Mysore
ತಾಲೂಕು ಕೇಂದ್ರಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ: ಇ.ಎನ್.ಕೃಷ್ಣೇಗೌಡ
ಮೈಸೂರು: ತಾಲೂಕು ಕೇಂದ್ರಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಭೂಗಳ್ಳರಿಂದ ರೈತರು ಮೋಸ ಹೋಗುತ್ತಿದ್ದು, ಸರ್ಕಾರ ಕೂಡಲೇ ಇತ್ತ ಗಮನಹರಿಸಿ ರೈತರ ಸಮಸ್ಯೆ ಬಗೆಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ (ರೈತ ಬಣ)ದ ರಾಜ್ಯಾಧ್ಯಕ್ಷ ಇ.ಎನ್.ಕೃಷ್ಣೇಗೌಡ ಒತ್ತಾಯಿಸಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿುಂಲ್ಲಿ ವಾತನಾಡಿದ ಅವರು, ಮೈಸೂರು ಹೆಚ್.ಡಿ.ಕೋಟೆ, ನಂಜನಗೂಡು ಸೇರಿದಂತೆ ಜಿಲೆಯಲ್ಲಿ ಎಲ್ಲಾ ತಾಲೂಕು ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಕೆಲವರು ರೈತರ ಸೋಗಿನಲ್ಲಿ ಹಸಿರು ಟವಲ್ ಧರಿಸಿ ದರಖಾಸ್ತು ಭೂಮಿ ಕೊಡಿಸುತ್ತೇವೆ ಎಂದು ರೈತರಿಗೆ ಮೋಸ ವಾಡುತ್ತಿದ್ದಾರೆ. ಜತೆಗೆ ಭೂಗಳ್ಳರ ಹಾವಳಿ ಹೆಚ್ಚಾಗಿದ್ದು, ಸರ್ಕಾರಿ ಭೂಮಿುಂನ್ನು ಲೇಔಟ್ ವಾಡುತ್ತಿದ್ದಾರೆ. ಅಧಿಕಾರಿಗಳು ಭೂಗಳ್ಳರೊಂದಿಗೆ ಕೈ ಜೋಡಿಸಿ ಸರ್ಕಾರಿ ಭೂಮಿ ಕಬಳಿಸುತ್ತಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮತ್ತೊಂದು ಮುಡಾ ಹಗರಣದಂತಾಗುತ್ತದೆ ಎಂದು ಎಚ್ಚರಿಸಿದರು.
ರೈತರ ಮನೆ ಬಾಗಿಲಿಗೆ ಸರ್ಕಾರ ಹೋಗುವ ಬದಲು ಬ್ರೋಕರ್ ಗಳ ಮನೆ ಬಾಗಿಲೆಗೆ ಹೋಗುತ್ತಿದೆ. ಸಾರ್ವಜನಿಕರ ಯಾವುದೇ ಕೆಲಸಗಳು ಮಧ್ಯವರ್ತಿಗಳಿಲ್ಲದೆ ನೇರವಾಗಿ ಆಗುತ್ತಿಲ್ಲ. ಸರ್ಕಾರಕ್ಕೆ ರೈತರ ಮೇಲೆ ಕಿಂಚಿತ್ತಾದರೂ ಗೌರವ ಇದ್ದರೆ ಮಧ್ಯವರ್ತಿಗಳಿಲ್ಲದೆ ನೇರವಾಗಿ ರೈತರ ಕೆಲಸ ಆಗುವಂತೆ ವಾಡಬೇಕು. ಜಮೀನು ಉಳುಮೆ ವಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ಕೊಡಬೇಕು. ದುಡ್ಡಿಗಾಗಿ ಯಾರದೋ ಜಮೀನನ್ನು ಯಾರದೋ ಹೆಸರಿಗೆ ವಾಡಿದರೆ ರೈತರನ್ನು ಇಗ್ಗೂಡಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ವಿಧಾನಸೌಧ ಚಲೋ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಿ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಹೆಚ್ಚಾಗಿದೆ. ಸಾಲಕ್ಕೆ ಹೆದರಿ ರೈತರು ಊರು ಬಿಡುತ್ತಿದ್ದಾರೆ. ಹಲವು ಕಡೆ ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್‌ಗಳು ನಿಗದಿತ ಸಮುಂಕ್ಕೆ ರೈತರಿಗೆ, ಜನ ಸಾವಾನ್ಯರಿಗೆ ಸಾಲ ನೀಡುತ್ತಿಲ್ಲ. ಇದರಿಂದಾಗಿ ರೈತರು ಖಾಸಗಿ ಬ್ಯಾಂಕ್, ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆುುಂತ್ತಿದ್ದಾರೆ. ಮೊದಲು ಸಾಲ ಕೊಡುವ ಮೈಕ್ರೋ ಫೈನಾನ್ಸ್‌ಗಳು ನಂತರ ಜನರ ರಕ್ತ ಹೀರುವ ಕೆಲಸ ವಾಡುತ್ತಿವೆ. ಇದರ ವಿರುದ್ಧ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಲು ಮುಂದಾಗಿರುವುದು ಸ್ವಾಗತಾರ್ಹವಾಗಿ ಎಂದರು.
