Connect with us

Uncategorized

ಮಲೆಮಹದೇಶ್ವರ ಬೆಟ್ಟದ ಸಾಲೂರು ಕೃಪಾ ಸಂಸ್ಥೆ ವತಿಯಿಂದ ಭ್ರಷ್ಟಾಚಾರ ಮುಕ್ತ ಸದೃಢ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಸಂವಾದ ಹಮ್ಮಿಕೊಳ್ಳಲಾಗಿತ್ತು.

Published

on

ಬೃಹದಾಕಾರವಾಗಿ ಬೆಳೆದಿರುವ ಭ್ರಷ್ಟಾಚಾರವನ್ನು ನಿಗ್ರಹಿಸಲು ಕೈಗೊಳ್ಳಬೇಕಾದ ಕ್ರಮವನ್ನು ಗುರುತಿಸಬೇಕಾದರೆ ಭ್ರಷ್ಟಾಚಾರದ ಹಿನ್ನೆಲೆ, ಅದರ ಉಗಮ ಮತ್ತು ಅದರ ಸ್ವರೂಪದ ಬಗ್ಗೆ ಗಮನ ಹರಿಸುವುದು ಅಗತ್ಯ ಎಂದು ಸಾಲೂರು ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ತಿಳಿಸಿದರು.

ತಾಲ್ಲೂಕಿನ ಶ್ರೀ ಸಾಲೂರು ಬೃಹನ್ಮಠದಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ಕೃಪಾ ಎಜುಕೇಷನ್ ಸೋಸೈಟಿಯ ವತಿಯಿಂದ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ಮುಕ್ತ ಸದೃಢ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತರೆ ದೇಶಗಳಂತೆ ಭಾರತದಲ್ಲೂ ಭ್ರಷ್ಟಾಚಾರಕ್ಕೆ ತನ್ನದೇ ಆದ ಇತಿಹಾಸವಿದೆ. ಭ್ರಷ್ಟಾಚಾರವೆಂಬ ಸಾಮಾಜಿಕ ಪಿಡುಗು ಇಂದು ನೆನ್ನೆಯದಲ್ಲ. ಸಾವಿರಾರು ವರ್ಷಗಳ ಹಿಂದೆಯೇ ಭ್ರಷ್ಟಾಚಾರ ಈ ದೇಶವನ್ನು ಮಾತ್ರವಲ್ಲ, ಇಡೀ ವಿಶ್ವವನ್ನೇ ಸುತ್ತುವರಿದಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದ ದೆಸೆಯಿಂದಲೆ ಭ್ರಷ್ಟಾಚಾರ ಮುಕ್ತ ಸದೃಢ ಭಾರತ ನಿರ್ಮಾಣದಲ್ಲಿ ಮಹತ್ತರಪಾತ್ರ ವಹಿಸಬೇಕೆಂದು ತಿಳಿಸಿದರು.

ಭಾರತ ಸರ್ವೋಚ್ಛ ನ್ಯಾಯಲಯದ ನಿವೃತ್ತ ನ್ಯಾಯಮೂರ್ತಿಗಳೂ ಹಾಗೂ ಕರ್ನಾಟಕ ನಿ. ಲೋಕಾಯುಕ್ತರು ಆದ ನ್ಯಾ. ಸಂತೋಷ್ ಹೆಗ್ಡೆ ಮಾತನಾಡಿ ನಮ್ಮ ದೇಶ ಆರ್ಥಿಕವಾಗಿ ಅಭಿವೃದ್ಧಿಯಾಗಿದೆ ಆದರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆಗಳ ಅಭಾವವಿದೆ, ಇಂದಿನ ಸಮಾಜ ಬರೀ ಶ್ರೀಮಂತಿಕೆ – ಅಧಿಕಾರವನ್ನು ಮಾತ್ರ ಬಯಸುವಂತಾಗಿದೆ, ಇಂತಹ ಸಮಾಜದ ಬದಲಾವಣೆ ಇಂದಿನ ಯುವ ಜನಾಂಗದಿಂದ ಮಾತ್ರ ಸಾಧ್ಯ, ಈ ದೇಶದಲ್ಲಿ ಅಭಿವೃದ್ಧಿ ಆಗಿರಬಹುದು ದುರಾಸೆಯೆಂಬ ರೋಗ ದುರಾಸೆಯನ್ನು ತೊಲಗಿಸುವ ಒಂದೇ ಒಂದು ಮದ್ದು ತೃಪ್ತಿ ಪೋಷಕರು ತಮ್ಮ ಮಕ್ಕಳ ಜೊತೆ ಸಂವಹನ ಇಟ್ಟುಕೊಳ್ಳಬೇಕು,ಹಣದ ಸೋರಿಕೆಯಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ತಿಳಿಸಿದರು,

ನಂತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು,

ಈ ಕಾರ್ಯಕ್ರಮದಲ್ಲಿ ನಿ. ಪ್ರಾಧ್ಯಪಕರಾದ ಶಿವರಾಜಪ್ಪ, ಮಾನಸ ಶಿಕ್ಷಣ ಸಂಸ್ಥೆಯ ದತ್ತೇಶ್ , ಶ್ರೀಮಠದ ಶಾಲೆಯ ಸಿಬ್ಬಂಧಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Uncategorized

ಅಖಿಲ ಭಾರತ ಸಮ್ಮೇಳನದಲ್ಲಿ 87 ಪುಸ್ತಕ ಪ್ರಕಟ: ನಾಡೋಜ ಮಹೇಶ ಜೋಶಿ

Published

on

ಮಂಡ್ಯ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 87 ಪುಸ್ತಕಗಳನ್ನು ಪ್ರಕಟಿಸಲಾಗುವುದು, ಮಂಡ್ಯ ಜಿಲ್ಲೆಯ ನಾಡು ನುಡಿ ಸಾಂಸ್ಕೃತಿಕ ಕಲೆಗಳಿಗೆ ಸೀಮಿತವಾದ ವಿಷಯಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಪುಸ್ತಕ ಪ್ರಕಟಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

87 ಪುಸ್ತಕಗಳ ಪೈಕಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅತಿ ಮುಖ್ಯವಾದ ಕೆಲವು ಪುಸ್ತಕಗಳನ್ನು ಮರು ಮುದ್ರಣ ಮಾಡಲಾಗುವುದು. ಇದರ ಜೊತೆಗೆ ಮಂಡ್ಯ ಜಿಲ್ಲೆಗೆ ಸೀಮಿತವಾದ ವಿಷಯಗಳನ್ನಿಟ್ಟುಕೊಂಡು ಜಿಲ್ಲೆಯ ಸಾಹಿತಿಗಳು, ಲೇಖಕರಿಂದ 50ಕ್ಕೂ ಹೆಚ್ಚು ಪುಸ್ತಕಗಳನ್ನು ಹೊಸತಾಗಿ ರಚಿಸಲು ಪ್ರಕಟಣಾ ಸಮಿತಿ ರೂಪುರೇಷೆ ಹಮ್ಮಿಕೊಳ್ಳುತ್ತದೆ ಎಂದು ತಿಳಿಸಿದರು.

ಜಿಲ್ಲೆಗೆ ಸಂಬಂಧಿಸಿದಂತೆ ಪ್ರವಾಸಿ ತಾಣಗಳು, ಸಾಂಸ್ಕೃತಿಕ ಕೇಂದ್ರಗಳು, ದೇಶಕ್ಕಾಗಿ ಪ್ರಾಣ ಕೊಟ್ಟ ಹುತಾತ್ಮರು, ಸಾರಸ್ವತ ಲೋಕ ಕಟ್ಟಿದವರು, ಜಿಲ್ಲೆಯ ಸಾಧಕರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ, ಕರ್ನಾಟಕ ಏಕೀಕರಣ, ಕೃಷ್ಣರಾಜಸಾಗರ(ಕನ್ನಂಬಾಡಿ) ಏಳು ತಾಲ್ಲೂಕುಗಳ ದರ್ಶನ, ಸಾಂಸ್ಕೃತಿಕ ಕೇಂದ್ರಗಳು, ಜಿಲ್ಲೆಯ ವಾಸ್ತುಶಿಲ್ಪ, ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ದಾರಿ ತೋರಿದ ದಾರ್ಶನಿಕರು, ನಾಡು ಕಟ್ಟಿದವರು ವಿಷಯಗಳೂ ಸೇರಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ 80 ರಿಂದ 100 ಪುಟಗಳ ಒಳಗಿನ ಪುಸ್ತಕಗಳನ್ನು ಹೊರ ತರಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಕೃತಿಗಳನ್ನು ಜನಸಾಮಾನ್ಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲರಿಗೂ ಅರ್ಥವಾಗುವ ಭಾಷಾ ಶೈಲಿಯಲ್ಲಿ ರಚಿಸಲಾಗುವುದು. ಕೃತಿಗಳನ್ನು ರಚಿಸುವ ಆಸಕ್ತಿಯುಳ್ಳ ಲೇಖಕರಿಗೆ ಅವಕಾಶ ನೀಡಬೇಕಾಗಿದ್ದು ಆಯಾ ಕ್ಷೇತ್ರದಲ್ಲಿ ಪರಿಣತಿ, ತಿಳುವಳಿಕೆ, ಆಸಕ್ತಿ ಇರುವವರನ್ನು ಸಾಮಾಜಿಕ, ಪ್ರಾದೇಶಿಕ ಮತ್ತು ಪ್ರತಿಭಾ ನ್ಯಾಯದ ಆಧಾರದ ಮೇಲೆ ಲೇಖಕರನ್ನು ಆಯ್ಕೆ ಮಾಡಿ ಹಾಗೂ ಕಾಲಮಿತಿಯೊಳಗೆ ಪುಸ್ತಕ ರಚಿಸಿ ಕೊಡಲು ಬದ್ಧತೆ ಇರುವವರ ಹೆಸರನ್ನು ಮುಂದಿನ ಸಭೆಯೊಳಗೆ ಸೂಚಿಸಬೇಕೆಂದು ಸಮಿತಿ ಸದಸ್ಯರಿಗೆ ತಿಳಿಸಿದರು.

