Connect with us

Mysore

ಎಲ್ಲಾ ಪಕ್ಷದವರ ಮೇಲೂ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ: ಯತೀಂದ್ರ ಸಿದ್ದರಾಮಯ್ಯ

Published

on

ಹನಿ ಟ್ರ್ಯಾಪ್ ವಿಚಾರ.
ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ.
ಸದನದಲ್ಲಿ ನಮ್ಮ ಪಕ್ಷದ ಸಚಿವ ರಾಜಣ್ಣ ಪ್ರಸ್ತಾಪ ಮಾಡಿದ್ದಾರೆ.
ಎಲ್ಲಾ ಪಕ್ಷದ ಶಾಸಕರು ಹಾಗೂ ಸಚಿವರ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ 17 ಜನ ಶಾಸಕರು ಹಾಗೂ ಸಚಿವರ ಹನಿಟ್ರ್ಯಾಪ್ ವಿಡಿಯೋ ಇದೆ.
ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರ ಆಗದಂತೆ ಕೋರ್ಟ್ ನಿಂದ ಇನ್ಜೆಕ್ಷನ್ ಆರ್ಡರ್ ತಂದಿದ್ದಾರೆ.
ಆಗ ಬಿಜೆಪಿ ಅವರೇ ಈ ರೀತಿ ಹನಿ ಟ್ರ್ಯಾಪ್ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು.
ರಾಜಣ್ಣ ಅವರು ಇಂತಹ ಪಕ್ಷದವರೇ ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ.
ರಾಜಣ್ಣ ದೂರು ಕೊಟ್ಟರೇ ತನಿಖೆ ಮಾಡಿಸಿ ಶಿಕ್ಷೆ ಕೊಡಿಸುತ್ತೇವೆ.
ಸರ್ಕಾರ ಬೀಳಿಸಲು ಹನಿಟ್ರ್ಯಾಪ್ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ.
ಹಿಂದೆ ಬಿಜೆಪಿ ಸರ್ಕಾರದಲ್ಲೂ ಹನಿಟ್ರ್ಯಾಪ್ ನಡೆದಿದೆ.
ಈಗಲೂ ಇಂತಹ ಪ್ರಯತ್ನ ನಡೆದಿದೆ.
ಇದರ ಹಿಂದೆ ದೊಡ್ಡ ಜಾಲವೇ ಇದೆ.
ತನಿಖೆಯ ಮೂಲಕವೇ ಜಾಲವನ್ನ ಪುತ್ರ ಹಚ್ಚಬೇಕಿದೆ.
ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು.
ರಾಜಕಾರಣಿಗಳಿಗೆ ಎಷ್ಟೋ ಜನರು ಫೋನ್ ಮಾಡ್ತಾರೆ.
ನನಗೂ ಇಡೀ ರಾಜ್ಯದಿಂದ ಎಷ್ಟೋ ಜನರು ಫೋನ್ ಮಾಡ್ತಾರೆ.
ಕಲೆವೊಂದು ಭಾರಿ ಯಾರು ಅಂಥ ಗೊತ್ತಿಲ್ಲದಿದ್ದರೂ ಫೋನ್ ತೆಗೆಯುತ್ತೇನೆ.
ತಂತ್ರಜ್ಞಾನವನ್ನ ದುರುಪಯೋಗವಾಗುತ್ತಿದೆ.
ವಿಡಿಯೋ ಕಾಲ್ ಆನ್ ಮಾಡಿದ ತಕ್ಷಣ
ಎಐ ಮೂಲಕ ತಪ್ಪು ವಿಡಿಯೋ ಕಳುಹಿಸಲಾಗುತ್ತಿದೆ.
ಹನಿ ಟ್ರ್ಯಾಪ್ ಮೂಲಕ ಬ್ಲ್ಯಾಕ್ ಮೇಲೆ ಮಾಡುವವರಿಗೆ ತಕ್ಕ ಶಿಕ್ಷೆಯಾಗಬೇಕು.
ಹಣ ಹಾಗೂ ಕೆಲಸ ಮಾಡಿಸಿಕೊಳ್ಳುವ ಉದ್ದೇಶದಿಂದ ಹನಿ ಟ್ರ್ಯಾಪ್ ಮಾಡುತ್ತಿದ್ದಾರೆ.
ರಾಜಣ್ಣ ಯಾರ ಮೇಲೂ ಆರೋಪ ಮಾಡಿಲ್ಲ.
ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಬೇಕು.
ಇವರೇ ಮಾಡಿದ್ದಾರೆಂದು ಬಿಜೆಪಿ ಪಕ್ಷ ಯಾಕೆ ಊಹೇ ಮಾಡಬೇಕು.
ಬಿಜೆಪಿ ಪಕ್ಷದವರದ್ದೇ ಸಿಡಿ ಮಾಡಿ ಇಟ್ಟುಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ.

