Connect with us

Chikmagalur

ಕಾಮಗಾರಿ ವೀಕ್ಷಿಸಿದ ಟಿಡಿಆರ್

Published

on

ವರದಿ : ಎಂ.ಪಿ.ಪ್ರದೀಪ್ ಹೆಬ್ಬಾರ್, ಜಯಪುರ.

ಜಯಪುರ : ನಗರದ ಮುಖ್ಯ ರಸ್ತೆ ಅಗಲೀಕರಣ ಬಹುದಿನದ ನಿರೀಕ್ಷೆಯಾಗಿದ್ದು, ಪ್ರಸ್ತುತ ರಸ್ತೆ ಅಗಲೀಕರಣ ಕಾಮಗಾರಿ ಮುಗಿಯುತ್ತಾ ಬಂದಿದೆ ಇದನ್ನು ಕರ್ನಾಟಕ ನವೀಕರಿಸಬಹುದಾದ ಇಂಧದ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರ ಶಾಸಕರಾದ ಟಿ ಡಿ ರಾಜೇಗೌಡ ವೀಕ್ಷಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿ ಜಯಪುರ ಮುಖ್ಯ ರಸ್ತೆ ಹಾಗೂ ಮುಖ್ಯ ರಸ್ತೆಯ ಸಂಪರ್ಕ ರಸ್ತೆಗಳ ಸಂಪೂರ್ಣ ಅಭಿವೃದ್ಧಿ ಕಾಮಗಾರಿಯು ಮುಗಿಯುತ್ತಾ ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ಶೃಂಗೇರಿ-ಕೊಪ್ಪ-ಬಾಳೆಹೊನ್ನೂರು ಸಂಪರ್ಕಿಸುವಂತ ರಸ್ತೆಯ ಸರ್ಕಲ್ ನ ರಸ್ತೆ ಅಗಲೀಕರಣ ಪ್ರಾರಂಭವಾಗಲಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಮಂಡಲ ಮಾಜಿ ಪ್ರಧಾನರಾದ ವಜ್ರಪ್ಪ, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕಬೀರ್, ಪಣಿರಾಜ್, ಕೀರ್ತಿರಾಜ್ ಹಾಗೂ ಸ್ಥಳೀಯ ಅಂಗಡಿ ಮಾಲೀಕರು, ಸ್ಥಳೀಯರು ಇದ್ದರು.

 

Continue Reading

Chikmagalur

ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ಸೀತಾಳಯ್ಯನಗಿರಿ

Published

on

ಚಿಕ್ಕಮಗಳೂರು: ರಸ್ತೆಯಲ್ಲಿ ಚಾಲಕನ ಸಣ್ಣದೊಂದು ಎಡವಟ್ಟಿನಿಂದಾಗಿ ಟೆಂಪೋ ಟ್ರಾವೆಲ‌ರ್ ವಾಹನವೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಆದರೆ ಚಾಲಕನ ಸಮಯಪ್ರಜ್ಞೆ ಮತ್ತು ಅದೃಷ್ಟವಶಾತ್ ವಾಹನದಲ್ಲಿದ್ದ ಬೆಂಗಳೂರು ಮೂಲದ 13 ಮಂದಿ ಪ್ರವಾಸಿಗರು ಯಾವುದೇ ಪ್ರಾಣಾಪಾಯವಿಲ್ಲದೆ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಬೆಂಗಳೂರಿನಿಂದ ಚಿಕ್ಕಮಗಳೂರಿನ ಗಿರಿಪ್ರದೇಶಗಳಿಗೆ ಪ್ರವಾಸಕ್ಕೆ ಬಂದಿದ್ದ ತಂಡ ಮುಳ್ಳಯ್ಯನಗಿರಿ ವೀಕ್ಷಣೆ ಮುಗಿಸಿ ವಾಪಸ್ ಇಳಿಜಾರಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಮಾಣಿಕ್ಯಾಧಾರ ಮತ್ತು ಸೀತಾಳಯ್ಯನಗಿರಿ ನಡುವಿನ ಕಡಿದಾದ ಇಳಿಜಾರಿನಲ್ಲಿ ವಾಹನ ಚಲಿಸುತ್ತಿದ್ದಾಗ, ಹಿಂಭಾಗದ ಸೀಟಿನಲ್ಲಿದ್ದ ಪ್ರಯಾಣಿಕರೊಬ್ಬರ ಪಾದರಕ್ಷೆ (ಚಪ್ಪಲಿ) ಜಾರಿ ಮುಂಭಾಗದ ಚಾಲಕನ ಸೀಟಿನ ಬಳಿ ಬಂದು ಬಿದ್ದಿದೆ. ಇಳಿಜಾರಿನ ರಸ್ತೆಯಾದ್ದರಿಂದ ಈ ಚಪ್ಪಲಿ ಎಲ್ಲಿ ಬ್ರೇಕ್ ಮತ್ತು ಎಕ್ಸಲೇಟ‌ರ್ ಪೆಡಲ್‌ಗಳ ಮಧ್ಯೆ ಸಿಲುಕಿಕೊಳ್ಳುತ್ತದೆಯೋ ಎಂಬ ಆತಂಕ ಚಾಲಕನಿಗೆ ಎದುರಾಗಿದೆ.

