Connect with us

Hassan

ವೀರಶೈವ ಲಿಂಗಾಯಿತ, ಕೆಂಪೇಗೌಡ ಯುವಸೇನೆಯಿಂದ ತ್ರೀಮೂರ್ತಿ ಸ್ವಾಮೀಜಿಯವರ ಪುಣ್ಯಸ್ಮರಣೆ

Published

on

ಹಾಸನ: ನಗರದ ಸಹ್ಯಾದ್ರಿ ವೃತ್ತದಲ್ಲಿ ವೀರಶೈವ ಲಿಂಗಾಯಿತ ಯುವಸೇನೆ ಹಾಗೂ ಕೆಂಪೇಗೌಡ ಯುವಸೇನೆ ಇವರ ಸಂಯುಕ್ತಾಶ್ರಯದಲ್ಲಿ ಸಹ್ಯಾದ್ರಿ ಕೇಸರ ಬಳಗದಿಂದ ತ್ರೀಮೂರ್ತಿ ಸ್ವಾಮೀಜಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅನ್ನದಾನ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

ಶ್ರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಶಿವನನ್ನು ಕಾಣಬೇಕೆಂದು ಕೈಲಾಸಕ್ಕೆ ಹೋಗಬೇಕಾಗಿಲ್ಲ. ಎಲೊ ಹುಡುಕಿಕೊಂಡು ಕಾಶಿಗೆ ಹೋಗಬೇಕಾಗಿಲ್ಲ. ತಂದೆ ತಾಯಿ ಪಾಪಾರ್ವತಿಯ ಮೂರು ಪ್ರದಕ್ಷಣೆ ಹಾಕಿ ಮಹಾಗಣಪತಿಯನ್ನು ಇಂದಿಗೂ ಕೂಡ ಅಗ್ರಸ್ಥಾನದಲ್ಲಿಟ್ಟು ಪೂಜೆ ಮಾಡುತ್ತೇವೆ. ಗುರುವೇ ಬ್ರಹ್ಮ, ಗುರವೇ ವಿಷ್ಣು, ಗುರುಸಾಕ್ಷತೆ ಪರಬ್ರಹ್ಮ ತಸ್ಮಯಿ ಶ್ರೀ ಗುರುವೇ ನಮಃ. ತ್ರಿಮೂರ್ತಿಗೆ ಸಮಾನವಾಗಿರುವ ಗುರುಗಳ ಮುಟ್ಟಿದರೇ ಸಾಕು. ಅನೇಕ ಹುಡುಗರು ದಾರಿ ತಪ್ಪಿ ದಿಕ್ಕು ತಪ್ಪುವಂತಹ ವ್ಯವಸ್ಥೆ ಇದೆ. ಇಂತಹ ಪುಣ್ಯ ಕಾರ್ಯಗಳು ಮುನುಷ್ಯನಲ್ಲಿ ಶ್ರದ್ಧೆ, ಭಕ್ತಿ ಹಾಗೂ ಜೀವನದ ನಡೆ ಕಲಿಯಲು ಸಹಕಾರಿ ಎಂದರು. ಇಂತಹ ಕಾರ್ಯಕ್ರಮದ ಮೂಲಕ ೫೦ ಜನರು ರಕ್ತದಾನ ಮಾಡಿದ್ದಾರೆ. ಅನ್ನದಾನದಂತಹ ಒಳ್ಳೆ ಕಾರ್ಯ ಮಾಡುತ್ತಿರುವುದು ನಮಗೆ ಸಂತೋಷವಾಗಿದೆ. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರ ನಾಥ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ ಅವರ ಸ್ಮರಣೆ ಕಾರ್ಯಕ್ರಮ ಉತ್ತಮವಾಗಿದ್ದು, ಇಂತಹ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿರುವುದು ನನ್ನ ಪುಣ್ಯ ಎಂದು ಹೇಳಿದರು.

