Connect with us

Mysore

ಏ.2 ರಂದು ಚುಂಚನಹಳ್ಳಿ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ರಥೋತ್ಸವಕ್ಕೆ ಸಕಲ ಸಿದ್ಧತೆ

Published

on

ನಂಜನಗೂಡು ಮಾ.30

ಏ.2 ರಂದು ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಶ್ರೀ ಮಹದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಶುಕ್ರವಾರ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಿ ರಥೋತ್ಸವವನ್ನು ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸುಮಾರು 50 ಅಡಿ ಎತ್ತರದ ರಥೋತ್ಸವಕ್ಕೆ ಬಣ್ಣ ಬಣ್ಣದ ಬಟ್ಟೆ, ವಿವಿಧ ಬಗೆಯ ಹೂವುಗಳಿಂದ ಶೃಂಗಾರ ಮಾಡಲಾಗುತ್ತದೆ.
ಏ.1 ರಂದು ಸೋಮವಾರ ಸಂಜೆ 5 ಗಂಟೆಗೆ ರಥೋತ್ಸವಕ್ಕೆ ಪೂಜೆಯನ್ನು ಸಲ್ಲಿಸಿ ರಥಕ್ಕೆ ಕಳಸವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಸೋಮವಾರ ರಾತ್ರಿ ಶ್ರೀ ಕಡಕಲಕಟ್ಟೆ ಮಠದಿಂದ ಮಹದೇಶ್ವರಸ್ವಾಮಿಯ ಮೂರ್ತಿಯನ್ನು ರುದ್ರಾಕ್ಷಿ ಮಂಟಪದಲ್ಲಿ ಕುಳ್ಳಿರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಿ, ನಂತರ ಚುಂಚನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ದೇವರನ್ನು ತಂದು ಪ್ರತಿಷ್ಠಾಪನೆ ಮಾಡಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಏ.2 ರಂದು ಮಂಗಳವಾರ ಮುಂಜಾನೆ ಶ್ರೀ ಮಹದೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಫಲ ಪಂಚಾಮೃತ ಅಭಿಷೇಕ ಸೇರಿದಂತೆ ಹೋಮ-ಹವನ ಮಾಡಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಬೆಳಿಗ್ಗೆ 11 ಗಂಟೆಗೆ ಶ್ರೀ ಮಹದೇಶ್ವರ ಸ್ವಾಮಿಯ ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಲರವಿ ಉತ್ಸವ ಮಾಡಿ, ಮಹದೇಶ್ವರ ಸ್ವಾಮಿಯ ಮೂರ್ತಿಯನ್ನು ಹೊತ್ತುಕೊಂಡು ದೇವಾಲಯಕ್ಕೆ ಬರಲಾಗುತ್ತದೆ. ದೇವನೂರು ಗ್ರಾಮದಿಂದ ಕಾರಯ್ಯ, ವರಹಳ್ಳಿ ಗ್ರಾಮದಿಂದ ಬಿಲ್ಲಯ್ಯ, ಚುಂಚನಹಳ್ಳಿಯ ಮಹದೇಶ್ವರ ಸ್ವಾಮಿಯ ಜೊತೆ ಕಾರಯ್ಯ, ಬಿಲ್ಲಯ್ಯ ದೇವರನ್ನು ಹೊತ್ತವರು ದೇವಾಲಯದ ಮುಂಭಾಗದಲ್ಲಿ ಹಾಕುವ ಕೊಂಡೋತ್ಸವದಲ್ಲಿ ಕೊಂಡವನ್ನು ಹಾಯ್ದು ಹರಕೆ ತೀರಿಸಿಸುತ್ತಾರೆ. ನಂತರ ದೇವಾಲಯದ ಸುತ್ತಲೂ ಹುಲಿವಾಹನೋತ್ಸವವನ್ನು ಹೊತ್ತು ಭಕ್ತರು ಮೆರವಣಿಗೆ ಮಾಡಲಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ರಥೋತ್ಸವಕ್ಕೆ ಶ್ರೀ ಮಹದೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ, ಗ್ರಾಮದ ಯಜಮಾನರು ಪೂಜೆಯನ್ನು ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ದೇವಾಲಯದ ಸುತ್ತ ರಥವನ್ನು ಎಳೆದು ಭಕ್ತರು ಭಕ್ತಿ ಭಾವವನ್ನು ಮೆರೆಯುತ್ತಾರೆ. ರಾತ್ರಿ 10 ಗಂಟೆಗೆ ಜಾತ್ರಾ ಮಹೋತ್ಸವದ ಪ್ರಯುಕ್ತ ಭಕ್ತ ಪ್ರಹ್ಲಾದ ಎಂಬ ಪೌರಾಣಿಕ ನಾಟಕವನ್ನು ಆ ಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕವಲಂದೆ ಪೊಲೀಸ್ ಠಾಣೆಯ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading
Click to comment

