Connect with us

Mysore

ಗ್ರಾಮ ದೇವತೆ ಹಬ್ಬ ಪ್ರಯುಕ್ತ, ಮಾಂಸ ಮಾರಾಟ, ಹೋಟೆಲ್ ಬಂದ್, ಸರ್ವ ಜನಾಂಗದ ಒಮ್ಮತ

Published

on

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ ಪಟ್ಟಣದಲ್ಲಿ 10 ವರ್ಷಗಳಿಂದ ಗ್ರಾಮ ದೇವತೆ ಹಬ್ಬವನ್ನು ಕಾರಣಾಂತರಗಳಿಂದ  ಆಚರಣೆ ಮಾಡದೆ, ಇಂದಿನಿಂದ ಪ್ರಾರಂಭವಾಗಿ  17 ದಿನಗಳವರೆಗೂ   ಸರ್ವ ಜನಾಂಗವೂ   ಸಹ  ಹಬ್ಬ ಮಾಡಲು ಸಜ್ಜಾಗಿದ್ದಾರೆ.

ಇಂದು ಸುಂಕದ ಮಾರಮ್ಮ ಹಬ್ಬವನ್ನು ಎಲ್ಲರೂ ವಿಧಿ ವಿಧಾನ ಗಳೊಂದಿಗೆ ಆಚರಣೆ ಮಾಡಿದರು.

ನಂತರ ಮಾರಮ್ಮ ದೇವಿ ಹಬ್ಬ, ಆಂಜನೇಯ ಸ್ವಾಮಿ ಹಬ್ಬ, ಸಾಮೂಹಿಕ ಅನ್ನ ಸಂತರ್ಪಣೆ, ಹಾಗೂ ಬಂಡಿ ಹಬ್ಬ , ಕೊನೆಯ ದಿವಸ ಕಾಲುವೆ ಅಮ್ಮನವರ ಹಬ್ಬ ಇವುಗಳನ್ನು ನಡೆಸಲು ಸಣ್ಣ ಪುಟ್ಟ ಸಮಾಜ, ಮುಸ್ಲಿಂ ಸಮಾಜ ಸೇರಿದಂತೆ ಸೂಕ್ಷ್ಮತೀ ಸೂಕ್ಷ್ಮ ಸಮಾಜದವರು ಸಹ ಸಡಗರ ಸಂಭ್ರಮದಲ್ಲಿ ಹಬ್ಬ  ಆಚರಿಸಲು ಪ್ರಾರಂಭಿಸಿದರು.

ವಿಶೇಷತೆ ಏನೆಂದರೆ ಗ್ರಾಮದಲ್ಲಿ ಕೋಳಿ ಮಾಂಸ, ಕುರಿ, ಮೇಕೆ ಸೇರಿದಂತೆ ಮಾಂಸಾಹಾರಿ ಪ್ರಾಣಿಗಳನ್ನು ಮಾರಾಟ ಮಾಡದೆ, ಮಾಂಸಾಹಾರಿ  ಹೋಟೆಲ್ ನಡೆಸದೆ, ಪುಟ್ ಪಾತ್ ಗಳಲ್ಲಿಯೂ  ಸಹ ಎಗ್ ರೈಸ್, ಕಬಾಬ್ ಇವುಗಳನ್ನು ಹಬ್ಬ ಮುಗಿಯುವತನಕ ವ್ಯಾಪಾರ ಮಾಡದೆ ಎಲ್ಲರೂ ಗ್ರಾಮ ದೇವತೆಗೆ ತಲೆ ಭಾಗಿದ್ದಾರೆ.