ಸಂಸದರಾದ ಪ್ರಜ್ವಲ್ ರೇವಣ್ಣ ಮಾತನಾಡಿ, ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಸಿದ್ದಗಂಗಾ ಸ್ವಾಮೀಜಿ ಗ್ರಾಮಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರ ಜೊತೆ ಬೆರೆತು ಅವರು ಕೊಡುವ ರೊಟ್ಟಿ ಸ್ವೀಕರಿಸುತ್ತಿದ್ದರು. ಇಡೀ ಗ್ರಾಮಗಳಿಗೆ ಭೇಟಿ ಮಾಡಿ ಯುವಕರನ್ನು ಧಾರ್ಮಿಕತೆಗೆ ಎಳೆಯುವ ಕೆಲಸ ಮಾಡಿದರು. ಕಳೆದ ಎರಡು ದಿನಗಳ ಹಿಂದೆ ರಾಮಮಂದಿರ ಉದ್ಘಾಟನೆಯಾಗಿದ್ದು, ಇಡೀ ಗಲ್ಲುಗಲ್ಲಿಯಲ್ಲಿ ಶ್ರೀರಾಮನ ನೆನೆದು ಆಚರಣೆ ಮಾಡಿದ್ದಾರೆ ಎಂದರೇ ಇನ್ನು ಕೂಡ ಧಾರ್ಮಿಕತೆ ಆಚರಣೆ ಉಳಿದಿದೆ ಎಂದರ್ಥ. ನಡೆದಾಡುವ ದೇವರು ಎಂದರೇ ದೇವರ ರೂಪದಲ್ಲಿ ಬಂದು ಸಮಾಜ ಸೇವೆಯಂತಹ ಕೆಲಸ ಮಾಡುತ್ತಾರೆ ಎಂದರು. ಸ್ವಾಮೀಜಿಯವರು ವಿದ್ಯಾಧಾನ ಮಾಡಿದ್ದಾರೆ. ಇಂತಹ ಗುರುಗಳು ಮತ್ತೆ ಹುಟ್ಟಿ ಬಂದು ಸೇವೆ ಕೊಡುವ ಕೆಲಸ ಮತ್ತೊಮ್ಮೆ ಆಗಬೇಕೆಂದು ಪ್ರಾರ್ಥಿಸಿದರು.

ಇದೆ ವೇಳೆ ನೂರಾರು ಜನರಿಗೆ ಅನ್ನ ದಾಸೋಹ ನೆರವೇರಿಸಿದರು. ಸ್ವಯಂ ಪ್ರೇರಿತವಾಗಿ ೫೦ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.

ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಶ್ರೀ ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಶ್ರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಸಂಸದರಾದ ಪ್ರಜ್ವಲ್ ರೇವಣ್ಣ, ಹಾಸನ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಬೇಲೂರು ಕ್ಷೇತ್ರದ ಶಾಸಕ ಹೆಚ್.ಕೆ. ಸುರೇಶ್, ವಿಶ್ವಹಿಂದೂ ಪರಿಷತ್ತು ಮುಖಂಡ ಸಕಲೇಶಪುರದ ರಘು, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಮಲ್ಲಿಕಾರ್ಜುನ್, ಸಮಾಜದ ಮುಖಂಡ ಈಶ್ವರಪ್ಪ, ವೀರಶೈವ ಲಿಂಗಾಯಿತ ಯುವಸೇನೆ ಹಾಗೂ ಕೆಂಪೇಗೌಡ ಯುವಸೇನೆ ಮುಖಂಡರಾದ ಅವಿನಾಶ್, ಉಮೇಶ್, ಲೋಕೇಶ್, ಶರತ್ ಭೂಷಣ್, ಮೋಹನ್ ಕುಮಾರ್, ಮನೋಜ್, ರಾಕೇಶ್, ಕಾಂತರಾಜು, ದಿಲೀಪ್ ಸೇರಿದಂತೆ ಇತರರು ಪಾಲ್ಗೊಂಡು ತ್ರೀಮೂರ್ತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹಾಸನದಲ್ಲಿ ಗೃಹಸಚಿವ ಜಿ.ಪರಮೇಶ್ವರ್ ಹೇಳಿಕೆ

Published

on

ಸರ್ಕಾರ ರಾಜ್ಯದಲ್ಲಿ ಶಾಂತಿಯನ್ನು ಬಯಸುತ್ತದೆ

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು

ಅದೇ ಪ್ರಕಾರ ಜನರ ಆಸ್ತಿ, ಜೀವ ರಕ್ಷಣೆ ಆಗಬೇಕು

ಪೊಲೀಸ್ ಇಲಾಖೆ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು

ಈ ನಿಟ್ಟಿನಲ್ಲಿ ಅಧಿಕಾರಗಳಿಗೆ ಸೂಚನೆ ಕೊಟ್ಟಿದ್ದೇನೆ

ಪೊಲೀಸ್‌ರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ

ವಿರೋಧ ಪಕ್ಷದವರು ಕಾನೂನು ವ್ಯವಸ್ಥೆ ಕೆಟ್ಟಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ

ಅದನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ

ನಮ್ಮ ಜವಾಬ್ದಾರಿ ಇದೆ, ಯಾರನ್ನು ಮೆಚ್ಚಲಿಸಕ್ಕೆ, ಅಪರಾಧ ಪ್ರಕರಣಗಳ ಅಂಕಿ ಅಂಶ ಕಡಿಮೆ ಮಾಡುವುದು ಮುಖ್ಯ ಅಲ್ಲ

ಕಮ್ಯೂನಲ್ ಗಲಾಟೆ ಒಂದು ವರ್ಷದಿಂದ ಆಗಿಲ್ಲ

ಗಣೇಶ ಹಬ್ಬ ರಾಜ್ಯದಲ್ಲಿ ಶಾಂತಿಯುತವಾಗಿ ನಡೆದಿದೆ

ಹಿಂದೆ ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಗಲಾಟೆಗಳು ಆಗಿವೆ

ಈ ಬಾರಿ ಯಾವುದೇ ಘಟನೆ ಆಗಿಲ್ಲ

ದಕ್ಷಿಣಕನ್ನಡ, ಶಿವಮೊಗ್ಗ, ಹುಬ್ಬಳ್ಳಿ ಜಿಲ್ಲೆಗಳಲ್ಲಿ ಕಮ್ಯೂನಲ್ ವಿಚಾರದಲ್ಲಿ ನಡೆಯುತ್ತಿದ್ದ ಗಲಾಟೆಗಳು ನಿಂತು ಹೋಗಿದ್ದಾವೆ

ಈ ಬಗ್ಗೆ ವಿರೋಧ ಪಕ್ಷದವರು ಹೇಳಬೇಕು

ಕೊಲೆಗಳು ನಡೆಯುತ್ತಿವೆ ಅದರ ಅಂಕಿ ಅಂಶ ಇದೆ

ಹಿಂದೆ ಕೊಲೆಗಳು ಎಷ್ಟು ಆಗಿದ್ದಾವೆ ಆ ಸಂಖ್ಯೆ ಕಂಪೇರ್ ಮಾಡಲಿ

ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ

ನಾಲ್ಕು ತಿಂಗಳಿನಿಂದ ಅನೇಕ ಘಟನೆಗಳು ನಡೆದಿವೆ

ಹಾಸನದಲ್ಲೂ ಘಟನೆಗಳು ನಡೆದಿವೆ

ಅದರ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಜರುಗಿಸಿದೆ

ನಮ್ಮಲ್ಲೆರಿಗೂ ಒಂದೇ ಕಾನೂನು ಇದೆ

ಎಲ್ಲರಿಗೂ ಇರುವುದು ಒಂದೇ ಕಾನೂನು

ಯಾರು, ಎಷ್ಟೇ ದೊಡ್ಡವರಾದರು ಕಾನೂನು ಒಂದೇ

ಆದ್ದರಿಂದ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ

ಯಾರನ್ನು ರಕ್ಷಸಿದೆ ಯಾವ ಒತ್ತಡಕ್ಕೂ ಮಣಿಯದೆ ಕ್ರಮ ಕೈಗೊಂಡಿದ್ದೇವೆ

ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಜಾಸ್ತಿಯಾಗಿದ್ದೇವೆ

ಕರ್ನಾಟಕ ರಾಜ್ಯದಲ್ಲಿ 43 ಸೆನ್ ಪೊಲೀಸ್ ಠಾಣೆಗಳನ್ನು ತೆರೆದಿದ್ದೇವೆ

ಅವರಿಗೆ ಕಾನೂನಾತ್ಮಕವಾಗಿ ಏನೆಲ್ಲ ಶಕ್ತಿ ಕೊಡಬೇಕು ಕೊಟ್ಟಿದ್ದೇವೆ

ಬೆಂಗಳೂರು ಒಂದು ಕಡೆ ಸೈಬರ್ ಕ್ರೈಂ ನಡೆಯುತ್ತಿತ್ತು

ಈಗ ಎಲ್ಲಾ ಜಿಲ್ಲೆಗಳಲ್ಲೂ ನಡೆಯುತ್ತಿದೆ ಹಾಗಾಗಿ ಸೆನ್ ಪೊಲೀಸ್ ಠಾಣೆ ತೆರೆದಿದ್ದೇವೆ

ಜನ ಕಂಪ್ಲೆಂಟ್ ರಿಜಿಸ್ಟರ್ ಮಾಡ್ತಾರೆ ಅದರ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ

ಹಣ ಕಳ್ಳತನವಾಗಿರುವುದನ್ನು ಪತ್ತೆ ಹಚ್ಚುತ್ತಿದ್ದಾರೆ

ಸೈಬರ್ ಕ್ರೈಂ ಜಾಸ್ತಿ ಆಗಿದೆ, ಅದನ್ನು ಹ್ಯಾಂಡಲ್‌ ಮಾಡುತ್ತಿದ್ದೇವೆ

Continue Reading

Hassan

ಕಳುವಾದ ಮಾಲುಗಳು ವಾರಸುದಾರರಿಗೆ ಹಸ್ತಾಂತರ

Published

on

ಹಾಸನ ಜೂ.24(ಕರ್ನಾಟಕ ವಾರ್ತೆ):ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಇಂದು ಜರುಗಿದ ಕಳುವಾಗಿ ಪತ್ತೆಯಾಗಿರುವ ಮಾಲುಗಳನ್ನು ವಾರಸುದಾರರಿಗೆ ಹಿಂದಿರಿಗಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾರಸುದಾರರಿಗೆ ಮಾಲುಗಳನ್ನು ಹಸ್ತಾಂತರ ಮಾಡಿದರು.

ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿಂದ ಕಳುವಾಗಿ ಪತ್ತೆಯಾಗಿರುವ 2 ಕೆ.ಜಿ.150 ಗ್ರಾಂ ಚಿನ್ನ, ಒಂದು ಕೆ.ಜಿ.ಬೆಳ್ಳಿ, ಬೈಕ್ ಗಳು ಸೇರಿದಂತೆ ಸುಮಾರು 1.25 ಕೋಟಿ ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೈಬರ್ ಕ್ರೈಂ ವಂಚನೆಗೆ ಒಳಗಾಗದಂತೆ ಸಾರ್ವಜನಿಕರು ಎಚ್ಚರವಹಿಸಲು ಅನುಸರಿಸ ಬೇಕಾದ ನಿಮಗಳ ಬಗ್ಗೆ ಅರಿವು ಮೂಡಿಸುವ ಕರಪತ್ರವನ್ನು ಸಚಿವರು ಬಿಡುಗಡೆ ಮಾಡಿದರು.

ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ , ದಕ್ಷಿಣ ವಲಯದ ಪೊಲೀಸ್ ಮಹಾ ನಿರ್ದೇಶಕರಾದ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಎಂ.ಎಸ್ ಅವರು ಉಪಸ್ಥಿತರಿದ್ದರು.

Continue Reading

Hassan

ರೋಗಿಯನ್ನು ಕರೆ ತರುತ್ತಿದ್ದ 108 ಅಂಬ್ಯುಲೆನ್ಸ್‌ನ ಟೈಯರ್ ಬ್ಲಾಸ್ಟ್ : ಹಳ್ಳಕ್ಕೆ ಇಳಿದು ವಾಲಿದ ಅಂಬ್ಯುಲೆನ್ಸ್

Published

on

ಹಾಸನ : ರೋಗಿಯನ್ನು ಕರೆ ತರುತ್ತಿದ್ದ 108 ಅಂಬ್ಯುಲೆನ್ಸ್‌ನ ಟೈಯರ್ ಬ್ಲಾಸ್ಟ್

ಟೈಯರ್ ಬ್ಲಾಸ್ಟ್ ಆಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಅಂಬ್ಯುಲೆನ್ಸ್

ರಸ್ತೆಯ ಬದಿಯ ಹಳ್ಳಕ್ಕೆ ಇಳಿದು ವಾಲಿದ ಅಂಬ್ಯುಲೆನ್ಸ್

ಅಂಬ್ಯುಲೆನ್ಸ್‌ನಲ್ಲಿದ್ದ ರೋಗಿ ಸೇರಿ ಮೂರು ಮಂದಿಗೆ ಸಣ್ಣಪುಟ್ಟ ಗಾಯ

ಅರಕಲಗೂಡಿನಿಂದ ಹಾಸನಕ್ಕೆ ರೋಗಿಯನ್ನು ಕರೆ ತರುತ್ತಿದ್ದ 108 ಅಂಬುಲೆನ್ಸ್

ಹಾಸನದ ಹೊರವಲಯದ ಶ್ರೀರಾಮನಗರ ಬಳಿ ಘಟನೆ

ಬೇರೆ ಅಂಬ್ಯುಲೆನ್ಸ್‌ನಲ್ಲಿ ರೋಗಿ‌ಯನ್ನು ಆಸ್ಪತ್ರೆಗೆ ರವಾನೆ ಮಾಡಿದ 108 ಅಂಬ್ಯುಲೆನ್ಸ್ ಸಿಬ್ಬಂದಿ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Continue Reading

Trending

error: Content is protected !!