Connect with us

Uncategorized

ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬ

Published

on

ವರದಿ : ಗೋವಿಂದ ಕೆ ಗೌಡ ಹನೂರು

ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳವಾದ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸ್ವಾಮಿಗೆ ಎಣ್ಣೆ ಮಜ್ಜನ ವಿಶೇಷ ಸೇವೆ ಉತ್ಸವಾದಿಗಳು ಮತ್ತು ಜಾಗರಣೆ ಉತ್ಸವ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.

ಮಾದಪ್ಪನ ದೇವಾಲಯ ಮತ್ತು ಗರ್ಭಗುಡಿಯನ್ನು ವಿವಿಧ ಪುಷ್ಪಗಳಿಂದ ಹಾಗೂ ವಿದ್ಯುತ್ ದೀಪದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತಲ್ಲದೇ ದೇಗುಲದ ಸುತ್ತಮುತ್ತಲಿನ ಆವರಣವನ್ನು ತಳೀರು ತೋರಣಗಳಿಂದ ಸಿಂಗಾರಿಸಲಾಗಿತ್ತು. ಶುಕ್ರವಾರ ಸಂಜೆ ಮಾದಪ್ಪನ ಸನ್ನಿಧಿಯಲ್ಲಿ ಸ್ವಾಮಿಗೆ ಎಣ್ಣೆಮಜ್ಜನ ಸೇವೆಯನ್ನು ನೆರವೇರಿಸಲಾಗಿತ್ತಲ್ಲದೇ ಶನಿವಾರ ಬೆಳಗಿನ ಜಾವದಿಂದ ವಿಶೇಷ ಸೇವೆ ಉತ್ಸವಾದಿ ಪೂಜೆಗಳು ನಡೆದವು.

ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ಒಂದು ವಾರಗಳ ಹಿಂದೆಯೇ ರಾಜ್ಯದ ವಿವಿಧೆಡೆಯಿಂದ ಬಸ್, ಕಾರು ದ್ವಿಚಕ್ರವಾಹನ ಮತ್ತು ಕಾಲ್ನಡಿಗೆಯ ಮೂಲಕ ಲಕ್ಷಾಂತರ ಸಂಖ್ಯೆಯಲ್ಲಿನ ಭಕ್ತರು ಮ.ಬೆಟ್ಟಕ್ಕೆ ಆಗಮಿಸಿ ಮಾದಪ್ಪನ ಬೆಟ್ಟದಲ್ಲಿ ಬೀಡು ಬಿಟ್ಟಿದ್ದರು. ಇದರ ಜತೆಗೆ ಕಳೆದ ಎರಡು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಾದಪ್ಪನ ದರ್ಶನ ಪಡೆಯುತ್ತಿದ್ದಾರೆ. ಮಾದಪ್ಪನ ಬಗ್ಗೆ ‘ಉಘೇ ಮಾದಪ್ಪ ಉಘೇ’ ‘ಜೈ ಮಹತ್ ಮಲೆಯಾ’ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.

ಉತ್ಸವದಲ್ಲಿ ಭಾಗಿಯಾದ ಭಕ್ತರು: ಮಾದಪ್ಪನ ಸನ್ನಿಧಿಯಲ್ಲಿ ಬೀಡು ಬಿಟ್ಟಿರುವ ಭಕ್ತರು ದೇಗುಲದಲ್ಲಿ ಜರುಗಿದ ಹುಲಿವಾಹನ, ರುದ್ರಾಕ್ಷಿವಾಹನ ಹಾಗೂ ಬಸವವಾಹನ ಉತ್ಸವದಲ್ಲಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ದವಸ ಧಾನ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ಎಸೆಯುವುದರ ಮೂಲಕ ದಂಡಿನ ಕೋಲನ್ನು ಹೊತ್ತು ದೇವರ ಕೃಪೆಗೆ ಪಾತ್ರರಾದರು.