ಸಿದ್ದರಾಮಯ್ಯ ಪರವಾದ ಶಾಸಕರನ್ನ ಹನಿ ಟ್ರ್ಯಾಪ್ ಮಾಡುತ್ತಿರುವ ವಿಚಾರ.
ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ.
ಬಿಜೆಪಿ ಶಾಸಕರ ಮೇಲೂ ಹನಿ ಟ್ರ್ಯಾಪ್ ಪ್ರಯತ್ನ ನಡೆದಿದೆ.
ಹಿಂಗತ ಮಾತ್ರಕ್ಕೆ ಬಿಜೆಪಿ ಶಾಸಕರು ನಮ್ಮ ತಂದೆ ಪರವಾಗಿ ಇದ್ದಾರೆ ಅಂತಲ್ಲ.
ಈ ಜಾಲಾದ ಬಗ್ಗೆ ತನಿಖೆಯಾಗಲಿ ಎಂದಷ್ಟೇ ರಾಜಣ್ಣ ಹೇಳಿದ್ದಾರೆ.
ರಾಜಣ್ಣ ಮಾತ್ರ ಅಲ್ಲಾ ಬಿಜೆಪಿ ಶಾಸಕರು ಕೂಡ ಹನಿ ಟ್ರ್ಯಾಪ್ ಗೆ ಟಾರ್ಗೆಟ್ ಆಗುತ್ತಿದ್ದಾರೆ.
ರಾಜಣ್ಣ ಎಲ್ಲಿಯೂ ಹನಿ ಟ್ರ್ಯಾಪ್ ನಾನು ಬಲಿಯಾಗಿದ್ದೇನೆಂದು ಹೇಳಿಲ್ಲ.
ಹನಿ ಟ್ರ್ಯಾಪ್ ಪ್ರಯತ್ನ ನನ್ನ ಮೇಲೆ ನಡೆದಿದೆ ಎಂದಷ್ಟೇ ಹೇಳಿದ್ದಾರೆ.
ಅವರ ಮಗ ಕೂಡ ನನ್ನ ಮೇಲೆ ಹನಿ ಟ್ರ್ಯಾಪ್ ಪ್ರಯತ್ನ ನಡೆದಿದೆ ಅಂಥ.
ಸಾರ್ವಜನಿಕ ರೀತಿಯಲ್ಲಿ ಬಂದು ಹನಿ ಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ರಾಜಣ್ಣ ಹೇಳಿದ್ದಾರೆ.
ಮನೆಗೆ ಬಂದ ಸಾರ್ವಜನಿಕರನ್ನ ಮಾತನಾಡಿದಿರಲು ಆಗುತ್ತಾ.
ಆ ರೀತಿಯಾಗಿ ಹನಿ ಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ.

ಹೈ ಕಮಾಂಡ್ ಗೆ ಹನಿ ಟ್ರ್ಯಾಪ್ ವಿಚಾರ ಖಂಡಿತವಾಗಿ ತಿಳಿದಿದೆ.
ಮೈಸೂರಿನಲ್ಲಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ.
ಸಿಎಂ ಹಾಗೂ ನಮ್ಮ ಪಕ್ಷದ ಮುಖಂಡರು ಹೈ ಕಮಾಂಡ್ ಗೆ ಈ ವಿಚಾರವನ್ನ ತಿಳಿಸುತ್ತಾರೆ.
ಕೇಂದ್ರದ ನಾಯಕರಿಗೆ ನಮ್ಮ ನಾಯಕರು ದೂರು ಕೊಟ್ಟಿರುವ ಬಗ್ಗೆ ಗೊತ್ತಿಲ್ಲ.
ರಾಜಣ್ಣ ಸಹ ದೆಹಲಿಗೆ ಹೋಗಿ ದೂರು ಕೊಡಬಹುದು.
ಯಾರದರೂ ಅವರ ಮೇಲೆ ಟಾರ್ಗೆಟ್ ಮಾಡಿದ್ರೆ ಅವರ ಮೇಲೆ ದೂರು ಕೊಡಲಿ.

