Uncategorized
ಸಂಭ್ರಮದಿಂದ ಜರುಗಿದ ಕಣತೂರು ಗ್ರಾಮದ ಆದಿ ಶಕ್ತಿ ಶ್ರೀ ದೇವಿರಮ್ಮ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಕಣತೂರು ಗ್ರಾಮದೇವತೆ ಶ್ರೀ ದೇವಿರಮ್ಮ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಜಾತ್ರೆ, ಕೊಂಡೋತ್ಸವ, ಸಿಡಿ ಮಹೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ತಾಲೂಕಿನ ಪಾಳ್ಯ ಹೋಬಳಿ ಕಣತೂರು ಗ್ರಾಮದಲ್ಲಿರುವ ಶ್ರೀ ದೇವಿರಮ್ಮ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯು ಶುಕ್ರವಾರ ರಾತ್ರಿ ದೇವಿರಮ್ಮನ ಸಹೋದರಿಯರಾದ ವಲಹಳ್ಳಿ ಮತ್ತು ಕಾಮತಿ ಗ್ರಾಮದ ನೆಲೆಸಿರುವ ಶ್ರೀ ಮುದಿಯಮ್ಮ, ಶ್ರೀ ಕೆಂಪಮ್ಮ ಶ್ರೀ ಬೆಳ್ಳಿ ಮುಖದಮ್ಮ ದೇವರುಗಳು ಕಣತೂರು ಗ್ರಾಮದಲ್ಲಿ ನೆಲೆಸಿರುವ ಶ್ರೀ ದೇವಿರಮ್ಮನ ದೇವಿಯ ದೇವಸ್ಥಾನಕ್ಕೆ ಆಗಮಿಸಿದ ದೇವಿಯನ್ನು ಆಂಜನೇಯ ದೇವಸ್ಥಾನದ ಪಕ್ಕದಲ್ಲಿರುವ ಗಂಗೆ ಕಟ್ಟೆಯ ಬಳಿ ಕರೆದುಕೊಂಡು ಹೋಗುತ್ತವೆ. ನಂತರ ದೇವಿರಮ್ಮ ಹಾಗೂ ಚೋಮ ದೇವರಿಗೆ ಗಂಗಾಭಿಷೇಕ ಮಾಡಿ ಪೂಜೆ ಸಲ್ಲಿಸಿದ ನಂತರ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗಾಮದ ಮುತ್ತೈದೆಯರು ದೇವಿಯರಿಗೆ ಮಡಿಲಕ್ಕಿ ಕೊಡುತ್ತಾರೆ ನಂತರ ದೇವೀರಮ್ಮನವರ ಮತ್ತು ವೀರಭದ್ರಸ್ವಾಮಿಯ ಉತ್ಸವ ಮಾಡಲಾಯಿತು. ರಾತ್ರಿಯಿಡೀ ಚೋಮ ದೇವರು ಕುಣಿತವನ್ನು ಭಕ್ತರು ಕಣ್ಣುಂಬಿಕೊಂಡು ಕರ್ಪೂರ ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶನಿವಾರ ಬೆಳಗಿನ ಸೂರ್ಯೋದಯದ ಸಮಯದಲ್ಲಿ ದೇವಾಸ್ಥಾನದ ಆವರಣದಲ್ಲಿ ಎಲ್ಲಾ ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ಮಾಡಿ ಪೂಜೆ ನಂತರ ದೇವಾಲಯದ ಮುಂಭಾಗ 7.15 ಕ್ಕೆ ಕೊಂಡೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಯುವಕರು ದೇವರ ಅಡ್ಡೆಗಳನ್ನು ಹೊತ್ತು ಕೆಂಡ ತುಳಿದು ಭಕ್ತಿಪರವಶರಾದರು, ಸಿಡಿ ಕಾರ್ಯವನ್ನು ಪ್ರತಿ ವರ್ಷ ನಡೆಸಿಕೊಂಡು ಬಂದಿರುವ ಕಣತೂರು ಗ್ರಾಮದ ಪಾಲಾಕ್ಷ ರವರು ಕಳೆದ ಮೂರು ದಿನಗಳಿಂದ ಉಪವಾಸ ವ್ರತವನ್ನು ಕೈಗೊಂಡು
ಸಂಜೆ 4.30ಕ್ಕೆ ಸಿಡಿ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದರು.
