Connect with us

Mysore

ಮಹಾರಾಣಿ ಕಾಲೇಜು ಕಟ್ಟಡ ಕುಸಿತ: 13 ಮಂದಿ ಪ್ರಾಣಪಾಯದಿಂದ ಪಾರು

Published

on

ಮೈಸೂರು: ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ ನವೀಕರಣ ವೇಳೆಯಲ್ಲೇ ಮತ್ತೆ ಕುಸಿತಗೊಂಡ ಪರಿಣಾಮ ಓರ್ವ ಕಾರ್ಮಿಕ ಕೆಳಗೆ ಸಿಲುಕಿಕೊಂಡಿದ್ದು ಉಳಿದ 13 ಮಂದಿ‌‌ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಮಂಗಳವಾರ (ಜ.28) ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಸಮೀಪದ ಮಹಾರಾಣಿ ಪದವಿ ವಿಜ್ಞಾನ ಕಾಲೇಜು ಮಹಾರಾಣಿ ಕಾಲೇಜು ಕಟ್ಟಡ ಶಿಥಿಲಗೊಂಡಿದ್ದು, ಅದರ ದುರಸ್ತಿ ಕಾರ್ಯ ನಡೆಯುತ್ತಿತ್ತು. ದುರಸ್ತಿ ಕಾರ್ಯದಲ್ಲಿ ಕಿಟಕಿಗಳನ್ನು ತೆಗೆದು ಹಾಕುವ ವೇಳೆ ಕಟ್ಟಡ ಕುಸಿದಿದೆ.

ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕಾರ್ಮಿಕನ ರಕ್ಷಣೆಗೆ ಮುಂದಾಗಿದ್ದಾರೆ. ಮೂರು ಜೆಸಿಬಿ ಮೂಲಕ ಅವಶೇಷಗಳನ್ನು ತೆರವು ಮಾಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಸಕ ಹರೀಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

2022ರ ಅಕ್ಟೋಬರ್ 21 ರಲ್ಲಿ ಸಂಪೂರ್ಣ ಕಟ್ಟಡದ ಮೇಲ್ಛಾವಣಿ ಕುಸಿತಗೊಂಡಿತ್ತು. ಇದಾದ ಬಳಿಕ‌ ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರಂಪರಿಕ ತಜ್ಞರ ಸಮಿತಿ ವರದಿ ಅನ್ವಯ ಅದರ ಪುನರ್ ನವೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಇದರ ಭಾಗವಾಗಿ ಇಂದು ಮೂವರು ಕಾರ್ಮಿಕರು ಸಂಪೂರ್ಣ ಸ್ವಚ್ಛಗೊಳಿಸಿ ತಾರಸಿ ನಿರ್ಮಿಸಲು ತಯಾರಿ ನಡೆಸಿದ್ದ ವೇಳೆ ಅವಘಡ ಸಂಭವಿಸಿದೆ. ಅದೃಷ್ಠವಶಾತ್ ಇಬ್ಬರು ಪಾರಾಗಿದ್ದು, ಓರ್ವ ಕಾರ್ಮಿಕ ಅವಶೇಷದಡಿ ಸಿಲುಕಿದ್ದಾರೆ ಎನ್ನಲಾಗಿದೆ.

ಮೈಸೂರಿನ ಗೌಸಿಯಾನಗರದ ನಿವಾಸಿ ಸದ್ದಾಂ ಎಂಬ ಕಾರ್ಮಿಕ ಕೆಳಗೆ ಸಿಲುಕಿಕೊಂಡಿದ್ದಾನೆ ಎನ್ನಲಾಗಿದೆ.‌ಆತನನ್ನು ಸಂರಕ್ಷಿಸುವ ಕೆಲಸ ತ್ವರಿತವಾಗಿ ನಡೆಯುತ್ತಿದೆ.

ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಶಾಸಕ‌‌ ಕೆ.ಹರೀಶ್ ಗೌಡ ಪರಿಸ್ಥಿತಿ ನೋಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಪಾರಂಪರಿಕ ತಜ್ಞರ ಸಮಿತಿಯ ಶಿಫಾರಸ್ಸಿನ ಮೇರೆಗೆ 2000 ಮಂದಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿನಿಲಯ ನಿರ್ಮಿಸುವ ಜತೆಗೆ ಇದರ ಪುನರ್ ನವೀಕರಣ ಕಾರ್ಯದಕ್ಕೂ ಸಿಎಂ‌ ಅನುದಾನದಲ್ಲಿ ಚಾಲನೆ ನೀಡಿದ್ದೇವು. ಅದರ ಪ್ರಾರಂಭದಲ್ಲೇ ಹೀಗಾಗಿದೆ. ಸದ್ಯ ಮೂವರಲ್ಲಿ ಇಬ್ಬರೂ ಪಾರಾಗಿದ್ದು, ಮತ್ತೊಬ್ಬರು ಒಳಗಿರುವ ಮಾಹಿತಿಯಿದೆ ಅವರು ಪ್ರಾಣಾಪಯದಿಂದ ಪಾರಾಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಸೇರಿ ಎಲ್ಲರೂ ಅವರನ್ನು ರಕ್ಷಿಸುವ ಕೆಲಸ‌ ಮಾಡುತ್ತಿದ್ದಾರೆಂದು ಹೇಳಿದರು.

