Connect with us

Mysore

ಕಾಲುವೆ ಅಮ್ಮ ಪೂಜೆ ಯೊಂದಿಗೆ ತೆರೆ ಎಳೆದ ಬಂಡಿ ಹಬ್ಬ 

Published

on

ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ : ಪಟ್ಟಣದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ  19 ದಿನಗಳ ಕಾಲ ನಡೆದ  ಬಂಡಿ ಹಬ್ಬವನ್ನು ಇಂದು ಕಾಲುವೆ ಅಮ್ಮ ನವರ ಪೂಜಾ ಕೈಕರ್ಯ ದೊಂದಿಗೆ  ಆಚರಣೆ ಮಾಡಿ ತೆರೆ ಎಳೆದರು.

 

ಕಳೆದ ಹತ್ತು ವರ್ಷಗಳ ನಂತರ ನಡೆಯುತ್ತಿರುವ ಬಂಡಿ ಹಬ್ಬದ ಅಂಗವಾಗಿ ಗ್ರಾಮದ ಆಗ್ನೇಯ ದಿಕ್ಕಿನ  ಬಳಿ ಇರುವ ಕಾಲುವೆ ಅಮ್ಮ   ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕಗಳು ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡಲಾಯಿತು. ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಭಕ್ತಾದಿಗಳು  ಆಗಮಿಸಿ ಪೂಜೆ ಸಲ್ಲಿಸಿದರು. ಈ ಕಾರ್ಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು  ಭಾಗವಹಿಸಿದ್ದರು.

ಅಮ್ಮ ನವರ ಉತ್ಸವ  ಮೂರ್ತಿ ಯೊಂದಿಗೆ  ಗ್ರಾಮದಲ್ಲಿನ ನಿಗದಿತ  ರಸ್ತೆಗಳ ಮೂಲಕ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ  ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ವಿಶೇಷ ಪೂಜೆಯನ್ನು ಸಲ್ಲಿಸಿದರು. ಗ್ರಾಮದಲ್ಲಿ ನಡೆಯುತ್ತಿರುವ ಹಬ್ಬಕ್ಕೆ,    ಸಂಬಂಧಿಕರುಗಳು ಸೇರಿದಂತೆ  ಹೆಣ್ಣು ಮಕ್ಕಳು ತವರು ಮನೆಗೆ ಆಗಮಿಸಿರುವುದು ವಿಶೇಷವಾಗಿದೆ.ಪಟ್ಟಣದಲ್ಲಿನ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮತ್ತು   ಹಸಿರು ತೋರಣಗಳನ್ನು ಕಟ್ಟುವ ಮೂಲಕ ಸಡಗರ ಸಂಭ್ರಮ ಮನೆ ಮಾಡಿತ್ತು.

 

ಬಂಡಿ ಹಬ್ಬದ ಮೊದಲು ಗ್ರಾಮದಲ್ಲಿ ಸುಂಕದ ಮಾರಮ್ಮ, ಮಾರಮ್ಮ ತಾಯಿ, ಶ್ರೀ ಆಂಜನೇಯ ಸ್ವಾಮಿ ಹಬ್ಬ ಮತ್ತು ಸಾಮೂಹಿಕ ಅನ್ನಸಂತರ್ಪಣ ಕಾರ್ಯವನ್ನು ಈಗಾಗಲೇ ಮಾಡಲಾಗಿದೆ. ಇಂದು  ಕಾಲುವೆಯಮ್ಮನ ಹಬ್ಬವನ್ನು ಮಾಡುವುದರ ಮೂಲಕ ಕಳೆದ ಹತ್ತೊಂಬತ್ತು  ದಿನಗಳಿಂದ ಗ್ರಾಮದಲ್ಲಿ ಸರ್ವರೂ ಸೇರಿ ಭಕ್ತಿ ಭಾವಗಳಿಂದ ಒಟ್ಟಾಗಿ ಗ್ರಾಮದ ದೇವರುಗಳ ಹಬ್ಬವನ್ನು ಆಚರಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುವುದರ ಮೂಲಕ ತೆರೆ ಎಳೆಯಲಾಯಿತು.