ಹನಿಟ್ರ್ಯಾಪ್ ಡಿ.ಕೆ ಶಿವಕುಮಾರ್ ಮಾಡಿಸಿದ್ದಾರೆ ಎಂಬ ಆರೋಪ ವಿಚಾರ.
ಡಿ.ಕೆ ಶಿವಕುಮಾರ್ ಪರವಾಗಿ ಬ್ಯಾಟ್ ಬೀಸಿದ ಯತೀಂದ್ರ ಸಿದ್ದರಾಮಯ್ಯ.
ಡಿ.ಕೆ ಶಿವಕುಮಾರ್ ಪಾತ್ರ ಇದರಲ್ಲಿ ಇಲ್ಲ.
ನಮ್ಮ ಪಕ್ಷದವರು ಇಂತಹವರೇ ಮಾಡಿಸಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ.
ಡಿ.ಕೆ ಶಿವಕುಮಾರ್ ಹೆಸರನ್ನ ಯಾರು ತೆಗೆದುಕೊಂಡಿಲ್ಲ.
ಬಿಜೆಪಿ ಪಕ್ಷದ 17 ಶಾಸಕರು ಇಂಜೆಕ್ಷನ್ ಆರ್ಡರ್ ತಂದಿದ್ದಾರೆ.
ಆಗ ಯಾರು ಹನಿ ಟ್ರ್ಯಾಪ್ ಮಾಡಿದ್ದು.
ಬಿಜೆಪಿಯವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ.

ಸಚಿವರ ಮನೆಗೆ ಸಿಸಿಟಿವಿ ಇಲ್ಲದ ವಿಚಾರ.
ಸಚಿವರ ಮನೆಗಳಿಗೆ ಸಿಸಿಟಿವಿ ಇಲ್ಲದ ವಿಚಾರ ನನಗೆ ಗೊತ್ತಿಲ್ಲ.
ಸಿಎಂ ಮನೆಗೆ ಸಿಸಿಟಿವಿ ಇದೆ.
ನಾನು ಅಲ್ಲೇ ಇರುವುದರಿಂದ ಸಿಸಿಟಿವಿ ಇರುವ ಬಗ್ಗೆ ನನಗೆ ಗೊತ್ತಿದೆ, ಬೇರೆಯ ಮನೆಯ ವಿಚಾರ ನನಗೆ ಗೊತ್ತಿಲ್ಲ.
ಸಿಎಂ ಮನೆಗೆ ಪೊಲೀಸ್ ಬಂದೂಬಸ್ತ್ ಕ
ಸಹ ಇದೆ, ಯಾರೇ ಬಂದರೂ ರೆಕಾರ್ಡ್ ಆಗುತ್ತೆ.
ಸಚಿವರ ಮನೆಗೆ ಖಂಡಿತವಾಗಿ ಸಿಸಿಟಿವಿ ಹಾಕಬೇಕು.
ಸಿಸಿಟಿವಿ ಇದ್ದರೇ ಹನಿ ಟ್ರ್ಯಾಪ್ ಮಾಡುವವರ ಮೇಲೆ ಕಣ್ಣಿಡಬಹುದು.

ಸದನದಲ್ಲಿ ಕಾಂಗ್ರೆಸ್ ನಾಯಕರು ಯತ್ನಾಳಗೆ ಚೀಟಿ ಕೊಟ್ಟ ವಿಚಾರ.
ಚೀಟಿ ಕೊಟ್ಟಿದ್ದು ಯಾರು ಎಂಬುದು ಗೊತ್ತಿಲ್ಲ.
ನಮ್ಮ ನಾಯಕರು ಸದನದಲ್ಲಿ ಮಾತನಾರಿವುದು ಮಾತ್ರ ಗೊತ್ತಿದೆ.
ಅದರ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ.