ನಾಕಲಗೂಡು, ಕುಂಬಾರಹಳ್ಳಿ, ಗೇಕರವಳ್ಳಿ, ತೊರಳ್ಳಿ, ಭಾವಸುವಳ್ಳಿ, ಸಿದ್ದಾಪುರ, ಕೋಡಿಗೆಹಳ್ಳಿ, ಹಳೆ ಆಲೂರು, ಮರಸು, ಗುಡ್ಡೇನಹಳ್ಳಿ, ತಾಳೂರು, ಚಿಕ್ಕಕಣಗಾಲು ಕಾರ್ಜುವಳ್ಳಿ, ಕಾಮತಿ, ವಲ್ಲಳ್ಳಿ ಸೇರಿದಂತೆ ಮುಂತಾದ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾದಿಗಳು ಅಲಂಕೃತಗೊಂಡಿದ್ದ ದೇವೀರಮ್ಮ ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿಯವರಿಗೆ ಪೂಜೆ ಸಲ್ಲಿಸಿದ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಆಲೂರು ಪೊಲೀಸ್ ಠಾಣೆಯ ವತಿಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ದೇವಾಸ್ಥಾನದ ಆಡಳಿತ ಮಂಡಳಿ ವತಿಯಿಂದ ನೆರೆದಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
Uncategorized
ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಒಪ್ಪದ ಹಿನ್ನೆಲೆ ಪತ್ನಿ ಮತ್ತು ಸಂಬಂಧಿಕರ ಮೇಲೆ ಹಲ್ಲೆ

ಶ್ರೀರಂಗಪಟ್ಟಣ : ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಒಪ್ಪದ ಹಿನ್ನಲೆ ಪತ್ನಿ, ಆಕೆಯ ತಾಯಿ ಹಾಗೂ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಪಾಲಹಳ್ಳಿ ಗ್ರಾಮದ ಲೇಟ್ ಈಶ್ವರ್ ರಾವ್ ರವರ ಮಗ ರವಿಕಿರಣ್ ಎಂಬುವವರು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂ್ ದೂರು ದಾಖಲಿಸಿದ್ದಾರೆ.
ನನ್ನ ಅಕ್ಕ ಲಕ್ಷ್ಮಿ ಅವರನ್ನ ಸುಮಾರು 15 ವರ್ಷಗಳ ಹಿಂದೆ, ನಮ್ಮ ಗ್ರಾಮದ ಲೇಟ್ ಬಾಲಚಂದ್ರ ಮತ್ತು ಕೃಷ್ಣವೇಣಿ ರವರ ಮಗ ಶ್ರೀಕಾಂತ್ ಎಂಬುವನಿಗೆ ನಮ್ಮ ಹಿಂದೂ ಸಂಪ್ರಾದಾಯದಂತೆ, ಮದುವೆ ಮಾಡಿರುತ್ತೇವೆ.
ನನ್ನ ಅಕ್ಕ ಮತ್ತು ಶ್ರೀಕಾಂತ್ ಗೆ ಹೇಮಂತ್ ಮತ್ತು ಸುಮಾಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಸುಮಾಂತ್ ಎಂಬ ಮಗುವಿಗೆ ಬ್ಲಡ್ ಕ್ಯಾನ್ಸರ್ ಇರುತ್ತದೆ.