Mysore
ಹುಲಿ ದಾಳಿಗೆ ಮತ್ತೊಂದು ಹಸು ಬಲಿ
ಶಂಕರ್ ಕಟ್ಟೆಮಳಲವಾಡಿ
ಹುಣಸೂರು, ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಕರುಣ ಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮಿಗೆ ಗ್ರಾಮದ ಮಹೇಶ ಬಿನ್ ಚೆಲುವೇಗೌಡ ರವರ ಹಸು ತಮ್ಮ ಜಮೀನಿನಲ್ಲಿ ಮೇಯುವ ಸಮಯದಲ್ಲಿ ಹುಲಿ ದಾಳಿ ಮಾಡಿ ಹಸುವನ್ನು ಅರ್ಧಂಬರ್ಧ ತಿಂದು ಕೊಂದುಹಾಕಿ ಉಳಿದ ಆಹಾರವನ್ನು ಬಿಟ್ಟು ಹೋಗಿದೆ.
Mysore
ದಮನಿತ ಸಮಾಜಗಳ ವೇದಿಕೆ ಅಸ್ತಿತ್ವಕ್ಕೆ: ದೇವರಾಜ್ ಕಾಟೂರು ರಾಜ್ಯಾಧ್ಯಕ್ಷರಾಗಿ ಆಯ್ಕೆ
ಮೈಸೂರು: ಕರ್ನಾಟಕ ದಮನಿತ ಸಮಾಜಗಳ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯಾಧ್ಯಕ್ಷರಾಗಿ ದೇವರಾಜ್ ಟಿ.ಕಾಟೂರು ಅವರನ್ನು ಆಯ್ಕೆ ಮಾಡಲಾಗಿದೆ.
ನೂತನ ಸಮಿತಿಯ ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿ ಸತ್ಯನಾರಾಯಣ(ಮಡಿವಾಳ), ಉಪೇಂದ್ರಕುಮಾರ್(ಗಾಣಿಗ), ಟಿಂಬರ್ ನಾಗರಾಜು(ವಿಶ್ವಕರ್ಮ), ಪರಮೇಶ್(ಸವಿತ ಸಮಾಜ), ನಾಸಿರ್(ಅಲ್ಪ ಸಂಖ್ಯಾತ), ಮಹೇಶ್(ಕುಂಬಾರ), ಲಕ್ಷ್ಮಣ್(ಕಣಿಯರ್), ಪಿ.ಶಂಕರ್(ಸೋಲಿಗ), ಮಂಜುನಾಥ್(ಸಿಳ್ಳೆಕ್ಯಾತ- ಹಕ್ಕಿಪಿಕ್ಕಿ), ರಾಬರ್ಟ್(ಕ್ರಿಶ್ಚಿಯನ್), ಆರ್.ಆರ್.ಪ್ರಕಾಶ್(ದರ್ಜಿ- ಮರಾಠ), ರಾಮಕೃಷ್ಣ(ಹೆಳವ-ಅಲೆಮಾರಿ), ಸುನೀಲ್ ಕುಮಾರ್(ದಲಿತ), ನೃಪತುಂಗ(ನಾಯಕ), ಕೆಂಪಯ್ಯ ಜಯಪುರ(ದಲಿತ), ಶ್ರೀಕಂಠ (ದಲಿತ), ಬಸವಣ್ಣ ಬದನವಾಳು(ದಲಿತ), ಸಿದ್ದಪ್ಪ(ಉಪ್ಪಾರ), ಬಸವರಾಜು (ಉಪ್ಪಾರ), ಮಲ್ಲೇಶ(ಉಪ್ಪಾರ) ಅವರನ್ನು ಆಯ್ಕೆ ಮಾಡಲಾಯಿತು.