ಹನಿಟ್ರ್ಯಾಪ್ ಹಾಗೂ ಫೋನ್ ಟ್ಯಾಪ್ ವಿಚಾರ ಸರ್ಕಾರಕ್ಕೆ ಕಪ್ಪು ಚುಕ್ಕೆ ಎಂಬ ವಿಚಾರ.
ಬಿಜೆಪಿಯ ಸಂತ್ರಸ್ಥ ಶಾಸಕರು ಕೋರ್ಟ್ ಗೆ ಹೋಗಿ ಇಂಜೆಕ್ಷನ್ ತಂದಿದ್ದಾರೆ.
ಬಿಜೆಪಿ ಪಕ್ಷದ ಶಾಸಕರ ವಿಡಿಯೋ ಮಾಡಿರುವುದು ಅವರದ್ದೇ ಪಕ್ಷದವರು ಎಂಬುದು ಎಲ್ಲರಿಗೂ ಗೊತ್ತಿದೆ.
ಇಷ್ಟೇಲ್ಲಾ ಇದ್ದರೂ ನಮ್ಮ ಪಕ್ಷದ ಮೇಲೆ ಯಾಕೆ ಈ ರೀತಿ ಮಾತನಾಡುತ್ತಾರೆ ಗೊತ್ತಿಲ್ಲ.

ಫೋನ್ ಟ್ಯಾಪಿಂಗ್ ವಿಚಾರ.
ಕೇಂದ್ರ ಸರ್ಕಾರವೇ ಫೋನ್ ಟ್ಯಾಪ್ ಮಾಡುತ್ತೆ ಎಂಬ ಆರೋಪ ಇದೆ.
ಕೇಂದ್ರ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ ಯತೀಂದ್ರ ಸಿದ್ದರಾಮಯ್ಯ.
ಕೇಂದ್ರ ಸರ್ಕಾರ ಫೆಗಾಸಿಸ್ ಅನ್ನೋ ಸಾಫ್ಟ್‌ವೇರ್ ನ್ನ ಇಸ್ರೇಲ್ ನಿಂದ ದುಡ್ಡು ಕೊಟ್ಟು ಖರೀದಿ ಮಾಡಿರುವ ಆರೋಪ ಇದೆ.
ಇದರ ಬಗ್ಗೆ ತನಿಖೆನೇ ಆಗಿಲ್ಲ.
ಇಡೀ ದೇಶದಲ್ಲಿ ನಾಯಕರ ಮೇಲೆ ಫೋನ್ ಟ್ಯಾಪ್ ಮಾಡುತ್ತಿದೆ ಎಂಬ ಆರೋಪ ಇದೆ.
ಇದರ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ.
ಫೋನ್ ಟ್ಯಾಪ್ ವಿಚಾರದಲ್ಲಿ ಯಾರಿಗಾದ್ರು ಅನುಮಾನ ಇದ್ರೆ ದೂರು ಕೊಡಲಿ ತನಿಖೆ ನಡೆಸುತ್ತೇವೆ.ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಇದೇ ಆರೋಪ ಬಂದಿತ್ತು.
ಪೊಲೀಸ್ ಇಲಾಖೆಯ ಡಿಜಿಪಿ ಮೇಲೆ ಈ ರೀತಿಯ ಆರೋಪ ಬಂದಿತ್ತು.
ಪ್ರತಿ ಸರ್ಕಾರದಲ್ಲೀ ಈ ರೀತಿ ಆರೋಪ ಮಾಡುತ್ತಿರುತ್ತಾರೆ.
ತನಿಖೆಯಿಂದ ಮಾತ್ರ ಇದು ಗೊತ್ತಾಗುತ್ತದೆ.
ಪೋನ್ ಟ್ಯಾಪ್ ಮಾಡಲು ಸಾಧ್ಯಾನ ಎಂಬ ಪ್ರಶ್ನೆಗೆ ಇರಬಹುದು ಎಂದು ಯತೀಂದ್ರ ಸಿದ್ದರಾಮಯ್ಯ.

ನಮ್ಮ ತಂದೆಯವರು ಎಲ್ಲಿ ತನಕ ಸಿಎಂ ಆಗಿರುತ್ತಾರೆ ಅಲ್ಲಿವರೆಗೆ ಸಚಿವ ಸ್ಥಾನ ಕೇಳಲ್ಲ.
ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ.
ನಾನು ಸಚಿವ ಸ್ಥಾನದ ಆಕಾಂಕ್ಷೆಯಲ್ಲ.

