Connect with us

Kodagu

ದೇವಸ್ಥಾನದ ಅಭಿವೃದ್ಧಿಗೆ ಸಹಾಯಧನ

Published

on

ಕೊಡ್ಲಿಪೇಟೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸಮೀಪದ ಬೆಸೂರು ಪಂಚಾಯತ್ ವ್ಯಾಪ್ತಿಯ ಕಟ್ಟೆಪುರ ಶ್ರೀ ಅಂಜನೇಯ ದೇವಸ್ಥಾನದ ಅಭಿವೃದ್ಧಿಗಾಗಿ ಎರಡು ಲಕ್ಷ ಸಹಾಯಧನವನ್ನು ನೀಡಲಾಗಿದೆ.

ದ.ಗ್ರಾ.ಯೋ ಜಿಲ್ಲಾ ನಿರ್ದೆಶಕಿ ಲೀಲಾವತಿ ಸಹಾಯಧನವನ್ನು ವಿತರಿಸಿ ಮಾತನಾಡಿ, ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರು ದೇವಸ್ಥಾನ ಅಭಿವೃದ್ಧಿಗೆ ಸಹಾಯಧನವನ್ನು ಮಂಜೂರು ಮಾಡಿದರು ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಸಂಘದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ನಿರ್ದೆಶಕ ರೋಹಿತ್, ಹೋಬಳಿ ನಿರ್ದೆಶಕ ನಾಗರಾಜ್ ಕೆ.ಪಿ, ಜನಜಾಗ್ರತಿ ವೇದಿಕೆ ಜಿಲ್ಲಾ ಘಟಕದ ಸದಸ್ಯ ಡಿ.ಭಗವಾನ್, ಬೆಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಕಮಲಮ್ಮ, ಕಟ್ಟೆಪುರ ದೇವಸ್ಥಾನ ಸಮಿತಿ ಅಧ್ಯಕ್ಷ ಅಪ್ಪಾಜಿ ಗೌಡ, ಬೆಸೂರು ವಿಎಸ್ಸೆಎಸ್ಸೆಎನ್ ಬ್ಯಾಂಕ್ ಅಧ್ಯಕ್ಷ ವಿರೂಪಾಕ್ಷ, ದೇವಸ್ಥಾನ ಸಮಿತಿಯ ದಿವಾಕರ, ಗೋಪಾಲಕ್ರಷ್ಣ, ರಂಗೇಶ, ಅರ್ಚಕ ವಸಂತ್ ಕುಮಾರ್, ಗ್ರಾಮಸ್ಥರಾದ ಜಯಣ್ಣ, ಸಿದ್ದಪ್ಪ, ಕೆ.ಸಿ‌.ಜಗದೀಶ್ ಮುಂತಾದವರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Kodagu

ಕರಾಟೆ ಸ್ಪರ್ಧೆಯಲ್ಲಿ ಸಿ.ಐ.ಪಿ.ಯು.ಸಿ ವಿದ್ಯಾರ್ಥಿನಿ ಎಂ.ಎಸ್.ನಿಶಿತಾ ನೀಲಮ್ಮ ಸಾಧನೆ

Published

on

ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು. ಕಾಲೇಜಿನಲ್ಲಿ ದ್ವಿತೀಯ ಪಿ.ಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಎಂ .ಎಸ್. ನಿಶಿತಾ ನೀಲಮ್ಮ, ನವೆಂಬರ್ 30, 2025 ರಂದು ಮೈಸೂರಿನ ಮಹಾರಾಜ ಕಾಲೇಜುನಲ್ಲಿ ಜರುಗಿದ ನಾಲ್ಕನೇ VSK ಓಪನ್ ಕರಾಟೆ ಚಾಂಪಿಯನ್‌ಶಿಪ್ -2025 ರಲ್ಲಿ ಭಾಗವಹಿಸಿದ್ದರು. ಇವರು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಈ ವಿದ್ಯಾರ್ಥಿನಿಯನ್ನು ಸಿ.ಐ.ಪಿ.ಯು.ಕಾಲೇಜಿನ ಪ್ರಾಂಶುಪಾಲೆ ಡಾ.ರೋಹಿಣಿ ತಿಮ್ಮಯ್ಯ ಅಭಿನಂದಿಸಿದ್ದರು. ಕುಮಾರಿ ನಿಶಿತಾ ನೀಲಮ್ಮ ಮಂಡೇಪಂಡ ನಂದ ಸುಬ್ಬಯ್ಯ ಮತ್ತು ಎಂ .ಎಸ್. ಆಶಾ ಸುಬ್ಬಯ್ಯ ಅವರ ಪುತ್ರಿಯಾಗಿದ್ದಾರೆ. ಇವರು ವಿರಾಜಪೇಟೆಯ ಮೆಬುಕಾನ್ ಗೊಜುರಿಯೋ ಸಂಸ್ಥೆಯ ಶಿಕ್ಷಕರಾದ ಸೆನ್ಸಾಯಿ ಎಂ.ಬಿ.ಚಂದ್ರನ್ ಅವರ ಮಾರ್ಗದರ್ಶನದಲ್ಲಿ ಕರಾಟೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.