ಹಿರಿಯ ಹೋರಾಟಗಾರ ಹರಿಹರ ಆನಂದಸ್ವಾಮಿ ಆಯ್ಕೆಯನ್ನು ಪ್ರಕಟಿಸಿದರು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ‍್ಯ ಬಂದು 75 ವರ್ಷಗಳಾದರೂ ಅನೇಕ ಸಮುದಾಯಗಳು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿ ಮುಖ್ಯ ವಾಹಿನಿಗೆ ಬರದೆ ತೆರಮರೆಗೆ ಸರಿದಿವೆ. ಇದು ಸ್ವಾತಂತ್ರ‍್ಯ ಭಾರತದಲ್ಲಿ ದೊಡ್ಡ ದುರಂತ. ಇಂತಹ ಸಮಾಜಗಳ ಪರವಾಗಿ ಹೋರಾಟ ಮಾಡಲಿಕ್ಕೆ ನಾಯಕತ್ವದ ಕೊರತೆ ಇರುವ ಕಾರಣ ಸಣ್ಣ ಮತ್ತು ಅತಿ ಸಣ್ಣ ಸಮುದಾಯಗಳ ದ್ವನಿಯಾಗಿ ನಿಂತು ಹೋರಾಟ ಮಾಡಲು ವೇದಿಕೆಯನ್ನು ಅಸ್ಥಿತ್ವಕ್ಕೆ ತರಲಾಗಿದೆ ಎಂದು ವಿವರಿಸಿದರು.
ಹಿಂದುಳಿದ ವರ್ಗಗಳ ಮುಖಂಡ ಜಿ.ಎಂ.ಗಾಡ್ಕರ್ ಮಾತನಾಡಿ, ಮೈಸೂರಿನಲ್ಲಿ ಹುಟ್ಟುವ ಸಂಘಟನೆಗಳು ರಾಜ್ಯ ಮತ್ತು ದೇಶ ವ್ಯಾಪ್ತಿ ವಿಸ್ತರಿಸಿಕೊಂಡು ಜೀವಂತವಾಗಿ ಉಳಿದಿವೆ. ಅದೇ ರೀತಿ ಈ ಸಂಘಟನೆ ಕೂಡ ಡಿಎಸ್‌ಎಸ್ ಮತ್ತು ರೈತ ಚಳವಳಿಗಳಂತೆ ಹೋರಾಟ ಮಾಡಿ ಸಂವಿಧಾನ ಬದ್ದ ಹಕ್ಕುಗಳನ್ನು ದಮನಿತ ಸಮಾಜಗಳಿಗೆ ದೊರಕಿಸಿ ಕೊಡಬೇಕು. ಜವಾಬ್ದಾರಿ ಹೊತ್ತ ಅಧ್ಯಕ್ಷರು ರಾಜಕೀಯವಾಗಿ ಬಳಕೆ ಆಗದೆ ಪಕ್ಷಾತೀತವಾಗಿ ನೊಂದವರ ಪರ ಹೋರಾಟ ಮಾಡಿ ಜನ ಸೇವೆ ಮಾಡುವ ಸಂಘಟನೆಯಾಗಿ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಹಿರಿಯ ಹೋರಾಟಗಾರರಾದ ಬನ್ನೂರ್ ಕುಮಾರ್(ನಾಯಕ), ಮಹಾನಗರ ಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್(ಗೊಲ್ಲ), ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ(ದಲಿತ), ಅಶೋಕಪುರಂ ದೊಡ್ಡಗರಡಿ ಅಧ್ಯಕ್ಷ ಜೋಗಿ ಮಹೇಶ್(ದಲಿತ) ಮುಂತಾದವರು ಬೆಂಬಲ ಸೂಚಿಸಿದರು.
