Connect with us

State

ರಾಜ್ಯದಲ್ಲಿ ಕೆಟ್ಟ ಸರ್ಕಾರ ಇದೆ, ಇದನ್ನು ತೆಗೆಯಲು ಮೈತ್ರಿ ಅವಶ್ಯಕ: ಹೆಚ್‌ಡಿಕೆ

Published

on

ರಾಮನಗರ: ರಾಜ್ಯದಲ್ಲಿ ಕೆಟ್ಟ ಸರ್ಕಾರ ಇದೆ, ಇದನ್ನು ತೆಗೆಯಬೇಕು. ಅದಕ್ಕೆ ಮೈತ್ರಿ (Alliance) ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (H.D.Kumaraswamy) ಹೇಳಿಕೆ ನೀಡಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಮೈತ್ರಿ ಬಗ್ಗೆ ಈಗಲೇ ಯಾವುದೇ ಚರ್ಚೆ ಮಾಡಿಲ್ಲ. ಮುಂದಿನ ಸೆ.21ರ ಬೆಳಗ್ಗೆ ದೆಹಲಿಗೆ (Delhi) ಹೋಗುತ್ತಿದ್ದೇನೆ. ಏನು ಚರ್ಚೆ ಆಗುತ್ತೆ ಎಂದು ನೋಡೋಣ. ಸರ್ಕಾರ ತೆಗೆಯಬೇಕು ಅಂದರೆ ನಾಳೆನೇ ಆಪರೇಷನ್ ಮಾಡುತ್ತೇವೆ ಅಂತಲ್ಲ. ಕೆಟ್ಟ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಅರ್ಥ. ಅದೇನೋ ಕಾಂಗ್ರೆಸ್‌ನವರೂ (Congress) ಆಪರೇಷನ್ ಮಾಡುತ್ತಿದ್ದಾರಂತೆ. ಬಿಜೆಪಿ, ಜೆಡಿಎಸ್ ಅವರನ್ನು ಕರೆದುಕೊಳ್ಳುತ್ತಿದ್ದಾರಂತೆ, ಹೋಗುವವರು ಹೋಗಲಿ ಸಂತೋಷ ಎಂದು ತಿಳಿಸಿದರು.

ಚನ್ನಪಟ್ಟಣದಲ್ಲಿ ಸಂಸದ ಡಿ.ಕೆ.ಸುರೇಶ್ (DK Suresh) ಜನಸಂಪರ್ಕ ಸಭೆ ನಡೆಸುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ವ್ಯಕ್ತಿಗೆ ಆ ಪವರ್ ಇದೆಯಾ ಎಂದು ಪ್ರಶ್ನಿಸಿದರು. ಸಂಸದರು ಡಿಸಿ ಕಚೇರಿಯಲ್ಲಿ ಕೂತು ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆಯಬೇಕು. ಆದರೆ ಅಧಿಕಾರಿಗಳನ್ನು ಕರೆದುಕೊಂಡು ಗ್ರಾಮ ಪಂಚಾಯ್ತಿಗೆ ಹೋಗುವ ಪವರ್ ಇಲ್ಲ. ಈ ಬಗ್ಗೆ ಹಕ್ಕುಚ್ಯುತಿ ಮಂಡಿಸುತ್ತೇನೆ. ನಾನು ಎಂಪಿ ಆಗಿದ್ದಾಗ ಅವರ ಅಣ್ಣ ಸಾತನೂರಿಗೆ ಹೋಗಲು ಬಿಡಲಿಲ್ಲ. ಈಗ ಇವರು ಹೇಗೆ ಹೋಗಿ ಸಭೆ ಮಾಡ್ತಿದ್ದಾರೆ ಎಂದು ಡಿ.ಕೆ.ಬ್ರದರ್ಸ್‌ಗೆ ಟಾಂಗ್ ನೀಡಿದರು.

Continue Reading
Click to comment

Leave a Reply

Your email address will not be published. Required fields are marked *

Special

ಮಹಿಳೆಯರಿಗೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ: ಇಲ್ಲಿದೆ ಸಂಪೂರ್ಣ ಮಾಹಿತಿ!

Published

on

ಕರ್ನಾಟಕ ಸರ್ಕಾರ ಮಹಿಳೆಯರ ಸ್ವಾವಲಂಬನೆಯನ್ನು ಹೆಚ್ಚಿಸಲು ಮತ್ತು ಮನೆಯಲ್ಲೇ ಆದಾಯ ಸಂಪಾದಿಸಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಉಚಿತ ಹೊಲಿಗೆ ಯಂತ್ರ ಯೋಜನೆ ಅನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಬಡ ಮತ್ತು ಅಶಕ್ತ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಲಾಗುತ್ತದೆ, ಇದರಿಂದ ಅವರು ಕೆಲಸ ಮಾಡಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು.

