Connect with us

Location

*ಸಿಡಿದೆದ್ದ ಆದಿಚುಂಚನಗಿರಿ ಸ್ವಾಮೀಜಿ*

Published

on

ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ಹೇಳಿಕೆ ವಿಚಾರ.
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ…!
ಮಹಾಭಾರತದ ಸಂದೇಶ ಉಲ್ಲೇಖಿಸಿ ಟಾಂಗ್.
ಸನಾತನ ಪದಕ್ಕೆ ಶಾಶ್ವಾತ ಎನ್ನುವ ಅರ್ಥವಿದೆ.
ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜಾಗೃತವಾಗಿ ಮಾತನಾಡಬೇಕು.
ಬಳಸುವ ಪದಗಳ ಬಗ್ಗೆ ನಿಗಾ ಇರಬೇಕು.
ಮೈಸೂರಿನಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ.

ಸನಾತನ ಎಂದರೆ ಶಾಶ್ವತ ಎಂದರ್ಥ
ಶ್ರೀನಿರ್ಮಲಾನಂದನಾಥ ಸ್ವಾಮೀಜಿ ವ್ಯಾಖ್ಯಾನ.
ಸನಾತನ ಪದಕ್ಕೆ ಇಂಗ್ಲಿಷ್​ನಲ್ಲಿ ಪುರಾತನ ಎನ್ನುವ ಅರ್ಥ ಇದೆ.
ಸನಾತನ ಎನ್ನುವುದಕ್ಕೆ ಶಾಶ್ವತ ಎಂಬುದು ವ್ಯಾಖ್ಯಾನ.
ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತೆ ಅದು ಸನಾತನ.
ಧರ್ಮ ಎಂದರೆ ಸಿದ್ಧ ಸಾಧನೆಯ ಸನ್ಮಾರ್ಗ
ಸನಾತನ ಪದಕ್ಕೇ ಪುರಾತನ ಅರ್ಥವಿದೆ
ಇತಿಹಾಸ ಎಲ್ಲರಿಗೂ ಗೊತ್ತಿದೆ.
ಕ್ರಿಶ್ಚಿಯನ್ ಧರ್ಮ ಶುರುವಾಗಿದ್ದು 2000 ವರ್ಷಗಳ ಹಿಂದೆ.
ಮುಸ್ಲಿ ಧರ್ಮಕ್ಕೆ 1600 ವರ್ಷಗಳ ಇತಹಾಸವಿದೆ.
ಬೌದ್ಧ ಹಾಗೂ ಜೈನ ಧರ್ಮಗಳೆರಡೂ 2500 ವರ್ಷಗಳ ಹಿಂದೆ ಶುರುವಾಗಿವೆ.
ಸಿಖ್, ಯಹೂದಿ ಎಲ್ಲ ಧರ್ಮಗಳೂ ನಂತರದಲ್ಲಿ ಬಂದವು.
ಇವೆಲ್ಲಕ್ಕಿಂತ ಹಿಂದೂ ಧರ್ಮ ಪುರಾತನವಾದದ್ದು.
ಕೃಷ್ಣ ಮಹಾಭಾರತದಲ್ಲಿ ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ಎಂದಿದ್ದಾನೆ.
ಈ ಮಾತಿಗೆ ಗಹನವಾದ ಅರ್ಥವಿದೆ.
ಎಲ್ಲ ಧರ್ಮ ಬಿಟ್ಟುಬನ್ನಿ ಎಂದು ಕೃಷ್ಣ ಹೇಳಲಿಲ್ಲ.
ಮನಸ್ಸಿನ ಕೊಳಕನ್ನು ಬಿಟ್ಟು ಅತ್ಯುನ್ನತವಾದ ಆಧ್ಯಾತ್ಮಿಕ ಪ್ರಜ್ಞೆಗೆ ಶರಣಾಗಿ ಎಂದು ಕೃಷ್ಣ ಹೇಳಿದ್ದಾನೆ.
ಪ್ರಪಂಚದ ಪ್ರತಿ ವ್ಯಕ್ತಿಯೂ ಭಿನ್ನ.
ಆದರೆ ಎಲ್ಲರಿಗೂ ಆಮ್ಲಜನಕ ಬೇಕು.
ಆಮ್ಲಜನಕ ಇಲ್ಲದೆ ಇರುತ್ತೇನೆ ಎಂದರೆ ಏನಾಗುತ್ತೆ
ಮೈಸೂರಿನಲ್ಲಿ ನಿರ್ಮಲಾನಂದ ಸ್ವಾಮೀಜಿ ಮಾರ್ಮಿಕ ಪ್ರಶ್ನೆ.