ಅವರುಗಳ ಬಗ್ಗೆ ಪರಿಶೀಲನೆ ನಡೆಸಿ ಆಯ್ಕೆ ಮಾಡಿ ಪುಸ್ತಕ ರಚಿಸಲು ಅವಕಾಶ ಮಾಡಿಕೊಡಲಾಗುವುದು. ಬಿಡುಗೆಯಾಗುವ ಈ ಕೃತಿಗಳು ಮೌಲಿಕ ಹಾಗೂ ಆಕರ ಗ್ರಂಥ ಆಗುವ ರೀತಿಯಲ್ಲಿರಬೇಕು. ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅದ್ಭುತ ಯಶಸ್ಸು ಕಂಡ ನಂತರ ಮಂಡ್ಯದಲ್ಲಿ ನಡೆಯುವ 87ನೇ ಸಮ್ಮೇಳನದ ಕುರಿತು ಕನ್ನಡಿಗರಲ್ಲಿ ಅಪಾರ ನಿರೀಕ್ಷೆ, ಮತ್ತು ಕುತೂಹಲವಿದೆ, ಈ ನಿಟ್ಟಿನಲ್ಲಿ ಇದೊಂದು ಮಾರ್ಗದರ್ಶಿ ಸಮ್ಮೇಳನವಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ ಮಾತನಾಡಿ, ಹಾವೇರಿಯಲ್ಲಿ ನಡೆದ 86ನೇ ಸಮ್ಮೇಳನ ನಡೆದುದಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿ ನಡೆಸಲಾಗುವುದು. ಮಂಡ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗುವ ಪುಸ್ತಕಗಳು ಸಾರ್ವಕಾಲಿಕವಾಗಿ ಉಳಿಯುವಂತೆ ಮಾಡಲು ಪುಸ್ತಕ ಸಮಿತಿ ಒಗ್ಗಟ್ಟಿನಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದ್ದು, ಜಿಲ್ಲೆಯ ಘನತೆ ಹೆಚ್ಚಿಸುವ ರೀತಿಯಲ್ಲಿ ಎಲ್ಲರೂ ಸಮ್ಮೇಳನ ನಡೆಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಕೇಂದ್ರ ಕಸಾಪ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಜಿಲ್ಲಾ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಪದಾಧಿಕಾರಿಗಳಾದ ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ಚಂದ್ರಲಿಂಗು, ಪೂರ್ಣಚಂದ್ರ, ಸಮಿತಿ ಸದಸ್ಯರಾದ ಸುಮಾರಾಣಿ ಶಂಭು, ಭವಾನಿ ಲೋಕೇಶ್, ಶುಭಶ್ರೀ ಪ್ರಸಾದ್, ಎಂ.ಯು.ಶ್ವೇತಾ, ಷೌಕತ್ ಆಲಿ, ಚಲುವೇಗೌಡ, ಚಂದ್ರಶೇಖರಯ್ಯ, ಶಿವಣ್ಣ, ಕೊತ್ತತ್ತಿ ರಾಜು, ಹರಿಚರಣ ತಿಲಕ್, ಧರ್ಮಪ್ಪ, ಬಸಪ್ಪ ನೆಲಮಾಕನಹಳ್ಳಿ ಭಾಗವಹಿಸಿದ್ದರು.

