Mysore
ಅಧಿಕಾರ ಯಾರಿಗೂ ಶಾಶ್ವತ ಅಲ್ಲ: ತನ್ವೀರ್ ಸೇಠ್
ಮೈಸೂರು: ಜನ ನಮಗೆ ಅರ್ಶಿವಾದ ನೀಡಿದ್ದಾರೆ, 136 ಶಾಸಕರು ಗೆದ್ದಿದ್ದಾರೆ, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಯಾರಿಗೂ ಅಧಿಕಾರ ಶಾಶ್ವತ ಇಲ್ಲ. ಈ ಹಿಂದೆಯೂ ನಾನು ಹೇಳಿದ್ದೇನೆ ಎಂದು ಶಾಸಕ ತನ್ವೀರ್ ಸೇಠ್ ಪರೋಕ್ಷ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೆ. ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಡಿಕೆಶಿ ಹೇಳಿಕೆಗೆ ಸಮರ್ಥಿಸುತ್ತೇನೆ ಎಂದಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ವರಿಷ್ಠರ ರೀತಿ ವರ್ತನೆ ಮಾಡುತ್ತಿದ್ದಾರೆ ಎನ್ನುವ ವಿಚಾರ
ನಾನು ಡಿಕೆಶಿ ಅವರ ಹೇಳಿಕೆಯನ್ನು ಸಮ್ಮತಿಯಿದೆ. ಸಂಪುಟ ಪುನಾರಚನೆ ವಿಳಂಬ ವಿಚಾರವಾಗಿ ಜನವರಿಯಲ್ಲಿ ಆಗುತ್ತದೆ ಎನ್ನುತ್ತಿದ್ದರು. ಯಾವ ಜನವರಿ ಅಂತ ಹೇಳಿಲ್ಲ ಎಂದು ಮಾರ್ಮಿಕವಾಗಿ ನುಡಿದ್ದಾರೆ.
ಇದೇ ಸಂದರ್ಭದಲ್ಲಿ ಯತೀಂದ್ರ ಹಸ್ತಕ್ಷೇಪ ಜಾಸ್ತಿ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ಇದು
ಕೇವಲ ನನ್ನ ಕ್ಷೇತ್ರವಲ್ಲ.ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಹಸ್ತಕ್ಷೇಪ ನಡೆಯುತ್ತಿದೆ ಅಂತ ಹೇಳುತ್ತಾರೆ. ಸಮಯ ಬಂದಾಗ ಅದನ್ನು ಹೇಳುತ್ತೇನೆ. ಕೆಲವು ಅಧಿಕಾರಿಗಳು ಶಂಖದಿಂದ ಬಂದರೆ ತೀರ್ಥ ಎನ್ನುವ ರೀತಿ ವರ್ತನೆ ಮಾಡುತ್ತಿದ್ದಾರೆ. ನಾವು ಕೂಡ ಶಂಕ ಊದುವ ಕೆಲಸ ಮಾಡುತ್ತೇನೆ ಎಂದು ಪರೋಕ್ಷವಾಗಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ವಿರುದ್ಧ ತನ್ವೀರ್ ಸೇಠ್ ಕಿಡಿಕಾರಿದ್ದಾರೆ.
Mysore
ಸಿಎಂ ಅಧಿಕಾರ ಹಂಚಿಕೆಯ ಪ್ರಸ್ತಾಪವೇ ನಡೆದಿಲ್ಲ: ಡಾ.ಜಿ.ಪರಮೇಶ್ವರ್
ಮೈಸೂರು: ಸಿಎಂ ಅಧಿಕಾರ ಹಂಚಿಕೆಯ ಪ್ರಸ್ತಾಪವೇ ನಡೆದಿಲ್ಲವೆಂದ ಮೇಲೆ ಅದರ ಜಾರಿಯ ಬಗ್ಗೆ ಪ್ರಶ್ನೆಗಳೇ ಇಲ್ಲ. ಅವತ್ತೇ ಸಿದ್ದರಾಮಯ್ಯ ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿದೆ ಎಂದು ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ, ಪರೋಕ್ಷವಾಗಿ ಹೇಳಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮೈಸೂರಿನಲ್ಲಿಇಂದು ನಮ್ಮ ತಂದೆಯೇ 5 ವರ್ಷ ಸಿಎಂ ಎಂದು ಡಾ ಯತೀಂದ್ರ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ವೈಯುಕ್ತಿಕ ಹೇಳಿಕೆ. ಯತೀಂದ್ರ ಯಾವ ಮಾಹಿತಿ ಪಡೆದು ಹೇಳಿದರೋ ಗೊತ್ತಿಲ್ಲ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸದ್ಯಕ್ಕೆ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಮಾಧ್ಯಮಗಳು ಗೊಂದಲ ಎಂದು ಹೇಳುತ್ತಿವೆ ಅಷ್ಟೇ ಎಂದಿದ್ದಾರೆ.