ಅರ್ಹತೆ:
•ಕರ್ನಾಟಕ ರಾಜ್ಯದ ನಿವಾಸಿ ಮಹಿಳೆ ಆಗಿರಬೇಕು
•BPL / APL ಬಡಕುಟುಂಬದ ಸದಸ್ಯರಾಗಿರಬೇಕು
•ವಯಸ್ಸು ಸಾಮಾನ್ಯವಾಗಿ 20 ರಿಂದ 45 ವರ್ಷಗಳ ನಡುವೆ
•ಹೊಲಿಗೆ ಕೆಲಸ ಕಲಿಯುವ ಇಚ್ಛೆ ಅಥವಾ ಈಗಾಗಲೇ ಮೂಲಭೂತ ಹೊಲಿಗೆ ಕೌಶಲ್ಯ ಇರಬೇಕು
•ವಿಧವೆ, ವಿಚ್ಛೇದಿತ ಅಥವಾ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಆದ್ಯತೆ

ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
•ಹತ್ತಿರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಕಚೇರಿಗೆ ಭೇಟಿ.
•ಅಲ್ಲಿ ಲಭ್ಯವಿರುವ ಉಚಿತ ಹೊಲಿಗೆ ಯಂತ್ರ ಅರ್ಜಿ ಫಾರ್ಮ್ ಪಡೆಯಿರಿ
•ನಂತರ ಅಗತ್ಯ ದಾಖಲೆಗಳನ್ನು ಸೇರಿಸಿ ಅರ್ಜಿ ಪೂರ್ಣಗೊಳಿಸಬೇಕು.

ಪ್ರಮುಖ ದಾಖಲೆಗಳು:
•ಆಧಾರ್ ಕಾರ್ಡ್
•ರೇಷನ್ ಕಾರ್ಡ್ (BPL / APL)
•ವಾಸಸ್ಥಳ ಪ್ರಮಾಣ ಪತ್ರ
•ಆದಾಯ ಪ್ರಮಾಣ ಪತ್ರ
•ಪಾಸ್‌ಪೋರ್ಟ್ ಗಾತ್ರದ ಫೋಟೋ
•ಬ್ಯಾಂಕ್ ಖಾತೆ ಪಾಸ್‌ಬುಕ್ ಪ್ರತಿಗೆ
•ಹೊಲಿಗೆ ತರಬೇತಿ ಪಡೆದಿದ್ದರೆ ಅದರ ಪ್ರಮಾಣ ಪತ್ರ (ಐಚ್ಛಿಕ)

ಉಚಿತ ಹೊಲಿಗೆ ಯಂತ್ರ ಯೋಜನೆ ಮಹಿಳೆಯರು ತಮ್ಮ ಕಾಲ ಮೇಲೆ ನಿಲ್ಲಲು, ಸ್ವಂತ ಆದಾಯ ಸಂಪಾದಿಸಲು, ಮತ್ತು ಮನೆದಲ್ಲಿ ಕುಳಿತು ಕೆಲಸ ಮಾಡಲು ಅತ್ಯುತ್ತಮ ಅವಕಾಶ.ಅಗತ್ಯವಿರುವವರು ಇದನ್ನು ಸದುಪಯೋಗಪಡಿಸಿಕೊಳ್ಳಿರಿ.

Continue Reading

National

2023ರ ಚುನಾವಣೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ನೋಟಿಸ್‌ ನೀಡಿದ ಸುಪ್ರೀಂ

Published

on

ನವದೆಹಲಿ: ಸಿಎಂ ಸಿದ್ದರಾಮಯ್ಯ 2023ರ ಚುನಾವಣೆಯಲ್ಲಿ ವರುಣಾ (a) ಕ್ಷೇತ್ರದಿಂದ ಆಯ್ಕೆಗೆ ಸಂಬಂಧಿಸಿದಂತೆ  ಅವರಿಗೆ ಸುಪ್ರೀಂ ಕೋರ್ಟ್‌  ನೋಟಿಸ್‌ ನೀಡಿದೆ.

ವರುಣಾ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿತ್ತು. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ನ್ಯಾ. ವಿಕ್ರಮನಾಥ್ ನೇತೃತ್ವದ ದ್ವಿಸದಸ್ಯ ಪೀಠವು, ಸಿಎಂ ಸಿದ್ದರಾಮಯ್ಯ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್‌ ನೀಡಿದೆ. ಕೆ. ಶಂಕರ್ ಎಂಬವರು ಮೇಲ್ಮನವಿ ಸಲ್ಲಿಸಿದ್ದರು. ಚುನಾವಣಾ ಅಕ್ರಮ ನಡೆಸಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಆರೋಪಿಸಲಾಗಿತ್ತು.