Continue Reading

Mysore

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದೆ, ಎಲ್ಲಾ ವರ್ಗದವರಿಗೂ ಶಕ್ತಿ ತುಂಬಲು: ಸಿಎಂ ಸಿದ್ದರಾಮಯ್ಯ

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡೋಕೆ ಆಗಲ್ಲ. ಮಾಡಿದರೆ ಆರ್ಥಿಕ ದಿವಾಳಿಯಾಗುತ್ತೆ ಎಂದು ಹೇಳಿದ್ದರು. ಆದರೆ ನಾವು ಅಧಿಕಾರಕ್ಕೆ ಬಂದು ಎರಡು ವರ್ಷ ಎರಡು ತಿಂಗಳು ಆಗಿದೆ‌‌. ಎಲ್ಲವನ್ನೂ ಜಾರಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಂಜನಗೂಡು ತಾಲೂಕಿನ ಹದಿನಾರು ಗ್ರಾಮದಲ್ಲಿ ಇಂದು ಆಯೋಜಿಸಿದ್ದ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1107.72 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟಿಸಿ ಮತ್ತು ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ವಿತರಣೆ ಮಾಡಿ ಮಾತನಾಡಿದರು.

ವರುಣ ಕ್ಷೇತ್ರದಲ್ಲಿ 1107.72 ಕೋಟಿ ರೂ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ  ಅಧಿಕಾರಕ್ಕೆ ಬಂದಿದ್ದೆ ಅಭಿವೃದ್ಧಿ ಕಾಮಗಾರಿ ಮಾಡಲು. ಅಲ್ಲದೇ ಎಲ್ಲ ಸಮಾಜದ ಬಡವರು ಎಲ್ಲಾ ಜಾತಿಯ ಹೆಣ್ಣು ಮಕ್ಕಳು, ದಲಿತರು, ಹಿಂದೂಳಿದವರು, ರೈತರು, ಕಾರ್ಮಿಕರಿಗೆ ಶಕ್ತಿ ತುಂಬಲು. ಹೀಗಾಗಿ ನಮ್ಮ ಸರ್ಕಾರ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.

ಸಮಾಜದಲ್ಲಿ ಅಸಮಾನತೆ ಹೋಗಬೇಕು. ಸಮಾಜದಲ್ಲಿ ಸಮಾನತೆ ಬರಬೇಕು. ಎಲ್ಲರಿಗೂ ಸಮಾನವಾದ ಅವಕಾಶ ಸಿಗಬೇಕು. 41 ವರ್ಷಗಳ ರಾಜಕೀಯ ಜೀವನ. ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೆ. ವರುಣ ಕ್ಷೇತ್ರ ಆದಮೇಲೆ ಮೂರು ಬಾರಿ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದಾರೆ.ನಾನು ಮುಖ್ಯಮಂತ್ರಿಯಾಗಿದ್ದು, ವರುಣ ಕ್ಷೇತ್ರದಿಂದ.ಎರಡು ಬಾರಿ ಸಿಎಂ ಆಗಿದ್ದರೆ ಅದು ವರುಣಾ, ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ನಾನು ಚಿರಋಣಿ. ಎರಡೂ ಕ್ಷೇತ್ರಗಳ ಜನರು ಕಾರಣ. ಜನರ ಋಣ ತೀರಿಸುವುದು ನನ್ನ ಕರ್ತವ್ಯ ಎಂದು ಹೇಳಿದರು.

