Connect with us

Mysore

ಸೊಳ್ಳೇಪುರದಲ್ಲಿ ಬೆಳ್ಳಂಬೆಳಿಗ್ಗೆ ಹುಲಿ ದಾಳಿ : ಬೆಲೆ ಬಾಳುವ ಹಸು ಬಲಿ, ಆತಂಕದಲ್ಲಿ ರೈತರು

Published

on

ಎಚ್.ಡಿ. ಕೋಟೆ ತಾಲ್ಲೂನ ಸೊಳ್ಳೇಪುರ ಗ್ರಾಮದಲ್ಲಿ ಹುಲಿ ದಾಳಿಗೆ ಬೆಲೆ ಬಾಳುವ ಹಸು ಬಲಿಯಾಗಿದೆ.

ಸೊಳ್ಳೆಪುರ ಗ್ರಾಮದ ತವರನಾಯಕ ಎಂಬುವವರಿಗೆ ಸೇರಿದ ಹಸು‌ ಇದಾಗಿದ್ದು ಅಂದಾಜು 40 ಸಾವಿರಕ್ಕೂ ಹೆಚ್ಚು ಬೆಲೆ ಬಾಳುತ್ತಿತ್ತು ಎಂದು ಅಂದಾಜಿಸಲಾಗಿದೆ.
ಮಂಗಳವಾರ ಹಗಲಿನ ವೇಳೆಯೇ ಹಸು ಹುಲಿ ದಾಳಿಗೆ ತುತ್ತಾಗಿದೆ, ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ‌ ಸಹ ಯಾವುದೇ ಪ್ರಯೋಜನಾವಾಗಿಲ್ಲ, ಅರಣ್ಯ ಸಿಬ್ಬಂದಿ ಇತ್ತ ತಿರುಗಿಯೂ ನೋಡಿಲ್ಲ‌ ಎಂದು ಹಸುವಿನ ಮಾಲೀಕ ತವರನಾಯಕ ಆರೋಪಿಸಿದ್ದಾರೆ.

ಈಚೆಗೆ ಹುಲಿ ದಾಳಿಯಿಂದ ಅಗಸನಹುಂಡಿಗ್ರಾಮದಲ್ಲಿ ಮಗುವೊಂದು ಬಲಿಯಾಗಿತ್ತು, ಅಲ್ಲದೆ ಪಕ್ಕದ ಸಿದ್ದಾಪುರ ಗ್ರಾಮದಲ್ಲಿ ಹಸು ಸಹ ಬಲಿಯಾಗಿತ್ತು, ಇದನ್ನ ಮನಗಂಡು ಅರಣ್ಯ ಇಲಾಖೆ ೮೦ ಕ್ಕೂ ಹೆಚ್ಚು ನೌಕರರನ್ನು ಒಳಗೊಂಡು ನಾಲ್ಕೈದು ದಿನಗಳ ಕಾಲ ದಸರಾ ಆನೆ ಅರ್ಜುನನ ಸೇರಿದಂತೆ ಇತರ ಮೂರು ಆನೆಗಳೊಂದಿಗೆ ಕಾರ್ಯಾಚರಣೆಯನ್ನು ನಡೆಸಿದ್ದರು ಸಹ ಹುಲಿ ಸೆರೆಯಾಗಿರಲಿಲ್ಲ, ಜೊತೆಗೆ 20 ಕ್ಕೂ ಹೆಚ್ಚು ಕಡೆ ಹುಲಿ ಸೆರೆಗೆ ಭೋನನ್ನು ಇರಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಎಚ್ ಡಿ ಕೋಟೆಯಲ್ಲಿಂದು ಬ್ರಹ್ಮಾಕುಮಾರಿಸ್ ಪ್ರಕಾಶ ಭವನ ಲೋಕಾರ್ಪಣೆ

