Connect with us

Hassan

ಮಾ.17 ರಿಂದ 19 ರ ವರೆಗೂ ಸೊಂಪುರದ ಶ್ರೀ ಪಾರ್ವತಿ ನಂಜುಂಡೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವವರದಿ ಸತೀಶ್ ಚಿಕ್ಕಕಣಗಾಲು

Published

on

ಆಲೂರು : ತಾಲ್ಲೂಕಿನ ಸೊಂಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ನಂಜುಂಡೇಶ್ವರಸ್ವಾಮಿ ಮತ್ತು ಪಾರ್ವತಮ್ಮ ದೇವಿಯವರ ಗಿರಿಜಾ ಕಲ್ಯಾಣೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಮಾರ್ಚ್‌ 17 ರಿಂದ ಮಾರ್ಚ್‌ 19 ರವರೆಗೆ ನೆರವೇರಲಿದ್ದು ಭಕ್ತರು ಪ್ರತಿ ವರ್ಷದಂತೆ ಈ ವರ್ಷವೂ
ಹೆಚ್ಚಿನ ಸಂಖ್ಯೆಯಲ್ಲಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದ ಸೇವಾ ಟ್ರಸ್ಟ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮಾ.18 ನೇ ಸೋಮವಾರ ರಾತ್ರಿ 8.30 ರಿಂದ ಸೊಂಪುರ ಗ್ರಾಮದಿಂದ ಶ್ರೀ ನಂಜುಂಡೇಸ್ವರಸ್ವಾಮಿ ಮತ್ತು ಪಾರ್ವತಿ ದೇವಿಯವರ ಕಳಸದೊಂದಿಗೆ ಹಾಗೂ ಸುತ್ತಮುತ್ತಲಿನ ಗ್ರಾಮದ ದೇವರುಗಳ ಕಳಸದೊಂದಿಗೆ ಕಲಾತಂಡಗಳಾದ ವೀರಗಾಸೆ ನೃತ್ಯ,ನಂದಿಧ್ವಜ,ಕೀಲು ಕುದುರೆ ಕುಣಿತ ಉತ್ಸವದೊಂದಿಗೆ ಶ್ರೀ ನಂಜುಂಡೇಸ್ವರಸ್ವಾಮಿ ಬೆಟ್ಟಕ್ಕೆ ಆಗಮನದ ನಂತರ ಎಲ್ಲಾ ದೇವರುಗಳನ್ನು ಬರಮಾಡಿಕೊಂಡು ಅದೇ ದಿನ ರಾತ್ರಿ 11 ಘಂಟೆಯಿಂದ ಶ್ರೀ ನಂಜುಂಡೇಶ್ವರ ಮತ್ತು ಪಾರ್ವತಿ ದೇವಿಯವರ ಮದುವೆಯ ಎಲ್ಲಾ ಶಾಸ್ತ್ರಗಳನ್ನು ಬೆಳಗಿನ ಜಾವದ ತನಕ ನಡೆಸಲಾಗುವುದು. ಮಾ.19 ನೇ ಮಂಗಳವಾರ ಬೆಳಿಗ್ಗೆ 4 ಘಂಟೆಯಿಂದ ಹಲಿಗೆ ದೇವರ ಕುಣಿತ ಹಾಗೂ ವೀರಗಾಸೆ ನೃತ್ಯದ ಮೂಲಕ ಸ್ವಾಮಿಯವರ ಕಳಸದೊಂದಿಗೆ ಪಾದ ಮಂಟಪ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಸುಮಾರು ಬೆಳಿಗ್ಗೆ 7 ಗಂಟೆಗೆ ಬೆಟ್ಟಕ್ಕೆ ಆಗಮಿಸಿ ಮಾ.19 ನೇ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ವೀರಭದ್ರೇಶ್ವರಸ್ವಾಮಿಯವರ (ದೊಡ್ಡ ಕಣಗಾಲ್) ಕೆಂಡತ್ಸೋವ ವಿದಿವಧಾನಗಳೊಂದಿಗೆ ಶ್ರೀ. ಶ್ರೀ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಪುಷ್ಪಗಿರಿ ಮಹಾ ಸಂಸ್ಥಾನ ಮಠ ಹಳೆಬೇಡು ಇವರ ದಿವ್ಯ ಸಾನಿಧ್ಯದಲ್ಲಿ ಕೆಂಡೋತ್ಸವ ನಡೆಸಲಾಗುವುದು.

