Connect with us

Crime

ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ

Published

on

HASSAN-BREAKING

ಹಾಸನ : ವೃದ್ದನ ಬರ್ಬರ ಹತ್ಯೆ ಪ್ರಕರಣ

ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ

ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ, ದಡದಹಳ್ಳಿ ಗ್ರಾಮದಲ್ಲಿ ನಿನ್ನೆ ನಡೆದಿದ್ದ ಕೊಲೆ

ಗ್ರಾಮದ ನಿರ್ವಾಣಪ್ಪ (75) ಕೊಲೆಯಾಗಿದ್ದ ವ್ಯಕ್ತಿ

ಅಪ್ಪನ ಹತ್ಯೆಗೆ ಮಗನ ಪ್ರತೀಕಾರ

ಸಣ್ಣಪುಟ್ಟ ಕಾರಣಕ್ಕೆ ಒಡಹುಟ್ಟಿದವರ ವಿರುದ್ಧವೇ ಹಗೆ ಸಾಧಿಸುತ್ತಿದ್ದ ನಿರ್ವಾಣಪ್ಪ

2011 ರಲ್ಲಿ ತನ್ನ ಸಹೋದರನ ಮೇಲೆ ಕೊಲೆ ಆರೋಪ ಹೊರಿಸಲು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ಲಕ್ಕಪ್ಪ ಎಂಬಾತನನ್ನು ಕೊಲೆ ಮಾಡಿದ್ದ ನಿರ್ವಾಣಪ್ಪ

ನಂತರ ಸಹೋದರನ ಮನೆಯ ಕಾಂಪೌಂಡ್ ಒಳಗೆ ಮೃತದೇಹ ಬಿಸಾಡಿದ್ದ ನಿರ್ವಾಣಪ್ಪ

ಪೊಲೀಸರ ತನಿಖೆಯಲ್ಲಿ ನಿರ್ವಾಣಪ್ಪನ ನಾಟಕ ಬಯಲಾಗಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ವೃದ್ದ

ಕೆಲ ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ನಿರ್ವಾಣಪ್ಪ

ಗ್ರಾಮಕ್ಕೆ ಬಾರದೆ ಸಮೀಪದ ಮಲ್ಲಿಪಟ್ಟಣ ಗ್ರಾಮದಲ್ಲಿ ವಾಸವಾಗಿದ್ದ ನಿರ್ವಾಣಪ್ಪ

ದಡದಹಳ್ಳಿ ಗ್ರಾಮದಲ್ಲೇ ವಾಸವಾಗಿದ್ದ ಕೊಲೆಯಾಗಿದ್ದ ಲಕ್ಕಪ್ಪನ ಮಕ್ಕಳು

ಇದರಿಂದ ಹೆದರಿ ಮಲ್ಲಿಪಟ್ಟಣದಲ್ಲಿ ಆಶ್ರಯ ಪಡೆದಿದ್ದ ನಿರ್ವಾಣಪ್ಪ

ನಿನ್ನೆ ಮಧ್ಯಾಹ್ನ ತನ್ನ ತಂದೆಯ ಮರಣ ಪ್ರಮಾಣ ಪತ್ರ ಪಡೆಯಲು ದಡದಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದ ನಿರ್ವಾಣಪ್ಪ

ಕೆಲಸ ಮುಗಿಸಿ ಹಿಂದಿರುಗುವ ಸಂದರ್ಭದಲ್ಲಿ ದಿಢೀರ್ ಎಂಟ್ರಿಕೊಟ್ಟ ಲಕ್ಕಪ್ಪನ ಮಗ ಮೂರ್ತಿ ಅಲಿಯಾಸ್ ಗುಂಡ

ಹದಿಮೂರು ವರ್ಷಗಳ ಹಿಂದೆ ತನ್ನ ತಂದೆಯ ಕೊಲೆಯ ದ್ವೇಷವಿಟ್ಟುಕೊಂಡಿದ್ದ ಮೂರ್ತಿ

ಪ್ರತೀಕಾರವಾಗಿ ಹಾಡಹಗಲೇ ಗ್ರಾಮದ ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ನಿರ್ವಾಣಪ್ಪನ ಜೀವ ತೆಗೆದ ಮೂರ್ತಿ