ಮೊನ್ನೆ ನಡೆದ ಸಭೆಯಲ್ಲೂ ಯಾರು ಏನು ಹೇಳಿಲ್ಲ. ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಸಿಎಂ ಬಜೆಟ್ ಮಂಡನೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಹೈಕಮಾಂಡ್ ಅಲ್ವಾ ? ಹೈಕಮಾಂಡ್ ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರು ಅಂತ ಹೇಳುತ್ತಾರೋ ಅಲ್ಲಿಯ ವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲವೆಂದ ಮೇಲೆ ಒಪ್ಪಂದದ ಪ್ರಶ್ನೆಯೇ ಉದ್ಬವವಾಗುವುದಿಲ್ಲ. ಸಂಪುಟ ಪುನಾರಚನೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಅಭಿಮಾನಿಗಳು ಮುಂದಿನ ಸಿಎಂ ಎಂದು ಜೈಕಾರ ಹಾಕೋದು ಸಹಜ. ಮೊನ್ನೆ ನನಗೂ ಹೇಳಿದ್ದರೂ, ಇನ್ನೊಬ್ಬರಿಗೂ ಹೇಳುತ್ತಾರೆ. ಅದು ಅಭಿಮಾನಿಗಳ ಆಸೆ ಅಷ್ಟೇ. ಅಂತಿಮವಾಗಿ ತೀರ್ಮಾನ ಮಾಡುವುದು ಹೈಕಮಾಂಡ್ ಎಂದು ತಿಳಿಸಿದ್ದಾರೆ.

ನೀವು ಯಾವಾಗ ಸಿಎಂ ಆಗ್ತೀರಾ? ಎಂಬ ಮಾಧ್ಯಮದ ಪ್ರಶ್ನೆಗೆ, ಆಮೇಲೆ ಹೇಳುತ್ತೀನಿ ನಡೀರಿ ಎಂದು ನಗುತ್ತಾ ತೆರಳಿದ್ದಾರೆ.
ಅಲ್ಪ ಸಂಖ್ಯಾತರ ಸಾಲ ಮನ್ನಾ, ಕ್ಯಾಬಿನೆಟ್ ನಲ್ಲಿ ನಿರ್ಧಾರ ವಿಚಾರ
ಯಾರಿಗೆ ಸಾಲ ಕೊಟ್ಟಿದ್ದರೂ ಅದನ್ನು ಸರ್ಕಾರ ಮನ್ನಾ ಮಾಡೋದು ಅನೇಕ ಬಾರಿ ನಡೆದಿದೆ. ಅಲ್ಪಾ ಅಸಂಖ್ಯಾತ ಹಾಗೂ ಯಾವುದೇ ಸಮುದಾಯವರಿಗೆ ಮನ್ನಾ ಮಾಡುವ ಕೆಲಸ ಮಾಡಿದ್ದೇವೆ. ಹಿಂದೆಯೂ ರೈತರ ಸಾಲ ಮನ್ನಾ ಮಾಡಿರಲಿಲ್ವಾ? ಕೆಂದ್ರ ರಾಜ್ಯ ಎರಡು ಸರ್ಕಾರಗಳು ಕೂಡ ಸಾಲ ಮನ್ನಾ ಮಾಡುತ್ತಾ ಬರುತ್ತಿವೆ. ಇದರಲ್ಲಿ ರಾಜಕೀಯ ಏನಿಲ್ಲ ಎಂದಿದ್ದಾರೆ.

ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ಹೆಚ್ಚಳ ವಿಚಾರ
ಈಗಾಗಲೇ ನಾನು ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರಾಜ್ಯದ ಎಲ್ಲಾ ಕೆಮಿಕಲ್ ಫ್ಯಾಕ್ಟರಿ ಚೆಕ್ ಮಾಡಿ ಅಂತ ಸೂಚನೆ ಕೊಟ್ಟಿದ್ದೇನೆ. ಕೆಮಿಕಲ್ ಫ್ಯಾಕ್ಟರಿಗೆ ಯಾವ ಇಲಾಖೆ ಅನುಮತಿ ನೀಡುತ್ತದೆ, ಅವರು ಅದನ್ನು ಚೆಕ್ ಮಾಡಿ ಅಂತ ಹೇಳಿದ್ದೇನೆ. ಡ್ರಗ್ಸ್ ಪತ್ತೆ ಮಾಡುವುದಕ್ಕೆ ಸ್ಪೆಷಲ್ ಪೊಲೀಸ್ ತಂಡ ಬೇಡ. ಈಗಾಗಲೇ ತಂಡ ಇದೆ, ಅವರ ಕೈಯಲ್ಲಿ ಸ್ವಲ್ಪ ಕೆಲಸ ಮಾಡಿಸಬೇಕು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಡ್ರಗ್ಸ್ ದಾಳಿಯ ಮೊದಲ ವರದಿಯಲ್ಲಿ ಯಾವುದೇ ಡ್ರಗ್ಸ್ ಸಿಕ್ಕಿಲ್ಲ ಅಂತ ಹೇಳಿದರು.
ಈಗ ಎನ್ ಸಿ ಬಿ ಅವರು ವಾಪಸ್ಸು ಹೋದ ಮೇಲೆ ಪ್ರೆಸ್ ರಿಲೀಸ್ ಮಾಡಿ ಡ್ರಗ್ಸ್ ಸಿಕ್ಕಿದೆ ಅಂತ ಹೇಳಿದರು.
ಮೈಸೂರು ಕಮೀಷನರ್ ವಿಚಾರಿಸಿದಾಗ ಇಲ್ಲಿ ಏನು ಸಿಕ್ಕಿಲ್ಲ ಅಂತಾನೆ ಹೇಳಿದ್ದರು. ಎನ್ ಸಿ ಬಿ ಅವರು ಕೋರ್ಟ್ ನಲ್ಲಿ ಕೊಟ್ಟ ಹೇಳಿಕೆಯಲ್ಲೂ ಯಾವುದೇ ಡ್ರಗ್ಸ್ ಸಿಕ್ಕಿರುವ ಬಗ್ಗೆ ನಮೂದು ಮಾಡಿಲ್ಲ. ಅಲ್ಲಿಗೆ ಹೋಗಿ ಪ್ರೆಸ್ ರಿಲೀಸ್ ಮಾಡುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.

ಹೈಕಮಾಂಡ್ ಎಲ್ಲಾದರೂ ಸಿದ್ದರಾಮಯ್ಯ ಬೇಡ ಎಂದು ಹೇಳಿದ್ಯಾ? ಇಲ್ಲ ತಾನೇ ? ಸಿದ್ದರಾಮಯ್ಯ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಗೊಂದಲ ಎಂದು ಅನ್ನಿಸಿಲ್ಲ. ಹೈಕಮಾಂಡ್ ತನ್ನ ಅಗತ್ಯ ಇದ್ದಾಗ ಮಾತನಾಡುತ್ತದೆ.
ಹೈಕಮಾಂಡ್ ಸುಮ್ಮನಿದೆ ಎಂದರೆ ಅದರಲ್ಲಿ ಬದಲಾವಣೆಗಳು ಇಲ್ಲ ಎಂದು ಅರ್ಥ. ಪಕ್ಷದಲ್ಲಿ ಒಬ್ಬೊಬ್ಬರು ತಮ್ಮ ತಮ್ಮ ಅಭಿಪ್ರಾಯ ಹೇಳಬಹುದು ಎಂದು ಹೇಳಿದ್ದಾರೆ.