ಸರ್ಕಾರದಿಂದ ಅನೇಕ ಸವಲತ್ತುಗಳನ್ನು ಕೊಡುತ್ತಿದ್ದೇವೆ. ಫಲಾನುಭವಿಗಳಿಗೆ ವಿತರಣೆಯನ್ನೂ ಮಾಡುತ್ತಿದ್ದೇವೆ. ಇದನ್ನು ಸದುಪಯೋಗ ಪಡೆದುಕೊಳ್ಳಬೇಕು.
160 ಭರವಸೆಗಳನ್ನು ಕೊಟ್ಟಿದ್ದವು ಅದರಲ್ಲಿ 158 ಭರವಸೆಗಳನ್ನು ಈಡೇಸಿದ್ದೇವೆ. ಕೇಂದ್ರ ಸಚಿವ  ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ.ಇವತ್ತು ಹಾಡಿ ಹೊಗಳುವ ಕೆಲಸಮಾಡುತ್ತಾ ಇದ್ದಾರೆ. ಅಧಿಕಾರಕ್ಕೊಸ್ಕರ ಬಿಜೆಪಿ ಜೊತೆ ಸೇರಿ ಅಧಿಕಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ

ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡೋಕೆ ಆಗಲ್ಲ. ಮಾಡಿದ್ರೆ ಆರ್ಥಿಕ ದಿವಾಳಿಯಾಗುತ್ತೆ ಎಂದು.ನಾವು ಅಧಿಕಾರಕ್ಕೆ ಬಂದು ಎರಡು ವರ್ಷ ಎರಡು ತಿಂಗಳು ಆಗಿದೆ‌‌ . ಎಲ್ಲವನ್ನೂ ಜಾರಿ ಮಾಡಿದ್ದೇವೆ.ಈ ಎಲ್ಲಾ ಕಾರ್ಯಕ್ರಮಗಳಿಗೆ 55,000 ಕೋಟಿ ಖರ್ಚಾಗುತ್ತದೆ. ಅಭಿವೃದ್ಧಿ ಕೆಲಸಗಳಿಗೆ ದುಡ್ಡಿಲ್ಲ ಎಂದು ಬಿಜೆಪಿಯವರು ಆರೋಪ ಮಾಡುತ್ತಾರೆ.ನೀವು ನಮ್ಮ ಸರ್ಕಾರಿ ಕಾರ್ಯಕ್ರಮಗಳಿಗೆ ಬಂದು ನೋಡಬೇಕು.
ಬಿಜೆಪಿಯವರು ಸುಳ್ಳು ಪ್ರಚಾರ ಮಾಡಿ, ಜನರನ್ನು ತಪ್ಪುದಾರಿಗೆ ತರುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ತಲಾ ಆದಾಯದಲ್ಲಿ ಕರ್ನಾಟಕ ಒಂದನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಉದ್ಯೋಗ ಪ್ರಮಾಣ ಜಾಸ್ತಿಯಾಗಿದೆ

ಕರ್ನಾಟಕ ಆರ್ಥಿಕವಾಗಿ ಮೇಲೆ ಬರಲು ಕಾರಣ ಆಗುತ್ತಿದೆ. ಬಡತನ ಕಡಿಮೆಯಾಗುತ್ತಿದೆ. ರಾಜ್ಯವನ್ನು ಮುಂಚೂಣಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದೇವೆ. ಜಿಎಸ್ ಟಿ ಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಒಂದನೇ ಸ್ಥಾನದಲ್ಲಿದೆ. ಆದರೆ ಕೇಂದ್ರ ಸರ್ಕಾರ ನಮಗೆ ಸಹಕರಿಸುತ್ತಿಲ್ಲ. ನಮಗೆ ತೆರಿಗೆ ಹಣವನ್ನು ಕೊಡುತ್ತಿಲ್ಲ. ನಮ್ಮ ಪಾಲನ್ನು ಶೇ. 4.7 ಕೊಡಬೇಕು ಕೊಟ್ಟಿಲ್ಲ.3.7ಕ್ಕೆ ಇಳಿದಿದೆ. ಇದು ನಮಗೆ ಬಿಜೆಪಿ ಕೇಂದ್ರ ಸರ್ಕಾರ ಮಾಡಿರುವ ಅನ್ಯಾಯ.
ಬಿಜೆಪಿಯಿಂದ ಗೆದ್ದಿರುವ ಸಂಸದರು ಕೇಂದ್ರ ಸರ್ಕಾರವನ್ನು ಕೇಳಬೇಕು. ಕೇಳದಿದ್ದರೆ ಕರ್ನಾಟಕದ ಜನರಿಗೆ ದ್ರೋಹ ಬಗೆದಂತೆ.ಬಿಜೆಪಿಯವರು ಮತ ಕಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಅನ್ನೋದು ನಮ್ಮ ಆರೋಪ. ರಾಹುಲ್ ಗಾಂಧಿ ಅವರು ದಾಖಲಾತಿಗಳನ್ನು ಪ್ರದರ್ಶನ ಮಾಡಿದರು ಎಂದರು.