ಅಲ್ಲಾ , ಶಿವಾ, ಎರಡು ಒಂದೇ, ದೇವನೊಬ್ಬನೇ ಆದ್ದರಿಂದ  ಹಬ್ಬ ಮುಗಿಯುವ ತನಕ     ಕುರಿ, ಮೇಕೆ ಗಳನ್ನು ತಂದು  ಮಾಂಸದ ಅಂಗಡಿ ತೆರೆದು   ವ್ಯಾಪಾರ ಮಾಡುವುದಿಲ್ಲ. ಗ್ರಾಮಕ್ಕೆ ಒಳ್ಳೆಯದು ಆಗಬೇಕು ಎಂದು ಮುಸ್ಲಿಂ ಸಮಾಜದ ಮಾಂಸ ವ್ಯಾಪಾರಿ ಮಾಲೀಕ ಅಣ್ಣು ಸಾಬ್ ತಿಳಿಸಿದರು.

10 ವರ್ಷ ಗಳಿಂದ ಹಬ್ಬ ಮಾಡಿರಲಿಲ್ಲ ಆದರೆ ಈಗ ನಮ್ಮಗಳ ಪುಣ್ಯ, ಹಬ್ಬ ಮಾಡಲು,  ಗ್ರಾಮದಲ್ಲಿ ಎಲ್ಲರ ಸಹಕಾರ ದೊಂದಿಗೆ  ಸರ್ವ ಜನಾಂಗವೂ ಸಹ ಹಬ್ಬ ಮಾಡುತ್ತಿರುವುದು ಸಂತಸ ತಂದಿದೆ ಎಂದು ದಲಿತ ಸಮಾಜದ ಮುಖಂಡ ಕಂಠಿ ಕುಮಾರ್ ರವರು ಮಾತನಾಡಿದರು. 

Continue Reading
Click to comment

Leave a Reply

Your email address will not be published. Required fields are marked *

Mysore

ಬೆಲೆ ಏರಿಕೆಯ ಬೆಂಕಿಯಲ್ಲಿ ಬಿದ್ದವರ ನೆರವಿಗಾಗಿ ಗ್ಯಾರಂಟಿ ಯೋಜನೆ ಘೋಷಿಸಿದ್ದೂ ಆಯ್ತು, ಜಾರಿ ಮಾಡಿದ್ದೂ ಆಯ್ತು: ಸಿ.ಎಂ.ಸಿದ್ದರಾಮಯ್ಯ

Published

on

ಮೈಸೂರು ಜಿಲ್ಲೆಯ ಅಭಿವೃದ್ಧಿಗೆ- ಮೈಸೂರು ಜನರ ಪ್ರಗತಿಗೆ ಬಿಜೆಪಿ ಇವತ್ತಿನವರೆಗೂ ಒಂದೇ ಒಂದು ಕಾರ್ಯಕ್ರಮವನ್ನೂ ಮಾಡಲೇ ಇಲ್ಲ ಏಕೆ? ಸಿ.ಎಂ ಸಿದ್ದರಾಮಯ್ಯ ಆಕ್ರೋಶದ ಪ್ರಶ್ನೆ

ಬೆಲೆ ಏರಿಕೆಯ ಬೆಂಕಿಯಲ್ಲಿ ಬಿದ್ದವರ ನೆರವಿಗಾಗಿ ಗ್ಯಾರಂಟಿ ಯೋಜನೆ ಘೋಷಿಸಿದ್ದೂ ಆಯ್ತು, ಜಾರಿ ಮಾಡಿದ್ದೂ ಆಯ್ತು: ಸಿ.ಎಂ.ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳ ಐದು ಕೋಟಿ ಫಲಾನುಭವಿಗಳನ್ನು ಅವಮಾನಿಸಬೇಡಿ. ಗ್ಯಾರಂಟಿಗಳು ಕನ್ನಡ ನಾಡಿನ ಜನತೆಯ ಹಕ್ಕು: ಬಿಜೆಪಿಗೆ ಸಿ.ಎಂ ಎಚ್ಚರಿಕೆ

ಭಾರತೀಯರ ಖಾತೆಗೆ 15 ಲಕ್ಷ ಇರಲಿ, 15 ಪೈಸೆಯೂ ಹಾಕಲಿಲ್ಲವಲ್ಲ ಏಕೆ ಮೋದಿಯವರೇ ? ಸಿ.ಎಂ. ಪ್ರಶ್ನೆ