ಸಿಎಂ ಕುರ್ಚಿಯ ಬಗ್ಗೆ ಗೊಂದಲ ಇದ್ದಿದ್ದರೆ ಸಿಎಲ್‌ಪಿ ಸಭೆಯಲ್ಲಿ ಶಾಸಕರು ಕೇಳುತ್ತಿದ್ದರು. ಯಾರು ಕೂಡ ಆ ಬಗ್ಗೆ ಮಾತನಾಡಿಲ್ಲ. ಅಲ್ಲಿಗೆ ಯಾವ ಗೊಂದಲ ಇಲ್ಲ ಎಂದು ಅರ್ಥ ಎಂದಿದ್ದಾರೆ.
Mysore
ಕರೆಂಟ್ ತಂತಿ ಬಲೆಗೆ ಸಿಲುಕಿ ಹೆಣ್ಣು ಆನೆ ಸಾವು
ಬೈಲಕುಪ್ಪೆ: ಬೈಲಕುಪ್ಪೆ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಹರವೇ ಗ್ರಾಮದಲ್ಲಿ ಮಾನವ ನಿರ್ಲಕ್ಷ್ಯಕ್ಕೆ ಮತ್ತೊಂದು ವನ್ಯಜೀವಿ ಬಲಿಯಾಗಿದೆ. ಜೋಳದ ಜಮೀನಿಗೆ ಅಳವಡಿಸಲಾಗಿದ್ದ ಅಕ್ರಮ ವಿದ್ಯುತ್ ತಂತಿ ಬಲೆಗೆ ಸಿಲುಕಿ ಸುಮಾರು 15 ವರ್ಷ ಪ್ರಾಯದ ಹೆಣ್ಣು ಆನೆ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಮಧ್ಯರಾತ್ರಿ ವೇಳೆಯಲ್ಲಿ ಆನೆ ಆಹಾರಕ್ಕಾಗಿ ಜಮೀನಿನೊಳಗೆ ಪ್ರವೇಶಿಸಿದ ಸಂದರ್ಭ, ಜೋಳದ ಬೆಳೆ ರಕ್ಷಣೆಗಾಗಿ ಹಾಕಲಾಗಿದ್ದ ಕರೆಂಟ್ ಹರಿದ ತಂತಿಗೆ ಸಿಲುಕಿ ಆನೆ ಸ್ಥಳದಲ್ಲೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬೆಳಿಗ್ಗೆ ಗ್ರಾಮಸ್ಥರು ಜಮೀನಿನ ಬಳಿ ಆನೆಯ ಶವ ಕಂಡು ಅರಣ್ಯ ಇಲಾಖೆ ಹಾಗೂ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆನೆಯ ಸಾವು ಅಕ್ರಮ ವಿದ್ಯುತ್ ತಂತಿಯಿಂದಲೇ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಇಲಾಖೆ, ಜಮೀನು ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡಿದೆ.
Mysore
97 ವರ್ಷದ ರೋಗಿಯಲ್ಲಿ ಅಪರೂಪದ ಹೃದಯ ಆರೈಕೆ
ಮೈಸೂರು: ಹಾರ್ಟ್ ಅಟ್ಯಾಕ್ (ಆಂಟಿಯರ್ ವಾಲ್ ಮಯೋಕಾರ್ಡಿಯಲ್ ಇನ್ಸಾರ್ಕ್ಷನ್-AWMI) ಹೊಂದಿರುವ 97 ವರ್ಷದ ರೋಗಿಯಲ್ಲಿ ರೋಟಾಸ್ಟೇಷನ್, ಆಂಜಿಯೋಪ್ಲಾಸ್ಟಿ ಮತ್ತು ಎರಡು ಪರಿಧಮನಿಯ ಸ್ಟೆಂಟ್‌ಗಳ ನಿಯೋಜನೆಯನ್ನು ಯಶ್ವಸ್ವಿಯಾಗಿ ನಿರ್ವಹಿಸುವ ಮೂಲಕ ಆವಾಂಟ್ ಬಿಕೆಜಿ ಆಸ್ಪತ್ರೆಯು ಅತ್ಯಾಧುನಿಕ ಹೃದಯ ಆರೈಕೆಯಲ್ಲಿ ಗಮನಾರ್ಹ ಮೈಲಿಗಲ್ಲು ಸಾಧಿಸಿವೆ.
