Connect with us

Sports

ಟಿ-20 ವಿಶ್ವಕಪ್‌ ಕ್ರಿಕೆಟ್‌ಗೆ ಟೀಂ ಇಂಡಿಯಾ ತಂಡ ಪ್ರಕಟ

Published

on

ಮುಂಬೈ: ಟಿ20 ವಿಶ್ವಕಪ್‌ ಕ್ರಿಕೆಟ್‌ಗೆ ಟೀಂ ಇಂಡಿಯಾ ತಂಡವನ್ನು ಆಯ್ಕೆ ಮಾಡಲಾಗಿದ್ದು ಶುಭಮನ್‌ ಗಿಲ್‌ ಅವರನ್ನು ಕೈ ಬಿಟ್ಟು, ಆಲ್‌ರೌಂಡರ್‌ ಆಟಗಾರ ಅಕ್ಷರ್‌ ಪಟೇಲ್‌ ಅವರಿಗೆ ಉಪನಾಯಕನ ಪಟ್ಟವನ್ನು ನೀಡಲಾಗಿದೆ.

ಭಾರತ ತಂಡವನ್ನು ಸೂರ್ಯಕುಮಾರ್‌ ಯಾದವ್‌ ಅವರು  ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಬಹುತೇಕ ಆಫ್ರಿಕಾ ವಿರುದ್ಧ ಆಡಿರುವ ಆಟಗಾರರಿಗೆ ಸ್ಥಾನ ನೀಡಲಾಗಿದೆ.

ಶುಭಮನ್‌ ಗಿಲ್‌ ಸ್ಥಾನದಲ್ಲಿ, ಅಭಿಷೇಕ್‌ ಶರ್ಮಾ ಅವರೊಂದಿಗೆ ಸಂಜು ಸಾಮ್ಸನ್‌ ಅಥವಾ ಇಶನ್‌ ಕಿಶನ್‌ ಆರಂಭಿಕ ಬ್ಯಾಟರ್‌ಗಳಾಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

ಟೀ ಇಂಡಿಯಾ ಪರ ಆಟಗಾರರು ಯಾರು?

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ಕೀಪರ್‌), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್ (ಉಪನಾಯಕ), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ್ ಯಾದವರ್ ಸಿಂಗ್, ಕುಲದೀಪ್ ಯಾದವ್‌, ವರುಣ್‌ ಚಕ್ರವರ್ತಿ, ವಾಷಿಂಗ್ಟನ್‌ ಸುಂದರ್‌, ಇಶಾನ್‌ ಕಿಶಾನ್‌.

2026 ರ ಟಿ-20 ವಿಶ್ವಕಪ್ ಯಾವಾಗ, ಎಲ್ಲಿ ನಡೆಯಲಿದೆ?

2026 ರ ಟಿ-20 ವಿಶ್ವಕಪ್ ಫೆಬ್ರವರಿ. 7 ರಂದು ಪ್ರಾರಂಭವಾಗಿ ಮಾರ್ಚ್ 8 ರವರೆಗೆ ನಡೆಯಲಿದೆ. ಈ ಐಸಿಸಿ ಟೂರ್ನಮೆಂಟ್ ಅನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿವೆ. ಆದ್ದರಿಂದ, ಈ ಟೂರ್ನಮೆಂಟ್‌ನಲ್ಲಿ ಭಾರತ ತಂಡವು ಪ್ರಬಲ ಸ್ಪರ್ಧಿಯಾಗಲಿದೆ.

 

Continue Reading

National - International

ಇಂದಿನಿಂದ ಇಂಗ್ಲೆಂಡ್ ವಿರುದ್ಧ ಭಾರತ ಮಹಿಳಾ ಟಿ-20 ಸರಣಿ ಆರಂಭ

Published

on

ಚೆಲ್ಮ್ಸ್‌ಫೋರ್ಡ್‌:  ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡವು ಮುಂಬರುವ ಮಹಿಳಾ ಟಿ20 ವಿಶ್ವಕಪ್‌ಗೆ ಸಿದ್ಧತೆಗಾಗಿ ಮಹತ್ವದ ಸರಣಿಯನ್ನು ಆಡಲು ಸಜ್ಜಾಗಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡ ಹಾಗೂ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡ ನಡುವೆ 4 ಪಂದ್ಯಗಳ ಟಿ20 ಸರಣಿ ಮತ್ತು ಒಂದು ಟೆಸ್ಟ್ ಪಂದ್ಯ ನಡೆಯಲಿದೆ. ಸರಣಿಯ ಮೊದಲ ಟಿ20 ಪಂದ್ಯ ಮೇ 28 (ಗುರುವಾರ) ಇಂಗ್ಲೆಂಡ್‌ನ ಚೆಲ್ಮ್ಸ್‌ಫೋರ್ಡ್‌ನ ಕೌಂಟಿ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 11 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಭಾರತ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸುತ್ತಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿದ್ದಾರೆ. ಇಂಗ್ಲೆಂಡ್ ತಂಡದ ನಾಯಕತ್ವವನ್ನು ಚಾರ್ಲೆಟ್ ಡೀನ್ ವಹಿಸಿದ್ದಾರೆ. ಈ ಸರಣಿ ಟಿ20 ವಿಶ್ವಕಪ್‌ಗೆ ಮುನ್ನ ಉಭಯ ತಂಡಗಳಿಗೂ ತಮ್ಮ ಸಿದ್ಧತೆಯನ್ನು ಪರೀಕ್ಷಿಸಿಕೊಳ್ಳುವ ಪ್ರಮುಖ ಅವಕಾಶವಾಗಿದೆ.