ಮೈಸೂರು ಮಾ 15: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಐದು ಕೋಟಿ ಫಲಾನುಭವಿಗಳನ್ನು ಅವಮಾನಿಸಬೇಡಿ. ಗ್ಯಾರಂಟಿಗಳು ಕನ್ನಡ ನಾಡಿನ ಜನತೆಯ ಹಕ್ಕು ಎಂದು ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಆಯೋಜಿಸಿದ್ದ ಚಾರಿತ್ರಿಕ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಬೆಲೆ ಏರಿಕೆಯ ಬೆಂಕಿಯಲ್ಲಿ ಬಿದ್ದವರ ನೆರವಿಗಾಗಿ ಗ್ಯಾರಂಟಿ ಯೋಜನೆ ಘೋಷಿಸಿದ್ದೂ ಆಯ್ತು, ಜಾರಿ ಮಾಡಿದ್ದೂ ಆಯ್ತು ಎಂದು ನುಡಿದರು.

ನಮ್ಮ ಗ್ಯಾರಂಟಿಗಳು ಬಿಜೆಪಿಯವರ ಮನೆ ಬಾಗಿಲಿಗೂ ಮುಟ್ಟಿದೆ. ಬಿಜೆಪಿಯ ಮತದಾರರೂ ಕಾಂಗ್ರೆಸ್ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ. ಇವರನ್ನು ಅವಮಾನಿಸಬೇಡಿ. ನಮ್ಮ ಗ್ಯಾರಂಟಿಗಳು ನಾಡಿನ‌ ಜನರ ಹಕ್ಕು ಎಂದು ಪುನರುಚ್ಛರಿಸಿ ಬಿಜೆಪಿ ನಾಯಕರಿಗೆ ತಿವಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯೇ ಆಗಲ್ಲ ಎಂದು ನರೇಂದ್ರ ಮೋದಿ, ಬೊಮ್ಮಾಯಿ, ಆರ್.ಅಶೋಕ್, ವಿಜಯೇಂದ್ರ ಎಲ್ಲರೂ ಸುಳ್ಳಿನ ಮೇಲೆ ಸುಳ್ಳು ಹೇಳಿದರು.

ನಾವು ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಆಗ ಹೊಸ ಸುಳ್ಳು ಹಬ್ಬಿಸಿದರು. ಗ್ಯಾರಂಟಿಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದರು. ಆದರೆ ನಾವು ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೊರತಾದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಮೀಸಲಿಟ್ಟೆವು. ಹೀಗಾಗಿ ಬಿಜೆಪಿಯ ಈ ಮಾತು ಕೂಡ ಸುಳ್ಳಾಯಿತು.

ಹೀಗೆ ಬಿಜೆಪಿಮಂದಿ ಮೊದಲಿಗೆ ನಮ್ಮ ಗ್ಯಾರಂಟಿಗಳನ್ನು ಆಡಿಕೊಂಡು, ಸುಳ್ಳು ಹೇಳಿದರು. ಆದರೆ ನಮ್ಮ ಗ್ಯಾರಂಟಿಗಳು ಯಶಸ್ವೀ ಜಾರಿ ಆದ ಬಳಿಕ ನಮ್ಮದೇ ಗ್ಯಾರಂಟಿ ಸ್ಕೀಂಗಳನ್ನು ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೆಸರಿಟ್ಟಿದ್ದಾರೆ ಎಂದು ಟೀಕಿಸಿದರು.