ಈ ಸಂಕೀರ್ಣವಾದ ಹೃದಯ ಶಸ್ತ್ರಚಿಕಿತ್ಸೆಯನ್ನು ಆವಾಂಟ್ ಬಿಕೆಜಿ ಆಸ್ಪತ್ರೆಯ ಚೀಫ್ ಇಂಟರ್ವೆನನಲ್ ಕಾರ್ಡಿಯಾಲಜಿಸ್ಟ್ ಡಾ.ಜೆ. ರಾಜಗೋಪಾಲ್ ಅವರು ನಡೆಸಿದರು. ರೋಗಿಯ ವಯಸ್ಸು ಮತ್ತು ಗಂಭೀರ ಪರಿಸ್ಥಿತಿಯ ಹೊರತಾಗಿಯೂ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿತು. ರೋಗಿಯು ಅತ್ಯುತ್ತಮವಾಗಿ ಚೇತರಿಸಿಕೊಂಡಿದ್ದಾರೆ ಮತ್ತು ಆಸ್ಪತ್ರೆಯಿಂದ ಡಿಷ್‌ಚಾರ್ಜ್ ಮಾಡಲಾಗಿದೆ.

ಈ ಸಾಧನೆಯು ಆವಾಂಟ್ ಬಿಕೆಜಿ ಆಸ್ಪತ್ರೆಯ ರೋಗಿಗಳ ವಯಸ್ಸಿನ ಹೊರತಾಗಿಯೂ ನಿಖರತೆ, ಸುರಕ್ಷತೆ ಮತ್ತು ಸಹಾನುಭೂತಿಯೊಂದಿಗೆ ಸುಧಾರಿತ ಹೃದಯ ಮಧ್ಯಸ್ಥಿಕೆಗಳನ್ನು ನೀಡುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಎನ್ ಬಾಲಕೃಷ್ಣ ಗೌಡ ಅವರು ಹೃದ್ರೋಗ ತಂಡದ ಕಾರ್ಯವೈಖರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಈ ಯಶಸ್ಸು ಶ್ಲಾಘನೀಯವೆಂದು ತಿಳಿಸಿದ್ದಾರೆ. ಈ ಸಾಧನೆಯು ನಮ್ಮ ತಂಡದ ಕೌಶಲ್ಯ ಮತ್ತು ಪರಿಣಿತಿಯನ್ನು ಪ್ರದರ್ಶಿಸುತ್ತದೆ. ಡಾ. ರಾಜ್‌ಗೋಪಾಲ್ ಅವರ ಆಧುನಿಕ ಆವಿಷ್ಕಾರಗಳೊಂದಿಗೆ ಒಳಗೊಂಡ ಜೀವಗಳನ್ನು ಉಳಿಸುವ ಕಾರ್ಯ ಪ್ರಮುಖತೆ ಅವರ ವೈದ್ಯಕೀಯ ವೃತ್ತಿಗೆ ಸಮರ್ಪಣೆಯನ್ನು ಬಲಪಡಿಸುತ್ತದೆ.

