Chamarajanagar
ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಚಾಮರಾಜನಗರ: ಮಹಿಳೆಯೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣದ ಬ್ಯಾಗ್ ಅನ್ನು ವಾಪಸ್ ನೀಡಿ ನಗರದ ಆಟೋ ಚಾಲಕ ಸಿದ್ದರಾಜು ಪ್ರಾಮಾಣಿಕತೆ ಮೆರೆದಿದ್ದಾರೆ.
ನಗರದ ಶ್ರೀ ಭುವನೇಶ್ವರಿ ವೃತ್ತದ ಬಳಿ ಹನುಮನಪುರ ನಿವಾಸಿಯಾದ ರಶ್ಮಿ ಅವರು ಬಸ್ ಹತ್ತುವ ಅವಸರದಲ್ಲಿ ಚಿನ್ನಾಭರಣವಿದ್ದ ಬ್ಯಾಗನ್ನು ಆಟೋದಲ್ಲೇ ಮರೆತು ಹೋಗಿದ್ದು, ಬಳಿಕ ಬ್ಯಾಗ್ ಅನ್ನು ಕಳೆದುಕೊಂಡ ವಿಷಯವನ್ನು ಪಟ್ಟಣ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.
ಅಷ್ಟರಲ್ಲೇ ನಗರದ ಆಟೋ ಚಾಲಕ ಸಿದ್ದರಾಜು ಎಂಬುವವರು ಆಟೋದಲ್ಲಿದ್ದ ಚಿನ್ನಾಭರಣದ ಬ್ಯಾಗ್ ಅನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ತದನಂತರ ಪೊಲೀಸರು ಬ್ಯಾಗ್ ಅನ್ನು ರಶ್ಮಿಗೆ ಒಪ್ಪಿಸಿದರು.
Chamarajanagar
ಪಿಎಂ ಶ್ರಮ ಯೋಗಿ ಮಾನ್‌ಧನ್ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಅಮ್ಜದ್ ಪಾಷಾ

ಯಳಂದೂರು: ಪ್ರಧಾನಮಂತ್ರಿ ಶ್ರಮ ಯೋಗಿ ಮನ್‌ಧನ್ ಯೋಜನೆಯ ಮೂಲಕ ಅಸಂಘಟಿತ ವಲಯ ಕಾರ್ಮಿಕರು 60 ವರ್ಷದ ನಂತರ ಮಾಸಿಕ ಪಿಂಚಣಿ ಮೂರು ಸಾವಿರ ರೂಪಾಯಿಗಳನ್ನು ಪಡೆಯಬಹುದು ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಅಭಿಯಾನ ವ್ಯವಸ್ಥಾಪಕ ಅಮ್ಜದ್ ಪಾಷಾ ತಿಳಿಸಿದರು.
ಅವರು ಪಟ್ಟಣದ ಸಿಡಿಎಸ್ ಸಮುದಾಯ ಭವನದಲ್ಲಿ ಪಟ್ಟಣ ಪಂಚಾಯಿತಿ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಚಾಮರಾಜನಗರ ವತಿಯಿಂದ ಹಮ್ಮಿಕೊಂಡಿದ್ದ ಸ್ವ ನಿಧಿ ಸೇ ಸಮೃದ್ಧಿ ಯೋಜನೆ ಅಡಿ ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯ ಜೋಡಣೆ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಪಿಂಚಣಿ ಖಾತೆಗೆ ಪಾವತಿಸುತ್ತದೆ ಫಲಾನುಭವಿಯ ವಯಸ್ಸು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3000 ರೂಪಾಯಿಗಳ ಖಚಿತ ಕನಿಷ್ಠ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆಗೆ ಒಳಪಡುವ ಕಾರ್ಮಿಕರು ಆಸಂಘಟಿತ ವಲಯದ ಕಾರ್ಮಿಕರಾಗಿದ್ದು 18ರಿಂದ 40 ವರ್ಷದೊಳಗಿರಬೇಕು ಅವರ ಮಾಸಿಕ ಆದಾಯ 15,000 ಕ್ಕಿಂತ ಕಡಿಮೆ ಇರಬೇಕು, ಅವರು ಆದಾಯ ತೆರಿಗೆ, ಇ ಎಸ್ ಐ, ಪಿ ಎಫ್, ಎನ್ ಪಿ ಎಸ್ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು,ಬ್ಯಾಂಕ್ ಉಳಿತಾಯ ಖಾತೆ ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು ಎಂದು ತಿಳಿಸಿದರು.
