Hassan
ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ತಡೆ ಗೋಡೆ ಕುಸಿತ
ಹಾಸನ : ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆಯ ಅಬ್ಬರ
ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ತಡೆ ಗೋಡೆ ಕುಸಿತ

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾಂಕ್ರೀಟ್ ರಸ್ತೆಯ ತಡೆಗೋಡೆ ಸಂಪೂರ್ಣ ಕುಸಿತ
ಒಂದು ಬದಿಯ ರಸ್ತೆ ಸಂಚಾರ ಬಂದ್ ಆಗುವ ಆತಂಕ

ಸಕಲೇಶಪುರ ತಾಲ್ಲೂಕಿನ, ಗುಲಗಳಲೆ ಗ್ರಾಮದ, ರಾಟೆಮನೆ ಸಮೀಪ ಘಟನೆ
40 ಅಡಿಯಷ್ಟು ಎತ್ತರಕ್ಕೆ ನಿರ್ಮಿಸಿದ್ದ ತಡೆಗೋಡೆ

ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಕುಸಿದು ಬಿದ್ದ ತಡೆಗೋಡೆ
ಬಿರುಕು ಬಿಡುತ್ತಿರುವ ಕಾಂಕ್ರೀಟ್ ರಸ್ತೆ
ವಾಹನ ಸಂಚಾರ ಹೆಚ್ಚಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿದ ಆತಂಕ
Hassan
ಹಾಸನ ಜಿಲ್ಲೆಯ ಎರಡು ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ
ಬೆಂಗಳೂರು/ಹಾಸನ: ಹಾಸನ ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಎರಡು ಪ್ರಮುಖ ನೀರಾವರಿ ಯೋಜನೆಗಳಿಗೆ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಎರಡೂ ಯೋಜನೆಗಳು ನೀರಾವರಿ ಇಲಾಖೆಯಡಿ ಕೈಗೆತ್ತಿಕೊಳ್ಳಲಾಗಲಿದ್ದು, ಜಿಲ್ಲೆಯ ಬರಪೀಡಿತ ಪ್ರದೇಶಗಳ ನೀರಿನ ಅಗತ್ಯವನ್ನು ಪೂರೈಸುವ ಉದ್ದೇಶ ಹೊಂದಿವೆ.
ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಕೆಂಕೆರೆ ಸೇರಿ 20ಕ್ಕೂ ಹೆಚ್ಚು ಕೆರೆಗಳಿಗೆ ಹೇಮಾವತಿ ನದಿಯಿಂದ ಲಿಫ್ಟ್ ನೀರಾವರಿ ಮೂಲಕ ನೀರು ಪೂರೈಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಈ ಸಂಬಂಧ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ವಿಷಯವನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಸೂಚನೆ ನೀಡಿದ್ದರು. ಅದರಂತೆ, ಬರಪ್ರದೇಶದ ನೀರಿನ ಸಮಸ್ಯೆ ನಿವಾರಣೆಗೆ 32 ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಇನ್ನೊಂದೆಡೆ, ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಲಿಫ್ಟ್ ನೀರಾವರಿ ಯೋಜನೆಯ ಪುನಶ್ಚೇತನಕ್ಕೂ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಈಗಿರುವ ಈ ಯೋಜನೆ ನಿರಂತರ ತಾಂತ್ರಿಕ ದೋಷ, ಪಂಪುಗಳ ವೈಫಲ್ಯ, ರೈಜಿಂಗ್ ಮೇನ್ ಹಾಗೂ ಕಾಲುವೆಗಳ ಹಾನಿಯಿಂದ ಬಳಲುತ್ತಿತ್ತು. ಹೀಗಾಗಿ ಹೊಸ ಪಂಪುಗಳು, ಮೋಟಾರ್‌ಗಳು, ಪೈಪ್‌ಲೈನ್‌ಗಳ ಅಳವಡಿಕೆ ಸೇರಿದಂತೆ ಅಗತ್ಯ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು 11.50 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಈ ಮೂಲಕ ಹಾಸನ ಜಿಲ್ಲೆಯ ಎರಡು ನೀರಾವರಿ ಯೋಜನೆಗಳಿಗೆ ಒಟ್ಟಾರೆ 43.50 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದಂತಾಗಿದೆ.

ಹಾಸನ ಜಿಲ್ಲೆಯ ಪರವಾಗಿ, ಜಿಲ್ಲೆಯ ಜನತೆಯ ಅಗತ್ಯಗಳಿಗೆ ಸ್ಪಂದಿಸಿ ಈ ಮಹತ್ವದ ಯೋಜನೆಗಳನ್ನು ಮಂಜೂರು ಮಾಡಿದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಕೃತಜ್ಞತೆ
ಸಲ್ಲಿಸಿದ್ದಾರೆ.
Hassan
ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಫೇಸ್ ಬುಕ್ ಹ್ಯಾಕ್
ಹಾಸನ: ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಭಾವಚಿತ್ರವಿರುವ ಫೇಸ್ ಬುಕ್ ಐಡಿಯಿಂದ ಸಂದೇಶಗಳು ಬೇರೆಯವರ ಮೊಬೈಲ್‌ಗಳಿಗೆ ರವಾನೆಯಾಗುತ್ತಿರುವುದು ಕಂಡು ಬಂದಿದ್ದು, ಫೇಸ್ ಬುಕ್ ಐಡಿಯಿಂದ ಯಾವುದೇ ಸಂದೇಶ ಜಿಲ್ಲಾಧಿಕಾರಿ ಕಳುಹಿಸುತ್ತಿಲ್ಲ.