ಸಂವಿಧಾನ ಬದಲಾವಣೆ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರ.
ಬಿಜೆಪಿಯವರಿ ಏನು ವಿಷಯ ಇಲ್ಲ.
ಡಿ.ಕೆ.ಶಿವಕುಮಾರ್ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ.
ಇಂಗ್ಲೀಷ್ ಅವರ ಮಾತ್ರ ಭಾಷೆ ಅಲ್ಲ.
ಅದ್ದರಿಂದ ಅವರು ಹೇಳಬೇಕಾದ ವಿಚಾರ ಸರಿಯಾಗಿ ಹೇಳಲು ಆಗಿಲ್ಲ ಅಷ್ಟೆ.
ಸಂವಿಧಾನ ರಕ್ಷಣೆ ಮಾಡಲು ಕಾಂಗ್ರೆಸ್ ಹೋರಾಟ ಮಾಡಿಕೊಂಡು ಬಂದಿದೆ.
ನಾವು ಸಂವಿಧಾನ ಬದಲಾಯಿಸುವ ಪ್ರಯತ್ನ ಮಾಡಲ್ಲ.
ಸಂವಿಧಾನ ಬದಲಾವಣೆ ವಿಚಾರವಾಗಿ ಬಿಜೆಪಿ ಅವರು ಹೇಳಿಕೆ ಕೊಟ್ಟ ಮೇಲೆ ಸ್ಪಷ್ಟನೆ ಕೊಟ್ಟಿಲ್ಲ.
ಅನಂತ್ ಕುಮಾರ್ ಹೆಗಡೆ ಹೇಳಿಕೆ ಕೊಟ್ಟ ನಂತರ ಸ್ಪಷ್ಟನೆ ಕೊಡುವ ಕೆಲಸ ಮಾಡಿಲ್ಲ.
ಆದರೆ ಡಿಕೆಶಿ ಸ್ಪಷ್ಟನೆ‌ಕೊಟ್ಟಿದ್ದಾರೆ.
ಆದ್ರ ಬಿಜೆಪಿಯವರಿಗೆ ಕೆಲಸ ಇಲ್ಲದೆ ಈ ರೀತಿ ಮಾಡುತ್ತಿದ್ದಾರೆ.
ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ.


ಮುಸ್ಲಿಂ ಸಮುದಾಯಕ್ಕೆ 4 % ಮೀಸಲಾತಿ ನೀಡಿದ ವಿಚಾರ.
ನಾವು ಧರ್ಮದ ಆದರ ಮೇಲೆ ಮೀಸಲಾತಿ ಕೊಟ್ಟಿಲ್ಲ.
ಹಿಂದುಳಿದ ವರ್ಗ ಅನ್ನೋ ಕಾರಣಕ್ಕೆ ಕೊಟ್ಟಿದ್ದೇವೆ.
ಹಿಂದುಳಿದ ವರ್ಗಕ್ಕೆ ಮೀಸಲಾತಿ ಕೊಟ್ಟಾಗ ಮುಸ್ಲಿಂರಿಗು ಕೊಡಬೇಕಾಗುತ್ತೆ.
ಮುಸ್ಲಿಂ ಮೀಸಲಾತಿ ಕರ್ನಾಟಕ‌ ಮಾತ್ರವಲ್ಲದೆ ಬೇರೆ ರಾಜ್ಯದಲ್ಲು ಇದೆ.
ನಾವು ಕೇವಲ ಮುಸ್ಲಿಂರಿಗೆ ಮಾತ್ರ ಮೀಸಲಾತಿ ಕೊಟ್ಟಿಲ್ಲ.
1977 ರಲ್ಲೆ ಹಾವನೂರು ಆಯೋಗ ಮುಸ್ಲಿಂರನ್ನ ಹಿಂದುಳಿದ ವರ್ಗಕ್ಕೆ ಸೇರಿಸಿದೆ.
ಹಿಂದುಳಿದ ವರ್ಗಕ್ಕೆ ಕೊಟ್ಟಾಗ ಮುಸ್ಲಿಂರಿಗು ಕೊಡಬೇಕಾಗುತ್ತೆ.
ಮುಸ್ಲಿಂ ಸಮುದಾಯ 70 ಜಾತಿಗೆ ಮೀಸಲಾತಿ ಕೊಟ್ಟಿದ್ದೇವೆ ಎಂದು ಪ್ರಧಾನಿ ಮೋದಿಯವರು ಹೆಮ್ಮೆಯಿಂದ ಹೇಳಿದ್ದಾರೆ.
ಮೋದಿಯವರು ಮಾಡಿದರೆ ಸರಿ ನಾವು ಮಾಡಿದ್ರೆ ತಪ್ಪಾಗುತ್ತಾ.
ಬಿಜೆಪಿ ನಾಯಕರ ಹೇಳಿಕೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು.