ಬಿಜೆಪಿ ಯಾವತ್ತೂ ಜನರ ಆರ್ಶೀವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ ‌. ಅವರಿಗೆ 113 ಸ್ಥಾನಗಳು ಬರಲಿಲ್ಲ. ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸಿ ಅಧಿಕಾರಕ್ಕೆ ಬಂದರು. ಎರಡೂ ಬಾರಿಯೂ ಅಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದರು. ಬಿಜೆಪಿಯರಿಗೆ ಅಧಿಕಾರ ದಾಹ ಇದೆ. ಬಿಜೆಪಿ ಸಂವಿಧಾನ ಪರವಾಗಿಲ್ಲ ವಿರೋಧವಾಗಿದ್ದಾರೆ. ಅಂಬೇಡ್ಕರ್ ರವರ ಹೆಸರು ಹೇಳ್ತಾರೆ ಅಷ್ಟೇ ಆದರೆ ವಿರುದ್ಧವಾಗಿದ್ದಾರೆ. ಸಂವಿಧಾನವನ್ನು ರಕ್ಷಣೆ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕು. ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ ಇಲ್ಲದಿದ್ದರೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಾನು ಸಿಎಂ ಆಗಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ. ಮುಂದಿನ ಚುನಾವಣೆಗಳಲ್ಲಿ ನನಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ವರುಣ ವಿಧಾನಸಭಾ ಕ್ಷೇತ್ರದಲ್ಲಿ 1107.72 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.ವರುಣ ಕ್ಷೇತ್ರ ನಮ್ಮ ಮನೆ ನಾನು ಹೆಚ್ಚು ಮಾತನಾಡುವುದಿಲ್ಲ.
ಕಳೆದ ವರ್ಷದಲ್ಲಿ 501 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಿದ್ದೇವೆ. ಎರಡು ವರ್ಷ ಆದ ಮೇಲೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದಾದೆವೆ. ನಮ್ಮ ಸರ್ಕಾರ ಅಭಿವೃದ್ಧಿ ಮಾಡುತ್ತಿದ್ದೆ ಎಂದರು.

ಜನ ಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಿದ್ದೇವೆ.ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಖಜಾನೆ ಖಾಲಿಯಾಗಿದೆ ಎನ್ನುತ್ತಿದ್ದಾರೆ.
ನಾವು ಎಲ್ಲಾ ಕ್ಷೇತ್ರಗಳಲ್ಲೂ ಸಾಧನಾ ಸಮಾವೇಶ, ಸಾವಿರಾರು ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡುತ್ತಿದ್ದೇವೆ.ಕರ್ನಾಟಕದ ಆರ್ಥಿಕ ಸ್ಥಿತಿ ಸುಧಾರಿಸಿದೆ. ಗ್ಯಾರಂಟಿ ಯೋಜನೆ ಸೇರಿದಂತೆ ಅಭಿವೃದ್ಧಿಗೂ ಅನುದಾನ ನೀಡುತ್ತಿದ್ದೇವೆ.2 ಲಕ್ಷಕ್ಕೂ ಹೆಚ್ಚು ತಲಾ ಆದಾಯ ಮೀರಿದ.ಪ್ರಗತಿ ಪಥದಲ್ಲಿ ಕರ್ನಾಟಕ ಸಾಗುತ್ತಿದೆ.ಇದಕ್ಕೆ ಗ್ಯಾರಂಟಿ ಯೋಜನೆಗಳು ಕಾರಣ ಎಂದು ಹೇಳಿದರು.

