Hassan
ಹಾಸನದಲ್ಲಿರುವ ಕೃಷಿ ವಿವಿ ಸ್ಥಳಾಂತರ ಸರಕಾರದ ದುರುದ್ದೇಶವಿದೆ: ಎಚ್‌ಡಿ ರೇವಣ್ಣ ಆರೋಪ
ಹಾಸನ: ಇಲ್ಲಿನ ಕೃಷಿ ಕಾಲೇಜನ್ನು ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸ್ಥಳಾಂತರಿಸುವ ರಾಜ್ಯ ಸರಕಾರದ ನಡೆ ದುರುದ್ದೇಶವಾಗಿದ್ದು, ಇಲ್ಲೆ ಉಳಿಸದಿದ್ದರೇ ರೈತರು ಮತ್ತು ಬಿಜೆಪಿ ಶಾಸಕರೊಂದಿಗೆ ಸೇರಿ ಬೃಹತ್ ಹೋರಾಟ ನಡೆಸುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ಹಾಸನದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೃಷಿ ಕಾಲೇಜನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಿಂದ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸ್ಥಳಾಂತರಿಸುವ ರಾಜ್ಯ ಸರ್ಕಾರದ ಪ್ರಸ್ತಾಪದ ವಿರುದ್ಧ ಸಿಡಿಮಿಡಿಗೊಂಡರು.
ಸರ್ಕಾರದ ಈ ನಡೆಯನ್ನು “ದುರುದ್ದೇಶಪೂರಿತ” ಎಂದು ಟೀಕಿಸಿ, ರೈತರು ಮತ್ತು ಬಿಜೆಪಿ ಶಾಸಕರೊಂದಿಗೆ ಸೇರಿ ಬೃಹತ್ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಹಾಸನದ ಕೃಷಿ ಕಾಲೇಜಿನಲ್ಲಿ ಸುಮಾರು ೪೦೦ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇದು ಜಿಕೆವಿಕೆಯ (ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು) ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಸರ್ಕಾರ ರಾತ್ರೋರಾತ್ರಿ ಇದನ್ನು ಮಂಡ್ಯಕ್ಕೆ ಸೇರಿಸಿ ಬಿಲ್ ಪಾಸ್ ಮಾಡಿದೆ. ಈ ಪ್ರಸ್ತಾವನೆಯನ್ನು ಸದನದಲ್ಲಿ ಚರ್ಚಿಸಿ, ಪರಿಶೀಲನೆಯಲ್ಲಿದೆ ಎಂದು ಹೇಳಿದ್ದರು. ಆದರೆ ರಹಸ್ಯವಾಗಿ ಗವರ್ನಗೆ ಸಹಿಗೆ ಕಳುಹಿಸಲಾಗಿದೆ ಎಂದು ರೇವಣ್ಣ ಆರೋಪಿಸಿದರು.
“ಗವರ್ನರ್ ಈ ಬಿಲ್‌ಗೆ ಅಂಗೀಕಾರ ನೀಡಬಾರದೆಂದು ನಾವು ಮನವಿ ಮಾಡಿದ್ದೇವೆ. ಕೃಷಿ ಕಾಲೇಜು ಹಾಸನದಲ್ಲೇ ಉಳಿಯಬೇಕು” ಎಂದು ಅವರು ಒತ್ತಾಯಿಸಿದರು.
ಕಾಲೇಜಿನ ಅಭಿವೃದ್ಧಿಗಾಗಿ ಹೊಸ ಕೋರ್ಸ್‌ಗಳನ್ನು ಪ್ರಯತ್ನದಲ್ಲಿ ತೊಡಗಿದ್ದೇವೆ. ಕೋರ್ಸ್ ಆರಂಭಿಸುವುದಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹೊಸ ಕೋರ್ಸ್‌ಗಳನ್ನು ತರಲು ಮನವಿ ಮಾಡಿದ್ದಾರೆ. ಆದರೆ, ಸರ್ಕಾರ ಈ ರೀತಿ ರೈತರ ಹಿತವನ್ನು ಕಡೆಗಣಿಸುತ್ತಿದೆ. ರೈತರೆಲ್ಲರೂ ಒಗ್ಗೂಡಿ ಹೋರಾಟ ಮಾಡುತ್ತೇವೆ. ಬಿಜೆಪಿ ಶಾಸಕರು ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಹೋರಾಟ ನಡೆಸುತ್ತೇವೆ ಎಂದರು.