ಹನಿ ಟ್ರ್ಯಾಪ್ ವಿಚಾರ
ಮೈಸೂರಿನಲ್ಲಿ ಹೊಸ ಬಾಂಬ್ ಹಾಕಿದ ಯತೀಂದ್ರ ಸಿದ್ದರಾಮಯ್ಯ.
ಬಿಜೆಪಿಯಲ್ಲೇ ಹನಿ ಟ್ರ್ಯಾಪ್ ಗಳು ನಡೆದಿವೆ‌.
ಬಿಜೆಪಿಯವರ ವಿಡಿಯೋವನ್ನ ಬಿಜೆಪಿಯವರೇ ಮಾಡಿಕೊಂಡು ಇಟ್ಟಿದ್ದಾರೆ.
ಹೀಗಾಗಿಯೇ ಬಿಜೆಪಿ ಶಾಸಕರು ಮಾಜಿ ಸಿಎಂ ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ.
ಈ ಬಗ್ಗೆ ಬಿಜೆಪಿಯವರಿಗೆ ನಮ್ಮ ನಾಯಕರಗಳು ಬಗ್ಗೆ ಮಾತನಾಡಲು ಏನು ಹಕ್ಕಿದೆ.
ಮೈಸೂರಿನಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ.


ಸಚಿವರ ಮನೆಗೆ ಸಿಸಿಟಿವಿ ಹಾಕದ ವಿಚಾರ.
ಕೆಲವರು ಹನಿ ಟ್ರ್ಯಾಪ್ ಮಾಡಲೆಂದೇ ಸಚಿವರ ಮನೆಗೆ ಬರುತ್ತಾರೆ.
ಈಗಾಗಿ ಸಿಸಿಟಿವಿ ಹಾಕಿಸಬೇಕು.
ಸಚಿವರ ಮನೆಗಳಿಗೆ ಸಿಸಿಟಿವಿ ಇಲ್ಲದ ವಿಚಾರ ನನಗೆ ಗೊತ್ತಿಲ್ಲ.
ಸಿಎಂ ಮನೆಗೆ ಸಿಸಿಟಿವಿ ಇದೆ.
ನಾನು ಅಲ್ಲೇ ಇರುವುದರಿಂದ ಸಿಸಿಟಿವಿ ಇರುವ ಬಗ್ಗೆ ನನಗೆ ಗೊತ್ತಿದೆ, ಬೇರೆಯವರ ಮನೆಯ ವಿಚಾರ ನನಗೆ ಗೊತ್ತಿಲ್ಲ.
ಸಿಎಂ ಮನೆಗೆ ಪೊಲೀಸ್ ಬಂದೂಬಸ್ತ್
ಸಹ ಇದೆ, ಯಾರೇ ಬಂದರೂ ರೆಕಾರ್ಡ್ ಆಗುತ್ತೆ.
ಸಚಿವರ ಮನೆಗೆ ಖಂಡಿತವಾಗಿ ಸಿಸಿಟಿವಿ ಹಾಕಬೇಕು.
ಸಿಸಿಟಿವಿ ಇದ್ದರೇ ಹನಿ ಟ್ರ್ಯಾಪ್ ಮಾಡುವವರ ಮೇಲೆ ಕಣ್ಣಿಡಬಹುದು.

ಸದನದಲ್ಲಿ ಕಾಂಗ್ರೆಸ್ ನಾಯಕರು ಯತ್ನಾಳಗೆ ಚೀಟಿ ಕೊಟ್ಟ ವಿಚಾರ.
ಚೀಟಿ ಕೊಟ್ಟಿದ್ದು ಯಾರು ಎಂಬುದು ಗೊತ್ತಿಲ್ಲ.
ನಮ್ಮ ನಾಯಕರು ಸದನದಲ್ಲಿ ಮಾತನಾರಿವುದು ಮಾತ್ರ ಗೊತ್ತಿದೆ.
ಅದರ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ.