ನಾವು ನುಡಿದಂತೆ ನಡೆದಿದ್ದೇವೆ: ಬಿಜೆಪಿ ಸುಳ್ಳುಗಳನ್ನೇ ನುಡಿದಿದ್ದಾರೆ

ನಾವು ನುಡಿದಂತೆ ನಡೆದಿದ್ದೇವೆ: ಬಿಜೆಪಿ ಸುಳ್ಳುಗಳನ್ನೇ ನುಡಿದಿದ್ದಾರೆ. ತಾನು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ರೂ ಹಾಕುವುದಾಗಿ ಮೋದಿ ಘೋಷಿಸಿದ್ದರು. 15 ಲಕ್ಷ ಇರಲಿ, 15 ಪೈಸೆನಾದ್ರೂ ಯಾರಿಗಾದರೂ ಹಾಕಿದರಾ? ಬಿಜೆಪಿಯವರಾಗಲಿ, ಮೋದಿಯವರಾಗಲೀ ಚುನಾವಣೆಯಲ್ಲಿ ಕೊಟ್ಟ ಭರವಸೆಗಳಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ ಎಂದು ಪ್ರಶ್ನಿಸಿ ಎಂದರು.

ಮೈಸೂರಿನ ಅಭಿವೃದ್ಧಿಗೆ-ಮೈಸೂರು ಜನತೆಯ ಪ್ರಗತಿಗೆ ಏನು ಮಾಡಿದ್ರಿ? ಬಿಜೆಪಿಗೆ ಸಿ.ಎಂ.ಪ್ರಶ್ನೆ
ಮೈಸೂರು ಜಿಲ್ಲೆಯ ಅಭಿವೃದ್ಧಿಗೆ- ಮೈಸೂರು ಜನರ ಪ್ರಗತಿಗೆ ಬಿಜೆಪಿ ಇವತ್ತಿನವರೆಗೂ ಒಂದೇ ಒಂದು ಕಾರ್ಯಕ್ರಮವನ್ನೂ ಮಾಡಲೇ ಇಲ್ಲ ಏಕೆ ಎಂದು ಸಿ.ಎಂ ಸಿದ್ದರಾಮಯ್ಯ ಆಕ್ರೋಶದಿಂದ ಪ್ರಶ್ನಿಸಿದರು.

ಆಸ್ಪತ್ರೆ, ಕಾಲೇಜು, ಮಾರುಕಟ್ಟೆ , ರಸ್ತೆ, ನೀರು ಸೇರಿ ಮೈಸೂರಿನ ಎಲ್ಲಾ ಪ್ರಗತಿ ಕಾರ್ಯಕ್ರಮಗಳಿಗೆ ನಮ್ಮ ಸರ್ಕಾರ ನಿರಂತರವಾಗಿ ಅನುದಾನ ನೀಡುತ್ತಲೇ ಬಂದಿದೆ. ಈ ಬಜೆಟ್ ನಲ್ಲೂ ಹಣ ಮೀಸಲಿಟ್ಟಿದ್ದೇವೆ ಎಂದು ವಿವರಿಸಿದರು.

ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಮಾಜಿ ಸಚಿವರಾದ ಶಾಸಕ ತನ್ವೀರ್ ಸೇಠ್, ಗ್ಯಾರಂಟಿ ಯೋಜನೆಗಳ ಜಾರಿ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪ ಅಮರ್ ನಾಥ್ , ಆಶ್ರಯ ಸಮಿತಿ ಅಧ್ಯಕ್ಷರಾದ ಡಾ.ಯತೀಂದ್ರ ಉಪಸ್ಥಿತರಿದ್ದರು.

ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಅವರು ಅಧ್ಯಕ್ಷತೆ ವಹಿಸಿದ್ದ ಬೃಹತ್ ಸಮಾವೇಶದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಶಾಸಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Continue Reading

Mysore

ಹನಸೋಗೆ ಗ್ರಾಮದಲ್ಲಿ ಶ್ರೀನಿವಾಸ ದೇವರ ಬ್ರಹ್ಮ ರಥೋತ್ಸವ

Published

on

ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮದಲ್ಲಿ ನಡೆದ ಶ್ರೀನಿವಾಸ ದೇವರ ರಥೋತ್ಸವ ಹಿನ್ನಲೆಯಲ್ಲಿ ಉತ್ಸವ ದೇವರ ಮೂರ್ತಿಯನ್ನು ಶಾಸಕ ಡಿ.ರವಿಶಂಕರ್ ಹೊತ್ತು ಒಂದು ಸುತ್ತು ಮೆರವಣಿಗೆ ನಡೆಸಿ ಪೂಜೆ ಸಲ್ಲಿಸಿದರು.