ಪ್ರತಿ ದಿನ ಮಾದೇಶ್ವರನ ಉತ್ಸವ ಮೆರವಣಿಗೆ : ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಾರಂಭವಾದ ದಿನದಿಂದ ಸಾಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳ ನೇತೃತ್ವದಲ್ಲಿ ತೆರದ ವಾಹನದಲ್ಲಿ (ಟ್ರ್ಯಾಕ್ಟರ್ ನಲ್ಲಿ) ಉತ್ಸವ ಮೂರ್ತಿಯನ್ನು ಇಟ್ಟು ದೇವಾಲಯದ ಸುತ್ತ ಮೂರು ಪ್ರದಕ್ಷಣೆ ಹಾಕುವ ಮೂಲಕ ವಿಶೇಷ ಪೂಜೆ ಕೈಂಕರ್ಯಗಳು ನಡೆಯುತ್ತಿದೆ. ಶುಕ್ರವಾರ ವಿಶೇಷವಾಗಿ ಮಹಾಶಿವರಾತ್ರಿ ಹಿನ್ನಲೆಯಲ್ಲಿ ಅಂತರಗಂಗೆ, ತಂಬಡಗೇರಿ ಬೀದಿ ಹಾಗೂ ಪ್ರಮುಖ ಬೀದಿಗಳಲ್ಲಿ ಉತ್ಸವ ತೆರಳುವ ಮೂಲಕ ಇಡೀ ರಾತ್ರಿ ಪೂಜೆಗಳು ನಡೆಯಿತು, ಜೊತೆಯಲ್ಲಿ ಭಕ್ತರು ಪಾಲ್ಗೂಳುವ ಮೂಲಕ ಮಾದೇಶ್ವನ ಕೃಪೆಗೆ ಪಾತ್ರರಾದರು.

ಸಾಂಸ್ಕೃತಿಕ ಕಾರ್ಯಕ್ರಮಗಳು : ಮಾದಪ್ಪನ ದೇವಾಲಯದ ಮುಂಭಾಗದಲ್ಲಿರುವ ರಂಗಮಂದಿರದಲ್ಲಿ ಬಿಡು ಬಿಟ್ಟಿರುವ ಭಕ್ತರಿಗಾಗಿ ಪ್ರತಿದಿನ ರಾತ್ರಿ ಪ್ರಖ್ಯಾತ ಕಲಾ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದಪ್ಪನ ಚರಿತ್ರೆಯ ಬಗ್ಗೆ ಭಕ್ತರಿಗೆ ತಿಳಿಸಲಾಗುತ್ತಿದೆ, ಶುಕ್ರವಾರ ರಾತ್ರಿ ಮಹಾಶಿವರಾತ್ರಿ ಹಿನ್ನಲೆಯಲ್ಲಿ ಇಡೀ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವ ಮೂಲಕ ಭಕ್ತರು ಅಲ್ಲಿಯೇ ಜಾಗರಣೆ ಮಾಡಿದರು.

Continue Reading
Click to comment

Leave a Reply

Your email address will not be published. Required fields are marked *

Uncategorized

ಕುಮಾರಸ್ವಾಮಿ ರನ್ನು ಬೆಂಬಲಿಸಿ – ಡಾ.ಪುಣ್ಯವತಿ

Published

on

ಮಂಡ್ಯ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ನಂತರದ ದಿನಗಳಲ್ಲಿ ವೈದ್ಯಕೀಯ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದೆ, ವೈದ್ಯಕೀಯ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲು ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು. ಅದಕ್ಕಾಗಿ ಮಂಡ್ಯದಲ್ಲಿ ಕುಮಾರಸ್ವಾಮಿಯವರನ್ನು ಬೆಂಬಲಿಸುವಂತೆ ಖ್ಯಾತ ವೈದ್ಯೆ ಡಾ. ಪುಣ್ಯವತಿ ತಿಳಿಸಿದರು.

ಭಾರತೀಯ ಜನತಾ ಪಾರ್ಟಿ ವೈದ್ಯಕೀಯ ಪ್ರಕೋಷ್ಠ ವತಿಯಿಂದ ನಗರದ ಅಮರಾವತಿ ಹೋಟೆಲ್ ಸಭಾಂಗಣದಲ್ಲಿ ನಡೆದ ವೈದ್ಯಕೀಯ ವೃತ್ತಿ ನಿರತರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆಗಳಿಗೆ ಹೆಚ್ಚಿನ ಸೌಲಭ್ಯ ಕೊಡಬೇಕಾಗಿದೆ.