ಈ ದೃಶ್ಯ ಕಂಡಿದ್ದ ಗ್ರಾಮಸ್ಥರು

ಸುದ್ದಿ ತಿಳಿದ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿದ್ದ ಎಸ್‌ಪಿ ಮೊಹಮದ್ ಸುಜೀತಾ, ಎಎಸ್‌ಪಿ ಶಾಲೂ, ಅರಕಲಗೂಡು ಸಿಪಿಐ ಕೆ.ಎಂ.ವಸಂತ್

ಕೊಲೆ ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಸಿಪಿಐ ವಸಂತ್ ನೇತೃತ್ವದ ತಂಡ

ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವ ಪೊಲೀಸರು

ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ

Continue Reading

Crime

ವಿಚಾರಣೆಗೆ ಹಾಜರಾದ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌: ಯಾಕೆ ಗೊತ್ತಾ?

Published

on

ಹೈದರಾಬಾದ್: ಜಾಮೀನಿನ ಷರತ್ತಿನಂತೆ ಭಾನುವಾರ ಚಿತ್ರನಟ ಅಲ್ಲು ಅರ್ಜುನ್ ಅವರು ಪೊಲೀಸರ ಮುಂದೆ ಹಾಜರಾಗಿದ್ದರು.

ಪುಷ್ಪ 2 ಚಿತ್ರ ರಿಲೀಸ್‌ ಆದ ದಿನ ಚಿತ್ರಮಂದಿರದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಅಲ್ಲು ಅವರು ಹೈದರಾಬಾದ್‍ನ ಪೊಲೀಸರ ಮುಂದೆ ಜಾಮೀನು ವಿಚಾರವಾಗಿ ಹಾಜರಾಗಿದ್ದಾರೆ.

ಪ್ರಕರಣದಲ್ಲಿ ಬಂಧಿತರಾಗಿದ್ದ ಅಲ್ಲು ಅವರಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಆ ಸಂದರ್ಭದಲ್ಲಿ ನ್ಯಾಯಾಲಯ ಪ್ರತಿ ಭಾನುವಾರ ಆರೋಪಿ ಪೊಲೀಸರ ಮುಂದೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು. ಇದರ ಜೊತೆಗೆ ಅಲ್ಲು ಅರ್ಜುನ್ ತಮ ವಿಳಾಸ ಬದಲಿಸಬಾರದು ಎಂದು ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶದ ಪ್ರಕಾರ ಇಂದು ಅಲ್ಲು ಅರ್ಜುನ್ ಪೊಲೀಸರ ಮುಂದೆ ಹಾಜರಾಗಿ ಸಹಿ ಹಾಕಿದ್ದಾರೆ.

ಡಿಸೆಂಬರ್ 4 ರಂದು ಹೈದರಾಬಾದ್‍ನ ಸಂಧ್ಯಾ ಥಿಯೇಟರ್‍ನಲ್ಲಿ ಪುಷ್ಪ 2 ಪ್ರೀಮಿಯರ್‍ನಲ್ಲಿ ನಟನನ್ನು ನೋಡಲು ಅಭಿಮಾನಿಗಳು ಜಮಾಯಿಸಿದಾಗ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಯಿತು. 35 ವರ್ಷದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದು, ಅವರ ಎಂಟು ವರ್ಷದ ಮಗ ತೀವ್ರವಾಗಿ ಗಾಯಗೊಂಡಿದ್ದಾನೆ.

ದುರಂತದ ನಂತರ ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಮೃತ ಮಹಿಳೆಯ ಕುಟುಂಬದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‍ಎಸ್) ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 13 ರಂದು ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಆದಾಗ್ಯೂ, ತೆಲಂಗಾಣ ಹೈಕೋರ್ಟ್ ಡಿಸೆಂಬರ್ 14 ರಂದು ಅವರಿಗೆ ಮಧ್ಯಂತರ ಜಾಮೀನು ನೀಡಿತು, ಅಲ್ಲು ಅರ್ಜುನ್‌ಗೆ ನೀಡಿರುವ ಜಾಮೀನು ಅವಧಿ ಜನವರಿ 10 ರಂದು ಮುಗಿಯಲಿದೆ.

