Connect with us

Hassan

ಎಟಿಎಂ ಮಿಷಿನ್ ಕದ್ದೊಯ್ದ ಕಳ್ಳರು: ಹಾಸನದಲ್ಲಿ ಎರಡನೇ ಪ್ರಕರಣ ದಾಖಲು

Published

on

ಹಾಸನ : ಎಟಿಎಂ ಮಿಷನ್‌ನನ್ನೇ ಕದ್ದೊಯ್ದ ಕಳ್ಳರು

ಹಣದ ಸಮೇತ ಎಟಿಎಂ ಮಿಷನ್ ಕಳ್ಳತನ

ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಉದಯಪುರ ಗ್ರಾಮದಲ್ಲಿ ತಡರಾತ್ರಿ ಘಟನೆ

ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ರಸ್ತೆಯ ಪಕ್ಕದಲ್ಲೇ ಇರುವ ಎಟಿಎಂ ಕೇಂದ್ರ

ಎಟಿಎಂನಲ್ಲಿದ್ದ ಲಕ್ಷಾಂತರ ರೂ ಹಣ

ಹಣದ ಸಮೇತ ಇಂಡಿಯನ್ ಬ್ಯಾಂಕ್‌ನ ಎಟಿಎಂ ಮಿಷನ್ ಕದ್ದೊಯ್ದ ಚೋರರು

ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ, ಪರಿಶೀಲನೆ

ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಜ.29 ರಂದು ಹಾಸನದ ಹನುಮಂತಪುರದಲ್ಲಿ ಕಳುವಾಗಿದ್ದ ಎಟಿಎಂ ಮಿಷನ್

ಇದುವರೆಗೂ ಪೊಲೀಸರ ಕೈಗೆ ಸಿಗದ ಚೋರರು

ಇದೀಗ ಹದಿನೈದು ದಿನಗಳ ಅಂತರದಲ್ಲಿ ಮತ್ತೊಂದು ಎಟಿಎಂ ಮಿಷನ್ ಕಳ್ಳತನ

Continue Reading

Hassan

ಮದುವೆಗೆ ಬಂದಿದ್ದ ಮಹಿಳೆ ನಾಪತ್ತೆ ಕೇಸ್‌ಗೆ ಬಿಗ್‌ ಟ್ವಿಸ್ಟ್‌: ನಾಪತ್ತೆಯಾಗಿದ್ದ ಮಹಿಳೆ ಕುಣಿಗಲ್‌ನಲ್ಲಿ ಪತ್ತೆ

Published

on

ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಸಮೀಪ ವ್ಯಾನಿಟಿ ಬ್ಯಾಗ್, ಚಪ್ಪಲಿ ಹಾಗೂ ಬಟ್ಟೆಗಳನ್ನು ಎಸೆದು ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆಯ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದ್ದು, ಸಾವಿನ ನಾಟಕವಾಡಿ ಪ್ರಿಯಕರನೊಂದಿಗೆ ಜೀವನ ನಡೆಸಲು ಯತ್ನಿಸಿದ್ದ ಪ್ರಕರಣ ಬಯಲಾಗಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಯಲಿಯೂರು ಗ್ರಾಮದ ಪ್ರಿಯಾಂಕ (29) ಫೆಬ್ರವರಿ 12ರಂದು ಚಿಕ್ಕಮಗಳೂರಿನ ಸಂಬಂಧಿಕರ ಮದುವೆಗೆ ಬಂದಿದ್ದಳು. ಬಳಿಕ ಆಕೆ ನಾಪತ್ತೆಯಾಗಿದ್ದರಿಂದ ಕುಟುಂಬಸ್ಥರು ಆತಂಕಗೊಂಡಿದ್ದರು. ಕಲ್ಕೆರೆ ಕೆರೆ ಸಮೀಪ ಆಕೆಯ ಒಳಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದರಿಂದ ದುಷ್ಕರ್ಮಿಗಳು ಕೊಲೆ ಮಾಡಿ ಚಿನ್ನಾಭರಣ ದೋಚಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಪ್ರಕರಣ ಜಿಲ್ಲೆಯಾದ್ಯಂತ ಸಂಚಲನ ಸೃಷ್ಟಿಸಿತ್ತು.


ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಹಾಸನ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಳಗ್ಗಿನಿಂದಲೇ ಕೆರೆಯಲ್ಲಿ ಶವ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಸ್ಥಳೀಯರು ಹಾಗೂ ಕುಟುಂಬಸ್ಥರಲ್ಲೂ ತೀವ್ರ ಆತಂಕ ಮನೆ ಮಾಡಿತ್ತು.
ಆದರೆ ತನಿಖೆಯಲ್ಲಿ ಚಕಿತಗೊಳಿಸುವ ಸಂಗತಿ ಬೆಳಕಿಗೆ ಬಂದಿದೆ. ಪ್ರಿಯಾಂಕ ಜೀವಂತವಾಗಿದ್ದು, ತಾನು ಕೊಲೆಯಾಗಿರುವಂತೆ ಬಿಂಬಿಸಲು ಪೂರ್ವಯೋಜಿತವಾಗಿ ಈ ನಾಟಕ ರೂಪಿಸಿದ್ದಳು ಎಂಬುದು ತಿಳಿದುಬಂದಿದೆ.

ಬಿಹಾರ ಮೂಲದ ವ್ಯಕ್ತಿಯೊಬ್ಬನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಆಕೆ, ಆತನೊಂದಿಗೆ ಸಂಸಾರ ನಡೆಸುವ ಉದ್ದೇಶದಿಂದಲೇ ಕುಟುಂಬದಿಂದ ದೂರವಾಗಲು ಈ ಷಡ್ಯಂತ್ರ ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.


ಸದ್ಯ ಪ್ರಿಯಾಂಕ ತನ್ನ ಪ್ರಿಯಕರನೊಂದಿಗೆ ಕುಣಿಗಲ್‌ನಲ್ಲಿ ಪತ್ತೆಯಾಗಿದ್ದು, ಪೊಲೀಸರ ವಶದಲ್ಲಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಮುಂದಿನ ಕಾನೂನು ಕ್ರಮಗಳ ಬಗ್ಗೆ ತನಿಖೆ ಮುಂದುವರಿದಿದೆ.

ಈ ಘಟನೆ ಜಿಲ್ಲೆಯಲ್ಲೇ ಚರ್ಚೆಗೆ ಗ್ರಾಸವಾಗಿದ್ದು, ನಾಪತ್ತೆ ಪ್ರಕರಣಗಳ ತನಿಖೆಯಲ್ಲಿ ಪೊಲೀಸರ ಎಚ್ಚರಿಕೆಗೆ ಮತ್ತೊಂದು ಉದಾಹರಣೆಯಾಗಿ ಪರಿಣಮಿಸಿದೆ.

Continue Reading

Hassan

ಪ್ಲಾಸ್ಟಿಕ್ ಗೋಡೌನ್ ಗೆ ಬೆಂಕಿ: ಅಕ್ಕ ಪಕ್ಕದಲ್ಲಿದ್ದ ಐದು ಬೈಕ್ ಸಹಿತ ಅನೇಕ ವಸ್ತುಗಳು ಬೆಂಕಿಗೆ ಆಹುತಿ

Published

on

ಅರಸೀಕೆರೆ: ನಗರದ ಚೌಡೇಶ್ವರಿ ನಗರದ ಪ್ಲಾಸ್ಟಿಕ್ ಚೀಲದ ಗೋಡೌನ್ ಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಸಂಪೂರ್ಣವಾಗಿ ಬಸ್ಮವಾಗಿ ಲಕ್ಷಾಂತರ ರೂಪಾಯಿ ರೂಪಾಯಿ ನಷ್ಟವಾಗಿದೆ.