Published

on

ಎಚ್ ಡಿ ಕೋಟೆ  ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪ್ರಕಾಶಭವನವನ್ನು ಸಾರ್ವಜನಿಕರ ಸೇವೆಗಾಗಿ ಮೌಂಟ್ ಅಬು ಶಿಕ್ಷಣ ಸೇವಾ ವಿಭಾಗದ ಅಂತರಾಷ್ಟ್ರೀಯ ಅಧ್ಯಕ್ಷರಾದ ರಾಜ ಯೋಗಿ ಬ್ರಹ್ಮಕುಮಾರ ಮೃತ್ಯುಂಜಯ ಜೀರವರು ಇಂದು ಬೆಳಗ್ಗೆ 10 ಗಂಟೆಗೆ ದಿನಾಂಕ 11.08.2024 ಭಾನುವಾರ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಕಲ್ಪನಾಜೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೇವಾ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ಹಾಗೂ 39ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ಮೈಸೂರು ಉಪವಲಯ ಈಶ್ವರೀಯ ವಿಶ್ವವಿದ್ಯಾಲಯಗಳ ಮುಖ್ಯ ಸಂಚಾಲಕರಾದ ರಾಜಾ ಯೋಗಿನಿಬ್ರಹ್ಮಾಕುಮಾರಿ ಲಕ್ಷ್ಮೀಜಿಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾನ್ಯ ಶಾಸಕರಾದ ಅನಿಲ್ ಚಿಕ್ಕಮಾದುರವರು ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ತಹಸಿಲ್ದಾರವರಾದ ಶ್ರೀನಿವಾಸ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ ಸುರೇಶ, ಆರಕ್ಷಕ ವೃತ್ತ ನಿರೀಕ್ಷಕರಾದ ಸಬೀರ್ ಹುಸೇನ್, ಗೀತಾ ಗಿರಿ ಗೌಡ ಗೋವಿಂದ ಗೌಡರು ಶ್ರೀನಿವಾಸ್ ಹಾಗೂ ಬಿಕೆ ನಾಗರಾಜ್ ಬಾಯಿರವರು ಭಾಗವಹಿಸಲಿದ್ದಾರೆ. ಬೆಳಗ್ಗೆ 9:30ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಶಾಂತಿ ಶೋಭಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ

Continue Reading

Mysore

ಬಡ ಜನತೆ ಆರೋಗ್ಯದ ನಿರ್ಲಕ್ಷ ತೋರದೆ ಶಿಬಿರದ ಪ್ರಯೋಜನ ಪಡೆದುಕೊಳ್ಳಿ : ಸಮನ್ವಯಾಧಿಕಾರಿ ಅನುಷಾ

Published

on

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ ತೋರದೆ ಶಿಬಿರದ ಪ್ರಯೋಜನ ಪಡೆದುಕೊಳ್ಳಿ  ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಯೋಜನೆಯ ಸಮನ್ವಯಾಧಿಕಾರಿ ಅನುಷಾ ಹೇಳಿದರು.

ಸಮೀಪದ ಸುಗ್ಗನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ನಡೆದ ಉಚಿತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿ ಪಿ, ಶುಗರ್, ಹೃದ್ರೋಗ ಹಾಗು ಕಿಡ್ನಿ ಕಾಯಿಲೆಗಳು ಬರುವುದು ಸಾಮಾನ್ಯವಾಗಿದೆ, ಇವು ಶ್ರೀಮಂತರ ಕಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ ಚಿಕಿತ್ಸಾ ವೆಚ್ಚ ಭರಿಸಲು ಆಸಾಧ್ಯ, ಗ್ರಾಮೀಣ ಭಾಗದ ಹಾಗು ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆ ಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂಬುದನ್ನು ಮನಗಂಡು ಧರ್ಮಸ್ಥಳ ಸಂಸ್ಥೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪಾತಲಿಂಗಪ್ಪ, ಜ್ಞಾನ ವಿಕಾಸ ಕೇಂದ್ರ ಅಧ್ಯಕ್ಷ ರೂಪ,ಸೇವಾಪ್ರತಿನಿಧಿ ರಾಧಾ, ವೈದ್ಯರಾದ ಡಾ, ಅಜಯ್ ಹಾಗು ಸುಗ್ಗನಹಳ್ಳಿ ಗ್ರಾಮಸ್ಥರು, ಮುಖಂಡರು ಇದ್ದಾರೆ.

Trending

error: Content is protected !!