 

ಬಂಡಿ ಹಬ್ಬದ ಪ್ರಯುಕ್ತ ಮಾ.15 ರಿಂದ ಮಾ. 29 ವರೆಗೂ ಗ್ರಾಮದಲ್ಲಿ ಮಾಂಸಹಾರವನ್ನು ನಿಲ್ಲಿಸಿ,. ಕೋಳಿ ಮತ್ತು ಮಾಂಸದ ಅಂಗಡಿ ಸೇರಿದಂತೆ ಸಂಬಂದಿಸಿದ ಹಲವು ಅಂಗಡಿಗಳು ಸಂಪೂರ್ಣವಾಗಿ ಬಾಗಿಲನ್ನು ಮುಚ್ಚಿ ಗ್ರಾಮ ದೇವತೆಯ ಹಬ್ಬದ ಯಶಸ್ವಿಗೆ ಸಹಕರಿಸುವ ಮೂಲಕ  ಹಿಂದಿನ ಪದ್ಧತಿಯನ್ನು ಪಾಲಿಸುವ ಕೆಲಸ ಕಾರ್ಯವನ್ನು  ಯಶಸ್ವಿಗೊಳಿಸಿದರು.

 

ಗ್ರಾಮ ದೇವರ ಹಬ್ಬಗಳಲ್ಲಿ ಮಹಿಳೆಯರು, ಪುರುಷರು,  ಯುವಕರು  ಮುಖಂಡರುಗಳು, ಯಜಮಾನರುಗಳು ಸೇರಿದಂತೆ ಗ್ರಾಮದಲ್ಲಿನ ಎಲ್ಲರೂ ಪಾಲ್ಗೊಂಡು   ಪೂಜಾ ಕಾರ್ಯಗಳನ್ನು  ಶಾಂತಿಯುತವಾಗಿ ಮುಗಿಸಿದರು.

Continue Reading
Click to comment

Leave a Reply

Your email address will not be published. Required fields are marked *

Mysore

ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ವಾಂತಿ-ಬೇದಿಯಿಂದ ತತ್ತರಿಸಿದ ಗ್ರಾಮಸ್ಥರು ..! ತಬ್ಬಿಬ್ಬಾದ ಅಧಿಕಾರಿಗಳು..!*

Published

on

ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಕಂಡು ಬಂತು ಭೀಕರ ಕಾಲರಾ..! ಆರೋಗ್ಯ ಅಧಿಕಾರಿಗಳಿಂದ ಸ್ಫೋಟಕ ಮಾಹಿತಿ

 

ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿರುವ ಜನರಿಗೆ ತಂಪೆರೆಯುವ ಸಲುವಾಗಿ ಕಳೆದ ಒಂದು ವಾರಗಳಿಂದ ಮಳೆಯು ಧಾರಾಕಾರವಾಗಿ ಸುರಿಯುತ್ತಿದೆ ಇಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸಿರುವ ವರುಣ ವಿಧಾನಸಭಾ ಕ್ಷೇತ್ರದ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಭೀಕರ ಕಾಲರ ಕಾಯಿಲೆ ಕಂಡುಬಂದು ತಗಡೂರು ಗ್ರಾಮಸ್ಥರು ತತ್ತರಿಸಿದ್ದಾರೆ.