ನನ್ನ ಅಕ್ಕನ ಗಂಡ ಶ್ರೀಕಾಂತ್ ಮತ್ತು ಅವರ ಅಣ್ಣ ಹರೀಶ್, ತಮ್ಮ ಪ್ರಶಾಂತ್ ಅವರ ತಾಯಿ ಕೃಷ್ಣವೇಣಿ ಇವರುಗಳು ಈಗ್ಗೆ ಸುಮಾರು 4 ವರ್ಷದ ಹಿಂದೆ ಕೆಲವು ಆಸೆ ಅಮಿಷಗಳಿಗೆ ಒಳಗಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದು, ಅವರ ಧರ್ಮ ಮತ್ತು ಹೆಸರುಗಳನ್ನು ಬದಲಾವಣೆ ಮಾಡಿಕೊಂಡು ಶ್ರೀಕಾಂತ್ ರವರು ಜಾನ್ ಮತ್ತು ಅವರ ಅಣ್ಣ ಹರೀಶ್ ಪೀಟರ್ ಮತ್ತು ತಮ್ಮ ಪ್ರಶಾಂತ್ ಡೇವಿಡ್ ಹಾಗೂ ಅವರ ತಾಯಿ ಮೇರಿ ಎಂದು ಬದಲಾವಣೆ ಮಾಡಿಕೊಂಡಿರುತ್ತಾರೆ.
ನಂತರ ನನ್ನ ಅಕ್ಕನಿಗೂ ಸಹ ಕಳೆದ ನಾಲ್ಕುವರ್ಷಗಳಿಂದ ಬಲವಂತವಾಗಿ ಮತಾಂತರವಾಗಲು ಆಸೆ, ಆಮಿಷ ಮತ್ತು ಬೆದರಿಕೆ ಹಾಕುತ್ತಿರುವುದಾಗಿ ಅಕ್ಕನಿಂದ ತಿಳಿದ ನಂತರ ಅವರಿಗೆ ಬುದ್ದಿವಾದ ಹೇಳಿ, ನಮ್ಮ ಅಕ್ಕನಿಗೆ ಬಲವಂತವಾಗಿ ಮತಾಂತರವಾಗಲು ಬೆದರಿಕೆ ಹಾಕಬೇಡಿ ಎಂದು ತಿಳಿ ಹೇಳಿದ್ದೆವು.
ಇದಾದ ಬಳಿಕ ನನ್ನ ಅಕ್ಕನ ಗಂಡ ಶ್ರೀಕಾಂತ್ ಮತ್ತು ಅವರ ಅಣ್ಣ ಹರೀಶ್, ಅತ್ತಿಗೆ ನಾಗಿಣಿ, ತಮ್ಮ ಪ್ರಶಾಂತ್ ಹಾಗೂ ಅವರ ತಾಯಿ ಕೃಷ್ಣವೇಣಿ ಈ ಐದು ಮಂದಿ ಸೇರಿಕೊಂಡು ನನ್ನ ಅಕ್ಕನಿಗೆ ತವರು ಮನೆಯಿಂದ ಹಣ ತರಬೇಕು ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ನಮಗೆ ತಿಳಿಸಿದ್ದರು. ನನ್ನ ಅಕ್ಕನ ಸಂಸಾರ ಚೆನ್ನಾಗಿರಬೇಕೆಂಬ ಉದ್ದೇಶದಿಂದ ನಾನು ಈಗಾಗಲೇ ಹಲವೆಡೆ ಸಾಲ ಪಡೆದು, ಸುಮಾರು 25 ಲಕ್ಷ ರೈ.ಗಳನ್ನ ನಮ್ಮ ಭಾವನಿಗೆ ಕೊಟ್ಟಿದ್ದೇನೆ.