ಫೇಸ್ ಬುಕ್ ಐಡಿ ನಕಲಿ ಖಾತೆಯನ್ನು ಬಳಸುತ್ತಿರುವುದು ಕಂಡು ಬಂದಿದೆ. ನಕಲಿ ಖಾತೆಯಿಂದ ಬರುವ ಮೇಸೆಜ್‌ಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಂತೆ ಹಾಗೂ ಯಾವುದೇ ದೂರುಗಳು ಇದ್ದರೆ ಕಚೇರಿ ವೇಳೆಯಲ್ಲಿ ಭೇಟಿ ಮಾಡಿ ದೂರು ನೀಡಬಹುದಾಗಿದೆ. ಸೈಬರ್ ಅಪರಾಧದ ಬಗ್ಗೆ ಜಾಗೃತರಾಗುವಂತೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.
Hassan
ಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ರೈತ ಆತ್ಮಹ*ತ್ಯೆ
ಹಾಸನ : ಜಿಲ್ಲೆಯ, ಚನ್ನರಾಯಪಟ್ಟಣ ತಾಲೂಕಿನ, ಶ್ರವಣಬೆಳಗೊಳ ಹೋಬಳಿ ಕೊತ್ತನಘಟ್ಟ ಗ್ರಾಮದಲ್ಲಿ ಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಯೋಗೇಶ್ (50) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ.

ಚನ್ನರಾಯಪಟ್ಟಣದ ಶ್ರೀರಾಮ ಫೈನಾನ್ಸ್‌ನಲ್ಲಿ ಏಳು ಲಕ್ಷ ಸಾಲ ಪಡೆದಿದ್ದ ಯೋಗೇಶ್ ಅವರು ಪ್ರತಿ ತಿಂಗಳು ಸರಿಯಾಗಿ ಕಂತು ಕಟ್ಟುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ಕಂತು ಕಟ್ಟದೆ ಬಾಕಿ ಉಳಿಸಿಕೊಂಡಿದ್ದರು. ಹೀಗಾಗಿ ಶ್ರೀರಾಮ ಫೈನಾನ್ಸ್‌ನ ಇಬ್ಬರು ಸಿಬ್ಬಂದಿಗಳು ನಿನ್ನೆ ರಾತ್ರಿ ಮನೆಗೆ ಬಂದು ಗಲಾಟೆ ಮಾಡಿ, ಮನೆ ಸೀಜ಼್ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಇದರಿಂದ ಮಾನಕ್ಕೆ ಅಂಜಿ ರಾತ್ರಿ ಎರಡು ಗಂಟೆ ಸಮಯದಲ್ಲಿ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ನೂ ಫೈನಾನ್ಸ್ ವಿರುದ್ಧ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. . ಈ ಘಟನೆ ಶ್ರವಣಬೆಳಗೊಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
-
Special14 hours agoಕೊನೆಗೂ ಬಂತು ಯುಪಿಎಸ್ಸಿ ನೇಮಕಾತಿ: 933 ಹುದ್ದೆಗಳಿಗೆ ಇಂದಿನಿಂದಲೇ ಅರ್ಜಿ ಸಲ್ಲಿಸುವಿಕೆ ಆರಂಭ!
-
Sports12 hours agoWPL Champions| ಸತತ 2ನೇ ಆರ್ಸಿಬಿಗೆ ಚಾಂಪಿಯನ್ ಕಿರೀಟ: RCB ಹ್ಯಾಟ್ರಿಕ್ ಸಾಧನೆ!
-
National16 hours agoಹಾಸನ ಮೆಗಾ ಡೇರಿ ವಿಸ್ತರಣೆಗೆ ಕೇಂದ್ರದ ನೆರವು: NDDB ಮೂಲಕ 150 ಕೋಟಿ ರೂ. ಸಾಲ ಸೌಲಭ್ಯ ಕೊಡಿಸಲು ಕೇಂದ್ರ ಸಮ್ಮತಿ
-
National22 hours agoಕೆ.ಆರ್. ನಗರ ಮಹಿಳೆಯ ಅಪಹರಣ ಕೇಸ್ – ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಬಿಗ್ ಶಾಕ್
-
Mysore15 hours agoಮನರೇಗಾ ಹೆಸರು ಬದಲಾವಣೆ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
-
Kodagu19 hours agoಫೆ. 7ಕ್ಕೆ ಕೆಎಸ್ಆರ್ಟಿಸಿ ನೂತನ ಬಸ್ಸು ನಿಲ್ದಾಣ ಉದ್ಘಾಟನೆ
-
Mandya15 hours agoತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಡಬೇಕು : ಸಾಹಿತಿ ಟಿ. ಸತೀಶ್ ಜವರೇಗೌಡ
-
National18 hours agoಮಂಡ್ಯ, ಮದ್ದೂರಿನಲ್ಲಿ ಮುರುಡೇಶ್ವರ ರೈಲು ನಿಲುಗಡೆಗೆ ಎಚ್ಡಿಕೆ ಮನವಿ: ಅಶ್ವಿನಿ ವೈಷ್ಣವ್ರಿಂದ ಸಕರಾತ್ಮಕ ಪ್ರತಿಕ್ರಿಯೆ