ಸೌಲಭ್ಯ ಸಿಗದಿದ್ದರೆ ಎಲ್ಲರೂ ಬೆಂಗಳೂರಿಗೆ ಬರುವಂತಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಆಸ್ಪತ್ರೆಗಳನ್ನು ಮೇಲ್ದರ್ಜೆಗೊಳಿಸಬೇಕಾಗಿದೆ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದರು. ಲಕ್ಷಾಂತರ ಫಲಾನುಭವಿಗಳು ಈ ಸೌಲಭ್ಯ ಪಡೆದಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಬಸ್ಸಿನ ವ್ಯವಸ್ಥೆ, ಮೂಲಭೂತ ಸೌಲಭ್ಯ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ನೀಡಿದ್ದೇವೆ ಎಂದು ಹೇಳಿದರು. ಮನ್ಮುಲ್ ನಿರ್ದೇಶಕ ರಾಮಚಂದ್ರ, ಮನ್ಮುನ್ ಉಪಾಧ್ಯಕ್ಷ ರಘುನಂದನ್, ಬಿಜೆಪಿ ಮುಖಂಡರಾದ ಡಾ.ಸಿದ್ದರಾಮಯ್ಯ, ಡಾ.ಸದಾನಂದ, ಕೆ.ಟಿ. ಶ್ರೀಕಂಠೇಗೌಡ ಇದ್ದರು.

Continue Reading

Hassan

ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ಶಾಸಕ ಸ್ವರೂಪ್ ಮತಯಾಚನೆ

Published

on

ಹಾಸನ: ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಶಾಸಕ ಸ್ವರೂಪ್ ಹಾಸನ ತಾಲೂಕಿನ ವಿವಿಧ ಭಾಗಗಳಲ್ಲಿ
ಶನಿವಾರ ಪ್ರಚಾರ ನಡೆಸಿದರು.

ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಿಡುಡಿ, ದೊಡ್ಡ ಹೊನ್ನೇನಹಳ್ಳಿ, ಯಡಿಯೂರು, ತೇಜೂರು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದರು. ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ಶಾಸಕ ಸ್ವರೂಪ್ ಅವರಿಗೆ ಸಾಥ್ ನೀಡಿದರು.

ಮನೆ ಮನೆಗೆ ತೆರಳಿ ಕರಪತ್ರ ವಿತರಿಸುವ ಮೂಲಕ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದ ಸ್ವರೂಪ್ ಬಳಿಕ ಮಾತನಾಡಿ, ಜಿಲ್ಲೆಗೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ, ಮಾಜಿ ಸಚಿವ ಎಚ್ಡಿ ರೇವಣ್ಣ ಹಾಗೂ ನಮ್ಮ ತಂದೆಯವರಾದ ದಿವಂಗತ ಎಚ್.ಎಸ್ ಪ್ರಕಾಶ್ ಅವರ ಅನೇಕ ಕೊಡುಗೆಗಳಿವೆ ಅವುಗಳನ್ನು ಆಧರಿಸಿ ಈ ಭಾರಿ ಮೈತ್ರಿ ಅಭ್ಯರ್ಥಿ ಪರ ಮತದಾರರು ಮತ ಯಾಚನೆ ಮಾಡಬೇಕು ಎಂದರು.

ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ಹಾಸನ ಜಿಲ್ಲೆಯ ಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳು, ಸರ್ಕಾರಿ ಶಾಲಾ ಕಾಲೇಜುಗಳು, ರೈಲ್ವೆ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ತಮ್ಮದೇ ಆದ ಕೊಡುಗೆಗಳನ್ನು ನೀಡುವ ಮೂಲಕ ಹಾಸನ ಜಿಲ್ಲೆಯನ್ನು ರಾಜ್ಯವೇ ಗುರುತಿಸುವಂತೆ ಮಾಡಿದ್ದಾರೆ ಎಂದರು.

