Connect with us

Chamarajanagar

ತುಂಬಿ ಹರಿಯುತ್ತಿರುವ ಕಬಿನಿ.

Published

on

@ ತುಂಬಿ ಹರಿಯುತ್ತಿರುವ ಕಬಿನಿ.@:ಕೇರಳ ಮತ್ತು ವೈನಾಡು ತುಂಬಾ ಮಳೆ ಆಗುತ್ತಿದ್ದು ಕಬಿನಿ ಜಲಾಶಯಕೆ ಒಳ ಅರಿವು ಹೆಚ್ಚಾಗಿದ್ದು 25000 ಕ್ಯೂ ಸೆಟ್ ನೀರನ್ನು ನದಿಗೆ ಬಿಡಲಾಗಿದೆ ಭಾನುವಾರ ನಿರಂತರವಾಗಿ ಮಳೆ ಬೆಳೆಯುತ್ತಿರುವುದರಿಂದ ಡ್ಯಾಮ್ ಗೆ 24,000 ನೀರು ಅರಿದು ಬರುತ್ತಿದ್ದು ಕಬಿನಿ ಡ್ಯಾಮ್‍ನ 4 ಕ್ರಷರ್ ಗೇಟ್ನಿಂದ 25000. ಕ್ಯೂಸಟ್ ನೀರನ್ನು ಹೊರ ಬಿಡಲಾಗಿದೆ ಸೋಮವಾರ ಜಲಾಶಯದ ನೀರಿನ ಮಟ್ಟ 2283 ಅಡಿ ಗಳು ಆಗಿರುತ್ತೆ. ಅದರಿಂದ ಜಲಾಶಯದ ಹತ್ತಾರು ಊರುಗಳಿಗೆ ಸಂಪರ್ಕ ಕೊಡುವ ಸೇತುವೆ ಮುಳುಗಡೆಯಾಗಿದೆ ಅದರಿಂದ ಬಾರಿ ಗಾತ್ರದ ವಾಹನಗಳು ಬಸ್ ಲಾರಿ ಇನ್ನು ಮುಂತಾದ ವಾಹನಗಳು ಸರಗೂರು ಮಾರ್ಗವಾಗಿ ಬಂದು ಬೀಚನಹಳ್ಳಿ ಬಸಾಪುರ ಕೆಂಚನಹಳ್ಳಿ. ನ ಬೇಗೂರು. ಬೀರಂಬಳ್ಳಿ & ಜಕ್ಕಳ್ಳಿ ಕಾಲೋನಿ-& ಗೆಂಡತೂರ್ ತಲುಪುತ್ತವೆ ಅಕ್ಕ ಪಕ್ಕದ ಗ್ರಾಮಸ್ಥರಿಗೆ ಸಾಲ ಕಾಲೇಜು ವಿದ್ಯಾರ್ಥಿಗಳು ತುಂಬಾ ತೊಂದರೆ ಆಗುತ್ತಿದೆ ಸೋಮವಾರ. ಮಂಗಳವಾರ ಹೆಚ್ಚು ಮಳೆ ಆಗುತ್ತಿದ್ದು ಶಾಲೆಗೆ ರಜೆ ಘೋಷಿಸಲಾಗಿದೆ. ಅದೇ ರೀತಿ ಪ್ರವಾಸಿಗರು ಕಬಿನಿ ಡ್ಯಾಮ್ ನೋಡಲು ಮುಗ್ದಿ ಬೀಳುತ್ತಿದ್ದಾರೆ ಅದೇ ರೀತಿ ನದಿ ಪಾತ್ರದ ಜನಗಳಿಗೆ ತಮ್ಮ ಜಾನುವಾರುಗಳು ಮತ್ತು ಕುಟುಂಬದವರು ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ತಮ್ಮಲ್ಲಿ ಮನವಿ 🤝

Continue Reading

Chamarajanagar

ನದಿ ಪಾತ್ರದಲ್ಲಿ ಬರುವ ಎಲ್ಲಾ ಗ್ರಾಮಗಳ ಜನತೆ ಜನತೆ ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿ

Published

on

ಕೆ.ಆರ್.ಪೇಟೆ
ಹೇಮಾವತಿ ಡ್ಯಾಂನಿಂದ ನದಿಗೆ 30ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿರುವ ಕಾರಣ ಕೆ.ಆರ್.ಪೇಟೆ ತಾಲ್ಲೂಕಿನ ಬಂಡಿಹೊಳೆ ಬಳಿಯ ಹೇಮಗಿರಿ ಮತ್ತು ಮಂದಗೆರೆ ಅಣೆಕಟ್ಟೆಗಳಲ್ಲಿ ನದಿಯು ಉಕ್ಕಿ ಹರಿಯುತ್ತಿದೆ.

ಹಾಗಾಗಿಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಹೇಮಾವತಿ ನದಿಯು 46ಕಿ.ಮೀ ದೂರ ಹರಿಯಲಿದ್ದು ನದಿ ಪಾತ್ರದಲ್ಲಿ ಬರುವ ಎಲ್ಲಾ ಗ್ರಾಮಗಳ ಜನತೆ ಜನತೆ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಜನಜಾನುವಾರುಗಳನ್ನು ನದಿಗೆ ಇಳಿಸಬಾರದು. ಬಟ್ಟೆ ಪಾತ್ರೆ, ತೊಳೆಯಲು ನದಿ ಬಳಿ ಹೋಗಬಾರದು. ನದಿಯಲ್ಲಿ ಸ್ನಾನಮಾಡುವುದಾಗಲಿ, ಈಜುವುದಾಗಲಿ‌ ಮಾಡಬಾರದು. ಮೀನುಗಾರರು ನದಿಯಲ್ಲಿ

ಮೀನು ಹಿಡಿಯಲು ಹೋಗಬಾರದು ಎಂದು ಕೆ.ಆರ್.ಪೇಟೆ ಹೇಮಾವತಿ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಆನಂದ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಇಓ ಸತೀಶ್, ಕಿಕ್ಕೇರಿ ಪೊಲೀಸ್ ಇನ್ಸ್ ಪೆಕ್ಟರ್ ರೇವತಿ, ದಬ್ಬೇಘಟ್ಟ ಪಿಡಿಓ ಉಮಾಶಂಕರ್, ಮಂದಗೆರೆ ಪಿಡಿಓ ಸುವರ್ಣ, ಸಹಾಯಕ ಸಬ್ ಇನ್ಸ್ ಪೆಕ್ಟರ್

ಶಿವಲಿಂಗಯ್ಯ, ಹೇಮಾವತಿ ನಂ.20 ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯವರಾದ ವಿಶ್ವನಾಥ್, ಸಹಾಯಕ ಇಂಜಿನಿಯರ್ ರವರಾದ ರಾಘವೇಂದ್ರ, ಮೋಹನ್ ಕುಮಾರ್, ಹೆಚ್.ಡಿ. ನಾಯಕ್ ಸೇರಿದಂತೆ ಹಲವು ನೀರಾವರಿ ಅಧಿಕಾರಿಗಳು ಉಪಸ್ಥಿತರಿದ್ದರು.

 

Continue Reading

Chamarajanagar

ತಾಲ್ಲೂಕು ಆಸ್ಪತ್ರೆಯಲ್ಲಿ ಶಾಸಕ ಎ ಆರ್ ಕೃಷ್ಣಮೂರ್ತಿ ರವರ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ

Published

on

ಯಳಂದೂರು ಜು.20

ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಶಾಸಕ ಎ ಆರ್ ಕೃಷ್ಣಮೂರ್ತಿ ರವರ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಅವರುತಾಲ್ಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು.ತಾಲ್ಲೂಕಿನಾದ್ಯಂತ ಡೆಂಗ್ಯೂ ನಿಯಂತ್ರಣ ಮಾಡಬೇಕು ಎಂದು ತಿಳಿಸಿದರು.ನೂತನವಾಗಿ ಆಯ್ಕೆಯಾದ ಆರೋಗ್ಯ ರಕ್ಷ ಸಮಿತಿಯ ಸದಸ್ಯರನ್ನು ಅಭಿನಂದಿಸಿದರು.

ಆರೋಗ್ಯ ರಕ್ಷ ಸಮಿತಿಯ ಸದಸ್ಯ ಜಿ ಮಾದೇಶ್, ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ ಚಿದಂಬರಂ, ತಹಸೀಲ್ದಾರ್ ಜಯಪ್ರಕಾಶ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಉಮೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ ಶ್ರೀಧರ್, ತಾಲೂಕು ವೈದ್ಯಾಧಿಕಾರಿಗಳಾದ ಡಾನಾಗೇಂದ್ರ ಮೂರ್ತಿ, ಡಾ.

ಶಶಿರೇಖಾ, ಡಾ ನಾಗೇಶ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷರಾದ ಹೆಚ್ ವಿ ಚಂದ್ರು, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಜೆ ಯೋಗೇಶ್ ಮತ್ತು ನೂತನವಾಗಿ ಆಯ್ಕೆಯಾದ ಆರೋಗ್ಯ ರಕ್ಷ ಸಮಿತಿಯ ಸದಸ್ಯರು,ತಾಲೂಕು ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.

Continue Reading

Chamarajanagar

ಕೊಳ್ಳೇಗಾಲ ತಾಲ್ಲೂಕು ಕ್ರೈಸ್ತ ಒಕ್ಕೂಟದಿಂದ ಭಾರತೀಯ ಕ್ರೈಸ್ತ ದಿನಾಚರಣೆ ಅಂಗವಾಗಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭ ಪುರಸ್ಕಾರ.