ಭಾರತ ಮರುನಾಮಕರಣ ಚರ್ಚೆ ವಿಚಾರ.
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಕ್ರಿಯೆ.
ಇಂಗ್ಲಿಷ್​ನಲ್ಲಿ ಇಂಡಿಯಾ, ಹಿಂದಿಯಲ್ಲಿ ಭಾರತ ಅಂತ ಬಳಸುತ್ತಿದ್ದೇವೆ.
ಈ ಚರ್ಚೆ ಯಾವಾಗ, ಹೇಗೆ ಶುರುವಾಯ್ತು ಗೊತ್ತಿಲ್ಲ.
ಹಿಂದಿ, ಕನ್ನಡದಲ್ಲಿ ಬರೆಯುವಾಗ ಭಾರತ ಸರ್ಕಾರ ಎಂದೇ ಬರೆಯುತ್ತೇವೆ.
ಕೆಲವೊಮ್ಮೆ ಇಂಡಿಯನ್​ ಗವರ್ನಮೆಂಟ್ ಎಂದು ಬಳಸುತ್ತೇವೆ.
ಕೇಂದ್ರ ಸರ್ಕಾರವೇ ಮರುನಾಮಕರಣ ಚರ್ಚೆ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಈ ವಿಚಾರದಲ್ಲಿ ಚರ್ಚೆ ಅನಗತ್ಯ ಎಂಬುದು ನನ್ನ ಅಭಿಪ್ರಾಯ.
ಮೈಸೂರಿನಲ್ಲಿ ಚುಂಚಶ್ರೀ ಹೇಳಿಕೆ.

ಹಿಂದೂ ಧರ್ಮದ ಪರ ಸ್ವಾಮೀಜಿಗಳ ಹೋರಾಟ !?
ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸುಳಿವು
ಹೋರಾಟದ ಸುಳಿವು ನೀಡಿದ ಸ್ವಾಮೀಜಿ
ಇದೇ ವಿಚಾರಕ್ಕೆ ಪ್ರತ್ಯೇಕವಾಗಿ ಸಭೆ ಕರೆಯುವ ಅನಿವಾರ್ಹತೆ ಬರಬಹುದು
ಬಂದಾಗ ಅದನ್ನು ಮುಖ್ಯವಾಗಿ ಚರ್ಚಿಸೋಣ
ಮುಂತಾದಾಳತ್ವದ ಬಗ್ಗೆ ಕೇಳಿದ ಪ್ರಶ್ನೆಗೆ ಮೌನವಹಿಸಿದ ಸ್ವಾಮೀಜಿ
ಉದಯನಿಧಿ ಸ್ಟಾಲಿನ್​ಗೆ ಹಿಗ್ಗಾಮುಗ್ಗ ತರಾಟೆ.
ಧರ್ಮದ ಬಗ್ಗೆ ತಿಳಿದುಕೊಂಡವರು ಮಾತನಾಡುವುದಿಲ್ಲ.
ಧರ್ಮದ ಬಗ್ಗೆ ತಿಳಿದುಕೊಳ್ಳದವನು ತಮ್ಮ ಧರ್ಮದ ಬಗ್ಗೆಯೂ ಮಾತನಾಡುತ್ತಾನೆ.
ಇತರೆ ಧರ್ಮಗಳ ಬಗ್ಗೆಯೂ ಮಾತನಾಡುತ್ತಾನೆ.
ನಾಡಾಳುವ ನಾಸ್ತಿಕನಾದರೂ ಪ್ರಜೆಗಳ ಆಸ್ತಿಕತೆ ಗೌರವಿಸಬೇಕು.
ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ಬೇರೊಂದು ಧರ್ಮಕ್ಕೆ ಸೆಳೆಯಲು ಸಾಧ್ಯವಿಲ್ಲ.
ಉದಯನಿಧಿ ಸ್ಟಾಲಿನ್​ಗೆ ಹೇಳಿಕೆಗೆ ಸ್ವಾಮೀಜಿ ಕೆಂಡ