ಹೆಡ್-ಟು-ಹೆಡ್ ದಾಖಲೆಯಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸಿದ್ದು, ಒಟ್ಟು 35 ಟಿ20 ಪಂದ್ಯಗಳಲ್ಲಿ 24 ಗೆಲುವು ಸಾಧಿಸಿದೆ. ಭಾರತ 11 ಪಂದ್ಯಗಳಲ್ಲಿ ಜಯ ಪಡೆದಿದೆ. ಆದಾಗ್ಯೂ, ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಯಶಸ್ಸು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಪಂದ್ಯಗಳ ನೇರ ಪ್ರಸಾರವನ್ನು Sony Sports Network ಚಾನೆಲ್‌ಗಳಲ್ಲಿ ಹಾಗೂ SonyLIV ಆಪ್‌ನಲ್ಲಿ ವೀಕ್ಷಿಸಬಹುದು.

Continue Reading

Sports

ಧರ್ಮಶಾಲಾದಲ್ಲಿ ಆರ್‌ಸಿಬಿಗೆ ಗುಡ್ ನ್ಯೂಸ್: ಫಿಲ್ ಸಾಲ್ಟ್ ಕಮ್‌ಬ್ಯಾಕ್ ಸಾಧ್ಯತೆ

Published

on

ಧರ್ಮಶಾಲಾ: ಆರ್‌ಸಿಬಿ ತಂಡಕ್ಕೆ ಮಹತ್ವದ ಹಂತದಲ್ಲಿ ಸಿಹಿ ಸುದ್ದಿ ಸಿಕ್ಕಿದೆ. ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ  ಜಿಟಿ ವಿರುದ್ಧ ಸೆಣಸಲಿರುವ ಆರ್‌ಸಿಬಿ ತಂಡಕ್ಕೆ ಆರಂಭಿಕ ಬ್ಯಾಟರ್ ಫಿಲ್‌ ಸಾಲ್ಟ್‌ ಮರಳುವ ಸಾಧ್ಯತೆ ಎದುರಾಗಿದೆ.

ಕ್ವಾಲಿಫೈಯರ್-1 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಸಿಬಿ ನಾಯಕ ರಜತ್‌ ಪಾಟೀದಾರ್‌, ಫಿಲ್ ಸಾಲ್ಟ್ ಗಾಯದಿಂದ ಚೇತರಿಸಿಕೊಂಡಿದ್ದು, ಈಗಾಗಲೇ ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಅವರು ಅಂತಿಮವಾಗಿ ಪ್ಲೇಯಿಂಗ್-11ನಲ್ಲಿ ಸ್ಥಾನ ಪಡೆಯುವರೋ ಇಲ್ಲವೋ ಎಂಬುದರ ಕುರಿತು ತಂಡದ ಮ್ಯಾನೇಜ್‌ಮೆಂಟ್ ಕೊನೆಯ ಕ್ಷಣದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದರು.

ಸಾಲ್ಟ್ ತಂಡಕ್ಕೆ ಮರಳಿದರೆ ಆರ್‌ಸಿಬಿ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಬಲ ಸಿಗಲಿದೆ. ಈ ಸೀಸನ್‌ನಲ್ಲಿ ಅವರು ಪವರ್‌ಪ್ಲೇ ಓವರ್‌ಗಳಲ್ಲೇ ಬೌಲರ್‌ಗಳ ಮೇಲೆ ಅಬ್ಬರಿಸಿ ವೇಗದ ಆರಂಭ ನೀಡುತ್ತಿದ್ದರು. ಹೀಗಾಗಿ ಪ್ಲೇಆಫ್‌ನಂತಹ ಮಹತ್ವದ ಪಂದ್ಯದಲ್ಲಿ ಅವರ ಅನುಭವ ಮತ್ತು ಆಕ್ರಮಣಕಾರಿ ಆಟ ತಂಡಕ್ಕೆ ನೆರವಾಗಬಹುದು.

ಇನ್ನೊಂದೆಡೆ, ಜಾಕೋಬ್‌ ಗಾಯಗೊಂಡಿರುವುದು ಆರ್‌ಸಿಬಿಗೆ ಹಿನ್ನಡೆಯಾಗಿತ್ತು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಎಡಗೈ ಉಂಗುರದ ಬೆರಳಿಗೆ ಗಾಯವಾದ ಕಾರಣ ಅವರು ಹೊರಬಿದ್ದಿದ್ದರು. ಸಾಲ್ಟ್ ಸಂಪೂರ್ಣ ಫಿಟ್ ಆಗಿ ಕಣಕ್ಕಿಳಿದರೆ, ತಂಡದ ಬ್ಯಾಟಿಂಗ್ ಕ್ರಮಾಂಕ ಮತ್ತೆ ಸಮತೋಲನಕ್ಕೆ ಬರಲಿದೆ.

ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆರ್‌ಸಿಬಿ, ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದರೆ ನೇರವಾಗಿ ಫೈನಲ್ ಪ್ರವೇಶಿಸಲಿದೆ.

Continue Reading

Sports

 ನಾಳೆಯಿಂದ  ಪ್ಲೇ ಆಫ್ ಹಣಾಹಣಿ

Published

on

ಮುಂಬೈ: ಜಿದ್ದಾಜಿದ್ದಿಯಿಂದ ಕೂಡಿದ್ದ   19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ.
10 ತಂಡಗಳ ಪೈಕಿ ಬೆಂಗಳೂರು, ಗುಜರಾತ್, ಹೈದರಾಬಾದ್ ಹಾಗೂ ರಾಜಸ್ಥಾನ್ ತಂಡಗಳು ಈ ಬಾರಿಯ ಪ್ಲೇ ಆಫ್ ಪ್ರವೇಶಿಸಿವೆ. ಉಳಿದ ಆರು ತಂಡಗಳು ಐಪಿಎಲ್ ಅಭಿಯಾನ ಮುಗಿಸಿವೆ.

ದ್ವಿತೀಯ ಸುತ್ತಿನಲ್ಲಿ, ಅಂದರೆ ಪ್ಲೇ ಆಫ್ ಸುತ್ತಿನಲ್ಲಿ ಒಟ್ಟು ನಾಲ್ಕು ಮ್ಯಾಚ್‌ಗಳು ನಡೆಯಲಿದೆ. ಪ್ಲೇ ಆಫ್ ಸುತ್ತಿನಲ್ಲಿ ಮೊದಲು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇದಾದ ಬಳಿಕ ಎಲಿಮಿನೇಟರ್ ಪಂದ್ಯ ನಡೆಯಲಿದೆ.

ಮೇ.26 ರಂದು ಅಗ್ರ ಎರಡು ತಂಡಗಳಾದ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ಧರ್ಮಶಾಲಾದಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ.


ಈ ಪಂದ್ಯದಲ್ಲಿ ಗೆದ್ದ ತಂಡ ಮೇ.31ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ನೇರವಾಗಿ ಎಂಟ್ರಿ ಕೊಡಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಇರುತ್ತದೆ.

ಮೇ.27 ರಂದು ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ.
ಈ ಪಂದ್ಯ ನ್ಯೂ ಚಂಢೀಗಡದಲ್ಲಿ ನಡೆಯಲಿದ್ದು, ಗೆದ್ದ ತಂಡ ಕ್ವಾಲಿಫೈಯರ್ -2ಕ್ಕೆ ಲಗ್ಗೆ ಇಡಲಿದೆ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹಾಗೆಯೇ ಗೆಲ್ಲುವ ತಂಡ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡದೊಡನೆ ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಲಿದೆ.

ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ಗೆ ಪ್ರವೇಶಿಸುತ್ತದೆ. ಮೇ.31 ರಂದು ನಡೆಯಲಿರುವ ಫೈನಲ್‌ನಲ್ಲಿ ಮೊದಲ ಕ್ವಾಲಿಫೈಯರ್ ಹಾಗೂ ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಗೆದ್ದ ತಂಡಗಳು ಮುಖಾಮುಖಿಯಾಗಲಿದೆ.

ವೇಳಾಪಟ್ಟಿ ಹೀಗಿದೆ:
ಮೇ.26: ಕ್ವಾಲಿಫೈಯರ್ 1-ಆರ್‌ಸಿಬಿ v/s ಜಿಟಿ
ಸ್ಥಳ: ಎಚ್‌ಪಿಸಿಎ ಸ್ಟೇಡಿಯಂ, ಧರ್ಮಶಾಲಾ
ಮೇ 27: ಎಲಿಮಿನೇಟರ್- ಎಸ್‌ಆರ್‌ಹೆಚ್ ವರ್ಸಸ್ ಆರ್‌ಆರ್-ಸ್ಥಳ: ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂ, ಮುಲ್ಲನ್‌ಪುರ್ (ನ್ಯೂ ಚಂಡೀಗಢ್)

ಮೇ.29: ಕ್ವಾಲಿಫೈಯರ್ 2- ಕ್ವಾಲಿಫೈಯರ್ 1ರಲ್ಲಿ
ಸೋತ ತಂಡ ವರ್ಸಸ್ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡ, ಸ್ಥಳ: ನ್ಯೂ ಚಂಡೀಗಢ್)
ಮೇ .31: ಫೈನಲ್: ಕ್ವಾಲಿಫೈಯರ್ 2ವರ್ಸಸ್ ಕ್ವಾಲಿಫೈಯರ್ 2ನಲ್ಲಿ ಗೆದ್ದ ತಂಡ. ಸ್ಥಳ: ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.

 

Continue Reading

Trending

error: Content is protected !!