ಕಾರ್ಯಕ್ರಮಕ್ಕೆ ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಶಂಭುನಾಥ ಮಹಾಸ್ವಾಮಿಗಳು, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಸಿಮೆಂಟ್ ಮಂಜುನಾಥ್, ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಸ್ವರೂಪ್, ಮಾಜಿ ಶಾಸಕ ಪ್ರೀತಮ್ ಜೆ ಗೌಡ, ಹೆಚ್.ಕೆ.ಕುಮಾರಸ್ವಾಮಿ, ಹೆಚ್.ಎ.ವಿಶ್ವನಾಥ್, ಬಿ.ಆರ್.ಗುರುದೇವ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ತಾಲೂಕು ಅಧ್ಯಕ್ಷ ಹುಲ್ಲಹಳ್ಳಿ ನಾಗರಾಜ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Hassan

ಪದವೀಧರರಿಂದ 6, 7 ನೇ ತರಗತಿಗೆ ಪಾಠ:  ಸಚಿವ ಸಂಪುಟ ಅನುಮೋದನೆ ಸ್ವಾಗತಾರ್ಹವೆಂದ ದೇವೇಗೌಡ, ಮಹೇಶ್

Published

on

ಅರಸೀಕೆರೆ: ಪದವೀಧರ ಶಿಕ್ಷಕರುಗಳು ಆರು ಮತ್ತು ಏಳನೇ ತರಗತಿಗೂ ಬೋಧಿಸಲು ಸಚಿವ ಸಂಪುಟ ಅನುಮೋದಿಸಿರುವುದನ್ನು ತಾಲೂಕ್ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ದೇವೇಗೌಡ ಮತ್ತು ಕಾರ್ಯದರ್ಶಿ ಮಹೇಶ್ ಸ್ವಾಗತಾರ್ಹವೆಂದು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ.

ನಗರದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಆರು ಮತ್ತು ಏಳನೇ ತರಗತಿಗೆ ಬೋಧಿಸಲು ಟಿಇಟಿ ಕಡ್ಡಾಯ ಎಂಬ ನಿಯಮವನ್ನು ಸಡಿ ಲಿಸುವ ಮೂಲಕ ಸುಮಾರು 1. 50 ಲಕ್ಷ ಶಿಕ್ಷಕರಿಗೆ ನಿರಾಳ ದೊರೆತಂತೆ ಆಗಿದೆ ಸಚಿವ ಸಂಪುಟದಲ್ಲಿ ಮಹತ್ವ ನಿರ್ಧಾರವನ್ನು ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಸಚಿವ ಸಂಪುಟಕ್ಕೂ ನಮ್ಮ ಸಂಘವು ಆಭಾರಿಯಾಗಿದೆ ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ.

6 ಮತ್ತು 7ನೇ ತರಗತಿಗೆ ಬೋಧಿಸುವ ಶಿಕ್ಷಕರುಗಳಿಗೆ ಇತರ ಶಿಕ್ಷಕರುಗಳಂತೆ ಸೌಲಭ್ಯಗಳು ಸಹ ಒದಗಬೇಕೆಂದು ಅವರು ಮನವಿ ಮಾಡಿದ್ದಾರೆ.


