ ರತನ್ ಹಾಗೂ ಪುತ್ರ ಬ್ರಿಜೇಶ್ ಅವರು ನೆನ್ನೆ ಸಣ್ಣಪುಟ್ಟ ಜಗಳ ಮಾಡಿಕೊಂಡು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪುಕಾರು ನೀಡಲಾಗಿತ್ತು. ಹೀಗಾಗಿ ಪೊಲೀಸರು ವಿಚಾರಣೆ ಮಾಡುವುದಾಗಿ ತಿಳಿಸಿದ್ದರು.

ಆದರೆ ಇಂದು ಬೆಳಗ್ಗೆ ರತನ್ ಹಾಗೂ ಬ್ರಿಜೆಶ್ ಬೆಳಗ್ಗೆ ಏಳು ಗಂಟೆಗೆ ಕೆಲಸ ಗಾರರನ್ನು ಕರೆದುಕೊಂಡು ಕಾಫಿ ಕುಯ್ಯಲು ಮುಂದಾಗಿದ್ದಾರೆ.
ನಮ್ಮ ತೋಟದಲ್ಲಿ ನೀವು ಕಾಫಿ ಏಕೆ ಕುಯ್ಯುತ್ತಿರಾ ಎಂದು ಎರಡು ಕುಟುಂಬದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.
ಅಪ್ಪಚ್ಚು ಅವರು ತನ್ನ ವಾಹನದಲ್ಲಿ ಕೋವಿ ತಂದು ಒಂದು ಬೆದರಿಕೆ ಗುಂಡು ಹರಿಸಿದ್ದಾರೆ. ಆದರೂ ಕೂಡ ಕಾಫಿ ಕುಯ್ಯಲು ಮುಂದುವರಿಸಿದ ಹಿನ್ನೆಲೆಯಲ್ಲಿ ಅಪ್ಪಚ್ಚು ಅವರು ರತನ್ ಪುತ್ರ ನ ಕಾಲಿನ ಬಳಿ ಗುಂಡು ಹಾರಿಸಿದರು ಗುಂಡು ಚದುರಿ ಕಾಲಿಗೆ ಗಂಭೀರ ಸ್ವರೂಪದ ಗಾಯ ಉಂಟಾಗಿದೆ.

ನಂತರ ರತನ್ ಕೂಡ ಹಲ್ಲೆಗೆ ಮುಂದಾದಾಗ ಅಪ್ಪಚ್ಚು ಅವರ ಪುತ್ರ ಅಮ್ರತ್ ಹಾಗೂ ಸಂಗಡಿಗರು ಕತ್ತಿಯಿಂದ ರತನ್ ಮೇಲೆ ಹಲ್ಲೆ ಮಾಡಿರುವ ಪರಿಣಾಮ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಇನ್ನೂ ಗಾಯಗೊಂಡ ಇಬ್ಬರನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ವೈದ್ಯರು ಇಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದು ಆರೋಪಿ ಗಳನ್ನು ಬಂಧಿಸಿ ಮುಂದಿನ ಕ್ರಮವನ್ನು ಅನುಸರಿಸಿದ್ದಾರೆ.

Continue Reading

Trending

error: Content is protected !!