Leave a Reply

Your email address will not be published. Required fields are marked *

Mysore

ಬಿಜೆಪಿ ಅಭ್ಯರ್ಥಿ ಬಾಲರಾಜ್ ಅನ್ನು ಗೆಲ್ಲಿಸಿ — ಚಿಕ್ಕರಂಗನಾಯಕ ನಂಜನಗೂಡಿನಲ್ಲಿ ಬಿಜೆಪಿ ಎಸ್.ಟಿ ಬೃಹತ್ ಸಮಾವೇಶ

Published

on

ನಂಜನಗೂಡು ಏ.24

ಬಿಜೆಪಿ ಪಕ್ಷ ನಾಯಕ ಸಮುದಾಯಕ್ಕೆ ವಾಲ್ಮೀಕಿ ಜಯಂತಿಯನ್ನು ಜಾರಿಗೆ ತಂದಿದ್ದಲ್ಲದೆ, ಜಿಪಂ, ತಾಪಂ ಮೀಸಲಾತಿ ಹೆಚ್ಚಿಸಿ ಸಮುದಾಯಕ್ಕೆ ಹೆಚ್ಚಿನ ರಾಜಕೀಯ ಶಕ್ತಿ ನೀಡುವ ಮೂಲಕ ಸಮುದಾಯದ ಅಭಿವೃದ್ದಿಗೆ ಕಾರಣವಾಗಿರುವ ಕಾರಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಮತಗಳನ್ನು ನೀಡಿ ಬಿಜೆಪಿ ಅಭ್ಯರ್ಥಿ ಬಾಲರಾಜುರನ್ನು ಗೆಲ್ಲಿಸಿ ಎಂದು ಮಾಜಿ ಜಿಪಂ ಸದಸ್ಯ ಹಾಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡ ಸಿ. ಚಿಕ್ಕರಂಗನಾಯಕ ಹೇಳಿದರು.

ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ್ದ ಎಸ್.ಟಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು , ಹತ್ತು ವರ್ಷದ ಮೋದಿ ಸರ್ಕಾರದಲ್ಲಿ ಒಬ್ಬ ಮಂತ್ರಿಯ ಮೇಲಿಯೂ ಸಣ್ಣ ಭ್ರಷ್ಟಾಚಾರದ ಆರೋಪಗಳಿಲ್ಲದೆ ದೇಶವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ದಿದ್ದಾರೆ. ಕಾಂಗ್ರೇಸ್ ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ಭಾಗದ ಪ್ರಮುಖ ಸಮಸ್ಯೆಯಾಗಿದ್ದ ತಳವಾರ, ಪರಿವಾರ ಸಮಸ್ಯೆಯನ್ನು ಬಗೆಹರಿಸಿದೆ ಅಲ್ಲದೆ ಶೇ3 ರಷ್ಟಿದ್ದ ಮೀಸಲಾತಿಯನ್ನು ಶೇ7ಕ್ಕೆ ಹೆಚ್ಚಳ ಮಾಡಿ ನಾಯಕ ಸಮುದಾಯಕ್ಕೆ ನೆರವು ನೀಡಿದೆ. ಬಿ.ಎಸ್.ಯಡೀಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಪ್ರಥಮಬಾರಿಗೆ ವಾಲ್ಮೀಕಿ ಜಯಂತೋತ್ಸವ ಆಚರಣೆಗೆ ಅವಕಾಶ ನೀಡುವ ಮೂಲಕ ಸಮಾಜ ಸಂಘಟನೆಗೊಳ್ಳಲು ಕಾರಣೋಭೂತವಾಗಿದೆ. ಅಲ್ಲದೆ ಬಿಜೆಪಿ ಸರ್ಕಾರದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ 28.375 ಸಾವಿರ ಕೋಟಿಗಳನ್ನು ಅನುದಾನ ನೀಡಿತ್ತು. ಕಾಂಗ್ರೇಸ್ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ದ್ರೋಹ ಬಗೆದಿದೆ. ಆದ್ದರಿಂದ ಎಸ್ಟಿ ಸಮುದಾಯದ ಏಳಿಗೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಕಾಂಗ್ರೇಸ್ ಪಕ್ಷದವರು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನ ಬದಲಾವಣೆ ಮಾಡುತ್ತದೆ ಎಂಬುದಾಗಿ ಸುಳ್ಳು ವದಂತಿ ಹರಡುತ್ತಿದೆ. ಸಂವಿಧಾನ ಮಗ್ಗಿ ಪುಸ್ತಕವಲ್ಲ ಬದಲಾವಣೆ ಮಾಡಲು ಎಂದು ಸಂಸದರಾದ ವಿ.ಶ್ರೀನಿವಾಸಪ್ರಸಾದ್ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಸಿ ಬಾಲರಾಜು ರವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಂಗಲ್ ರೆಸಾರ್ಟ್ ಮಂಡಳಿ ಮಾಜಿ ಅಧ್ಯಕ್ಷ ಅಪ್ಪಣ್ಣ, ವಿಧಾನ ಪರಿಷತ್ ಸದಸ್ಯರಾದ ಸಿದ್ದರಾಜು, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಮುದ್ದುಕೃಷ್ಣ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಾಜಿ ಮೇಯರ್ ಶಿವಕುಮಾರ್, ಮಾಜಿ ಜಿ.ಪಂ ಅಧ್ಯಕ್ಷ ರಾಮಚಂದ್ರ, ಮುಖಂಡ ಕುಂಬ್ರಳ್ಳಿ ಸುಬ್ಬಣ್ಣ, ಜಿಲ್ಲಾ ಉಪಾಧ್ಯಕ್ಷ ಹುಲ್ಲ ಹಳ್ಳಿ ಶಿವಣ್ಣ, ಬಿಜೆಪಿ ರಾಜ್ಯ ಕಾರ್ಯಾಕಾರಣಿ ಸದಸ್ಯ ಕಾರ್ಯ ಪ್ರಶಾಂತ್, ಎಸ್.ಟಿ. ಮೋರ್ಚಾ ಬಿಜೆಪಿ ಮಂಡಲ ಅಧ್ಯಕ್ಷರಾದ ಚಂದ್ರು, ಸೋಮೇಶ್, ಸುರೇಂದ್ರ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ
ಮುಸ್ಲಿಂ ಮಹಿಳೆಯೊಬ್ಬಳು ಮೋದಿ ಸರ್ಕಾರವನ್ನು ಬೆಂಬಲಿಸಿ ಎಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ನಗರ್ಲೆ ಗ್ರಾಮದ ನಾಜೀಯ ಬಾನು ಎಂಬ ಮಹಿಳೆ ಬಿಜೆಪಿ ಸರ್ಕಾರದಲ್ಲಿ ತ್ರಿವಳಿ ತಲಾಖ್ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಸೇರ್ಪಡೆಗೊಂಡಿರುವುದು ಎಲ್ಲರ ಗಮನವನ್ನು ಸೆಳೆದಿದೆ. ಇವರ ಜೊತೆ ಶಫಿ, ಜಬಿ ಸಾಥ್ ನೀಡಿದ್ದಾರೆ.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