ನನ್ನಿಂದ ಹಣ ಪಡೆದು ಮಂಟಿಯಲ್ಲಿ ಒಂದು ಚರ್ಚ್ ಕಟ್ಟಿಸಿಕೊಂಡಿರುವ ಅವರು ಹಲವಾರು ಜನರನ್ನ ಮತಾಂತರ ಮಾಡುತ್ತಿದ್ದಾರೆ. ಜೊತೆಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ನನ್ನ ಅಕ್ಕ ಒಪ್ಪದ ಕಾರಣ, ಈ ಹಿಂದೆ ಪಾಂಡವಪುರ ಟೌನ್ ಹಳೆ ಬಸ್ ಸ್ಟ್ಯಾಂಡ್ ನಲ್ಲಿರುವ ಅವರ ಮನೆಯಲ್ಲಿ ಹಲ್ಲೆ ಸಹ ಮಾಡಿದ್ದು ಇವರ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ತಾಳಲಾರದೆ, ನನ್ನ ಅಕ್ಕ ಮನೆ ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟು ಹೋಗಿದ್ದರು. ನಮ್ಮ ತಾಯಿ ಶೃತಿ ರವರು ಪಾಂಡವಪುರ ಪೋಲೀಸ್ ಠಾಣೆಗೆ ದೂರು ಸಹ ದಾಖಲಿಸಿದ್ದರು.
ನಂತರ ಕೆ.ಆರ್.ಎಸ್ ಡ್ಯಾಂ ಬಳಿ ಸಿಕ್ಕಿದ್ದು, ಅಕೆಯನ್ನು ಸಮಾಧಾನ ಮಾಡಿಕೊಂಡು ನಮ್ನ ಮನೆಗೆ ಕರೆದುಕೊಂಡು ಬಂದಿದ್ದೆವು. ಏ.12 ರಂದು ಶ್ರೀರಂಗಪಟ್ಟಣದ ಮುಖ್ಯ ರಸ್ತೆಯಲ್ಲಿರುವ ರವಿಕುಮಾರ್ ಬಿನ್ ಲೇಟ್ ಗೋವಿಂದಪ್ಪ ಎಂಬುವವರ ಮನೆಯಲ್ಲಿ ರಾಜಿ-ಪಂಚಾಯ್ತಿ ಮಾಡುವ ಸಲುವಾಗಿ ನಾನು, ನನ್ನ ಅಕ್ಕ ಲಕ್ಷ್ಮಿ ಮತ್ತು ನನ್ನ ತಾಯಿ ಶೃತಿರವರನ್ನು ಪೋನ್ ಮಾಡಿ ಕರೆಸಿಕೊಂಡು ನನ್ನ ಅಕ್ಕನ ಗಂಡ ಶ್ರೀಕಾಂತ್ ಮತ್ತು ಅವರ ಅಣ್ಣ ಹರೀಶ್, ಅತ್ತಿಗೆ ನಾಗಿಣಿ, ತಮ್ಮ ಪ್ರಶಾಂತ್ ಅವರ ತಾಯಿ ಕೃಷ್ಣವೇಣಿ, ಮತ್ತು ರವಿಕುಮಾರ್ ಅವರ ಮಗ ಸುಬ್ರಹ್ಮಣ್ಯ, ಪ್ರಭಾ ಸಾಗರ ಎಂಬುವವರು ಒಟ್ಟಾಗಿ ಪೂರ್ವಯೋಜಿತವಾಗಿ ನಮ್ಮ ಅಕ್ಕನನ್ನು ಕೊಲೆ ಮಾಡಲೇಬೇಕೆಂಬ ಉದ್ದೇಶದಿಂದ, ಅಥವಾ ಮತಾಂತರ ಮಾಡಲೇ ಬೇಕೆಂಬ ಉದ್ದೇಶದಿಂದ, ಈಗಾಗಲೇ ಮತಾಂತರವಾಗಿರುವ ರವಿಕುಮಾರು ಮತ್ತು ಆತನ ಅಳಿಯನ ಚಿತಾವಣೆ ಮೇರೆಗೆ, ನನ್ನ ಅಕ್ಕ ಲಕ್ಷ್ಮಿಗೆ ಕಬ್ಬಿಣದ ರಾಡ್ ನಿಂದ ತಲೆಗೆ ಶ್ರೀಕಾಂತ್, ಹರೀಶ್ ಮತ್ತು ರವಿಕುಮಾರ್‌ವರವರು ಹೊಡೆದಿರುತ್ತಾರೆ.