ಪ್ರಸ್ತುತ ಈವರೆಗೂ ಒಂದರಿಂದ ಏಳನೇ ತರಗತಿಯವರೆಗೆ ಬೋಧಿಸುತ್ತಲೇ ಬಂದಿರುವ ಶಿಕ್ಷಕರುಗಳು 15, 20 ವರ್ಷಗಳ ಸೇವೆಯ ಅನುಭವ ಹೊಂದಿದ್ದು ಗುಣಮಟ್ಟದ ಶಿಕ್ಷಣ ನೀಡುತ್ತಲೇ ಬಂದಿದ್ದೇವೆ. ಸಚಿವ ಸಂಪುಟದ ಈ ನಿರ್ಧಾರ ಶಿಕ್ಷಕರಿಗೆ ಬೋಧಾನ ಪೂರಕ ವಾತಾವರಣವನ್ನು ಕಲ್ಪಿಸಿದಂತಾಗಿದೆ ಎಂದು  ಹೇಳಿದರು.

Continue Reading

Hassan

ಸುತ್ತೂರು ಜಾತ್ರಾ ಮಹೋತ್ಸವ ಕೇವಲ ಭಕ್ತಿಯ ಮಾತ್ರವಲ್ಲ ಜ್ಞಾನ, ಶರಣ ಸಂಸ್ಕೃತಿಯ ಮಹಾ ಭಂಡಾರ: ಎಡೆಹಳ್ಳಿ ಮಂಜುನಾಥ್

Published

on

ಸಕಲೇಶಪುರ : ಸುತ್ತೂರು ಜಾತ್ರಾ ಮಹೋತ್ಸವ ಕೇವಲ ಭಕ್ತಿಯ ಮಾತ್ರವಲ್ಲ ಜ್ಞಾನ ಮತ್ತು ಶರಣ ಸಂಸ್ಕೃತಿಯ ಮಹಾ ಭಂಡಾರ ಎಂದು ಮಲೆನಾಡು ವೀರಶೈವ ಸಮಾಜದ ಕಾರ್ಯದರ್ಶಿ ಎಡೆಹಳ್ಳಿ ಮಂಜುನಾಥ್ ಹೇಳಿದರು.

ಪಟ್ಟಣಕ್ಕೆ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಸ್ವಾಗತಿಸಿ ಮಾತನಾಡಿ,ಸಹಸ್ರ ಸಂವತ್ಸರಗಳ ಹಿಂದೆ ಕಪಿಲಾ ನದೀತೀರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ತಪಸ್ಸಿನಿಂದ ಸಂಸ್ಥಾಪಿತವಾದ ಸುತ್ತೂರು ಶ್ರೀಕ್ಷೇತ್ರದಲ್ಲಿ 2026ರ ಜನವರಿ 15ರಿಂದ 20ರವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ.

ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತುಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೋಣಿ ವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ರಾಗಿಬೀಸುವ ಸ್ಪರ್ಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಆಯೋಜಿಸಲಾಗಿವೆ. ನಾಟಕಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಗಳೂ ನಡೆಯಲಿವೆ ಎಂದರು.

ಭಾರತದ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮಗಳಿಗೆ ಮಠಾಧೀಶರು, ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ-ರಾಜ್ಯದ ಸಚಿವರು, ಸಂಸದರು, ಶಾಸಕರು, ಕಲಾವಿದರು ಹಾಗೂ ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.

ಸಾಮೂಹಿಕ ವಿವಾಹ, ಕುಸ್ತಿ ಪಂದ್ಯಾವಳಿ, ರಂಗೋಲಿ, ಗಾಳಿಪಟ ಮತ್ತು ಚಿತ್ರಕಲೆ ಸ್ಪರ್ಧೆಗಳ ವಿವರಗಳಿಗೆ ಸುತ್ತೂರು ಶ್ರೀಕ್ಷೇತ್ರ ಅಥವಾ ಮೈಸೂರು ಜೆಎಸ್ಎಸ್ ಮಹಾವಿದ್ಯಾಪೀಠದ ಜಾತ್ರಾ ಕಚೇರಿಯಲ್ಲಿ ಸಂಪರ್ಕಿಸಬಹುದು. ಪೂಜಾ ಕೈಂಕರ್ಯಗಳಿಗೆ ಆಸಕ್ತಿ ಇರುವ ಭಕ್ತರಿಗೂ ಇದೇ ಕಚೇರಿಯಲ್ಲಿ ಮಾಹಿತಿ ಲಭ್ಯ ಎಂದು ತಿಳಿಸಿದರು.