ಹಾಲು ಒಕ್ಕೂಟಕ್ಕೆ ದಿನಕ್ಕೆ ೧೪ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ ೨.೫ ಲಕ್ಷ ಲೀಟರ್ ಹಾಲನ್ನು ನಾವೇ ಮಾರಾಟ ಮಾಡುತ್ತೇವೆ. ಉಳಿದ ೧೨ ಲಕ್ಷ ಲೀಟರ್ ಹಾಲನ್ನು ಮೌಲ್ಯ ವರ್ಧನೆಗೆ ಕಳುಹಿಸುತ್ತೇವೆ. ಆದರೆ, ಒಂದು ಲೀಟರ್ ಹಾಲನ್ನು ಪರಿವರ್ತನೆಗೆ ಕಳುಹಿಸಿದಾಗ ಸುಮಾರು ೨.೫ ರಿಂದ ೩ ರೂಪಾಯಿ ನಷ್ಟ ಉಂಟಾಗುತ್ತಿದೆ. ಹಾಲಿನ ದರ ಏರಿಕೆ ಮತ್ತು ರೈತರಿಗೆ ಸೂಕ್ತ ಬೆಲೆ ಒದಗಿಸುವ ವಿಷಯದಲ್ಲಿ ರಾಜ್ಯ ಸರ್ಕಾರದ ತೀರ್ಮಾನ ಎದುರು ನೋಡುತ್ತಿರುವುದಾಗಿ ಹೇಳಿದರು.

ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆಯಲಾಗಿದೆ. ಹಾಸನ ಹಾಲು ಒಕ್ಕೂಟಕ್ಕೆ ದಿನಕ್ಕೆ ೧೪ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ ೨.೫ ಲಕ್ಷ ಲೀಟರ್ ಹಾಲನ್ನು ನಾವೇ ಮಾರಾಟ ಮಾಡುತ್ತೇವೆ. ಉಳಿದ ೧೨ ಲಕ್ಷ ಲೀಟರ್ ಹಾಲನ್ನು ಮೌಲ್ಯ ವರ್ಧನೆಗೆ ಕಳುಹಿಸುತ್ತೇವೆ. ಆದರೆ, ಒಂದು ಲೀಟರ್ ಹಾಲನ್ನು ಪರಿವರ್ತನೆಗೆ ಕಳುಹಿಸಿದಾಗ ಸುಮಾರು ೨.೫ ರಿಂದ ೩ ರೂಪಾಯಿ ನಷ್ಟ ಉಂಟಾಗುತ್ತಿದೆ” ಎಂದು ರೇವಣ್ಣ ಮಾಹಿತಿ ನೀಡಿದರು.