Continue Reading

Crime

ಜೆಡಿಎಸ್‌ ಮುಖಂಡನ ಬರ್ಬರ ಹ*ತ್ಯೆ: ಕೊ*ಲೆ ಮಾಡಿ ಪರಾರಿಯಾದ ದುಷ್ಕರ್ಮಿಗಳು

Published

on

ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಜೆಡಿಎಸ್ ಮುಖಂಡನನ್ನ ಮುಗಿಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತಮ್ಮನಾಯಕಹಳ್ಳಿಯ ಗೇಟ್ ಬಳಿ ನಡೆದಿದೆ.

ಜೆಡಿಎಸ್ ಪಕ್ಷದ ಮುಖಂಡ ವೆಂಕಟೇಶ್ (52) ಪ್ರಾಣ ಬಿಟ್ಟವರು. ತಮ್ಮನಾಯಕನಹಳ್ಳಿ ಗೇಟ್​ನಿಂದ ವೆಂಕಟೇಶ್​ ತನ್ನ ಸ್ವಗ್ರಾಮ ತಮ್ಮನಾಯಕನಹಳ್ಳಿ ನಿವಾಸಕ್ಕೆ ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಬಂದು ಅಡ್ಡಗಟ್ಟಿ ಕೂಡಲೇ ಮಚ್ಚು ಲಾಂಗುಗಳಿಂದ ಮನಸೋ ಇಚ್ಚೆ ದಾಳಿ ಮಾಡಿದ್ದಾರೆ. ಅಲ್ಲದೇ ಕೈಗೆ ಲಾಂಗ್​ಗಳಿಂದ ಹೊಡೆದಿದ್ದರಿಂದ ಕಟ್ ಆಗಿದೆ. ವೆಂಕಟೇಶ್​ ಮೇಲೆ ಭೀಕರವಾಗಿ ದಾಳಿ ಮಾಡಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ರಸ್ತೆಯಲ್ಲೇ ರಕ್ತದ ಮಡುವಿನಲ್ಲೇ ಬಿದ್ದ ವೆಂಕಟೇಶ್ ಪ್ರಾಣ ಬಿಟ್ಟಿದ್ದಾರೆ. ಇನ್ನು ಈ ಘಟನೆ ಏಕೆ ನಡೆದಿದೆ, ಯಾರು ಮಾಡಿದ್ದಾರೆ, ದಾಳಿ ಮಾಡಿದವರು ಯಾರು ಎಂಬುವ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು, ಎಸ್​ಪಿ ಕುಶಲ್ ಚೌಕ್ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಶ್ವಾನದಳದ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಆಗಮಿಸಿದ್ದು ಸ್ಥಳದಲ್ಲಿ ಎಲ್ಲ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಇತ್ತ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ವೆಂಕಟೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Continue Reading

Crime

ಲೋಕಾಯುಕ್ತ ಎಂದು ಪುರಸಭೆ ರೆವಿನ್ಯೂ ಆಫೀಸರನ್ನೇ ವಂಚಿಸಲು ಹೋದ ಖದೀಮ ಅಂದರ್

Published

on

ಉಳ್ಳಾಲ: ಲೋಕಾಯುಕ್ತ ಎಂದು ಸೋಮೇಶ್ವರ ಪುರಸಭೆ ರೆವಿನ್ಯೂ ಆಫೀಸರನ್ನೇ ವಂಚಿಸಲು ಹೋದ ಖದೀಮನೋರ್ವನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ರಾಜ್ಯದ ಸತ್ಯಸಾಯಿ ಜಿಲ್ಲೆಯ ಕದಿರಿ ತಾಲೂಕಿನ ಓ.ಡಿ.ಸಿ ಮಂಡಲ್, ವೆಂಕಟಾಪುರಂ ಪಂಚಾಯತ್, ನಲ್ಲಗುಟ್ಲಪಲ್ಲಿ ಗ್ರಾಮದ ನಿವಾಸಿ
ಧನಂಜಯ ರೆಡ್ಡಿ ತೋಟ ಬಂಧಿತ ಆರೋಪಿ.