Continue Reading

Kodagu

ಕರಾಟೆ ಸ್ಪರ್ಧೆ: ಸಿ.ಐ.ಪಿ.ಯು.ಸಿ ವಿದ್ಯಾರ್ಥಿನಿ ಎಂ.ಎಸ್.ನಿಶಿತಾ ನೀಲಮ್ಮ ಸಾಧನೆ

ಚಾಲಕನ ನಿಯಂತ್ರಣ ತಪ್ಪಿ ಓಮಿನಿ ಪಲ್ಟಿ: ತಪ್ಪಿದ ಅನಾಹುತ

Published

on

ನಾಪೋಕ್ಲು : ಚಾಲಕನ ನಿಯಂತ್ರಣ ಕಳೆದುಕೊಂಡ ಮಾರುತಿ ಕಾರೊಂದು ರಸ್ತೆ ಬದಿಯ ತೋಟದ ಚೆರಂಡಿಗೆ ಉರುಳಿಬಿದ್ದ ಘಟನೆ ನಾಪೋಕ್ಲು ಮಡಿಕೇರಿ ಮುಖ್ಯ ರಸ್ತೆಯ ಕೊಟ್ಟಮುಡಿ ಜಂಕ್ಷನ್ ಬಳಿ ಗುರುವಾರ ಸಂಜೆ ನಡೆದಿದೆ.

ಕುಶಾಲನಗರದಿಂದ ಬೆಟ್ಟಗೇರಿ, ಕೊಟ್ಟಮುಡಿ ಮಾರ್ಗವಾಗಿ ಬಲ್ಲಮಾವಟಿ ಗ್ರಾಮದ ನಿವಾಸಿ ನಿತಿನ್ ಎಂಬುವವರು ತಮ್ಮ ಮಾರುತಿ ಓಮಿನಿ ಕಾರಿನಲ್ಲಿ ಹಂದಿಯನ್ನು ಸಾಗಿಸುತ್ತಿದ್ದ ಸಂದರ್ಭ ಕೊಟ್ಟಮುಡಿ ಜಂಕ್ಷನ್ ಬಳಿಯ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರು ರಸ್ತೆ ಬದಿಯ ಜೆ ವಿ ಎಸ್ಟೇಟ್ ನ ತೋಟದ ಚೆರಂಡಿಗೆ ಉರುಳಿ ಬಿದ್ದಿದೆ.ಅಪಘಾತದಿಂದ ಕಾರಿನ ಮೆಲ್ಬಾಗ ಹಾಗೂ ಒಂದು ಬದಿಗೆ ಹಾನಿಯಾಗಿದ್ದು ಕಾರಿನ ಚಾಲಕ ನಿತಿನ್ ಹಾಗೂ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅಪಘಾತದಿಂದ ಕಾರಿನಲ್ಲಿದ್ದ ಹಂದಿಗೂ ಯಾವುದೇ ಹಾನಿಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ತೋಟದ ಚೆರಂಡಿಗೆ ಉರುಳಿ ಬಿದ್ದ ಕಾರನ್ನು ಸಾರ್ವಜನಿಕರ ಸಹಕಾರದಿಂದ ಮೇಲೆತ್ತಿ ತೆರವು ಗೊಳಿಸಲಾಯಿತು.

ವರದಿ:ಝಕರಿಯ ನಾಪೋಕ್ಲು

Continue Reading

Trending

error: Content is protected !!