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮದಲ್ಲಿ ಶ್ರೀನಿವಾಸ ಸ್ವಾಮಿ ದೇವರ ಬ್ರಹ್ಮರಥೋತ್ಸವ  ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿಂದ ನೆರವೇರಿತು.
ಶಾಸಕ ಡಿ.ರವಿಶಂಕರ್ ಶ್ರೀನಿವಾಸ ದೇವಾಯಲದಲ್ಲಿ ಪೂಜೆ ಸಲ್ಲಿದ ನಂತರ ಭಕ್ತಾದಿಗಳ ಸಮೂಹದ ಜೈಕಾರದ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಮುಂಜಾನೆಯಿಂದಲೇ ಹೋಮ-ಹವನ ಸೇರಿದಂತೆ ಧಾರ್ಮಿಕ ಕಾರ್ಯಗಳು ಜರುಗಿದವು.
ದೇವರಿಗೆ ವಿವಿಧ ಬಗೆಯ ಅಭಿಷೇಕ ನಡೆಸಿ ವಿಶೇಷ ಪುಷ್ಪಗಳಿಂದ ಅಲಂಕಾರ ಮಾಡಿದ ದೇವರ ಮೂರ್ತಿಯನ್ನು ಪ್ರಾಂಗಣದಲ್ಲಿ ಶೃಂಗರಿಸಿ ನಿಲ್ಲಿಸಲಾಗಿದ್ದ, ರಥಕ್ಕೆ ಶ್ರೀನಿವಾಸ ಸ್ವಾమి ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಅರ್ಚಕ ವೃಂದದಿಂದ ಧಾರ್ಮಿಕ విధి ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ನಂತರ ಭಕ್ತರ ಸಮ್ಮುಖದಲ್ಲಿ ದೇವರಿಗೆ ಮಹಾಮಂಗಳಾರತಿ ಮಾಡಿದ ಬಳಿಕ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತಾದಿಗಳು ಭಕ್ತಿಯಿಂದ ಜಯಕಾರ ಘೋಷಣೆಯೊಂದಿಗೆ ರಥವನ್ನು ಎಳೆದರು.
ಗ್ರಾಮದಲ್ಲಿ  ಮಹಿಳಾ ಭಕ್ತರು ರಥ ಬೀದಿ ಯನ್ನು ಸ್ವಚ್ಛಗೊಳಿಸಿ,ಬಣ್ಣ ಬಣ್ಣದ ಚಿತ್ತಾರದ ರಂಗೋಲಿ ಬಿಡಿಸಿದ ಬೀದಿಗೆ ಬರಮಾಡಿಕೊಂಡು ರಥಕ್ಕೆ ಹಣ್ಣು ಜವನ ಎಸೆಯುತ್ತ ತಮ್ಮ ಇಷ್ಟಾರ್ಥ ಗಳು ನೆರವೇರಲಿ ಎಂದು  ಹಣ್ಣು ಕಾಯಿ ನೀಡಿ ದೇವರಲ್ಲಿ ಶ್ರದ್ದಾ ಭಕ್ತಿಯಿಂದ ಪ್ರಾರ್ಥಿಸಿದರು.
ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮದಲ್ಲಿ ಶ್ರೀನಿವಾಸ ದೇವರ ಬ್ರಹ್ಮ ರಥೋತ್ಸವ ನಡೆಯಿತು
ಈ ಸಂದರ್ಭದಲ್ಲಿ , ಬ್ರಾಹ್ಮಣ ಸಂಘದ ಅಧ್ಯಕ್ಷ ಕೇಶವಮೂರ್ತಿ ತಾ.ಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವ ಸ್ವಾಮಿ, ,ಮುಖಂಡರಾದ   ಕರೀಗೌಡ, ರೂಪಲವ  ನವೀನ್ ಕುಮಾರ್,  ಕೃಷ್ಣ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಮಹೇಶ್ ಕುಮಾರ್, ನಿವೃತ್ತ ಪೊಲೀಸ್ ಸಿದ್ದಯ್ಯ,  ಸೊಸೈಟಿ ಮಾಜಿ ಅಧ್ಯಕ್ಷ ಪಾಂಡು, ಆಪ್ತಸಹಾಯ ನವೀನ್.ಪುನೀತ್ ಸೇರಿದಂತೆ   ಇನ್ನಿತರರು  ಇದ್ದರು.