2024ರ ಎಪ್ರಿಲ್ 6ರಂದು ಸೋಮೇಶ್ವರ ಪುರಸಭೆ ರೆವಿನ್ಯೂ ಆಫೀಸರ್ ಪುರುಷೋತ್ತಮ ಅವರ ಮೊಬೈಲ್‌ಗೆ ಅಪರಿಚಿತನಿಂದ ವಾಟ್ಸ್ಆ್ಯಪ್ ಕರೆ ಬಂದಿದೆ. ಅತ್ತಕಡೆಯಿಂದ ಮಾತನಾಡಿದ ಅಪರಿಚಿತ ‘ತಾನು ಲೋಕಾಯುಕ್ತದಿಂದ ಮಾತನಾಡುತ್ತಿದ್ದೇನೆ‌. ತಮ್ಮ ಮೇಲೆ ಆರೋಪ ಬಂದಿದೆ. ನಮ್ಮ ಟೆಕ್ನಿಕಲ್ ಆಫೀಸರ್ ನಿಮ್ಮ ಆಫೀಸಿಗೆ ಬರುವ ಮೊದಲು ಅದನ್ನು ಸರಿ ಮಾಡುವುದಾದರೆ ಮಾಡುವ’ ಎಂದು, ‘ಹಣ ನೀಡುವಂತೆ’ ತಿಳಿಸಿದ್ದಾನೆ. ‘ಇಲ್ಲವಾದಲ್ಲಿ ತೊಂದರೆ ಮಾಡುವುದಾಗಿ’ ಬೆದರಿಕೆ ಹಾಕಿದ್ದಾನೆ.

ಆತ ಕರೆ ಮಾಡಿರುವ ಮೊಬೈಲ್ ಸಂಖ್ಯೆಯನ್ನು ಟ್ರೂಕಾಲರ್‌ನಲ್ಲಿ ಪರೀಶೀಲಿಸಿದಾಗ ಡಿ.ಪ್ರಭಾಕರ ಲೋಕಾಯುಕ್ತ ಪಿ.ಐ ಎಂದು ಬಂದಿದೆ. ಈ ಬಗ್ಗೆ ಪುರುಷೋತ್ತಮ ಅವರು ಕರ್ನಾಟಕ ಲೋಕಾಯುಕ್ತ ಮಂಗಳೂರು ಇಲ್ಲಿನ ಅಧಿಕಾರಿಗಳಲ್ಲಿ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಅಂತಹ ಹೆಸರಿನ ಯಾವುದೇ ಅಧಿಕಾರಿ/ಸಿಬ್ಬಂದಿ ಇರುವುದಿಲ್ಲವಾಗಿ ತಿಳಿದು ಬಂದಿದೆ. ಅಲ್ಲದೆ ಪುರುಷೋತ್ತಮ ಅವರ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕಿ ಲಿಲ್ಲಿ ನಾಯರ್ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕ ಕೃಷ್ಣ ಆರ್. ಅವರಿಗೂ ಇದೇ ರೀತಿ ಬೆದರಿಕೆ ಒಡ್ಡಿದ್ದಾನೆ. ಆದ್ದರಿಂದ ಕರೆ ಮಾಡಿರುವ ಅಪರಿಚಿತ ಮೋಸದಿಂದ ಹಣ ಮಾಡುವ ಉದ್ದೇಶದಿಂದ ಕರ್ನಾಟಕ ಲೋಕಾಯುಕ್ತ ಎಂದು ನಟಿಸಿದ್ದಾನೆ ಎಂದು ದೂರು ದಾಖಲಿಸಲಾಗಿತ್ತು‌. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿತನು ಇದೇ ರೀತಿಯ ಕೃತ್ಯ ಎಸಗಿದ ಬಗ್ಗೆ ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪೊಲೀಸ್ ಠಾಣೆ ಹಾಗೂ ಹೈದರಾಬಾದ್‌ನ ಶಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ ತಿಳಿದು ಬಂದಿರುತ್ತದೆ.

Continue Reading

Trending

error: Content is protected !!