Connect with us

Mandya

21 ಕೋಟಿ ರೂ ವೆಚ್ಚದಲ್ಲಿ ಮದ್ದೂರಿನ 4 ತಡೆ ಗೋಡೆಗಳ ಕಾಮಗಾರಿ ಶುರು: ಎನ್. ಚೆಲುವರಾಯಸ್ವಾಮಿ

Published

on

ಮದ್ದೂರಿನ ಶ್ರೀ ಹೊಳೆ ಆಂಜನೇಯ ದೇವಾಲಯದ ಬಳಿ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಬಹಳ ದಿನಗಳಿಂದ ಬೇಡಿಕೆ ಇತ್ತು. ಮದ್ದೂರಿನಲ್ಲಿ 4 ತಡೆಗೋಡೆಗಳ ಕಾಮಗಾರಿಗೆ ಸರ್ಕಾರದಿಂದ ಒಟ್ಟು 21 ಕೋಟಿ ರೂ ಹಣ ಮಂಜೂರಾಗಿದೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಅವರು ತಿಳಿಸಿದರು.

ಅವರು ಇಂದು ಮದ್ದೂರು ತಾಲ್ಲೂಕಿನಲ್ಲಿ ನಡೆದ ಶ್ರೀ ಹೊಳೆ ಆಂಜನೇಯ ದೇವಾಲಯದ ಬಳಿ ತಡೆಗೋಡೆ ನಿರ್ಮಾಣ ಕಾಮಗಾರಿ ಗುದ್ಧಲಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.

ಹೊಳೆ ಆಂಜನೇಯ ದೇವಾಲಯದ ಬಳಿ 307 ಲಕ್ಷ ರೂ ಅಂದಾಜು ವೆಚ್ಚದಲ್ಲಿ ತಡೆಗೋಡೆ ನಿರ್ಮಾಣದ ಕಾಮಗಾರಿಯಾಗುತ್ತಿದೆ. ಮದ್ದೂರು ಪಟ್ಟಣದ ಕೊಳಚೆ ನೀರು ಶುದ್ಧೀಕರಣ ಘಟಕದ ಬಳಿ ಇರುವ ಶಿಂಷಾ ನದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 499 ಲಕ್ಷ ರೂ ಮಂಜೂರಾಗಿದೆ ಎಂದರು.

ನಾಡಿನ ಜನತೆಗೆ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಸಬ್ಸಿಡಿ, ಸಹಾಯಧನ, ಪಿಂಚಣಿ ಸೇರಿದಂತೆ ಎಲ್ಲ ಇಲಾಖೆಗಳ ಸೌಲಭ್ಯವನ್ನು ನಿರಂತರವಾಗಿ ಜನರಿಗೆ ನೀಡುತ್ತಿದ್ದೇವೆ. ಶಾಸಕ ಉದಯ್ ಅಧಿಕಾರಕ್ಕೆ ಬಂದ 8- 10 ತಿಂಗಳ ಅವಧಿಯಲ್ಲಿಯೇ ಜನರಿಗೆ ಅನುಕೂಲವಾಗುವಂತಹ ಕಾರ್ಯವನ್ನು ಮಾಡಿದ್ದಾರೆ ಎಂದು ಶಾಸಕ ಕೆ. ಎಂ. ಉದಯ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮದ್ದೂರು ವಿಧಾನಸಭಾ ಶಾಸಕ ಕೆ. ಎಂ. ಉದಯ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಹೆಣ್ಣು ಭ್ರೂಣ ಹತ್ಯೆ ಜಾಗೃತಿ ಅಭಿಯಾನಕ್ಕೆ ಚಾಲನೆ

Published

on

ಶ್ರೀರಂಗಪಟ್ಟಣ: ಸಂಜೀವಿನಿ ತಾಲ್ಲೂಕು ಪಂಚಾಯತ್ ನಿರ್ವಹಣಾ ಘಟಕ ಹಾಗೂ ಸಂಜೀವಿನಿ ಪ್ರಕೃತಿ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟ ವತಿಯಿಂದ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಜಾಗೃತಿ ಅಭಿಯಾನ ನಡೆಯಿತು. ತಾಲ್ಲೂಕಿನ ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನದಡಿಯಲ್ಲಿ ‘ಹೆಣ್ಣು ಭ್ರೂಣ ಹತ್ಯೆ” ಜಾಗೃತಿ ಅಭಿಯಾನಕ್ಕೆ ಪಿಡಿಓ ಸುರೇಶ್ ಕುಮಾರ್ ಚಾಲನೆ ನೀಡಿ ಮಾತನಾಡಿದರು.