ಈ ಬಾರಿ ಎನ್ ಡಿ ಎ 350ಕ್ಕೂ ಅಧಿಕ ಸೀಟು ಗಳಿಸಲಿದೆ-ಪ್ರೊ. ಕೆ.ಎಸ್. ರಂಗಪ್ಪ

Published

on

ವರದಿ:    ಎಸ್ ಬಿ  ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ದೇಶದಲ್ಲಿ ಎನ್ ಡಿ ಎ ಮತ್ತೆ ಅಧಿಕಾರಕ್ಕೆ ಬರಲಿದ್ದು,ಈ ಬಾರಿ 350ಕ್ಕೂ ಅಧಿಕ ಸೀಟುಗಳನ್ನು ಗಳಿಸಲಿದೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ,ಖ್ಯಾತ ವಿಜ್ಞಾನಿ ಪ್ರೊ. ಕೆ.ಎಸ್. ರಂಗಪ್ಪ ಹೇಳಿದ್ದಾರೆ.
ಸಾಲಿಗ್ರಾಮ ತಾಲೂಕಿನ ಹರದನಹಳ್ಳಿಯ ಮುಡಾ ಮಾಜಿ ಅಧ್ಯಕ್ಷ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹೆಚ್.ಎನ್. ವಿಜಯ್ ಅವರ ನಿವಾಸಕ್ಕೆ ಭೇಟಿ ನೀಡಿ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರ ಪರ ಮತಯಾಚಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಮೈತ್ರಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ 20ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿವೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ನಿಶ್ಚಿತ ಎಂದು‌ ಹೇಳಿದರು. ಮತಕ್ಕಾಗಿ ದೇಶದಲ್ಲಿ ಎಲ್ಲಾ ಪಕ್ಷಗಳು ಉಚಿತ ಸೌಲಭ್ಯಗಳ ಘೋಷಣೆ ತರವಲ್ಲ.ಉದ್ಯೋಗ ಸೃಷ್ಟಿ ಮಾಡಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸರ್ಕಾರಗಳು ಮುಂದಾಗಬೇಕು.ಉಚಿತ ಯೋಜನೆಗಳು(ಪ್ರೀಬೀಸ್) ರಾಜ್ಯ,ದೇಶವನ್ನು ದಿವಾಳಿ ಮಾಡಲಿವೆ.ವೆನಿಜುಯೆಲಾ ದೇಶ ಉಚಿತ ಸೌಲಭ್ಯಗಳನ್ನು ಕೊಟ್ಟು ಸಂಪೂರ್ಣ ದಿವಾಳಿಯಾಗಿದೆ ಎಂದರು.
ಬಡಜನರು,ಸಮಾಜದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ,ಮುಖ್ಯಮಂತ್ರಿಯಾಗಿ‌ ಮಾದರಿ‌ ಆಡಳಿತ ನೀಡಿದ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಹೆಚ್ಚು ಮತ ನೀಡಿ ಆಶೀರ್ವದಿಸಿ ಎಂದು ಮನವಿ ಮಾಡಿದರು.
ವಿಜಯ್ ಅವರಿಗೆ ಉತ್ತಮ ಭವಿಷ್ಯ:
ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ಹೆಚ್.ಎನ್.ವಿಜಯ್ ಅವರು ಸಜ್ಜನ ರಾಜಕಾರಣಿ.ಕೊಡುಗೈ ದಾನಿ,ವಿಜಯ್ ಅಂಥವರು ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೇರಿದರೆ ಸಮಾಜಕ್ಕೆ ಒಳಿತಾಗಲಿದೆ.ವಿಜಯ್ ಅವರು ಶಾಸಕರಾಗುವ ಎಲ್ಲಾ ಅರ್ಹತೆ ಹೊಂದಿದ್ದು,ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಯ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, , ,ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ.ಸೋಮಣ್ಣ,ಜೆಡಿಎಸ್ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಅಮಿತ್ ದೇವರಹಟ್ಟಿ,  ಮುಖಂಡರಾದ ಮೆಡಿಕಲ್  ರಾಜಣ್ಣ,   ಮಿರ್ಲೆ ರಾಜೀವ್,ಉಪ್ಪಾರ ಸಮಾಜದ ಮುಖಂಡರಾದ ಎಲ್ ಐಸಿ ನಿಂಗೇಗೌಡ,.ಟಿ.ಸೋಮಶೇಖರ್,  ಮಧುಚಂದ್ರ, ಜಿಲ್ಲಾ ಯೂನಿಯನ್ ಬ್ಯಾಂಕ್ ನಿರ್ದೇಶಕ ರಾಮೇಗೌಡ, , ರಾಜೇಶ್, ನಿಂಗಪ್ಪ, ಅನಂತ್, ಮುದುಗುಪ್ಪೆ ಕುಮಾರ್, ಸತೀಶ್, ಕೃಷ್ಣೇಗೌಡ, ರವಿ, ಅಂಕನಹಳ್ಳಿಶಿವಣ್ಣ, ಮಹೇಶ್, ಗೊಪಾಲ್, ಮೈಸೂರುಚಂದ್ರಣ್ಣ ಪ್ರದೀಪ್, ಮಂಜು ಸೇರಿದಂತೆ ಇನ್ನಿತರರು ಹಾಜರಿದ್ದರು

Continue Reading

Mysore

ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಒಕ್ಕಲಿಗ ಮುಖಂಡ ಮೈಸೂರಿನ ಡಾ.ಸುಶ್ರುತ್ ಗೌಡ.

Published

on

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರು,ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಕಾಕ್ಷಿ ಕಳೆದ ಎರಡು ವರ್ಷದಿಂದ ಟಿಕೆಟಿಗಾಗಿ ಪ್ರಯತ್ನಿಸಿದ್ದ ಮೈಸೂರಿನ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಪ್ರಭಾವಿ ಒಕ್ಕಲಿ ಗೌಡ ನಾಯಕ ಡಾ..ಸುಶ್ರುತ್ ಗೌಡ ಇಂದು ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ .

ಕಾಂಗ್ರೆಸ್ ಅಭ್ಯರ್ಥಿ ಆಗಿ ಅವರು ಈ ಬಾರಿ ಆಕಾಂಕ್ಷಿ ಆಗಿದ್ದರು.

ಚುನಾವಣೆಗೆ ಇನ್ನು ಎರಡು ದಿನಗಳಿರುವಾಗ ಸುಶ್ರುತ್ ಗೌಡ ಅವರ ಬಿಜೆಪಿ ಸೇರ್ಪಡೆ ಅಚ್ಚರಿ ಮೂಡಿಸಿದೆ..

Continue Reading

Trending

error: Content is protected !!