Published

on

ಕೊಳ್ಳೇಗಾಲ: ಕ್ರೈಸ್ತರು ಪರಸ್ಪರ ಪ್ರೀತಿ, ಅನ್ಯೋನ್ಯತೆ , ಬಡವರ ಮತ್ತು ಶೋಷಿತರ ಸೇವೆಯಲ್ಲಿ ಯೇಸು ಕ್ರಿಸ್ತನನ್ನು ಅನುಸರಿಸಿ ಜೀವಿಸಬೇಕು ಎಂದು ಸಂತ ಫ್ರಾನ್ಸಿಸ್ ಅಸ್ಸಿಸಿ ಚರ್ಚ್ ನ ಫಾದರ್ ಎಂ.ರಾಯಪ್ಪ ಹೇಳಿದರು.


ಕೊಳ್ಳೇಗಾಲ ನಗರದ ಬೇತೆಲ್ ಲೂಥರನ್ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಕ್ರೈಸ್ತ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಭಾರತೀಯ ಕ್ರೈಸ್ತ ದಿನಾಚರಣೆ, ಸರ್ವ ಸದಸ್ಯರ ದ್ವಿತೀಯ ವಾರ್ಷಿಕ ಮಹಾಸಭೆ ಹಾಗೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಉದ್ಘಾಟನೆ ಮಾಡಿ ನಂತರ ಮಾತನಾಡಿದರು.

ಯಾರಿಗೂ ಸಹ ಕೇಡು ಉಂಟಾಗದಂತೆ ಪ್ರತಿನಿತ್ಯ ಒಳ್ಳೆಯ ಕೆಲಸಗಳನ್ನು ಮಾಡಬೇಕು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಆಸಕ್ತಿವಹಿಸಿ ಉತ್ತಮ ಅಂಕ ಗಳಿಸಬೇಕು. ಅಂಕ ಗಳಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ತಂದೆ ತಾಯಿಗೆ ಹಾಗೂ ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುವಂತೆ ಆಗಬೇಕು. ಇತ್ತೀಚಿನ ದಿನಗಳಲ್ಲಿ ಯುವಕರು ಮೋಜು ಮಸ್ತಿ ಸೇರಿದಂತೆ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಹಾಗಾಗಿ ಅಂತಹ ದುಶ್ಚಟಗಳಿಗೆ ಒಳಗಾಗದೆ ವಿದ್ಯಾಭ್ಯಾಸದ ಕಡೆಗೆ ಆಸಕ್ತಿ ವಹಿಸಬೇಕು ಜೊತೆಗೆ ದೇವರಲ್ಲಿ ಹೆಚ್ಚಾಗಿ ಪ್ರಾರ್ಥನೆಯನ್ನು ಮಾಡಿ ಓದಿನ ಕಡೆ ಗಮನ ಹರಿಸಬೇಕು. ಕೊಳ್ಳೇಗಾಲ ತಾಲೂಕು ಕ್ರೈಸ್ತ ಒಕ್ಕೂಟ ಒಂದು ವರ್ಷದಲ್ಲಿ ಅನೇಕ ಸೇವೆಗಳನ್ನು ಮಾಡುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ವಿವಿಧ ಕ್ರೈಸ್ತ ಸಭೆಗಳ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 21 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಈ ಸಂದರ್ಭದಲ್ಲಿ ಕರಾವಳಿ ಮತ್ತು ದಕ್ಷಿಣ ಕನ್ನಡದ ಹಿರಿಯ ಕ್ರೈಸ್ತ ಮುಖಂಡ ಗ್ರೇಶಿಯನ್ ರಾಡ್ರಿಗಸ್, ತಾಲ್ಲೂಕು ಕ್ರೈಸ್ತ ಒಕ್ಕೂಟ ಅಧ್ಯಕ್ಷ ಅಂತೋಣಿ ದಿನೇಶ್, ಕಾರ್ಯದರ್ಶಿ ತೇಜ್ ಪಾಲ್, ಖಜಾಂಚಿ ವಿಜಯ್ ಕುಮಾರ್, ಉಪಾಧ್ಯಕ್ಷ ಕಿರಣ್ ಜೆ.ಮೋಸಸ್, ಅಂತೋಣಿ, ನಿರ್ದೇಶಕ ನರೇಂದ್ರನಾಥ, ಡೇವಿಡ್, ನಾಗರಾಜು, ಮಿಲ್ಟನ್ ಕ್ರಿಸ್ಟೋಫರ್, ಎಸ್.ಕಿರಣ್ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸರ್ವ ಸದಸ್ಯರು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು

Continue Reading

Trending

error: Content is protected !!