Continue Reading
Click to comment

Leave a Reply

Your email address will not be published. Required fields are marked *

Chikmagalur

ಕೋಟಿಚೆನ್ನಯ್ಯ ಬಯಲು ರಂಗಮಂದಿರ ಉದ್ಘಾಟಿಸಿದ ಶಾಸಕ ಟಿ.ಡಿ ರಾಜೇಗೌಡ

Published

on

ಬಾಳೆಹೊನ್ನೂರು: ಶ್ರೀ ನಾರಾಯಣಗುರುಗಳ ಸಂದೇಶ ಸಾರ್ವಕಾಲಿಕವಾಗಿದ್ದು ಅವರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಶಾಂತಿ ಸಮೃದ್ಧಿಯಾಗಲಿದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ತಿಳಿಸಿದರು.

ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ(ರಿ) ಶ್ರೀ ನಾರಾಯಣಗುರು ಯುವ ವೇದಿಕೆ ಹಾಗೂ ಬಿಲ್ಲವ ಮಹಿಳಾ ಘಟಕ ಹಮ್ಮಿಕೊಂಡಿದ್ದ ಕೋಟಿ ಚೆನ್ನಯ್ಯ ಬಯಲು ರಂಗಮಂದಿರದಿರದ ಉದ್ಘಾಟನಾ ಸಮಾರಂಭದಲ್ಲಿ ರಂಗಮಂದಿರ ಉದ್ಘಾಟಿಸಿ ಮಾತನಾಡಿದರು.

ಎಲ್ಲರೂ ಒಂದೇ ಎಂಬ ಸಂದೇಶ ಸಾರಿ ಸಾಮರಸ್ಯ ಸಾರಿದ ಮಹಾನ್ ವ್ಯಕ್ತಿಯಾಗಿದ್ದರು. ಸಮುದಾಯದ ಬೆಳವಣಿಗೆಗೆ ಮಾರ್ಗದರ್ಶನವಿರಬೇಕು. ಬೆಳವಣಿಗೆಗೆ ರಾಜಕೀಯ ನುಸಳದಂತೆ ಸಂಘಟನೆಯನ್ನು ಬಲಪಡಿಸಬೇಕು ಸರ್ವಾನುಮತದ ಅಧ್ಯಕ್ಷರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡಾಗ ಅಭಿವೃದ್ಧಿಯಾಗಲಿದೆ. ಎಲ್ಲರೂ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಯನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕು ಹಾಗೂ ಸರ್ಕಾರದಿಂದ ಬರುವ ಅನುದಾನವನ್ನು ಕೊಡಿಸುವುದಾಗಿ ತಿಳಿಸಿದರು.

ಮಾಜಿ ಸಚಿವರಾದ ಡಿ.ಎನ್ ಜೀವರಾಜ್ ಮಾತನಾಡಿ ದಕ್ಷಿಣ ಕನ್ನಡದಿಂದ ಕೂಲಿಗಾಗಿ ವಲಸೆ ಬಂದ ಕುಟುಂಬಗಳು ಇಂದು ಈ ಭಾಗದಲ್ಲಿ ಸತತ ಪರಿಶ್ರಮದಿಂದ ಆರ್ಥಿಕ ಬೆಳವಣಿಗೆ ಸಾಧಿಸಿದ್ದಾರೆ. ಮಕ್ಕಳಿಗೆ ನಾರಾಯಣ ಗುರುಗಳ ಸಂದೇಶವನ್ನು ಮುಟ್ಟಿಸಬೇಕು. ನಾರಾಯಣ ಗುರುಗಳು ಶೋಷಿತರ ಧ್ವನಿಯಾಗಿ ಎಲ್ಲರನ್ನು ಸರಿಸಮಾನರಾಗಿ ಕಾಣಬೇಕೆಂದು ಬಯಸಿದ್ದರೆಂದು ತಿಳಿಸಿದರು. ಕೋಟಿಚೆನ್ನಯ್ಯ ಹಾಗೂ ಶ್ರೀ ನಾರಾಯಣ ಗುರುಗಳು ಸಮುದಾಯದ ಎರಡು ಕಣ್ಣುಗಳಿದ್ದಂತೆ ಎಂದು ತಿಳಿಸಿದರು.

