Connect with us

Chamarajanagar

ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ- 2024 ರ ಅಂಗವಾಗಿ ಯಳಂದೂರು ಪಟ್ಟಣದಲ್ಲಿಂದು ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಮಹೇಶ್ ಕುಮಾರ್ ಚಾಲನೆ ನೀಡಿದರು .

Published

on

ಬಳಿಕ ಮಾತನಾಡಿದ ಅವರು ಎಲ್ಲರೂ 26ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಬೇಕು. ನಿಮ್ಮ ಹೆಸರು ಮತದಾನ ಪಟ್ಟಿಯಲ್ಲಿ ಇರುವ ಬಗ್ಗೆ ಹೆಲ್ಪ್ಲೈನ್ ಆಪ್ ಮುಖಾಂತರ ಖಚಿತಪಡಿಸಿಕೊಳ್ಳಬೇಕು. ಚುನಾವಣೆ ಸಂಬಂಧ ಯಾವುದೇ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ಸಿವಿಜಿಲ್ ಆಪ್ ನಲ್ಲಿ ದೂರು ಸಲ್ಲಿಸಬಹುದು ಎಂದರು. ನಂತರ ಪಟ್ಟಣದ 7 ಮತಗಟ್ಟೆಗಳಿಗೆ ತೆರಳಿ ಮತದಾನದ ಧ್ವಜ ರೋಹಣ ನೆರವರಿಸಿ ಬಳಿಕ ಮತಗಟ್ಟೆ ವೀಕ್ಷಣೆ ಮಾಡಿದರು. ಪಟ್ಟಣದ ಏಳು ಮತಗಟ್ಟೆಗಳಲ್ಲಿ ಸಹ ರಂಗೋಲಿ ಬಿಡಿಸಿ ಆಕರ್ಷಕವಾಗಿ ಮತಗಟ್ಟೆಗಳನ್ನು ಸಿಂಗರಿಸಿದ್ದರು. ಪಟ್ಟಣದಲ್ಲಿ ಈ ಬಾರಿ ಅತಿ ಹೆಚ್ಚು ಮತದಾನ ಆಗಬೇಕು ಹಣ ಹೆಂಡ ಈತರೆ ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತ ಚಲಾಯಿಸಬೇಕು ಮತದಾನ ನಮ್ಮ ಮುಂದಿನ ಪೀಳಿಗೆಗೆ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಾಲೂಕು ಸ್ವೀಪ್ ಸಮಿತಿ ಸದಸ್ಯರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಗುಂಡ್ಲುಪೇಟೆಯಲ್ಲಿ ಪ್ರತಿಭಟನೆ

Published

on

ಗುಂಡ್ಲುಪೇಟೆಯಲ್ಲಿ ಇಂದು ಇಂದು ಹಿಂದೂ ಕಾರ್ಯಕರ್ತರು . ದೇವರಾಜ ಅರಸು ಕ್ರೀಡಾಂಗಣದಿಂದ ಗುಂಡ್ಲುಪೇಟೆ ಮುಖ್ಯರಸ್ತೆ ಯಲ್ಲಿ ಮೆರವಣಿಗೆ ಮುಖಾಂತರ ಬಂದು ಗುಂಡ್ಲುಪೇಟೆ ತಾಲೂಕು ಕಚೇರಿ ಮುಂದೆ ಮಾನವ ಸರಪಳಿ ಮುಖಾಂತರ ಪ್ರತಿಭಟನೆ ನಡೆಸಲಾಯಿತು ಈ ಪ್ರತಿಭಟನೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಎಲ್ಲಾ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮತ್ತು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಹಾಗೂ ಇನ್ನೂ ಹಲವು ಹಿಂದೂಪರ ಸಂಘಟನೆಗಳು ಪಾಲ್ಗೊಂಡಿದ್ದವು.

ಹಿತರಕ್ಷಣ ಸಮಿತಿ ವತಿಯಿಂದ ಬಾಂಗ್ಲಾದೇಶದಲ್ಲಿರುವ ಹಿಂದುಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬಾಂಗ್ಲಾದೇಶದ ಹಿಂದೂಗಳ ಸುರಕ್ಷತೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜನ ಜಾಗೃತಿಗೋಸ್ಕರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಲಾಯಿತು

Continue Reading

Chamarajanagar

ಕೆಎಸ್ ಆರ್ ಟಿ ಸಿ ಬಸ್ ಮುಂಭದಿ ಟೈಯರ್ ಬ್ಲಾಸ್ಟ್ ತಪ್ಪಿದ ಭಾರಿ ಅನಾಹುತ…

Published

on

ಯಳಂದೂರು ಪಟ್ಟಣದ ಸಂತೆ ಮೊಳೆ ಸರ್ಕಾಲಿನಲ್ಲಿ ಕೆ.ಎಸ್. ಆರ್. ಟಿ. ಸಿ ಯ ಮುಂಬದಿಯ ಟೈರ್ ಬ್ಲಾಸ್ಟ್ ಚಾಮರಾಜನಗರದಿಂದ ಕೊಳ್ಳೇಗಾಲಕ್ಕೆ ಹೋಗುವುದು ಕೆ ಎ 10 ಎಫ್ 0248 ಇವತ್ತು ಕೊಳ್ಳೇಗಾಲ ಘಟಕದ ಬಸ್