Continue Reading

Uncategorized

ಮತದಾನ ಜಾಗೃತಿ ಕಾರ್ಯಕ್ರಮ

Published

on

ಯಳಂದೂರು ಸಮೀಪದ ಕುದೇರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾಗೂ ಗ್ರಾಮಪಂಚಾಯತಿ ಅವರ ಸಹಯೋಗದೊಂದಿಗೆ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು,

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ ಮನೆಗಳಿಗೆ ಭೇಟಿ ನೀಡಿ ಮತದಾನ ಕುರಿತು ಜಾಗೃತಿ ಗೊಳಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಥಿಯೋಡರ್ ಲೂಥರ್ ಹಾಗೂ ರಾಜ್ಯಶಾಸ್ತ್ರ ವಿಭಾಗದ ಅಧ್ಯಾಪಕರಾದ ಮಹೇಂದ್ರ ಅವರುಗಳು ಮತದಾನದ ಮಹತ್ವವನ್ನು ಕುರಿತು ಮಾತನಾಡಿದರು,

ದಿನಾಂಕ 26.04.2024 ರಂದು ನಡೆಯಲಿರುವ ಲೋಕ ಸಭಾ ಚುನಾವಣೆಯಲ್ಲಿ ಅರ್ಹ ಮತದಾರೆಲ್ಲರೂ ಮತದಾನ ಮಾಡಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕರಾದ ವಾಣಿ.ವಿ,ಶಶಿಕಲಾ,ಕವಿತಾ,ಮಧುಸೂದನ್, ಶ್ರೀನಿವಾಸ್,ಬಸವಣ್ಣ,ಮಲ್ಲಿಕಾರ್ಜುನ,ಭಾಗ್ಯಮ್ಮಹಾಗೂ ಗ್ರಾಮ ಪಂಚಾಯತಿ ಪಿಡಿಓ ಅವರಾದ ಗೋವಿಂದಯ್ಯ ಅವರುಗಳು ಭಾಗವಹಿಸಿದರು.
ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Continue Reading

Uncategorized

ಮತದಾನ ಜಾಗೃತಿ ಕುರಿತು ನಾಟಕ ಪ್ರದರ್ಶನ

Published

on

ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೋಟರಿ ಜಿಲ್ಲೆ 3181 ರ ಪಬ್ಲಿಕ್ ಇಮೇಜ್ ಟೀಮ್ ಮತ್ತು ರೋಟರಿ ಕ್ಲಬ್ ಆಫ್ ಯಳಂದೂರು ಗ್ರೀನ್ ವೇ ಸಹಯೋಗದಲ್ಲಿ ಮತದಾನ ಜಾಗೃತಿ ಕುರಿತು ನಾಟಕ ಪ್ರದರ್ಶನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗ್ರೀನ್ ವೇ ನ ಅಧ್ಯಕ್ಷರು ಡಾ | ಸಾಗರ್ ವಿ ಜಿ, ಕಾರ್ಯದರ್ಶಿ ಬಂಗಾರು, ನಿಯೋಜಿತ ಕಾರ್ಯದರ್ಶಿ ನಿರಂಜನಾಸ್ವಾಮಿ ರೋಟರಿ ಆನ್ ವೀಲ್ಸ್ ಕಾರ್ಯಕ್ರಮದಡಿಯಲ್ಲಿ ರೋಟರಿ ಕ್ಲಬ್ ಆಫ್ ಪುತ್ತೂರು ಎಲೈಟ್, ರೋಟರಿ ಕ್ಲಬ್ ಆಫ್ ಪುತ್ತೂರು ಯುವ ನ ಸದಸ್ಯರು, ಪಬ್ಲಿಕ್ ಇಮೇಜ್ ಛೇರ್ಮನ್ ಕೆ. ವಿಶ್ವಾಸ್ ಶೆಣೈ, ಮತ್ತು ಸಾರ್ವಜನಿಕರು ಹಾಜರಿದ್ದರ,

Continue Reading

Trending

error: Content is protected !!