ಹೆಚ್ಚು ಆರ್ಥಿಕ ಪ್ರಗತಿ ಸಾಗಿಸುತ್ತಿದ್ದಾರೆ.ಟೀಕೆ ಮಾಡುವವರಿಗೆ ತಕ್ಕ ಉತ್ತರ ಈ ಕಾರ್ಯಕ್ರಮ. ಬಡವರು ಬಡವಾಗಿ ಇರುತ್ತಾರೆ ಬಂಡವಾಳ ಶಾಯಿ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ.
ಪ್ರಣಾಳಿಕೆಯಲ್ಲಿ ಹೇಳಿದಂತೆ ನುಡಿದಂತೆ ನಡೆದಿದ್ದೇವೆ. ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಅನುಷ್ಠಾನಕ್ಕೆ ತಂದಿದ್ದೇವೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ರ್ಯಾಲಿ ನಡೆಸಿದ್ದೇವು.ಚುನಾವಣಾ ಆಯೋಗದಲ್ಲಿ ಅವವ್ಯಹಾರ. ಚುನಾವಣಾ ಅವವ್ಯಹಾರ ನಡೆಯುತ್ತಿದೆ. ಫೇಕ್ ವಿಳಾಸ ನೀಡಿ ಮತದಾನ ಮಾಡೋದು ‌. ಹೊಸದಾಗಿ ಮತದಾರರನ್ನು ಬಿಟ್ಟು ವಯಸ್ಸಾಗಿರನ್ನು ಸೇರಿಸಿ ಅಕ್ರಮವಾಗಿ ಗೆಲ್ಲುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಎಲೆಕ್ಟ್ರಾನಿಕ್ ಡೇಟಾ ಕೊಡುತ್ತಿಲ್ಲ.  ಬಿಜೆಪಿ ಜೊತೆ ಚುನಾವಣಾ ಆಯೋಗಕ್ಕೆ ಕೈ ಜೊಡಿಸಿದೆ ಎಂದು ಆರೋಪ ಮಾಡಿದರು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಆಡಳಿತ ನಡೆಸೋದು. ಚುನಾವಣೆಯಲ್ಲಿ ಅಕ್ರಮ ನಡೆದರೆಬಂಡವಾಳಶಾಹಿಗಳು ಅಧಿಕಾರಕ್ಕೆ ಬರುತ್ತಾರೆ. ಇದು ಗಂಭೀರ ವಿಷಯ.
ಕಾರ್ಯಕ್ರರ್ತರು ಪ್ರತಿ ಮನೆ ಮನೆಗೆ ಹೋಗಿ ವಿಚಾರ ಮುಟ್ಟಿಸಬೇಕು.ಈ ಬಗ್ಗೆ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

4,500 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ. ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ತದ್ದುಕೊಟ್ಟಿದ್ದಾರೆ‌.ಕೆರೆ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ವರುಣಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ನಾನು ಬದ್ಧನಾಗಿದ್ದೇನೆ.ನನಗೆ ನಮ್ಮ ತಂದೆಗೆ ಕುಟುಂಬಕ್ಕೆ ಜನರು ಬೆಂಬಲ ನೀಡಿದ್ದೀರಿ ನಿಮ್ಮ ಋಣವನ್ನು ನಾನು ಮರೆಯೋದಿಲ್ಲ ಎಂದು ತಿಳಿಸಿದರು.

ಚಾಮರಾಜನಗರ ಸಂಸದ ಸುನೀಲ್ ಬೋಸ್ ಮಾತನಾಡಿ, ನಾನು ಹುಟ್ಟಿದ ಊರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಮಾಡುತ್ತಿರುವುದು ಸಂತಸ ತಂದಿದೆ.ಮೊದಲ ಬಾರಿಗೆ ಸಿದ್ದರಾಮಯ್ಯ ಚುನಾವಣೆಗೆ ನಿಂತು ಶಾಸಕರಾಗಿ ಸಿಎಂ ಆಗಿ ಉತ್ತಮ ಕೆಲಸ ಮಾಡಿದ್ದಾರೆ. ಕ್ಷೇತ್ರದ ಜನರು ತಲೆಬಾಗುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ರವರು ಮಾಡಿಲ್ಲ. ನಾನು ಈ ವೇದಿಕೆಯಿಂದಲೇ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.ವರುಣ ಕ್ಷೇತ್ರದ ಜನರು ಅದೃಷ್ಟವಂತರು.
ವಿರೋಧ ಪಕ್ಷ ಬಿಜೆಪಿಯವರು ಬೊಕ್ಕಸ ಖಾಲಿಯಾಗಿದೆ. ಬೊಕ್ಕಸ ಖಾಲಿಯಾಗಿದ್ರೆ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ ಎಂದು ಟೀಕಿಸಿದರು.

ಕನ್ನಂಬಾಡಿ ಕಟ್ಟೆಗೆ ಅಡಿಗಲ್ಲು ಟಿಪ್ಪು ವಿಚಾರ: ಬಿಜೆಪಿಯ ಹುಟ್ಟು ಗುಣ ಅದು

ರಾಜ ವಂಶಸ್ಥರು ಚುನಾವಣೆಯಲ್ಲಿ ಗೆದ್ದರೆ ಅರಮನೆಗೆ ಬಿಡುವುದಿಲ್ಲ ಎಂದು ಚುನಾವಣೆ ಸಮಯದಲ್ಲಿ ಮಾತನಾಡುತ್ತಿದ್ದರು. ಅಂತಹ ಸಮಯದಲ್ಲಿ ಟೀಕೆಟ್ ಕೊಟ್ಟವರು ಯಾರು. ಈಗ ನಮ್ಮ ವಿರುದ್ಧವೇ ಮಾತನಾಡುತ್ತಾರೆ ಎಂದು ಟಾಂಗ್ ‌ ಹದಿನಾರು ಗ್ರಾಮವನ್ನು ಯದುನಾಡು ಎಂದು ನಾಮಕರಣ ಮಾಡಬೇಕು.ಸಿದ್ದರಾಮಯ್ಯ ರವರೇ ಐದು ವರ್ಷಗಳ ಕಾಲ ಸಿಎಂ ಆಗಿರಬೇಕು ಎಂದು ಹದಿನಾರು ಗ್ರಾಮದಲ್ಲಿ ಸಂಸದ ಸುನೀಲ್ ಬೋಸ್ ಹೇಳಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ : ಸಿಎಂ ಸಿದ್ದರಾಮಯ್ಯ