ಪುತ್ತೂರಿನ ಶ್ರೀ ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ರವಿ ಚಿಲಿಂಬಿ ಮಾತನಾಡಿ ಕುದ್ರೋಳಿ ದೇವಸ್ಥಾನ ಹಾಗೂ ಗೆಜ್ಜೆಗಿರಿ ಕ್ಷೇತ್ರ ಸಮಾಜದ ಎರಡು ಕಣ್ಣುಗಳಿದ್ದಂತೆ ನ್ಯಾಯ ಧರ್ಮವಿದ್ದಲ್ಲಿ ದೇವರಿದ್ದಾರೆ ಎಂದು ತಿಳಿಸಿ ಮೂಲ ಸಾನಿಧ್ಯಕ್ಕೆ ಎಲ್ಲರು ಬಂದು ದರ್ಶನ ಪಡೆಯಬೇಕು ದೇಶ ವಿದೇಶಗಳಲ್ಲು ನಾರಾಯಣ ಗುರುಗಳ ಸಂಸ್ಥೆಗಳು ಇದ್ದು ವಿಶ್ವಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ಜೆ ಮೋಹನ್ ವಹಿಸಿ ಮಾತನಾಡಿ ರಂಗಮಂದಿರ ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗು ಕೃತಜ್ಞತೆ ಸಲ್ಲಿಸಿದರು. ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಜಿ.ಪಂ ಮಾಜಿ ಸದಸ್ಯ ಪಿ.ಆರ್ ಸದಾಶಿವ, ಬ್ರಹ್ಮಶ್ರೀ ನಾರಾಯಣಗುರು ಸಮಾಜದ ಜಿಲ್ಲಾಧ್ಯಕ್ಷರಾದ ಹೆಚ್.ಎಂ ಸತೀಶ್, ಕೇಂದ್ರೀಯ ಕಾಫಿ ಮಂಡಳಿಯ ಸದಸ್ಯ ಬಿ.ಎನ್ ಭಾಸ್ಕರ್ ಮಾತನಾಡಿದರು. ಬಿ.ಕಣಬೂರು ಗ್ರಾ.ಪಂ ಅಧ್ಯಕ್ಷ ರವಿಚಂದ್ರ, ಮಹಲಗೋಡು ಶ್ರೀನಿವಾಸ್, ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಎಸ್ ಅರುಣೇಶ್, ಆಲ್ದೂರು ಸಂಘದ ಅಧ್ಯಕ್ಷ ಕುಮಾರಣ್ಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸದಾನಂದ ಬಂಗೇರ, ರಾಮ ಡಿ ಸಾಲಿಯಾನ್, ಮಹಿಳಾ ಅಧ್ಯಕ್ಷೆ ಪಾರ್ವತಮ್ಮ ಉಮೇಶ್, ಇಟ್ಟಿಗೆ ಶೇಖರ್, ಹಾತೂರು ಪ್ರಭಾಕರ್, ಸಂಜೀವ ಸೇರಿದಂತೆ ಜಗದೀಶ್ ಅರಳಿಕೊಪ್ಪ ಸಮುದಾಯದವರು ಉಪಸ್ಥಿತರಿದ್ದರು. ಹಿತೈಶಿ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಜಯ ಪ್ರಭಾಕರ್ ಸ್ವಾಗತಿಸಿ, ದೀಪಾ ನಿರೂಪಿಸಿ, ಸತೀಶ್ ಅರಳಿಕೊಪ್ಪ ಪ್ರಾಸ್ತಾವಿಕ ಮಾತನಾಡಿದರು.