ಜೊತೆಗೆ ನಮ್ಮ ತಾಯಿ ಶೃತಿ ರವರಿಗೆ ಕಬ್ಬಿಣದ ರಾಡ್‌ನಿಂದ ಸುಬ್ರಹ್ಮಣ್ಯ ಮತ್ತು ಕೃಷ್ಣವೇಣಿ ಮತ್ತು ನಾಗಿಣಿ ರವರುಗಳು ಬಲವಾಗಿ ಹೊಡೆದಿದ್ದು, ನಾನು ಬಿಡಿಸಲು ಹೋದಾಗ ಹರೀಶ್ ಸುಬ್ರಹ್ಮಣ್ಯ ಮತ್ತು ಪ್ರಭಾ ರವರು ಕಬ್ಬಿಣ ರಾಡ್ ನಿಂದ ನನ್ನ ಬಲಕೈಗೆ ಹೊಡೆದಿರುವುದಾಗಿ ರವಿಕಿರಣ್ ಪೊಲೀಸರಿಗೆ ದೂರು ನೀಡಿದ್ದಾರೆ.
ಹಲ್ಲೆಗೊಳಗಾದ ಲಕ್ಷ್ಮಿ, ಶೃತಿ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸರು ಐಪಿಸಿ ಸಕ್ಷನ್ 109(1), 351(2), ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮತಾಂತರ ಘಟನೆ ಬಗ್ಗೆ ರವಿಕಿರಣ್ ಹಿಂದೂ ಸಂಘಟನೆಗೆ ಮಾಹಿತಿ ನೀಡಿದ್ದು, ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಹಿಂದೂ ಸಂಘಟನೆಗಳ ಮುಖಂಡರು ಆಗಮಿಸಿ, ಹಲ್ಲೆಗೊಳಗಾದವರಿಗೆ ದೈರ್ಯ ಹೇಳಿ. ರವಿಕಿರಣ್ ಜೊತೆಯಲ್ಲಿದ್ದು, ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Mysore
ಶ್ರೀಕಂಠೇಶ್ವರ ಸ್ವಾಮಿಯವರು ಗೌತಮ ಪಂಚಮಹಾ ರತೋತ್ಸವ ಹಿನ್ನೆಲೆ, ಶುಕ್ರವಾರ ಕಪಿಲಾ ನದಿಯಲ್ಲಿ ವಿಜೃಂಭಣೆಯಿಂದ ತೆಪ್ಪೋತ್ಸವ

ನಂಜನಗೂಡು ಏ.11 ಮಹದೇವಸ್ವಾಮಿ ಪಟೇಲ್
ಶ್ರೀಕಂಠೇಶ್ವರ ಸ್ವಾಮಿಯವರು ಗೌತಮ ಪಂಚಮಹಾ ರತೋತ್ಸವ ಹಿನ್ನೆಲೆ, ಶುಕ್ರವಾರ ಕಪಿಲಾ ನದಿಯಲ್ಲಿ ವಿಜೃಂಭಣೆಯಿಂದ ತೆಪ್ಪೋತ್ಸವ ನೆರವೇರಿತು.