ಚೌಡೇಶ್ವರಿ ನಗರದಲ್ಲಿಆಸಿಫ್ ಎಂಬುವರಿಗೆ ಸೇರಿದ್ದ ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹ ಮಾಡಿದ್ದ ಎರಡು ಗೋಡೌನ್ ಗಳಲ್ಲಿ ಒಂದು ಗೋಡೌನ್ ಗೆ ರಾತ್ರಿ 10.45 ರಲ್ಲಿ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ ಬೆಂಕಿ ಹತ್ತಿಕೊಂಡು ಹೊಗೆ ಕಾಣಿಸಿಕೊಂಡಿತು. ಅಕ್ಕ ಪಕ್ಕದವರು ನೀರು ತಂದು ಆರಿಸುವಷ್ಟರಲ್ಲಿ ಬೆಂಕಿ ಜೋರಾಗಿ ಉರಿಯಲಾರಂಭಿಸಿದ್ದು, ದಟ್ಟವಾದ ಹೊಗೆ ತುಂಬಿಕೊಂಡು ಅಕ್ಕ ಪಕ್ಕದ ಮನೆಗೆಲ್ಲಾ ಬೆಂಕಿ ವ್ಯಾಪಿಸುವ ಲಕ್ಷಣ ಕಂಡು ಬಂದಿತು. ಅಷ್ಟರಲ್ಲಿ ಅಗ್ನಿಶಾಮಕ ದಳದ ವಾಹನ ಬಂದು ಸುಮಾರು ಒಂದು ಗಂಟೆಗೂ ಹೆಚ್ಚು ಶ್ರಮವಹಿಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೊಂದು ಗೋಡೌನ್ ನಿಗೆ ಬೆಂಕಿ ತಗಲದೇ ಹೆಚ್ಚಿನ ಪ್ಲಾಸ್ಟಿಕ್ ಚೀಲಗಳು ಉಳಿದವು. ಬೆಂಕಿಯು ಹೆಚ್ಚು ವೇಗದಲ್ಲಿ ವ್ಯಾಪಿಸಿದರಿಂದ ಪಕ್ಕದ ಮನೆಯ ಕುಮಾರ್ ಹೀರೋ ಸ್ಪ್ಲೆಂಡರ್ ಬೈಕ್ ಹಾಗೂ ಸ್ಕೂಟಿ ಜಯರಾಮ್ , ಕಿರಣ್ ರವರಿಗೆ ಸೇರಿದ ಬೈಕ್ ಗಳು ಮೂರ್ತಿ, ಚೌಡಪ್ಪ ನವರ ಮನೆಯ ಮುಂದೆ ಇಟ್ಟಿದ್ದ ದಿನ ನಿತ್ಯ ಬಳಸುವ ವಸ್ತುಗಳು ಹಾಗೂ ನೀರಿನ ದೊಡ್ಡ ಡ್ರಮ್ ಗಳು ಸುಟ್ಟು ಕರಕಲಾಗಿದ್ದವು. ಮಾಜಿ ನಗರಸಭಾ ಸದಸ್ಯ ದರ್ಶನ್ ( ದಾಸ) ಮಾರುತಿ ಮೂರ್ತಿ ಚೌಡಪ್ಪ ಹಾಗೂ ಸ್ಥಳಿಕರು ಸ್ಥಳದಲ್ಲೇ ಇದ್ದು ಬೆಂಕಿ ಹಾರಿಸುವಲ್ಲಿ ಶ್ರಮಿಸಿದರು.

Continue Reading

Hassan

ರೈತರು ನೇರವಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ: ಸಿ.ಎನ್.ಬಾಲಕೃಷ್ಣ

Published

on

ವರದಿ:  ದಯಾನಂದ ಶೆಟ್ಟಿಹಳ್ಳಿ

ಚನ್ನರಾಯಪಟ್ಟಣ: ರೈತರು ಮಧ್ಯವರ್ತಿಗಳಿಗೆ ರಾಗಿ ಮಾರಾಟ ಮಾಡದೆ ನೇರವಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಶನಿವಾರ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ವತಿಯಿಂದ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿ ಖರೀದಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೆಲವು ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿರುವುದು ಕಂಡುಬಂದಿದ್ದು ನೇರವಾಗಿ ರೈತರು ಸರ್ಕಾರದಿಂದ ನೀಡುತ್ತಿರುವ ಲಾಭ ಪಡೆದುಕೊಳ್ಳಿ ಎಂದರು.

ತಾಲ್ಲೂಕಿನಲ್ಲಿ ತೆರೆಯಲಾಗಿರುವ 6 ಖರೀದಿ ಕೇಂದ್ರಗಳೊಂದಿಗೆ ಹೆಚ್ಚವರಿಯಾಗಿ ದಿಡಿಗದಲ್ಲಿ ಖರೀದಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ತಾಲೂಕಿನ ಗಡಿ ಭಾಗದ ರೈತರ ಅನುಕೂಲಕ್ಕಾಗಿ ದಿಡಗಾ ಗ್ರಾಮದಲ್ಲಿ ಖರೀದಿ ಕೇಂದ್ರ ತೆರೆಯಲು ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಯವರು ರೈತರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಖರೀದಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು, ಪ್ರಸಕ್ತ ವರ್ಷ ಒಳ್ಳೆಯ ಬೆಲೆಯನ್ನು ಸರ್ಕಾರ ನಿಗದಿಪಡಿಸಿ ರಾಗಿ ಖರೀದಿಸುತ್ತಿದೆ ಎಂದು ಹೇಳಿದರು.