ಕಾವೇರಿ ನೀರಾವರಿ ನಿಗಮ 636.92 , ಲೋಕೋಪಯೋಗಿ ಇಲಾಖೆ 283.96, ಸಣ್ಣ ನೀರಾವರಿ ಇಲಾಖೆ 72.00, ಆಯುಷ್ ಇಲಾಖೆ 2.32, ಮೈಸೂರು ಅಭಿವೃದ್ಧಿ ಪ್ರಾಧಿಕಾರ 21.50 , ಕೆಪಿಟಿಸಿಎಲ್ 25.54, ಕೆಐಎಡಿಬಿ 18.95, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ 10.44, ನಗರಾಭಿವೃದ್ಧಿ ಕೋಶ ಪೌರಾಡಳಿತ 10.00, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ 7.45, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 4.56, ಸಮಾಜ ಕಲ್ಯಾಣ ಇಲಾಖೆ 4.45, ನಿರ್ಮಿತಿ ಕೇಂದ್ರ ಸಿಎಸ್ ಆರ್ ಅನುದಾನ 4.35, ಶಿಕ್ಷಣ ಇಲಾಖೆ 3.98, ಗಣಿ ಮತ್ತು ಭೂ ವಿಜ್ಞಾನ 0.80, ಪಶುಸಂಗೋಪನೆ ಇಲಾಖೆ 0.50 ಕೋಟಿ ರೂ. ಒಟ್ಟು 1107.72 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ, ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ತಿಮ್ಮಯ್ಯ, ಸಂಸದ ಸುನೀಲ್ ಬೋಸ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ಪಕ್ಷದ ತಗಡೂರು ಬ್ಲಾಕ್ ಅಧ್ಯಕ್ಷರಾದ ರಂಗಸ್ವಾಮಿ, ಸೇರಿದಂತೆ ಸ್ಥಳೀಯ ಶಾಸಕರು ಮತ್ತು ಹದಿನಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mysore

ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ್ ಕಾಂಗ್ರೆಸ್‌ನಿಂದ ಉಚ್ಛಾಟನೆ

Published

on

ಮೈಸೂರು: ಒಕ್ಕಲಿಗ ಸಮುದಾಯದ ಅವಹೇಳನಕಾರಿ ಆರೋಪದ ಹಿನ್ನೆಲೆ
ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ್ ಕಾಂಗ್ರೆಸ್‌ನಿಂದ ಉಚ್ಛಾಟನೆ ಮಾಡಲಾಗಿದೆ.

ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಸಂಚಾಲಕ ನಿವೇದಿತ್ ಆಳ್ವ ಆದೇಶದ ಮೇರೆಗೆ
ಎಚ್.ಡಿ.ಕೋಟೆ ತಾಲೂಕಿನ ಕಾಂಗ್ರೆಸ್ ಮುಖಂಡ ಸೀತಾರಾಮ್ ಅವರನ್ನು ಉಚ್ಛಾಟನೆ ಮಾಡಲಾಗಿದೆ.

ಜಮೀನು ವ್ಯಾಜ್ಯ ವಿಚಾರಕ್ಕೆ ಡಿಪಿಕೆ ಪರಮೇಶ್ ಎಂಬವರೊಂದಿಗೆ ಫೋನ್ ಕರೆಯಲ್ಲಿ ಮಾತನಾಡುವಾಗ ಒಕ್ಕಲಿಗ ಸಮುದಾಯದ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.


ಈ ಬಗ್ಗೆ ಎಚ್.ಡಿ.ಕೋಟೆ, ಸರಗೂರು ತಾಲೂಕಿನಲ್ಲಿ ಒಕ್ಕಲಿಗ ಸಮುದಾಯದ ಮುಖಂಡರು ಹೋರಾಟ ಮಾಡಿದ್ದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಅವರಿಂದ ಪಕ್ಷದಿಂದ ವಜಾಗೊಳಿಸಲು ಶಿಫಾರಸ್ಸು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.