ಕೊಳ್ಳೇಗಾಲ ಘಟಕದಲ್ಲಿ ಕೆಟ್ಟು ಹೋಗಿರುವ ಬಸ್ಸುಗಳನ್ನು ಕೊಟ್ಟು ಒಂದು ವರ್ಷಕ್ಕೊಮ್ಮೆ ಟೈರ್ ಗಳನ್ನು ಬದಲಾಯಿಸಿ ಮಾಡುವುದು ಚಾಮರಾಜನಗರದಿಂದ ಕೊಳ್ಳೇಗಾಲಕ್ಕೆ ಹೋಗುವ ಬಸ್ಸುಗಳಲ್ಲಿ ಒಂದು ಬಾರಿ ನೋಡಿ ಗೆ 120 ಜನಗಳು ತುಂಬಿ ಹೋಗುವುದು ಅದರಿಂದ ಟೈರ್ ಬ್ಲಾಸ್ಟ್ ಆಗಿದೆ ಎಂದು ಸಾರ್ವಜನಿಕರು ತಿಳಿಸಿದರು

Continue Reading

Chamarajanagar

ಸಮಯ ನಮಗಾಗಿ ಕಾಯುವುದಿಲ್ಲ…ಅದರ ಹಿಂದೆ ನಾವು ಹೋಗಬೇಕು… ಅದನ್ನು ಅರ್ಥ ಮಾಡಿಕೊಳ್ಳಬೇಕು.. ಬಳಸಿಕೊಂಡು ಸಾಧಿಸಬೇಕು…. ಶ್ರೀ ಆರ್ ಶಶಿಧರ್,ನಿವೃತ್ತ ಪ್ರಭಾರ ಪ್ರಾಂಶುಪಾಲರು.

Published

on

ಸರ್ಕಾರಿ ಪದವಿ ಪೂರ್ವ ಕಾಲೇಜು ನಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಿದರು.
ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದರು.
ಮುಖ್ಯ ಅತಿಥಿ ಆರ್ ಶಶಿಧರ್ ರವರು ವಿದ್ಯಾರ್ಥಿಗಳ ಆಸಕ್ತಿ, ಚಟುವಟಿಕೆ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ವಿದ್ಯಾರ್ಥಿಗಳ ಜೀವನದಲ್ಲಿ ಕಾಲೇಜಿನಲ್ಲಿ ಸಿಗುವಂತಹ ಮೌಲ್ಯ ಯುತವಾದ ಮಾರ್ಗದರ್ಶನ, ತಿಳುವಳಿಕೆ ಇನ್ನಾವುದರಲ್ಲಿಯೂ ಸಿಗುವುದಿಲ್ಲ.

ವಿದ್ಯಾರ್ಥಿಗಳು ಓದುವ ಕಡೆ ಹೆಚ್ಚಿನ ಆಸಕ್ತಿ ವಹಿಸಬೇಕು. ತಂದೆ ತಾಯಿಗಳ ಬದುಕು ನಮಗೆ ಆದರ್ಶ ಆಗಬೇಕು. ಅವರಿಗೆ ಸಾಮಾಜಿಕ ವಾಗಿ ಗೌರವ ದೊರಕಿಸುವ ಕೆಲಸವನ್ನು ಮಕ್ಕಳು ಮಾಡಬೇಕು. ಮನಸ್ಸನ್ನು ಓದಿನ ಕಡೆಗೆ ಕೇಂದ್ರೀಕರಿಸಬೇಕು.ಕಾಲೇಜಿಗೆ ಉತ್ತಮ ಫಲಿತಾಂಶ ತರಬೇಕು ಎಂದು ಶುಭಕೋರಿದರು.ಈ ಕಾರ್ಯಕ್ರಮದಲ್ಲಿ ಪ್ರಥಮ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದು ತಾಲ್ಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದು ಪ್ರಭಾರ ಪ್ರಾಂಶುಪಾಲರಾದ ಶ್ರೀ ಎಲ್ ಮಹೇಶ್ ರವರು ಶುಭ ಹಾರೈಸಿದರು.

ಕಾರ್ಯಕ್ರಮ ವನ್ನು ವಿದ್ಯಾರ್ಥಿಗಳಾದ ದಿಶಾ ಮತ್ತು ಮಂಜುಳಾ ಎಂಬ ವಿದ್ಯಾರ್ಥಿನಿಯರು ನಡೆಸಿಕೊಟ್ಟರು. ಉಪನ್ಯಾಸಕರಾದ ಶ್ರೀ ಜಿ ಸ್ಟೀವನ್ ರವರು, ಮೇರಿ ಅಶ್ವಿನಿ, ಪುಷ್ಪಲತಾ,ಎನ್ ನಾಗರಾಜು,ಅಜಯ್ ಕುಮಾರ್,ಜ್ಯೋತಿ, ಮಂಜುಳಾ, ನಂದಿನಿ,ಸಂಗೀತ, ಕೃಷ್ಣರಾಜು,,ರಂಗಸ್ವಾಮಿ ರವರುಗಳು ಹಾಜರಿದ್ದರು. ವಿದ್ಯಾರ್ಥಿಗಳು ಕೂಡ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

Continue Reading

Trending

error: Content is protected !!