Continue Reading

Mysore

ವಾಜಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಬ್ಯಾನರ್ ಹರಿದ ಕಿಡಿಗೇಡಿಗಳು

Published

on

ಅಂಬೇಡ್ಕರ್ ಅವರ ಭಾವಚಿತ್ರವಿರುವ ಬ್ಯಾನರ್ ಹರಿದ ಕಿಡಿಗೇಡಿಗಳು

ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿರುವ ಬ್ಯಾನರ್ ಅನ್ನು ಕತ್ತರಿಸಿ ಅವಮಾನ ಮಾಡಿರುವ ಘಟನೆ ತಾಲ್ಲೂಕಿನ ವಾಜಮಂಗಲ ಗ್ರಾಮದಲ್ಲಿ ನಡೆದಿದೆ.

ವಾಜಮಂಗಲದಲ್ಲಿ ಗ್ರಾಮದಲ್ಲಿ ಏ.14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ವೇಳೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಅಂಬೇಡ್ಕರ್ ಪ್ಲೆಕ್ಸ್ ಗಳನ್ನು ಹಾಕಲಾಗಿತ್ತು. ಕಿಡಿಗೇಡಿಗಳು ಶುಕ್ರವಾರ ರಾತ್ರಿ ವೇಳೆಯಲ್ಲಿ ಅಂಬೇಡ್ಕರ್ ಪ್ಲೆಕ್ಸ್ ಗಳನ್ನು ಹರಿದು ಅವಮಾನ ಮಾಡಿದ್ದಾರೆ.

ಅಂಬೇಡ್ಕರ್ ಅವರ ನಾಮ ಫಲಕದ ಮೇಲೆ ಚಪಲ್ಲಿ ನೇತು ಹಾಕಿ ಅಪಮಾನ ಮಾಡಿದ್ದಾರೆ.

ಗ್ರಾಮಸ್ಥರು ಸ್ಥಳದಲ್ಲೇ ಕುಳಿತು ಪ್ರತಿಭಟನೆ ಮಾಡಿದರು.
ಘಟನೆಯ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ಈ ಘಟನೆಗೆ ಕಾರಣರಾದವರಿಗೆ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು.
ಜಿಲ್ಲೆಯ ಬೇರೆ ಯಾವ ಕಡೆಯೂ ಸಹ ಈ ರೀತಿಯ ಘಟನೆ ಯಾಗದಂತೆ ಮುಂಜಾಗ್ರತಾ ಕ್ರಮ ವಹಿಸುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ದನ್, ತಹಶೀಲ್ದಾರ್ ಮಹೇಶ್ ಹಾಜರಿದ್ದರು.

Continue Reading

Mysore

12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ

Published

on

ಎಚ್.ಡಿ.ಕೋಟೆ: 12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಪಕ್ಕದ ಮನೆಯ 65 ವರ್ಷದ ವ್ಯಕ್ತಿ ಅತ್ಯಾಚಾರ ಮಾಡಿರುವ ಘಟನೆ ತಾಲ್ಲೂಕಿನ ಹಂಪಾಪುರ ಗ್ರಾಮದಲ್ಲಿ ಏ.11 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಏ.11 ರಂದು ಗ್ರಾಮದ ಮರಿಗೌಡ ಎಂಬ ವ್ಯಕ್ತಿ ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ.

ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದನ್ನು ಗಮನಿಸಿದ ತಂದೆ ಮಗಳನ್ನು ವಿಚಾರಿಸಿದ್ದಾನೆ ಬಾಲಕಿ ನಡೆದ ಘಟನೆಯನ್ನು ತಂದೆ, ತಾಯಿಗೆ ಹೇಳಿದ್ದಾಳೆ.

ಆತಂಕಗೊಂಡ ಬಾಲಕಿಯ ತಂದೆ, ತಾಯಿ ಮಾನ ಮರ್ಯಾದೆ ಗೊಸ್ಕಾರ ಘಟನೆ ಬಗ್ಗೆ ಯಾರ ಹತ್ತಿರ ಹೇಳಿಕೊಂಡಿಲ್ಲಾ. ಆದರೆ ಸಂತ್ರಸ್ತ ಬಾಲಕಿ ಅತ್ಯಚಾರ ವ್ಯಕ್ತಿ ನೋಡಿದಾಗಲೆಲ್ಲಾ ಇವನನ್ನು ಸಾಯಿಸಿ ಎಂದು ಹೇಳುವುದನ್ನು ಗಮನಿಸಿದ ತಂದೆ ತಾಯಿ ಖುದ್ದು ಘಟನೆ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಹಾಲು ತರಲು ಮನೆಯಿಂದ ಹೊರಗೆ ಬಂದ ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎಚ್.ಡಿ.ಕೋಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