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕರಾದ ಡಾಕ್ಟರ್ ಪುಟ್ಟಸ್ವಾಮಿ, ಎಮ್ ಟಿ ಓ ಅನ್ಸಾರ್ ಖಾನ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹೇಶ್ ಕುಮಾರ್, ಪಟ್ಟಣ ಪಂಚಾಯಿತಿ ಸಮುದಾಯ ಸಂಘಟನಾಧಿಕಾರಿ ಪರಶಿವಮೂರ್ತಿ, ಕಾರ್ಮಿಕ ಇಲಾಖೆ ಸಿಬ್ಬಂದಿಗಳಾದ ಸುಚಿತ್ರ, ಪ್ರಸಾದ್, ಸಿ ಎಸ್ ಸಿ ಸೆಂಟರ್ ಸಿಬ್ಬಂದಿಗಳು, ಪಪಂ ಸಿಬ್ಬಂದಿಗಳಾದ ಗಣೇಶ್, ರಿಹಾನ, ಬೀದಿ ಬದಿ ವ್ಯಾಪಾರಿಗಳು ಹಾಜರಿದ್ದರು.
Chamarajanagar
ಯಳಂದೂರು: ಪಟ್ಟಣ ಪಂಚಾಯಿತಿ ವತಿಯಿಂದ ವಿವಿಧ ಬಾಬ್ತುಗಳಿಗೆ ಬಹಿರಂಗ ಹರಾಜು

ಯಳಂದೂರು: ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ವಿವಿಧ ಬಾಬ್ತುಗಳಿಗೆ ಬಹಿರಂಗ ಹರಾಜು ಮಾಡಲಾಯಿತು.
ಪಟ್ಟಣ ಪಂಚಾಯಿತಿ ವಾರದ ಸಂತೆ ಸುಂಕ ವಸೂಲಾತಿ ಹಕ್ಕು ರೂ. 1,57,000 ರೂಪಾಯಿಗಳಿಗೆ, ಪಟ್ಟಣ ಪಂಚಾಯಿತಿ ಬಸ್ ನಿಲ್ದಾಣದ ಸುಂಕ ವಸೂಲಾತಿ ಹಕ್ಕು 2,5,000 ರೂಪಾಯಿಗಳಿಗೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೆಲ ಸುಂಕ ವಸೂಲಾತಿ ಹಕ್ಕು 3,87,000 ರೂಪಾಯಿಗಳಿಗೆ, ಎಲೆಕೇರಿ ಮಾಂಸದ ಅಂಗಡಿ 26 ಸಾವಿರ ರೂಪಾಯಿಗಳಿಗೆ, ಎಲೆಕೇರಿ ಮಾಂಸದ ಅಂಗಡಿ 2 ಹನ್ನೊಂದು ಸಾವಿರ ರೂಪಾಯಿಗಳಿಗೆ, ಎಲೆಕೇರಿ ಕೋಳಿ ಮಾಂಸದ ಅಂಗಡಿ 55,000 ರೂಪಾಯಿಗಳಿಗೆ,ಎಲೆಕೇರಿ ಕೋಳಿ ಮಾಂಸದ ಅಂಗಡಿ -2 25,000 ರೂಪಾಯಿಗಳಿಗೆ ಮಾರಾಟವಾಯಿತು.
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಹೇಶ್ ಕುಮಾರ್ ಮಾತನಾಡಿ ಹರಾಜಿನಲ್ಲಿ ಬಿಡ್ ಆದ ಟೆಂಡರ್ ಮೊತ್ತಕ್ಕೆ ಶೇಕಡಾ 18 ರಷ್ಟು ಶೇಕಡಾ 18ರಷ್ಟು ಜಿಎಸ್‌ಟಿ ತೆರಿಗೆಯನ್ನು ಪಾವತಿಸಬೇಕು, ಪಟ್ಟಣ ಪಂಚಾಯಿತಿಯಿಂದ ನೀಡುವ ನಿರ್ದೇಶನಗಳಿಗೆ ಬದ್ಧರಾಗಿರಬೇಕು, ಏಕ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಿ ಮಲ್ಲು, ಉಪಾಧ್ಯಕ್ಷ ಶಾಂತಮ್ಮ, ಸದಸ್ಯರಾದ ಮಹೇಶ್, ರಂಗನಾಥ್, ಪ್ರಭಾವತಿ ರಾಜಶೇಖರ್, ಸುಶೀಲ ಪ್ರಕಾಶ್, ಶ್ರೀಕಂಠ ಮೂರ್ತಿ, ಮುನಾವಾರ ಬೇಗ್, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಮಂಜು ಮಲ್ಲು, ಲಕ್ಷ್ಮಿ , ಜಯಲಕ್ಷ್ಮಿ, ವಿಜಯ, ಮುಖಂಡರಾದ ಮಲ್ಲು, ನಿಂಗರಾಜು, ಬಿಡ್ ದಾರರು, ಸಾರ್ವಜನಿಕರು ಹಾಜರಿದ್ದರು.