Continue Reading

Mysore

ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್ ತಂಡಕ್ಕೆ ಕರುಣ್ ನಾಯರ್‌ ನಾಯಕ

Published

on

ಮೈಸೂರು: ಎನ್‌ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್‌ ಕ್ರಿಕೆಟ್ ತಂಡವು ಮುಂಬರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2025 ಪಂದ್ಯಾವಳಿಗೆ 20 ಕ್ರಿಕೆಟ್ ಆಟಗಾರರ ತನ್ನ ತಂಡವನ್ನು ಅಧಿಕೃತವಾಗಿ ಘೋಷಿಸಿದ್ದು, ಭಾರತ ತಂಡದ ಖ್ಯಾತ ಕ್ರಿಕೆಟ್ ಆಟಗಾರ ಕರುಣ್ ನಾಯರ್‌ ಅವರನ್ನು ನಾಯಕನನ್ನಾಗಿ ನೇಮಿಸಿದೆ. ಕರುಣ್ ನಾಯರ್ ಗಾಯಾಳು ಆಗಿರುವುದರಿಂದ, ಪ್ರಾರಂಭದ ಕೆಲವು ಮ್ಯಾಚ್ ಗಳಲ್ಲಿ ಹಂಗಾಮಿ ನಾಯಕನಾಗಿ ಮನೀಶ್ ಪಾಂಡೆ ತಂಡವನ್ನು ಮುನ್ನಡೆಸಲಿದ್ದಾರೆ.

ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರಾಗಿರುವ ಕರುಣ್ ನಾಯರ್ ಅವರು ಮೈಸೂರು ವಾರಿಯರ್ಸ್‌ ತಂಡವನ್ನು ಈ ಬಾರಿಯೂ ಗೆಲುವಿನೆಡೆಗೆ ಕರೆದೊಯ್ಯುವ ನಿರೀಕ್ಷೆ ಹೊಂದಲಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿರುವ ಮತ್ತು ಟಿ20 ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಕರುಣ್‌ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲಿದ್ದಾರೆ.

ವಿಶೇಷವೆಂದರೆ ಮಹಾರಾಜ ಟ್ರೋಫಿ 2025 ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಖ್ಯಾತ ಕ್ರಿಕೆಟಿಗರಾದ ಪ್ರಸಿದ್ಧ್ ಎಂ ಕೃಷ್ಣ, ಮನೀಷ್ ಪಾಂಡೆ ಮತ್ತು ಗೌತಮ್ ಕೆ ಅವರು ಆಡಲಿದ್ದಾರೆ. ಮಹಾರಾಜ ಟ್ರೋಫಿ ಪಂದ್ಯಾವಳಿಯು ಆಗಸ್ಟ್. 11 ರಿಂದ 27ರವರೆಗೆ ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆಯಲಿದ್ದು, ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಪರಸ್ಪರ ಸೆಣೆಸಲಿವೆ.

ಕ್ರೀಡೆಯ ಮೂಲಕ ಸಮಾಜಕ್ಕೂ ಒಳಿತು ಮಾಡಬೇಕು ಎಂದು ನಂಬಿರುವ ಮೈಸೂರು ವಾರಿಯರ್ಸ್ ತಂಡವು ಇದೀಗ ದಕ್ಷಿಣ ಏಷ್ಯಾದ ಮೊದಲ ವೀಲ್‌ಚೇರ್ ಕ್ರಿಕೆಟ್ ಲೀಗ್ ಆಗಿರುವ ಎಬಿಲಿಟಿ ಸ್ಪೋರ್ಟ್ಸ್ ಲೀಗ್ (ಎಎಸ್ಎಲ್) ಟಿ20 ಜೊತೆಗೆ ಕಾಸ್ ಪಾರ್ಟನರ್‌ಶಿಪ್ ಮಾಡಿಕೊಂಡಿರುವುದಾಗಿ ಘೋಷಿಸಿದೆ. ಈ ಮೂಲಕ ವಿಕಲಚೇತನ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ನೆರವಾಗುವ ಎಎಸ್ಎಲ್ ಗೆ ಬೆಂಬಲ ಒದಗಿಸಲಿದೆ.