1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಯ ಅಡಿಯಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು. ಶಂಕರ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

Continue Reading

Special

ಮಹಿಳೆಯರಿಗೆ ದೊಡ್ಡ ಅವಕಾಶ! ಅಂಗನವಾಡಿಯ 571 ಹುದ್ದೆಗಳಿಗೆ ಅರ್ಜಿ ಅಹ್ವಾನ.

Published

on

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD Karnataka) ರಾಜ್ಯದ ವಿವಿಧ ಜಿಲ್ಲೆಗಳ ಅಂಗನವಾಡಿ ಕೇಂದ್ರಗಳಿಗೆ ಒಟ್ಟು 571 ಹುದ್ದೆಗಳ ನೇಮಕಾತಿ ಪ್ರಕಟಿಸಿದೆ. ಮಹಿಳೆಯರಿಗೆ ಸರ್ಕಾರದಡಿ ದೊರೆಯುವ ಸುರಕ್ಷಿತ ಮತ್ತು ಮಾನ್ಯ ಉದ್ಯೋಗಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳು ಪ್ರಮುಖವಾಗಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಲಭ್ಯವಾಗಿದೆ.

ಲಭ್ಯವಿರುವ ಹುದ್ದೆಗಳು:
•ಅಂಗನವಾಡಿ ಕಾರ್ಯಕರ್ತೆ
•ಅಂಗನವಾಡಿ ಸಹಾಯಕಿ

ಅರ್ಹತೆ :
1. ಅಂಗನವಾಡಿ ಕಾರ್ಯಕರ್ತೆ
•SSLC ಪಾಸಾಗಿರಬೇಕು
•ಸ್ಥಳೀಯ ಗ್ರಾಮ/ವಾರ್ಡ್ ನಿವಾಸಿಯಾಗಿರಬೇಕು
2. ಅಂಗನವಾಡಿ ಸಹಾಯಕಿ
•4ನೇ ತರಗತಿಯಿಂದ 9ನೇ ತರಗತಿ ವರೆಗೆ ವಿದ್ಯಾರ್ಹತೆ ಹೊಂದಿರಬಹುದು
•ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ

ವಯೋಮಿತಿ: 19-35 ವರ್ಷ

ಅರ್ಜಿ ಸಲ್ಲಿಸುವ ವಿಧಾನ :
•ನಿಮ್ಮ ತಾಲೂಕು/ಜಿಲ್ಲೆಯ ಅಧಿಕೃತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ.
•ಆನ್‌ಲೈನ್ ಅರ್ಜಿಯನ್ನು ಸರಿಯಾದ ಮಾಹಿತಿ ಹಾಗೂ ಅಗತ್ಯ ದಾಖಲೆಗಳಿಂದ ಭರ್ತಿ ಮಾಡಿ.
•ಅರ್ಜಿ ಸಲ್ಲಿಸಿದ ನಂತರ ದೃಢೀಕರಣ ಪ್ರತಿಯನ್ನು ಸೇವ್ ಮಾಡಿ.

ಆಯ್ಕೆ ಪ್ರಕ್ರಿಯೆ ಹೇಗೆ?:
ಅಂಗನವಾಡಿ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲ.ಆಯ್ಕೆ ಸಂಪೂರ್ಣವಾಗಿ ವಿದ್ಯಾರ್ಹತೆ, ದಾಖಲೆಗಳ ಪರಿಶೀಲನೆ, ಸ್ಥಳೀಯತೆ, ಮೀಸಲಾತಿ ನಿಯಮಗಳು ಇವುಗಳನ್ನು ಆಧರಿಸಿ ಮಾಡಲಾಗುತ್ತದೆ.

ಉದ್ದೇಶ:
•ಸ್ಥಳೀಯ ಮಹಿಳೆಯರಿಗೆ ಸುರಕ್ಷಿತ ಸರ್ಕಾರಿ ಉದ್ಯೋಗ
•ತಿಂಗಳ ವೇತನ, ಮಾನ್ಯತೆ, ಮತ್ತು ಭದ್ರ ಉದ್ಯೋಗ
•ಸಮಾಜ ಸೇವೆ ಜೊತೆಗೆ ಕುಟುಂಬಕ್ಕೆ ಆರ್ಥಿಕ ಸಹಾಯ

ಕರ್ನಾಟಕದಲ್ಲಿ ಪ್ರಕಟವಾದ 571 ಅಂಗನವಾಡಿ ಕಾರ್ಯಕರ್ತೆ / ಸಹಾಯಕಿ ಹುದ್ದೆಗಳು, ಸರ್ಕಾರಿ ಸೇವೆಗೆ ಬಯಸುವ ಮಹಿಳೆಯರಿಗೆ ದೊಡ್ಡ ಅವಕಾಶ. ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದೆ ಅರ್ಹರು ಈಗಲೇ ಅರ್ಜಿ ಹಾಕಿ ಸದುಪಯೋಗ ಪಡಿಸಿಕೊಳ್ಳಿರಿ

Continue Reading

Trending

error: Content is protected !!