ಸಚಿವ ಕೆ.ಎನ್. ರಾಜಣ್ಣ ಅವರಿಗೆ ಸಂಬಂಧಿಸಿದ ಹನಿಟ್ರ್ಯಾಪ್ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ರೇವಣ್ಣ ನಿರಾಕರಿಸಿ, ಈ ಬಗ್ಗೆ ಇವತ್ತು ಏನೂ ಮಾತನಾಡುವುದಿಲ್ಲ. ಸತೀಶ್ ಜಾರಕಿಹೋಳಿ ಏನು ಹೇಳಿದ್ದಾರೆ ಎಂಬುದನ್ನೂ ಚರ್ಚಿಸುವುದಿಲ್ಲ. ಸಮಯ ಬಂದಾಗ ಸವಿಸ್ತಾರವಾಗಿ ಎಲ್ಲವನ್ನೂ ಬಿಚ್ಚಿಡುತ್ತೇನೆ” ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
೧೮ ಶಾಸಕರ ಅಮಾನತು ವಿಷಯಕ್ಕೆ ಸಂಬಂಧಿಸಿದಂತೆ, ಸಣ್ಣಪುಟ್ಟ ಘಟನೆಗಳು ಸದನದಲ್ಲಿ ನಡೆಯುತ್ತವೆ. ಅದು ಅಂದಿನ ದಿನಕ್ಕೆ ಮುಗಿಯುತ್ತದೆ. ಸಭಾಧ್ಯಕ್ಷರು ತಕ್ಷಣ ಅಮಾನತು ಆದೇಶವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಎಲ್ಲ ವಿಷಯಗಳನ್ನು ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ. ರೈತರಿಗೆ ಎಷ್ಟು ದರ ನೀಡಬೇಕು ಎಂಬುದು ಸರ್ಕಾರಕ್ಕೆ ಬಿಟ್ಟಿದ್ದು, ಮುಖ್ಯಮಂತ್ರಿಗಳು ಏನು ನಿರ್ದೇಶನ ಕೊಡುತ್ತಾರೆ ಎಂಬುದನ್ನು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹೊಸ ಕೋರ್ಸ್‌ಗಳನ್ನು ತರಲು ಮನವಿ ಮಾಡಿದ್ದಾರೆ. ಆದರೆ, ಸರ್ಕಾರ ಈ ರೀತಿ ರೈತರ ಹಿತವನ್ನು ಕಡೆಗಣಿಸುತ್ತಿದೆ. ರೈತರೆಲ್ಲರೂ ಒಗ್ಗೂಡಿ ಹೋರಾಟ ಮಾಡುತ್ತೇವೆ. ಬಿಜೆಪಿ ಶಾಸಕರು ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ನಂತರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
Hassan
ಪೊಲೀಸರ ಭರ್ಜರಿ ಕಾರ್ಯಚರಣೆ: ಮಟ್ಕಾ ಆಡುತ್ತಿದ್ದ 17 ಮಂದಿ ಬಂಧನ
ಹಾಸನ: ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಪೆನ್ಷನ್‌ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಜೂಜಾಟವಾಡಿಸುತ್ತಿದ್ದ 17 ಜನ ಆರೋಪಿಗಳನ್ನು ಬಂಧಿಸಿ 65,140 ರೂ. ನಗದು ಹಣ, 20 ಮೊಬೈಲ್, 2 ಸ್ಕೂಟಿ ಹಾಗು 2 ಆಟೋಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರ ಮಾರ್ಗದರ್ಶನದಲ್ಲಿ, ಹಾಸನ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಗಂಗಾಧರಪ್ಪ ಅವರ ನೇತೃತ್ವದಲ್ಲಿ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸ್ವಾಮಿನಾಥ, ಹಾಸನ ನಗರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಕೇಶವಪ್ರಸಾದ್, ಪ್ರಿಯಾಂಕ, ಪೊಲೀಸ್ ಶಾಂತಿಗ್ರಾಮ ಠಾಣೆ ಸಬ್ ಇನ್ಸ್‌ಪೆಕ್ಟರ್ ಅರುಣ್, ಮಂಜುನಾಥ, ಅಂತಿಮ, ಹಾಗು ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಿ ಒಟ್ಟು ಆರು ಪ್ರರಕಣದಲ್ಲಿ 17 ಜನ ಆರೋಪಿಗಳನ್ನು ಬಂಧಿಸಿದ್ದು 65,140 ನಗದು ಹಣ, 20 ಮೊಬೈಲ್, 2 ಸ್ಕೂಟಿ ಹಾಗೂ 2 ಆಟೋಗಳನ್ನು ವಶಪಡಿಸಿಕೊಳ್ಳಲಾಗಿದೆ.