ಈಗಾಗಲೇ ತಗಡೂರು ಗ್ರಾಮದಲ್ಲಿ 25 ಪುಟ್ಟ ಮಕ್ಕಳು ಸೇರಿದಂತೆ ಒಟ್ಟು 114 ಕಾಲರ ರೋಗಿಗಳು ಕಂಡು ಬಂದಿದ್ದಾರೆ. ಇದರಲ್ಲಿ 5 ರೋಗಿಗಳನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ತಗಡೂರು ಗ್ರಾಮ ಪಂಚಾಯಿತಿಯ 1,2,3,ನೇಯ ವಾರ್ಡಿನಲ್ಲಿ ವಾಸಿಸುತ್ತಿರುವ ಜನರಿಗೆ ಕಾಲರ ಕಾಯಿಲೆ ವಾಂತಿ ಬೇದಿ ಕಂಡು ಬಂದಿದೆ. ಗ್ರಾಮದಲ್ಲಿ ಬರೋಬರಿ 12 ಕೈ ಪಂಪುಗಳಿದ್ದು ನಾಲ್ಕು ಕೈ ಪಂಪುಗಳ ನೀರನ್ನು ಕುಡಿಯಲು ಯೋಗ್ಯವಿಲ್ಲ ಎಂಬ ಆತಂಕಕಾರಿ ವರದಿ ಮಾಹಿತಿ ಇದ್ದರೂ ತಗಡೂರು ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡಿಲ್ಲ. ಗ್ರಾಮಕ್ಕೆ ಈಗಾಗಲೇ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕುಮಾರಸ್ವಾಮಿ ನಂಜನಗೂಡಿನ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹಾಗೂ ಜಿಲ್ಲಾ ಕಾಲಾರಾ ವೈದ್ಯಾಧಿಕಾರಿ ಡಾ. ಪುಟ್ಟತಾಯಮ್ಮ ತಾಲ್ಲೂಕು ವೈದ್ಯಾಧಿಕಾರಿ ಡಾ. ಈಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭೀಕರ ವಾಂತಿ ಭೇದಿ ಹಿಂದ 114 ರೋಗಿಗಳು ತಗಡೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿರುವ ಸಾರ್ವಜನಿಕರಿಗೆ ಕೂಡ ಪ್ರತಿರೋಧಕ ಚುಚ್ಚುಮದ್ದು ಪ್ರತಿ ಮನೆ ಮನೆಗೆ ಒರಸ್ ಪೌಡರ್ ಕಡ್ಡಾಯವಾಗಿ ಮನೆಯಲ್ಲಿ ಬಿಸಿ ನೀರು ಸೇವನೆ ಮಾಡಲು ಪ್ರತ್ಯೇಕವಾಗಿ ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ ಕಲ್ಪಿಸಲಾಗಿದೆ. ತಗಡೂರು ಗ್ರಾಮದಲ್ಲಿ ಕಾಲರ ಕಾಯಿಲೆ ಕಂಡುಬಂದಿರುವುದು ಕೈ ಪಂಪಿನಲ್ಲಿರುವ ಕಲುಷಿತ ನೀರು ಸೇವನೆ ಎಂದು ಬೆಳಕಿಗೆ ಬಂದಿದೆ. ಹತ್ತಕ್ಕೂ ಹೆಚ್ಚು ವೈದ್ಯಾಧಿಕಾರಿಗಳನ್ನು ಗ್ರಾಮದಲ್ಲಿ ಬಿಡು ಬಿಟ್ಟಿದ್ದಾರೆ. ದಿನಕ್ಕೆ ಮೂರು ಬಾರಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯ ಜೊತೆಗೂಡಿ ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಕಾಲರ ಕಾಯಿಲೆ ತಡೆಗಟ್ಟಲು ಮುಂದಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ

ಸಿದ್ದರಾಮಯ್ಯನವರ ತವರು ಕ್ಷೇತ್ರದ ತಗಡೂರು ಗ್ರಾಮದಲ್ಲಿ ಭೀಕರ ಕಾಲರ ಕಾಯಿಲೆ ಕಂಡು ಬಂದಿರುವುದು ಜಡ್ಡು ಗಟ್ಟಿದ ಅಧಿಕಾರಿಗಳ ನಿರ್ಲಕ್ಷ್ಯ ಕಾರ್ಯವೈಕರಿ ಎಂದು ಸಾರ್ವಜನಿಕ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ.

ಪಿಡಿಒ ದಿವಾಕರ್ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ನಾಪತ್ತೆಯಾಗಿರುವ ದೆಸೆಯಿಂದ ಸಂಬಂಧಪಟ್ಟ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕಿದೆ.

Continue Reading

Mysore

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

Published

on

ನಂಜನಗೂಡು ಮೇ.19

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ ಸಾಯಿಬಾಬಾ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಇಂದು ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ಮಹಾಗಣಪತಿ, ನವಗ್ರಹ,ನಾಗದೇವತೆ ಮತ್ತು ಶಿಖರ ಕಳಶ ಪ್ರತಿಷ್ಠಾಪನೆ ಮಾಡಲಾಯಿತು.