ನನ್ನ ಮೇಲೆ ವಿಶ್ವಾಸವಿಟ್ಟು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ ದಮನಿತ ಸಮಾಜಗಳ ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇನೆ. ನಾನು ಪಕ್ಷಾತೀತವಾಗಿ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಹಾಗೂ ಶೋಷಿತರ ಪರವಾಗಿ ಹೋರಾಟ ಮಾಡಲು ಬದ್ಧನಾಗಿದ್ದೇನೆ.
ದೇವರಾಜ್ ಕಾಟೂರು, ರಾಜ್ಯಾಧ್ಯಕ್ಷ
Mysore
ಡಿ.29ರಂದು ವಿಶ್ವಮಾನವ ಧರ್ಮದ ಅಧಿವೇಶನ
ಮೈಸೂರು: ರಾಷ್ಟಕವಿ ಕುವೆಂಪು ವಿಶ್ವಮಾನವ ಸಂದೇಶವನ್ನು ಪಸರಿಸಲು ಡಿ.29ರಂದು ಬನ್ನೂರು ಹೋಬಳಿಯ ಯಾಚೇನಹಳ್ಳಿ ಗ್ರಾಮದ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಶಾಲಾ ಆವರಣದಲ್ಲಿ ವಿಶ್ವಮಾನವ ಧರ್ಮದ ಮೊದಲ ಅಧಿವೇಶನವನ್ನು ಹಮ್ಮಿಕೊಳ್ಳಲಾಗಿದೆ. ಜಗತ್ತು ಸಂಘರ್ಷಮಯ ವಾತಾವರಣದಿಂದ ಬಳಲುತ್ತಿದೆ. ದೇವರು, ಧರ್ಮದ ಹೆಸರಿನಲ್ಲಿ ಜನಸಾಮಾನ್ಯರ ತಲೆಯಲ್ಲಿ ಮೌಢ್ಯಗಳನ್ನು ತುಂಬಲಾಗುತ್ತಿದೆ. ಇದೆಲ್ಲವನ್ನೂ ತಪ್ಪಿಸಲು ವಿಶ್ವಮಾನವ ಧರ್ಮ ಪರ್ಯಾಯ ಮಾರ್ಗವಾಗಿದೆ. ಎಂದು ಶ್ರೀ ನಾದಾನಂದನಾಥ ಸ್ವಾಮೀಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕುವೆಂಪು ಅವರ ಪಂಚಸೂತ್ರಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ. ಈ ಪಂಚತತ್ವಗಳೇ ವಿಶ್ವಮಾನವ ಧರ್ಮದ ತಿರುಳು. ವೈಯಕ್ತಿಕ ದರ್ಶನಕ್ಕೆ ಈ ಸೂತ್ರಗಳು ಅಳವಡಿಕೆ ಅಗತ್ಯವಾಗಿದೆ ಎಂದು ತಿಳಿಸಿದರು.
ಯಾಚೇನಹಳ್ಳಿಯಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಕುವೆಂಪು ಸ್ಮಾರಕ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕುವೆಂಪು ಚಿತಾಭಸ್ಮ, 10 ಸಾವಿರ ಪುಸ್ತಕಗಳ ಗ್ರಂಥಾಲಯ, ಕುವೆಂಪು ಚಿತ್ರಗ್ಯಾಲರಿ, ಸಭಾಂಗಣ ನಿರ್ಮಿಸಲಾಗುತ್ತಿದೆ. 2 ತಿಂಗಳಲ್ಲಿ ಉದ್ಘಾಟನೆಯಾಗಲಿದೆ ಎಂದರು.