Hassan
ಸಾಲಬಾಧೆ ತಾಳಲಾರದೆ ನಾಲೆಗೆ ಹಾರಿ ಓರ್ವ ರೈತ ಆತ್ಮಹ*ತ್ಯೆ
ಚನ್ನರಾಯಪಟ್ಟಣ : ತಾಲೂಕಿನ ಡಿ.ಚಿಕ್ಕಗೊಂಡನಹಳ್ಳಿ ಗ್ರಾಮದ ಓರ್ವ ರೈತರೊಬ್ಬರು ಸಾಲಬಾಧೆ ತಾಳಲಾರದೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಕಸಬಾ ಹೋಬಳಿ ಡಿ.ಚಿಕ್ಕಗೊಂಡನಹಳ್ಳಿ ಗ್ರಾಮದ ರೈತ ಕಾಳೇಗೌಡ (57) ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಎಸ್‌ಎಂಎಫ್‌ಜಿ ಗ್ರಾಮಶಕ್ತಿಯಲ್ಲಿ 50 ಸಾವಿರು, ಬಿಎಸ್ಎಸ್ ಮೈಕ್ರೋ ವೈನಾನ್ಸ್‌ನಲ್ಲಿ 1.2 ಲಕ್ಷ ರೂ. ಚೈತನ್ಯ ಇಂಡಿಯಾ ಪಿನ್ ಕ್ರೆಡಿಟ್ ನಲ್ಲಿ 1.39 ಲಕ್ಷ ರೂ. ಡಿಂಡಗೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 10 ಸಾವಿರ, ಗ್ರಾಮೀಣ ಕೂಟ 1.50 ಲಕ್ಷ ರೂ. ಶ್ರೀಸಂತ್ಯಮ್ಮ ಸ್ವಸಹಾಯ ಮಹಿಳಾ ಸಂಘದಲ್ಲಿ 1.50 ಲಕ್ಷ ರೂ. ಧರ್ಮಸ್ಥಳ ಸಂಘದಲ್ಲಿ 2 ಲಕ್ಷ ರೂ. ಸಾಲ ಮಾಡಿದ್ದಾರೆ. ಸಾಕಷ್ಟು ಪೈನಾನ್ಸ್‌ಗೆ ಶೇ.50 ರಷ್ಟು ಸಾಲ ತೀರಿಸಿದ್ದಾರೆ ಇನ್ನೂ ಕೆಲ ಕಡೆಯಲ್ಲಿ ಸಾಲ ಬಾಕಿ ಉಳಿಸಿಕೊಂಡಿದ್ದಾರೆ.
ಡಿ.ಚಿಕ್ಕಗೊಂಡನಹಳ್ಳಿ ಗ್ರಾಮದ ಸರ್ವೆ ನಂ. 59 ರಲ್ಲಿ 1.10 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು ಕಳೆದ 40 ವರ್ಷಗಳಿಂದ ಸಾಗುವಳಿ ಮಾಡುಕೊಂಡು ಬರುತ್ತಿದ್ದು ಈ ಕೃಷಿ ಭೂಮಿಯನ್ನು ತಮ್ಮ ಹೆಸರಿಗೆ ಮಂಜೂರು ಮಾಡಿಕೊಡುವಂತೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ನಾಲ್ಕು ದಶಕದಲ್ಲಿ 10ಕ್ಕೂ ಹೆಚ್ಚು ಸಲ ಸಾಗುವಳಿ ಮಂಜೂರು ಅರ್ಜಿ ಸಲ್ಲಿಸಿದ್ದರೂ 1982 ರಿಂದ ಮಂಜೂರಾತಿ ಮಾಡದೇ ಇರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತ ಕಾಳೇಗೌಡ ನ.24 ರಂದು ಮನೆಯಿಂದ ಹೊರ ಹೋಗಿದ್ದಾರೆ ರಾತ್ರಿಯಾದರೂ ಮನೆಗೆ ಹಿಂದುರುಗದೆ ಇದುದ್ದರಿಂದ ಕುಟುಂಬಸ್ಥರು ಗ್ರಾಮದಲ್ಲಿ ಹುಡುಕಿದ್ದಾರೆ ಸ್ನೇಹಿತರನ್ನು ವಿಚಾರಿಸಿದಾಗ ಹೇಮಾವತಿ ಎಡದಂಡೆ ನಾಲೆ ಸಮೀಪದಲ್ಲಿ ಪಾದರಕ್ಷೆಗಳು, ಟವಲ್ ಹಾಗೂ ಜರ್ಕಿನ್ ಇರುವುದು ಪತ್ತೆಯಾಗಿದೆ, ನಾಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಿ ನಾಲೆ ನೀರಿನಲ್ಲಿ ಹುಡುಕಿದರೂ ಮೃತ ದೇಹ ಪತ್ತೆಯಾಗಿಲ್ಲ.