Chamarajanagar
ಕೊಳ್ಳೇಗಾಲದಲ್ಲಿ ಭೀಕರ ಅಪಘಾ*ತ: ಇಬ್ಬರು ಮಹಿಳೆಯರ ಧಾರುಣ ಸಾ*ವು

ಕೊಳ್ಳೇಗಾಲ ದ ಸಿದ್ದಯ್ಯನಪುರ ಗ್ರಾಮದ ಬಳಿ ಭೀಕರ ಅಪಘಾತ : ಇಬ್ಬರು ಮಹಿಳೆಯರು ಸಾವು,10 ಜನರಿಗೆ ಗಾಯ.
ವರದಿ :ಸುನೀಲ್ ಪ್ರಶಾಂತ್
ಕೊಳ್ಳೇಗಾಲ ಪಟ್ಟಣದ ಸಿದ್ದಯ್ಯನಪುರ ಗ್ರಾಮದ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಟಾಟಾ ಎಎಸ್ ಬೈಕ್ ನಡುವೆ ಮುಖ ಮುಖ ಡಿಕ್ಕಿ ಸ್ಥಳದಲ್ಲಿ ಇಬ್ಬರು ಮಹಿಳೆಯರ ಸಾವು.
ಕೊಳ್ಳೇಗಾಲ, ಶ್ರೀ ಮಲೆ ಮಹದೇಶ್ವರ ಬೆಟ್ಟ ದ ರಸ್ತೆ ಯಲ್ಲಿ ಬೆಳಿಗ್ಗೆ ಕೆಎಸ್ಆರ್ಟಿಸಿ ಹಾಗೂ ಟಾಟಾ ಎಎಸ್ ಬೈಕ್ ನಡುವೆ ಅಪಘಾತದಲ್ಲಿ ಹನೂರು ತಾಲ್ಲೂಕಿನ ಬಾಣಾವರ ಗ್ರಾಮದ 50 ವರ್ಷ ದ ಮಹಾದೇವಮ್ಮ,28 ವರ್ಷ ದ ಶೃತಿ ಮೃತ ಪಟ್ಟರೆ 10 ಕ್ಕೂ ಜನ ಗಾಯ ಗೊಂಡಿದಾರೆ.
ಗಾಯಳು ಗಳನ್ನು ಪಟ್ಟಣದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲವರನ್ನು ಹೆಚ್ಚಿನ ಚಿಕಿತ್ಸೆ ಗೆ ಮೈಸೂರು, ಹಾಗೂ ಚಾಮರಾಜನಗರ ಜಿಲ್ಲಾ ಆಸ್ಪತ್ರೆ ಗೆ ಕಳುಹಿಸಲಾಗಿದೆ
-
Kodagu21 hours ago
ಬೇಳೂರು ಬಾಣೆಯಲ್ಲಿ ಸ್ಟೇರಿಂಗ್ ಲಾಕ್ : ಕಾರು ಪಲ್ಟಿ
-
Kodagu17 hours ago
ಕೊಡಗಿನ ಭರವಸೆಯ ಪ್ರತಿಭೆ ವರ್ತ ಕಾಳಿ ಕಿರುಚಿತ್ರದ ನಿರ್ದೇಶಕ: ಕೃತಾರ್ಥ ಮಂಡೆಕುಟ್ಟಂಡ
-
State13 hours ago
ಬಿಜೆಪಿ ಶೋಕಾಸ್ ನೋಟಿಸ್ ಕುರಿತು ಶಾಸಕ ಎಸ್ಟಿಎಸ್ ಫಸ್ಟ್ ರಿಯಾಕ್ಷನ್
-
Mysore17 hours ago
ಎಲ್ಲಾ ಪಕ್ಷದವರ ಮೇಲೂ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ: ಯತೀಂದ್ರ ಸಿದ್ದರಾಮಯ್ಯ
-
Mandya16 hours ago
ಭೂ ದಾಖಲೆ ಹೊಂದಿರುವವರನ್ನು ಓಕ್ಕಲೆಬ್ಬಿಸಬೇಡಿ : ಎನ್ ಚೆಲುವರಾಯಸ್ವಾಮಿ
-
Mandya12 hours ago
ಎಂ.ಕೆ.ಸೋಮಶೇಖರ್ಗೆ ರಾಜ್ಯಮಟ್ಟದ ಛಾಯಗ್ರಾಹಕ ಹಾಗೂ ಕಲಾವಿದ ಪ್ರಶಸ್ತಿ ಪ್ರಧಾನ
-
State10 hours ago
ಬಿಜೆಪಿಯಿಂದ ಆರು ವರ್ಷಗಳ ಕಾಲ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ
-
Hassan14 hours ago
1 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನರೆವೇರಿಸಿದ ಸ್ವರೂಪ್ ಪ್ರಕಾಶ್