Continue Reading

Chikmagalur

ಹುಯಿಗೆರೆಯಲ್ಲಿ ಶಂಕರ ಭಾರತಿ ಗೋಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

Published

on

ಬಾಳೆಹೊನ್ನೂರು: ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪ ಸಂಖ್ಯಾತರ ತುಷ್ಟೀಕರಣದ ಪಕ್ಷವಾಗಿದೆ ಇವರ ಆಡಳಿತದಲ್ಲಿ ರಾಜ್ಯಾದ್ಯಂತ ಅವ್ಯಾಹತವಾಗಿ ಗೋ ಸಾಗಾಣಿಕೆ, ಹತ್ಯೆ, ಹಿಂದೂಗಳ ಮೇಲೆ ದೌರ್ಜನ್ಯ, ಲವ್ ಜಿಹಾದ್ ನಿರಂತರವಾಗಿ ಮುಂದುವರೆಯುತ್ತಿರುವುದು ಆತಂಕ ಸೃಷ್ಠಿಸಿದೆ ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಸಹ ಕಾರ್ಯದರ್ಶಿ ಗೋಪಾಲ್ ಜಿ ತಿಳಿಸಿದರು .

ಅವರು ಬಾಳೆಹೊನ್ನುರು ಸಮೀಪದ ಹುಯಿಗೆರೆಯಲ್ಲಿರುವ ಶಂಕರ ಭಾರತಿ ಗೋಸೇವಾ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ & ಹಸು, ಕರುವನ್ನು ಪೂಜಿಸಿ ಬಿಡುವ ಮೂಲಕ ಉದ್ಘಾಟಿಸಲಾಯಿತು.

ಸತತ 500 ವರ್ಷಗಳ ಸಂಘರ್ಷದ ಬಳಿಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಂಡಿರುವುದು ನಾವು ಹೆಮ್ಮೆಪಡುವ ವಿಚಾರವಾಗಿದೆ. 30 ಸಾವಿರಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳನ್ನು ಆಕ್ರಮಣಕಾರಿಗಳು ಧ್ವಂಸ ಮಾಡಿದ್ದು, ಅದರಲ್ಲಿ ಅಯೋಧ್ಯೆಯನ್ನು ವ್ಯಾಪಕ ಜನಾಂದೋಲನ, ಕಾನೂನಿನ ಮೂಲಕ ಕಡೆಗೂ ನಮ್ಮದಾಗಿಸಿಕೊಳ್ಳಲಾಗಿದೆ.

ವಿಶ್ವ ಹಿಂದೂ ಪರಿಷತ್ ಸಂಘಟನೆಯು ಮುಂದಿನ ದಿನಗಳಲ್ಲಿ ಕಾಶಿ, ಮಥುರಾ, ಅಯೋಧ್ಯೆಯ ಉಳಿವಿನ ಛಲದ ಹೋರಾಟಕ್ಕೆ ಹಂತಹಂತವಾಗಿ ಜಯ ಲಭಿಸುವ ಕಾಲ ಸನ್ನಿಹಿತವಾಗುತ್ತಿದ್ದು, ಮುಂದೆ ಐತಿಹಾಸಿಕ ಮಥುರೆ, ಕಾಶಿಯನ್ನು ನಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಚುರುಕು ಗತಿಯಲ್ಲಿ ಸಾಗಲಿದೆ.

ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಗೋಶಾಲೆಗಳು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣಗೊಳ್ಳುವ ಮೂಲಕ ಗೋ ಸಂರಕ್ಷಣೆಯ ಆಂದೋಲನದಲ್ಲಿ ಹೊಸ ಆತ್ಮ ವಿಶ್ವಾಸ, ಚೈತನ್ಯವನ್ನು ಹೆಚ್ಚಿಸಿದೆ. ಪ್ರವೀಣ್ ಖಾಂಡ್ಯ ಮತ್ತು ತಂಡ ನಿರ್ವಹಣೆ ಮಾಡುತ್ತಿರುವ ಈ ಗೋ ಸೇವಾ ಕೈಂಕರ್ಯಕ್ಕೆ ಶೃಂಗೇರಿ ಶಾರದಾ ಪೀಠದ ಅನುಗ್ರಹ, ಸಹಕಾರ ದೊರೆತಿದ್ದು, ಅನೇಕ ಕಾರ್ಯಕರ್ತರು ಈ ಸೇವೆಯಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ.