ಭ್ರೂಣ ಹತ್ಯೆ ಎಂಬುದು ಮಹಾಪಾಪ. ಲಿಂಗಾನುಪಾತದಲ್ಲಿ ಆದಂತಹ ವ್ಯತ್ಯಾಸದ ದುಷ್ಪರಿಣಾಮವಾಗಿ ಲಿಂಗ ತಾರತಮ್ಯ ಉಂಟಾಗಿದೆ. ಹೆಣ್ಣು ಗಂಡು ಇಬ್ಬರು ಸಮಾನರು ಎಂಬ ಅರಿವು ಎಲ್ಲರಲ್ಲೂ ಉಂಟಾದಾಗ ಸಮಾನತೆ ಕಾಣಬಹುದು ಎಂದು ತಿಳಿಸಿದರು.

ಬಲ್ಲೇನಹಳ್ಳಿ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಆರೋಗ್ಯಕರ ದೃಷ್ಟಿಯಿಂದ ವಿಜ್ಞಾನದಲ್ಲಿ ಆದಂತಹ ಕ್ರಾಂತಿಕಾರಿ ಬೆಳವಣಿಗೆಯನ್ನು ಲಿಂಗ ಪತ್ತೆಗೆ ಬಳಸುತ್ತಿರುವುದು ನೋವಿನ ಸಂಗತಿ. ಸ್ತ್ರೀಯರಿಗೆ ದೇವತೆಯ ಪೂಜ್ಯ ಸ್ಥಾನ ನೀಡಿದ ದೇಶ ನಮ್ಮದಾಗಿದೆ. ಗಂಡು ಮಕ್ಕಳ ವ್ಯಾಮೋಹದಿಂದ ಪೋಷಕರು ಹೊರ ಬರದಿದ್ದರೆ ಸಮಾನತೆಯ ತತ್ವಕ್ಕೆ ಧಕ್ಕೆ ಉಂಟಾಗಿ ಕೌಟುಂಬಿಕ ಹಾಗು ಸಾಮಾಜಿಕ ಸಮಸ್ಯೆಗಳು ಉಲ್ಬಣವಾಗುತ್ತವೆ ಹೆಣ್ಣು ಸಮಾಜ ಕಣ್ಣು ಎಂಬ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಬಲ್ಲೇನಹಳ್ಳಿ ಸಂಜೀವಿನಿ ಪ್ರಕೃತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ದಾಕ್ಷಾಯಿಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪಂಚಾಯಿತಿ ಲೆಕ್ಕ ಸಹಾಯಕಿ ದಿವ್ಯ. ಬಿ ಆರ್ ಪಿ ಸುನೀತಾ , ಮುಖ್ಯ ಪುಸ್ತಕ ಬರಹಗಾರರಾದ ಮಮತ, ಕೃಷಿ ಸಖಿ ನಾಗಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Mandya

ಗ್ರಾಮ‌ ಪಂಚಾಯಿತಿಯ ಎರಡು ವಾಣಿಜ್ಯ ಮಳಿಗೆಗಳ ಉದ್ಘಾಟನೆ ಹಾಗು ಬಹಿರಂಗ ಹಾರಾಜು ಪ್ರಕ್ರಿಯೆ

Published

on

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮ ಪಂಚಾಯತಿಯಲ್ಲಿ‌ ನೂತನವಾಗಿ ಎರಡು ಅಂಗಡಿ ಮಳಿಗೆಯನ್ನು 14 ಲಕ್ಷ ವೆಚ್ಚದಲ್ಲಿ ನಿರ್ಮಾವಾಗಿದ್ದು ಇಂದು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆ.ಜಿ ಪುಟ್ಟರಾಜು ರವರ ಅಧ್ಯಕ್ಷತೆಯಲ್ಲಿ ಸದಸ್ಯರ ಸಮ್ಮುಖದಲ್ಲಿ ಇಂದು ಉದ್ಘಾಟಿಸಿ ಹರಾಜು ಪ್ರಕ್ರಿಯೆ ನೆಡೆಯಸಲಾಯಿತು ನೂತನವಾಗಿ ನಿರ್ಮಾಣ ಮಾಡಿರುವ ವಾಣಿಜ್ಯ ಮಳಿಗೆಗಳು ಬಹಿರಂಗ

ಹಾರಾಜು ಪ್ರಕ್ರಿಯೆಯಲ್ಲಿ ಎರಡು ಮಳಿಗೆಗೆ ಮಾಸಿಕ ಬಾಡಿಗೆ 73500 ರೂಪಾಯಿ ಮತ್ತು ಅಡ್ವಾನ್ಸ್ ಮೊತ್ತ 10 ಲಕ್ಷ ಮತ್ತು ಬೀಟ್ ನೆಡೆಯಿತು.. ಅಲ್ಲದೆ ಖಾಲಿ ಇದ್ದ ಮಳಿಗೆಗೆ ಬಾಡಿಗೆ 5300 ಅಡ್ವಾನ್ಸ್ 50 ಸಾವಿರಕ್ಕೆ ಬಹಿರಂಗ ಹರಾಜು ನೆಡೆಯಿತು..