ಆ ಪ್ರಯುಕ್ತ ಕಳೆದ ವರ್ಷದಂತೆಯೇ ಈ ವರ್ಷವೂ ಎನ್‌ಆರ್ ಗ್ರೂಪ್ ಸಂಸ್ಥೆಯು ಈ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಆಟಗಾರರು ತೆಗೆಯುವ ಪ್ರತೀ ವಿಕೆಟ್‌ಗೆ 2,000 ರೂ., ಹೊಡೆಯುವ ಪ್ರತೀ ಸಿಕ್ಸರ್‌ಗೆ 1,000 ರೂ. ಮತ್ತು ಪ್ರತಿ ಫೋರ್‌ಗೆ 500 ರೂ. ದೇಣಿಗೆ ನೀಡಲಿದೆ. ವಿಕಲಚೇತನ ಕ್ರೀಡಾಪಟುಗಳ ಸಬಲೀಕರಣಕ್ಕೆ ಈ ದೇಣಿಗೆ ಬಳಕೆಯಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ಮೈಸೂರು ವಾರಿಯರ್ಸ್ ತಂಡದ ಮಾಲೀಕರು ಮತ್ತು ಸೈಕಲ್ ಪ್ಯೂರ್ ಅರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರ್ಜುನ್ ರಂಗಾ ಅವರು, “ಕರುಣ್ ನಾಯರ್‌ ಅವರನ್ನು ನಮ್ಮ ತಂಡದ ನಾಯಕರನ್ನಾಗಿ ಘೋಷಿಸಲು ಸಂತೋಷ ಪಡುತ್ತೇವೆ. ಅವರ ಅನುಭವ ನಮ್ಮ ತಂಡಕ್ಕೆ ಆನೆಬಲ ನೀಡಲಿದೆ. ಅಲ್ಲದೇ ಈ ಸಲದ ಮಹಾರಾಜ ಟ್ರೋಫಿಯನ್ನು ಮೈಸೂರಿನಲ್ಲಿ ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ. ಮೈಸೂರಿನಲ್ಲಿ ಪಂದ್ಯಾವಳಿ ನಡೆಯುತ್ತಿರುವುದು ನಮ್ಮ ಫ್ರಾಂಚೈಸ್ ಗೆ ಮಹತ್ವದ ಕ್ಷಣವಾಗಿದ್ದು, ಈ ಸಲವೂ ಟ್ರೋಫಿಯನ್ನು ನಾವೇ ಗೆಲ್ಲುವ ನಂಬಿಕೆ ಇದೆ” ಎಂದರು.

ಮೈಸೂರು ವಾರಿಯರ್ಸ್ ತಂಡದ ಮುಖ್ಯ ಕೋಚ್ ಆಗಿರುವ ಶ್ರೀ ಆರ್‌ಎಕ್ಸ್ ಮುರಳಿ ಅವರು, “ನಮ್ಮ ತಂಡದ ಪ್ರತೀ ಆಟಗಾರರೂ ಹುಮ್ಮಸ್ಸಿನಿಂದ ಪ್ರದರ್ಶನ ನೀಡಲು ಕಾತರರಾಗಿದ್ದಾರೆ. ನಮ್ಮ ತಂಡದ ಅಭಿಮಾನಿಗಳಿಗಾಗಿ ನಾವು ಈ ಸಲವೂ ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದೇವೆ” ಎಂದರು.

ಮೈಸೂರು ವಾರಿಯರ್ಸ್ ತಂಡದ ನಾಯಕರಾದ ಶ್ರೀ ಕರುಣ್ ನಾಯರ್ ಅವರು, “ಮೈಸೂರು ವಾರಿಯರ್ಸ್‌ ತಂಡವನ್ನು ಮುನ್ನಡೆಸುವ ಅವಕಾಶ ಮತ್ತೊಮ್ಮೆ ಸಿಕ್ಕಿರುವುದಕ್ಕೆ ಆಭಾರಿಯಾಗಿದ್ದೇನೆ. ನಮ್ಮ ತಂಡವು ಹೊಸ ಪ್ರತಿಭೆಗಳು ಮತ್ತು ಅನುಭವಿ ಆಟಗಾರರ ಮಿಶ್ರಣವನ್ನು ಹೊಂದಿದೆ. ನಮ್ಮ ತಂಡವು ಅಭಿಮಾನಿಗಳಿಗಾಗಿ ಅತ್ಯುತ್ತಮ ಪ್ರದರ್ಶನವನ್ನು ನೀಡುವ ವಿಶ್ವಾಸ ನನಗಿದೆ” ಎಂದರು.

ಈ ಆವೃತ್ತಿಯ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್‌ ತಂಡಕ್ಕೆ ಬ್ಯಾಟ್ ಬ್ರಿಕ್ಸ್7, ಕ್ಯಾಂಪಾ, ಸಂಕಲ್ಪ, 360 ಒನ್, ಸಿಂಪೋಲೊ, ಕೊನೆ ಮತ್ತು ಭಾರತ್ ಇಂಟರ್‌ನ್ಯಾಷನಲ್ ಟ್ರಾವೆಲ್ಸ್ (ಬಿಐಟಿ) ಪ್ರಾಯೋಜಕತ್ವ ಒದಗಿಸಿವೆ.

Continue Reading

Trending

error: Content is protected !!