ತಾಲೂಕಿನ ಶ್ರವಣಬೆಳಗೊಳ ಹೋಬಳಿ ಹೊಸಹಳ್ಳಿ ಗ್ರಾಮ ಬಳಿ ಹೇಮಾವತಿ ನಾಲೆಯಲ್ಲಿ 18 ದಿವಸದ ನಂತರ ಮೃತ ದೇಹ ಪತ್ತೆಯಾಗಿದೆ. ಶ್ರವಣಬೆಳಗೊಳ ಠಾಣೆಯ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿ ಮೃತರ ಮಡದಿ ಮಂಗಳಮ್ಮ ಪುತ್ರ ಸುನಿಲ್‌ಕುಮಾರ್, ಪುತ್ರಿ ಸುನಿತಾರಿಗೆ ಮೃತ ದೇಹ ಹಸ್ತಾಂತರ ಮಾಡಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Hassan
ಡಾ. ತೃಪ್ತಿ ದಾಸ್ ಅಪರೂಪದ ಸಾಧನೆ: ಒಂದೇ ತಿಂಗಳಲ್ಲಿ 2 ಪ್ರತಿಷ್ಠಿತ ಯೂರೋಪ್ ಪದವಿ ಪಡೆದ ವೈದ್ಯೆ
ಹಾಸನ: ಜಿಲ್ಲೆಯ ಖ್ಯಾತ ವೈದ್ಯರಾದ ಡಾ. ದೇವದಾಸು ಹೆಚ್.ಆರ್. (ಆನಂದದಾಸ್ ಡಯಾಗ್ನೋಸ್ಟಿಕ್ ಲ್ಯಾಬ್) ಹಾಗೂ ಡಾ. ಕೆ.ವಿ. ಸುಜಾತಾ (ದಾಸ್ ಸ್ಕ್ಯಾನಿಂಗ್ ಸೆಂಟರ್) ಅವರ ಪುತ್ರಿ ಡಾ. ತೃಪ್ತಿ ದಾಸ್ ಅವರು ಯುರೋಪಿಯನ್ ಡಿಪ್ಲೊಮಾ ಇನ್ ರೇಡಿಯಾಲಜಿ (EDiR) ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಯ ಮೊದಲ ಮಹಿಳಾ ವೈದ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಡಾ. ತೃಪ್ತಿ ಅವರು ಇದೀಗ ಯುರೋಪಿಯನ್ ಬೋರ್ಡ್ ಪ್ರಮಾಣಿತ ತಜ್ಞರಾಗಿ ಗುರುತಿಸಲ್ಪಟ್ಟಿದ್ದಾರೆ. ಇದೇ ವೇಳೆ, ಅವರು ಡಯಾಗ್ನೊಸ್ಟಿಕ್ ರೇಡಿಯಾಲಜಿ (EDiR) ಮತ್ತು ಇಂಟರ್‌ವೇನ್‌ಶನ್ ರೇಡಿಯಾಲಜಿ (EBIR) ಎಂಬ ಎರಡೂ ಕ್ಷೇತ್ರಗಳಲ್ಲಿ ಕೇವಲ ಒಂದು ತಿಂಗಳಲ್ಲಿ ಯುರೋಪಿಯನ್ ಮಟ್ಟದ ಎರಡು ಪ್ರಮಾಣಪತ್ರಗಳನ್ನು ಪಡೆದಿರುವುದು ವಿಶೇಷ ಸಾಧನೆಯಾಗಿದೆ.