ಆತ ತಕ್ಷಣವೇ ಚಲಿಸುತ್ತಿದ್ದ ವಾಹನದಲ್ಲೇ ಬಾಗಿ ಆ ಚಪ್ಪಲಿಯನ್ನು ತೆಗೆಯಲು ಪ್ರಯತ್ನಿಸಿದ್ದಾನೆ. ಈ ಸಂದರ್ಭ ವಾಹನದ ಗೇ‌ರ್ ಲಿವರ್ ನ್ಯೂಟ್ರಲ್ (Neutral) ಸ್ಥಿತಿಗೆ ಬಿದ್ದಿದೆ. ಇಳಿಜಾರಿನ ರಸ್ತೆಯಾಗಿದ್ದರಿಂದ ಗೇರ್ ಇಲ್ಲದ ಟೆಂಪೋ ಒಮ್ಮಿಂದೊಮ್ಮೆಗೇ ಅತಿ ವೇಗವಾಗಿ ಮುಂದಕ್ಕೆ ನುಗ್ಗಿದೆ. ಚಾಲಕ ಬ್ರೇಕ್‌ ಹಾಕುವಷ್ಟರಲ್ಲೇ ವಾಹನವು ರಸ್ತೆ ಬದಿಯ ರಕ್ಷಣಾ ಗೋಡೆಯನ್ನು ದಾಟಿ ಕಂದಕದ ಕಡೆಗೆ ಇಳಿದಿದೆ.

ವಾಹನ ಕಂದಕಕ್ಕೆ ಇಳಿಯುತ್ತಿದ್ದಂತೆ ಒಳಗಿದ್ದ ಪ್ರಯಾಣಿಕರು ಜೋರಾಗಿ ಕಿರುಚಾಡಿದ್ದಾರೆ. ಅದೃಷ್ಟವಶಾತ್ ಟೆಂಪೋ ಕಂದಕದ ಆರಂಭದಲ್ಲೇ ಸಿಲುಕಿ ನಿಂತಿದ್ದರಿಂದ ಭೀಕರ ದುರಂತವೊಂದು ತಪ್ಪಿದಂತಾಗಿದೆ. ವಾಹನದಲ್ಲಿದ್ದ ಎಲ್ಲಾ 13 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಿರಿಪ್ರದೇಶಗಳ ತಿರುವು ರಸ್ತೆಯಲ್ಲಿ ಚಾಲನೆ ಮಾಡುವಾಗ ಚಾಲಕರು ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

Continue Reading

Chikmagalur

ಬಾವಿ ಸ್ವಚ್ಛಗೊಳಿಸಲು ಇಳಿದ ಮೋಹನ್ ದಾರುಣ ಸಾ*ವು

Published

on

ಚಿಕ್ಕಮಗಳೂರು : ಬಾವಿ ಕ್ಲೀನ್ ಮಾಡಲು ಇಳಿದಿದ್ದ ವ್ಯಕ್ತಿಯೊಬ್ಬರು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ಉಂಡೇದಾಸರಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ದರ್ಶನ್ ಎಂಬುವರ ಮನೆಯ ಬಾವಿಯನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಮೋಹನ್ (40) ಎಂಬುವರು ಬಾವಿಯೊಳಗೆ ಇಳಿದಿದ್ದರು. ಆದರೆ ಬಾವಿಯ ಆಳದಲ್ಲಿ ತೀವ್ರವಾದ ಉಸಿರಾಟದ ಸಮಸ್ಯೆ ಎದುರಾದ ಕಾರಣ ಅವರು ಬಾವಿಯೊಳಗೇ ಕೊನೆಯುಸಿರೆಳೆದಿದ್ದಾರೆ.