Continue Reading

Mysore

ಒಂದೆಡೆ  ನೀರಿಗಾಗಿ  ಪರದಾಟ, ಮತ್ತೊಂದೆಡೆ ನೀರು ಪೋಲಾಗುತ್ತಿರುವುದು

Published

on

ಸಾಲಿಗ್ರಾಮ: ಪಟ್ಟಣದ ಹೊರ ಭಾಗದಲ್ಲಿ  ಹಾದು ಹೋಗಿರುವ ಕುಡಿಯುವ ನೀರಿನ ರೈಸಿಂಗ್ ಪೈಪ್  ಹಲವು     ದಿನಗಳಿಂದ ಹೊಡೆದು ಹೋಗಿ ನೀರು ಪೋಲಾಗುತ್ತಿದ್ದರು ಸಹ ಸಂಬಂಧ ಪಟ್ಟ  ಇಲಾಖೆಯವರು ಮಾತ್ರ ತಮಗೆ ಏನೂ ಗೊತ್ತಿಲ್ಲ ಎಂಬಂತೆ ಮೌನವಾಗಿದ್ದಾರೆ.

ಕೋಟ್ಯಾಂತರ  ರೂಗಳ ಖರ್ಚು ಮಾಡಿ, ಕುಡಿಯುವ ನೀರು, ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು  ಮಾಡಿರುತ್ತಾರೆ. ಆದರೆ ಅಧಿಕಾರಿಗಳ ನಿರ್ಲಕ್ಷಕ್ಕೆ ನೀರು ಪೋಲಾಗಿ ಜಮೀನಿನಲ್ಲಿ ಹರಿಯುತ್ತಿದೆ.

ಜಪಟಕಟ್ಟೆ ಸಮೀಪದ ಕಾವೇರಿ ನದಿಯಿಂದ ಕುಡಿಯುವ ನೀರಿನ ರೈಸಿಂಗ್ ಪೈಪ್ ಅನ್ನು ಅಳವಡಿಸಿ ಸಾಲಿಗ್ರಾಮ – ಭೇರ್ಯ ಮುಖ್ಯ ರಸ್ತೆಯಲ್ಲಿ  ಹಾದು ಮೇಲೂರು ಮತ್ತು ಮುಂಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಪೈಪ್ ಲೈನ್  ಅಳವಡಿಸಿರುತ್ತಾರೆ.

ಕೆ – ಶಿಪ್ ರವರ ಕೆ ಎನ್ ಆರ್ ಕಂಪನಿಯವರು ರಸ್ತೆ ಅಗಲೀಕರಣ ಕಾಮಗಾರಿ ಮಾಡುವ ಸಂದರ್ಭದಲ್ಲಿ ಅಳವಡಿಸಿದ್ದ ರೈಸಿಂಗ್  ಪೈಪ್ ಗಳನ್ನು ತೆಗೆದು ಹಾಕಿ, ತಮ್ಮ ಅಳತೆಯ ರಸ್ತೆ ಕಾಮಗಾರಿಯ ಪಕ್ಕದಲ್ಲಿಯೇ ಕುಡಿಯುವ ನೀರಿನ ಪೈಪ್ ಗಳನ್ನು ಅಳವಡಿಸಿರುತ್ತಾರೆ. ಆದರೆ ಇದನ್ನು ಸಮರ್ಪಕವಾಗಿ ಪೈಪ್ ಗಳನ್ನು ಅಳವಡಿಸದೆ ನೀರು ಈ ರೀತಿ ಪೋಲಾಗುತ್ತಿದೆ   ಎಂದು  ದ ಸಂ ಸ ಜಿಲ್ಲಾ ಸಂಚಾಲಕ ಚಂದ್ರು ರವರು ಆರೋಪಿಸಿದ್ದಾರೆ.