ಗೋ ದೇವತೆ ಗಂಗಾ ಪೂಜೆಯೊಂದಿಗೆ ಅಗ್ರೋದಕ ಸಹಿತ ಯಾಗ ಶಾಲೆ ಪ್ರವೇಶ ಮಾಡಿ ಗಣಪತಿ ಪೂಜೆ ಮಾಡಿ ಸ್ವಸ್ತಿ ಪುಣ್ಯಹ ವಾಹನ, ಪಂಚಗವ್ಯ ಸಾಧನ, ವಾಸ್ತು ಪೂಜೆ ಮತ್ತು ರಾಕ್ಸೊಘ್ನ ಹೋಮ, ಪರ್ಯಾಗ್ನಿ ಕರಣ ಶಿಖರ ಕಲಶ ಹಾಗೂ ನೂತನ ಶಿಲಾಮೂರ್ತಿಗೆ ಜಲಾದಿ ವಾಸ, ಧಾನ್ಯ ದಿವಾಸ, ಮೂರ್ತಿ ಸಂಸ್ಕಾರ ನ್ಯಾಸ ವಿಧಿ ಶಯನಾದಿ ವಾಸ ಮಾಡಲಾಯಿತು . ಬೆಳಿಗ್ಗೆ 4.50 ರಿಂದ 5.50ರ ವರೆಗೆ ಸಲ್ಲುವ ಬ್ರಾಹ್ಮೀ ಮುಹೂರ್ತ ಶುಭ ಲಗ್ನದಲ್ಲಿ ಅಷ್ಟ ಬಂದ ಪ್ರತಿಷ್ಠಾಪನೆ

ನೆರವೇರಿಸಿದರು. ಅಯೋಧ್ಯೆ ಶ್ರೀಬಾಲ ರಾಯನ ಖ್ಯಾತಿಯ ಶಿಲ್ಪಿ ಅರುಣ್ ಯೋಗಿರಾಜ್ ರವರ ಕೈಚಳಕದಲ್ಲಿ ಮೂಡಿ ಬಂದಿರುವ ಶ್ರೀ ಸಾಯಿಬಾಬಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಮಹಾ ಮಂಗಳಾರತಿ

ಮಾಡಲಾಯಿತು. ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

Published

on

ಪಿರಿಯಾಪಟ್ಟಣ: ದಂಪತಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಗೊಲ್ಲರ ಬೀದಿಯಲ್ಲಿ ನಡೆದಿದೆ.

ಪಟ್ಟಣದ ಬಿ.ಎಂ ರಸ್ತೆಯ ಪ್ರವಾಸಿ ಮಂದಿರ ಬಳಿ ಕ್ಯಾಂಟೀನ್ ವ್ಯಾಪಾರ ನಡೆಸುತ್ತಿದ್ದ ಪ್ರಕಾಶ್ (51) ಹಾಗೂ ಚಿಲ್ಲರೆ ಅಂಗಡಿ ಮತ್ತು ಹಲ್ಲರ್ ಮಿಲ್ ಇಟ್ಟುಕೊಂಡು ಜೀವನ ಮಾಡುತ್ತಿದ್ದ ಪ್ರಕಾಶ್ ಅವರ ಪತ್ನಿ ಯಶೋದ (48) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ದಂಪತಿಗಳು,

ಗುರುವಾರ ರಾತ್ರಿ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ಮನೆಗೆ ತೆರಳಿದ್ದ ದಂಪತಿಗಳು

ಶುಕ್ರವಾರ ಬೆಳಗ್ಗೆ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳು ತನುಶ್ರೀ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ ರಾತ್ರಿವರೆಗೂ ಹಲವಾರು ಬಾರಿ ಕರೆ ಮಾಡಿ ಕರೆ ಸ್ವೀಕರಿಸದ ಕಾರಣ ಸಂಬಂಧಿಕರಿಗೆ ಫೋನ್ ಮೂಲಕ ಮನೆಯ ಬಳಿ ತೆರಳಿ ನೋಡುವಂತೆ ಕೋರಿದಾಗ ಸಂಬಂಧಿಕರು ಮನೆಯ ಬಳಿ ತೆರಳಿ ಕಿಟಕಿ ತೆರೆದು ನೋಡಿದಾಗ  ಅನುಮಾನ ರೀತಿಯಲ್ಲಿ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ, ತಕ್ಷಣ ಪೊಲೀಸರಿಗೆ ಕರೆ ಮಾಡಿ ಪೊಲೀಸರು ಬಾಗಿಲು ಮುರಿದು ಮನೆ ಒಳಗಡೆ ಪ್ರವೇಶಿಸಿ ಶವಗಳನ್ನು ಪಟ್ಟಣದ  ಶವಗಾರಕ್ಕೆ ಸಾಗಿಸಿದ್ದಾರೆ.


ಘಟನೆ ಸಂಭಂದ ಅನುಮಾನ ವ್ಯಕ್ತಪಡಿಸಿ ಮೃತ ದಂಪತಿ ಪುತ್ರಿ ತನುಶ್ರೀ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

Trending

error: Content is protected !!