ಪ್ರಗತಿಪರ ಚಿಂತಕ ವೈ.ಎನ್.ಶಂಕರೇಗೌಡ ಮಾತನಾಡಿ, ತೀರ್ಥಹಳ್ಳಿ ಬಿಟ್ಟರೆ ಯಾಚೇನಹಳ್ಳಿ ಕುವೆಂಪು ಚಿತಾಭಸ್ಮ ಇರುವ ಸ್ಥಳವಾಗಿದೆ. ಮಂತ್ರಮಾಂಗಲ್ಯ ಆಶಯದಲ್ಲಿ ಸರಳ ವಿವಾಹವಾಗುವವರಿಗೆ ಯಾಚೇನಹಳ್ಳಿ ಕೇಂದ್ರ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಚಂದ್ರಶೇಖರ್ ದ.ಕೋ.ಹಳ್ಳಿ ಮಾತನಾಡಿ, ಡಿ.29ರಂದು ಬೆಳಗ್ಗೆ 10 ಗಂಟೆಗೆ ಕುವೆಂಪು ಭಾವಚಿತ್ರ ಮೆರವಣಿಗೆ ನಡೆಯಲಿದೆ. ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಚಂದ್ರಶೇಖರ್ ನಂಗಲಿ ಭಾಗವಹಿಸಲಿದ್ದಾರೆ.
ಕ್ರಿಶ್ಚಯನ್, ಇಸ್ಲಾಂ, ಬೌದ್ಧ ಧರ್ಮಗಳ ಗುರುಗಳನ್ನು ಆಹ್ವಾನಿಸಿದ್ದೇವೆ. ಜಾತ್ಯಾತೀತವಾಗಿ ಕಾರ್ಯಕ್ರಮ ರೂಪುಗೊಂಡಿದೆ. ನಾಡಿನಾದ್ಯಂತ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಮಂಡ್ಯ ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ ಉಮೇಶ್ ದಡಮಹಳ್ಳಿ ಹಾಜರಿದ್ದರು.
-
Hassan14 hours agoರೌಡಿಶೀಟರ್ ಜೆಸಿಬಿ ಮಂಜನ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್
-
Mysore11 hours agoಗೃಹಲಕ್ಷ್ಮೀ ಯೋಜನೆ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ: ಲಕ್ಷ್ಮೀ ಹೆಬ್ಬಾಳ್ಕರ್ ವಜಾಗೆ ಹೇಮಾ ನಂದೀಶ್ ಆಗ್ರಹ
-
Hassan2 hours agoಕುಡಿದ ಮತ್ತಿನಲ್ಲಿ ಯುವಕನೋರ್ವನ ಬರ್ಬರ ಹ*ತ್ಯೆ
-
Special13 hours ago994 ಪಿಡಿಒ ಹುದ್ದೆಗಳ ನೇಮಕಾತಿ 2026: ಪದವೀಧರರಿಗೆ ಭರ್ಜರಿ ಸರ್ಕಾರಿ ಉದ್ಯೋಗ ಅವಕಾಶ
-
Hassan12 hours agoಕರ್ನಾಟಕ ಮಾದಾರ ಮಹಾಸಭಾ ಸದಸ್ಯತ್ವ ನೋಂದಣಿ ಹಾಗೂ ತಾಲ್ಲೂಕು ಘಟಕಗಳ ಆಯ್ಕೆ
-
Chamarajanagar8 hours agoರೈತ ನಾಯಕರಾದ ಪಿ.ಆರ್.ಪಾಂಡಿಯನ್, ಸೆಲ್ವರಾಜ್ ಬಿಡುಗಡೆ ಒತ್ತಾಯಿಸಿ ಮನವಿ
-
Mysore7 hours agoನಿಗಮ ಮಟ್ಟದ ಕ್ರೀಡಾ ತಂಡಗಳ ಆಯ್ಕೆ ಪ್ರಕ್ರಿಯೆ
-
Mandya7 hours agoಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಹೆಚ್ಚು: ಡಾ.ಕುಮಾರ