ಈ ಸಂಧರ್ಭದಲ್ಲಿ ಗ್ರಾಮ‌ ಪಂಚಾಯಿ ಅಧ್ಯಕ್ಷರಾದ ಕೆ.ಜಿ ಪುಟ್ಟರಾಜು, ಉಪಾದ್ಯಕ್ಷರಾದ ಜ್ಯೋತಿ, ಸದಸ್ಯರಾದ ಕೃಷ್ಣ, ಪುಟ್ಟೇಗೌಡ, ಸುನಿತಾ, ತಾಯಮ್ಮ, ರಾಜೇಶ್, ಬಾಲಕೃಷ್ಣ, ಸರಸ್ವತಿ, ಭಾರತಿ, ಜಯಲಕ್ಷ್ಮಿ, ಯೋಗೇಶ್, ಪದ್ಮಾವತಿ, ರೇಣುಕಮ್ಮ, ತೇಜಸ್ವಿ ಕುಮಾರ್, ಪಿಡಿಓ ಚಲುವರಾಜು, ಕಾರ್ಯದರ್ಶಿ ಪಾಪೇಗೌಡ, ಲೆಕ್ಕ ಸಹಾಯಕ ವಾಸು ಸೇರಿದಂತೆ ಗ್ರಾಮದ ಮುಖಂಡರು ಇದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

Continue Reading

Mandya

ಸಮ್ಮೇಳನದಲ್ಲಿ ವಿಶ್ವಗುರು ಬಸವಣ್ಣ ಹಾಗೂ ರಾಷ್ಟ್ರಕವಿ ಕುವೆಂಪು ರವರ ಕಡೆಗಣನೆ – ಓಂಕಾರೇಶ್ವರ ಸ್ವಾಮೀಜಿ

Published

on

ಮಂಡ್ಯ: ಈ ಬಾರಿ ನಡೆಯಲಿರುವ 87ನೇ ಅ.ಭಾ.ಕ.ಸಾಹಿತ್ಯ ಸ್ಮಮೇಳನದಲ್ಲಿ ವಿಶ್ವಗುರು ಬಸವಣ್ಣ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರ ಮತ್ತು ಹೆಸರನ್ನು ಬಳಸದೇ ಕಡೆಗಣಿಸಲಾಗುತ್ತಿದೆ ಎಂದು ಕಲ್ಯಾಣ ಬಸವೇಶ್ವರ ಮಠದ ಓಂಕಾರೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣನವರ ವಿಚಾರಧಾರೆಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದು, ಜಿಲ್ಲಾಡಳಿತ ಬಸವಣ್ಣನವರು ಹಾಗೂ ಕುವೆಂಪು ಅವರನ್ನು ಮರೆಮಾಚುವ ಕೆಲಸ ಮಾಡುತ್ತಿದೆ. ಇದು ಲಕ್ಷಾಂತರ ಪ್ರಜ್ಞಾವಂತ ಬುದ್ಧಿ ಜೀವಿಗಳ ಖಂಡನೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ಸಾಹಿತ್ಯ ಸಮ್ಮೇಳನಕ್ಕೆ ಹೊರಡಿಸಲಾಗುತ್ತಿರುವ ಭಿತ್ತಿ ಪತ್ರ, ಆಹ್ವಾನ ಪತ್ರ ಮತ್ತು ಪ್ರಚಾರ ಪತ್ರಗಳಲ್ಲಿ ಬಸವಣ್ಣ ಹಾಗೂ ಕುವೆಂಪು ಅವರುಗಳ ಭಾವಚಿತ್ರವನ್ನು ಪ್ರಕಟ ಮಾಡುತ್ತಿಲ್ಲ. ಅವರ ಕುರಿತಾದ ಗೋಷ್ಠಿಗಳನ್ನು ಸಹ ಇರಿಸಲಾಗಿಲ್ಲ. ಇದು ಸಾಹಿತ್ಯ ಸಮ್ಮೇಳನಕ್ಕೆ ಕಪ್ಪು ಚುಕ್ಕಿಇದ್ದಂತೆ ಎಂದು ತಿಳಿ ಹೇಳಿದರು.

ಮೂರು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಮುಖ್ಯ ದ್ವಾರಕ್ಕೆ ಬಸವಣ್ಣನವರ ಹೆಸರನ್ನು ಇಡಬೇಕು. ಪ್ರಮುಖ ಸ್ಥಳಗಳಲ್ಲಿ ಬಸವಣ್ಣ ಹಾಗೂ ಕುವೆಂಪುರವರ ಭಾವಚಿತ್ರಗಳನ್ನು ಅಳವಡಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್, ಹೆಚ್.ವಿ.ಶಿವರುದ್ರಸ್ವಾಮಿ, ಶಿವಲಿಂಗಪ್ಪ, ಬೆಳ್ಳಪ್ಪ, ಎಲ್.ಡಿ.ನಂದೀಶ್, ಆನಂದಕುಮಾರ್ ಇದ್ದರು.

Continue Reading

Trending

error: Content is protected !!