ಇದು ಇಡೀ ಆಸ್ಪತ್ರೆಯ ತಂಡಕ್ಕೆ ಅಪಾರ ಹೆಮ್ಮೆಯ ಕ್ಷಣವಾಗಿದೆ. ಈ ಪ್ರಕರಣವು ಮೈಸೂರು ಮತು ಸುತ್ತಮುತ್ತಲಿನ ಪ್ರದೇಶಕ್ಕೆ ಹೃದ್ರೋಗ ಚಿಕಿತ್ಸೆಯ ಹೊಸ ಮಾನದಂಡವನ್ನು ತೋರಿಸುತ್ತದೆ. ಈ ಅತ್ಯುತ್ತಮ ಸಾಧನೆಗಾಗಿ ನಾನು ಡಾ. ರಾಜಗೋಪಾಲ್ ಮತ್ತು ಇಡೀ ಹೃದ್ರೋಗ ತಂಡವನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
‘ತುಂಬಾ ವಯಸ್ಸಾದ ರೋಗಿಯಲ್ಲಿ ತೀವ್ರವಾದ AWMI ಅನ್ನು ನಿರ್ವಹಿಸುವುದು ಯಾವಾಗಲೂ ಸವಾಲಿನದ್ದಾಗಿರುತ್ತದೆ ಮತ್ತು ಅದಕ್ಕೆ ನಿಖರವಾದ ಯೋಜನೆ, ನಿಖರತೆ ಮತ್ತು ತಂಡದ ಸಮನ್ವಯದ ಅಗತ್ಯವಿರುತ್ತದೆ. ಸಕಾಲಿಕ ಹಸ್ತಕ್ಷೇಪ, ಸುಧಾರಿತ ಕ್ಯಾಥ್ ಲ್ಯಾಬ್ ಸೌಲಭ್ಯಗಳು ಮತ್ತು ನಮ್ಮ ಬಹುಶಿಸ್ತೀಯ ತಂಡದ ಸಮರ್ಪಿತ ಬೆಂಬಲದಿಂದಾಗಿ ಯಶಸ್ವಿ ಫಲಿತಾಂಶ ಸಾಧ್ಯವಾಯಿತು. ರೋಗಿಯು ಚೆನ್ನಾಗಿ ಚೇತರಿಸಿಕೊಳ್ಳುವುದನ್ನು ನೋಡುವುದು ಪ್ರತಿಫಲದಾಯಕವಾಗಿದೆ ಎಂದು ಚೀಫ್ ಇಂಟರ್ವೆನ್ನನಲ್ ಕಾರ್ಡಿಯಾಲಜಿಸ್ಟ್ ಡಾ. ರಾಜಗೋಪಾಲ್ ತಿಳಿಸಿದರು.
-
National - International19 hours agoನಾಳೆಯಿಂದ T-20 World Cup| 20 ತಂಡಗಳು, 55 ಪಂದ್ಯಗಳು, 1 ಟ್ರೋಫಿ: ವೇಳಾಪಟ್ಟಿ ಏನು?
-
Mysore23 hours agoವಕೀಲರ ಸಂಘದ ಅಧ್ಯಕ್ಷರ ಮೇಲೆ ಪ್ರಕರಣ: ವಕೀಲ ಸಂಘದಿಂದ ಪ್ರತಿಭಟನೆ
-
National23 hours agoಮಹಿಳೆಯ ಇಚ್ಛೆಗೆ ವಿರುದ್ಧವಾಗಿ ತಾಯಿಯಾಗುವಂತೆ ನ್ಯಾಯಾಂಗ ಆಗ್ರಹಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್
-
State23 hours agoನಮ್ಮ ಪಕ್ಷದ ಹೈಕಮಾಂಡ್ ಡಾ.ಯತೀಂದ್ರ ಅವರೇ: ಡಿಸಿಎಂ ಡಿಕೆಶಿ ಟಾಂಗ್
-
State21 hours agoಬಿಗ್ ಬಾಸ್-12 ವಿನ್ನರ್ ಗಿಲ್ಲಿನಟ ವಿರುದ್ದ ಫಿಲ್ಮ್ ಚೇಂಬರ್ಗೆ ದೂರು
-
National19 hours agoU-19 World Cup| ವೈಭವ್ನ ಶತಕ: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ
-
Chamarajanagar1 hour agoಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ: ಹನೂರಿನ ಶಾಲೆಗಳಲ್ಲಿ ಅರಿವು ಮೂಡಿಸಿದ ರೈತ ದಂಪತಿ
-
Mysore21 hours agoವಿಶ್ವಕರ್ಮ ಯೋಜನೆಯಡಿ ವಸ್ತು ಪ್ರದರ್ಶನ