ವಿಷಯ ತಿಳಿಯುತ್ತಿದ್ದಂತೆ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಈ ಆಕಸ್ಮಿಕ ದುರಂತದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Chikmagalur

ಸಾರ್ವಜನಿಕರ ಧನಸಹಾಯದೊಂದಿಗೆ ಅಭಿವೃದ್ಧಿಗೊಂಡ ಗಡಿಕಲ್ ವೃತ್ತ: ರೋಟರಿ ಸಂಸ್ಥೆಯಿಂದ ಜನಪರ ಕಾರ್ಯ

Published

on

ಜಯಪುರ : ಶೃಂಗೇರಿ ಕೊಪ್ಪ ತಾಲ್ಲೂಕಿನ ಗಡಿ ಭಾಗದಲ್ಲಿ ಇರುವ ಗಡಿಕಲ್ ವೃತ್ತವು ಚಿಕ್ಕಮಗಳೂರು ಶೃಂಗೇರಿ ಮುಖ್ಯ ರಸ್ತೆಗೆ ಹಾಗೂ ಶ್ರೀ ಕ್ಷೇತ್ರ ಹೊರನಾಡಿಗೆ ಸಂಚರಿಸುವ ಮಾರ್ಗದ ಮುಖ್ಯ ವೃತ್ತ ಇದಾಗಿದ್ದು ಹಲವು ವರ್ಷದಿಂದ ದುಃಸ್ಥಿತಿಗೊಂಡಿದ್ದು, ರೋಟರಿ ಕ್ಲಬ್ ಹಾಗೂ ಸ್ಥಳೀಯ ಗ್ರಾಮಸ್ಥರ ಧನಸಹಾಯದಿಂದ ಇಂದು ಗಡಿಕಲ್ ವೃತ್ತದಲ್ಲಿ ನಾಮಫಲಕ, ಸಿಸಿ ಕ್ಯಾಮರಾ ಹಾಗೂ ಸೋಲಾರ್ ಬೀದಿ ದೀಪದ ಉದ್ಘಾಟನ ಕಾರ್ಯಕ್ರಮ ನೆರವೇರಿತು.
ನಾಮಫಲಕ ಉದ್ಘಾಟನೆ ಮಾಡಿ ಮಾತನಾಡಿದ ರೋಟರಿ ಅಸಿಸ್ಟೆಂಟ್ ಗವರ್ನರ್ ಹೊರನಾಡಿನ ರಾಜಗೋಪಾಲ ಜೋಷಿಯವರು ನಾಮಫಲಕ ನಿರ್ಮಾಣದಿಂದ ಶ್ರೀ ಕ್ಷೇತ್ರ ಹೊರನಾಡಿಗೆ ಬರಲು ಪ್ರವಾಸಿಗರಿಗೆ ತುಂಬಾ ಉಪಯುಕ್ತವಾಗಿದೆ ಹಾಗೂ ಸಿ ಸಿ ಕ್ಯಾಮೆರದಿಂದ ಶೃಂಗೇರಿ ಹಾಗೂ ಜಯಪುರ ಪೊಲೀಸ್ ಠಾಣೆಗೆ ಮತ್ತು ಅಗಳಗಂಡಿ ಪಂಚಾಯತ್ ಗೆ ಅಪರಾಧ ತಡೆಗಟ್ಟಲು ಸಹಾಯವಾಗುತ್ತದೆ. ಈ ಕಾರ್ಯಕ್ಕೆ ಕೈ ಜೋಡಿಸಿದ ಊರಿನ ಸಮಸ್ತ ಗ್ರಾಮಸ್ಥರಿಗೂ ಹೃದಯಪೂರ್ವಕ ಅಭಿನಂದನೆಗಳು ಇಂತಹ ಕಾರ್ಯಗಳು ಸಮಾಜಕ್ಕೆ ಮಾದರಿ. ಇದರ ಜೊತೆಗೆ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತಹ ಕೆಲಸವನ್ನು ಎಲ್ಲರೂ ಮಾಡೋಣ ಎಂದರು.