MBBS, MD, DNB, FVIR, EBIR, EDiR ಸೇರಿದಂತೆ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪದವಿಗಳನ್ನು ಗಳಿಸಿರುವ ಅವರು ಪ್ರತಿಭಾವಂತ ರೇಡಿಯಾಲಜಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಈ ರೀತಿ ಸಾಧನೆ ಮಾಡಿದಂತಹ ಬೆರಳೆಣಿಕೆ ಮಂದಿಯಲ್ಲಿ ಇವರು ಕೂಡ ಒಬ್ಬರು
ಮಂಗಳೂರಿನ ಯೆನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಶಿಕ್ಷಣ ಪೂರ್ಣಗೊಳಿಸಿದ ಡಾ. ತೃಪ್ತಿ ದಾಸ್ ಅವರು ನಾಲ್ಕೂ ವರ್ಷಗಳಲ್ಲಿ ಡಿಸ್ಟಿಂಕ್ಷನ್ ಸಾಧಿಸುವುದರ ಜೊತೆಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಅಗ್ರ ಶ್ರೇಣಿಯ ರ್ಯಾಂಕ್ ಪಡೆದು ಗಮನ ಸೆಳೆದಿದ್ದರು.
ನಂತರ ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ರೇಡಿಯಾಲಜಿಯಲ್ಲಿ ಎಂಡಿ ಪದವಿ ಪಡೆದ ಅವರು, ಕಾಲೇಜಿಗೆ ಚಿನ್ನದ ಪದಕವನ್ನು ಗಳಿಸಿದ್ದು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ 4ನೇ ರ‍್ಯಾಂಕ್ ಪಡೆಯುವ ಮೂಲಕ ತಮ್ಮ ಶೈಕ್ಷಣಿಕ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.ಇದಲ್ಲದೆ ರೇಡಿಯಾಲಜಿಯಲ್ಲಿ ಡಿಪ್ಲೊಮೇಟ್ ಆಫ್ ನ್ಯಾಷನಲ್ ಬೋರ್ಡ್ (DNB) ಪದವಿಯನ್ನೂ ಅವರು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಹಲವು ಯುವ ವೈದ್ಯರಿಗೆ ಪ್ರೇರಣೆಯಾಗಿದ್ದಾರೆ.

ಇಂಟರ್ವೆನ್ಷನಲ್ ರೇಡಿಯಾಲಜಿ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಡಾ. ತೃಪ್ತಿ ದಾಸ್ ಅವರು 2013 ರಿಂದ 2025ರವರೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ FVIR (ಫೆಲೋಶಿಪ್ ಇನ್ ವಾಸ್ಕುಲರ್ ಅಂಡ್ ಇಂಟರ್ವೆನ್ಷನಲ್ ರೇಡಿಯಾಲಜಿ) ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಇದೇ ವೇಳೆ ಕೇವಲ ಒಂದೇ ತಿಂಗಳ ಅವಧಿಯಲ್ಲಿ ಯುರೋಪಿನ ಎರಡು ಅತ್ಯಂತ ಪ್ರತಿಷ್ಠಿತ ಮತ್ತು ಕಠಿಣವೆಂದು ಪರಿಗಣಿಸಲ್ಪಡುವ ಪದವಿಗಳಾದ ಯುರೋಪಿಯನ್ ಡಿಪ್ಲೊಮಾ ಇನ್ ರೇಡಿಯಾಲಜಿ (EDiR) ಹಾಗೂ ಯುರೋಪಿಯನ್ ಬೋರ್ಡ್ ಆಫ್ ಇಂಟರ್ವೆನ್ಷನಲ್ ರೇಡಿಯಾಲಜಿ (EBIR) ಗಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಈ ಪ್ರಮಾಣಪತ್ರಗಳನ್ನು ಪಡೆದಿರುವ ಭಾರತದ ಕೆಲವೇ ಕೆಲವು ಮಹಿಳಾ ರೇಡಿಯಾಲಜಿಸ್ಟ್‌ಗಳಲ್ಲಿ ಡಾ. ತೃಪ್ತಿ ದಾಸ್ ಒಬ್ಬರಾಗಿದ್ದಾರೆ.