Mysore

ಆರ್. ರಘು ಅವರ ಎರಡು ಕೃತಿಗಳ ಲೋಕಾರ್ಪಣೆ

Published

on

ಮೈಸೂರು: ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ವತಿಯಿಂದ ಇಲ್ಲಿನ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ನಿರ್ಮಲ ನೆನಪು ಸಮಾರಂಭದಲ್ಲಿ  ಆರ್. ರಘು ಕೌಟಿಲ್ಯ ಅವರ ಭೂಮಿ ಪುತ್ರಿ, ಅಂಕಣಗಳ ಬೆಳಕು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.

 

ರಂಗಭೂಮಿ ಕಲಾವಿದೆ ಪದ್ಮಶ್ರೀ ಬಿ.ಜಯಶ್ರೀ ಅವರು ಭೂಮಿಪುತ್ರಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಪುರುಷ ಸಮಾಜ ಹೆಣ್ಣನ್ನು ಪ್ರೀತಿಯಿಂದ ನೋಡುವುದಿಲ್ಲ. ನಿರ್ಲಕ್ಷ್ಯ ವಹಿಸುತ್ತಾರೆ. ಈ ಪುಸ್ತಕ ಓದಿದಾಗ ಪುರುಷ ಸಮಾಜಕ್ಕೆ ಹೆಂಡತಿಯನ್ನು ಪ್ರೀತಿಸಬೇಕು ಅನಿಸುತ್ತದೆ ಎಂದರು.

 

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು  ಮಾತನಾಡಿ, ವೃತ್ತಿ ಹಾಗೂ ಸಮಾಜಸೇವೆಯಲ್ಲೂ ರಘು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಸಣ್ಣ ಸಮುದಾಯದ ಬಗ್ಗೆ  ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ ಎಂದರು.

ಇಡೀ ರಾಜ್ಯದಲ್ಲಿ ಒಬಿಸಿ ಸಮುದಾಯದ ಜನಸಂಖ್ಯೆಯೇ ಬಹಳ‌ ದೊಡ್ಡದಿದೆ. ನಮ್ಮ ರಾಜ್ಯದಲ್ಲಿ ಸಣ್ಣ ಪುಟ್ಟ ಸಮುದಾಯಗಳು ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರುತ್ತವೆ. ಪ್ರಬಲ ಸಮುದಾಯಗಳಿಗೆ ಹೋಲಿಸಿದರೆ ರಾಜ್ಯಾದ್ಯಂತ ಒಬಿಸಿ ಸಮುದಾಯದ ಸಂಖ್ಯೆಯೇ ದೊಡ್ಡದಿದೆ. ಸಣ್ಣ ಸಣ್ಣ ಸಮುದಾಯಗಳನ್ನು ಒಟ್ಟಾಗಿ ಸೇರಿಸಿದರೆ ಒಬಿಸಿ ಸಮುದಾಯಗಳ ಸಂಖ್ಯೆಯೇ ಹೆಚ್ಚಾಗಿದೆ. ನಾನು ಕೂಡ ಒಬಿಸಿ ಸಮುದಾಯಕ್ಕೆ ಸೇರಿದವನಾಗಿದ್ದೇನೆ. ಸಣ್ಣ ಸಣ್ಣ ಒಬಿಸಿ ಸಮುದಾಯಗಳು ಒಗ್ಗೂಡುವ ಅಗತ್ಯವಿದೆ ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

.

ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಮಾತನಾಡಿದರು.

 

ಶಾಸಕ ಟಿ.ಎಸ್. ಶ್ರೀವತ್ಸ, ಗಾಯಕಿ ಸಂಗೀತಾ ಕಟ್ಟಿ,  ಕೋಮಲ ಹರ್ಷಕುಮಾರ ಗೌಡ, ಮಡ್ಡೀಕೆರೆ ಗೋಪಾಲ, ಮಾಜಿ ಮೇಯರ್ ಶಿವಕುಮಾರ್ ಅವರು ಉಪಸ್ಥಿತರಿದ್ದರು.

Continue Reading

Trending

error: Content is protected !!