ಪ್ರಸ್ತಾವಿಕವಾಗಿ ಮಾತನಾಡಿದ ಶೃಂಗೇರಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಅಂಬಲಮನೆ ಸುಬ್ರಮಣ್ಯ ಅವರು ನಾನು ಇಪ್ಪತೈದನೇ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ ನನ್ನ ಅವಧಿಯಲ್ಲಿ ನೂರು ಕಾರ್ಯಕ್ರಮಗಳ ಗುರಿ ಇಟ್ಟುಕೊಂಡು ಅಧ್ಯಕ್ಷನಾದೆ. ಇದುವರೆಗೂ ತೊಂಬತ್ತೈದು ಕಾರ್ಯಕ್ರಮಗಳು ಯಶಸ್ಸು ಹೊಂದಿದ್ದು, ಈ ಕಾರ್ಯವು ತೊಂಬತ್ತಾರೆ ಕಾರ್ಯಕ್ರಮವಾಗಿದ್ದು, ಇನ್ನು ನನ್ನ ಅಧ್ಯಕ್ಷ ಸ್ಥಾನಕ್ಕೆ ಒಂದು ತಿಂಗಳ ಅವಧಿ ಇದ್ದು, ಅದರೊಳಗೆ ಇನ್ನು ನಾಲ್ಕು ಅಭಿವೃದ್ಧಿ ಕಾರ್ಯಕ್ರಮವನ್ನು ಮಾಡಿ ನನ್ನ ಗುರಿಯನ್ನು ಮುಟ್ಟುತ್ತೇನೆ.
ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಅಂದಾಜು ಎಪ್ಪತ್ತು ಸಾವಿರ ಹಣ ಸಂಗ್ರಹವಾಗಿದ್ದು ಒಂದು ಲಕ್ಷದಲ್ಲಿ ಕಾಮಗಾರಿ ಮುಕ್ತಾಯವಾಗಿದೆ. ಈ ನನ್ನ ಗುರಿಗೆ ಸಹಕರಿಸಿದ ಊರಿನ ಸಮಸ್ತ ಗ್ರಾಮಸ್ಥರಿಗೂ ನನ್ನ ಅಭಿನಂದನೆಗಳು. ಗಡಿಕಲ್ಲಿನ ನಾಮಫಲಕ, ಸೋಲಾರ್ ವಿದ್ಯುತ್ ದೀಪ ಹಾಗೂ ಸಿ ಸಿ ಕ್ಯಾಮೆರಾ ಇನ್ನು ಮುಂದೆ ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಕೀಲರಾದ ಸುಧೀರ್ ಕುಮಾರ್ ಮುರೊಳ್ಳಿ ಅವರು ಮಾತನಾಡಿ
ಒಂದು ಊರಿನಲ್ಲಿ ನಾಮಫಲಕ, ಬೀದಿದೀಪ, ಸಿ ಸಿ ಕ್ಯಾಮೆರಾಗಳು ಇಂದಿನ ಕಾಲಕ್ಕೆ ಮೂಲಭೂತ ಅವಶ್ಯಕತೆ ಆಗಿದೆ. ಈ ನಾಮಫಲಕ ನಿರ್ಮಾಣದಿಂದ ಗಡಿಕಲ್ ನ ಸೌಂದರ್ಯ ಇನ್ನು ಹೆಚ್ಚಾಗಿದ್ದು, ಆಟೋ ಚಾಲಕರಿಗೂ ಹಾಗೂ ಅಂಗಡಿ ಮಾಲೀಕರಿಗೆ ನಿಟ್ಟುಸಿರು ಬಿಡುವಂತಾಗಿದೆ. ಪ್ರತಿನಿತ್ಯ ಪ್ರವಾಸಿಗರಿಗೆ ರಸ್ತೆ ಬಗ್ಗೆ ಮಾರ್ಗದರ್ಶನ ಮಾಡುವ ಕೆಲಸ ತಪ್ಪಿದೆ. ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡಿದ ಗುತ್ತಿಗೆದಾರರಾದ ರಮೇಶ್ ಅವರಿಗೆ ಧನ್ಯವಾದಗಳು ಎಂದರು.
ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಮಂಜುಳಾ ಸುಬ್ರಮಣ್ಯ, ಮಹೇಶ್, ಮಂಜುನಾಥ್ ಹೆಚ್.ಆರ್, ಸುವರ್ಣ ಅವಿನಾಶ್, ನಟೇಶ್ ಶೃಂಗೇರಿ, ಅಣ್ಣಪ್ಪ, ಚಂದ್ರಶೇಖರ್ ಗಡಿಕಲ್ ಹಾಗೂ ಗ್ರಾಮಸ್ಥರು ಇದ್ದರು.

ವರದಿ :- ಎಂ.ಪಿ.ಪ್ರದೀಪ್ ಹೆಬ್ಬಾರ್, ಜಯಪುರ.

Continue Reading

Trending

error: Content is protected !!