ಪ್ರಸ್ತುತ ಡಾ. ತೃಪ್ತಿ ದಾಸ್ ಅವರು ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಪೂರ್ಣಕಾಲಿಕ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದು, ಅಲ್ಲಿನ ಇಂಟರ್ವೆನ್ಷನಲ್ ರೇಡಿಯಾಲಜಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಜೊತೆಗೆ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂದರ್ಶಕ ಕನ್ಸಲ್ಟೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ರೇಡಿಯಾಲಜಿಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ, ಶೈಕ್ಷಣಿಕ ಸಂಶೋಧನೆ ಹಾಗೂ ರೋಗಿಗಳಿಗೆ ಸುಧಾರಿತ ಮತ್ತು ಕಡಿಮೆ ಅಪಾಯದ ಚಿಕಿತ್ಸೆ ನೀಡುವಲ್ಲಿ ಅವರು ವಿಶೇಷ ಆಸಕ್ತಿ ಹೊಂದಿದ್ದಾರೆ. ಇಮೇಜ್ ಗೈಡೆಡ್ ಇಂಟರ್ವೆನ್ಷನ್ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಅಳವಡಿಸುವ ನಿಟ್ಟಿನಲ್ಲಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಜಿಲ್ಲೆಯ ಹೆಮ್ಮೆಯ ಪುತ್ರಿಯಾಗಿರುವ ಡಾ. ತೃಪ್ತಿ ದಾಸ್ ಅವರ ಈ ಸಾಧನೆಗಳು ಯುವ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ. ಇವರ ಈ ಸಾಧನೆಗೆ ಪೋಷಕರು ಸಂಬಂಧಿಕರು ಸ್ನೇಹಿತರು ಸೇರಿದಂತೆ ಜಿಲ್ಲೆಯ ಹಲವು ವೈದ್ಯರು ಕೂಡ ಅಭಿನಂದಿಸಿ ಶುಭ ಹಾರೈಸಿದ್ದಾರೆ.
-
Chamarajanagar14 hours agoನಾಳೆ ರಂಗವಾಹಿನಿ ಜಾನಪದ ಕಾಲೇಜು ಉದ್ಘಾಟನೆ ಕಾರ್ಯಕ್ರಮ
-
Chikmagalur21 hours agoಬೆಳ್ಳಿ ಪದಕ ಪಡೆದ ಹೆಡ್ ಕಾನ್ಸ್ ಟೇಬಲ್ ಗಿರೀಶ್ ಟಿ ಎಸ್ ರವರಿಗೆ ಅಭಿನಂದನೆ ಸಲ್ಲಿಸಿದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್
-
State17 hours agoರಾಜ್ಯ ಸರ್ಕಾರದಿಂದ 15 ವರ್ಷ ಮೀರಿದ ವಾಹನಗಳ ಸ್ಕ್ರ್ಯಾಪ್ ಅನುಮೋದನೆ: ರಾಮಲಿಂಗಾರೆಡ್ಡಿ
-
Chikmagalur13 hours agoಡಿ.20 ರಿಂದ ಜ.6ರವರೆಗೆ ಜಿಲ್ಲೆಯಲ್ಲಿ ಹೆಲಿಟೂರಿಸಂ ಚಟುವಟಿಕೆ
-
Mandya13 hours agoSSLC ಪರೀಕ್ಷಾ ಫಲಿತಾಂಶ ಹೆಚ್ಚಿಸಲು ಕಾರ್ಯೋನ್ಮುಖರಾಗಲು ಸೂಚಿಸಿದ ಕೆ.ಆರ್.ನಂದಿನಿ
-
Hassan20 hours agoಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಬ್ರೈನ್ ಡೆಡ್ : ಅಂಗಾಂಗಗಳನ್ನು ದಾನ ಮಾಡಿದ ಪೋಷಕರು
-
State12 hours agoಗೃಹಲಕ್ಷ್ಮೀ ಯೋಜನೆಯಲ್ಲಿ ಮೋಸ: ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿ.ಟಿ.ರವಿ
-
Hassan11 hours agoಪೊಲೀಸರ ಭರ್ಜರಿ ಕಾರ್ಯಚರಣೆ: ಮಟ್ಕಾ ಆಡುತ್ತಿದ್ದ 17 ಮಂದಿ ಬಂಧನ