ಇಂದು ಶುಕ್ರ ವಾರ ಸಂಜೆ 7 ಗಂಟೆಗೆ ದೇಗುಲದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ರವರು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ಉತ್ಸವ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿ, ಶ್ರೀಕಂಠಮುಡಿಧಾರಣೆಯಿಂದ ವಿಶೇಷವಾಗಿ ಕಂಗೊಳಿಸುತ್ತಿದ್ದ ಮೂರ್ತಿಯನ್ನು ನೋಡಿ ಸಾವಿರಾರು ಭಕ್ತರು ಪುಳಕಿತರಾದರು. ವಿದ್ಯುತ್ ದೀಪದಿಂದ ಅಲಂಕೃತಗೊಂಡ ತೇಲುವ ದೇವಾಲಯದಲ್ಲಿ ಶ್ರೀಕಂಠೇಶ್ವರ ಮೂರ್ತಿಯನ್ನು ಕುಳ್ಳಿರಿಸಿ, ಮೂರು ಸುತ್ತು ಪ್ರದಕ್ಷಣೆ ಮಾಡಲಾಯಿತು. ಸ್ನಾನಘಟ್ಟ ಮತ್ತು ಸೋಪಾನ ಕಟ್ಟೆ ಬಳಿ ಕುಳಿತಿದ್ದ ಸಹಸ್ರಾರು ಭಕ್ತರು ತೆಪ್ಪೋಸ್ತವ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಬಾಣ ಬಿರುಸು ಮತ್ತು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.
ತೆಪ್ಪೋತ್ಸವ ನೋಡಿಕೊಂಡು ತೇರಿಗೆ ಹಣ್ಣುಜವನ ಎಸೆದು ಧೂಪ ಹಾಕಿ ಸಂಭ್ರಮಿಸಿದರು.
ಆರ್.ಪಿ.ರಸ್ತೆಯಲ್ಲಿ ವಿವಿಧ ಸಂಘ ಸಂಸ್ಥೆಗಳು, ಅಂಗಡಿ ಮಾಲೀಕರು ಅನ್ನಸಂತರ್ಪಣೆ , ಭಕ್ತಾದಿಗಳಿಗೆ ಕೊಡಲು ಮುಂದಾದರು.
ಯಾವುದೇ ಅಹಿತಕರ ಘಟನೆ ನಡೆದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಸೇರಿದಂತೆ ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞರನ್ನು ಈ ಸಂದರ್ಭದಲ್ಲಿ ನಿಯೋಜನೆ ಮಾಡಲಾಗಿತ್ತು.
Uncategorized
ವಾಲ್ಮೀಕಿ ನಿಗಮ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ.
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಇಡಿ ಮನವಿ ಮಾಡಿತ್ತು. ಅದರಂತೆ ಇಂದು (ಬುಧವಾರ) ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು, ಮತ್ತೆ ಸಚಿವರಾಗಲು ಕನಸು ಕಾಣುತ್ತಿದ್ದ ನಾಗೇಂದ್ರಗೆ ಬಿಗ್ ಶಾಕ್ ಎದುರಾಗಿದೆ.
ಸದ್ಯ ಜಾಮೀನು ಪಡೆದು ಹೊರ ಬಂದಿರುವ ನಾಗೇಂದ್ರಗೆ ಈಗ ಮತ್ತೆ ಇಡಿ ಶಾಕ್ ಎದುರಾಗಿದ್ದು, ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಬಂದು ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
-
Chamarajanagar23 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Mysore20 hours ago
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ
-
Hassan24 hours ago
ಬಗರ್ ಹುಕುಂ ಸಾಗುವಳಿ ಮಂಜೂರಾತಿಯ ಸಭೆ
-
Kodagu20 hours ago
ಹುಲಿ ದಾಳಿಗೆ ಕರು ಬಲಿ
-
Kodagu23 hours ago
ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಚರಣೆ
-
Mysore21 hours ago
ಆರ್. ರಘು ಅವರ ಎರಡು ಕೃತಿಗಳ ಲೋಕಾರ್ಪಣೆ
-
Hassan6 hours ago
ಹಾಸನ : ಕಾರಿನೊಳಗೆ ಅಸಿಸ್ಟೆಂಟ್ ಅಕೌಂಟೆಂಟ್ ಅನುಮಾನಾಸ್ಪದ ಸಾ*ವು
-
Kodagu6 hours ago
ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಿ – ಬೆಂಗಳೂರು ಕೊಡವ ಸಮಾಜ ಸಿಎಂಗೆ ಮನವಿ