ಮುಖ್ಯ ರಸ್ತೆಯಲ್ಲಿ   ಬರುವ ಮೂಡಲಬೀಡು ಗೇಟ್ ಬಳಿ ರೈಸಿಂಗ್ ಪೈಪ್ ಹೊಡೆದು ಹೋಗಿ  ಪ್ರತಿ ದಿನ ನೀರು ಹರಿದು ಪೋಲಾಗುತ್ತಿದೆ.ಇದನ್ನು ನೋಡಿದ ಜನತೆ ನೀರೆಲ್ಲಾ ಇಲ್ಲೇ ಹರಿದು ಹೋಗುತ್ತಿದೆ. ಸಮರ್ಪಕವಾಗಿ ಇದನ್ನು ಬಳಸಿದರೆ ಹಲವು ಗ್ರಾಮಗಳಿಗೆ ಜನ – ಜಾರುವಾರುಗಳಿಗೆ ಅನುಕೂಲವಾಗುತ್ತದೆ. ಬೇಸಿಗೆಯ ಬರದಲ್ಲಿಯೂ ಸಹ ಕುಡಿಯುವ  ನೀರು ನಷ್ಟವಾಗುತ್ತಿದೆ. ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು ಇತ್ತೀಚಿಗೆ ಅಧಿಕಾರಿಗಳ ಸಭೆ ಕರೆದು ಬೇಸಿಗೆ ಸಮಯ ಬಂದಿದೆ. ಕುಡಿಯುವ ನೀರಿನ ಸರಬರಾಜು ಮತ್ತಿತರ ಸವಲತ್ತುಗಳನ್ನು ಒದಗಿಸಲು ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು,  ಯಾರೇ ಫೋನ್ ಮಾಡಿದರೂ ಸ್ವೀಕರಿಸಿ ಮಾತನಾಡಿ, ಈಗಾಗಲೇ  ಬರದ ಪರಿಸ್ಥಿತಿ ಬಂದೊದಗಿದೆ, ಈ ವಿಚಾರವಾಗಿ ನಿರ್ಲಕ್ಷ ವಹಿಸುವವರ ವಿರುದ್ದ ಕಠಿಣ ಕ್ರಮ ಕೈ ಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದರೂ ಸಹ ಅಧಿಕಾರಿಗಳು ಮಾತ್ರ ಶಾಸಕರ ಮಾತನ್ನು ಲೆಕ್ಕಿಸದೆ ನಿರ್ಲಕ್ಷ ಮಾಡಿರುತ್ತಾರೆ.

ಪತ್ರಿಕೆಯೊಂದಿಗೆ ಮಾತನಾಡಲು ಕುಡಿಯುವ ನೀರು ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರಿಗೆ ಫೋನ್ ಮಾಡಿದ್ದರೂ ಸಹ ಸ್ವೀಕರಿಸದೆ ನಿರ್ಲಕ್ಷ ಮಾಡಿರುತ್ತಾರೆ.

ಈಗಲಾದರೂ  ಅಧಿಕಾರಿಗಳು   ಎಚ್ಛೆತ್ತುಕೊಂಡು ನೀರು ಪೋಲಾಗದಂತೆ ಕ್ರಮ ಜರುಗಿಸಿ, ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡುವರೇ ಕಾದು ನೋಡಬೇಕಾಗಿದೆ

Continue Reading

Trending

error: Content is protected !!