ಅಕ್ಕಮಹಾದೇವಿ ಮಹಿಳಾ ಸಂಘದ ತಾಲ್ಲೂಕು ಅಧ್ಯಕ್ಷೆ ಕೋಮಲ ದಿನೇಶ್ ಮಾತನಾಡಿ, ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಸಮಾಜಸೇವಾ ಕಾರ್ಯಗಳು ಯುವಕರಿಗೆ ಮಾದರಿಯಾಗಿವೆ ಎಂದು ಹೇಳಿದರು.


ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಕೃಪೆಗೆ ಪಾತ್ರರಾಗಬೇಕೆಂದು ಭಕ್ತರಿಗೆ ಕೋರಿಕೊಳ್ಳುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ಕೌಡಹಳ್ಳಿ ಲೋಹಿತ್, ಚಂದ್ರಶೇಖರ್, ಸುರೇಶ್, ಗಾಯತ್ರಿ, ರೇಖಾ ಸುರೇಶ್, ಚಂದ್ರಶೇಖರ್, ಜೆಎಸ್ಎಸ್ ವಿದ್ಯಾ ಸಂಸ್ಥೆಯ ರೇಣುಕಾರಾಧ್ಯ, ಶಿವಕುಮಾರ್, ನಂಜುಂಡಸ್ವಾಮಿ, ದಿನೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Continue Reading

Hassan

ಬೆಳಗಾವಿ ಅಧಿವೇಶನದಲ್ಲಿ ಆನ್ ಲೈನ್ ಗೇಮ್, ಸೈಬರ್ ಕ್ರೈಮ್ ವಿರುದ್ದ ಧ್ವನಿ ಎತ್ತಿದ ಶಾಸಕ ಸಿಮೆಂಟ್ ಮಂಜು

Published

on

ಬೆಳಗಾವಿ/ಸಕಲೇಶಪುರ: ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್, ಆನ್ ಲೈನ್ ಗೇಮ್ಸ್ ಗಳನ್ನು ನಿಷೇಧ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಶಾಸಕ ಸಿಮೆಂಟ್ ಮಂಜು ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ಮಾತನಾಡಿದ ಅವರು , ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಹಾಗೂ ಆನ್ ಲೈನ್ ಗೇಮಿಂಗ್ ಆ್ಯಪ್‌ಗಳ ವ್ಯಸನಕ್ಕೆ ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದ ಹಲವೆಡೆ ಯುವಕರು ಈ ವ್ಯಸನಕ್ಕೆ ಬಲಿಯಾಗಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಸೈಬರ್ ಕ್ರೈಂ ಗಳಿಗೆ ಒಳಗಾಗಿ ಸಾವಿರಾರು ಯುವಕರು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಪ್ರಸ್ತುತ ಇಡೀ ದೇಶದಲ್ಲಿ ಸೈಬರ್ ಅಪರಾಧಗಳ ಕುರಿತು ಕರ್ನಾಟಕದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ಸರ್ಕಾರ ಗಮನ ಹರಿಸಿ ಸೂಕ್ತ ರೀತಿಯ ಕಾನೂನು ರೂಪಿಸಬೇಕು ಹಾಗೂ ಕೇಂದ್ರ ಸರ್ಕಾರದ ಸೈಬರ್ ಕ್ರೈಂ ಸಹಾಯವಾಣಿ (1930) ರ ಮಾದರಿ ರಾಜ್ಯ ಸರ್ಕಾರದ ವತಿಯಿಂದಲೂ ಸಹಾಯವಾಣಿ ಸ್ಥಾಪಿಸುವ ಮೂಲಕ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಕ್ರಮ ವಹಿಸಬೇಕೆಂದು ಗೃಹಸಚಿವರಿಗೆ ತಿಳಿಸಿದರು.

Continue Reading

Trending

error: Content is protected !!