ಸಾಕಲು ಅಸಹಾಯಕರಾದ ರೈತರು, ಕಸಾಯಿಖಾನೆಗೆ ಸಾಗಿಸುತ್ತಿದ್ದಾಗ ಹಿಡಿದು ರಕ್ಷಿಸಿದ ಗೋವುಗಳಿಗೆ ಆಶ್ರಯ ನೀಡಿ ಪುನರ್ಜನ್ಮ ಕಲ್ಪಿಸುವಲ್ಲಿ ಗೋ ಸೇವಾ ಕೇಂದ್ರಗಳು ಸಹಕಾರಿಯಾಗಿದೆ. ಸಮಾಜ, ಮಠ, ಮಾನ್ಯಗಳ ಬೆಂಬಲ ಸಿಗದೆ ಇದ್ದಲ್ಲಿ ಇವುಗಳು ಉಳಿಯಲಾರವು. ಪ್ರತಿಯೊಬ್ಬರೂ ಆರ್ಥಿಕ ನೆರವು, ಆಹಾರ, ಮೇವಿನ ರೂಪದಲ್ಲಿ ಧರ್ಮಾಭಿಮಾನಿಗಳು ಗೋಗ್ರಾಸದ ರೂಪದಲ್ಲಿ ದಾನ ನೀಡಬೇಕು ಎಂದರು.

ಆಳುವ ಕಾಂಗ್ರೆಸ್ ಸರಕಾರವು ಮತಾಂಧತೆಗೆ ಬೆಂಬಲ ನೀಡುತ್ತಿದ್ದು, ಹಿಂದೂ ಸಮಾಜ ಅದನ್ನು ದಿಟ್ಟ ಹೋರಾಟದ ಮೂಲಕ ಎದುರಿಸಬೇಕಾಗಿದೆ. ದತ್ತಪೀಠದ ವಿವಾದದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಉಚ್ಚ ನ್ಯಾಯಾಲಯದ ತೀರ್ಪಿನಂತೆ ರಾಮ ಮಂದಿರಕ್ಕೆ ಅಯೋಧ್ಯೆ ಮೀಸಲಿಟ್ಟು, ಮುಸ್ಲಿಮರಿಗೆ ಪ್ರತ್ಯೇಕ ಜಾಗ ನೀಡಿದ ಕ್ರಮವನ್ನೇ ದತ್ತಪೀಠಕ್ಕೂ ಅನ್ವಯಿಸುವಂತೆ ಮಾಡುವ ತೀರ್ಪು ಬಂದಾಗ ಸಮಸ್ಯೆ ಬಗೆಹರಿಯಬಲ್ಲದು ಎಂದರು.

ಇದರ ಅಂಗವಾಗಿ ರುದ್ರ, ಶತರುದ್ರ ಹೋಮ ಮುಂತಾದ ಧಾರ್ಮಿಕ ಕಾರ್ಯಗಳು ನಡೆದವು. ಬೆಂಗಳೂರಿನ ಐಎಎಸ್ ಅಧಿಕಾರಿ ವಿಶ್ವನಾಥ್ ಹಿರೇಮಠ್, ವಿಹಿಂಪ ಮುಖಂಡ ದಾವಣಗೆರೆಯ ಮುರಳಿ, ಶಂಕರ ಭಾರತಿ ಗೋಶಾಲೆ ಟ್ರಸ್ಟ್ ಅಧ್ಯಕ್ಷೆ ಶೃತಿ ಪ್ರವೀಣ್, ಉಪಾಧ್ಯಕ್ಷ ಮುರಳಿಧರ್, ಖಜಾಂಚಿ ಪ್ರವೀಣ್ ಖಾಂಡ್ಯ, ಸಾವಿತ್ರಮ್ಮ ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಕಿರಿಯ ಜಗದ್ಗುರುಗಳ ಆಪ್ತ ಸಹಾಕ ಕೃಷ್ಣಮೂರ್ತಿ ಮಾತನಾಡಿ, ಶ್ರೀ ಪೀಠದಿಂದ ಸಹಕಾರ ಧರ್ಮ, ಸಂಸ್ಕೃತಿ, ಪರಂಪರೆಗಳ ಉಳಿವಿಗಾಗಿ ಯಾವ ಸಂಘಟನೆ, ವ್ಯಕ್ತಿಗಳು ಮುಂದೆ ಬರುತ್ತಾರೋ ಅವರಿಗೆ ಶ್ರೀ ಪೀಠದ ಉಭಯ ಜಗದ್ಗುರುಗಳ ಅನುಗ್ರಹ ಹಾಗೂ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು

Continue Reading

Kodagu

ಕಸ ವಿಲೇವಾರಿಗೆ ವಿರೋಧ: 4ನೇ ದಿನಕ್ಕೆ ಮುಂದುವರಿದ ಅಹೋರಾತ್ರಿ ಪ್ರತಿಭಟನೆ

Published

on

ಸಿದ್ದಾಪುರ: ವೀರಾಜಪೇಟೆ ತಾಲ್ಲೂಕಿನ, ಮಾಲ್ದಾರೆ ಗ್ರಾಮ ಪಂಚಾಯಿತಿ ಚೊಟ್ಟೆಪಾಳಿ (ಕಲ್ಲಳ್ಳ) ಜಾಗದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನೂತನವಾಗಿ ಕಸವಿಲೇವಾರಿ ಕೇಂದ್ರ ನಿರ್ಮಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಬಹುಜನ ಸಮಾಜ ಪಾರ್ಟಿ ನೇತ್ರತ್ವದಲ್ಲಿ ಮಾಲ್ದಾರೆ ಗ್ರಾಮ ಪಂಚಾಯತಿ ಮುಂದೆ ನಾಲ್ಕನೇ ದಿನ ಅಹೋರಾತ್ರಿ ಪ್ರತಿಭಟನೆ ಮುಂದುವರೆದಿದೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕೆಂದು ಒತ್ತಾಯಿಸಿದ್ದಾರೆ.

ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್ ಮಾತನಾಡಿ ಮಾಲ್ದಾರೆ ಗ್ರಾಮ ಪಂಚಾಯತಿ ಮುಂದೆ ನಡೆಯುತ್ತಿರುವ ಆಹೋರಾತ್ರಿ ಪ್ರತಿಭಟನೆ ನಾಲ್ಕನೇ ದಿನಕ್ಕೂ ಮುಂದುವರೆದಿದ್ದು ನಮ್ಮ ಮನವಿಗೆ ಮತ್ತು ಹೋರಾಟಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಆಡಳಿತ ನಡೆಸುವ ಸರ್ಕಾರ ವಿರುದ್ಧ ಇಂದಿನಿಂದ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಈ ಹೋರಾಟದಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಏನೇ ಹೆಚ್ಚು ಕಮ್ಮಿಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆ ವೇಳೆ ಅಧಿಕಾರಿಗಳು ಹಾಗೂ ಆಡಳಿತದ ವ್ಯವಸ್ಥೆಯ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಾಗೂ ಪೊನ್ನಂಪೇಟೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತೆಜರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಪ್ರತಿಭಟನೆಗಾರರು ಮನವಿ ಪತ್ರ ಇದೆ ಸಂದರ್ಭ ನೀಡಿದರು.

ಪ್ರತಿಭಟನೆಯಲ್ಲಿ ಬ್ರಿಗೇಡ್ ಸಂಘಟನೆಯ ರಾಜ್ಯಾಧ್ಯಕ್ಷ ರೇವತಿ ರಾಜ್, ಬಹುಜನ ಭಾಗ್ಯ ವಿಧಾತಾ ವೇದಿಕೆ ಸಂಘಟನೆಯ ರಾಜ್ಯಾಧ್ಯಕ್ಷ ಚೇತನ್ ಕುಮಾರ್, ಹಾಗೂ ಸ್ಥಳೀಯ ಕಾಫಿ ಬೆಳೆಗಾರರಾದ ಬೋಪಣ್ಣ, ರಾಮಚಂದ್ರ, ವಿಷ್ಣು, ರೋಹನ್,ಸೇದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು  ಹಾಜರಿದ್ದರು

Continue Reading

Trending

error: Content is protected !!