ರೈತರಿಂದ ನೇರವಾಗಿ ಖರೀದಿಸಿ ಅದರ ಹಣವನ್ನು ಯಾವುದೇ ಮಧ್ಯವರ್ತಿಗೆ ಆಸ್ಪದ ನೀಡದೇ ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಸಂದಾಯ ಮಾಡಲಾಗುತ್ತದೆ. ರೈತರು ರಾಗಿ ಖರೀದಿ ಕೇಂದ್ರಕ್ಕೆ ಗುಣಮಟ್ಟದ ರಾಗಿಯನ್ನು ಸರಬರಾಜು ಮಾಡಲು ಆದ್ಯತೆ ನೀಡಬೇಕು. ತಾಲೂಕಿನಲ್ಲಿ ಖರೀದಿಯಾದ ರಾಗಿಯನ್ನು ಸ್ಥಳೀಯ ಪಡಿತರ ವಿತರಣಾ ವ್ಯವಸ್ಥೆ ಮೂಲಕವೇ ವಿತರಿಸಲಾಗುತ್ತದೆ. ಸಾರ್ವಜನಿಕ ಉಪಯೋಗಕ್ಕೆ ಬರುವ ರಾಗಿ ಶುದ್ಧವಾಗಿರುವಂತೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ತಿಳಿಸಿದರು.

ಪ್ರತಿ ಕ್ವಿಂಟಾಲ್ ರಾಗಿಗೆ ರೂ. 4886 ರೂ.ನಿಗದಿ

2025-26 ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಪ್ರತಿ ಕ್ವಿಂಟಾಲ್ ರಾಗಿಗೆ 4886 ರೂಪಾಯಿ ನಿಗದಿ ಪಡಿಸಲಾಗಿದೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್ನಂತೆ ಗರಿಷ್ಟ 50 ಕ್ವಿಂಟಾಲ್ ಗಳನ್ನು ಮೀರದಂತೆ ನೊಂದಣಿ ಮಾಡಿಕೊಂಡಿರುವ 14435 ರೈತರಿಂದ 3,39,388 ಕ್ವಿಂಟಾಲ್ ಉತ್ತಮ ಗುಣಮಟ್ಟದ ರಾಗಿ ಖರೀದಿಸಲಾಗುವುದು. ಪ್ರಸಕ್ತ ಸಾಲಿನ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಎರಡು ಬಾರಿ ಬಯೋಮೆಟ್ರಿಕ್ ಬಳಕೆಯಾಗುತ್ತದೆ. ಒಂದು ಬಾರಿ ನೊಂದಣಿ ಸಂದರ್ಭದಲ್ಲಿ ಇನ್ನೊಂದು ರಾಗಿ ಖರೀದಿ ವೇಳೆಯಲ್ಲಿ ಹಾಗಾಗಿ ನೋಂದಾಯಿತ ರೈತರೇ ರಾಗಿ ಖರೀದಿ ಕೇಂದ್ರಗಳಿಗೆ ರಾಗಿ ತರುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.


ಹೋಬಳಿವಾರು ರೈತರ ನೋಂದಣಿ ವಿವರ:

ಚನ್ನರಾಯಪಟ್ಟಣ-2627, ಹಿರೀಸಾವೆ-2854,
ನುಗ್ಗೆಹಳ್ಳಿ-3996, ಶ್ರವಣಬೆಳಗೊಳ-1845,
ಉದಯಪುರ- 1287, ಬಾಗೂರು-1826 ಸೇರಿ 14435 ರೈತರು ರಾಗಿ ಪೂರೈಕೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಖರೀದಿ ಕೇಂದ್ರದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ನೋಂದಣಿ ಮಾಡಿಕೊಂಡಿರುವ ಎಲ್ಲಾ ರೈತರ ರಾಗಿ ಖರೀದಿ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ , ಟಿಎಪಿಸಿಎಂಎಸ್‌ನ ಎಪಿಎಂಸಿ ಮಾಜಿ ಅಧ್ಯಕ್ಷ ಶಿವಣ್ಣ ಕಾರ್ಯದರ್ಶಿ ಸೋಮಶೇಖರ್, ಅಧ್ಯಕ್ಷ ವೆಂಕಟೇಶ್ ಮೂರ್ತಿ ನಿರ್ದೇಶಕ ರಮೇಶ್ ಕುಂಬಾರಹಳ್ಳಿ, ಎಂ.ಆರ್. ಅನಿಲ್ ಕುಮಾರ್, ಮುಖಂಡರಾದ ಬೋರೇಗೌಡ, ಮೂಡನಳ್ಳಿ, ಚಂದ್ರಣ್ಣ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕಿ ಅನುರಾಧ ತಾಲೂಕು ಆಹಾರ ಶಿರಸ್ತೆದಾರ್ ಹೇಮಂತ್ ಕುಮಾರ್ ಸೇರಿದಂತೆ ಖರೀದಿ ಕೇಂದ್ರ ಹಾಗೂ ನಿಗಮದ ಸಿಬ್ಬಂದಿಗಳು, ಹಾಗೂ ರೈತರು ಭಾಗವಹಿಸಿದ್ದರು.
.

Continue Reading

Trending

error: Content is protected !!