ವಿಶ್ವದ ಅತಿ ದೊಡ್ಡ ಬಸ್ ನಿಲ್ದಾಣ, ವಿಮಾನ ನಿಲ್ದಾಣದ ಕಾಮಗಾರಿಗೆ ಚಾಲನೆ, ಹೇಮಾವತಿ ಮೂಲಕ ಜಿಲ್ಲೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಿರುವ ಜೆಡಿಎಸ್ ಗೆ ಈ ಬಾರಿ ಮತ್ತೆ ಶಕ್ತಿ ತುಂಬುವ ಮೂಲಕ ಇನ್ನಷ್ಟು ಕೆಲಸ ಮಾಡಲು ಈ ಬಾರಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಮತದಾನ ಮಾಡುವ ಮೂಲಕ ಕೇಂದ್ರದಲ್ಲಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಈ ಭಾರಿ ಕನಿಷ್ಠ 20 ಸಾವಿರಕ್ಕೂ ಅಧಿಕ ಮತಗಳನ್ನು ಹೆಚ್ಚುವರಿಯಾಗಿ ನೀಡಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಲು ಪಣ ತೊಟ್ಟಿದ್ದೇವೆ. ಜಿಲ್ಲೆಯ ಜನರು ಕೂಡ ಪ್ರಜ್ವಲ್ ರೇವಣ್ಣ ಅವರ ಪರ ಒಲವು ತೋರಿದ್ದಾರೆ ಆದುದರಿಂದ ಬಾರಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

Continue Reading

Uncategorized

ಅವಳಿ ಮಕ್ಕಳ ಸಾವಿಗೆ ತಾಯಿಯೇ ಹಂತಕಿ..!

Published

on

ಶ್ರೀರಂಗಪಟ್ಟಣ: ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಮೃತಪಟ್ಟು, 3ವರ್ಷದ ಹೆಣ್ಣು ಮಗಳು ಹಾಗೂ ತಾಯಿ ಅಸ್ವಸ್ಥಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ, ತಾಯಿಯೇ ಐಸ್‌ಕ್ರೀಂ ನಲ್ಲಿ ವಿಷ ಪ್ರಾಶಾಣ ಬೆರಸಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.

ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪೂಜಾ ಮತ್ತು ಪ್ರಸನ್ನ ದಂಪತಿ ನಡುವೆ ಜಗಳ ಏರ್ಪಟ್ಟು ತಾಯಿಯೇ ಮಕ್ಕಳಿಗೆ ಐಸ್‌ಕ್ರೀಂನಲ್ಲಿ ಲಕ್ಷಣ ರೇಖೆ ಬೆರಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿ ತಿಳಿಸಿದ್ದಾರೆ.

ಬುಧವಾರ ಸಂಜೆ ಗ್ರಾಮಕ್ಕೆ ಐಸ್ ಕ್ರೀಂ ಮಾರಲು ಬಂದಿದ್ದ ವ್ಯಕ್ತಿಯಿಂದ ಆರೋಪಿ ಪೂಜಾ ಖರೀದಿ ಮಾಡಿ, ಒಂದೂವರೆ ವರ್ಷದ ಅವಳಿ ಮಕ್ಕಳಾದ ತ್ರಿಶೂಲ್, ತ್ರಿಶಾ ಹಾಗೂ 3 ವರ್ಷದ ಮತ್ತೊಂದು ಹೆಣ್ಣು ಮಗುವಿಗೂ ನೀಡಿ ತಾನು ಸಹ ತಿಂದಿದ್ದಾಳೆ. ಐಸ್ ಕ್ರೀಂ ತಿಂದು ಅಸ್ವಸ್ಥರಾಗಿದ್ದ ಮಕ್ಕಳು ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯ ಸಾವನ್ನಿಪ್ಪಿದ್ದು, ಪೂಜಾ ಹಾಗೂ ಶಿವರ್ಷದ ಹೆಣ್ಣುಮಗು ಅಸ್ವಸ್ಥಗೊಂಡು ಮಂಡ್ಯ ಜಿಲ್ಲಾಸತೆಗೆ ದಾಖಲಾಗಿದ್ದರು.

ಗ್ರಾಮದ ಇನ್ನೂ ಹಲವರು ಇದೇ ವಾಹನದಲ್ಲಿ ತಂದಿದ್ದ ಐಸ್ ಕ್ರೀಂ ಖರಿದಿಸಿ ತಿಂದಿದ್ದು, ಬೇರೆ ಯಾರಿಗೂ ಸಹ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ತಾಯಿ ಪೂಜಾ ಐಸ್ ಕ್ರೀಂ ಜೊತೆ ಮನೆಯಲ್ಲಿದ್ದ ಲಕ್ಷ್ಮಣ ರೇಖೆ ಪುಡಿ ಮಾಡಿ ಬೆರಸಿ ನೀಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Trending

error: Content is protected !!